Tag: anu sirimane

  • ಕರಾವಳಿ ಸುಂದರಿಯ ಮತ್ತೊಂದು ಫೋಟೋಶೂಟ್ : ಜಭರದಸ್ತ್ ಜವಾರಿ

    ಕರಾವಳಿ ಸುಂದರಿಯ ಮತ್ತೊಂದು ಫೋಟೋಶೂಟ್ : ಜಭರದಸ್ತ್ ಜವಾರಿ

    ಟಿ ಮೇಘಾ ಶೆಟ್ಟಿ (Megha Shetty) ಅವರು ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮುಗಿದ ಮೇಲೆ ಮತ್ತೆ ಸಿನಿಮಾಗಳಲ್ಲಿ ಮಿಂಚಲು ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯ ಜಭರದಸ್ತ್ ಫೋಟೋ ಶೂಟ್ ವೊಂದರಲ್ಲಿ ಭಾಗಿಯಾಗಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿವೆ.

    ‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ವೃತ್ತಿ ಬದುಕು ಆರಂಭಿಸಿದ ಕರಾವಳಿ ನಟಿ ಮೇಘಾ ಶೆಟ್ಟಿ ಅವರು ಸೀರಿಯಲ್ ಜೊತೆಗೆ ತ್ರಿಬಲ್ ರೈಡಿಂಗ್ (Triple Riding), ದಿಲ್ ಪಸಂದ್ (Dil Pasand) ಚಿತ್ರಗಳಲ್ಲಿ ನಟಿಸಿದರು. ಕಿರುತೆರೆ – ಹಿರಿತೆರೆ ಬ್ಯಾಲೆನ್ಸ್ ಮಾಡುತ್ತಿದ್ದರು. ಇತ್ತೀಚಿಗೆ ಆರೂರು ಜಗದೀಶ್ ನಿರ್ದೇಶನದ ‘ಜೊತೆ ಜೊತೆಯಲಿ’ ಸೀರಿಯಲ್ ಅಂತ್ಯವಾಗಿದ್ದು, ಪ್ರೇಕ್ಷಕರಿಗೆ ಬೇಸರ ಮೂಡಿಸಿತ್ತು.

    ಆರೂರು ಜಗದೀಶ್ ನಿರ್ದೇಶನದ ‘ಜೊತೆ ಜೊತೆಯಲಿ’ ಸೀರಿಯಲ್ ಕಥೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಆರ್ಯ- ಅನು ಸಿರಿಮನೆ ಲವ್ ಸ್ಟೋರಿಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಮೊನ್ನೆಯಷ್ಟೇ  ಸೀರಿಯಲ್ ಅಂತ್ಯವಾಗಿದೆ. ಈ ಧಾರಾವಾಹಿಯು ಮೇಘಾಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

    ಜೊತೆ ಜೊತೆಯಲಿ ಸೀರಿಯಲ್ ಮೊದಲ ಶಾಟ್ ಎದುರಿಸಿದ್ದು ಇದೇ ಮೇಘಾ ಮೇಘಾ ಶೆಟ್ಟಿ. ಕೊನೆಯ ದಿನದ ಚಿತ್ರೀಕರಣ ಕೂಡ ಇವರಿಂದನೇ ಮುಕ್ತಾಯ ಹಾಡಿದೆ. ಯಾರೂ ಪರಿಚಯವಿಲ್ಲದೇ ಈ ತಂಡಕ್ಕೆ ಕಾಲಿಟ್ಟ ನನಗೆ ಈಗ ಈ ತಂಡ ಎರಡನೇ ಕುಟುಂಬ. ಈ ಕುಟುಂಬದೊಂದಿಗಿನ ನಂಟನ್ನು ಮುಗಿಸುತ್ತಿದ್ದೇನೆ ಎಂದು ಮೊನ್ನೆಯಷ್ಟೇ ಭಾವುಕರಾಗಿ ಮೇಘಾ ಹೇಳಿಕೊಂಡಿದ್ದರು.

    ಅನು ಸಿರಿಮನೆ ನನಗೆ ಎಲ್ಲವನ್ನೂ ನೀಡಿದ್ದಾಳೆ. ನನಗೆ ಸಿಗುತ್ತಿರುವ ಸಿನಿಮಾಗಳು, ಜನರ ಪ್ರಿತಿ ಇವೆಲ್ಲದಕ್ಕೂ ಜೊತೆ ಜೊತೆಯಲಿ ಸೀರಿಯಲ್ ಮಾತ್ರ ಕಾರಣ. ಸಾವಿರ ಎಪಿಸೋಡ್‌ವರೆಗೂ ರೀಚ್ ಆಗಬೇಕು ಎಂದುಕೊಂಡಿದ್ದೆವು. ಅದರಂತೆ ಮುಗಿಸುತ್ತಿದ್ದೇವೆ ಎಂದು ಮೇಘಾ ಶೆಟ್ಟಿ ಮೊನ್ನೆ ಮಾತನಾಡಿದ್ದರು.

    ಇತ್ತೀಚೆಗಷ್ಟೇ ಬಿಳಿ ಕಾಸ್ಟ್ಯೂಮ್‌ನಲ್ಲಿ ಮಿರಿ ಮಿರಿ ಮಿಂಚಿರುವ ಅವರು ನೀರಿನ ಮಧ್ಯ ಬೆಡ್ ಹಾಕಿ, ಅದರ ಮೇಲೆ ಕೂತಿರುವ ಮೇಘಾ, ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋಗಳನ್ನ ನಟಿ ಹಂಚಿಕೊಂಡಿದ್ದರು. ನಂತರ ಅದೇ ಫೋಟೋಶೂಟ್ ಬೇರೆ ಲುಕ್‌ನಲ್ಲಿ ಹಾಟ್ ಫೋಟೋಸ್‌ನ ಶೇರ್ ಮಾಡಿದ್ದರು. ಕೈಯಲ್ಲಿ ಲ್ಯಾಂಪ್ ಹಿಡಿದು ಫೋಟೋಶೂಟ್ ಮಾಡಿಸಿರುವ ಮೇಘಾ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದವು.

     

    ಮೇಘಾ ಶೆಟ್ಟಿ, ನಟಿಸಿರುವ ‘ಕೈವ’ (Kaiva) ಮತ್ತು ‘ಆಪರೇಷನ್ ಲಂಡನ್ ಕೆಫೆ’ (Operation London Cafe) ಸಿನಿಮಾಗಳು ಸದ್ಯದಲ್ಲೇ ತೆರೆಗೆ ಬರಲಿದೆ. ಭಿನ್ನ ಕಥೆಯ ಮೂಲಕ ಮೇಘಾ ಮಿಂಚಲು ಸಜ್ಜಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಕಿರುತೆರೆಯ ಮುದ್ದಾದ ಜೋಡಿ ಅನಿರುದ್ಧ್ (Aniruddha Jatkar) ಮತ್ತು ಅನು ಸಿರಿಮನೆ (Anu Sirimane) ಮತ್ತೆ ಒಂದಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಮನೆ ಮಾತಾದ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಟಿವಿ ಲೋಕದ ಸಕ್ಸಸ್‌ಫುಲ್ `ಜೊತೆ ಜೊತೆಯಲಿ’ ಸೀರಿಯಲ್‌ನಿಂದ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಹೊರಬಂದ ಮೇಲೆ ಮತ್ತೆ ಆರ್ಯ ಮತ್ತು ಅನು ಜೊತೆಯಾಗಿ ಈ ಮೂಲಕ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅನಿರುದ್ಧ್ ಮಾಡ್ತಿದ್ದ ಪಾತ್ರವನ್ನ ಇದೀಗ ಹರೀಶ್ ರಾಜ್(Harish Raj) ನಿಭಾಯಿಸುತ್ತಿದ್ದಾರೆ. ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ತೆರೆಯ ಮೇಲೆ ಮಿಸ್ ಮಾಡಿಕೊಳ್ತಿರುವ ಫ್ಯಾನ್ಸ್‌ಗೆ ಈ ಜೋಡಿಯ ನಯಾ ಫೋಟೋ ನೋಡಿ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ

    ಅನಿರುದ್ಧ್ ಮತ್ತು ಭಾರತಿ ವಿಷ್ಣುವರ್ಧನ್ (Bharathi Vishnuvardhan) ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ (House Warming) ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ (Megha Shetty) ಸಾಕ್ಷಿಯಾಗಿದ್ದಾರೆ. ಅನಿರುದ್ಧ್ ಅವರ ಹೊಸ ಮನೆಯ ಸಂಭ್ರಮಕ್ಕೆ ಮೇಘಾ ಕೂಡ ಸಾಕ್ಷಿಯಾಗಿದ್ದು, ತಾವು ಕೂಡ ಅವರ ಕುಟುಂಬದಲ್ಲಿ ಒಬ್ಬರಾಗಿ ಒಳ್ಳೆಯ ಸಮಯವನ್ನ ಕಳೆದಿದ್ದಾರೆ. ಆರ್ಯ ಮನೆಯ ಗೃಹಪ್ರವೇಶದ ಸಂಭ್ರಮದ ಫೋಟೋವನ್ನು ನಟಿ ಅನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಆರ್ಯ ಮತ್ತು ಜೋಡಿ ಹೊಸ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಬಹುದಿನಗಳ ನಂತರ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]