Tag: Anubhav Mohanty

  • 10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಅನುಭವ್ ಮೊಹಂತಿ

    10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಅನುಭವ್ ಮೊಹಂತಿ

    ಡಿಶಾ ನಟ ಕಮ್ ಸಂಸದ ಅನುಭವ್ ಮೊಹಂತಿ (Anubhav Mohanty) ಅವರು ಪತ್ನಿ ವರ್ಷಾ ಪ್ರಿಯಾದರ್ಶಿನಿ (Varsha Priyadarshini) ಜೊತೆಗಿನ 10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇದೀಗ ಈ ಜೋಡಿಗೆ ಅಧಿಕೃತವಾಗಿ ಡಿವೋರ್ಸ್ (Divorce) ಸಿಕ್ಕಿದೆ. ಈ ಬಗ್ಗೆ ನಟ ಅನುಭವ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

    ಅನುಭವ್ ಮೊಹಂತಿ ಡಿವೋರ್ಸ್ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡು, ನನಗಾಗಿ ಮತ್ತು ನನ್ನ ಕುಟುಂಬದ ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ನಿಷ್ಪ್ರಯೋಜಕ, ಅರ್ಥಹೀನ, ಹೃದಯಹೀನ, ನೋವಿನ ಮತ್ತು ಸುಳ್ಳಿನಿಂದ ಕೂಡಿದ ಈ ದಾಂಪತ್ಯ ಜೀವನಕ್ಕೆ ಅಂತ್ಯ ಸಿಕ್ಕಿದೆ. ವಿಚ್ಛೇದನದ ತೀರ್ಪು ಸಿಕ್ಕಿತು. ನಾನು ಅವಳ ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ. ಇದರಲ್ಲಿ ಯಾವುದೇ ಅಪರಾಧವಿಲ್ಲ. ಹ್ಯಾಪಿ ರೋಸ್ ಡೇ ಎಂದು ಬರೆದುಕೊಂಡಿದ್ದಾರೆ.

    ಇದೀಗ ಒಡಿಶಾ, ಬೆಂಗಾಲಿ ನಟಿ ವರ್ಷಾ ಜೊತೆಗಿನ ದಾಂಪತ್ಯ 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚೆ ನಟ ಅನುಭವ್ ಡಿವೋರ್ಸ್ ಘೋಷಿಸಿರುವುದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:Bigg Boss: ವರ್ತೂರು ಸಂತೋಷ್‌ ನೇತೃತ್ವದ ಹಳ್ಳಿಕಾರ್ ಹಬ್ಬದಲ್ಲಿ ತಾರಾ ಮೆರುಗು

    ಸಂಸದ ಅನುಭವ್ ಮೊಹಂತಿ ಅವರು 2013ರಲ್ಲಿ ತಮ್ಮ ರಾಜಕೀಯ ವೃತ್ತಿಗೆ ಬರುವ ಮೊದಲು ಒಂದು ದಶಕದಿಂದಲೂ ಒಡಿಯಾ ಚಲನಚಿತ್ರಗಳಲ್ಲಿ ಪ್ರಸಿದ್ಧ ನಟರಾಗಿದ್ದರು. 2014ರಲ್ಲಿ ರಾಜ್ಯಸಭಾ ಸಂಸದರಾದರು. 2019ರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರಪಾರ ಲೋಕಸಭಾ ಕ್ಷೇತ್ರದಿಂದ ಬೈಜಯಂತ್ ಪಾಂಡಾ ವಿರುದ್ಧ ಗೆದ್ದಿದ್ದರು.

  • ಮದ್ವೆಯಾಗಿ 6 ವರ್ಷ ಕಳೆದ್ರೂ ಫಸ್ಟ್ ನೈಟ್ ಆಗಿಲ್ಲ – ಪತಿಯ ಮನೆ ತೊರೆಯುವಂತೆ ಪತ್ನಿಗೆ ಕೋರ್ಟ್ ಆರ್ಡರ್

    ಮದ್ವೆಯಾಗಿ 6 ವರ್ಷ ಕಳೆದ್ರೂ ಫಸ್ಟ್ ನೈಟ್ ಆಗಿಲ್ಲ – ಪತಿಯ ಮನೆ ತೊರೆಯುವಂತೆ ಪತ್ನಿಗೆ ಕೋರ್ಟ್ ಆರ್ಡರ್

    ಭುವನೇಶ್ವರ್: ಒಡಿಶಾದ ಕಟಕ್ ಜಿಲ್ಲೆಯ ಉಪವಿಭಾಗ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸ್‍ಡಿಜೆಎಮ್) ನ್ಯಾಯಾಲಯವು ರಾಜ್ಯದ ಖ್ಯಾತ ನಟಿ ವರ್ಷಾ ಪ್ರಿಯದರ್ಶಿನಿಗೆ ನಟ ಮತ್ತು ಲೋಕಸಭಾ ಸಂಸದ ಅನುಭವ್ ಮೊಹಂತಿ ಅವರ ಮನೆಯನ್ನು ಖಾಲಿ ಮಾಡುವಂತೆ ಆದೇಶಿಸಿದೆ.

    court order law

    ಈ ವೇಳೆ ಪ್ರತಿ ತಿಂಗಳು 10 ರಂದು ಅಥವಾ ಅದಕ್ಕೂ ಮೊದಲು ಪ್ರಿಯದರ್ಶಿನಿ ಅವರಿಗೆ ಅನುಭವ್ ಮೊಹಂತಿಯವರು 30 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವಂತೆ ಸೂಚಿಸಿದೆ. ಇತ್ತೀಚೆಗೆ ಒಡಿಶಾ ಹೈಕೋರ್ಟ್, ಅನುಭವ್ ಮೊಹಾಂತಿ ಮತ್ತು ವರ್ಷಾ ಪ್ರಿಯದರ್ಶಿನಿ ಅವರ ಸಾಂಪ್ರದಾಯಿಕ ಚಿತ್ರವನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವೀಡಿಯೋವನ್ನು ಅಪ್‍ಲೋಡ್ ಮಾಡದಂತೆ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 200 ಮಹಿಳಾ ಕಾರ್ಮಿಕರು ಅಸ್ವಸ್ಥ

    BRIBE

    ಅನುಭವ್ ಮೊಹಂತಿ ಮತ್ತು ವರ್ಷಾ ಪ್ರಿಯದರ್ಶಿನಿ ಯಾರು? ಅವರ ಖಾಸಗಿ ಜೀವನ ಏಕೆ ನ್ಯಾಯಾಲಯದ ಮೆಟ್ಟಿಲೇರಿತು? ಒಡಿಸ್ಸಿ ಚಲನಚಿತ್ರಗಳ ಜಗತ್ತಿನಲ್ಲಿ ದೊಡ್ಡ ಹೆಸರನ್ನು ಪಡೆದ ನಂತರ, ಅನುಭವ್ ಮೊಹಾಂತಿ ಅವರು 2014 ರಲ್ಲಿ ರಾಜ್ಯದ ಜನಪ್ರಿಯ ನಟಿ ವರ್ಷಾ ಪ್ರಿಯದರ್ಶಿನಿ ಅವರನ್ನು ವಿವಾಹವಾಗಿದ್ದರು. ಅದರ ನಂತರ ನಟ ಮತ್ತು ನಟಿ ಇಬ್ಬರೂ ದಾಪಂತ್ಯ ಜೀವನ ಚೆನ್ನಾಗಿಯೇ ಇತ್ತು. ಕೆಲವು ದಿನಗಳ ನಂತರ ಅವರ ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಲಾರಭಿಸಿತು. ಇದನ್ನೂ ಓದಿ: ವೀಸಾ ಹಗರಣ – ಕಾರ್ತಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

    ಅನುಭವ್ ಮೊಹಾಂತಿ ಅವರು 2016 ರಲ್ಲಿ ತಮ್ಮ ಪತ್ನಿ ವರ್ಷಾ ವಿರುದ್ಧ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮದುವೆಯಾಗಿ 2 ವರ್ಷಗಳು ಕಳೆದಿವೆ. ಆದರೆ ನನ್ನ ಪತ್ನಿ ಲೈಂಗಿಕ ಸಂಬಂಧ ಬೆಳೆಸಲು ಮತ್ತು ಸಹಜ ವೈವಾಹಿಕ ಜೀವನಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ವರ್ಷ ಅವರು ಸಹ ಪತಿ ಅನುಭವ್ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅವರು ಮದ್ಯವ್ಯಸನಿಯಾಗಿದ್ದು, ಇತರ ಮಹಿಳೆಯರೊಂದಿಗೆ ಅನೈತಿಕ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

    ಅನುಭವ್ ಮೊಹಾಂತಿ ಒಡಿಯಾ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯ ನಟರಾಗಿ ಪರಿಚಿತರಾದವರು, ನಂತರ ಅವರು 2013 ರಲ್ಲಿ ರಾಜ್ಯದ ಆಡಳಿತ ಪಕ್ಷವಾದ ಬಿಜು ಜನತಾದೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿದರು. ಅದೇ ಸಮಯದಲ್ಲಿ, 2014 ರಲ್ಲಿ ಒಡಿಶಾ ಸರ್ಕಾರವು ಮೊಹಾಂತಿ ಅವರನ್ನು ರಾಜ್ಯಸಭಾ ಸಂಸದರನ್ನಾಗಿ ಮಾಡಿತು. 2019 ರಲ್ಲಿ, ಮೊಹಾಂತಿ ಅವರನ್ನು ಕೇಂದ್ರದ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ತೆಗೆದುಕೊಳ್ಳುವ ಮೂಲಕ ಚುನಾವಣೆಯಲ್ಲಿ ಕಣಕ್ಕಿಳಿಸಲಾಯಿತು. ಅದರಲ್ಲಿ ಅವರು ಗೆಲುವು ಪಡೆದರು. ಆದಾಗ್ಯೂ, ಕೌಟುಂಬಿಕ ಕಲಹಗಳಿಂದಾಗಿ ಮೊಹಾಂತಿಯವರ ರಾಜಕೀಯ ಜೀವನವು ನಿರಂತರ ವಿವಾದದಲ್ಲಿ ಉಳಿಯಿತು.

    ಈ ಕುರಿತು ಅವರ ವೈಯಕ್ತಿಕ ಜೀವನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂಸದ ಅನುಭವ್ ಮೊಹಂತಿ ಕಳೆದ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವೈಯಕ್ತಿಕ ಜೀವನವನ್ನು ಜನರಿಗೆ ತಿಳಿಸಲು ಪ್ರಯತ್ನಿಸಿದ್ದಾರೆ. ಆದರೆ ಸಂಸದರು ತಮ್ಮ ಪತ್ನಿಯೊಂದಿಗಿನ ಲೈಂಗಿಕ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮಾಡುವ ಮೂಲಕ ಪ್ರಸ್ತಾಪಿಸಿದ್ದಾರೆ. ಮೊಹಂತಿ ಮಾತನಾಡಿ, ಕಳೆದ 8 ವರ್ಷಗಳಿಂದ ಕೌಟುಂಬಿಕ ಕಲಹದ ನಡುವೆ ಪತ್ನಿ ವರ್ಷಾ ಪ್ರಿಯದರ್ಶಿನಿ ಜತೆ ದೈಹಿಕ ಸಂಬಂಧ ಹೊಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ನನ್ನ ಇಡೀ ಕುಟುಂಬ ಮತ್ತು ನಾನು ಹೆಂಡತಿಯ ಕಾರಣದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದೇನೆ. ಇದರಿಂದ ನನ್ನ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ನಾನು ನನ್ನ ಹೆಂಡತಿಯಿಂದ ವಿಚ್ಛೇದನವನ್ನು ಬಯಸುತ್ತೇನೆ ಆದರೆ ಇದೀಗ ಈ ನಿರ್ಧಾರವು ನ್ಯಾಯಾಲಯದಲ್ಲಿದೆ ಎಂದಿದ್ದರು.

  • ಸಂಸದ ಅನುಭವ್ ಮೊಹಂತಿ ವಿರುದ್ಧ ದೂರು ದಾಖಲಿಸಿದ ಪತ್ನಿ

    ಸಂಸದ ಅನುಭವ್ ಮೊಹಂತಿ ವಿರುದ್ಧ ದೂರು ದಾಖಲಿಸಿದ ಪತ್ನಿ

    -ಹಲ್ಲೆ, ಕಿರುಕುಳ, ವ್ಯಭಿಚಾರದ ಆರೋಪ

    ಭುವನೇಶ್ವರ: ನಟ ಹಾಗೂ ಬಿಜೆಡಿ ಸಂಸದರಾಗಿರುವ ಅನುಭವ್ ಮೊಹಂತಿ ವಿರುದ್ಧ ಅವರ ಪತ್ನಿ, ನಟಿ ವರ್ಷಾ ಪ್ರಿಯದರ್ಶಿನಿ ಕಿರುಕುಳದ ಆರೋಪ ಮಾಡಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೌಟುಂಬಿಕ ಹಿಂಸಾಚಾರ ಆರೋಪದಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಅನುಭವ್ ಮೊಹಂತಿ ವಿರುದ್ಧ 2005ರ ಮಹಿಳಾ ಸಂರಕ್ಷಣಾ ಕಾಯ್ದೆ ಸೆಕ್ಷನ್ 12ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವರ್ಷಾ ಪ್ರಿಯದರ್ಶಿನಿ ಹಲ್ಲೆ ಮತ್ತು ಕಿರುಕುಳದ ಆರೋಪ ಮಾಡಿದ್ದು, ಪ್ರಕರಣದ ವಿಚಾರಣೆ ಸೆಪ್ಟೆಂಬರ್ 7ರಂದು ನಡೆಯಲಿದೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನುಭವ್ ಮೊಹಂತಿ, ನನಗೆ ಯಾವುದೇ ನೋಟಿಸ್ ದೊರೆತಿಲ್ಲ. ಒಂದು ವೇಳೆ ನೋಟಿಸ್ ಸಿಕ್ಕರೆ ನಿಮಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

    ಇತ್ತ ವರ್ಷಾ ಪ್ರಿಯದರ್ಶಿನಿ ಮಾಧ್ಯಮಗಳ ಜೊತೆ ಮಾತನಾಡಲು ಹಿಂದೇಟು ಹಾಕಿದ್ದಾರೆ. ದೂರಿನಲ್ಲಿ ಪತಿ ಬೆಡ್‍ರೂಮಿನಲ್ಲಿ ಸ್ನೇಹಿತರ ಜೊತೆ ಮದ್ಯ ಸೇವನೆ ಮಾಡ್ತಾರೆ. ವ್ಯಭಿಚಾರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಪತಿ ತಮಗೆ ಪತಿ ತಿಂಗಳು ಮನೆ ಬಾಡಿಗೆ 20 ಸಾವಿರ ರೂ. ಮತ್ತು ಜೀವನ ನಿರ್ವಹಣೆಗೆ ಮಾಸಿಕ 50 ಸಾವಿರ ನೀಡಬೇಕೆಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ದಾರೆ. 2014ರಲ್ಲಿ ಅನುಭವ್ ಮತ್ತು ವರ್ಷಾ ಮದುವೆ ಆಗಿದ್ದರು.