Tag: Anupama

  • ವಿಜಯ್ ದೇವರಕೊಂಡ ಚಿತ್ರದ ಜೊತೆ ಜೊತೆಗೆ ಒಟಿಟಿ ಬರಲಿದೆ ಟಿಲ್ಲು ಸ್ಕ್ವೇರ್

    ವಿಜಯ್ ದೇವರಕೊಂಡ ಚಿತ್ರದ ಜೊತೆ ಜೊತೆಗೆ ಒಟಿಟಿ ಬರಲಿದೆ ಟಿಲ್ಲು ಸ್ಕ್ವೇರ್

    ದೇ ಮಾರ್ಚ್ 29ರಂದು ವಿಶ್ವದ್ಯಾಂತ ಬಿಡುಗಡೆ ಆಗಿ ಭಾರೀ ಹವಾ ಕ್ರಿಯೇಟ್ ಮಾಡಿದ್ದ ಸಿದ್ದು ಜೊನ್ನಲಗಡ್ಡ (Siddu Jonnalagadda) ಹಾಗೂ ಅನುಪಮಾ ಪರಮೇಶ್ವರ್ ಕಾಂಬಿನೇಷನ್ ನ ಟಿಲ್ಲು ಸ್ಕ್ವೇರ್ ಸಿನಿಮಾ ಏಪ್ರಿಲ್ 26ರಂದು ಒಟಿಟಿಗೆ (Ott) ಬರಲಿದೆ. ಅಂದೇ ವಿಜಯ್ ದೇವರಕೊಂಡ ಅಭಿನಯದ ದಿ ಫ್ಯಾಮಿಲಿ ಸ್ಟಾರ್ ಕೂಡ ಒಟಿಟಿಯಲ್ಲಿ ಇರಲಿದೆ.

    ನಾನಾ ಕಾರಣಗಳಿಂದಾಗಿ ಟಿಲ್ಲು ಸ್ಕ್ವೇರ್ ಸುದ್ದಿಯಲ್ಲಿತ್ತು. ಕನ್ನಡವೂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ಅನುಪಮಾ ಪರಮೇಶ್ವರನ್  (Anupama Parameswaran) ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರ ಮಾಡಿದ್ದರು. ಸಿದ್ದು ಜೊನ್ನಲಗಡ್ಡ ಜೊತೆಯಾಗಿ ನಟಿಸಿರುವ ಅನುಪಮಾ ಅಭಿಮಾನಿಗಳಿಗೆ ಮತ್ತೇರಿಸುವಂತ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.

    ಬೋಲ್ಡ್ ಪಾತ್ರಗಳಲ್ಲಿ ಮಾಡಲ್ಲ ಅಂತಿದ್ದ ಈ ನಟಿ ಟಿಲ್ಲು ಸ್ಕ್ವೇರ್ (Tillu Square) ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಜೊತೆಗೆ ಲಿಪ್ ಲಾಕ್ (Lip Lock) ಕೂಡ ಮಾಡಿದ್ದರು. ಈ ಹಿಂದೆ ರೌಡಿ ಬಾಯ್ಸ್ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರೂ, ಅಭಿಮಾನಿಗಳಿಗೆ ಅಷ್ಟೇನೂ ಅವು ಮತ್ತೇರಿಸಿರಲಿಲ್ಲ.

     

    ಟಿಲ್ಲು ಸ್ಕ್ವೇರ್ ಸ್ವೀಕೆಲ್ ಸಿನಿಮಾ. ಈ ಹಿಂದೆ 2022ರಲ್ಲಿ ಬಿಡುಗಡೆಯಾಗಿದ್ದ ಡಿಜೆ ಟಿಲ್ಲು ಸಿನಿಮಾದ ಮುಂದುವರೆದ ಭಾಗ ಇದಾಗಿತ್ತು.  ಟಿಲ್ಲು ಸ್ಕ್ವೇರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿ, ಅನುಪಮಾ ಅಚ್ಚರಿ ಎನ್ನುವಂತೆ ಬೋಲ್ಡ್ ಸ್ಟೆಪ್ ಇಟ್ಟಿದ್ದರು.  ಈ ಸಿನಿಮಾವನ್ನು ಮಲ್ಲಿಕ್ ರಾಮ್ ನಿರ್ದೇಶನ ಮಾಡಿದ್ದು, ಸೂರ್ಯದೇವರ ನಾಗ್ ವಂಶಿ ನಿರ್ಮಾಣ ಮಾಡಿದ್ದಾರೆ.

  • ದೇಶ ಗೆದ್ದ ಗೃಹಿಣಿಯ ಕಥೆ  ಹೇಳಲು ಬರುತ್ತಿದ್ದಾರೆ ಅನುಪಮ

    ದೇಶ ಗೆದ್ದ ಗೃಹಿಣಿಯ ಕಥೆ ಹೇಳಲು ಬರುತ್ತಿದ್ದಾರೆ ಅನುಪಮ

    ನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ ಪ್ರೇಕ್ಷಕರಿಗಾಗಿ ಹೊತ್ತು ತರುತ್ತಿದೆ. ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಕಥೆಯನ್ನು ಹೇಳಲು ಬರುತ್ತಿದ್ದಾರೆ  ಅನುಪಮ (Anupama). ವಿಭಿನ್ನ ಕಥಾ ಹಂದರವುಳ್ಳ ನಮ್ಮಲಚ್ಚಿ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಜೇನುಗೂಡು, ಕಥೆಯೊಂದು ಶುರುವಾಗಿದೆ ಹೀಗೆ ಅನೇಕ ಧಾರಾವಾಹಿಗಳನ್ನು (Serial) ಕನ್ನಡಿಗರಿಗೆ ನೀಡಿರುವ  ಸ್ಟಾರ್ ಸುವರ್ಣ ಇದೀಗ ಇಡೀ ದೇಶದ ಹೃದಯ ಗೆದ್ದ ಗೃಹಿಣಿಯ ಕಥೆಯನ್ನು ಹೇಳಲು ಮುಂದಾಗಿದೆ.

    ಮಧ್ಯ ವಯಸ್ಕ ಮಹಿಳೆ ಅನುಪಮ. ಸದಾ ಮನೆಯವರ ಬಗ್ಗೆ ಕಾಳಜಿ, ಕುಟುಂಬದವರ ಇಷ್ಟ-ಕಷ್ಟ, ಬೇಕು-ಬೇಡಗಳನ್ನು ಅರ್ಥ ಮಾಡಿಕೊಂಡು ಮನೆಯ ಗೃಹಲಕ್ಷ್ಮಿಯಂತಿರುವ (Grilahakshmi) ಈಕೆಗೆ ಮದುವೆಯಾಗಿ ಎರಡು ದಶಕಗಳ ಮೇಲಾಗಿದೆ. ತಾಯಿ, ಹೆಂಡತಿ. ಮಗಳು, ಸೊಸೆ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸುವ ಈಕೆಗೆ 3 ಮಕ್ಕಳು, ಗಂಡನಿಗೆ ಈಕೆ ಓದಿಲ್ಲ, ಹಳೆಯ ಕಾಲದವಳು ಎಂಬ ತಾತ್ಸಾರ. ಮನೆಯಲ್ಲಿ ಏನೇ ತಪ್ಪುಗಳಾದರು ಅತ್ತೆ ದೂಷಿಸುವುದು ಈಕೆಯನ್ನೇ. ಶರವೇಗದಲ್ಲಿ ಬದಲಾಗುತ್ತಿರುವ ಕಾಲ, ಆಧುನಿಕ ಯುಗಕ್ಕೆ ಹೊಂದಿಕೊಂಡಿರುವ ಕುಟುಂಬದಲ್ಲಿ ಅನುಪಮ ಯಾವ ರೀತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು, ಸಂತೋಷ ಕಂಡುಕೊಳ್ಳುತ್ತಾಳೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ದೇಶದ ನಂ.1 ಧಾರಾವಾಹಿ ಎಂಬ ಪಟ್ಟವನ್ನು ಅಲಂಕರಿಸಿರುವ “ಅನುಪಮ” ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡದಲ್ಲಿ ಬರ್ತಿರೋದಕ್ಕೆ ಪ್ರೇಕ್ಷಕರು ಖುಷಿ ಪಡುತ್ತಿದ್ದಾರೆ. ಹೊಚ್ಚ ಹೊಸ ಧಾರಾವಾಹಿ “ಅನುಪಮ” ನಿಮ್ಮ ಮಧ್ಯಾಹ್ನದ ಮನರಂಜನೆಯಲ್ಲಿ ಇದೇ ಮಾರ್ಚ್ 6 ರಿಂದ ಮಧ್ಯಾಹ್ನ 1  ಗಂಟೆಗೆ ಪ್ರಸಾರವಾಗಲಿದೆ. ಬದಲಾದ ಸಮಯದಲ್ಲಿ “ಅನುರಾಗ ಅರಳಿತು” ಮಾರ್ಚ್ 6 ರಿಂದ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ.

  • ಬಿಗ್ ಬಾಸ್ ಮನೆಯಲ್ಲಿ ನನಗೆ, ನೇಹಾಗೆ ಕಾಂಪಿಟೇಶನ್ ಇತ್ತು: ಅನುಪಮಾ

    ಬಿಗ್ ಬಾಸ್ ಮನೆಯಲ್ಲಿ ನನಗೆ, ನೇಹಾಗೆ ಕಾಂಪಿಟೇಶನ್ ಇತ್ತು: ಅನುಪಮಾ

    ಬಿಗ್ ಬಾಸ್ ಮನೆಯಲ್ಲಿ (Bigg Boss House) 85 ವಾರಗಳನ್ನ ಪೂರೈಸಿ ಇದೀಗ ಮನೆಯಿಂದ ಹೊರಬಂದಿರುವ ಅನುಪಮಾ ಆನಂದ್ ಕುಮಾರ್ ಸಾಕಷ್ಟು ವಿಚಾರವನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ಸಾಕಷ್ಟು ವರ್ಷಗಳ ಗೆಳೆತನವಿರುವ ನೇಹಾ (Neha Gowda) ಮತ್ತು ಅನುಪಮಾ (Anupama) ಮತ್ತೆ ದೊಡ್ಮನೆಯಲ್ಲಿ ಮುಖಾಮುಖಿ ಆಗಿದ್ದು ಹೇಗಿತ್ತು ಎಂಬುದರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಮಾತನಾಡಿದ್ದಾರೆ.

    ಬಿಗ್ ಬಾಸ್ ಸೀಸನ್ 5ರಲ್ಲಿ ಮಿಂಚಿದ್ದ ಅನುಪಮಾ, ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟು ಸದ್ದು ಮಾಡಿದ್ದರು. ನೇಹಾ ಮತ್ತು ಅನುಪಮಾ ಸಾಕಷ್ಟು ವರ್ಷಗಳಿಂದ ಫ್ರೆಂಡ್ಸ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಮತ್ತೆ ಬಿಗ್ ಬಾಸ್‌ನಲ್ಲೂ ಜೊತೆಯಾಗಿದ್ದರ ಬಗ್ಗೆ ಅನುಪಮಾ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ ನಟ ನಾಗಾರ್ಜುನ್

    ನಾವಿಬ್ಬರು ಫ್ರೆಂಡ್ಸ್ ಅಂತಾ ಎಲ್ಲರಿಗೂ ಮೊದಲೇ ತಿಳಿದಿರುವ ವಿಚಾರ. ಮನೆಯಲ್ಲಿ ಬೇಕಂತಲೇ ಬೆಂಬಲ ಕೊಟ್ಟು ಇರುತ್ತೀವಿ ಎಂಬುದು ಪ್ರೇಕ್ಷಕರ ತಲೆಗೂ ಬರುತ್ತೆ ಆ ಯೋಚನೆ ತೆಗೆದು ಹಾಕಬೇಕು ಅಂತನೇ ನಾವು ಯೋಚನೆ ಮಾಡಿದ್ದೀವಿ. ನಾನು ಮೊದಲೇ ಹೇಳಿದ್ದೇ ನೇಹಾಗೆ, ನಿನ್ನ ಆಟ ನಿನಗೆ, ನೀನು ನನ್ನ ಕಾಂಪಿಟೇಟರ್ ಎಂದು ತಿಳಿಸಿದ್ದೆ. ನನ್ನ ಬೆಸ್ಟ್ ಫ್ರೆಂಡ್ ಬಿಗ್ ಬಾಸ್ ಮನೆಯೊಳಗೂ ಸಿಗುತ್ತಾಳೆ ಅಂತಾ ಖುಷಿಯಾಗಿತ್ತು.

    ನಾನು ಲೋ ಆಗಿದ್ದೀನಿ ಅಂದಾಗ ಹಗ್ ಮಾಡಿ, ಬೆಂಬಲ ಕೊಡುತ್ತಿದ್ದಳು. ಬಿಗ್ ಬಾಸ್‌ನಲ್ಲಿ ನೇಹಾ ನ್ಯೂ ವರ್ಷನ್ ನೋಡಿದೆ, ಸ್ಟ್ರಾಂಗ್ ಆಗಿರುವ ನೇಹಾನಾ ನೋಡಿದೆ ಎಂದು ಅನುಪಮಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಬಿಗ್ ಬಾಸ್ ಮನೆಯಲ್ಲಿ (Bigg Boss House) 85 ವಾರಗಳನ್ನ ಪೂರೈಸಿ ಇದೀಗ ಮನೆಯಿಂದ ಹೊರಬಂದಿರುವ ಅನುಪಮಾ ಆನಂದ್ ಕುಮಾರ್ (Anupama Anandkumar) ಸಾಕಷ್ಟು ವಿಚಾರವನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ (Roopesh Shetty) ಎನರ್ಜಿ ಲೆವೆಲ್ ಹೇಗಿತ್ತು. ನಂತರ ಅದೆಷ್ಟರ ಮಟ್ಟಿಗೆ ರೂಪೇಶ್ ಬದಲಾದರು ಎಂಬುದರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಮಾತನಾಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಿತ್ರಕ್ಕೆ 4 ವರ್ಷಗಳ ಸಂಭ್ರಮ, ಮೈಲಿಗಲ್ಲು ಸೃಷ್ಟಿಸಿದ ದಿನದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮೆಲುಕು

    ಬಿಗ್ ಬಾಸ್ ಸೀಸನ್ 5ರಲ್ಲಿ(Bigg Boss) ಮಿಂಚಿದ್ದ ಅನುಪಮಾ, ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟು ಸದ್ದು ಮಾಡಿದ್ದರು. ಪ್ರವೀಣರ ಸಾಲಿನಲ್ಲಿ ಅನುಪಮಾ ಗಟ್ಟಿ ಸ್ಪರ್ಧಿಯಾಗಿ ಇತರರಿಗೆ ಸೆಡ್ಡು ಹೊಡೆದರು. ಆದರೆ ಅನುಪಮಾ ಧಿಡೀರ್ ಎಲಿಮಿನೇಷನ್(Elimination) ಅನೇಕರಿಗೆ ಶಾಕ್ ಕೊಟ್ಟಿತ್ತು. ಇದೀಗ ತಮ್ಮ ಬಿಗ್ ಬಾಸ್ ಜರ್ನಿಯ ಜೊತೆಗೆ ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ಬಗ್ಗೆ ಅನುಪಮಾ ರಿಯಾಕ್ಟ್ ಮಾಡಿದ್ದಾರೆ.

    ಸಾನ್ಯ ಎಲಿಮಿನೇಷನ್‌ಗೂ ಮುಂಚೆ ರೂಪೇಶ್, ಯಾರ ಜೊತೆನೂ ಮಿಂಗಲ್ ಆಗುತ್ತಾ ಇರಲಿಲ್ಲ. ಒಟಿಟಿಯಿಂದ ಅವರ ಫ್ರೆಂಡ್‌ಶಿಪ್ ಇದ್ದ ಕಾರಣ, ಇಬ್ಬರಿಗೂ ಕಂಫರ್ಟ್‌ಜೋನ್‌ ಇದೆ. ರೂಪೇಶ್ ಎಲ್ಲಿ ಅಂತಾ ಹುಡುಕಿದರೆ ಅವರು ಯಾವಾಗಲೂ ಸಾನು ಜೊತೆನೇ ಇರೋದು. ಸಾನ್ಯ ಹೊರಗೆ ಹೋದ ಮೇಲೆ ಅದನ್ನ ಒಪ್ಪಿಕೊಳ್ಳೋಕೆ ಅವರಿಗೆ ಆಗಲಿಲ್ಲ. ಅವತ್ತು ಸಾನ್ಯ ಬಗ್ಗೆ ತುಂಬಾ ಎಮೋಷನಲ್ ಆಗಿದ್ದರು. ರೂಪೇಶ್ ಸ್ಥಿತಿ ನೋಡಿದಾಗ, ಅಯ್ಯೋ ಪಾಪ ಅನಿಸೋದು. ಒಂದು ವಾರದ ನಂತರ ಇದೀಗ ರೂಪೇಶ್ ಸ್ಟ್ರಾಂಗ್ ಆಗಿ ಆಡ್ತಿದ್ದಾರೆ.

    ಇನ್ನೂ ರೂಪೇಶ್ ಕ್ಯಾಪ್ಟೆನ್ಸಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಅನುಪಮಾ ಹೇಳಿದ್ದಾರೆ. ಹಾಗೆಯೇ ಬಿಗ್ ಬಾಸ್ ಫಿನಾಲೆಯಲ್ಲಿ ಟಾಪ್ 5 ಸ್ಪರ್ಧಿಗಳಲ್ಲಿ ರೂಪೇಶ್ ಶೆಟ್ಟಿ ಕೂಡ ಒಬ್ಬರಾಗಿರುತ್ತಾರೆ ಎಂದು ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಗೆ ಅಚ್ಚರಿಯ ಎಂಟ್ರಿ : ಹಾವು ಏಣಿ ಆಟದಲ್ಲಿ ಮಂಜು ಪಾವಗಡ

    ಬಿಗ್ ಬಾಸ್ ಮನೆಗೆ ಅಚ್ಚರಿಯ ಎಂಟ್ರಿ : ಹಾವು ಏಣಿ ಆಟದಲ್ಲಿ ಮಂಜು ಪಾವಗಡ

    ಬಿಗ್ ಬಾಸ್ (Bigg Boss) ಮನೆಯ ಆಟ ಇದೀಗ ಕಡೆಯ ಘಟ್ಟದತ್ತ ಸಾಗುತ್ತಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. ಈ ವೇಳೆಯಲ್ಲಿ ‌ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅದೂ ಅಚ್ಚರಿಯ ರೀತಿಯಲ್ಲಿ ಎನ್ನುವುದು ವಿಶೇಷ. ಹೌದು, ದೊಡ್ಮನೆಗೆ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ಪ್ರವೇಶ ಪಡೆದಿದ್ದಾರೆ. ಫಿನಾಲೆ ಕೆಲವೇ ದಿನಗಳು ಬಾಕಿ ಇರುವಾಗ ಈ ಎಂಟ್ರಿ ಕುತೂಹಲವನ್ನು ಮೂಡಿಸಿದೆ.

    ಕಳೆದ ಸೀಸನ್ ನಲ್ಲಿ ಮನೆ ಮಾತಾಗಿದ್ದ ಸ್ಪರ್ಧಿ ಮಂಜು ಪಾವಗಡ (Manju Pavagada). ನಗಿಸುತ್ತಲೇ, ಕಾಲೆಳೆಯುತ್ತದೇ ಸಖತ್ ಮನರಂಜನೆ ನೀಡಿದ್ದ ಸ್ಪರ್ಧಿ. ಇದೀಗ ಅವರು ದೊಡ್ಮನೆಗೆ ಲಗ್ಗೆ ಇಟ್ಟಿದ್ದು, ಸ್ವತಃ ಮನೆ ಒಳಗೆ ಇರುವವರಿಗೆ ಅಚ್ಚರಿ ಮೂಡಿಸಿದೆ. ಮಂಜು ಪ್ರವೇಶ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಅನುಪಮಾ ಎಲಿಮಿನೇಷನ್ ನಂತರ 8 ಜನ ಸ್ಪರ್ಧಿಗಳಿರುವ‌ ಮನೆಯಲ್ಲಿ, ಕೇವಲ  ಜಟಾಪಟಿ ಮಾತ್ರ ಕಾಣಿಸುತ್ತಿತ್ತು. ಅದನ್ನು ಶಮನ ಮಾಡಲು ಮಂಜು ಬಂದಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

    ಹಾವು – ಏಣಿ  ಟಾಸ್ಕ್ ವೇಳೆ ಮಂಜು ಪಾವಗಡ ಕೂಡ ಸ್ಪರ್ಧಿಗಳ ಜೊತೆಗೆ ಆಟವಾಡಿದ್ದಾರೆ. ಸ್ಪರ್ಧಿಗಳು ಹೇಳುವ ಸಂಖ್ಯೆಗೆ ದಾಳ ಕೂಡ ಹಾಕಿದ್ದಾರೆ. ಈ ವೇಳೆ, ಮಂಜುಗೆ ಅಮೂಲ್ಯ (Amulya) ಪ್ರಪೋಸ್ ಮಾಡಿದ್ದು, ಇದನ್ನ ನೋಡಿರೋ ರಾಕಿ, ಅಯ್ಯೋ ನನಗೆ ಹಾವು ಕಚ್ಚಿದ ಹಾಗೇ ಆಗುತ್ತಿದೆ ಎಂದಿದ್ದಾರೆ. ರಾಕಿ ಮಾತಿಗೆ ಮನೆಮಂದಿ ನಕ್ಕಿದ್ದಾರೆ.

    ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆ ಒಳಗೆ ಪ್ರವೇಶ ಬಯಸಿದ್ದ ಮಂಜು ಪಾವಗಡ ಈ ಬಾರಿ ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಎಷ್ಟು ಸಮಯ ಅವರು ಮನೆಯಲ್ಲಿ ಇರುತ್ತಾರೋ, ಅಷ್ಟು ಹೊತ್ತು ನೋಡುಗರಿಗೆ ಮನರಂಜನೆ ದುಪ್ಪಟ್ಟಾಗುವುದು ಖಚಿತ.

    Live Tv
    [brid partner=56869869 player=32851 video=960834 autoplay=true]

  • ಟೀಂ ಇಂಡಿಯಾದ ವೇಗಿ ಬುಮ್ರಾ ಜೊತೆ ನಟಿ ಅನುಪಮಾ – ಸುದ್ದಿ ವೈರಲ್

    ಟೀಂ ಇಂಡಿಯಾದ ವೇಗಿ ಬುಮ್ರಾ ಜೊತೆ ನಟಿ ಅನುಪಮಾ – ಸುದ್ದಿ ವೈರಲ್

    ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅಭಿನಯದ ‘ನಟಸಾರ್ವಭೌಮ’ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಿತರಾಗಿರುವ ನಟಿ ಅನುಪಮಾ ಪರಮೇಶ್ವರನ್ ಇದೀಗ ಟೀಂ ಇಂಡಿಯಾದ  ಜಸ್ಪ್ರೀತ್ ಬುಮ್ರಾ ಹಿಂದೆ ಬಿದ್ದಿದ್ದಾರಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

    ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಆಡುತ್ತಿದ್ದಾರೆ. ಈ ಮಧ್ಯೆ ಬುಮ್ರಾ ಹೆಸರು ದಕ್ಷಿಣ ಭಾರತದ ನಟಿ ಅನುಪಮಾ ಜತೆ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಬುಮ್ರಾ ಅವರ ಟ್ವಿಟ್ಟರ್ ಖಾತೆಯಾಗಿದೆ.

    ಬುಮ್ರಾ ಅವರು ಕೇವಲ 25 ಮಂದಿಯನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ಬಹುತೇಕರು ಕ್ರಿಕೆಟಿಗರೇ ಆಗಿದ್ದಾರೆ. ಅವರ ಮಧ್ಯೆ ನಟಿ ಅನುಪಮಾ ಹೆಸರು ಕಂಡು ಬಂದಿದೆ. ಅವರನ್ನು ಫಾಲೋ ಮಾಡುವುದರ ಜೊತೆಗೆ ಅವರ ಫೋಟೋಗೆ ಲೈಕ್ ಕೊಟ್ಟಿದ್ದಾರೆ.

    ಇತ್ತ ಅನುಪಮಾ ಅವರು ಕೂಡ ಬುಮ್ರಾ ಅವರ ಟ್ವಿಟ್ಟರ್ ಅನ್ನು ಫಾಲೋ ಮಾಡುತ್ತಿದ್ದಾರೆ. ಬುಮ್ರಾ ಮಾಡಿರುವ ಟ್ವೀಟ್‍ಗೆ ಲೈಕ್ ನೀಡಿದ್ದಾರೆ. ಇನ್ನು ಇಬ್ಬರ ನಡುವೆ ಟ್ವೀಟ್ ಗಳು ಸಹ ವಿನಿಮಯವಾಗಿದೆ. ಈ ಎಲ್ಲಾ ವಿಚಾರಗಳಿಂದ ಬುಮ್ರಾ ಮತ್ತು ಅನುಪಮಾ ಲವ್ ನಲ್ಲಿ ಬಿದ್ದಿದ್ದಾರ ಎಂಬ ಅನುಮಾನಗಳಿಗೆ ಕಾರಣವಾಗಿದೆ.

    ಅಭಿಮಾನಿಗಳು ಇವರಿಬ್ಬರ ಮಧ್ಯೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಇದೆ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಸುದ್ದಿ ಹರಿದಾಡುತ್ತಿದೆ.