Tag: Anti-Terrorist Squad

  • ಪಾಕಿಸ್ತಾನಕ್ಕೆ ಸೇನಾ ವಾಹನಗಳ ಮಾಹಿತಿ ರವಾನೆ – ಸೇನೆಯ ಮಾಜಿ ಸಿಬ್ಬಂದಿ ಅರೆಸ್ಟ್

    ಪಾಕಿಸ್ತಾನಕ್ಕೆ ಸೇನಾ ವಾಹನಗಳ ಮಾಹಿತಿ ರವಾನೆ – ಸೇನೆಯ ಮಾಜಿ ಸಿಬ್ಬಂದಿ ಅರೆಸ್ಟ್

    ಲಕ್ನೋ: ಪಾಕಿಸ್ತಾನಿ (Pakistan) ಗುಪ್ತಚರ ಸಂಸ್ಥೆ ಐಎಸ್‍ಐಗೆ ಸೇನೆಯ ಚಲನವಲನದ ಮಾಹಿತಿ ರವಾನಿಸಿದ ಆರೋಪದ ಮೇಲೆ ಸೇನೆಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸಿದ್ದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ (Uttar Pradesh) ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) (Anti-Terrorist Squad) ಬಂಧಿಸಿದೆ.

    ಬಂಧಿತ ಆರೋಪಿಯನ್ನು ಶೈಲೇಂದ್ರ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ. ಆತ ಅರುಣಾಚಲ ಪ್ರದೇಶದಲ್ಲಿ ಸೇನೆಯಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಾನೆ. ಈ ಬಗ್ಗೆ ಲಕ್ನೋದಲ್ಲಿ ಅಧಿಕಾರಿಗಳು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಜ.22 ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿರೀಕ್ಷೆ: ನೃಪೇಂದ್ರ ಮಿಶ್ರಾ

    ಬಂಧಿತ ಆರೋಪಿ ಸೇನಾ ವಾಹನಗಳು ಇರುವ ಸ್ಥಳ ಮತ್ತು ಚಲನವಲನಕ್ಕೆ ಸಂಬಂಧಿಸಿದ ಸೇನೆಯ ಮಾಹಿತಿಯನ್ನು, ಛಾಯಾಚಿತ್ರಗಳನ್ನು ಐಎಸ್‍ಐಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ವಿಚಾರಣೆಗಾಗಿ ಲಕ್ನೋದ ಎಟಿಎಸ್ ಪ್ರಧಾನ ಕಚೇರಿಗೆ ಕರೆಸಲಾಗಿದೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಟಿಎಸ್ ತಂಡವು ಆರೋಪಿಯ ವಾಟ್ಸಾಪ್ ಮತ್ತು ಫೇಸ್‍ಬುಕ್ ಮೂಲಕ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂಬುದು ದೃಢಪಟ್ಟಿದೆ. ನಕಲಿ ಗುರುತಿನೊಂದಿಗೆ ಐಎಸ್‍ಐಗಾಗಿ ಕೆಲಸ ಮಾಡುತ್ತಿದ್ದ ಹರ್ಲೀನ್ ಕೌರ್ ಎಂಬ ಮಹಿಳೆಯೊಂದಿಗೆ ಸಿಂಗ್ ಫೇಸ್‍ಬುಕ್ ಮೂಲಕ ಸಂಪರ್ಕದಲ್ಲಿದ್ದಾನೆ. ಅಲ್ಲದೇ ಮತ್ತೋರ್ವ ಐಎಸ್‍ಐ ಏಜೆಂಟ್ ಜೊತೆ ಕೂಡ ಸಂಪರ್ಕದಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಹೆಚ್ಚಿದ ಪ್ರತಿಭಟನೆಯ ಕಾವು – ಮತ್ತೆ ಇಂಟರ್‌ನೆಟ್ ಸ್ಥಗಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗುಜರಾತ್‍ನಲ್ಲಿ ಮಹಿಳೆ ಸೇರಿ ನಾಲ್ವರು ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅರೆಸ್ಟ್

    ಗುಜರಾತ್‍ನಲ್ಲಿ ಮಹಿಳೆ ಸೇರಿ ನಾಲ್ವರು ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅರೆಸ್ಟ್

    ಗಾಂಧಿನಗರ: ಮಹಿಳೆ ಸೇರಿ ನಾಲ್ವರು ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು (Islamic State) ಭಯೋತ್ಪಾದನಾ ನಿಗ್ರಹ ದಳ (ATS) ಗುಜರಾತ್‍ನ (Gujarat) ಪೋರಬಂದರ್‌ನಲ್ಲಿ (Porbandar) ಬಂಧಿಸಿದೆ.

    ಬಂಧಿತ ನಾಲ್ವರು ಆರೋಪಿಗಳು ಐಎಸ್ ಉಗ್ರಗಾಮಿ ಘಟಕದ ಭಾಗವಾಗಿದ್ದಾರೆ. ಕಳೆದ ಒಂದು ವರ್ಷದಿಂದ ಪರಸ್ಪರ ಸಂಪರ್ಕದಲ್ಲಿದ್ದಾರೆ. ಅಲ್ಲದೇ ದೇಶ ತೊರೆದು ಐಎಸ್ ಸೇರಲು ಯೋಜನೆ ರೂಪಿಸಿದ್ದರು. ಅವರ ಚಲನವಲನವನ್ನು ಎಟಿಎಸ್ (Anti-Terrorist Squad) ಗಮನಿಸಿತ್ತು. ಖಚಿತ ಮಾಹಿತಿ ಮೇರೆಗೆ ಡಿಐಜಿ ದೀಪನ್ ಭದ್ರನ್ ಮತ್ತು ಎಸ್ಪಿ ಸುನೀಲ್ ಜೋಶಿ ನೇತೃತ್ವದಲ್ಲಿ ದಾಳಿ ನಡೆಸಿ ಸುಮೇರಾ ಎಂಬ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ – ಸೇನೆಯಿಂದ ಶೋಧ ಕಾರ್ಯ

    ದಾಳಿ ವೇಳೆ ಸ್ಫೋಟಕ ವಸ್ತುಗಳು ಹಾಗೂ ಐಎಸ್ ಉಗ್ರರ ಬರಹಗಳು ಸಿಕ್ಕಿವೆ. ಆರೋಪಿಗಳು ಪಾಕಿಸ್ತಾನದ (Pakistan) ಗಡಿಯುದ್ದಕ್ಕೂ ಯುವಕರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸಜ್ಜುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟರ್ಕಿ ಹಡಗು ಹೈಜಾಕ್- ಕಾರ್ಯಾಚರಣೆಗಿಳಿದ ಇಟಲಿ ಸೇನಾ ಪಡೆ