Tag: Antique

  • ಭಾರತಕ್ಕೆ ಸಂಬಂಧಿಸಿದ 105 ಪ್ರಾಚೀನ ವಸ್ತುಗಳನ್ನು ವಾಪಸ್ ನೀಡಿದ ಅಮೆರಿಕ

    ಭಾರತಕ್ಕೆ ಸಂಬಂಧಿಸಿದ 105 ಪ್ರಾಚೀನ ವಸ್ತುಗಳನ್ನು ವಾಪಸ್ ನೀಡಿದ ಅಮೆರಿಕ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಇತ್ತೀಚಿಗಷ್ಟೆ ಅಮೆರಿಕ (America) ದೇಶಕ್ಕೆ ಭೇಟಿ ನೀಡಿದ್ದರು. ಇದಾದ ಕೆಲವೇ ಕೆಲವು ದಿನಗಳಲ್ಲಿ ಭಾರತಕ್ಕೆ ಸಂಬಂಧಿಸಿದ 105 ಪುರಾತನ ವಸ್ತುಗಳನ್ನು (Antique) ಅಮೆರಿಕಾ ಅಧಿಕಾರಿಗಳು ಭಾರತಕ್ಕೆ (India) ಹಸ್ತಾಂತರಿಸಿದ್ದಾರೆ.

    ನ್ಯೂಯಾರ್ಕ್‌ನಲ್ಲಿರುವ (New York) ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ನಡೆದ ವಿಶೇಷ ವಾಪಸಾತಿ ಸಮಾರಂಭದಲ್ಲಿ, ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು (Taranjit Singh Sandhu), ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ (Randhir Jaiswal) ಮತ್ತು ಮ್ಯಾನ್‌ಹ್ಯಾಟನ್ ಜಿಲ್ಲೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೆಲವು ಅಮೂಲ್ಯವಾದ ಭಾರತೀಯ ಪ್ರಾಚೀನ ವಸ್ತುಗಳನ್ನು ಅಮೆರಿಕ ಹಸ್ತಾಂತರಿಸಿತು. ಇದನ್ನೂ ಓದಿ: ಆಸ್ಟ್ರೇಲಿಯಾದ ಬೀಚ್‌ನಲ್ಲಿ ನಿಗೂಢ ವಸ್ತು ಪತ್ತೆ – ಚಂದ್ರಯಾನ-3ರ ಬಿಡಿಭಾಗ?

    ಈ ಸಂದರ್ಭ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ತರಂಜಿತ್ ಸಿಂಗ್ ಸಂಧು, ಭಾರತಕ್ಕೆ ಹಿಂದಿರುಗಿಸಿದ 100ಕ್ಕೂ ಹೆಚ್ಚು ಪುರಾತನ ವಸ್ತುಗಳು ಕೇವಲ ಕಲೆ ಮಾತ್ರವಲ್ಲದೇ ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಧರ್ಮದ ಭಾಗವಾಗಿದೆ. ಕಳೆದು ಹೋದ ಪರಂಪರೆಯನ್ನು ಮತ್ತೆ ಭಾರತಕ್ಕೆ ಹಿಂದಿರುಗಿಸಿದಾಗ, ಅದನ್ನು ಅತ್ಯಂತ ಭಾವನಾತ್ಮಕವಾಗಿ ಸ್ವೀಕರಿಸಲಾಗುತ್ತದೆ. ಅಲ್ಲದೇ ಭಾರತಕ್ಕೆ ಸೇರಿದ ಈ ಪ್ರಾಚೀನ ವಸ್ತುಗಳನ್ನು ಅತೀ ಶೀಘ್ರದಲ್ಲಿ ಭಾರತಕ್ಕೆ ಸಾಗಿಸಲಾಗುವುದು ಎಂದರು. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಒಟ್ಟು 105 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದು, ಅದರಲ್ಲಿ 47 ಕಲಾಕೃತಿಗಳು ಪೂರ್ವ ಭಾರತದಿಂದ, 27 ದಕ್ಷಿಣ ಭಾರತದಿಂದ, 22 ವಸ್ತುಗಳು ಮಧ್ಯ ಭಾರತದಿಂದ, ಉತ್ತರ ಭಾರತದಿಂದ 6 ಮತ್ತು ಪಶ್ಚಿಮ ಭಾರತದಿಂದ 3 ಪುರಾತನ ವಸ್ತುಗಳಿವೆ ಎಂದು ವರದಿಗಳು ತಿಳಿಸಿವೆ. ಈ ಎಲ್ಲಾ ಪ್ರಾಚೀನ ವಸ್ತುಗಳು 2-3ನೇ ಶತಮಾನದಿಂದ 18-19ನೇ ಶತಮಾನದವುಗಳಾಗಿದ್ದು, ಇದನ್ನು ಟೆರಾಕೋಟಾ, ಕಲ್ಲು, ಲೋಹ ಮತ್ತು ಮರದಿಂದ ಮಾಡಲಾಗಿದೆ. ಇದರಲ್ಲಿ ಸುಮಾರು 50 ಕಲಾಕೃತಿಗಳು ಧಾರ್ಮಿಕ (ಹಿಂದೂ ಧರ್ಮ, ಜೈನ ಮತ್ತು ಇಸ್ಲಾಂ) ವಿಷಯಕ್ಕೆ ಸಂಬಂಧಿಸಿದ್ದು, ಉಳಿದವುಗಳು ಸಾಂಸ್ಕೃತಿಕ ಕಲಾಕೃತಿಗಳಾಗಿವೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆಗೆ ಮತ್ತೆ ಹಾನಿ; ರಷ್ಯಾ-ಕ್ರಿಮಿಯಾ ಸಂಪರ್ಕ ಕಡಿತ

    ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಅಲ್ಲದೇ ಪ್ರಾಚೀನ ಕಲಾಕೃತಿಯನ್ನು ಭಾರತಕ್ಕೆ ಮರಳಿಸುವಲ್ಲಿ ಸಹಾಯ ಮಾಡಿದ ಮ್ಯಾನ್‌ಹ್ಯಾಟನ್ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿ ಮತ್ತು ಹೋಮ್‌ಲ್ಯಾಂಡ್ ಅಧಿಕಾರಿಗಳಿಗೆ ತರಂಜಿತ್ ಸಿಂಗ್ ಸಂಧು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ನೇಪಾಳದ ಆಸ್ಪತ್ರೆ-ಶಾಲೆಗಳಿಗೆ ಅಂಬುಲೆನ್ಸ್, ಶಾಲಾ ವಾಹನ ಗಿಫ್ಟ್ ಕೊಟ್ಟ ಭಾರತ

    ಪ್ರಧಾನಿ ಮೋದಿಯವರು 2016ರಲ್ಲಿ ಅಮೆರಿಕಾಗೆ ಭೇಟಿ ನೀಡಿದ್ದಾಗ ಅಮೆರಿಕಾ ಕಡೆಯಿಂದ 16 ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. ಮೋದಿಯವರ 2021ರ ಅಮೆರಿಕಾ ಭೇಟಿಯಲ್ಲಿ ಯುಎಸ್ ಸರ್ಕಾರ ಒಟ್ಟು 157 ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದ್ದು, ಸೆಪ್ಟೆಂಬರ್ 2021ರಲ್ಲಿ ಅದನ್ನು ಭಾರತಕ್ಕೆ ಸಾಗಿಸಲಾಯಿತು. ಈ ಬಾರಿ 105 ಪುರಾತನ ವಸ್ತುಗಳು ಮಾತ್ರವಲ್ಲದೇ 2016ರಿಂದ ಒಟ್ಟು 278 ಸಾಂಸ್ಕೃತಿಕ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರೂಪಾಯಿ, ದಿರ್ಹಾಮ್‌ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಿಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ

    ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ

    ಲಂಡನ್: ಉತ್ತರ ಪ್ರದೇಶದ ಲೊಖಾರಿ ಗ್ರಾಮದ ದೇವಸ್ಥಾನದಿಂದ ಕಾಣೆಯಾದ ಯೋಗಿನಿ ವಿಗ್ರಹ ಇಂಗ್ಲೆಂಡ್‍ನ ಹಳ್ಳಿ ಮನೆಯಲ್ಲಿ ಪತ್ತೆಯಾಗಿದೆ.

    ಉತ್ತರ ಪ್ರದೇಶದ ಲೊಖಾರಿ ಗ್ರಾಮದ ದೇವಸ್ಥಾನದಿಂದ ಮೇಕೆ ದೇವತೆ(ಯೋಗಿನಿ)ಯ ಪುರಾತನ ಭಾರತೀಯ ವಿಗ್ರಹವು 40 ವರ್ಷಗಳ ಹಿಂದೆ ಕಾಣೆಯಾಗಿತ್ತು. ಇಂದು ಆ ವಿಗ್ರಹ ಇಂಗ್ಲೆಂಡ್‍ನ ಹಳ್ಳಿಯ ಮನೆಯೊಂದರ ಉದ್ಯಾನವನದಲ್ಲಿ ಪತ್ತೆಯಾಗಿದ್ದು, ವಿಗ್ರಹ ಶೀಘ್ರದಲ್ಲೇ ಭಾರತಕ್ಕೆ ಮರಳಲಿದೆ.

    ಹಿಂದೂ ಧರ್ಮದಲ್ಲಿನ ದೈವಿಕ ಸ್ತ್ರೀಲಿಂಗವನ್ನು ಉಲ್ಲೇಖಿಸುವ ಯೋಗಿನಿ ವಿಗ್ರಹವು 8ನೇ ಶತಮಾನದಷ್ಟು ಹಿಂದಿನದು. 1970ರ ದಶಕದ ಕೊನೆಯಲ್ಲಿ ಮತ್ತು 1980 ರ ದಶಕದ ಆರಂಭದಲ್ಲಿ ಬಂದಾ ಜಿಲ್ಲೆಯ ಲೋಖಾರಿ ಗ್ರಾಮದಿಂದ ಈ ವಿಗ್ರಹ ಕಾಣೆಯಾಗಿತ್ತು. ಈಗ ಆ ವಿಗ್ರಹ ಪತ್ತೆಯಾಗಿದ್ದು, ಈ ವಾರವೇ ಲಂಡನ್‍ನಲ್ಲಿರುವ ಭಾರತೀಯ ಹೈ ಕಮಿಷನ್ ಭಾರತಕ್ಕೆ ಪ್ರಾಚೀನ ಕಲಾಕೃತಿಯಾದ ಯೋಗಿನಿ ವಿಗ್ರಹವನ್ನು ಹಿಂದಿರುಗಿಸಲು ಎಲ್ಲ ರೀತಿಯ ಅನುಮತಿಯನ್ನು ಪಡೆದುಕೊಳ್ಳಲಾಗಿದೆ. ಅದನ್ನು ಕೆಲವೇ ತಿಂಗಳುಗಳಲ್ಲಿ ಭಾರತದ ಮೂಲ ಸ್ಥಾನದಲ್ಲಿ ಮರುಸ್ಥಾಪಿಸಲಾಗುವುದು ಎಂದು ಶಿಲ್ಪದ ಮರುಸ್ಥಾಪನೆಯನ್ನು ಸಂಪರ್ಕಿಸುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಪ್ರಥಮ ಕಾರ್ಯದರ್ಶಿ ಜಸ್ಪ್ರೀತ್ ಸಿಂಗ್ ಸುಖಿಜಾ ಹೇಳಿದ್ದಾರೆ. ಇದನ್ನೂ ಓದಿ: ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ: ಅನಿಲ್ ಮೆನನ್

    ಎಲ್ಲ ವಿಧಿವಿಧಾನಗಳು ಪೂರ್ಣಗೊಂಡಿವೆ. ಈ ಕಲಾಕೃತಿಯನ್ನು ಭಾರತಕ್ಕೆ ತರಲು ನಾವು ಅಂತಿಮ ಹಂತದಲ್ಲಿದ್ದೇವೆ. ಕ್ರಿಸ್ ಮರಿನೆಲ್ಲೋ ಮತ್ತು ಶ್ರೀ ವಿಜಯ್ ಕುಮಾರ್ ಅವರು ಒಂದೆರಡು ತಿಂಗಳ ಹಿಂದೆ ಈ ಕಲಾಕೃತಿಯನ್ನು ಗುರುತಿಸಲು ಸಹಾಯ ಮಾಡಿದರು. ಯೋಗಿನಿ ವಿಗ್ರಹವನ್ನು ಹೈಕಮಿಷನ್‍ಗೆ ಹಸ್ತಾಂತರಿಸುವುದನ್ನು ಮತ್ತು ಅದರ ಪೂರ್ಣ ವೈಭವವನ್ನು ಪುನಃಸ್ಥಾಪಿಸುವುದನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ ಎಂದು ತಿಳಿಸಿದರು.

    ನ್ಯಾಯವಾದಿ ಮತ್ತು ಆರ್ಟ್ ರಿಕವರಿ ಇಂಟರ್‍ನ್ಯಾಶನಲ್‍ನ ಸಂಸ್ಥಾಪಕರಾದ ಮರಿನೆಲ್ಲೋ ಈ ಕುರಿತು ಮಾತನಾಡಿದ್ದು, ಯುಕೆಯಲ್ಲಿ ವೃದ್ಧೆ ತನ್ನ ಪತಿ ತೀರಿಕೊಂಡ ನಂತರ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು, ತೋಟವನ್ನು ಮಾರಾಟ ಮಾಡಿದ್ದರು. ಈ ವೇಳೆ ಇದರಲ್ಲಿ ಪ್ರಾಚೀನ ವಿಗ್ರಹವು ಸೇರಿಕೊಂಡಿದೆ. ನಂತರ ಈ ತೋಟವನ್ನು ಖರೀದಿಸಿದ ಮಾಲೀಕರ ಕಣ್ಣಿಗೆ ಈ ವಿಗ್ರಹ ಕಂಡುಬಂದಿದ್ದು, ಪರಿಣಾಮ ಅವರು ತನಿಖೆ ಮಾಡಲು ನಮ್ಮನ್ನು ಸಂಪರ್ಕಿಸಿದರು. ಈ ಮನೆಯನ್ನು ಅವರು 15 ವರ್ಷಗಳ ಹಿಂದೆ ಖರೀದಿಸಿದ್ದು, ತೋಟದಲ್ಲೇ ಈ ವಿಗ್ರಹ ಇತ್ತು ಅಂತ ಅವರು ತಿಳಿಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

    ನಂತರ ನಾನು ಭಾರತದ ಕಳೆದುಹೋದ ಕಲಾಕೃತಿಗಳನ್ನು ಮರುಸ್ಥಾಪಿಸುವಲ್ಲಿ ಕೆಲಸ ಮಾಡುವ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಸಂಸ್ಥೆಯ ಸಹ-ಸಂಸ್ಥಾಪಕ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿದೆ. ನಂತರ ಅವರು ಈ ವಿಗ್ರಹ ಉತ್ತರ ಪ್ರದೇಶದಿಂದ ಕಾಣೆಯಾದ ‘ಯೋಗಿನಿ’ ವಿಗ್ರಹ ಎಂದು ಗುರುತಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

  • ಚೌವೀಸ ತೀರ್ಥಂಕರರ ಪುರಾತನ ಕಾಲದ ವಿಗ್ರಹ ಪತ್ತೆ

    ಚೌವೀಸ ತೀರ್ಥಂಕರರ ಪುರಾತನ ಕಾಲದ ವಿಗ್ರಹ ಪತ್ತೆ

    ಧಾರವಾಡ: ಬಸದಿ ಜಾಗದಲ್ಲಿ ಮುನಿ ನಿವಾಸ ನಿರ್ಮಾಣಕ್ಕೆ ಅಗೆಯುವ ಸಮಯದಲ್ಲಿ ಚೌವೀಸ ತೀರ್ಥಂಕರರ ಪುರಾತನ ಕಾಲದ ವಿಗ್ರಹ ಪತ್ತೆಯಾಗಿದೆ.

    ಜಿಲ್ಲೆಯ ಕೊಟಬಾಗಿ ಗ್ರಾಮದಲ್ಲಿ ಹಳೆಯ ಬಸದಿ ಜಾಗದಲ್ಲಿ ಮುನಿ ನಿವಾಸಕ್ಕಾಗಿ ಜಾಗವನ್ನು ಅಗೆಯಲಾಗುತ್ತಿತ್ತು. ಈ ವೇಳೆ ಸುಮಾರು 10 ಅಡಿ ಆಳದಲ್ಲಿ ಚೌವೀಸ ತೀರ್ಥಂಕರರ ಪುರಾತನ ಮೂರ್ತಿಯು ದೊರೆತಿದೆ. ಈ ಮೂರ್ತಿ 8ನೇ ಶತಮಾನಕ್ಕಿಂತ ಹಳೆಯದಾಗಿರಬಹುದೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆ- ಎಸ್.ಎಂ.ಕೃಷ್ಣಾರನ್ನು ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ

    ಇದೇ ಜಾಗದಲ್ಲಿ ಕೆಲವು ವರ್ಷಗಳ ಹಿಂದೆ ಭಗವಾನ ಆದಿನಾಥರ ಹಾಗೂ ಭಗವಾನ ವಿಮಲನಾಥ ತೀರ್ಥಂಕರರ ಮೂರ್ತಿಗಳು ದೊರೆತಿದ್ದವು. ಅಲ್ಲದೆ ಹಳೆಗನ್ನಡದಲ್ಲಿರುವ ಶಾಸನಗಳು ದೊರೆತಿವೆ. ಶ್ರೀ ಪ್ರಸಂಗಸಾಗರ ಮಹಾರಾಜರು ಕೊಟಬಾಗಿ ಗ್ರಾಮದಲ್ಲಿ ಚಾತುರ್ಮಾಸವನ್ನು ಆಚರಿಸುತ್ತಿದ್ದಾರೆ. ಜಿನಬಿಂಬ ನೋಡಲು ಗ್ರಾಮದ ಹಳೆಯ ಬಸದಿ ಕಡೆ ಜನಸಾಗರ ಹರಿದುಬರುತ್ತಿದೆ.