Tag: anti hijab protest

  • ಹಿಜಬ್ ವಿರೋಧಿ ಹೋರಾಟಕ್ಕೆ ಬೆಂಬಲ – ಆಸ್ಕರ್ ವಿಜೇತ ಸಿನಿಮಾದ ಖ್ಯಾತ ನಟಿ ಅರೆಸ್ಟ್

    ಹಿಜಬ್ ವಿರೋಧಿ ಹೋರಾಟಕ್ಕೆ ಬೆಂಬಲ – ಆಸ್ಕರ್ ವಿಜೇತ ಸಿನಿಮಾದ ಖ್ಯಾತ ನಟಿ ಅರೆಸ್ಟ್

    ಟೆಹ್ರಾನ್: ಕಳೆದ ಮೂರು ತಿಂಗಳಿನಿಂದ ಹಿಜಬ್ ವಿರೋಧಿಸಿ (Anti Hijab Protest) ಇರಾನ್‌ನಲ್ಲಿ (Iran) ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಖ್ಯಾತ ಇರಾನಿ ನಟಿಯನ್ನ ಪೊಲೀಸರು (Police) ಬಂಧಿಸಿದ್ದಾರೆ.

    ಸುಳ್ಳು ವಿಷಯಗಳನ್ನು ಬಿತ್ತಿದ್ದಾರೆ ಹಾಗೂ ಅವ್ಯವಸ್ಥೆಯನ್ನು ಪ್ರಚೋದಿಸಿದ್ದಾರೆ ಎನ್ನುವ ಆರೋಪದ ಮೇಲೆ ಇರಾನಿ ನಟಿ ತರನೆಹ್ ಅಲಿದೋಸ್ತಿ (38) (Taraneh Alidoosti) ಅವರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಕೇಸರಿ ಬಿಕಿನಿ ವಿವಾದ: ವಿರೋಧಿಗಳಿಗೆ ಸಮಸ್ಯೆಯಿದೆ ಎಂದ ಸಂಸದೆ ನುಸ್ರತ್ ಟ್ರೋಲ್

    ಇದೇ ತಿಂಗಳ ಡಿಸೆಂಬರ್ 8 ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. `ನೀವು ಮೌನವಾಗಿದ್ದೀರಿ ಅಂದರೆ, ಎದುರಾಳಿಯ ದಬ್ಬಾಳಿಕೆಯನ್ನು ಬೆಂಬಲಿಸಿದಂತೆ. ಈ ರಕ್ತಪಾತವನ್ನು ನೋಡುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರೋದು ಮಾನವೀಯತೆಗೆ ಮಾಡಿದ ಅಪಮಾನ’ ಎಂದು ಪೋಸ್ಟ್ ಹಾಕಿದ್ದರು. ಅವರು ಪೋಸ್ಟ್ ಹಾಕಿದ್ದ ದಿನವೇ ಇರಾನ್‌ನಲ್ಲಿ 23 ವರ್ಷದ ಯುವಕನೊಬ್ಬನನ್ನ ಗಲ್ಲಿಗೇರಿಸಲಾಗಿತ್ತು. ಇದನ್ನೂ ಓದಿ: ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿ

    ತರನೆಹ್ ಅಲಿದೋಸ್ತಿ ಚಿಕ್ಕ ವಯಸ್ಸಿನಿಂದಲೂ ಇರಾನಿನ ಚಿತ್ರರಂಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. 2016ರಲ್ಲಿ ಆಸ್ಕರ್ ಪ್ರಶಸ್ತಿ ಪಡೆದ `ದಿ ಸೇಲ್ಸ್‌ಮ್ಯಾನ್‌’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ `ಲೀಲಾ ಬ್ರದರ್ಸ್’ ಚಿತ್ರದಲ್ಲೂ ಅವರು ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ

    ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ

    ಟೆಹ್ರಾನ್: ಹಿಜಬ್ ವಿರೋಧಿ ಭಾರೀ ಪ್ರತಿಭಟನೆ (Anti Hijab Protest) ನಡೆಯುತ್ತಿರುವ ಇರಾನ್‌ನಲ್ಲಿ (Iran) ಮೊದಲ ಬಾರಿಗೆ ಆರೋಪಿಗೆ ಮರಣದಂಡನೆ ಶಿಕ್ಷೆ (Death Sentence) ವಿಧಿಸಲಾಗಿದೆ.

    ದೇಶಲ್ಲಿ ಹಿಜಬ್ ಅನ್ನು ವಿರೋಧಿಸಿ ನಿರಂತರವಾಗಿ ಅಶಾಂತಿ ಮುಂದುವರಿದಿದ್ದು, ಸರ್ಕಾರಿ ವಿರೋಧಿ ಪ್ರತಿಭಟನೆ ನಡೆಸಿರುವ ಆರೋಪದಲ್ಲಿ ಕೆಲವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕ್ಲೆರಿಕಲ್ ಆಡಳಿತವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿರುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಮೊದಲ ಬಾರಿಗೆ ಮರಣದಂಡನೆ ವಿಧಿಸಿದೆ.

    ಪ್ರತಿಭಟನೆಯಲ್ಲಿ ತೊಡಗಿದ ವ್ಯಕ್ತಿಯೊಬ್ಬರು ಕಟ್ಟಡಕ್ಕೆ ಬೆಂಕಿ ಹಚ್ಚಿದ ಆರೋಪದ ಮೇಲೆ ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಇನ್ನೂ 5 ಜನರಿಗೆ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆಯ ಆರೋಪದ ಮೇಲೆ 5 ರಿಂದ 10 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನಿ ಮಹಿಳೆಯ ಹೆಸರು!

    ಈ ತೀರ್ಪುಗಳನ್ನು ಕ್ರಾಂತಿಕಾರಿ ನ್ಯಾಯಾಲಯದ ಪ್ರತ್ಯೇಕ ಶಾಖೆಗಳು ನೀಡಿವೆ. ಆದರೆ ವಿಚಾರಣೆಯಲ್ಲಿರುವ ಪ್ರತಿಭಟನಾಕಾರರ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ. ಅವರು ಈ ನಿರ್ಧಾರಗಳನ್ನು ಮೇಲ್ಮನವಿಗೆ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

    ಇರಾನ್‌ನಲ್ಲಿ ಕ್ಲೆರಿಕಲ್ ಆಡಳಿತವನ್ನು ವಿರೋಧಿಸುವವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುವುದಕ್ಕೆ ಹೆಸರುವಾಸಿಯಾಗಿದೆ. 1979ರಲ್ಲಿ ಇಸ್ಲಾಮಿಕ್ ಕ್ರಾಂತಿಯಾದ ಬಳಿಕ ನ್ಯಾಯಾಲಯವನ್ನು ಸ್ಥಾಪಿಸಲಾಯಿತು. ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ ನಡೆಸಿರುವ ನೂರಾರು ಜನರನ್ನು ಬಂಧಿಸಲಾಗಿದೆ. ಅವರಿಗೆ ಸಾರ್ವಜನಿಕವಾಗಿ ವಿಚಾರಣೆ ನಡೆಸುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಬೆಳ್ಳಂಬೆಳಗ್ಗೆ 4.1 ತೀವ್ರತೆಯ ಭೂಕಂಪ

    Live Tv
    [brid partner=56869869 player=32851 video=960834 autoplay=true]

  • ಇರಾನ್‌ನಲ್ಲಿ ಹಿಜಬ್‌ ವಿರೋಧಿಸಿ ಪ್ರತಿಭಟನೆ – 6 ವಾರಗಳಲ್ಲಿ 14,000 ಮಂದಿ ಬಂಧನ

    ಇರಾನ್‌ನಲ್ಲಿ ಹಿಜಬ್‌ ವಿರೋಧಿಸಿ ಪ್ರತಿಭಟನೆ – 6 ವಾರಗಳಲ್ಲಿ 14,000 ಮಂದಿ ಬಂಧನ

    ನ್ಯೂಯಾರ್ಕ್: 22 ವರ್ಷದ ಯುವತಿ ಮಹ್ಸಾ ಅಮಿನಿ (Mahsa Amini) ಸಾವಿನ ನಂತರ ಇರಾನ್‌ನಲ್ಲಿ (Iran) ಹಿಜಬ್‌ (Hijab) ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ದೇಶದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದು, 6 ವಾರಗಳ ಅವಧಿಯಲ್ಲಿ 14,000 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ವಿಶ್ವಸಂಸ್ಥೆ (UN) ತಿಳಿಸಿದೆ.

    ಕಳೆದ ಆರು ವಾರಗಳಲ್ಲಿ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 14,000 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಮಾನವ ಹಕ್ಕುಗಳ ಹೋರಾಟಗಾರರು, ವಿದ್ಯಾರ್ಥಿಗಳು, ವಕೀಲರು, ಪತ್ರಕರ್ತರು ಮತ್ತು ಹಿರಿಯ ನಾಗರಿಕರು ಸೇರಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ

    ದೇಶದಲ್ಲಿ ಭದ್ರತಾ ಪಡೆಗಳ ಹಿಂಸಾತ್ಮಕ ಪ್ರವೃತ್ತಿಗೆ ಕನಿಷ್ಠ 277 ಜನರು ಮೃತಪಟ್ಟಿದ್ದಾರೆ. ಸಾವು-ನೋವುಗಳ ಬಗ್ಗೆ ಈವರೆಗೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯ ಮಾಧ್ಯಮಗಳ ವರದಿ ಆಧರಿಸಿ ಅಂಕಿಅಂಶ ನೀಡಲಾಗಿದೆ.

    “ಇದು ಸುಧಾರಣೆಗಾಗಿ ಮಾತ್ರ ನಡೆಯುತ್ತಿರುವ ಪ್ರತಿಭಟನೆಯಲ್ಲ. ಇಸ್ಲಾಮಿಕ್‌ ಗಣರಾಜ್ಯದ ಅಂತ್ಯವನ್ನು ಬೇಡುವ ಧಂಗೆಯಾಗಿದೆ” ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಇತಿಹಾಸದ ಸಹಾಯಕ ಪ್ರಾಧ್ಯಾಪಕ ರೋಹಮ್ ಅಲ್ವಾಂಡಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಗುಂಡಿನ ದಾಳಿ – ಪಿಎಂ ಸೇರಿ ಮೂವರ ಮೇಲೆ ಇಮ್ರಾನ್ ಖಾನ್‌ಗೆ ಅನುಮಾನ

    ಹಿಜಬ್‌ ಧರಿಸಿಲ್ಲ ಎಂಬ ಕಾರಣಕ್ಕೆ ಸೆ.16 ರಂದು ಮಹ್ಸಾ ಅಮಿನಿ ಅವರನ್ನು ಬಂಧಿಸಲಾಗಿತ್ತು. ನಂತರ ಆಕೆ ಸಾವಿಗೀಡಾದಳು. ಇರಾನ್‌ನ ನೈತಿಕ ಪೊಲೀಸ್‌ಗಿರಿಗೆ ಯುವತಿ ಬಲಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂತು. ಇದರ ಬೆನ್ನಲ್ಲೇ ಯುವತಿ ಸಾವು ಹಾಗೂ ಹಿಜಬ್‌ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು.

    Live Tv
    [brid partner=56869869 player=32851 video=960834 autoplay=true]