Tag: antiquities

  • ಮೋದಿ ಭೇಟಿ ಬೆನ್ನಲ್ಲೇ 297 ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ

    ಮೋದಿ ಭೇಟಿ ಬೆನ್ನಲ್ಲೇ 297 ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ

    – ಕಳ್ಳಸಾಗಣೆಯಾಗಿದ್ದ ಪ್ರಾಚೀನ ಕಲಾಕೃತಿಗಳನ್ನು ಮರಳಿ ನೀಡಿದ ಯುಕೆ ಸರ್ಕಾರ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಮೆರಿಕ (America) ಭೇಟಿ ನೀಡಿರುವುದರಿಂದ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಕಳ್ಳಸಾಗಣೆ ವಿರುದ್ಧವೂ ಜಯ ಸಾಧಿಸಿದೆ. ಕಳ್ಳಸಾಗಣೆ ಮಾಡಲಾಗಿದ್ದ 297 ಪುರಾತನ ವಸ್ತುಗಳನ್ನು ಅಮೆರಿಕ ಸರ್ಕಾರ ಭಾರತಕ್ಕೆ (India) ಹಸ್ತಾಂತರಿಸಿದೆ.

    ಸಾಂಸ್ಕೃತಿಕ ಆಸ್ತಿಗಳ ಕಳ್ಳಸಾಗಣೆ ದೀರ್ಘಕಾಲದ ಸಮಸ್ಯೆಯಾಗಿದ್ದು, ಇದು ಇತಿಹಾಸದುದ್ದಕ್ಕೂ ಅನೇಕ ಸಂಸ್ಕೃತಿಗಳು ಮತ್ತು ದೇಶಗಳ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಭಾರತಕ್ಕೆ ಹೊಡೆತ ಬಿದ್ದಿದೆ. ಇದನ್ನೂ ಓದಿ: ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ

    ‘ಸಾಂಸ್ಕೃತಿಕ ಸಂಪರ್ಕವನ್ನು ಆಳಗೊಳಿಸುವುದು ಮತ್ತು ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧದ ಹೋರಾಟವನ್ನು ಬಲಪಡಿಸುವುದಕ್ಕಾಗಿ 297 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಕ್ಕಾಗಿ ನಾನು ಅಧ್ಯಕ್ಷ ಜೋ ಬೈಡನ್ (Joe Biden) ಮತ್ತು ಯುಎಸ್ (US) ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ’ ಎಂದು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹತ್ಯೆ- ಪಶ್ಚಿಮ ಬಂಗಾಳದಲ್ಲಿ ಹಂತಕ ತಲೆಮರೆಸಿಕೊಂಡಿರೋ ಶಂಕೆ

     

    2014 ರಿಂದ ಭಾರತವು ಮರಳಿ ಪಡೆದ ಒಟ್ಟು ಪ್ರಾಚೀನ ವಸ್ತುಗಳ ಸಂಖ್ಯೆ 640 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಸ್‌ನಿಂದ 578 ಪುರಾತನ ವಸ್ತುಗಳು ಭಾರತಕ್ಕೆ ಮರಳಿವೆ. ಇದನ್ನೂ ಓದಿ: ಮಠ, ದೇವಾಲಯಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು: ಮಂತ್ರಾಲಯ ಶ್ರೀ ಒತ್ತಾಯ

    ಭಾರತಕ್ಕೆ ಹಸ್ತಾಂತರಿಸಲಾದ ಕೆಲವು ಗಮನಾರ್ಹ ಪ್ರಾಚೀನ ವಸ್ತುಗಳಲ್ಲಿ ಕ್ರಿ.ಶ 10-11 ನೇ ಶತಮಾನಕ್ಕೆ ಸೇರಿದ ಮಧ್ಯ ಭಾರತದ ಮರಳುಗಲ್ಲಿನ ‘ಅಪ್ಸರೆ’, ಕ್ರಿ.ಶ 15-16 ನೇ ಶತಮಾನಕ್ಕೆ ಸೇರಿದ ಕಂಚಿನ ಜೈನ ತೀರ್ಥಂಕರ, ಕ್ರಿ.ಶ 3-4 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಟೆರಾಕೋಟಾ ಹೂದಾನಿ ಮತ್ತು ಕ್ರಿ.ಪೂ 1 ರಿಂದ 1 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಲ್ಲಿನ ಶಿಲ್ಪ ಸೇರಿವೆ. ಇದನ್ನೂ ಓದಿ: ದಸರಾ ಆನೆ ಸೊಂಡಿಲು, ದಂತ ಹಿಡಿದು ರೀಲ್ಸ್ – ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ

    ಭಾರತಕ್ಕೆ ಹಿಂತಿರುಗಿಸಲಾದ ಕೆಲವು ಪುರಾತನ ವಸ್ತುಗಳಲ್ಲಿ 17-18 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಂಚಿನ ಗಣೇಶ, ಕ್ರಿ.ಶ 15-16 ನೇ ಶತಮಾನದ ಉತ್ತರ ಭಾರತದ ಮರಳುಗಲ್ಲಿನ ಕೆತ್ತಲಾದ ನಿಂತಿರುವ ಬುದ್ಧ, ಕ್ರಿ.ಶ 17-18 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಕಂಚಿನ ವಿಷ್ಣು ಇತರ ಪ್ರಮುಖ ವಸ್ತುಗಳಲ್ಲಿ ಸೇರಿವೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಮರಕ್ಕೆ ಕಾರು ಡಿಕ್ಕಿ ಹೊಡೆದು ಯುವಕ ಸಾವು

    2021 ರಲ್ಲಿ ಮೋದಿ ಅಮೆರಿಕಾಗೆ ಭೇಟಿ ಕೊಟ್ಟಾಗ, 12 ನೇ ಶತಮಾನದ ಸುಂದರವಾದ ಕಂಚಿನ ನಟರಾಜ ಪ್ರತಿಮೆ ಸೇರಿ ಸುಮಾರು 157 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2023 ರಲ್ಲಿ ಅವರ ಯುಎಸ್ ಭೇಟಿಯ ಕೆಲ ದಿನಗಳ ನಂತರ, 105 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದೆ. ಆಸ್ಟ್ರೇಲಿಯಾದಿಂದ 40, ಯುಕೆಯಿಂದ 16 ಕಲಾಕೃತಿಗಳನ್ನು ಮರಳಿ ಪಡೆಯಲಾಗಿದೆ. 2004 ಮತ್ತು 2013 ರ ಅಂತರದಲ್ಲಿ ಕೇವಲ ಒಂದು ಕಲಾಕೃತಿಯನ್ನಷ್ಟೇ ಭಾರತಕ್ಕೆ ಮರಳಿ ತರಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಉತ್ತರ ಭಾರತ ಮೂಲದ ಯುವಕನ ಮೇಲೆ ಆ್ಯಸಿಡ್ ದಾಳಿ

  • ಲೂಟಿಯಾಗಿದ್ದ 5,500 ವರ್ಷಗಳ ಪುರಾತನ ವಸ್ತುಗಳನ್ನು ಭಾರತ, ಪಾಕ್‌ಗೆ ಹಸ್ತಾಂತರಿಸಿದ ನ್ಯೂಯಾರ್ಕ್‌

    ಲೂಟಿಯಾಗಿದ್ದ 5,500 ವರ್ಷಗಳ ಪುರಾತನ ವಸ್ತುಗಳನ್ನು ಭಾರತ, ಪಾಕ್‌ಗೆ ಹಸ್ತಾಂತರಿಸಿದ ನ್ಯೂಯಾರ್ಕ್‌

    ನ್ಯೂಯಾರ್ಕ್: ಲೂಟಿ ಮಾಡಲಾಗಿದ್ದ ನೂರಾರು ಪುರಾತನ ಪ್ರತಿಮೆ, ವಿಗ್ರಹಗಳನ್ನು ಭಾರತ (India) ಮತ್ತು ಪಾಕಿಸ್ತಾನಕ್ಕೆ (Pakistan) ನ್ಯೂಯಾರ್ಕ್‌ (New York) ಪ್ರಾಸಿಕ್ಯೂಟರ್‌ ಆಲ್ವಿನ್‌ ಬ್ರಾಗ್‌ ಹಿಂತಿರುಗಿಸಿದ್ದಾರೆ.

    ಪುರಾತನ ವಸ್ತುಗಳ ಕಳ್ಳಸಾಗಣೆದಾರ, ಮಾಸ್ಟರ್‌ ಮೈಂಡ್‌ ಸುಭಾಷ್‌ ಕಪೂರ್‌ ನೇತೃತ್ವದಲ್ಲಿ ಸುಮಾರು 5,500 ವರ್ಷಗಳಷ್ಟು ಪುರಾತನವಾದ ವಸ್ತುಗಳನ್ನು ಅಮೆರಿಕಗೆ ಸಾಗಿಸಲಾಗಿತ್ತು. ಇದನ್ನೂ ಓದಿ: ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

    ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಕಾಂಬೋಡಿಯಾ, ಇಂಡೋನೇಷಿಯಾ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಮತ್ತು ಕಪೂರ್‌ನ ಬಹುರಾಷ್ಟ್ರೀಯ ತನಿಖೆಯ ಸಂದರ್ಭದಲ್ಲಿ ದೇವಾಲಯಗಳ ಅನೇಕ ಪವಿತ್ರ ಚಿತ್ರಗಳು ಸೇರಿದಂತೆ ಭಾರತದಿಂದ 235 ಪ್ರಾಚೀನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬ್ರಾಗ್‌ನ ಕಚೇರಿ ತಿಳಿಸಿದೆ. ಕಳ್ಳಸಾಗಾಣಿಕೆ ವಸ್ತುಗಳನ್ನು ಮ್ಯಾನ್‌ಹ್ಯಾಟನ್‌ನಲ್ಲಿರುವ ಕಪೂರ್‌ನ ಆರ್ಟ್ ಆಫ್ ದಿ ಪಾಸ್ಟ್ ಗ್ಯಾಲರಿ ಮೂಲಕ ಮಾರಾಟ ಮಾಡಲಾಗಿದೆ ಎಂದು ಕಚೇರಿ ತಿಳಿಸಿದೆ. 12ನೇ ಅಥವಾ 13ನೇ ಶತಮಾನದಿಂದ ಆರ್ಚ್ ಪರಿಕರ ಎಂದು ಕರೆಯಲ್ಪಡುವ ಅಮೃತಶಿಲೆಯ ಶಿಲ್ಪವನ್ನು ಯೇಲ್ ವಿಶ್ವವಿದ್ಯಾಲಯದ ಆರ್ಟ್ ಗ್ಯಾಲರಿ ಹಿಂತಿರುಗಿಸಿದೆ.

    ಸುಮಾರು 4 ಮಿಲಿಯನ್ ಡಾಲರ್ ಮೌಲ್ಯದ ಒಟ್ಟು 307 ವಸ್ತುಗಳನ್ನು ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಬ್ರಾಗ್ ಕಚೇರಿ ತಿಳಿಸಿದೆ. ನ್ಯಾನ್ಸಿ ವೀನರ್ ಅವರು ನಡೆಸಿದ್ದ ಕಳ್ಳಸಾಗಣೆಗಳ ತನಿಖೆಯ ಸಂದರ್ಭದಲ್ಲಿ ಐದು ಭಾರತೀಯ ಪ್ರಾಚೀನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಚೇರಿ ತಿಳಿಸಿದೆ. ಇದನ್ನೂ ಓದಿ: ಇಂದಿಗೆ 8 ಶತಕೋಟಿ ಮೀರಿತು ಜಾಗತಿಕ ಜನಸಂಖ್ಯೆ: ವಿಶ್ವಸಂಸ್ಥೆ

    ಭಾರತಕ್ಕೆ ಹಿಂತಿರುಗಿದ ವಸ್ತುವು 11ನೇ ಶತಮಾನದ ಮಧ್ಯ ಭಾರತದ ದೇವಾಲಯದಿಂದ ಲೂಟಿ ಮಾಡಲಾದ ಗರುಡನೊಂದಿಗೆ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಪ್ರತಿಮೆಯಾಗಿದೆ ಎಂದು ಕಚೇರಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪರಿಶೀಲಿಸಿದ ಮೋದಿ

    ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪರಿಶೀಲಿಸಿದ ಮೋದಿ

    ನವದೆಹಲಿ: ಆಸ್ಟ್ರೇಲಿಯಾದಿಂದ ಇಂದು ಭಾರತಕ್ಕೆ ಮರಳಿದ 9-10ನೇ ಶತಮಾನದ ಹಿಂದಿನ  29 ಪುರಾತನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದರು.

    ಐತಿಹಾಸಿಕ ಹಿನ್ನೆಲೆಯಿರುವ 29 ಪುರಾತನ ವಸ್ತುಗಳನ್ನು ಇಂದು ಆಸ್ಟ್ರೇಲಿಯಾ ಭಾರತಕ್ಕೆ ವಾಪಸ್ ಕಳುಹಿಸಿದೆ. ಈ ಪುರಾತನ ವಸ್ತುಗಳಲ್ಲಿ ಶಿವ ಹಾಗೂ ಅವನ ಶಿಷ್ಯರು, ಭಗವಾನ್ ವಿಷ್ಣು ಮತ್ತು ಅವನ ರೂಪಗಳ ಮೂರ್ತಿ ಜೈನ ಸಂಪ್ರದಾಯ, ಭಾವಚಿತ್ರಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಹೊಂದಿವೆ.

    ಪುರಾತನ ವಸ್ತುಗಳು 9-10ನೇ ಶತಮಾನದ ಹಿಂದಿನಿದ್ದಾಗಿದೆ. ಆಸ್ಟ್ರೇಲಿಯಾದಿಂದ ಮರಳಿದ ಎಲ್ಲಾ ಪುರಾತನ ವಸ್ತುಗಳು ಮರಳು, ಅಮೃತಾಶಿಲೆ, ಕಂಚು, ಹಿತ್ತಾಳೆ, ಕಾಗದಗಳಿಂದ ರಚಿಸಲ್ಪಟ್ಟವಾಗಿದೆ. ಈ ಶಿಲ್ಪಗಳು ಮತ್ತು ವರ್ಣಚಿತ್ರಗಳು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುತ್ತವೆ.

    ಭಾರತವು ಇತರೆ ರಾಷ್ಟ್ರಗಳಿಂದಲೂ ಹಲವಾರು ಪ್ರಾಚೀನ ವಸ್ತುಗಳನ್ನು ಮರಳಿ ತಂದಿದೆ. ಕಳೆದ ಸಪ್ಟೆಂಬರ್‍ನಲ್ಲಿ ಪ್ರಧಾನಿ ಮೋದಿ ಅವರು ಯುಎಸ್‍ನಿಂದ 157 ಕಲಾಕೃತಿಗಳು ಹಾಗೂ ಪ್ರಾಚೀನ ವಸ್ತುಗಳನ್ನು ಮರಳಿ ತಂದಿದ್ದರು. ಇದನ್ನೂ ಓದಿ: 13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಕೌಂಟರ್ ಸ್ಕಾಟ್ ಮಾರಿಸನ್ ಇಂದು ವರ್ಚುವಲ್ ಶೃಂಗಸಭೆಯನ್ನು ನಡೆಸಲಿದ್ದಾರೆ. ಇದನ್ನೂ ಓದಿ: ಯೋಗಿ ಪ್ರಮಾಣವಚನಕ್ಕೂ ಮುನ್ನವೇ ಹೊರಬಿತ್ತು ಸಚಿವ ಆಕಾಂಕ್ಷಿಗಳ ಪಟ್ಟಿ- ರೇಸ್‍ನಲ್ಲಿ ಯಾರಿದ್ದಾರೆ ನೋಡಿ

  • 10 ಲಕ್ಷ ಮೌಲ್ಯದ ಪಂಚಲೋಹ, ಕಂಚಿನ ವಿಗ್ರಹ ಕಳ್ಳತನ – ಆರೋಪಿಗಳು ಅಂದರ್

    10 ಲಕ್ಷ ಮೌಲ್ಯದ ಪಂಚಲೋಹ, ಕಂಚಿನ ವಿಗ್ರಹ ಕಳ್ಳತನ – ಆರೋಪಿಗಳು ಅಂದರ್

    ಮಡಿಕೇರಿ: ಪುರಾತನ ಕಾಲದ ಪಂಚಲೋಹ ಹಾಗೂ ಕಂಚಿನ ವಿಗ್ರಹಗಳು ಸೇರಿದಂತೆ ಕೃಷಿ ಉಪಕರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮಡಿಕೇರಿ ತಾಲೂಕಿನ ಮೂಲದ ಆರೋಪಿಗಳಾದ ಲವ, ಮಂಜ, ರೋಹಿತ್ ಎಂಬವರನ್ನು ಬಂಧಿಸಿದ್ದು, ಸುಮಾರು 10,20,000 ಮೌಲ್ಯ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2020ರಲ್ಲಿ ಮಡಿಕೇರಿ ಸಮೀಪದ ಕರ್ಣಗೇರಿ ಗ್ರಾಮದ ಆಶಾಕುಮಾರ್ ಮುಂಬೈ ಅವರ ಮನೆಯಲ್ಲಿದ್ದ ಸುಮಾರು 6.5 ಲಕ್ಷ ಮೌಲ್ಯದ ವಿವಿಧ ಮಾದರಿಯ ಪುರಾತನ ಪಂಚಲೋಹ ಮತ್ತು ಕಂಚಿನ ವಿಗ್ರಹಗಳನ್ನು ಕಳ್ಳತನ ಆಗಿರುವ ಬಗ್ಗೆ 7-10-2020 ರಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇದನ್ನೂ ಓದಿ: ಹಾನಗಲ್ ಉಪಚುನಾವಣೆ: ಕಾಂಗ್ರೆಸ್‍ನಲ್ಲೂ ಫೈನಲ್ ಆಗಿಲ್ಲ ಅಭ್ಯರ್ಥಿ ಹೆಸರು

    ಈ ಕುರಿತು ಕೊಡಗು ಎಸ್ ಪಿ ಕ್ಷಮಾ ಮಿಶ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಗ್ಗೋಡ್ಲು ಗ್ರಾಮದಲ್ಲಿ ಕಾಫಿ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಕಳವು ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಬಲೆ ಬೀಸಲಾಯಿತು. ಇದೀಗ ಲಕ್ಷಾಂತರ ಮೌಲ್ಯದ ವಿಗ್ರಹಗಳು ಸೇರಿದಂತೆ ಕೃಷಿ ಚಟುವಟಿಕೆಗೆ ಬಳಸುವ ಸುಮಾರು 3 ಲಕ್ಷ ಮೌಲ್ಯದ ಯಂತ್ರೋಪಕರಣಗಳು, 20 ಸಾವಿರ ಮೌಲ್ಯದ ಕಾಫಿ ಬೀಜಗಳನ್ನು ಮತ್ತು ಕಳವು ಮಾಡಲು ಬಳಸುತ್ತಿದ್ದ ಕೆ.ಎ.12 ಎಂಎ 5890 ಓಮ್ನಿ ಕಾರನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಾಂಜ್ರಾ ನದಿಗೆ ಬಿಟ್ಟಿದ್ದ ನೀರು ಬಂದ್ – ನೆಮ್ಮದಿಯ ನಿಟ್ಟುಸಿರು ಬಿಟ್ಟ ರೈತರು

    ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗಜೇಂದ್ರ, ಮಡಿಕೇರಿ ಗ್ರಾಮಾಂತರ ಠಾಣಾ ನಿರೀಕ್ಷಕರಾದ ರವಿಕಿರಣ್, ಪಿಎಸ್ ಐ ಸದಾಶಿವ ಸೇರಿದಂತೆ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.

  • USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

    USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

    ನವದೆಹಲಿ: ಹಿಂದೆ ಕಳವಾಗಿದ್ದ ವಿಗ್ರಹಗಳೆಲ್ಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್‍ನಿಂದ 157 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ತಂದಿದ್ದಾರೆ.

    ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕಲಾಕೃತಿಗಳೆಲ್ಲ ಹಿಂದೆ ಕಳವಾಗಿ, ಯುಎಸ್‍ಗೆ ಸಾಗಿಸಲ್ಪಟ್ಟಿದ್ದವು. ಅದನ್ನೀಗ ಪ್ರಧಾನಿ ಮೋದಿಯವರಿಗೆ ಅಮೆರಿಕ ಹಸ್ತಾಂತರ ಮಾಡಿದೆ. ಈ ಬಗ್ಗೆ ಪ್ರಧಾನಿ ಮೋದಿ (Narendra Modi)ಯವರೂ ಕೂಡ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ.

    ಇದೀಗ ಪ್ರಧಾನಿ ಮೋದಿಯವರು ಭಾರತಕ್ಕೆ ತರಲಿರುವ ಪುರಾತನ ವಸ್ತುಗಳಲ್ಲಿ 12ನೇ ಶತಮಾನದ ಕಂಚಿನ ನಟರಾಜ ವಿಗ್ರಹ, 10ನೇ ಶತಮಾನದ ರೇವಂತ ದೇವರ ಮೂರ್ತಿಗಳು ಇವೆ. ಹೀಗೆ ವಾಪಸ್ ತರಲಾದ 45 ಕಲಾಕೃತಿಗಳು ಸಾಮಾನ್ಯ ಯುಗಕ್ಕಿಂತಲೂ ಮುಂಚಿನವು. 71 ಸಾಂಸ್ಕೃತಿಕ ಕಲಾಕೃತಿಗಳಾಗಿದ್ದು, 60 ಹಿಂದೂ ಧರ್ಮ ಬಿಂಬಕ ಕಲಾಕೃತಿಗಳಾಗಿವೆ. ಇನ್ನು 16 ಕಲಾಕೃತಿಗಳು ಬೌದ್ಧಧರ್ಮಕ್ಕೆ ಸೇರಿದ್ದಾಗಿದ್ದು, 9 ಜೈನಧರ್ಮದ್ದಾಗಿವೆ. ಇದನ್ನೂ ಓದಿ:  ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

    ಕಂಚಿನಿಂದ ಮಾಡಲಾದ ಲಕ್ಷ್ಮೀ ನಾರಾಯಣ ಅಲಂಕೃತ ಮೂರ್ತಿಗಳು, ಬುದ್ಧ, ವಿಷ್ಣು, ಶಿವ-ಪಾರ್ವತಿ ಮತ್ತು 24 ಜೈನ ತೀರ್ಥಂಕರ ಮೂರ್ತಿಗಳ ವಿಗ್ರಹ ಇದೆ. ದೇವರ ವಿಗ್ರಹಗಳ ಹೊರತಾಗಿಯೂ ಕೆಲವು ಸಾಂಸ್ಕೃತಿ ಪ್ರತಿಬಿಂಬಕ ಕಲಾಕೃತಿಗಳಿವೆ. ಮೂರು ತಲೆಯ ಬ್ರಹ್ಮ, ರಥ ಚಾಲನೆ ಮಾಡುತ್ತಿರುವ ಸೂರ್ಯ, ವಿಷ್ಣು, ದಕ್ಷಿಣಾಮೂರ್ತಿಯಾಗಿರುವ ಶಿವ, ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹಗಳು, ತಾರ, ಜೈನ ತೀರ್ಥಂಕರ , ಪದ್ಮಾಸನ ತೀರ್ಥಂಕರ ಮತ್ತು ಜೈನ ಚೌಬಿಸಿ ಮೂರ್ತಿಗಳೂ ಇವೆ. ಇದನ್ನೂ ಓದಿ:  ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ ಟೆಕ್ಕಿ ಸಾವು

    ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಯುಎಸ್ ಪ್ರವಾಸ ಮುಗಿಸಿ, ಅಲ್ಲಿಂದ ಹೊರಟಿದ್ದಾರೆ. ನಿನ್ನೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದರು. ಸೆಪ್ಟೆಂಬರ್ 24ರಂದು ಕ್ವಾಡ್ ಶೃಂಗಸಭೆ (Quad Summit)ಯಲ್ಲಿ ಮಾತನಾಡಿದ್ದರು. ನಿನ್ನೆ (ಸೆಪ್ಟೆಂಬರ್ 25) ಅವರ ಅಮೆರಿಕ ಪ್ರವಾಸ ಮುಕ್ತಾಯಗೊಂಡಿದ್ದು, ಈಗಾಗಲೇ ಅಲ್ಲಿಂದ ಹೊರಟಿದ್ದಾರೆ. ಆದರೆ ಹೀಗೆ ಭಾರತಕ್ಕೆ ಬರುವಾಗ, ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ.