Tag: anup bandari

  • ಏ.16ರಿಂದ ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್ ಆರಂಭ- ಅಪ್‌ಡೇಟ್ ಕೊಟ್ರು ಕಿಚ್ಚ

    ಏ.16ರಿಂದ ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್ ಆರಂಭ- ಅಪ್‌ಡೇಟ್ ಕೊಟ್ರು ಕಿಚ್ಚ

    ‘ಮಾಕ್ಸ್’ (Max) ಸಿನಿಮಾದ ಸಕ್ಸಸ್ ಬಳಿಕ ಸುದೀಪ್ ‘ಬಿಲ್ಲ ರಂಗ ಭಾಷಾ’ (Billa Ranga Baashaa) ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ತಿದ್ದಾರೆ. ಹೀಗಿರುವಾಗ ಈ ಸಿನಿಮಾದ ಶೂಟಿಂಗ್ ಆರಂಭ ಆಗೋದು ಯಾವಾಗ ಎಂಬುದರ ಬಗ್ಗೆ ಖುದ್ದು ಸುದೀಪ್ (Sudeep) ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕೊಲೆ ಕೇಸ್ ಸಾಕ್ಷ್ಯಿಧಾರನ ಜೊತೆ ಪ್ರಭಾವ ಬೀರುತ್ತಿದ್ದಾರಾ ದರ್ಶನ್?

    ‘ಬಿಲ್ಲ ರಂಗ ಭಾಷಾ’ ಸಿನಿಮಾ ಕುರಿತ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಸುದೀಪ್ (Sudeep) ಸಿಹಿಸುದ್ದಿ ಕೊಟ್ಟಿದ್ದಾರೆ. ಏ.16ರಂದು ಏನು ನಡೆಯಲಿದೆ ಗೊತ್ತೆ? ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಸಿನಿಮಾದ ಸೆಟ್, ತಾರಾಗಣ ಮತ್ತು ಇತರೆ ವಿಚಾರಗಳನ್ನು ನಂತರ ತಿಳಿಸಲಾಗುವುದು ಎಂದು ಸುದೀಪ್ ಪೋಸ್ಟ್ ಮಾಡಿದ್ದಾರೆ. ನಟನ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಏ.16ಕ್ಕೆ ಕಾದಿದೆ ಕಿಚ್ಚನಿಂದ ಬಿಗ್‌ ಸರ್ಪ್ರೈಸ್-‌ ಸುದೀಪ್‌ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್‌ ಫಿದಾ

    ಇತ್ತೀಚೆಗೆ ಸುದೀಪ್ ಕಟ್ಟು ಮಸ್ತಾದ ವರ್ಕೌಟ್ ಫೋಟೋವನ್ನು ಹಂಚಿಕೊಂಡು ಏ.16ಕ್ಕೆ ಅಪ್‌ಡೇಟ್ ಸಿಗಲಿದೆ ಎಂದು ನಟ ಸೋಷಿಯಲ್ ಮೀಡಿಯಾದಲ್ಲಿ ಸುಳಿವು ನೀಡಿದ್ದರು. ಇದೀಗ ಒಂದು ವಾರದ ಮುಂಚಿತವಾಗಿಯೇ ನಟ ಮಾಹಿತಿ ಹಂಚಿಕೊಂಡಿದ್ದಾರೆ. ಏ.16ರಿಂದ ಶೂಟಿಂಗ್‌ ಶುರು ಎಂದಿದ್ದಾರೆ. ಆದರೀಗ ಏ.16ರಂದು ಶೂಟಿಂಗ್‌ನಲ್ಲಿ ಭಾಗಿಯಾಗಲಿರೋ ಸುದೀಪ್ ಲುಕ್ ಹೇಗಿರಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

    ಅಂದಹಾಗೆ, ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕಾಗಿ ಡೈರೆಕ್ಟರ್ ಅನೂಪ್ ಭಂಡಾರಿ ಜೊತೆ ಸುದೀಪ್ ಕೈಜೋಡಿಸಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ಬಳಿಕ ಮತ್ತೆ ಈ ಕಾಂಬಿನೇಷನ್ ಒಂದಾಗಿದೆ.

  • ಕಿಚ್ಚನ ಜೊತೆ ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್: ರಕ್ಕಮ್ಮಗಾಗಿ ರೀಲ್ಸ್ ಮಾಡಿದ ಸುದೀಪ್

    ಕಿಚ್ಚನ ಜೊತೆ ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್: ರಕ್ಕಮ್ಮಗಾಗಿ ರೀಲ್ಸ್ ಮಾಡಿದ ಸುದೀಪ್

    ಚಿತ್ರರಂಗದಲ್ಲಿ ಈ ಸದ್ದು ಸುದ್ದಿ ಎಲ್ಲಾ ಕನ್ನಡ ಸಿನಿಮಾಗಳದ್ದೇ. ಅದೇ ಹಾದಿಯಲ್ಲೀಗ ಕಿಚ್ಚ ಸುದೀಪ್ ನಟನೆಯ `ವಿಕ್ರಾಂತ್ ರೋಣ’ ಸಿನಿಮಾ ಕೂಡ ಸಾಗುತ್ತಿದೆ. ಇನ್ನು ಜಾಕ್ವೆಲಿನ್ ಫರ್ನಾಂಡೀಸ್‌ಗೆ ವಿಡಿಯೋ ಕರೆ ಮಾಡಿ ಮಾತನಾಡಿರುವ ಸುದೀಪ್, ನಟಿಯನ್ನು ಕನ್ನಡದಲ್ಲೇ ಮಾತನಾಡಿಸಿದ್ದಾರೆ. ಶ್ರೀಲಂಕಾ ಬ್ಯೂಟಿ ಜಾಕ್ವೆಲಿನ್ ಕೋರಿಕೆಯಂತೆ `ರಾ ರಾ ರಕ್ಕಮ್ಮ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಕಿಚ್ಚನ ರೀಲ್ಸ್ ಸಖತ್ ವೈರಲ್ ಆಗುತ್ತಿದೆ.

    ಕಿಚ್ಚನ ಸಿನಿಮಾ `ವಿಕ್ರಾಂತ್‌ರೋಣ’ ರಿಲೀಸ್‌ಗೆ ಹತ್ತಿರ ಬರುತ್ತಿದ್ದಂತೆ ಒಂದಲ್ಲಾ ಒಂದು ವಿಚಾರವಾಗಿ ಈ ಚಿತ್ರ ಸೌಂಡ್ ಮಾಡುತ್ತಿದೆ. ಇಷ್ಟುದಿನವಾದ್ರೂ ಯಾವುದೇ ರೀಲ್ಸ್ ಮಾಡಿರಲಿಲ್ಲ ಸುದೀಪ್, ಆದರೆ ಇದೀಗ ಜಾಕ್ವಲೀನ್ ಕೋರಿಕೆಗೆ ಮಣಿದು `ರಾ ರಾ ರಕ್ಕಮ್ಮ’ ಸಾಂಗ್‌ಗೆ ರೀಲ್ಸ್ ಮಾಡಿದ್ದಾರೆ. ರಕ್ಕಮ್ಮ ಹಾಡಿಗೆ ಕಿಚ್ಚ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಕಿಚ್ಚನ ಫಸ್ಟ್ ರೀಲ್ ಗೆ ಫ್ಯಾನ್ಸ್ ಪಿಧಾ ಆಗಿದ್ದಾರೆ.

    ಇನ್ನು ಜಾಕ್ವೆಲಿನ್‌ಗೆ ವಿಡಿಯೋ ಕರೆ ಮಾಡಿ ಮಾತನಾಡಿರುವ ಕಿಚ್ಚ, ನಟಿಗೆ ಕನ್ನಡದಲ್ಲಿ ಮಾತನಾಡುವ ಸವಾಲನ್ನ ಕೊಟ್ಟಿದ್ದರು. ಕಿಚ್ಚನಿಗೆ ಪ್ರತಿಸವಾಲಾಗಿ `ರಾ ರಾ ರಕ್ಕಮ್ಮ’ ಹಾಡಿಗೆ ರೀಲ್ಸ್ ಮಾಡಿದ್ದಾರೆ.

     

    View this post on Instagram

     

    A post shared by KicchaSudeepa (@kichchasudeepa)

    ಕರ್ನಾಟಕದ ನನ್ನ ಎಲ್ಲಾ ಸ್ನೇಹಿತರಿಗೆ ನನ್ನ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದೀನಿ ಅಂತಾ ಹೇಳುವಂತೆ ಸುದೀಪ್, ನಟಿಗೆ ಹೇಳಿದ್ದರು. ನಂತರ ಸುದೀಪ್ ಸವಾಲಿನಂತೆ ಫಟ್ ಅಂತಾ ಜಾಕ್ವೆಲಿನ್ ಕೂಡ ಕನ್ನಡದಲ್ಲೇ ಮಾತನಾಡಿದ್ದಾರೆ. ಸದ್ಯ ಶ್ರೀಲಂಕಾ ಬ್ಯೂಟಿ ಜಾಕ್ವೆಲಿನ್ ಕನ್ನಡದ ಪ್ರೇಮಕ್ಕೆ ಮತ್ತು ಕಿಚ್ಚನ ರೀಲ್ಸ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಫಿಲ್ಮ್ ಚೇಂಬರ್ ನಲ್ಲಿ ಅಕ್ರಮ : ಬಾಂಬ್ ಸಿಡಿಸಿದ ರಾಜೇಂದ್ರ ಸಿಂಗ್ ಬಾಬು

     

    View this post on Instagram

     

    A post shared by KicchaSudeepa (@kichchasudeepa)

    ಚಿತ್ರದ ಟೀಸರ್ ಮತ್ತು `ರಾ ರಾ ರಕ್ಕಮ್ಮ’ ಹಾಡಿನ ಮೂಲಕ ಗಮನ ಸೆಳೆದಿರೋ `ವಿಕ್ರಾಂತ್ ರೋಣ’ ಚಿತ್ರ ಜುಲೈ 28ಕ್ಕೆ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

  • ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

    ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

    ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ನಿರೀಕ್ಷೆ ಹೆಚ್ಚಿದೆ. ಇದೇ ಜುಲೈ 28ಕ್ಕೆ ಕಿಚ್ಚನ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರತಂಡದಿಂದ ಅಭಿಮಾನಿಗಳಿಗೆ ಹೊಸ ಅಪ್‌ಡೇಟ್ ಸಿಕ್ಕಿದೆ. `ವಿಕ್ರಾಂತ್ ರೋಣ’ ಚಿತ್ರದ ಹಿಂದಿಯಲ್ಲಿ ಸಲ್ಮಾನ್ ಖಾನ್ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ಮೂಲಕ ಕಿಚ್ಚನ ಸಿನಿಮಾಗೆ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ.

    `ವಿಕ್ರಾಂತ್ ರೋಣ’ ಸುದೀಪ್ ನಟನೆಯ ಸಿನಿಮಾದ ಕುರಿತು ಚಿತ್ರತಂಡ ಕೂಡ ಮೇ 16ರಂದು ಸೂಪರ್ ಅಪ್‌ಡೇಟ್ ಕೊಡುವುದಾಗಿ ಅನೌನ್ಸ್ ಮಾಡಿತ್ತು. ಈಗ ಆ ಗುಡ್ ನ್ಯೂಸ್ ರಿವೀಲ್ ಆಗಿದೆ. ವಿಕ್ರಾಂತ್ ರೋಣಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ.  ಕಿಚ್ಚನ ಚಿತ್ರದ ಹಿಂದಿಯಲ್ಲಿ ವಿತರಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

     

    View this post on Instagram

     

    A post shared by KicchaSudeepa (@kichchasudeepa)

    ವಿಕ್ರಾಂತ್ ರೋಣ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಕೂಡ ರಿವೀಲ್ ಮಾಡಿದ್ದು, ಸಲ್ಮಾನ್ ಖಾನ್ ಕೂಡ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ 3ಡಿ ಅವತರಣಿಕೆಯನ್ನು ಹಿಂದಿಯಲ್ಲಿ ಪ್ರೆಸೆಂಟ್ ಮಾಡುತ್ತಿರುವುದು ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಳದಿ ಬಣ್ಣದ ಸೀರೆ ಉಟ್ಟು ಸೀಮಂತ ಸಂಭ್ರಮದಲ್ಲಿ ಮಿಂಚಿದ ಪ್ರಣಿತಾ ಸುಭಾಷ್

    ಇನ್ನು ಕಿಚ್ಚನ ಸಿನಿಮಾ ರಿಲೀಸ್‌ಗೂ ಮುನ್ನವೇ ಕಮಾಯಿ ಮಾಡಲು ಶುರು ಮಾಡಿದೆ. ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ಓವರ್‌ಸೀಸ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕಿಚ್ಚನ ಬಹುನಿರೀಕ್ಷಿ ಸಿನಿಮಾ ಇದೇ ಜುಲೈ 28ಕ್ಕೆ ೩ಡಿಯಲ್ಲಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಜತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರದ ಟೀಸರ್ ಮೂಲಕ ಹವಾ ಕ್ರಿಯೇಟ್ ಮಾಡಿರೋ ಕಿಚ್ಚನ ಸಿನಿಮಾ ಫ್ಯಾನ್ಸ್ ಕಾಯ್ತಿದ್ದಾರೆ.