Tag: Anti Naxal Force

  • ಛತ್ತೀಸ್‌ಗಢ – ಪ್ರತ್ಯೇಕ ಪ್ರಕರಣದಲ್ಲಿ 22 ನಕ್ಸಲರ ಎನ್‌ಕೌಂಟರ್

    ಛತ್ತೀಸ್‌ಗಢ – ಪ್ರತ್ಯೇಕ ಪ್ರಕರಣದಲ್ಲಿ 22 ನಕ್ಸಲರ ಎನ್‌ಕೌಂಟರ್

    ರಾಯ್‌ಪುರ: ಛತ್ತೀಸ್‌ಗಢದ (Chhattisgarh) ಬಿಜಾಪುರ ಮತ್ತು ಕಂಕೇರ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆಯಲ್ಲಿ 22 ನಕ್ಸಲರು ಹತರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಬಿಜಾಪುರದಲ್ಲಿ (Bijapur) ದಾಂತೇವಾಡ (Dantewada) ಜಿಲ್ಲೆಯ ಗಡಿಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಗಂಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿ 2 ತಂಡಗಳಾಗಿ ಕಾರ್ಯಾಚರಣೆ ಮಾಡಿದಾಗ ಗುಂಡಿನ ಚಕಮಕಿ ನಡೆದಿದೆ. ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್‌ ರಾಜಣ್ಣ ಬಾಂಬ್‌

    18 ನಕ್ಸಲರ ಶವಗಳು, ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಕೇರ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮಾ.30ರಂದು ರಿಲೀಸ್‌ ಆಗಲಿದೆ ಸಲ್ಮಾನ್‌ ಖಾನ್‌ ನಟನೆಯ ‘ಸಿಕಂದರ್‌’ ಸಿನಿಮಾ

    ರಾಜ್ಯ ಕಾರ್ಯಪಡೆ ಮತ್ತು ಜಿಲ್ಲಾ ಮೀಸಲು ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ವಿಶೇಷ ಪಡೆಗಳ ಕಾರ್ಯಾಚರಣೆ ಎರಡೂ ಸ್ಥಳಗಳಲ್ಲಿ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ರಾಜ್ಯದಲ್ಲಿ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ: ಸಿಎಂ ಘೋಷಣೆ

    ರಾಜ್ಯದಲ್ಲಿ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ: ಸಿಎಂ ಘೋಷಣೆ

    – ಸೈಬರ್ ಅಪರಾಧ ವಿಭಾಗಕ್ಕೆ 5 ಕೋಟಿ ರೂ.

    ಬೆಂಗಳೂರು: ರಾಜ್ಯವು ನಕ್ಸಲ್ ಮುಕ್ತವಾಗಿರುವುದರಿಂದ ನಕ್ಸಲ್ ನಿಗ್ರಹ ಪಡೆಯನ್ನು (Anti Naxal Force) ವಿಸರ್ಜನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದ್ದಾರೆ.

    ದಾಖಲೆಯ 16ನೇ ಬಜೆಟ್ ಮಂಡಿಸಿದ ಸಿಎಂ, ನಮ್ಮ ಸರ್ಕಾರದ ಅವಧಿಯಲ್ಲಿ 6 ಜನ ಭೂಗತ ನಕ್ಸಲರು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿಯ ಮುಂದೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ವಿಸರ್ಜನೆ ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪ್ರಾಜೆಕ್ಟ್‌ ಮೆಜೆಸ್ಟಿಕ್‌ – ಹೈಟೆಕ್‌ ಆಗಲಿದೆ ಬಸ್‌ ನಿಲ್ದಾಣ

    ಶರಣಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಸೇರ್ಪಡೆಗೊಳಿಸಲು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು 10 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ರೂಪಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಸ್ಕೂಟಿಯಿಂದ ಹಣ ಕದ್ದು ಕಳ್ಳರು ಪರಾರಿ – 1.40 ಲಕ್ಷ ಹಣ ಕಳ್ಳತನ

    ಸೈಬರ್ ಅಪರಾಧ ವಿಭಾಗಕ್ಕೆ 5 ಕೋಟಿ ರೂ.:
    ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಮತ್ತು ಮಾದಕದ್ರವ್ಯ ಬಳಕೆ ಮತ್ತು ವ್ಯಾಪಾರದ ವಿರುದ್ಧ ಕಠಿಣಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮಾದಕ ದ್ರವ್ಯ ಮತ್ತು ಸೈಬರ್ ಅಪರಾಧ ವಿಭಾಗವನ್ನು ಬಲಗೊಳಿಸಲು 5 ಕೋಟಿ ರೂ. ಅನುದಾನ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿಯ ಬಜೆಟ್ ಇದು, ಗ್ಯಾರಂಟಿ ಮೀರಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ: ಸಿಎಂ

  • ನಕ್ಸಲರು ಊಟ ಮಾಡಿದ್ದ ಮನೆಗೆ ಎಎನ್‍ಎಫ್ ತಂಡ ಭೇಟಿ – ಚುರುಕುಗೊಂಡ ಕೂಂಬಿಂಗ್

    ನಕ್ಸಲರು ಊಟ ಮಾಡಿದ್ದ ಮನೆಗೆ ಎಎನ್‍ಎಫ್ ತಂಡ ಭೇಟಿ – ಚುರುಕುಗೊಂಡ ಕೂಂಬಿಂಗ್

    ಚಿಕ್ಕಮಗಳೂರು: ಕೊಪ್ಪದ (Koppa) ಕಾಡಂಚಿನ ಗ್ರಾಮದಲ್ಲಿ ನಕ್ಸಲರು ಭೇಟಿ ನೀಡಿದ್ದ ಮನೆಗೆ ಎಎನ್‍ಎಫ್ (Anti-Naxal Force) ತಂಡ ತೆರಳಿ ಮಾಹಿತಿ ಕಲೆಹಾಕಿದೆ.

    ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬೇಗೌಡ ಎಂಬವರ ಮನೆಗೆ ನಕ್ಸಲರು ಭೇಟಿ ನೀಡಿದ್ದರು. ಈ ವೇಳೆ ಗನ್ ತೋರಿಸಿ ಬೆದರಿಸಿ ಅಡುಗೆ ಮಾಡಿಸಿಕೊಂಡು ಊಟ ಮಾಡಿ ಹೋಗಿದ್ದರು. ಈ ವಿಚಾರ ತಿಳಿದ ಪೊಲೀಸರು (Police) ಹಾಗೂ ಎಎನ್‍ಎಫ್ ತಂಡ ಮನೆಗೆ ತೆರಳಿ ಪರಿಶೀಲನೆ ನಡೆಸಿದೆ.

    ಕೊಪ್ಪ ಡಿವೈಎಸ್‍ಪಿ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ಎಷ್ಟು ಜನ ಬಂದಿದ್ದರು? ಅವರ ಬಳಿ ಏನೇನಿತ್ತು? ಏನು ಮಾತಾಡಿದ್ದಾರೆ. ಅಡುಗೆ ಏನು ಮಾಡಿದ್ರಿ, ಎಷ್ಟು ಜನಕ್ಕೆ ಮಾಡಿಕೊಟ್ಟಿದ್ದೀರಿ? ಎಂದು ವಿಚಾರಿಸಲಾಗಿದೆ.

    ಊಟ ಮಾಡಿ ಹೋಗುವಾಗ ಪೊಲೀಸರು ಬರುತ್ತಾರೆ ಎಂದು ನಕ್ಸಲರು ಗನ್ ಬಿಟ್ಟು ಹೋಗಿದ್ದಾರೆ. ನಕ್ಸಲರು ಹೋದ ಮಾರ್ಗದಲ್ಲಿ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಕೊಪ್ಪ ತಾಲೂಕಿನ ಅರಣ್ಯ ಭಾಗಗಳಲ್ಲಿ ಪೊಲೀಸರು ಹಾಗೂ ಎಎನ್‍ಎಫ್ ತಂಡ ಹೈ ಅಲರ್ಟ್ ಆಗಿದೆ.

  • ಮಲೆನಾಡಲ್ಲಿ ನಕ್ಸಲ್ ಹೆಜ್ಜೆ – ಪತ್ರ ತರಲು ಹೋಗಿ ಸಿಕ್ಕಿಬಿದ್ರಾ ಅನುಕಂಪಿತರು?

    ಮಲೆನಾಡಲ್ಲಿ ನಕ್ಸಲ್ ಹೆಜ್ಜೆ – ಪತ್ರ ತರಲು ಹೋಗಿ ಸಿಕ್ಕಿಬಿದ್ರಾ ಅನುಕಂಪಿತರು?

    ಚಿಕ್ಕಮಗಳೂರು: ಜಿಲ್ಲೆಯ (Chikmagaluru) ಮಲೆನಾಡು ಭಾಗದ ದಟ್ಟ ಕಾನನದಲ್ಲಿ ಮತ್ತೆ ಕೆಂಪು ಉಗ್ರರ ಹೆಜ್ಜೆ ಗುರುತುಗಳು ಸದ್ದು ಮಾಡತೊಡಗಿದೆ. 2013-14ರಲ್ಲಿ ಏಳೆಂಟು ಜನ ನಕ್ಸಲರು ಶರಣಾಗತರಾದ ಮೇಲೆ ಮಲೆನಾಡಲ್ಲಿ ಬಹುತೇಕ ನಕ್ಸಲ್ ಚಟುವಟಿಕೆ ಕ್ಷೀಣಗೊಂಡಿತ್ತು. ಇದೀಗ ಮತ್ತೆ ಮಲೆನಾಡ ಕಾಡುಗಳಲ್ಲಿ ನಕ್ಸಲರ ಹೆಜ್ಜೆ ಸದ್ದು ಮಾಡುತ್ತಿದೆ.

    ಕಳೆದ ವಾರ ಶೃಂಗೇರಿ (Sringeri) ತಾಲೂಕಿನ ಕಾಡಂಚಿನ ಕುಗ್ರಾಮಕ್ಕೆ ಭೇಟಿ ನೀಡಿದ್ದ ನಕ್ಸಲರ ತಂಡ ಮನೆಯೊಂದರಲ್ಲಿ ಊಟ ಮಾಡಿ, ಮಾತನಾಡಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಕೊಪ್ಪ (Koppa) ತಾಲೂಕಿನ ಮೇಗೂರು ಸಮೀಪದ ಕುಗ್ರಾಮ ಯಡಗುಂದದ ಇಬ್ಬರು ಯುವಕರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಡಾಗ್ ಸ್ಕ್ವಾಡ್ ಜೊತೆ ಎಎನ್ಎಫ್ ಸಿಬ್ಬಂದಿ ಕಾಡಲ್ಲಿ ನಕ್ಸಲ್ ಹೆಜ್ಜೆ ಹುಡುಕುತ್ತಿದ್ದಾರೆ.

    ವಶಕ್ಕೆ ಪಡೆಯಲಾದ ಇಬ್ಬರು ಯುವಕರು ಬೆಂಗಳೂರಿಗೆ ಕೇರಳದಿಂದ ಬಂದಿದ್ದ ಹಾರ್ಡ್ ಕೋರ್ ನಕ್ಸಲ್ ನಾಯಕಿ ಮುಂಡಗಾರು ಲತಾಳಿಗೆ ಸಂಬಂಧಪಟ್ಟ ಪತ್ರವನ್ನ ತರಲು ಹೋಗಿದ್ದರು ಎನ್ನಲಾಗಿದೆ. ಇನ್ನೂ ಶೃಂಗೇರಿ, ಕೊಪ್ಪ ಹಾಗೂ ಕಳಸ ತಾಲೂಕಿನಲ್ಲಿ ವ್ಯಾಪಿಸಿಕೊಂಡಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಎಎನ್ಎಫ್ (Anti Naxal Force) ಸಿಬ್ಬಂದಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ಚಿಕ್ಕಮಗಳೂರಲ್ಲಿ ನಕ್ಸಲರ ಓಡಾಟದ ಶಂಕೆ – ಕೂಂಬಿಂಗ್ ಚುರುಕು

    ಚಿಕ್ಕಮಗಳೂರಲ್ಲಿ ನಕ್ಸಲರ ಓಡಾಟದ ಶಂಕೆ – ಕೂಂಬಿಂಗ್ ಚುರುಕು

    ಚಿಕ್ಕಮಗಳೂರು: ಪಶ್ಚಿಮಘಟ್ಟದ ತಪ್ಪಲಿನಲ್ಲಿ ಮತ್ತೆ ನಕ್ಸಲರು ಓಡಾಟದ ಶಂಕೆ ವ್ಯಕ್ತವಾಗಿದೆ.

    ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಆರು ಜನ ನಕ್ಸಲರು ಓಡಾಡಿದ್ದಾರೆ ಎಂಬ ಮಾಹಿತಿ ಹರಿದಾಡಿದೆ. ಮಾಹಿತಿಯ ಆಧಾರದ ಮೇಲೆ ನಕ್ಸಲ್ ನಿಗ್ರಹ ಪಡೆಯಿಂದ (Anti Naxal Force) ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಂಡಿದೆ.

    ಕಳಸ (Kalasa), ಶೃಂಗೇರಿ (Sringeri) ತಾಲೂಕಿನ ಘಟ್ಟ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಗೊಂಡಿದೆ. ಹಲವು ವರ್ಷಗಳ ಬಳಿಕ ಮಲೆನಾಡಲ್ಲಿ ಮತ್ತೆ ನಕ್ಸಲರ ಓಡಾಟದ ಸದ್ದು ಕೇಳಿದ್ದು, ಈ ಭಾಗಗಳಲ್ಲಿ ಆತಂಕ ಹೆಚ್ಚಿಸಿದೆ.

    ಈ ವರ್ಷ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ (Lok Sabha Election) ಸಮಯದಲ್ಲಿ ಕರಾವಳಿ ಭಾಗದಲ್ಲಿ ನಕ್ಸಲರ (Naxal) ಚಲನವಲನದ ಬಗ್ಗೆ ಶಂಕೆ ಮೂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೊಂಬಾರು ಗ್ರಾಮದ ಚೆರು ಗ್ರಾಮದ ಮನೆಗೆ ಆರು ಮಂದಿ ನಕ್ಸಲರು ಭೇಟಿ ನೀಡಿದ್ದರು ಎನ್ನಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಇದ್ದ ನಕ್ಸಲರು ಮನೆಯಲ್ಲಿ ಊಟ ಮಾಡಿ ದಿನಸಿ ಸಾಮಾಗ್ರಿಗಳನ್ನು ಪಡೆದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಬಳಿಕ ನಕ್ಸಲ್‌ ನಿಗ್ರಹ ದಳ ಮಾಹಿತಿ ಪಡೆದು ಹುಡುಕಾಟ ನಡೆಸಿತ್ತು.

  • ಮಹಿಳೆ ಸೇರಿದಂತೆ 6 ಮಾವೋವಾದಿಗಳನ್ನ ಹೊಡೆದುರಳಿಸಿದ ಆ್ಯಂಟಿ ನಕ್ಸಲ್ ಫೋರ್ಸ್

    ಮಹಿಳೆ ಸೇರಿದಂತೆ 6 ಮಾವೋವಾದಿಗಳನ್ನ ಹೊಡೆದುರಳಿಸಿದ ಆ್ಯಂಟಿ ನಕ್ಸಲ್ ಫೋರ್ಸ್

    ಹೈದರಾಬಾದ್: ಇಂದು ಬೆಳಗ್ಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ವ್ಯಾಪ್ತಿಯಲ್ಲಿ ಆರು ಮಾವೋವಾದಿಗಳನ್ನು ಆ್ಯಂಟಿ ನಕ್ಸಲ್ ಫೋರ್ಸ್ ಹೊಡೆದುರಳಿಸಿದೆ. ಮೃತರಲ್ಲಿ ಓರ್ವ ಮಹಿಳೆ ಸಹ ಒಬ್ಬರು. ಮೃತರು ನಿಷೇಧಿತ ತಂಡ ಸಿಪಿಐ(ಮಾವೋವಾದಿ)ಯ ಸದಸ್ಯರಾಗಿದ್ದರು.

    ಇಂದು ಬೆಳಗ್ಗೆ ಆ್ಯಂಟಿ ನಕ್ಸಲ್ ಫೋರ್ಸ್ ಗ್ರೌಂಡ್ ಮತ್ತು ವಿಶೇಷ ದಳದವರು ಥಿಗ್ಲಮೆಟ್ಟಾ ಗ್ರಾಮದ ವ್ಯಾಪ್ತಿಯಲ್ಲಿ ಸರ್ಚಿಂಗ್ ಆಪರೇಷನ್ ಆರಂಭಿಸಿದ್ದರು. ಈ ವೇಳೆ ಮಾವೋವಾದಿಗಳು ಮತ್ತು ಸರ್ಚಿಂಗ್ ಆಪರೇಷನ್ ತಂಡದ ನಡುವೆ ಗುಂಡಿನ ಕಾಳಗ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಒಟ್ಟು ಆರು ಜನರನ್ನು ಹೊಡೆದುರಳಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಸುರಕ್ಷಬಲ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ಮೃತರ ಬಳಿಯಲ್ಲಿದ್ದ ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸರ್ಚಿಂಗ್ ಆಪರೇಷನ್ ಮುಂದುವರಿದಿದೆ ಎಂದು ಚಿಂತಾಪಲ್ಲೆಯ ಎಎಸ್‍ಪಿ ವಿದ್ಯಾಸಾಗರ್ ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ – ಕೇರಳ ಸಿಎಂಗೆ ಮಾವೋವಾದಿಗಳಿಂದ ಪತ್ರ