Tag: anupam kher

  • ‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

    ‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

    ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ಎನ್ ನಿರ್ಮಿಸುತ್ತಿರುವ ಹಾಗೂ ಶ್ರೀನಿ (Srini) ನಿರ್ದೇಶನದಲ್ಲಿ  ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivraj Kumar) ನಾಯಕರಾಗಿ ಅಭಿನಯಿಸುತ್ತಿರುವ ‘ಘೋಸ್ಟ್‌’ (Ghost) ಚಿತ್ರದ ಚಿತ್ರೀಕರಣ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಮೈದಾನದಲ್ಲಿ ನಡೆಯುತ್ತಿದೆ. ಈ ಸಿನಿಮಾಗಾಗಿ  ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ನಿರ್ದೇಶಕ ಶ್ರೀನಿ.

    ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ನೂತನ ಸಚಿವರಾದ ಮಧು ಬಂಗಾರಪ್ಪ (Madhu Bangarappa) ಇಂದು ಭೇಟಿ ನೀಡಿದ್ದಾರೆ. ಚಿತ್ರತಂಡದವರ ಜೊತೆ ಸ್ವಲ್ಪ ಸಮಯ ಮಾತುಕತೆ ನಡೆಸಿದ್ದ ಸಚಿವರು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಮಧು ಬಂಗಾರಪ್ಪ ಅವರ ಗೆಲುವಿನಲ್ಲಿ ಶಿವರಾಜ್ ಕುಮಾರ್ ಪಾತ್ರ ದೊಡ್ಡದು. ಇವರಿಗಾಗಿ ಶಿವಣ್ಣ ಪ್ರಚಾರಕ್ಕೂ ಹೋಗಿದ್ದರು. ಹಾಗಾಗಿ ಸಿನಿಮಾದ ಶೂಟಿಂಗ್ ಅನ್ನು ಮುಂದೂಡಲಾಗಿತ್ತು. ಇದೀಗ ಶಿವಣ್ಣ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    ಹತ್ತು ಹಲವು ವಿಶೇಷಗಳನ್ನು ಈ ಸಿನಿಮಾ ಹೊಂದಿದೆ.  ಶಿವಣ್ಣ- ಡೈರೆಕ್ಟರ್ ಶ್ರೀನಿ ಕಾಂಬಿನೇಷನ್ ಈ  ಸಿನಿಮಾದಲ್ಲಿ ಬಾಲಿವುಡ್ (Bollywood) ಖ್ಯಾತ ನಟ ಅನುಪಮ್ ಖೇರ್ (Anupam Kher) ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಶಿವರಾಜ್‌ಕುಮಾರ್‌ಗೆ ಜೊತೆಯಾಗುವ ಮೂಲಕ ಕನ್ನಡಕ್ಕೆ ಅನುಪಮ್ ಖೇರ್ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    `ಘೋಸ್ಟ್’ ಸಿನಿಮಾಗೆ ಚಾಲನೆ ಸಿಕ್ಕ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಳೆಯುತ್ತಲೇ ಇದೆ. ಈ ಚಿತ್ರದ ಚಿತ್ರೀಕರಣಕ್ಕಾಗಿಯೇ ಬೆಂಗಳೂರಿಗೆ ಬಂದಿಳಿದ ನಟ ಅನುಪಮ್ ಖೇರ್, ತಮ್ಮ ಪಾತ್ರದ ಕುರಿತು ಡೈರೆಕ್ಟರ್ ಶ್ರೀನಿ ಜೊತೆಗೆ ಚರ್ಚೆ ಮಾಡಿದ್ದಾರೆ. ಶ್ರೀನಿ ಕೂಡ ಅನುಪಮ್ ಖೇರ್ ಅವರಿಗೆ ಸಿನಿಮಾದ ಶೂಟಿಂಗ್ ಮತ್ತು ಇತರೆ ವಿಷಯಗಳನ್ನ ವಿವರಿಸಿದ್ದಾರೆ.

     

    ಇನ್ನೂ `ವೇದ’ ಸೂಪರ್ ಸಕ್ಸಸ್ ನಂತರ ಶಿವಣ್ಣ `ಘೋಸ್ಟ್’, ಭೈರತಿ ರಣಗಲ್, ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ (Shivanna) ಜೊತೆ ಅನುಪಮ್ ಖೇರ್ ಕಾಂಬಿನೇಷನ್ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ.

  • ‘ವಿಜಯ್‌ 69’ ಶೂಟಿಂಗ್‌ ವೇಳೆ ಬಾಲಿವುಡ್‌ ನಟ ಅನುಪಮ್‌ ಖೇರ್‌ಗೆ ಗಾಯ

    ‘ವಿಜಯ್‌ 69’ ಶೂಟಿಂಗ್‌ ವೇಳೆ ಬಾಲಿವುಡ್‌ ನಟ ಅನುಪಮ್‌ ಖೇರ್‌ಗೆ ಗಾಯ

    ಬಾಲಿವುಡ್ (Bollywood)  ನಟ ಅನುಪಮ್ ಖೇರ್ (Anupam Kher) ಅವರು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟ ಅನುಪಮ್  ‘ವಿಜಯ್ 69’ (Vijay 69) ಸಿನಿಮಾ ಶೂಟಿಂಗ್ ವೇಳೆ ಅವರ ಭುಜಕ್ಕೆ ಪೆಟ್ಟಾಗಿದೆ. ಆತಂಕದಲ್ಲಿರುವ ಅಭಿಮಾನಿಗಳಿಗೆ ಅನುಪಮ್ ಖೇರ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಶಿವಣ್ಣ ನಟನೆಯ ‘ಬೈರತಿ ರಣಗಲ್‌’ ಸಿನಿಮಾದ ಬಿಗ್‌ ಅಪ್‌ಡೇಟ್

    ಕನ್ನಡದ ‘ಘೋಸ್ಟ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿರುವ ಖ್ಯಾತ ನಟ ಅನುಪಮ್ ಅವರಿಗೆ ‘ವಿಜಯ್ 69’ ಸಿನಿಮಾ ಚಿತ್ರೀಕರಣದ ವೇಳೆ ಭುಜಕ್ಕೆ ಗಾಯವಾಗಿದೆ. ಈ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಸ್ಪೋರ್ಟ್ಸ್ ಸಿನಿಮಾ ಮಾಡುತ್ತೀರಿ ಮತ್ತು ನೀವು ಗಾಯಗೊಂಡಿಲ್ಲ ಅಂದರೆ ಅದು ಹೇಗೆ ಸಾಧ್ಯ ‘ವಿಜಯ್ 69’ರ ಶೂಟಿಂಗ್ ಸಮಯದಲ್ಲಿ ಭುಜಕ್ಕೆ ತೀವ್ರವಾಗಿ ಗಾಯವಾಯಿತು’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಅವರು ಗಾಯಗೊಂಡಿರುವುದರಿಂದ ಶೂಟಿಂಗ್‌ಗೆ ಬ್ರೇಕ್ ಪಡೆದಿದ್ದಾರೆ. ನೆಚ್ಚಿನ ನಟ ಶ್ರೀಘ್ರವೇ ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

    ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ‘ವೈಆರ್‌ಎಫ್ ಎಂಟರ್‌ಟೈನ್ಮೆಂಟ್’ ಒಟಿಟಿ ಮೂಲಕ ವಿಜಯ್ 69 ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿ ಮೂಲಕ ತೆರೆ ಕಾಣಲಿದೆ. ಈ ಚಿತ್ರಕ್ಕೆ ಅಕ್ಷಯ್ ರಾಯ್ ನಿರ್ದೇಶನ ಮಾಡುತ್ತಿದ್ದಾರೆ.

  • ‘ವುಡ್’ ಎನ್ನುವ ಕೆಟಗರಿಯನ್ನೇ ಬಾಯ್ಕಾಟ್ ಮಾಡಿ : ನಟ ಅನುಪಮ್ ಖೇರ್

    ‘ವುಡ್’ ಎನ್ನುವ ಕೆಟಗರಿಯನ್ನೇ ಬಾಯ್ಕಾಟ್ ಮಾಡಿ : ನಟ ಅನುಪಮ್ ಖೇರ್

    ನ್ನಡ ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಂತೆಯೇ ಬಾಲಿವುಡ್ ನಟ ನಟಿಯರ ವರಸೆಯೇ ಬದಲಾಗಿದೆ. ಭಾರತೀಯ ಸಿನಿಮಾ ರಂಗವೆಂದರೆ ಅದು ಕೇವಲ ಬಾಲಿವುಡ್ ಎನ್ನುತ್ತಿದ್ದವರು ಇದೀಗ ತಮ್ಮ ಮಾತಿನ ಧಾಟಿಯನ್ನೇ ಬದಲಾಯಿಸುತ್ತಿದ್ದಾರೆ. ಹಿಂದಿ ಹೊರತಾಗಿ ಉಳಿದ ಚಿತ್ರಗಳನ್ನು ಪ್ರಾದೇಶಿಕ ಸಿನಿಮಾಗಳೆಂದು ಕರೆಯುತ್ತಿದ್ದವರು ಇದೀಗ ಭಾರತೀಯ ಸಿನಿಮಾ ರಂಗ ಎಂದರೆ ಎಲ್ಲ ಚಿತ್ರರಂಗವನ್ನೂ ಒಳಗೊಂಡಿರುವಂಥದ್ದು ಎನ್ನುತ್ತಿದ್ದಾರೆ.

    ಈ ಮಾತಿಗೆ ಸಾಕ್ಷಿ ಎನ್ನುವಂತೆ ಬೆಂಗಳೂರಿಗೆ ಬಂದಿಳಿದಿರುವ ಬಾಲಿವುಡ್ ನಟ ಅನುಪಮ್ ಖೇರ್ (Anupam Kher), ‘ವುಡ್’ ಎನ್ನುವುದಕ್ಕೆ ಬಾಯ್ಕಾಟ್ ಮಾಡಿ ಎಂದು ಹೇಳಿದ್ದಾರೆ. ಘೋಸ್ಟ್ ಸಿನಿಮಾದ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದಿರುವ ಅನುಪಮ್ ಖೇರ್, ‘ಭಾರತೀಯ ಚಿತ್ರರಂಗ ಎಂದರೆ ಅಲ್ಲರನ್ನೂ ಒಳಗೊಂಡಿದ್ದು. ಇದೀಗ ವುಡ್ ಎನ್ನುವುದನ್ನೇ ಕಿತ್ತು ಹಾಕಿ. ಅದನ್ನು ಬಾಯ್ಕಾಟ್ ಮಾಡಿದರೆ, ನಾವೆಲ್ಲರೂ ಒಂದಾಗುತ್ತೇವೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಅನುಪಮ್ ಖೇರ್ ಮಾತ್ರವಲ್ಲ, ಹಿಂದಿಯ ಅನೇಕ ಕಲಾವಿದರು ಇಂತಹ ಮಾತುಗಳನ್ನು ಆಡಿದ್ದಾರೆ. ಬಾಲಿವುಡ್ ಚಿತ್ರರಂಗ ಮಕಾಡೆ ಮಲಗುತ್ತಿದ್ದಂತೆಯೇ ಈ ಮಾತು ಗಟ್ಟಿಯಾಗಿದೆ. ದಕ್ಷಿಣದ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡಿದ್ದೇ ಈ ಮಾತುಗಳ ಬದಲಾವಣೆ ಕಾರಣವಾಗಿದೆ. ಅಲ್ಲದೇ, ಅನುಪಮ್ ಖೇರ್ ಇದೀಗ ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

    ಅಂದ ಹಾಗೆ ಅನುಪಮ್ ಖೇರ್ ಸದ್ಯ ಶ್ರೀನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಘೋಸ್ಟ್ (Ghost) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ (Shivraj Kumar) ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದೆ. ಈ ಚಿತ್ರದಲ್ಲಿ ಶಿವಣ್ಣ ಘೋಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

  • ನಿಮ್ಮ ಅಭಿನಯ- ವ್ಯಕ್ತಿತ್ವ ಎರಡು ಅದ್ಭುತ: ಅನುಪಮ್ ಖೇರ್ ಹೊಗಳಿದ ಶಿವಣ್ಣ

    ನಿಮ್ಮ ಅಭಿನಯ- ವ್ಯಕ್ತಿತ್ವ ಎರಡು ಅದ್ಭುತ: ಅನುಪಮ್ ಖೇರ್ ಹೊಗಳಿದ ಶಿವಣ್ಣ

    ಬಾಲಿವುಡ್ (Bollywood) ನಟ ಅನುಪಮ್ ಖೇರ್ ಇದೀಗ ಶಿವಣ್ಣ (Shivanna) ನಟನೆಯ ‘ಘೋಸ್ಟ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿರುವ ಅನುಪಮ್ ಖೇರ್‌ಗೆ ಶಿವಣ್ಣ ಸ್ವಾಗತಿಸಿದ್ದಾರೆ.

     

    View this post on Instagram

     

    A post shared by SRINI (@lordmgsrinivas)

    ನಟ-ನಿರ್ದೇಶಕ ಶ್ರೀನಿ ನಿರ್ದೇಶನದ ‘ಘೋಸ್ಟ್’ (Ghost) ಚಿತ್ರದಲ್ಲಿ ಶಿವಣ್ಣ ಜೊತೆ ಹಿಂದಿ ನಟ ಅನುಪಮ್ ಖೇರ್ (Anupam Kher) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನುಪಮ್ ಪಾತ್ರಕ್ಕೆ ಆದ್ಯತೆಯಿದ್ದು, ಶಿವಣ್ಣ ಜೊತೆಗಿನ ಜುಗಲ್‌ಬಂದಿ ಮೋಡಿ ಮಾಡಲಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್

    ‘ ದಿ ಕಾಶ್ಮೀರ್‌ ಫೈಲ್ಸ್’ (Kashmir Files) ನಟ ಅನುಪಮ್ ಖೇರ್ ಸ್ಯಾಂಡಲ್‌ವುಡ್‌ಗೆ ಬಂದಿರೋದ್ದಕ್ಕೆ ಶಿವಣ್ಣ ಖುಷಿಯಿಂದ ಸ್ವಾಗತಿಸಿದ್ದಾರೆ. ಈ ಕುರಿತ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ನಿಮ್ಮ ಜೊತೆ ಕೆಲಸ ಮಾಡಿದ್ದು, ತುಂಬಾ ಖುಷಿ ಆಯ್ತು ಅನುಪಮ್ ಸರ್. ನಿಮ್ಮ ಅಭಿನಯ ಮತ್ತು ವ್ಯಕ್ತಿತ್ವ ಎರಡು ಅದ್ಭುತ. ನಿಮ್ಮನ್ನು ‘ಘೋಸ್ಟ್’ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತೇನೆ.

    ನಟ ಅನುಪಮ್ ಖೇರ್ ಬೆಂಗಳೂರಿಗೆ ಬಂದು, ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಕೊಟ್ಟಿದ್ದಾರೆ. ಶಿವಣ್ಣ- ಅನುಪಮ್ ಖೇರ್ ಕಾಂಬಿನೇಷನ್ ತೆರೆಯ ಮೇಲೆ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • `ಘೋಸ್ಟ್’ ಚಿತ್ರತಂಡ ಸೇರಿದ ಬಾಲಿವುಡ್ ನಟ ಅನುಪಮ್ ಖೇರ್

    `ಘೋಸ್ಟ್’ ಚಿತ್ರತಂಡ ಸೇರಿದ ಬಾಲಿವುಡ್ ನಟ ಅನುಪಮ್ ಖೇರ್

    ಹ್ಯಾಟ್ರಿಕ್ ಹೀರೋ ಶಿವಣ್ಣ- ಡೈರೆಕ್ಟರ್ ಶ್ರೀನಿ ಕಾಂಬಿನೇಷನ್ ಸಿನಿಮಾ `ಘೋಸ್ಟ್’ (Ghost) ಚಿತ್ರಕ್ಕೆ ಬಾಲಿವುಡ್ (Bollywood) ಖ್ಯಾತ ನಟ ಅನುಪಮ್ ಖೇರ್ (Anupam Kher) ಎಂಟ್ರಿಯಾಗಿದ್ದಾರೆ. ಶಿವರಾಜ್‌ಕುಮಾರ್‌ಗೆ ಜೊತೆಯಾಗುವ ಮೂಲಕ ಕನ್ನಡಕ್ಕೆ ಅನುಪಮ್ ಖೇರ್ ಕಾಲಿಡುತ್ತಿದ್ದಾರೆ. ಇದನ್ನೂ ಓದಿ:ಅಂಬಿ ಸ್ಮಾರಕ ಲೋಕಾರ್ಪಣೆ, ಸುಮಲತಾ ಅಂಬರೀಶ್ ಕಣ್ಣೀರು

     

    View this post on Instagram

     

    A post shared by SRINI (@lordmgsrinivas)

    `ಘೋಸ್ಟ್’ ಸಿನಿಮಾಗೆ ಚಾಲನೆ ಸಿಕ್ಕ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಳೆಯುತ್ತಲೇ ಇದೆ. ಈ ಚಿತ್ರದ ಚಿತ್ರೀಕರಣಕ್ಕಾಗಿಯೇ ಬೆಂಗಳೂರಿಗೆ ಬಂದಿಳಿದ ನಟ ಅನುಪಮ್ ಖೇರ್, ತಮ್ಮ ಪಾತ್ರದ ಕುರಿತು ಡೈರೆಕ್ಟರ್ ಶ್ರೀನಿ ಜೊತೆಗೆ ಚರ್ಚೆ ಮಾಡಿದ್ದಾರೆ. ಶ್ರೀನಿ ಕೂಡ ಅನುಪಮ್ ಖೇರ್ ಅವರಿಗೆ ಸಿನಿಮಾದ ಶೂಟಿಂಗ್ ಮತ್ತು ಇತರೆ ವಿಷಯಗಳನ್ನ ವಿವರಿಸಿದ್ದಾರೆ.

     

    View this post on Instagram

     

    A post shared by SRINI (@lordmgsrinivas)

    `ದಿ ಕಾಶ್ಮೀರ್ ಫೈಲ್ಸ್’ ದಂತಹ ಸಿನಿಮಾದಲ್ಲಿ ಅಭಿನಯಿಸಿರೋ ಅನುಪಮ್ ಖೇರ್ ಅವರು ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ಚಿತ್ರದಲ್ಲಿಯೇ ಒಂದು ಅದ್ಭುತ ರೋಲ್ ಅನ್ನ ಅನುಪಮ್ ಖೇರ್ ನಿರ್ವಹಿಸುತ್ತಿದ್ದಾರೆ.

    ಇನ್ನೂ `ವೇದ’ ಸೂಪರ್ ಸಕ್ಸಸ್ ನಂತರ ಶಿವಣ್ಣ `ಘೋಸ್ಟ್’, ಭೈರತಿ ರಣಗಲ್, ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ (Shivanna) ಜೊತೆ ಅನುಪಮ್ ಖೇರ್ ಕಾಂಬಿನೇಷನ್ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ.

  • Exclusive- ಸಾವರ್ಕರ್ ಸಿನಿಮಾದಲ್ಲಿ ಸುನೀಲ್ ರಾವ್ ಫಸ್ಟ್ ಲುಕ್

    Exclusive- ಸಾವರ್ಕರ್ ಸಿನಿಮಾದಲ್ಲಿ ಸುನೀಲ್ ರಾವ್ ಫಸ್ಟ್ ಲುಕ್

    ನ್ನಡದ ಹಿರಿಯ ಸಿನಿಮಾ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ (Radhakrishna Palakki) ಮಹತ್ವದ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅವರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್  (Biopic) ಕುರಿತಾದ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಾವರ್ಕರ್ (Veera Savarkar) ಪಾತ್ರಕ್ಕಾಗಿ ಸುನೀಲ್ ರಾವ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಸಿನಿಮಾದ ಫಸ್ಟ್ ಲುಕ್ ಎಕ್ಸ್ ಕ್ಲೂಸಿವ್ ಆಗಿ ಪಬ್ಲಿಕ್ ಟಿವಿ ಡಿಜಿಟಲ್ ಗೆ ಸಿಕ್ಕಿದೆ. ಈ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಅವರನ್ನು ಕರೆತರುವ ಪ್ರಯತ್ನ ನಡೆದಿದ್ದು, ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಈಗಾಗಲೇ ಮುಂಬೈಗೆ ಹೋಗಿ ಬಂದಿದ್ದಾರೆ.

    ಹಿಂದಿಯಲ್ಲಿ ಈಗಾಗಲೇ ಸಾವರ್ಕರ್ ಬಯೋಪಿಕ್ ರೆಡಿ ಆಗುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಹೊತ್ತಿನಲ್ಲಿ ಸ್ಯಾಂಡಲ್ ವುಡ್ ಅವರ ಬಯೋಪಿಕ್ ಅನ್ನು ಕೈಗೆತ್ತಿಕೊಂಡಿದೆ. ಈ ಕುರಿತು ಚಿತ್ರದ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.  ವೀರ ಸಾವರ್ಕರ್ ಪಾತ್ರವನ್ನು ಸುನೀಲ್ ರಾವ್ (Sunil Rao) ನಿರ್ವಹಿಸುತ್ತಿದ್ದು, ಮಹಾತ್ಮ ಗಾಂಧಿ ಪಾತ್ರವನ್ನು ಹಿಂದಿಯ ನಟ ಶರ್ಮಾ ಮಾಡುತ್ತಿದ್ದಾರೆ. ಚಿತ್ರದ ಟೀಸರ್  ಕೂಡ ಮುಗಿದಿದೆ. ಮಾರ್ಚ್ 12 ರ ನಂತರ ಆ ಲುಕ್ ರಿಲೀಸ್ ಗೆ ಪ್ಲ್ಯಾನ್ ಮಾಡಲಾಗಿತ್ತು, ಅದು ಮುಂದೂಡಲಾಗಿದೆ. ಇದನ್ನೂ ಓದಿ: ಮಗನಿಗೆ ಸಾಹಸಸಿಂಹ ವಿಷ್ಣುವರ್ಧನ್ ಹೆಸರಿಟ್ಟ ವಿಷ್ಣು ಅಭಿಮಾನಿ

    “ಹಿಂದಿಯಲ್ಲಿ ಈಗಾಗಲೇ ವೀರ ಸಾವರ್ಕರ್ ಅವರ ಬಯೋಪಿಕ್ ಚಾಲನೆ ಸಿಕ್ಕಿದೆ. ಆ ಸಿನಿಮಾಗೂ ನಮಗೂ ಸಂಬಂಧವಿಲ್ಲ. ಆ ತಂಡವೇ ಬೇರೆ ಇದೆ. ಕನ್ನಡದಲ್ಲಿ ಬರಲಿರುವ ತಂಡ ಮತ್ತು ಕಲಾವಿದರೇ ಬೇರೆ ಇದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಮಾರ್ಚ್ 25 ರಿಂದ ಶೂಟಿಂಗ್ ಶುರು ಮಾಡುತ್ತೇವೆ. ಇದೊಂದು ಭಾರೀ ಬಜೆಟ್ ಸಿನಿಮಾ ಆಗಲಿರಲಿದೆ’ ಎಂದರು ರಾಧಾಕೃಷ್ಣ ಪಲ್ಲಕ್ಕಿ.

    ಪಾತ್ರಕ್ಕೆ ಬೇಕಾಗಿರುವ ಎಲ್ಲ ತಯಾರಿಯನ್ನೂ ಸುನೀಲ್ ರಾವ್ ಕೂಡ ಮಾಡಿದ್ದಾರೆ. ಗೆಟಪ್ ಕೂಡ ಬದಲಾಯಿಸಿಕೊಂಡಿದ್ದಾರೆ. ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕರು. ರಂಗಾಯಣ ರಘು, ಸಾಯಿಕುಮಾರ್, ರವಿಶಂಕರ್, ಅನುಪ್ರಭಾಕರ್ ಹೀಗೆ ಅನೇಕ ನುರಿತ ಕಲಾವಿದರು ಕೂಡ ತಾರಾಗಣದಲ್ಲಿ ಇರಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರ ಸಿನಿಮಾಟೋಗ್ರಫಿ, ಥ್ರಿಲ್ಲರ್ ಮಂಜು ಅವರ ಸಾಹಸ ಮತ್ತು ಸ್ಯಾಮ್ ಸಂಗೀತ ಚಿತ್ರಕ್ಕಿರಲಿದೆ. ಕೆ.ಎನ್. ಚಕ್ರಪಾಣಿ ಈ ಸಿನಿಮಾದ ನಿರ್ಮಾಪಕರು.

  • Exclusive-‘ವೀರ ಸಾವರ್ಕರ್’ ಸಿನಿಮಾಗಾಗಿ ಕನ್ನಡಕ್ಕೆ ಬರಲಿದ್ದಾರಾ ಅನುಪಮ್ ಖೇರ್?

    Exclusive-‘ವೀರ ಸಾವರ್ಕರ್’ ಸಿನಿಮಾಗಾಗಿ ಕನ್ನಡಕ್ಕೆ ಬರಲಿದ್ದಾರಾ ಅನುಪಮ್ ಖೇರ್?

    ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತಾದ ಸಿನಿಮಾ ಕನ್ನಡದಲ್ಲೂ ತಯಾರಾಗುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕರೆತರುವ ಪ್ರಯತ್ನ ನಡೆದಿದ್ದು, ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಈಗಾಗಲೇ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಅನುಪಮ್ ಖೇರ್ ಭೇಟಿಯಾಗಿ ಅವರು ಕಾದಿದ್ದಾರೆ. ಅಂದುಕೊಂಡಂತೆ ಆದರೆ ಇನ್ನೆರಡು ದಿನದಲ್ಲಿ ಅನುಪಮ್ ಕನ್ನಡಕ್ಕೆ ಬರುವ ವಿಚಾರ ಗೊತ್ತಾಗಲಿದೆ.

    ಹಿಂದಿಯಲ್ಲಿ ಈಗಾಗಲೇ ಸಾವರ್ಕರ್ ಬಯೋಪಿಕ್ ರೆಡಿ ಆಗುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಹೊತ್ತಿನಲ್ಲಿ ಸ್ಯಾಂಡಲ್ ವುಡ್ ಅವರ ಬಯೋಪಿಕ್ ಅನ್ನು ಕೈಗೆತ್ತಿಕೊಂಡಿದೆ. ಈ ಕುರಿತು ಚಿತ್ರದ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.  ವೀರ ಸಾವರ್ಕರ್ ಪಾತ್ರವನ್ನು ಸುನೀಲ್ ರಾವ್ ನಿರ್ವಹಿಸುತ್ತಿದ್ದು, ಮಹಾತ್ಮ ಗಾಂಧಿ ಪಾತ್ರವನ್ನು ಹಿಂದಿಯ ನಟ ಶರ್ಮಾ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ಮತ್ತು ವೀರ ಸಾವರ್ಕರ್ ಪಾತ್ರವನ್ನು ನಿರ್ವಹಿಸುತ್ತಿರುವ ಸುನೀಲ್ ರಾವ್ ಅವರ ಫೋಟೋ ಶೂಟ್ ಕೂಡ ಮುಗಿದಿದೆ. ಮಾರ್ಚ್ 12 ರ ನಂತರ ಆ ಲುಕ್ ರಿಲೀಸ್ ಗೆ ಪ್ಲ್ಯಾನ್ ಮಾಡಲಾಗಿದೆ.

    “ಹಿಂದಿಯಲ್ಲಿ ಈಗಾಗಲೇ ವೀರ ಸಾವರ್ಕರ್ ಅವರ ಬಯೋಪಿಕ್ ಚಾಲನೆ ಸಿಕ್ಕಿದೆ. ಆ ಸಿನಿಮಾಗೂ ನಮಗೂ ಸಂಬಂಧವಿಲ್ಲ. ಆ ತಂಡವೇ ಬೇರೆ ಇದೆ. ಕನ್ನಡದಲ್ಲಿ ಬರಲಿರುವ ತಂಡ ಮತ್ತು ಕಲಾವಿದರೇ ಬೇರೆ ಇದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಮಾರ್ಚ್ 25 ರಿಂದ ಶೂಟಿಂಗ್ ಶುರು ಮಾಡುತ್ತೇವೆ. ಇದೊಂದು ಭಾರೀ ಬಜೆಟ್ ಸಿನಿಮಾ ಆಗಲಿರಲಿದೆ’ ಎಂದರು ರಾಧಾಕೃಷ್ಣ ಪಲ್ಲಕ್ಕಿ.  ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ಪಾತ್ರಕ್ಕೆ ಬೇಕಾಗಿರುವ ಎಲ್ಲ ತಯಾರಿಯನ್ನೂ ಸುನೀಲ್ ರಾವ್ ಕೂಡ ಮಾಡಿದ್ದಾರೆ. ಗೆಟಪ್ ಕೂಡ ಬದಲಾಯಿಸಿಕೊಂಡಿದ್ದಾರೆ. ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕರು. ರಂಗಾಯಣ ರಘು, ಸಾಯಿಕುಮಾರ್, ರವಿಶಂಕರ್, ಅನುಪ್ರಭಾಕರ್ ಹೀಗೆ ಅನೇಕ ನುರಿತ ಕಲಾವಿದರು ಕೂಡ ತಾರಾಗಣದಲ್ಲಿ ಇರಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರ ಸಿನಿಮಾಟೋಗ್ರಫಿ, ಥ್ರಿಲ್ಲರ್ ಮಂಜು ಅವರ ಸಾಹಸ ಮತ್ತು ಸ್ಯಾಮ್ ಸಂಗೀತ ಚಿತ್ರಕ್ಕಿರಲಿದೆ. ಕೆ.ಎನ್. ಚಕ್ರಪಾಣಿ ಈ ಸಿನಿಮಾದ ನಿರ್ಮಾಪಕರು.

  • ಕಾಶ್ಮೀರಿ ಪಂಡಿತರಿಗೆ ಲಕ್ಷಗಳ ರೂಪದಲ್ಲಿ ನೆರವಿನ ಹಸ್ತಚಾಚಿದ ನಟ ಅನುಪಮ್ ಖೇರ್

    ಕಾಶ್ಮೀರಿ ಪಂಡಿತರಿಗೆ ಲಕ್ಷಗಳ ರೂಪದಲ್ಲಿ ನೆರವಿನ ಹಸ್ತಚಾಚಿದ ನಟ ಅನುಪಮ್ ಖೇರ್

    ದಿ ಕಾಶ್ಮೀರ್ ಫೈಲ್ಸ್  (The Kashmiri Files)ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಾಲಿವುಡ್ ನಟ ಅನುಪಮ್ ಖೇರ್ (Anupam Kher), ಕಾಶ್ಮೀರಿ ಪಂಡಿತರಿಗೆ (Kashmiri Pandit) ನೆರವಿನ ಹಸ್ತ (Donation)ಚಾಚಿದ್ದಾರೆ. ದೆಹಲಿಯಲ್ಲಿ ನಡೆದ ಗ್ಲೋಬಲ್ ಕಾಶ್ಮೀರಿ ಪಂಡಿತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ‘ನಿಮ್ಮಿಂದ ನಾವು ದುಡ್ಡು ಮಾಡಿದ್ದೇವೆ. ನಿಮಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ’ ಎಂದಿರುವ ಅವರು ಐದು ಲಕ್ಷ ರೂಪಾಯಿ ದೇಣಿಗೆ ಘೋಷಿಸಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ 2022 ಮಾರ್ಚ್ 11ರಂದು ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಈ ಸಿನಿಮಾವನ್ನು ಎಲ್ಲರಿಗೂ ತೋರಿಸುವ ಉದ್ದೇಶದಿಂದ ನಾನಾ ರಾಜ್ಯಗಳ ಸರಕಾರವು ತೆರಿಗೆ ವಿನಾಯತಿ ಕೂಡ ಘೋಷಣೆ ಮಾಡಿದ್ದವು. ಅಲ್ಲದೇ, ಅನೇಕ ರಾಜ್ಯಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿತು. ಫಲವಾಗಿ ಬರೋಬ್ಬರಿ 340 ಕೋಟಿ ರೂಪಾಯಿ ಸಿನಿಮಾ ಸಂಪಾದಿಸಿತು. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಾಗಿ ಈಗಲೂ ಭಿನ್ನಾಭಿಪ್ರಾಯಗಳು ಇದ್ದರೂ, ಆ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಸಿನಿಮಾ ಪ್ರದರ್ಶನವಾಯಿತು. ಅನೇಕ ಪ್ರಶಸ್ತಿಗಳು ಸಿನಿಮಾವನ್ನು ಹುಡುಕಿಕೊಂಡು ಬಂದವು. ಈಗಲೂ ಓಟಿಟಿಯಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರ ಸಾಕಷ್ಟು ದುಡ್ಡು ಮಾಡಿದೆ.

    ಈ ಎಲ್ಲ ಕಾರಣದಿಂದಾಗಿ ಕಾಶ್ಮೀರಿ ಪಂಡಿತ್ ಕಾನ್ ಕ್ಲೇವ್ ದಲ್ಲಿ ಮಾತನಾಡಿದ ಅನುಪಮ್ ಖೇರ್, ‘ನಮ್ಮ ಜನರಿಗೆ ನಾನು ನೆರವಿನ ಹಸ್ತ ಚಾಚುವಂತಹ ಸಮಯ ಬಂದಿದೆ. ಈ ಸಮಯದಲ್ಲಿ ನಾವು ಕಾಶ್ಮೀರಿ ಪಂಡಿತರ ಜೊತೆ ನಿಂತುಕೊಳ್ಳಬೇಕು. ಅವರಿಂದ ದುಡ್ಡು ಮಾಡಿದ್ದೇವೆ. ಆ ಎಚ್ಚರಿಕೆ ನಮ್ಮಲ್ಲಿ ಇರಬೇಕು’ ಎಂದು ಅವರು ಭಾವುಕರಾಗಿ ಮಾತನಾಡಿದ್ದಾರೆ.

  • ಶಿವಣ್ಣ ನಟನೆಯ `ಘೋಸ್ಟ್’ ಚಿತ್ರದಲ್ಲಿ ನಟ ಅನುಪಮ್ ಖೇರ್

    ಶಿವಣ್ಣ ನಟನೆಯ `ಘೋಸ್ಟ್’ ಚಿತ್ರದಲ್ಲಿ ನಟ ಅನುಪಮ್ ಖೇರ್

    ಶಿವರಾಜ್‌ಕುಮಾರ್ (Shivarajkumar) ನಟನೆಯ ನಿರೀಕ್ಷಿತ ಚಿತ್ರ `ಘೋಸ್ಟ್’ (Ghost) ಸಿನಿಮಾ ಶೂಟಿಂಗ್‌ನಲ್ಲಿ ನಟ ಬ್ಯುಸಿಯಾಗಿದ್ದಾರೆ. ಶಿವಣ್ಣನ ಸಿನಿಮಾಗೆ ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಸಾಥ್ ನೀಡಲಿದ್ದಾರೆ.

     

    View this post on Instagram

     

    A post shared by DrShivaRajkumar (@nimmashivarajkumar)

    ಶಿವಣ್ಣ ನಟನೆಯ `ವೇದ’ (Vedha Film) ಸಿನಿಮಾ ಇದೀಗ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಸಕ್ಸಸ್ ನಂತರ ತಮ್ಮ ಮುಂದಿನ ಸಿನಿಮಾದತ್ತ ನಟ ಗಮನ ಕೊಡ್ತಿದ್ದಾರೆ. ಸದ್ಯ ʻಘೋಸ್ಟ್ʼ ಚಿತ್ರದ ಶೂಟಿಂಗ್‌ನಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.

    ಬೀರ್‌ಬಲ್, ಓಲ್ಡ್‌ಮಾಂಕ್‌ ಚಿತ್ರಗಳನ್ನ ನಟಿಸಿ ನಿರ್ದೇಶಿಸಿದ್ದ ಶ್ರೀನಿ ಇದೀಗ ಘೋಸ್ಟ್ ಸಿನಿಮಾಗೆ ನಿರ್ದೇಶನ ಮಾಡ್ತಿದ್ದಾರೆ. ಘೋಸ್ಟ್ ಸಿನಿಮಾ ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಲೆಯುತ್ತಲೇ ಬಂದಿದೆ. ಹೀಗಿರುವಾಗ ಬಾಲಿವುಡ್ ನಟ ಅನುಪಮ್ ಖೇರ್ ಶಿವಣ್ಣನ ಟೀಮ್ ಜೊತೆ ಕೈಜೋಡಿಸಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ಮಾಲಿವುಡ್ ನಟ ಜಯರಾಮ್ ನಂತರ ಅನುಪಮ್ ಖೇರ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಜೀವತುಂಬಲಿದ್ದಾರೆ. ಶಿವಣ್ಣನ ಜೊತೆ ನಟಿಸಲಿದ್ದಾರೆ. ಈಗಾಗಲೇ ತಮ್ಮ ಪಾತ್ರದ ಕಥೆ ಕೇಳಿ ಥ್ರಿಲ್ ಆಗಿ, ಚಿತ್ರತಂಡಕ್ಕೆ ನಟ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ಗೆ ಭಾಗಿಯಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿರಿಲೀಸ್: ಕಾರಣ ತಿಳಿಸಿದ ವಿವೇಕ್ ಅಗ್ನಿಹೋತ್ರಿ

    ಇಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿರಿಲೀಸ್: ಕಾರಣ ತಿಳಿಸಿದ ವಿವೇಕ್ ಅಗ್ನಿಹೋತ್ರಿ

    ಳೆದ ವರ್ಷ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಇದೀಗ ಮತ್ತೆ ರಿರಿಲೀಸ್ (Rerelease) ಆಗುತ್ತಿದೆ. ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಇನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಗಳಿಸಿತ್ತು. ದೇಶದ ನಾನಾ ಭಾಷೆಗಳಿಗೆ ಡಬ್ ಆಗಿಯೂ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಯ ದಿನದಿಂದ ಈವರೆಗೂ ಒಂದಿಲ್ಲೊಂದು ವಿವಾದಕ್ಕೂ ಈ ಸಿನಿಮಾ ಕಾರಣವಾಗಿತ್ತು.

    kashmir

    ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಿ, ಟಿವಿಯಲ್ಲೂ ಪ್ರಸಾರವಾಗಿ, ಓಟಿಟಿಯಲ್ಲೂ ಇರುವ ಈ ಸಿನಿಮಾವನ್ನು ಇಂದು ಮತ್ತೆ ಬಿಡುಗಡೆ ಮಾಡುತ್ತಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದು ಕಾಶ್ಮೀರ ಪಂಡಿತರ ಹತ್ಯೆಯ ಹಿನ್ನೆಲೆಯಾಗಿಟ್ಟುಕೊಂಡು ತಯಾರಾದ ಸಿನಿಮಾ. ಆ ಹತ್ಯೆ ನಡೆದು ಇಂದಿಗೆ 33 ವರ್ಷಗಳು. ಆ ಗೌರವಾರ್ಥವಾಗಿ ಸಿನಿಮಾ ರಿಲೀಸ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾರಂಗಕ್ಕೆ ದಾರಿ ತೋರಿಸಿದ್ದೇ ರಕ್ಷಿತ್, ರಿಷಬ್: ನಟಿ ರಶ್ಮಿಕಾ ಮಂದಣ್ಣ

    ಕಾಶ್ಮೀರ ಪಂಡಿತರ ನರಮೇಧ ನಡೆದು ಜನವರಿ 19ಕ್ಕೆ 33 ವರ್ಷಗಳು ಆಗುತ್ತಿವೆ. ಇಂತಹ ಕರಾಳ ಅಧ್ಯಾಯವನ್ನು ಮತ್ತೊಮ್ಮೆ ಜನರಿಗೆ ನೆನಪಿಸಬೇಕು. ನರಹತ್ಯೆಯಲ್ಲಿ ಹತರಾದ ಕಾಶ್ಮೀರ ಪಂಡಿತರಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಇಂದು ಮತ್ತೆ ದಿ ಕಾಶ್ಮೀರ್ ಫೈಲ್ಸ್ ತೆರೆಯ ಮೇಲೆ ಇರಲಿದೆ. ಪ್ರಕಾಶ್ ಬೆಳವಾಡಿ, ಅನುಪಮ್ ಖೇರ್ (Anupam Kher) ಸೇರಿದಂತೆ ಹಲವು ನುರಿತ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k