Tag: Ants

  • ಊಟದಲ್ಲಿ ಇರುವೆ ಇದೆ ಎಂದು ರೇಗಿದ್ದಕ್ಕೆ ಪತಿ ಕತ್ತು ಹಿಸುಕಿ ಕೊಂದ ಪತ್ನಿ

    ಊಟದಲ್ಲಿ ಇರುವೆ ಇದೆ ಎಂದು ರೇಗಿದ್ದಕ್ಕೆ ಪತಿ ಕತ್ತು ಹಿಸುಕಿ ಕೊಂದ ಪತ್ನಿ

    ಭುವನೇಶ್ವರ್: ಊಟದಲ್ಲಿ ಇರುವೆ ಇದೆ ಎಂದು ರೇಗಿದ್ದಕ್ಕೆ ಪತಿಯನ್ನು ಕತ್ತು ಹಿಸುಕಿ ಪತ್ನಿ ಕೊಂದಿರುವ ಘಟನೆ ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ನಡೆದಿದೆ.

    ಹೇಮಂತ ಬಾಗ್ (35) ಪತ್ನಿಯಿಂದ ಹತ್ಯೆಯಾದ ವ್ಯಕ್ತಿ. ಕೊಲೆ ಮಾಡಿದ ಆತನ ಪತ್ನಿ ಸರಿತಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ಮಾವ ಶಶಿ ಭೂಷಣ್‌ ಬಾಗ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಸರಿತಾಳನ್ನು ಅರೆಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಸಂಬಳ ಕೇಳಿದ ದಲಿತ ವ್ಯಕ್ತಿಯನ್ನು ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿ ವಿಕೃತಿ

    ಹೇಮಂತ ಊಟ ಮಾಡುವಾಗ ಅನ್ನದಲ್ಲಿ ಇರುವೆ ಸಿಕ್ಕಿದೆ. ಊಟದಲ್ಲಿ ಇರುವೆ ಇದೆ ಎಂದು ಆತ ಪತ್ನಿ ಮೇಲೆ ರೇಗಾಡಿದ್ದಾನೆ. ಪತಿ, ಪತ್ನಿ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸರಿತಾ ಕತ್ತು ಹಿಸುಕಿ ಕೊಂದಿದ್ದಾಳೆ.

    ಹೇಮಂತ ಬಾಗ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಸರಿತಾ, ಪುತ್ರಿ ಹೇಮಲತಾ, ಪುತ್ರ ಸೌಮ್ಯ ಜೊತೆ ವಾಸವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ

    Live Tv
    [brid partner=56869869 player=32851 video=960834 autoplay=true]

  • ಜೀವ ಉಳಿಸಿಕೊಳ್ಳಲು ಇರುವೆಗಳ ಜೊತೆ ಬಾವಲಿ ಕಾಳಗ

    ಜೀವ ಉಳಿಸಿಕೊಳ್ಳಲು ಇರುವೆಗಳ ಜೊತೆ ಬಾವಲಿ ಕಾಳಗ

    ಚಿಕ್ಕಮಗಳೂರು: ಜೀವ ಉಳಿಸಿಕೊಳ್ಳಲು ಬಾವಲಿಯೊಂದು ಕೆಂಜಿಗ ಇರುವೆಗಳ ಜೊತೆ ಹೋರಾಟ ನಡೆಸಿದ ಘಟನೆಗೆ ಚಿಕ್ಕಮಗಳೂರಿನ ಪ್ರವಾಸಿ ಮಂದಿರ ಸಾಕ್ಷಿಯಾಗಿದೆ.

    ಆಹಾರದ ಅರಸಿ ಪ್ರವಾಸಿ ಮಂದಿರದ ಆವರಣಕ್ಕೆ ಬಂದಿದ್ದ ದೊಡ್ಡ ಗಾತ್ರದ ಬಾವಲಿ ಕೆಂಜಿಗಗಳ ಕೈಗೆ ಸಿಕ್ಕಿ ತಪ್ಪಿಸಿಕೊಳ್ಳಲು ಹೋರಾಡಿದೆ. ಮರವೊಂದರ ಕೆಳಗೆ ಕಂಡ ಕೆಂಜಿಗವನ್ನು ತಿನ್ನಲು ಬಂದ ಬಾವಲಿ ಅರಿವಿಲ್ಲದೆ ಕೆಂಜಿಗಗಳ ಗೂಡಿನ ಮೇಲೆ ಇಳಿದಿದೆ. ಒಂದೊಂದೇ ಕೆಂಜಿಗವನ್ನು ತಿನ್ನಲು ಪ್ರಾರಂಭಿಸುತ್ತಿದ್ದಂತೆ ರಾಶಿ-ರಾಶಿ ಪ್ರಮಾಣದ ಕೆಂಜಿಗ ಇರುವೆಗಳು ಬಾವಲಿಯನ್ನು ಸಂಪೂರ್ಣ ಮುತ್ತಿಕೊಂಡು ಕಚ್ಚಲು ಆರಂಭಿಸಿವೆ.

    ಹಾರಲು ಆಗದೆ, ತಪ್ಪಿಸಿಕೊಳ್ಳಲು ಆಗದ ಬಾವಲಿ ನೋವಿನಿಂದ ಸ್ಥಳದಲ್ಲೇ ಬಿದ್ದು ಒದ್ದಾಡಿದೆ. ಬಾವಲಿ ದೊಡ್ಡ ರೆಕ್ಕೆಗಳನ್ನು ಹರಡಿಕೊಂಡಿದ್ದರಿಂದ ಬೇರಿಗೆ ಸಿಕ್ಕಿಕೊಂಡು ತಪ್ಪಿಸಿಕೊಳ್ಳಲಾಗದೆ ವಿಫಲ ಹೋರಾಟ ನಡೆಸಿತ್ತು. ಆ ನೋವಿನ ಮಧ್ಯೆಯೂ ಬಾವಲಿ ಒಂದೊಂದೆ ಕೆಂಜಿಗವನ್ನು ತಿನ್ನಲು ಆರಂಭಿಸಿತು. ಆದರೆ ಕೆಂಜಿಗಗಳು ಕೂಡ ಮತ್ತೊಂದು ಕಡೆಯಿಂದ ಬಾವಲಿ ಮೇಲೆ ದಾಳಿ ಮಾಡಿದೆ.

    ಹಾಗೋ-ಹೀಗೋ ಕಷ್ಟಪಟ್ಟು ಮರ ಏರಲು ಪ್ರಾರಂಭಿಸಿದ ಬಾವುಲಿ ನೋವಿನಿಂದ ನಿಂತ್ರಾಣಗೊಂಡು ಮತ್ತದೇ ಕೆಂಜಿಗಗಳ ಗೂಡಿನ ಮೇಲೆ ಬಿದ್ದಿತ್ತು. ಸಾಮಾನ್ಯವಾಗಿ ರಾತ್ರಿ ಪಾಳಯದಲ್ಲಿ ಆಹಾರ ಸೇವನೆ ಮಾಡೋ ಬಾವಲಿಗಳು ಹಗಲಲ್ಲೇ ಆಹಾರ ಹುಡಿಕಿಕೊಂಡು ಬಂದು ಕೆಂಜಿಗಗಳನ್ನ ತಿನ್ನುತ್ತಿರುವುದು ವಿಶೇಷವಾಗಿದೆ.

  • ಕಸ್ಟಮ್ಸ್ ಅಧಿಕಾರಿಗಳಿಂದ 1 ಸಾವಿರ ಇರುವೆ ಸೀಜ್!

    ಕಸ್ಟಮ್ಸ್ ಅಧಿಕಾರಿಗಳಿಂದ 1 ಸಾವಿರ ಇರುವೆ ಸೀಜ್!

    ಬೀಜಿಂಗ್: ಅಕ್ರಮವಾಗಿ ಸಾಗಾಟ ಮಾಡುವ ಹಣ, ಬಂಗಾರ, ಡ್ರಗ್ಸ್ ಹೀಗೆ ಇತರೆ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡುವುದು ನಿಮಗೆ ಗೊತ್ತೆ ಇದೆ. ಈಗ ಚೀನಾದಲ್ಲಿ 1 ಸಾವಿರ ಇರುವೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

    ಇರುವೆಗಳನ್ನ ಸೀಜ್ ಮಾಡಿದ್ದಾರಾ ಅಂತ ಅಚ್ಚರಿಯಾದರೂ ಇದು ನಿಜ. ಕೋರಿಯರ್ ಮೂಲಕ ಸಾಗಾಣೆಯಾಗುತ್ತಿದ್ದ ಪಾರ್ಸೆಲ್‍ವೊಂದನ್ನು ಸೀಜ್ ಮಾಡಿದ್ದ ಕಸ್ಟಮ್ ಅಧಿಕಾರಿಗಳಿಗೆ ಅದನ್ನು ತೆರೆದಾಗ ಅದರಲ್ಲಿದ್ದ ಇರುವೆಗಳನ್ನು ನೋಡಿ ಶಾಕ್ ಆಗಿದ್ದಾರೆ.

    ಅಕ್ರಮವಾಗಿ ಕೋರಿಯರ್ ಮೂಲಕ ಬ್ರಿಟನ್‍ನಿಂದ ಚೀನಾಗೆ ಈ ಇರುವೆಗಳನ್ನು ಕಳುಹಿಸಲಾಗಿತ್ತು. ಈ ಇರುವೆಗಳು ವಿಲಕ್ಷಣ ಸಾಕುಪ್ರಾಣಿಗಳ ಪಟ್ಟಿಗೆ ಸೇರಿದರಿಂದ ಕಸ್ಟಮ್ಸ್ ಅಧಿಕಾರಿಗಳು ತಕ್ಷಣ ಪಾರ್ಸಲ್‍ನಲ್ಲಿದ್ದ ಒಂದು ಸಾವಿರ ಇರುವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇದರಲ್ಲಿ 37 ಕೆಂಪು ಮತ್ತು ಕಪ್ಪು ಬಣ್ಣದ ರಾಣಿ ಇರುವೆಗಳು ಸೇರಿದಂತೆ ಇತರೆ ಇರುವೆಗಳು ಇವೆ. ಜೀವಂತ ಇರುವೆಗಳನ್ನು ಪಾರ್ಸೆಲ್ ಮೂಲಕ ಸಾಗಾಟ ಮಾಡುವುದು ಚೀನಾದಲ್ಲಿ ನಿಷೇಧಿಸಲಾಗಿದ್ದು, ಸ್ಥಳೀಯವಲ್ಲದ ಇಂಥಹ ಇರುವೆಗಳ ಸಾಗಾಟ ನಮ್ಮ ಪರಿಸರಕ್ಕೆ ಹಾನಿ ತಂದೊಡ್ಡುತ್ತವೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

    ಅಲ್ಲದೆ ಇತ್ತೀಚೆಗೆ ಇ-ಕಾಮರ್ಸ್ ಹಾಗೂ ಆನ್‍ಲೈನ್ ಮೂಲಕ ಚೀನಾಕ್ಕೆ ಇಂತಹ ಹಾವುಗಳು, ಹಲ್ಲಿಗಳು ಹಾಗೂ ವಿವಿಧ ರೀತಿಯ ಕೀಟಗಳ ಅಕ್ರಮ ಸಾಗಾಟ ಹೆಚ್ಚಾಗಿದ್ದು, ದೇಶದಲ್ಲಿ ವಿದೇಶಿ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಳ್ಳಸಾಗಣೆಗಾಗಿ ಇ-ಕಾಮರ್ಸ್ ಬಳಕೆ ಆಗುತ್ತಿರುವುದು ಚೀನಾ ಸರ್ಕಾರಕ್ಕೆ ತಲೆನೋವು ತಂದೊಡ್ಡಿದೆ.

  • ಗುಂಡಿ ಸರಿಪಡಿಸಲು ಸ್ವತಃ ರಸ್ತೆಗೆ ಬಂದಿಳಿದ್ವು ಬೃಹತ್ ಕಟ್ಟಿರುವೆಗಳು!

    ಗುಂಡಿ ಸರಿಪಡಿಸಲು ಸ್ವತಃ ರಸ್ತೆಗೆ ಬಂದಿಳಿದ್ವು ಬೃಹತ್ ಕಟ್ಟಿರುವೆಗಳು!

    ಮೈಸೂರು: ನಗರದ ರಸ್ತೆಗಳಲ್ಲಿ ನಿರ್ಮಾಣವಾದ ಗುಂಡಿಗಳನ್ನು ದುರಸ್ಥಿ ಮಾಡಿಸಲು ಬೃಹತ್ ಕಟ್ಟಿರುವೆಗಳನ್ನೇ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಷುವಲ್ ಆಟ್ರ್ಸ್(ಕಾವಾ) ವಿದ್ಯಾರ್ಥಿಗಳು ರಸ್ತೆಗಿಳಿಸಿದ್ದಾರೆ.

    ಹೌದು, ಇದೇನಪ್ಪಾ ರಸ್ತೆ ಗುಂಡಿ ಸರಿ ಮಾಡೋಕೆ ಇರುವೆಗಳಿಂದ ಸಾಧ್ಯವೇ ಎಂದು ಅಚ್ಚರಿಯಾಗಬಹುದು. ಮೈಸೂರಿನ ನಜರ್‍ಬಾದ್ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ರಸ್ತೆಯ ಮಧ್ಯೆ ಎಲ್ಲಿ ನೋಡಿದರೂ ಗುಂಡಿಗಳೇ ಕಾಣಸಿಗುತ್ತದೆ. ಹೀಗಾಗಿ ಕಾವಾ ವಿದ್ಯಾರ್ಥಿಗಳು ಈ ಕುರಿತು ಜಾಗೃತಿ ಮೂಡಿಸಲು ಗುಂಡಿಯಿಂದ ಇರುವೆಗಳು ಹೊರಬರುತ್ತಿರುವಂತೆ ಆಕೃತಿಗಳನ್ನು ರಸ್ತೆಗಳ ಮೇಲೆ ಬಿಡಿಸಿದ್ದಾರೆ.

    ರಸ್ತೆಯಲ್ಲಿ ನಿರ್ಮಾಣವಾದ ಗುಂಡಿಗಳಿಂದ ಅನಾಹುತಗಳು, ಅಪಘಾತಗಳು ಸಂಭವಿಸಬಾರದು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂಬ ಒಂದೊಳ್ಳೆ ಉದ್ದೇಶದಿಂದ ಕಾವಾ ವಿದ್ಯಾರ್ಥಿಗಳು ವಿನೂತನ ಪ್ರಯತ್ನ ಮಾಡಿದ್ದಾರೆ. ರಸ್ತೆ ಮೇಲೆ ಬೃಹತ್ ಕಟ್ಟಿರುವೆಗಳ ಪ್ರತಿಬಿಂಬ ರಚಿಸಿ, ಗುಂಡಿ ಒಳಗಡೆಯಿಂದ ಕಟ್ಟಿರುವೆ ಬರುವಂತಹ ಆಕೃತಿಯನ್ನು ಚಿತ್ರಿಸಿದ್ದಾರೆ. ಈ ಚಿತ್ರವನ್ನು ನೋಡಿದರೆ ನಿಜವಾಗಿಯೂ ಇರುವೆಗಳು ಇರುವಂತೆ ಕಾಣಿಸುವುದರಿಂದ ರಸ್ತೆಯಲ್ಲಿ ಕೊಂಚ ಜಾಗೃತೆಯಿಂದ ಜನರು ಸಂಚರಿಸುತ್ತಾರೆ.

    ಈ ಹೊಸ ತರಹದ ಪ್ರಯತ್ನದಿಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಗಳ ದುರಸ್ಥಿ ಕಾರ್ಯ ಮಾಡಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv