Tag: Anu Prabhakar

  • ಮನೆಯ ಹೊಸ ವ್ಯಕ್ತಿಯನ್ನು ಪರಿಚಯಿಸಿದ್ರು ಅನು ಪ್ರಭಾಕರ್

    ಮನೆಯ ಹೊಸ ವ್ಯಕ್ತಿಯನ್ನು ಪರಿಚಯಿಸಿದ್ರು ಅನು ಪ್ರಭಾಕರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನೆಯ ಹೊಸ ವ್ಯಕ್ತಿಯ ಫೋಟೋ ಹಾಕಿ ಎಲ್ಲರನ್ನು ಪರಿಚಯಿಸಿದ್ದಾರೆ.

    ಅನು ಪ್ರಭಾಕರ್ ಅವರು ತಮ್ಮ ಪತಿ, ನಟ ರಘು ಮುಖರ್ಜಿ ಹಾಗೂ ಮಗಳ ಜೊತೆಯಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ನಿಮೆಲ್ಲರಿಗೂ ಪರಿಚಯಿಸುತಿದ್ದೀವಿ ನಮ್ಮ ಮಗಳು `ನಂದನ ಪ್ರಭಾಕರ್ ಮುಖರ್ಜಿ’” ಎಂದು ಬರೆದು ಮೂವರ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ.

    ಈ ಟ್ವೀಟ್‍ಗೆ ನಟಿ ಪ್ರಿಯಾಂಕ ಉಪೇಂದ್ರ ಅವರು ರೀ-ಟ್ವೀಟ್ ಮಾಡಿದ್ದಾರೆ. ಪ್ರಿಯಾಂಕ ತಮ್ಮ ಟ್ವಿಟ್ಟರಿನಲ್ಲಿ, “ಶುಭಾಶಯಗಳು. ದೇವರು ಆಕೆಯ ಜೀವನದಲ್ಲಿ ಸಾಕಷ್ಟು ಖುಷಿ ಹಾಗೂ ಪ್ರೀತಿಯನ್ನು ನೀಡಲಿ” ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದು ಎರಡನೇ ಮದುವೆಯಾಗಿದೆ. ಅನು ಅವರು ಅಗಸ್ಟ್ 15, 2018ರಂದು ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಕಳೆದ ವರ್ಷ ದೀಪಾವಳಿ ಹಬ್ಬದಂದು ರಘು ಮುಖರ್ಜಿ ಅವರು ತಮ್ಮ ಟ್ವಿಟ್ಟರಿನಲ್ಲಿ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ರಘು ಮುಖರ್ಜಿ ಅವರ ಜೊತೆ ಅನು ಪ್ರಭಾಕರ್ ಕೂಡ ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೀಪಾವಳಿಯಂದು ಮಗಳ ಫೋಟೋ ರಿವೀಲ್ ಮಾಡಿದ್ರು ಅನು ಪ್ರಭಾಕರ್

    ದೀಪಾವಳಿಯಂದು ಮಗಳ ಫೋಟೋ ರಿವೀಲ್ ಮಾಡಿದ್ರು ಅನು ಪ್ರಭಾಕರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಅವರ ಪತಿ, ನಟ ರಘು ಮುಖರ್ಜಿ ಅವರು ದೀಪಾವಳಿ ಹಬ್ಬದಂದು ಎಲ್ಲರಿಗೂ ಶುಭಾಶಯ ತಿಳಿಸಿ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.

    ಅನು ಅವರು ಅಗಸ್ಟ್ 15 ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅನು ಹಾಗೂ ರಘು ಮುಖರ್ಜಿ ಅವರು ತಮ್ಮ ಮೂರು ತಿಂಗಳ ಮಗಳ ಜೊತೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ.

    ರಘು ಮುಖರ್ಜಿ ಅವರು ತಮ್ಮ ಟ್ವಿಟ್ಟರಿನಲ್ಲಿ ಪತ್ನಿ ಅನು ಹಾಗೂ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ರಘು ತಮ್ಮ ಟ್ವಿಟ್ಟರಿನಲ್ಲಿ, “ಈ ವರ್ಷ ನಮ್ಮ ದೀಪಾವಳಿ ಬಹಳ ವಿಶೇಷ. ನಮ್ಮ ಮಗಳು ಹಾಗು ನಮ್ಮಿಂದ ನಿಮ್ಮೆಲ್ಲರಿಗು ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದು ಎರಡನೇ ಮದುವೆಯಾಗಿದ್ದು, ಸದ್ಯ ಈಗ ಇಬ್ಬರು ತಮ್ಮ ಮುದ್ದಾದ ಮಗಳ ಜೊತೆ ದೀಪಾವಳಿ ಆಚರಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿತ್ರ ನಿರ್ಮಾಣದಲ್ಲಿ ಬ್ಯೂಸಿಯಾದ ರಾಧಿಕಾ ಕುಮಾರಸ್ವಾಮಿ

    ಚಿತ್ರ ನಿರ್ಮಾಣದಲ್ಲಿ ಬ್ಯೂಸಿಯಾದ ರಾಧಿಕಾ ಕುಮಾರಸ್ವಾಮಿ

    ಬೆಂಗಳೂರು: ಬಹಳ ವರ್ಷಗಳಿಂದ ಸಿನಿರಂಗದಿಂದ ದೂರವಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಜೊತೆಗೆ ತಮ್ಮದೇ ಚಿತ್ರದಲ್ಲಿ ರಾಧಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

    ‘ಭೈರಾದೇವಿ’ ಅನ್ನುವ ಶೀರ್ಷಿಕೆಯಲ್ಲಿ ಚಿತ್ರ ಸೆಟ್ಟೇರಿದ್ದು ಇದೇ ತಿಂಗಳು 14ರಿಂದ ಚಿತ್ರೀಕರಣ ಶುರುವಾಗಲಿದೆ. ಸೋಮವಾರ ಬೆಂಗಳೂರಿನ ಬಂಡೆಕಾಳಮ್ಮ ದೇವಸ್ಥಾನದಲ್ಲಿ ಚಿತ್ರಕ್ಕೆ ಸರಳ ಮುಹೂರ್ತ ನೆರವೇರಿದೆ. ಭೈರಾದೇವಿ ಸಿನಿಮಾದಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಅಭಿನಯಿಸುತ್ತಿದ್ದು, ಅನುಪ್ರಭಾಕರ್ ರಮೇಶ್‍ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಸರಳವಾಗಿ ನಡೆದ ಮುಹೂರ್ತದಲ್ಲಿ ಚಿತ್ರತಂಡವಷ್ಟೇ ಭಾಗಿಯಾಗಿತ್ತು. ಈ ಚಿತ್ರವನ್ನ ಶ್ರೀಜಯ್ ನಿರ್ದೇಶನವಿದ್ದು ಬೆಂಗಳೂರು, ವಾರಣಾಸಿ, ಊಟಿ ಸೇರಿದಂತೆ ಹಲವು ರಮಣೀಯ ಸ್ಥಳಗಳಲ್ಲಿ ಶೂಟಿಂಗ್ ನಡೆಯಲಿದೆ.

    ಕೌಟುಂಬಿಕ ಕಥಾಹಂದರ ಕಥೆಯ ಈ ಚಿತ್ರದಲ್ಲಿ ರಾಧಿಕಾ ಭೈರಾದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ರಾಧಿಕಾ ಮಗಳು ಶಮಿಕಾ ಕೆ. ಸ್ವಾಮಿ ಕ್ಲ್ಯಾಪ್ ಮಾಡುವ ಮೂಲಕ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಮೂಡಿಬರುವ ಮೂರನೇ ಚಿತ್ರ ಭೈರಾದೇವಿ ಗೆ ಚಾಲನೆ ದೊರಕಿದೆ.