Tag: Anubrata Mondal

  • ಗೋವು ಕಳ್ಳಸಾಗಣೆ ಪ್ರಕರಣ – ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡಿ, ಇಲ್ಲವೇ..: ನ್ಯಾಯಾಧೀಶರಿಗೆ ಬೆದರಿಕೆ ಪತ್ರ

    ಗೋವು ಕಳ್ಳಸಾಗಣೆ ಪ್ರಕರಣ – ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡಿ, ಇಲ್ಲವೇ..: ನ್ಯಾಯಾಧೀಶರಿಗೆ ಬೆದರಿಕೆ ಪತ್ರ

    ಕೋಲ್ಕತ್ತಾ: ಗೋವು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಅನುಬ್ರತಾ ಮೊಂಡಲ್‌ಗೆ ಜಾಮೀನು ಮಂಜೂರು ಮಾಡಿ. ಇಲ್ಲದೇ ಹೋದರೆ ಸ್ವತಃ ನ್ಯಾಯಾಧೀಶರೇ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಹೀಗೆಂದು ಅಸನ್ಸೋಲ್‌ನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬಂದಿದೆ.

    ಗೋವು ಕಳ್ಳಸಾಗಣೆ ಪ್ರಕರಣದಲ್ಲಿ ಅನುಬ್ರತಾ ವಿರುದ್ಧದ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಸಿಬಿಐ ವಶದಲ್ಲಿರುವ ಅನುಬ್ರತಾ ಅವರ ಜಾಮೀನು ಅರ್ಜಿಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಅನುಬ್ರತಾಗೆ ಜಾಮೀನು ಕೋರಿ ಮತ್ತೊಂದು ಅರ್ಜಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ತಲುಪಿದೆ. ಸಿಬಿಐ ಮೂಲಗಳ ಪ್ರಕಾರ, ಗೋವು ಕಳ್ಳಸಾಗಣೆ ಪ್ರಕರಣದಲ್ಲಿ ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡಿ, ಇಲ್ಲದಿದ್ದರೆ ಕುಟುಂಬವನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಪತ್ರದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಪ್ರವಾದಿ ಅವಹೇಳನ – BJPಯಿಂದ ಶಾಸಕ ರಾಜಾ ಸಿಂಗ್‌ ಅಮಾನತು

    ಅಸನ್ಸೋಲ್‌ನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಚಕ್ರವರ್ತಿ ಅವರು ಆಗಸ್ಟ್ 20 ರಂದು ಬೆದರಿಕೆ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರವನ್ನು ಬಪ್ಪಾ ಚಟರ್ಜಿ ಹೆಸರಿನಲ್ಲಿ ಕಳುಹಿಸಲಾಗಿದೆ. ಸೋಮವಾರ ಬೆದರಿಕೆ ಪತ್ರ ಬಂದಿರುವ ಬಗ್ಗೆ ಕುರಿತು ಸಿಬಿಐ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ನೀಡಿದರು. ಬಳಿಕ ಅವರು ಈ ಬಗ್ಗೆ ಕೋಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಕೋಟಿ ಕೋಟಿ ನಮನ – ಸಚಿವ ಸುಧಾಕರ್

    ತನ್ನನ್ನು ಹಾಗೂ ತನ್ನ ಕುಟುಂಬವನ್ನು ಎನ್‌ಡಿಪಿಎಸ್ ಪ್ರಕರಣ(ಡ್ರಗ್ಸ್ ಪ್ರಕರಣ)ದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ನ್ಯಾಯಮೂರ್ತಿ ಚಕ್ರವರ್ತಿ ತಿಳಿಸಿದ್ದಾರೆ. ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡದಿದ್ದರೆ, ನನ್ನ ಕುಟುಂಬವನ್ನು ಡ್ರಗ್ ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಪತ್ರದಲ್ಲಿ ಬರೆಯಲಾಗಿದೆ. ಬಪ್ಪಾ ಚಟರ್ಜಿ ಎಂಬ ವ್ಯಕ್ತಿಯಿಂದ ಈ ಬೆದರಿಕೆ ಪತ್ರ ಬಂದಿರುವುದಾಗಿ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಜಾನುವಾರು ಅಕ್ರಮ ಸಾಗಣೆ – ಮಮತಾ ಬ್ಯಾನರ್ಜಿ ಆಪ್ತ ಬಂಧನ

    ಜಾನುವಾರು ಅಕ್ರಮ ಸಾಗಣೆ – ಮಮತಾ ಬ್ಯಾನರ್ಜಿ ಆಪ್ತ ಬಂಧನ

    ಕೋಲ್ಕತ್ತಾ: ಜಾನುವಾರು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕನಾಗಿರುವ ಟಿಎಂಸಿ ಬಿರ್‌ಭೂಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ.

    ಟಿಎಂಸಿ ನಾಯಕನನ್ನು ಸದ್ಯ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಇಂದು ಮುಂಜಾನೆ ಸಿಬಿಐ ತಂಡವೊಂದು ಬಿರ್‌ಭೂಮ್‌ನ ಬೋಲ್‌ಪುರದಲ್ಲಿರುವ ಮೊಂಡಲ್‌ ಅವರ ನಿವಾಸಕ್ಕೆ ಆಗಮಿಸಿತ್ತು. ಇದನ್ನೂ ಓದಿ: ಜಾನುವಾರು ಅಕ್ರಮ ಸಾಗಣೆ ಪ್ರಕರಣ – ಟಿಎಂಸಿ ಹಿರಿಯ ನಾಯಕನಿಗೆ ಸಿಬಿಐ ಸಮನ್ಸ್‌

    ಆಗಸ್ಟ್ 5 ರಂದು ಜಾನುವಾರು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮೊಂಡಲ್‌ಗೆ ನೋಟಿಸ್ ಕಳುಹಿಸಿತ್ತು. ಆಗಸ್ಟ್ 8 ರಂದು ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

    ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 21 ರಂದು ಸಿಬಿಐ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮಾಜಿ ಕಮಾಂಡೆಂಟ್ ಅವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆಯ ಮಮತಾ ಬ್ಯಾನರ್ಜಿ ಆಪ್ತ ಸಹಾಯಕ ಮೊಂಡಲ್ ಅವರ ಹೆಸರು ಕೇಳಿಬಂದಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೆಹಲಿಯಲ್ಲಿ ಇನ್ಮುಂದೆ ಮಾಸ್ಕ್ ಧರಿಸದಿದ್ದರೆ 500ರೂ. ದಂಡ

    Live Tv
    [brid partner=56869869 player=32851 video=960834 autoplay=true]

  • ಜಾನುವಾರು ಅಕ್ರಮ ಸಾಗಣೆ ಪ್ರಕರಣ – ಟಿಎಂಸಿ ಹಿರಿಯ ನಾಯಕನಿಗೆ ಸಿಬಿಐ ಸಮನ್ಸ್‌

    ಜಾನುವಾರು ಅಕ್ರಮ ಸಾಗಣೆ ಪ್ರಕರಣ – ಟಿಎಂಸಿ ಹಿರಿಯ ನಾಯಕನಿಗೆ ಸಿಬಿಐ ಸಮನ್ಸ್‌

    ಕೋಲ್ಕತ್ತಾ: ಜಾನುವಾರು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಿರಿಯ ನಾಯಕ ಅನುಬ್ರತಾ ಮೊಂಡಲ್‌ಗೆ ಸಿಬಿಐ ಸಮನ್ಸ್‌ ನೀಡಿದೆ.

    ಅನಾರೋಗ್ಯ ಕಾರಣ ನೆಪ ಹೇಳಿ ಸೋಮವಾರ ಸಿಬಿಐ ಅಧಿಕಾರಿಗಳನ್ನು ಭೇಟಿ ಮಾಡದೆಯೇ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದ ಮೊಂಡಲ್ ಅವರನ್ನು ಬುಧವಾರ ಕೇಂದ್ರ ಏಜೆನ್ಸಿಯ ಅಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಬೋಲ್ಪುರ್‌ನಲ್ಲಿರುವ ಮೊಂಡೊಲ್‌ ನಿವಾಸಕ್ಕೆ ನೋಟಿಸ್‌ ನೀಡಲು ಸಿಬಿಐ ಅಧಿಕಾರಿಗಳು ಹೋಗಿದ್ದಾರೆ. ಇದನ್ನೂ ಓದಿ: ಮೂರು ದಿನದಲ್ಲಿ ಯೋಗಿ ಮೇಲೆ ಬಾಂಬ್‌ ದಾಳಿ – ಕಂಟ್ರೋಲ್‌ ರೂಂಗೆ ಸಂದೇಶ

    ಇಂದು ಅನುಬ್ರತಾ ಮೊಂಡಲ್‌ಗೆ ಅಗತ್ಯ ಸೂಚನೆ ನೀಡಲಾಗುವುದು. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ನಿಜಾಮ್ ಅರಮನೆ ಕಚೇರಿಗೆ ಬರುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಕೇಂದ್ರ ತನಿಖಾ ಸಂಸ್ಥೆಯು ಸೋಮವಾರ ವಿಚಾರಣೆಗೆ ಹಾಜರಾಗಲು ಆಗಸ್ಟ್ 5 ರಂದು ಟಿಎಂಸಿಯ ಬಿರ್ಭುಮ್ ಜಿಲ್ಲಾಧ್ಯಕ್ಷ ಮೊಂಡಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ವೈದ್ಯಕೀಯ ತಪಾಸಣೆಯ ಕಾರಣಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿ ಮೊಂಡೆಲ್‌ ಇ-ಮೇಲ್‌ ಮಾಡಿದ್ದರು. ಇದನ್ನೂ ಓದಿ: ಮಹಿಳೆ ನಿಂದನೆ, ಹಲ್ಲೆ ಆರೋಪ – ಬಿಜೆಪಿ ನಾಯಕ ಅರೆಸ್ಟ್‌

    ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಕೆಲವು ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ ನಂತರ ಮೊಂಡಲ್‌ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಇದಾದ ಬಳಿಕ ಇಬ್ಬರು ಸಿಬಿಐ ಅಧಿಕಾರಿಗಳು ಸೋಮವಾರ ಸಂಜೆ ಮೊಂಡಲ್ ಅವರ ಚಿನಾರ್ ಪಾರ್ಕ್ ನಿವಾಸಕ್ಕೆ ಹೋಗಿದ್ದರು. ಆದರೆ ಟಿಎಂಸಿ ನಾಯಕ ಆ ಹೊತ್ತಿಗೆ ಬೋಲ್ಪುರಕ್ಕೆ ಹೋಗಿದ್ದರು.

    ಮೊಂಡಲ್ ಅವರನ್ನು ಕೇಂದ್ರ ತನಿಖಾ ದಳ ಎರಡು ಬಾರಿ ಪ್ರಶ್ನಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿತು. ಅವರ ಅಂಗರಕ್ಷಕ ಸೈಗಲ್ ಹುಸೇನ್‌ನನ್ನು ತನಿಖಾ ಸಂಸ್ಥೆ ಬಂಧಿಸಿದೆ.

    Live Tv
    [brid partner=56869869 player=32851 video=960834 autoplay=true]