Tag: Antigua

  • 95 ನಿಮಿಷ, 45 ಎಸೆತ ಎದುರಿಸಿದ್ರು ಡಕೌಟ್ – ಕಳಪೆ ದಾಖಲೆ ಬರೆದ ವಿಂಡೀಸ್ ಆಟಗಾರ

    95 ನಿಮಿಷ, 45 ಎಸೆತ ಎದುರಿಸಿದ್ರು ಡಕೌಟ್ – ಕಳಪೆ ದಾಖಲೆ ಬರೆದ ವಿಂಡೀಸ್ ಆಟಗಾರ

    ಆಂಟಿಗುವಾ: ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಆಟಗಾರ ಮಿಗುಯೆಲ್ ಕಮ್ಮಿನ್ಸ್ ಕಳಪೆ ದಾಖಲೆಗೆ ಕಾರಣರಾಗಿದ್ದು, ತಂಡದ ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

    ಪಂದ್ಯದಲ್ಲಿ ಬರೋಬ್ಬರಿ 95 ನಿಮಿಷ ಕ್ರಿಸ್‍ನಲ್ಲಿದ್ದ ಕಮ್ಮಿನ್ಸ್ 45 ಎಸೆತಗಳನ್ನು ಎದುರಿಸಿದ್ದರು. ಆದರೆ ರನ್ ಖಾತೆ ತೆರೆಯುವಲ್ಲಿ ಮಾತ್ರ ವಿಫಲರಾಗಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಮಯ ಕ್ರಿಸ್‍ನಲ್ಲಿದ್ದು ರನ್ ಗಳಿಸದೆ ಔಟಾದ 2ನೇ ಆಟಗಾರ ಎಂಬ ಕಳಪೆ ಸಾಧನೆಯನ್ನು ಮಾಡಿದರು. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಜಾಫ್ ಅಲೋಟ್ ಮೊದಲ ಸ್ಥಾನ ಪಡೆದಿದ್ದು, 1999 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 101 ನಿಮಿಷ ಬ್ಯಾಟಿಂಗ್ ನಡೆಸಿ ಡಕೌಟ್ ಆಗಿದ್ದರು. 2000ರ ಬಳಿಕ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಜೇಮ್ಸ್ ಆಂಡರ್ಸನ್ ಶ್ರೀಲಂಕಾ ವಿರುದ್ಧ 2014 ರಲ್ಲಿ ನಡೆದ ಪಂದ್ಯಲ್ಲಿ 55 ಎಸೆತ ಎದುರಿಸಿ ರನ್ ಗಳಿಸದೆ ಔಟಾಗಿದ್ದರು.

    260 ರನ್ ಮುನ್ನಡೆ: ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 260 ರನ್ ಮುನ್ನಡೆಯನ್ನು ಪಡೆದಿದ್ದು, 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 185 ಗಳಿಸಿದೆ.

    ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ 297 ರನ್ ಗಳಿಗೆ ಉತ್ತರವಾಗಿ ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 222 ರನ್ ಗಳಿಗೆ ಅಲೌಟಯ್ತು. 189 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು 3 ದಿನದಾಟ ಆರಂಭಿಸಿದ ವಿಂಡೀಸ್ 33 ರನ್ ಪೇರಿಸಿ ಅಲೌಟ್ ಆಯ್ತು. ಟೀಂ ಇಂಡಿಯಾ ಪರ ಇಶಾಂತ್ 5 ವಿಕೆಟ್, ಶಮಿ ಹಾಗೂ ಜಡೇಜಾ ತಲಾ 2, ಬುಮ್ರಾ 1 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಪರ ಕ್ರಮವಾಗಿ 51, 53 ರನ್ ಗಳಿಸಿರುವ ಕೊಹ್ಲಿ ಹಾಗೂ ರಹಾನೆ 4ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • ಆರ್.ಅಶ್ವಿನ್, ರೋಹಿತ್‍ಗೆ ಕೊಕ್ ನೀಡಿದ ಕೊಹ್ಲಿ

    ಆರ್.ಅಶ್ವಿನ್, ರೋಹಿತ್‍ಗೆ ಕೊಕ್ ನೀಡಿದ ಕೊಹ್ಲಿ

    – 17 ವರ್ಷಗಳ ದಾಖಲೆ ಬ್ರೇಕ್ ಮಾಡುತ್ತಾ ವಿಂಡೀಸ್?

    ಆ್ಯಂಟಿಗುವಾ: ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಿಂದ ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

    ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಇನ್ನಿಂಗ್ಸ್ ನ 24 ಓವರ್ ವೇಳೆಗೆ ಭಾರತವು 3 ವಿಕೆಟ್ ನಷ್ಟಕ್ಕೆ 68 ರನ್ ದಾಖಲಿಸಿದೆ. ಮಯಾಂಕ್ ಅಗರ್ವಾಲ್ 5 ರನ್ ಹಾಗೂ ಚೇತೇಶ್ವರ್ ಪೂಜಾರ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮೈದಾನಕ್ಕೆ ಇಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 9 ರನ್ ದಾಖಲಿಸಿ ಪೆವಿಲಿಯನ್ ಸೇರಿಕೊಂಡರು.

    ಆಗಸ್ಟ್ 1 ರಂದು ಪ್ರಾರಂಭವಾದ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಇದು ಉಭಯ ತಂಡಗಳ ಮೊದಲ ಪಂದ್ಯವಾಗಿದೆ. ಭಾರತ ತಂಡವು 17 ವರ್ಷಗಳಿಂದ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿಲ್ಲ. ಜಮೈಕಾದಲ್ಲಿ ನಡೆದ ಪಂದ್ಯದಲ್ಲಿ ಭಾರತವು ಕೊನೆಯದಾಗಿ 2002ರಲ್ಲಿ ಸೋತಿತ್ತು. ಅಂದಿನಿಂದ ಉಭಯ ತಂಡಗಳ ನಡುವೆ 21 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ತಂಡವು 12 ಪಂದ್ಯಗಳನ್ನು ಗೆದ್ದಿದ್ದು, 9 ಪಂದ್ಯಗಳು ಡ್ರಾ ಆಗಿವೆ. ಹಿಂದಿನ ಸರಣಿಯಲ್ಲಿ ಭಾರತವು ವೆಸ್ಟ್ ಇಂಡೀಸ್ ತಂಡವನ್ನು 2-0ರಿಂದ ಸೋಲಿಸಿತ್ತು.

    ಆರ್.ಅಶ್ವಿನ್, 2016ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಸರ್ ವಿವ್ ರಿಚರ್ಡ್ಸ್ ಮೈದಾನದಲ್ಲಿ ಒಂದೇ ಇನಿಂಗ್ಸ್ ನಲ್ಲಿ 7 ವಿಕೆಟ್ ಉರುಳಿಸಿದ್ದರು. ಅಷ್ಟೇ ಅಲ್ಲದೆ ಶತಕವನ್ನೂ ಬಾರಿಸಿದ್ದರು. ಇಂತಹ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಗತಕಾಲದ ವೈಭವಕ್ಕೆ ಮರಳಲು ಹಾತೊರೆಯುತ್ತಿದ್ದರು. ಆದರೆ ಏಕೈಕ ಸ್ಪಿನ್ನರ್ ತಂತ್ರಗಾರಿಕೆಗೆ ಮುಂದಾದ ನಾಯಕ ಕೊಹ್ಲಿ ರವೀಂದ್ರ ಜಡೇಜಾ ಅವರಿಗೆ ಮಣೆ ಹಾಕಿದ್ದಾರೆ. ಇದರಿಂದಾಗಿ ರವಿಚಂದ್ರನ್ ಅಶ್ವಿನ್ ಹಾಗೂ ಕುಲ್‍ದೀಪ್ ಯಾದವ್ ಅವಕಾಶ ವಂಚಿತವಾಗಿದ್ದಾರೆ.

    ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ಆರಂಭಿಕವಾಗಿ ಕಣಕ್ಕೆ ಇಳಿಸುವಂತೆ ಈ ಹಿಂದೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಸಲಹೆ ನೀಡಿದ್ದರು. ಆದರೆ ರೋಹಿತ್ ಶರ್ಮಾರನ್ನು ಈ ಪಂದ್ಯದಲ್ಲಿ ಕೈಬಿಟ್ಟಿರುವು ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಅವರು ಆರಂಭಿಕರಾಗಿ ಕಣಕ್ಕೆ ಇಳಿದರು.

    ಜಸ್‍ಪ್ರಿತ್ ಬುಮ್ರಾ:
    ವಿಶ್ರಾಂತಿಯಲ್ಲಿದ್ದ ಬೌಲರ್ ಜಸ್‍ಪ್ರಿತ್ ಬುಮ್ರಾ ಇದೀಗ ತಂಡಕ್ಕೆ ಮರಳಿದ್ದಾರೆ. ಈ ಮೂಲಕ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ಬಂದಿದ್ದು, ದೊರಕಿದಂತಾಗಿದೆ. ಆದರೆ ಅಭ್ಯಾಸ ಪಂದ್ಯದಲ್ಲಿ ತಲಾ 3 ವಿಕೆಟ್ ಉರುಳಿಸಿರುವ ಉಮೇಶ್ ಯಾದವ್ ಮತ್ತು ಕುಲ್ದೀಪ್ ಯಾದವ್ ಟೀಂನ 11ರ ಪಟ್ಟಿಯಿಂದ ಹೊರಗುಳಿದಿದ್ದಾರೆ.

    ಕೊಹ್ಲಿ ನಾಯಕತ್ವದಲ್ಲಿ ದಾಖಲೆ:
    ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 47ನೇ ಟೆಸ್ಟ್ ಪಂದ್ಯ ಆಡುತ್ತಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ 46 ಪಂದ್ಯಗಳ ಪೈಕಿ 26ರಲ್ಲಿ ಗೆಲುವು ಸಾಧಿಸಿದೆ. ವಿಶೇಷವೆಂದರೆ ಈ 27 ಟೆಸ್ಟ್ ಗಳಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 21 ಪಂದ್ಯಗಳನ್ನು ಗೆದ್ದಿದ್ದು, ಕೇವಲ 1 ಪಂದ್ಯದಲ್ಲಿ ಸೋಲು ಕಂಡಿದೆ. ಉಳಿದಂತೆ 4 ಪಂದ್ಯಗಳು ಡ್ರಾ ಆಗಿವೆ. ಗುರುವಾರ ಆರಂಭವಾಗಿರುವ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂಡ್ಯದಲ್ಲಿ ಭಾರತ ಗೆದ್ದರೆ, ಧೋನಿಯೊಂದಿಗೆ ಜಂಟಿಯಾಗಿ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಆಗಲಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡವು 60 ಟೆಸ್ಟ್ ಪಂದ್ಯಗಳ ಪೈಕಿ 26ರಲ್ಲಿ ಜಯಗಳಿಸಿತ್ತು.

    ಎರಡೂ ತಂಡಗಳು
    ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಮಾಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.

    ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾಥ್‍ವೈಟ್, ಡ್ಯಾರೆನ್ ಬ್ರಾವೋ, ಶಾಮರ್ ಬ್ರೂಕ್ಸ್, ಜಾನ್ ಕ್ಯಾಂಪ್‍ಬೆಲ್, ರೋಸ್ಟನ್ ಚೇಸ್, ಶೇನ್ ಡೌರಿಚ್, ಶಾನನ್ ಗೇಬ್ರಿಯಲ್, ಶಿಮ್ರಾನ್ ಹೆಟ್ಮಿಯರ್, ಶೈ ಹೋಪ್, ಕೆಮರ್ ರೋಚ್.