Tag: anukool mishra

  • ಹನಿಮೂನ್ ಟ್ರಿಪ್‌ನಲ್ಲಿ ವೈಷ್ಣವಿ ಮಸ್ತ್ ಡ್ಯಾನ್ಸ್..ಫುಲ್ ಮಸ್ತಿ!

    ಹನಿಮೂನ್ ಟ್ರಿಪ್‌ನಲ್ಲಿ ವೈಷ್ಣವಿ ಮಸ್ತ್ ಡ್ಯಾನ್ಸ್..ಫುಲ್ ಮಸ್ತಿ!

    ಕಿರುತೆರೆ ಧಾರಾವಾಹಿ ಹಾಗೂ ಬಿಗ್‌ಬಾಸ್ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) 2025ರ ಜೂನ್ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅನುಕೂಲ್ ಮಿಶ್ರಾ ಜೊತೆ ಹಸೆಮಣೆ ಏರಿದ್ದ ನಟಿ ವೈಷ್ಣವಿ ಗೌಡ ಸದ್ಯ ಹನಿಮೂನ್ ಟ್ರಿಪ್‌ನಲ್ಲಿದ್ದಾರೆ. ಪತಿ ಜೊತೆ ಇತ್ತೀಚಿಗೆ ಉತ್ತರಾಖಂಡ್ (Uttarakhand) ಋಷಿಕೇಶ್ ಬಳಿಯಿರುವ ಶಿವಪುರಿಯಲ್ಲಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದರು.

    ಉತ್ತರಾಖಂಡ್ ಋಷಿಕೇಶ್ ಬಳಿಯಿರುವ ಶಿವಪುರಿಯಲ್ಲಿ ವೈಷ್ಣವಿ ಗೌಡ ಹಾಗೂ ಪತಿ ಅನುಕೂಲ್ ಮಿಶ್ರಾ ಬರೋಬ್ಬರಿ 117 ಅಡಿ ಎತ್ತರದಿಂದ ಜಿಗಿದು ಸಂಭ್ರಮ ಪಟ್ಟಿದ್ದರು. ಉತ್ತರ ಭಾರತದಲ್ಲಿ ಹನಿಮೂನ್ ಪ್ರವಾಸವನ್ನ ಕೈಗೊಂಡಿರುವ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಮನಾಲಿಯಲ್ಲಿ ಬಗೆ ಬಗೆಯ ಬಟ್ಟೆತೊಟ್ಟು ಪೋಸ್ ಕೊಟ್ಟಿದ್ದರು. ಆ ಫೋಟೋಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದರು ವೈಷ್ಣವಿ.

    ವೈಷ್ಣವಿ ಗೌಡ ಹನಿಮೂನ್ ಟ್ರಿಪ್ ಅನ್ನ ಸಖತ್ ಎಂಜಾಯ್ ಮಾಡ್ತಿದ್ದು, ಡ್ಯಾನ್ಸ್ ಮಾಡಿರುವ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಕ್ರೆಡಿಟ್ ಹಸ್ಬಂಡ್ ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ವೈಷ್ಣವಿ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಖುಷಿಯಿಂದ ಲೈಕ್ ಮಾಡಿದ್ರೆ ಇನ್ನು ಕೆಲವ್ರು ಈ ಆಷಾಡ ಮಾಸದಲ್ಲಿ ಯಾಕೆ ಹನಿಮೂನ್ ಬೇರೆ ಟೈಂ ಇರಲಿಲ್ಲವಾ ಅಂತಾ ಪ್ರಶ್ನೆ ಮಾಡಿದ್ದಾರೆ.

    ವೈಷ್ಣವಿ ಗೌಡ ಮನಾಲಿ, ಉತ್ತರಾಖಂಡ್‌ನ ಶಿವಪುರಿ ಹಾಗೂ ಮುಂತಾದ ಜಾಗಗಳಿಗೆ ಪತಿ ಅನುಕೂಲ್ ಮಿಶ್ರಾ ಜೊತೆ ಭೇಟಿ ನೀಡಿದ್ದಾರೆ. ಅಲ್ಲಿನ ಸುಂದರ ಕ್ಷಣಗಳನ್ನ ಸೆರೆಹಿಡಿದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

  • ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌

    ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌

    ಸೆಮಣೆ ಏರಲು ಸಜ್ಜಾಗಿರುವ ಕನ್ನಡದ ಖ್ಯಾತ ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಮದುವೆ ಶಾಸ್ತ್ರಗಳ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ ವೈಷ್ಣವಿ ಗೌಡ, ಅನುಕೂಲ್ ಮಿಶ್ರಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇಬ್ಬರ ಮನೆಗಳಲ್ಲೂ ಮದುವೆಗೆ ಸಕಲ ತಯಾರಿಗಳು ನಡೆಯುತ್ತಿವೆ. ವಿವಾಹಪೂರ್ವ ಶಾಸ್ತ್ರಗಳು ಆರಂಭವಾಗಿದ್ದು, ವೈಷ್ಣವಿ ಹಳದಿ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

     

    View this post on Instagram

     

    A post shared by Vaisshnavi (@iamvaishnavioffl)

    ಹಲವು ವರ್ಷಗಳಿಂದ ವೈಷ್ಣವಿ ಗೌಡ ಅವರು ಸೀರಿಯಲ್ ಲೋಕದಲ್ಲಿ ಇದ್ದಾರೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸಹ ಅವರು ಸ್ಪರ್ಧಿಸಿದ್ದರು. ಇನ್ನೂ ಅನುಕೂಲ್ ಮಿಶ್ರಾ ಅವರು, ಏರ್​ ಫೋರ್ಸ್​ನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಭಾರತದ ಛತ್ತಿಸ್​ಗಡದವರು. ಅಂದಹಾಗೆ, ಇದು ಅರೇಂಜ್ ಮ್ಯಾರೇಜ್. ಕುಟುಂಬದವರೇ ಮಾತುಕಥೆ ಮಾಡಿ ನಿಶ್ಚಯಿಸಿದ ಮದುವೆ ಎಂದು ವೈಷ್ಣವಿ ಹೇಳಿಕೊಂಡಿದ್ದರು.

    ಮದುವೆ ಬಳಿಕವೂ ನಟಿಸುವ ಬಗ್ಗೆ ಮಾತಾಡಿದ್ದ ವೈಷ್ಣವಿ, ಮದುವೆಯ ಬಳಿಕವೂ ನಟನೆಗೆ ಅನುಮತಿ ಇದೆ. ಅವರು ನನ್ನ ಸೀರಿಯಲ್ ದಿನಾ ನೋಡುತ್ತಾರಂತೆ. ಸೀರಿಯಲ್ ಬಗ್ಗೆ ನನಗಿಂತ ಹೆಚ್ಚು ಅವರು ಅಪ್‌ಡೇಟ್ ಇದ್ದಾರೆ. ಮದುವೆ ಬಗ್ಗೆ ಅಮೂಲ್ಯ ಸೇರಿ ಕೆಲವರಿಗೆ ಮಾತ್ರ ಗೊತ್ತಿತ್ತು. ಅನುಕೂಲ್ ಅವರು ಬೆಂಗಳೂರಿನಲ್ಲೇ ಇರೋದ್ರಿಂದ ಮದುವೆ ಬಳಿಕವೂ ಇಲ್ಲೇ ಇರುತ್ತೇವೆ. ದೇವರು ತಡ ಮಾಡೋದು ಒಳ್ಳೆಯದನ್ನ ಮಾಡೋದಕ್ಕಾಗಿ ಎಂದು ನಂಬುತ್ತೇನೆ ಎಂದು ಹೇಳಿದ್ದರು.

    ವೈಷ್ಣವಿ ಗೌಡ, ‘ಅಗ್ನಿಸಾಕ್ಷಿ’, ‘ಸೀತಾ ರಾಮ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮೂಲಕ ಆಗಾಗ ಅಭಿಮಾನಿಗಳನ್ನು ಸೆಳೆಯುವ ವೈಷ್ಣವಿ ತಮ್ಮದೇ ಫ್ಯಾನ್ಸ್‌ ಫಾಲೋವರ್ಸ್‌ನ್ನು ಹೊಂದಿದ್ದಾರೆ. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ

  • ಭಾವಿ ಪತಿ ಜೊತೆ ವೈಷ್ಣವಿ ರೊಮ್ಯಾಂಟಿಕ್ ಡಿನ್ನರ್ ಡೇಟ್- ಸೂಪರ್‌ ಜೋಡಿ ಎಂದ ಫ್ಯಾನ್ಸ್

    ಭಾವಿ ಪತಿ ಜೊತೆ ವೈಷ್ಣವಿ ರೊಮ್ಯಾಂಟಿಕ್ ಡಿನ್ನರ್ ಡೇಟ್- ಸೂಪರ್‌ ಜೋಡಿ ಎಂದ ಫ್ಯಾನ್ಸ್

    ‘ಸೀತಾರಾಮ’ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಈ ಬೆನ್ನಲ್ಲೇ ಭಾವಿ ಪತಿ ಜೊತೆಗೆ ವೈಷ್ಣವಿ ಡಿನ್ನರ್ ಡೇಟ್‌ಗೆ ತೆರಳಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:18ನೇ ಆ್ಯನಿವರ್ಸರಿ ಸಂಭ್ರಮ: ಪತಿಯೊಂದಿಗಿನ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ

    ಅನುಕೂಲ್ ಮಿಶ್ರಾ (Anukool Mishra) ಜೊತೆ ನಟಿ ಸ್ವಿಮ್ಮಿಂಗ್ ಪೂಲ್ ಬಳಿ ಊಟ ಸವಿದಿದ್ದಾರೆ. ರೊಮ್ಯಾಂಟಿಕ್‌ ಆಗಿ ಸಮಯ ಕಳೆದಿದ್ದಾರೆ. ಈ ಕುರಿತು ಅನುಕೂಲ್ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಹೊಸ ಜೋಡಿ ಸದಾ ಚೆನ್ನಾಗಿರಲಿ‌, ಸೂಪರ್‌ ಜೋಡಿ ಅಂತ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮೊಂದಿಗೆ ಇದ್ದಾನೆ: ಕಹಿ ಘಟನೆ ನೆನೆದ ವೈಷ್ಣವಿ

     

    View this post on Instagram

     

    A post shared by @aekay_14

    ಏ.14ರಂದು ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ಛತ್ತೀಸ್‌ಗಢ ಮೂಲದ ಅನುಕೂಲ್ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಅನುಕೂಲ್ ಪರಿಚಯವಿದೆ. ಇದು ಲವ್ ಮ್ಯಾರೇಜ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಅರೇಂಜ್ ಮ್ಯಾರೇಜ್. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆ ಎಂದು ವೈಷ್ಣವಿ ಕ್ಲ್ಯಾರಿಟಿ ನೀಡಿದ್ದಾರೆ.

    ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಪೋಷಕರು ಈ ಮದುವೆ ನಿಶ್ಚಯಿಸಿದರು. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದರು.