Tag: anupam kher

  • ಆಪರೇಷನ್ ಸಿಂಧೂರ: ಪಾಕ್‌ಗೆ ತಕ್ಕ ಪಾಠ ಕಲಿಸಿದ ಭಾರತಕ್ಕೆ ಜೈ ಎಂದ ಬಾಲಿವುಡ್

    ಆಪರೇಷನ್ ಸಿಂಧೂರ: ಪಾಕ್‌ಗೆ ತಕ್ಕ ಪಾಠ ಕಲಿಸಿದ ಭಾರತಕ್ಕೆ ಜೈ ಎಂದ ಬಾಲಿವುಡ್

    ಡರಾತ್ರಿ ಪಾಕಿಸ್ತಾನದಲ್ಲಿರುವ ಉಗ್ರರ 9 ಅಡುಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಭಾರತ ತಕ್ಕ ಪಾಠ ಕಲಿಸಿದೆ. ಈ ಹಿನ್ನೆಲೆ ಬಾಲಿವುಡ್ ಮಂದಿ ಅನುಪಮ್ ಖೇರ್, ರಿತೇಶ್ ಸೇರಿದಂತೆ ಅನೇಕರು ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಚರಣೆಯನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ:9 ಉಗ್ರರ ನೆಲೆಗಳು ಉಡೀಸ್‌- ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?

    ಭಾರತ್ ಮಾತಾ ಕಿ ಜೈ ಆಪರೇಷನ್ ಸಿಂಧೂರ ಎಂದು ಅನುಪಮ್ ಖೇರ್ (Anupam Kher) ಸೋಷಿಯ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:Operation Sindoor | 23 ನಿಮಿಷದ ದಾಳಿಗೆ 80ಕ್ಕೂ ಹೆಚ್ಚು ಉಗ್ರರು ಮಟ್ಯಾಶ್‌

    ಜೈ ಹಿಂದ್ ಸೇನಾ, ಭಾರತ್ ಮಾತಾ ಕಿ ಜೈ ಎಂದು ನಟ ರಿತೇಶ್ ದೇಶ್‌ಮುಖ್ ಬರೆದಿದ್ದಾರೆ.

    ನಿಮ್ರತ್ ಕೌರ್ ಎಕ್ಸ್‌ನಲ್ಲಿ, ನಮ್ಮ ಪಡೆಗಳೊಂದಿಗೆ ಒಗ್ಗೂಡಿ. ಒಂದು ದೇಶ. ಒಂದು ಮಿಷನ್. ಜೈಹಿಂದ್, ಆಪರೇಷನ್ ಸಿಂಧೂರ್. ಜೈ ಹಿಂದ್ ಕಿ ಸೇನಾ ಎಂದು ಬರೆದುಕೊಂಡಿದ್ದಾರೆ.


    ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಇದೀಗ ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

  • ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ: ಉಗ್ರರ ಕೃತ್ಯದ ಬಗ್ಗೆ ಅನುಪಮ್ ಖೇರ್ ಆಕ್ರೋಶ

    ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ: ಉಗ್ರರ ಕೃತ್ಯದ ಬಗ್ಗೆ ಅನುಪಮ್ ಖೇರ್ ಆಕ್ರೋಶ

    ಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಭಯೋತ್ಪಾದಕರ ದಾಳಿಯಲ್ಲಿ 27 ಮಂದಿ ಮೃತಪಟ್ಟಿರೋ ಬಗ್ಗೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ವಿಷಾದ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕರಿಗೆ ಏಳು ಜನ್ಮ ಎತ್ತಿ ಬಂದ್ರೂ ಇಂಥಹ ದುಷ್ಟ ಕೆಲಸ ಮಾಡುವ ಯೋಚನೆನೇ ಅವರಿಗೆ ಬರಬಾರದು ಹಾಗೇ ಪಾಠ ಕಲಿಸಬೇಕು ಎಂದು ಅನುಪಮ್ ಖೇರ್ (Anupam Kher) ಉಗ್ರರ ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ ಉಗ್ರರ ಹೇಯ ಕೃತ್ಯ ಖಂಡಿಸಿದ ಶಿವಣ್ಣ, ರಶ್ಮಿಕಾ ಮಂದಣ್ಣ, ಅನುಷ್ಕಾ ಶರ್ಮಾ

    ಈ ಬಗ್ಗೆ ಅನುಪಮ್‌ ಮಾತನಾಡಿ, ಇಂದು ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ. 27 ಹಿಂದೂಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ. ದುಃಖದ ಜೊತೆ ಕ್ರೋಧ, ಸಿಟ್ಟು ಬರುತ್ತದೆ. ನಾನು ಇದನ್ನು ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ. ಕಾಶ್ಮೀರದಲ್ಲಿ ಹಿಂದೂಗಳ ಜನರೊಂದಿಗೆ ಜೊತೆ ಹೀಗೆ ಆಗ್ತಾನೇ ಇದೆ. ‘ಕಾಶ್ಮೀರ್ ಫೈಲ್ಸ್’ ಅವರ ಕಥೆಯಾಗಿದ್ದು, ಇದನ್ನು ಸಿನಿಮಾ ಮಾಡಿದಾಗ ಪ್ರೊಪಗಾಂಡ ಎಂದು ಕರೆದ್ರಿ. ದೇಶದ ವಿವಿಧ ಭಾಗಗಳಿಂದ ಜನರು ತಮ್ಮ ರಜಾದಿನಗಳನ್ನು ಕಳೆಯಲು ಕುಟುಂಬದ ಜೊತೆ ಕಾಶ್ಮೀರಕ್ಕೆ ಬಂದರು. ಈ ವೇಳೆ, ಅವರ ಧರ್ಮವನ್ನು ತಿಳಿದು ಕೊಲ್ಲಲಾಗಿದೆ ಎಂದು ಕೃತ್ಯವನ್ನು ಖಂಡಿಸಿದ್ದಾರೆ. ಇದನ್ನೂ ಓದಿ:ಮುಗ್ಧರನ್ನು ಕೊಲ್ಲುವುದು ದುಷ್ಟತನ- ಪಹಲ್ಗಾಮ್‌ ದಾಳಿ ಖಂಡಿಸಿದ ನಟ ಅಕ್ಷಯ್ ಕುಮಾರ್

     

    View this post on Instagram

     

    A post shared by Anupam Kher (@anupampkher)

    ಇದರ ಬಗ್ಗೆ ಮಾತನಾಡೋಕೆ ಶಬ್ದವೇ ಸಿಗೋದಿಲ್ಲ. ಪತಿಯ ಮೃತ ದೇಹದ ಜೊತೆಗಿದ್ದ ಮಹಿಳೆಯನ್ನು ನಾನು ಮರೆಯಲು ಸಾಧ್ಯವಿಲ್ಲ. ನಾನು ಪಲ್ಲವಿ ಜಿ ಅವರ ಸಂದರ್ಶನ ನೋಡಿದೆ. ಪತಿಯನ್ನ ಕಣ್ಣೆದುರೇ ಸಾಯಿಸಿದಾಗ ನನ್ನನ್ನು ನನ್ನ ಮಗನನ್ನು ಸಾಯಿಸಿ ಅಂದಾಗ, ನಿಮ್ಮನ್ನು ಸಾಯಿಸಲ್ಲ ಮೋದಿಗೆ ಹೋಗಿ ಹೇಳಿ ಅಂದ್ರಲ್ಲ. ಬಹುಶಃ ಅವನು ಒಂದು ಸಂದೇಶವನ್ನು ನೀಡಲು ಬಯಸಿದ್ದಿರಬಹುದು ಎಂದಿದ್ದಾರೆ. ಮೋದಿಯವರು ಹಾಗೂ ಅಮಿತ್ ಶಾ ಅವರ ಬಳಿ ನಾನು ಕೇಳಿಕೊಳ್ಳುವುದೇನಂದರೆ ಉಗ್ರರಿಗೆ ನಾವು ಎಂಥಹ ಪಾಠ ಕಲಿಸಬೇಕು ಅಂದರೆ ಇನ್ನೂ ಏಳು ಜನ್ಮ ಎತ್ತಿ ಬಂದ್ರೂ ಇಂಥಹ ದುಷ್ಟ ಕೆಲಸ ಮಾಡುವ ಯೋಚನೆನೇ ಅವರಿಗೆ ಬರಬಾರದು ಎಂದು ಹಿಂದೂ ಕಾಶ್ಮೀರಿ ಪಂಡಿತ್‌ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಅನುಪಮ್‌ ಖೇರ್‌ ಅವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅದಷ್ಟೇ ಅಲ್ಲ, ಉಗ್ರರ ಈ ನೀಚ ಕೃತ್ಯದ ಬಗ್ಗೆ ಕಲಾವಿದರಾದ ಶಿವಣ್ಣ, ರಶ್ಮಿಕಾ ಮಂದಣ್ಣ, ರಾಮ್‌ ಚರಣ್‌, ರವೀನಾ ಟಂಡನ್‌, ಸೋನು ಸೂದ್‌, ಸಂಜಯ್‌ ದತ್‌, ಅನುಷ್ಕಾ ಶರ್ಮಾ ಸೇರಿದಂತೆ ಅನೇಕರು ಖಂಡಿಸಿದ್ದಾರೆ.

  • ನಕಲಿ ನೋಟು ಕೇಸ್‌ನಲ್ಲಿ ಗುಜರಾತ್‌ ಪೊಲೀಸರಿಗೆ ಶಾಕ್‌ – ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಇತ್ತು ಬಾಲಿವುಡ್‌ ನಟನ ಫೋಟೋ

    ನಕಲಿ ನೋಟು ಕೇಸ್‌ನಲ್ಲಿ ಗುಜರಾತ್‌ ಪೊಲೀಸರಿಗೆ ಶಾಕ್‌ – ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಇತ್ತು ಬಾಲಿವುಡ್‌ ನಟನ ಫೋಟೋ

    ಗಾಂಧೀನಗರ: ನಕಲಿ ನೋಟುಗಳ (Fake Notes) ಪ್ರಕರಣ ಬೇಧಿಸಿದ ಗುಜರಾತ್‌ ಪೊಲೀಸರು ಶಾಕ್‌ ಆಗಿದ್ದಾರೆ. 500 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ (Anupam Kher) ಅವರ ಚಿತ್ರ ಬಳಸಿರುವುದು ಕಂಡುಬಂದಿದೆ.

    ಸುಮಾರು 1.6 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಿಗೆ ‘ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಪದ ಬಳಕೆ ಮಾಡಲಾಗಿದೆ. ಇದೀಗ ನೋಟಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

    ಅಹಮದಾಬಾದ್‌ನ ವ್ಯಾಪಾರಿಯೊಬ್ಬರು ನಕಲಿ ನೋಟುಗನ್ನು ಬಳಸಿ ವಂಚಿಸಿರುವ ಸಂಬಂಧ ವೈರಲ್‌ ಆಗಿರುವ ವೀಡಿಯೋವನ್ನು ಟ್ಯಾಗ್‌ ಮಾಡಿ ಅನುಪಮ್‌ ಖೇರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. 500 ರೂ. ನೋಟುಗಳಲ್ಲಿ ಗಾಂಧೀಜಿಯವರ ಫೋಟೋ ಬದಲಿಗೆ ನನ್ನ ಫೋಟೋ ಎಂದು ನಟ ಶೀರ್ಷಿಕೆ ನೀಡಿದ್ದಾರೆ.

    ಸೆ.24 ರಂದು ನವರಂಗಪುರ ಪೊಲೀಸ್ ಠಾಣೆಯಲ್ಲಿ ಬುಲಿಯನ್ ವ್ಯಾಪಾರಿ ಮೆಹುಲ್ ಠಕ್ಕರ್ ದೂರು ದಾಖಲಿಸಿದ್ದರು. 1.6 ಕೋಟಿ ರೂ. ಮೌಲ್ಯದ 2,100 ಗ್ರಾಂ ಚಿನ್ನವನ್ನು ಒಳಗೊಂಡ ಡೀಲ್‌ಗಾಗಿ ಶಂಕಿತರು ತಮ್ಮ ಉದ್ಯೋಗಿಯೊಬ್ಬರನ್ನು ಸಂಪರ್ಕಿಸಿದ್ದರು. ಉಳಿದ 30 ಲಕ್ಷವನ್ನು ಮರುದಿನ ಪಾವತಿಸುವುದಾಗಿ ಭರವಸೆ ನೀಡಿ, 1.3 ಕೋಟಿ ನಗದು ನೀಡಿದ್ದಾರೆ. ಆದರೆ, ಚಿನ್ನವನ್ನು ಹಸ್ತಾಂತರಿಸಿದ ನಂತರ ಅವರು ಎಸ್ಕೇಪ್‌ ಆದರು. ಎಲ್ಲಾ ನೋಟುಗಳನ್ನು ಗಮನಿಸಿದಾಗ ನಕಲಿ ಎಂದು ತಿಳಿಯಿತು.

    ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: MUDA Scam Case: ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿದ ED

  • ನಟ ಅನುಪಮ್ ಖೇರ್ ಮುಂಬೈ ಕಚೇರಿಗೆ ನುಗ್ಗಿದ ಕಳ್ಳರು

    ನಟ ಅನುಪಮ್ ಖೇರ್ ಮುಂಬೈ ಕಚೇರಿಗೆ ನುಗ್ಗಿದ ಕಳ್ಳರು

    ಮುಂಬೈ: ನಗರದ ವೀರ ದೇಸಾಯಿ ರಸ್ತೆಯಲ್ಲಿರುವ ಅನುಪಮ್ ಖೇರ್ (Anupam Kher) ಅವರ ಕಚೇರಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ.

    ಬೀಗ ಮುರಿದಿರುವ ಕಚೇರಿಯ ಮುಖ್ಯ ದ್ವಾರದ ವೀಡಿಯೋವನ್ನು ನಟ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬುಧವಾರ ರಾತ್ರಿ ವೀರ ದೇಸಾಯಿ ರಸ್ತೆಯಲ್ಲಿರುವ ನನ್ನ ಕಚೇರಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಅಲ್ಲದೇ ಕೆಲವೊಂದು ದಾಖಲೆಗಳನ್ನು ಕದ್ದಿದ್ದಾರೆ ಎಂದಿದ್ದಾರೆ.

     

    View this post on Instagram

     

    A post shared by Anupam Kher (@anupampkher)

     

    ಇಬ್ಬರು ಕಳ್ಳರು ಆಟೋದಲ್ಲಿ ಕುಳಿತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಪೊಲೀಸರಿಗೆ ನೀಡಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಸಮುದ್ರದ ಮಧ್ಯೆ ಚೀನಾ-ಫಿಲಿಪ್ಪೈನ್ಸ್ ಸೇನೆಗಳ ನಡುವೆ ಜಟಾಪಟಿ

    ಅನುಪಮ್ ಖೇರ್ ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. ಮುಂದಿನ ಅನುರಾಗ್ ಬಸು ಅವರ ಮುಂಬರುವ ಸಂಕಲನ ಚಿತ್ರ ‘ಮೆಟ್ರೋ…ಇನ್ ಡಿನೋ’ದಲ್ಲಿ ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಸೇರಿದಂತೆ ಪ್ರತಿಭಾವಂತ ಪಾತ್ರವರ್ಗದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯದಾಗಿ ‘IB71’, ‘ದಿ ವ್ಯಾಕ್ಸಿನ್ ವಾರ್’, ‘ಕುಚ್ ಖಟ್ಟಾ ಹೋ ಜಯ್’ ಮತ್ತು ‘ಕಾಗಜ್ 2’ ನಲ್ಲಿ ಕಾಣಿಸಿಕೊಂಡಿದ್ದರು.

  • ಜ್ಯೂ.ಎನ್‌ಟಿಆರ್‌ರನ್ನು ಹೊಗಳಿದ ಬಾಲಿವುಡ್‌ ನಟ ಅನುಪಮ್ ಖೇರ್

    ಜ್ಯೂ.ಎನ್‌ಟಿಆರ್‌ರನ್ನು ಹೊಗಳಿದ ಬಾಲಿವುಡ್‌ ನಟ ಅನುಪಮ್ ಖೇರ್

    ಟಾಲಿವುಡ್ ನಟ ಜ್ಯೂ.ಎನ್‌ಟಿಆರ್ (Jr.Ntr) ಸದ್ಯ ಬಾಲಿವುಡ್‌ನಲ್ಲಿ ‘ವಾರ್ 2’ (War 2) ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ‘ಆರ್‌ಆರ್‌ಆರ್’ ಹೀರೋ ಬ್ಯುಸಿಯಾಗಿದ್ದಾರೆ. ಇದರ ನಡುವೆ ಜ್ಯೂ.ಎನ್‌ಟಿಆರ್ ಮತ್ತು ಅನುಪಮ್ ಖೇರ್ (Anupam Kher) ಭೇಟಿಯಾಗಿರುವ ಫೋಟೋ ವೈರಲ್‌ ಆಗಿದೆ. ನನ್ನ ನೆಚ್ಚಿನ ವ್ಯಕ್ತಿ ಎಂದು ಜ್ಯೂ.ಎನ್‌ಟಿಆರ್‌ರನ್ನು ಅನುಪಮ್ ಖೇರ್ ಹೊಗಳಿದ್ದಾರೆ.

    ನನ್ನ ನೆಚ್ಚಿನ ವ್ಯಕ್ತಿ ಮತ್ತು ನಟನನ್ನು ಭೇಟಿಯಾಗಿದ್ದು, ಖುಷಿಯಾಯಿತು. ಅವರ ಕೆಲಸ ಇಷ್ಟವಾಯಿತು. ಅವರು ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂದು ಜ್ಯೂ.ಎನ್‌ಟಿಆರ್‌ಗೆ ಅನುಪಮ್ ಖೇರ್ ವಿಶ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ನಿಮ್ಮ ನಟನೆಯನ್ನು ಯಾವಾಗಲೂ ಅಭಿಮಾನದಿಂದ ನೋಡುತ್ತೇವೆ. ಮುಂದಿನ ಪೀಳಿಗೆಯ ನಟರಿಗೆ ನೀವು ಯಾವಾಗಲೂ ಸ್ಫೂರ್ತಿ ಎಂದು ಅನುಪಮ್ ಖೇರ್ ಪೋಸ್ಟ್‌ಗೆ ಜ್ಯೂ.ಎನ್‌ಟಿಆರ್ ಪ್ರತಿಯುತ್ತರ ನೀಡಿದ್ದಾರೆ.

    ಅಂದಹಾಗೆ, ‘ವಾರ್ 2’ (War 2) ಸಿನಿಮಾದಲ್ಲಿ ಹೃತಿಕ್ ರೋಷನ್, ಜ್ಯೂ.ಎನ್‌ಟಿಆರ್, ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನುಪಮ್ ಖೇರ್‌ಗೂ ಚಿತ್ರದಲ್ಲಿ ಉತ್ತಮ ಪಾತ್ರವಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ದಂಪತಿ

    ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ದಂಪತಿ

    ‘ಕಾಂತಾರ’ (Kantara) ಸಿನಿಮಾ ಮೂಲಕ ಕರ್ನಾಟಕದ ತುಳುನಾಡ ದೈವದ ಕಥೆಯನ್ನು ಇಡೀ ದೇಶಕ್ಕೆ ತಲುಪಿಸಿದ ರಿಷಬ್ ಶೆಟ್ಟಿ (Rishab Shetty) ಅವರು ಇಂದು (ಜ.22) ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪತ್ನಿ ಪ್ರಗತಿ ಜೊತೆ ಭಾಗಿಯಾಗಿದ್ದಾರೆ. ಈ ಕುರಿತ ಸುಂದರ ಫೋಟೋವನ್ನು ರಿಷಬ್ ಹಂಚಿಕೊಂಡಿದ್ದಾರೆ.

    500 ವರ್ಷಗಳ ನಂತರ ಎಲ್ಲರ ಕನಸು ನನಸಾಗಿದೆ. ಇಂದು ಅಯೋಧ್ಯೆಯ (Ayodhya) ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಈ ಸಂಭ್ರಮದಲ್ಲಿ ಭಾಗಿಯಾಗಿರೋದಕ್ಕೆ ರಿಷಬ್ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮರ್ಯಾದಾ ಪುರುಷೋತ್ತಮ ರಾಮನಿಗೆ ನಮನ ಸಲ್ಲಿಸಿ ಗುಣಗಾನ ಮಾಡಿದ ಯಶ್‌

     

    View this post on Instagram

     

    A post shared by Rishab Shetty (@rishabshettyofficial)

    ಶ್ರೀರಾಮಚಂದ್ರನ ಜನ್ಮಸ್ಥಳದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಲ್ಲಿ ಎಂದು ಶೀರ್ಷಿಕೆ ಕೊಟ್ಟು ರಾಮಮಂದಿರದ ಮುಂದೆ ನಿಂತು ಪತ್ನಿ ಪ್ರಗತಿ ಜೊತೆ ರಿಷಬ್ ಶೆಟ್ಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವೇಳೆ, ರಿಷಬ್ ದಂಪತಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕೂಡ ಭೇಟಿಯಾಗಿದ್ದಾರೆ.

    ಅಯೋಧ್ಯೆಯ ಇಂದಿನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಕಂಗನಾ, ಆಲಿಯಾ- ರಣ್‌ಬೀರ್ ದಂಪತಿ, ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಅಮಿತಾಭ್‌ ಬಚ್ಚನ್‌, ಕತ್ರಿನಾ ಕೈಫ್ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

  • ದಿ ಕಾಶ್ಮೀರ್ ಫೈಲ್ಸ್: ರಾಷ್ಟ್ರ ಪ್ರಶಸ್ತಿ ಬಗ್ಗೆ ಅಸಮಾಧಾನ ಹೊರ ಹಾಕಿದ ಅನುಪಮ್ ಖೇರ್

    ದಿ ಕಾಶ್ಮೀರ್ ಫೈಲ್ಸ್: ರಾಷ್ಟ್ರ ಪ್ರಶಸ್ತಿ ಬಗ್ಗೆ ಅಸಮಾಧಾನ ಹೊರ ಹಾಕಿದ ಅನುಪಮ್ ಖೇರ್

    ಮೊನ್ನೆಯಷ್ಟೇ ಕೇಂದ್ರ ಸರಕಾರ 69ನೇ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಿತ್ತು. ಈ ಪ್ರಶಸ್ತಿಗಳ ಬಗ್ಗೆ ಬಾಲಿವುಡ್ ನಟ ಅನುಪಮ್ ಖೇರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ (The Kashmir Files) ಚಿತ್ರದ ನಟನೆಗಾಗಿ ತಮಗೆ ರಾಷ್ಟ್ರ ಪ್ರಶಸ್ತಿ (National Award) ಬರಬೇಕಿತ್ತು ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಚಿತ್ರಕ್ಕೆ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಸಂದಿದ್ದರೆ, ಈ ಸಿನಿಮಾದ ನಟನೆಗಾಗಿ ಅತ್ಯುತ್ತಮ ಪೋಷಕಿ ನಟಿ ಪ್ರಶಸ್ತಿ ಕೂಡ ಚಿತ್ರ ಪಡೆದುಕೊಂಡಿದೆ. ಆದರೆ, ಅನುಪಮ್ ಖೇರ್ (Anupam Kher) ಅವರಿಗೆ ಈ ಸಿನಿಮಾದ ನಟನೆಗಾಗಿ ಪ್ರಶಸ್ತಿ ಬರಬೇಕಿತ್ತು ಎನ್ನುವುದು ನಟನ ವಾದ.

     

    ದಿ ಕಾಶ್ಮೀರ್ ಫೈಲ್ಸ್  ಸಿನಿಮಾಗೆ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಬಂದಿರುವುದಕ್ಕೆ ತಮಿಳು ನಾಡು ಮುಖ್ಯಮಂತ್ರಿ ಸ್ಟಾಲಿನ್  ಟೀಕೆ ಮಾಡಿದ್ದರು. ಭಾವೈಕ್ಯತೆಯನ್ನು ಹಾಳು ಮಾಡುವ ಚಿತ್ರಕ್ಕೆ ಅಂಥದ್ದೊಂದು ಪ್ರಶಸ್ತಿ ಕೊಟ್ಟಿರುವುದಕ್ಕೆ ಅವರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಲ್ಲದೇ, ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಕೂಡ ಅಸಮಾಧಾನ ಹೊರ ಹಾಕಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೈಗರ್ ನಾಗೇಶ್ವರ್ ರಾವ್ ಅಂಗಳಕ್ಕೆ ಅನುಪಮ್ ಖೇರ್ ಎಂಟ್ರಿ

    ಟೈಗರ್ ನಾಗೇಶ್ವರ್ ರಾವ್ ಅಂಗಳಕ್ಕೆ ಅನುಪಮ್ ಖೇರ್ ಎಂಟ್ರಿ

    ತೆಲುಗಿನ ಮಾಸ್ ಮಹಾರಾಜ ರವಿತೇಜ (Raviteja) ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ‘ಟೈಗರ್ ನಾಗೇಶ್ವರ್ ರಾವ್’ (Tiger Nageshwar Rao) ಅಂಗಳಕ್ಕೆ ಬಾಲಿವುಡ್ ದಿಗ್ಗಜ ಅನುಪಮ್ ಖೇರ್ ಎಂಟ್ರಿಯಾಗಿದೆ. ಸ್ವಾತಂತ್ರ್ಯ ದಿನದ ಅಂಗವಾಗಿ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಅನುಪಮ್ ಖೇರ್ (Anupam Kher) ಅವರ ಪಾತ್ರ ಹಾಗೂ ಲುಕ್ (First Look) ಪರಿಚಯಿಸಿದೆ. ಗುಪ್ತಚರ ಇಲಾಖೆಯ ಅಧಿಕಾರಿ ರಾಘವೇಂದ್ರ ರಜಪುತ್ ಪಾತ್ರದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದು, ಇದೇ 17ರಿಂದ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ.

    70ರ ಕಾಲಘಟ್ಟದ ಹೈದ್ರಾಬಾದ್ ದ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

    ದಸರಾ ಹಬ್ಬಕ್ಕೆ ಟೈಗರ್ ನಾಗೇಶ್ವರ್ ರಾವ್ ಬಾಕ್ಸಾಫೀಸ್ ಬೇಟೆಗಿಳಿಯಲಿದ್ದು, ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ದಸರಾ ಹಬ್ಬದ ಸುಸಂದರ್ಭ ಹಾಗೂ ದಸರಾ ರಜೆ ಹಿನ್ನೆಲೆ ಪ್ಲಾನ್ ಮಾಡಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡಲಾಗ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ ಶೂಟಿಂಗ್ ಮುಕ್ತಾಯ

    ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ ಶೂಟಿಂಗ್ ಮುಕ್ತಾಯ

    ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivaraj Kumar) ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ‘ಘೋಸ್ಟ್’ (Ghost) ಚಿತ್ರದ ಚಿತ್ರೀಕರಣ (Shooting) ಮುಕ್ತಾಯವಾಗಿದೆ.

    ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಮುಕ್ತಾಯವಾಗಿದ್ದು (Complete), ಕುಂಬಳಕಾಯಿ ಒಡೆಯಲಾಗಿದೆ‌. ಚಿತ್ರದ ಇನ್ನೊಂದು ವಿಶೇಷವೆಂದರೆ ನಿರ್ದೇಶಕ ಶ್ರೀನಿ ಬೀರ್ ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕೂಡ ಶ್ರೀನಿ (Srini) ಬೀರ್ ಬಲ್ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಈ ಚಿತ್ರದಲ್ಲಿ ಬೀರ್ ಬಲ್ ಪಾತ್ರದಲ್ಲಿ ಅಭಿನಯಿಸಿರುವುದು, ಬೀರ್ ಬಲ್  ಭಾಗ 2 ಬರಬಹುದಾ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ:ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ

    ಈಗಾಗಲೇ ಘೋಸ್ಟ್ ಫಸ್ಟ್ ಲುಕ್, BIG DADDY ಟೀಸರ್ ಅಭಿಮಾನಿಗಳ ಮನ ಗೆದ್ದಿದೆ. ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಅಭಿಮಾನಿಗಳಲ್ಲಿ ಹೆಚ್ಚಿದೆ. ಅಲ್ಲದೇ ನಿರ್ದೇಶಕ ಶ್ರೀನಿ ಅವರ ಬಗೆ ಬಗೆಯ ಪ್ರಯತ್ನಗಳನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ಕೊಂಡಾಡಿದ್ದಾರೆ. ಹೀಗಾಗಿ ಸಿನಿಮಾ ನಿರೀಕ್ಷೆ ಮೂಡಿಸಿದೆ.

    ನಾಯಕನಾಗಿ ಶಿವರಾಜಕುಮಾರ್ ನಟಿಸಿದ್ದರೆ, ಅನುಪಮ್ ಖೇರ್ (Anupam Kher), ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮತ್ತಷ್ಟು ಮಾಹಿತಿಗಳನ್ನು ಶೀಘ್ರದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಬಜೆಟ್ ಘೋಷಣೆ ಮಾಡಿದ ವಿವೇಕ್ ಅಗ್ನಿಹೋತ್ರಿ

    ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಬಜೆಟ್ ಘೋಷಣೆ ಮಾಡಿದ ವಿವೇಕ್ ಅಗ್ನಿಹೋತ್ರಿ

    ಸಾಮಾನ್ಯವಾಗಿ ಸಿನಿಮಾ ಸಂಸ್ಥೆಗಳು ತಮ್ಮ ಚಿತ್ರಗಳ ಬಜೆಟ್ ಅನ್ನು ಘೋಷಣೆ ಮಾಡುವುದಿಲ್ಲ. ವ್ಯಾಪಾರ ದೃಷ್ಟಿಯಿಂದ ಆದಷ್ಟು ಅದನ್ನು ಗೌಪ್ಯವಾಗಿ ಇಡಲಾಗುತ್ತದೆ. ಬಜೆಟ್ ಲೆಕ್ಕಾಚಾರ ಆಚೆ ಬಂದರೂ ಅದು ಅಧಿಕೃತ ಸಂಸ್ಥೆಯಿಂದ ಬರುವುದು ತೀರಾ ಕಡಿಮೆ. ಆದರೆ, ದಿ ವ್ಯಾಕ್ಸಿನ್ ವಾರ್ (The Vaccine War)  ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri)  ತಮ್ಮ ಸಿನಿಮಾದ ಬಜೆಟ್ ಅನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಅಗ್ನಿಹೋತ್ರಿ ಕೇವಲ 12 ಕೋಟಿ ರೂಪಾಯಿಯಲ್ಲಿ ತಯಾರಿಸಿದ್ದರಂತೆ. ಆನಂತರ ಆ ಸಿನಿಮಾ ಕೋಟಿ ಕೋಟಿ ಬಾಚಿತು. ಅಂದಾಜು 200 ಕೋಟಿಗೂ ಅಧಿಕ ಹಣವನ್ನು ದಿ ಕಾಶ್ಮೀರ್ ಫೈಲ್ಸ್ ಗಳಿಸಿತ್ತು. ದಿ ವ್ಯಾಕ್ಸಿನ್ ವಾರ್ ಚಿತ್ರವನ್ನು ಕೇವಲ 10 ಕೋಟಿ ವೆಚ್ಚದಲ್ಲಿ ಮಾಡಿರುವುದಾಗಿ ವಿವೇಕ್ ಅಗ್ನಿಹೋತ್ರಿ ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ:ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ

    ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಮೂಡಿ ಬರುತ್ತಿರುವುದು ವಿಶೇಷ. ಭಾರತದ ನಾನಾ ಕಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ ನಿರ್ದೇಶಕರು. ಕೊರೋನಾ ಸಮಯದಲ್ಲಿ ವ್ಯಾಕ್ಸಿನ್ ಏನೆಲ್ಲ ಆವಾಂತರ ಸೃಷ್ಟಿ ಮಾಡಿತು ಎನ್ನುವ ಅರಿವು ಬಹುತೇಕರಿಗಿದೆ. ಈ ವ್ಯಾಕ್ಸಿನ್ ಏನೆಲ್ಲ ಕೆಲಸ ಮಾಡಿತು ಎಂದು ಕಂಡವರು ಇದ್ದಾರೆ. ವ್ಯಾಕ್ಸಿನ್ ಮಾಫಿಯಾ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾದವು. ಹೀಗಾಗಿಯೇ ವ್ಯಾಕ್ಸಿನ್ ಸುತ್ತ ಕಥೆಯನ್ನು ಬರೆದಿರುವ ವಿವೇಕ್, ವ್ಯಾಕ್ಸಿನ್ ಸಾಧಕ ಬಾಧಕಗಳ ಬಗ್ಗೆಯೇ ಸಿನಿಮಾ ಮಾಡಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್  (The Kashmir Files) ಸಿನಿಮಾ ತಯಾರಿ ವೇಳೆಯಲ್ಲೇ ವ್ಯಾಕ್ಸಿನ್ ಬಗ್ಗೆ ಸಂಶೋಧನೆ ಮಾಡಿದ್ದರಂತೆ ವಿವೇಕ್. ಕೋವಿಡ್ ಕಾರಣದಿಂದಾಗಿ ಕಾಶ್ಮೀರ್ ಫೈಲ್ಸ್ ಶೂಟಿಂಗ್ ಮುಂದೂಡಲ್ಪಟ್ಟಾಗ  ವ್ಯಾಕ್ಸಿನ್ ಹಿಂದೆ ಬಿದ್ದಿದ್ದರಂತೆ. ತಮ್ಮ ಸಂಶೋಧನೆಯಲ್ಲಿ ಕಂಡ ಅನುಭವಗಳನ್ನು ಈ ಸಿನಿಮಾದಲ್ಲಿ ಅವರು ಅಳವಡಿಸಿಕೊಂಡಿದ್ದಾರಂತೆ. ವ್ಯಾಕ್ಸಿನ ತಯಾರಿಕೆಯಲ್ಲಿ ಗೆದ್ದಿರುವ ವಿಜ್ಞಾನಿಗಳ ಶ್ರಮ, ಅದನ್ನು ಅಷ್ಟೇ ವೇಗವಾಗಿ ತಲುಪಿಸಿದ ರೋಚಕ ಕಥೆಯೂ ಈ ಸಿನಿಮಾದಲ್ಲಿ ಇರಲಿದೆಯಂತೆ.

     

    ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ವಿವೇಕ್, ಪತ್ನಿ ನಟಿ ಪಲ್ಲವಿ ಜೋಷಿ ಅವರೇ ಈ ಚಿತ್ರದ ನಿರ್ಮಾಪಕರು. ಬಾಲಿವುಡ್ ಹೆಸರಾಂತ ನಟ ಅನುಪಮ್ ಖೇರ್ (Anupam Kher),  ಕಾಂತಾರ ಸಿನಿಮಾ ಖ್ಯಾತಿಯ ಕನ್ನಡತಿ ಸಪ್ತಮಿ ಗೌಡ (Saptami Gowda )ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]