Tag: Anti-Drone System

  • ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    ಹೈದರಾಬಾದ್: ಹೈದರಾಬಾದ್‌ ಮೂಲದ ಗ್ರೀನ್‌ ರೊಬೊಟಿಕ್ಸ್‌ ಸಂಸ್ಥೆಯು (Robotics Firm) ಕೃತಕ ಬುದ್ಧಿಮತ್ತೆಯಿಂದ ಕಾರ್ಯಾಚರಣೆ ನಡೆಸಲ್ಪಡುವ ಅತ್ಯಾಧುನಿಕ ಸ್ವಾಯತ್ತ ಆ್ಯಂಟಿ ಡ್ರೋನ್ ವ್ಯವಸ್ಥೆಯನ್ನ (Anti Drone System) ಅನಾವರಣಗೊಳಿಸಿದೆ. ಇದಕ್ಕೆ ʻಇಂದ್ರಜಾಲ್‌ʼಎಂದು ಹೆಸರಿಡಲಾಗಿದ್ದು, ವಿಶಾಲ ಪ್ರದೇಶವನ್ನು ರಕ್ಷಿಸುತ್ತದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಇಂತಹ ಅತ್ಯಾಧುನಿಕ ಡ್ರೋನ್‌ ಅಭಿವೃದ್ಧಿಪಡಿಸಲಾಗಿದೆ.

    ಡೀಪ್‌ ಟೆಕ್‌ ಕಂಪನಿಯ ಭಾಗವಾದ ಗ್ರೀನ್‌ ರೊಬೊಟಿಕ್ಸ್‌ (Robotics) ಹೈದರಾಬಾದ್‌ ಹೊರ ವಲಯದಲ್ಲಿ ಈ ಸುಧಾರಿತ ಡ್ರೋನ್‌ನ ಸಾಮರ್ಥ್ಯ ಪರೀಕ್ಷೆ ನಡೆಸಿದೆ. ಇದು ರಕ್ಷಣಾ ವಲಯ, ಉದ್ಯಮ ಹಾಗೂ ಸರ್ಕಾರಿ ವಲಯಗಳಿಗೆ ಕೃತಕ ಬುದ್ಧಿಮತ್ತೆ ಚಾಲಿತ ಭದ್ರತಾ ಪರಿಹಾರ ಕ್ರಮಗಳನ್ನ ಸೂಚಿಸಲಿದೆ. ಮುಖ್ಯವಾಗಿ ʻಇಂದ್ರಜಾಲ್‌ʼ (Indrajaal) ವಿಶಾಲ ಪ್ರದೇಶವನ್ನ ರಕ್ಷಿಸುವ ಏಕೈಕ ಡ್ರೋನ್‌ ವ್ಯವಸ್ಥೆಯಾಗಿದೆ. ಸೇನೆಗಳು ನಿಭಾಯಿಸಲಾಗದ ಶತ್ರು ಸೇನೆಯ ಬೆದರಿಕೆಗಳ ವಿರುದ್ಧ ಇದು ಸಮರ್ಥವಾಗಿ ಹೋರಾಡಿ ರಕ್ಷಣೆ ಒದಗಿಸಲಿದೆ ಎಂದು ವರದಿಯಾಗಿದೆ.

    ʻಇಂದ್ರಜಾಲ್‌ʼ ವಿಶೇಷತೆ ಏನು?
    ಸಾಧಾರಣವಾಗಿ ಡ್ರೋನ್‌ ಎರಡು ರೀತಿಯಲ್ಲಿ ಶತ್ರು ಡ್ರೋನ್‌ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ. ಒಂದು ಡ್ರೋನ್‌ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಇನ್ನೊಂದು ಡ್ರೋನ್‌ ಅನ್ನೇ ಹೊಡೆದುರುಳಿಸುವುದು. ಈ ಇಂದ್ರಜಾಲ್‌ ಡ್ರೋನ್‌ ಎರಡು ರೀತಿಯನ್ನು ಕಾರ್ಯಾಚರಣೆ ಮಾಡುವ ಸಾಮರ್ಥ್ಯ ಹೊಂದಿರುವುದು ವಿಶೇಷ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    ಹೈದರಾಬಾದ್‌ ಮೂಲದ ಗ್ರೀನ್‌ ರೊಬೊಟಿಕ್ಸ್‌ ಸಂಸ್ಥೆಯು ವಿನ್ಯಾಸಗೊಳಿಸಿರುವ ಈ ಡ್ರೋನ್‌ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಚಾಲಿತ ವ್ಯವಸ್ಥೆಯನ್ನ ಒಳಗೊಂಡಿದೆ. 360 ಡಿಗ್ರಿ ರಕ್ಷಣೆ ಒದಗಿಸುತ್ತದೆ. ಕಾರ್ಯಾಚರಣೆ ಸಂದರ್ಭದಲ್ಲಿ ಶತ್ರುಗಳ ಬೆದರಿಕೆಗಳನ್ನ ಪತ್ತೆಹಚ್ಚುವ, ವರ್ಗೀಕರಿಸುವ, ಟ್ರ್ಯಾಕ್ ಮಾಡುವ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿರುವುದು ವಿಶೇಷ. 4,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋನ್‌ಗಳನ್ನು ಇದು ಹೊಡೆದುರಳಿಸುವ ಸಾಮರ್ಥ್ಯ ಹೊಂದಿದೆ.

    2020ರಲ್ಲಿ ಭಾರತದಲ್ಲಿ 76 ಡ್ರೋನ್‌ ದಾಳಿ ಪ್ರಕರಣಗಳು ವರದಿಯಾಗಿವೆ. 2021ರಲ್ಲಿ 109, 2022ರಲ್ಲಿ 266 ಪ್ರಕರಣಗಳು ವರದಿಯಾಗಿವೆ. ಇನ್ನೂ 2023ರ ಮೊದಲ ತಿಂಗಳು 8 ಪ್ರಕರಣಗಳು ವರದಿಯಾಗಿದ್ದು, ಈಗಾಗಲೇ ಪ್ರಕರಣಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ಹಾಗಾಗಿ ದೇಶದ ಭದ್ರತೆಗಾಗಿ ಪ್ರತಿಕೂಲ ಕ್ರಮಗಳನ್ನ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಚಂದ್ರನ ಮೇಲೆ ಹೊಸ ಕುಳಿ ಮೂಡಿಸಿದ ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ

     

    ಇಂದ್ರಜಾಲ್‌ ವಿಶಾಲ ಪ್ರದೇಶವನ್ನ ಕವರ್‌ ಮಾಡುವುದರಿಂದ ದೆಹಲಿ ಎನ್‌ಸಿಆರ್‌ ಪ್ರದೇಶ, ಅಂತಾರಾಷ್ಟ್ರೀಯ ಗಡಿಗಳು, ವಿಐಪಿ ಜಾಥಾ ಅಥವಾ ಬೃಹತ್‌ ಜನಮೂಹ ಹೊಂದಿರುವ ಪ್ರದೇಶಳು ಹಾಗೂ ತೈಲ ಸಂಸ್ಕರಣಾ ಘಟಕಗಳ ಮೇಲೆ ಇದನ್ನು ಭದ್ರತೆಗೆ ನಿಯೋಜನೆ ಮಾಡಬಹುದು ಎಂದು ವಿಂಗ್ ಕಮಾಂಡರ್ ಸಾಯಿ ಮಲ್ಲೇಲ ತಿಳಿಸಿದ್ದಾರೆ.

    2014 ರಿಂದ 2016ರ ವರೆಗೆ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಉತ್ತರಾಖಂಡದ ಗರ್ವನರ್‌ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್, ಇಂದ್ರಜಾಲ್‌ ಅನ್ನು ಸಾರ್ವಜನಿಕರ ರಕ್ಷಣೆ, ಸಾರ್ವಜನಿಕರ ಮೂಲ ಸೌಕರ್ಯಗಳು ಹಾಗೂ ದೇಶದ ಭದ್ರತಾ ಸವಾಲುಗಳಿಗೆ ಪರಿಹಾರ ಕ್ರಮವಾಗಿ ಬಳಸಬಹುದು ಎಂದು ಸಲಹೆ ನೀಡಿದ್ದಾರೆ.

    2021ರ ಜೂನ್‌ 27ರಂದು ಜಮ್ಮುವಿನ ವಿಮಾನ ನಿಲ್ದಾಣದ ಮೇಲೆ ಭೀಕರ ಡ್ರೋನ್‌ ದಾಳಿ ನಡೆದಿತ್ತು. ಅಲ್ಲದೇ ಕಳೆದ ಜೂನ್‌ 15 ರಂದು ಗಾಲ್ವಾನ್‌ ದಾಳಿಯನ್ನೂ ಎದುರಿಸಬೇಕಾಯಿತು. ಆ ಸಂದರ್ಭದಲ್ಲಿ ನಮ್ಮ ಬಳಿಕ ಏನು ಪರಿಹಾರವಿದೆ ಎಂದು ನಾವೇ ನೋಡಿಕೊಂಡಾಗ ಆಶ್ಚರ್ಯ ಪಡುವಂತಾಗಿತ್ತು. ಆದ್ರೆ ಇದೀಗ ಎಲ್ಲ ಸಮಸ್ಯೆಗಳಿಗೆ ಉತ್ತರವಾಗಿ ʻಇಂದ್ರಜಾಲ್‌ʼ ನಮ್ಮ ಮುಂದೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಕೆಲ ದಿನಗಳ ಹಿಂದೆ ರಷ್ಯಾ ಉಕ್ರೇನ್‌ ಯುದ್ಧದಲ್ಲೂ ಇದೇ ಮಾದರಿಯ ಡ್ರೋನ್‌ ಅನ್ನು ಬಳಕೆ ಮಾಡಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ವಾಯು ನೆಲೆಗೆ ಆ್ಯಂಟಿ ಡ್ರೋನ್ ಸಿಸ್ಟಮ್ ಅಳವಡಿಕೆ

    ಜಮ್ಮು ವಾಯು ನೆಲೆಗೆ ಆ್ಯಂಟಿ ಡ್ರೋನ್ ಸಿಸ್ಟಮ್ ಅಳವಡಿಕೆ

    – ಆ್ಯಂಟಿ ಡ್ರೋನ್ ಗನ್‍ಗಳನ್ನೂ ಅಳವಡಿಸಿದ ಸೇನೆ

    ಶ್ರೀನಗರ: ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ ನಡೆದ ಬೆನ್ನಲ್ಲೇ ಭಾರತೀಯ ವಾಯು ಸೇನೆ ಎಚ್ಚೆತ್ತುಕೊಂಡಿದ್ದು, ವಾಯು ನೆಲೆಗೆ ಆ್ಯಂಟಿ ಡ್ರೋನ್ ಸಿಸ್ಟಮ್ ಅಳವಡಿಸಲಾಗಿದೆ.

    ರಾಷ್ಟ್ರೀಯ ಭದ್ರತಾ ಪಡೆ(ಎನ್‍ಎಸ್‍ಜಿ)ಯಿಂದ ಜಮ್ಮು ವಾಯು ನೆಲೆಗೆ ಆ್ಯಂಟಿ ಡ್ರೋನ್ ಸಿಸ್ಟಮ್ ಅಳವಡಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಮತ್ತೊಂದು ಡ್ರೋನ್ ದಾಳಿ ಬೆದರಿಕೆ ಹಿನ್ನೆಲೆ ಆ್ಯಂಟಿ ಡ್ರೀನ್ ಸಿಸ್ಟಮ್ ಅಳವಡಿಸಲಾಗಿದೆ. ರೇಡಿಯೋ ಫ್ರಿಕ್ವೆನ್ಸಿ ಡಿಟೆಕ್ಟರ್ ಹಾಗೂ ಸಾಫ್ಟ್ ಜಾಮರ್‍ಗಳನ್ನು ವಾಯು ನೆಲೆಯಲ್ಲಿ ಅಳವಡಿಸಲಾಗಿದೆ. ಆ್ಯಂಟಿ ಡ್ರೋನ್ ಗನ್‍ಗಳನ್ನು ಸಹ ಹಾಕಲಾಗಿದೆ ಎಂದು ಮೂಲಗಳನ್ನು ಆಧರಿಸಿ ಸುದ್ದಿ ಸಂಸ್ಥೆವರದಿ ಮಾಡಿದೆ. ಇದನ್ನೂ ಓದಿ: ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ – 2 ಸ್ಫೋಟ, ಇಬ್ಬರಿಗೆ ಗಾಯ

    ಜೂನ್ 27ರಂದು ಜಮ್ಮು ವಾಯು ನೆಲೆ ಮೇಲೆ ನಡೆದ ಡ್ರೋನ್ ದಾಳಿಯಿಂದ ಭದ್ರತಾ ಸಿಬ್ಬಂದಿ ಫುಲ್ ಅಲರ್ಟ್ ಆಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹದ್ದಿನ ಕಣ್ಣು ಇರಿಸಿದ್ದಾರೆ. ಇದನ್ನೂ ಓದಿ: ಜಮ್ಮು ಸೇನಾ ಸ್ಟೇಷನ್ ಬಳಿ ಕಾಣಿಸಿದ ಡ್ರೋನ್ – ಸೇನೆಯಿಂದ 25 ಸುತ್ತು ಫೈರಿಂಗ್

    ಭಾರತದ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್ 27ರಂದು ಬೆಳಗಿನಜಾವ ಡ್ರೋನ್ ದಾಳಿ ನಡೆದಿತ್ತು. ನಸುಕಿನ ವೇಳೆಯಲ್ಲಿ ಜಮ್ಮು ವಾಯು ನೆಲೆಯ ಮೇಲೆ ಎರಡು ಡ್ರೋನ್ ಮೂಲಕ ಸ್ಫೋಟಕವನ್ನು ಸ್ಫೋಟಿಸಲಾಗಿತ್ತು. ಟೆಕ್ನಿಕಲ್ ಪ್ರದೇಶದಲ್ಲಿರುವ ಕಟ್ಟಡದ ಮೇಲ್ಭಾಗದಲ್ಲಿ ಬೆಳಗ್ಗೆ 1:45ಕ್ಕೆ ಮೊದಲ ಸ್ಫೋಟ ಸಂಭವಿಸಿತ್ತು. ಈ ಸ್ಫೋಟ ಸಂಭವಿಸಿದ 5 ನಿಮಿಷದಲ್ಲಿ ತೆರೆದ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಮೇಲ್ಭಾಗ ಒಡೆದು ಹೋಗಿತ್ತು. ಅಲ್ಲದೆ ಸ್ಫೋಟದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ವಿಮಾನ ನಿಲ್ದಾಣದ ಮೇಲೆ ಡ್ರೋನ್ ಮೂಲಕ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಬಳಸಿ ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿತ್ತು. ಇದು ಪಾಕಿಸ್ತಾನ ಮೂಲದ ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ.

  • ಸ್ವಾತಂತ್ರ್ಯೋತ್ಸವದಂದು ಭಾರತ ನಿರ್ಮಿತ ಆ್ಯಂಟಿ-ಡ್ರೋನ್ ಸಿಸ್ಟಮ್ ಪರಿಚಯಿಸಿದ ಡಿಆರ್‌ಡಿಒ

    ಸ್ವಾತಂತ್ರ್ಯೋತ್ಸವದಂದು ಭಾರತ ನಿರ್ಮಿತ ಆ್ಯಂಟಿ-ಡ್ರೋನ್ ಸಿಸ್ಟಮ್ ಪರಿಚಯಿಸಿದ ಡಿಆರ್‌ಡಿಒ

    ನವದೆಹಲಿ: ಇಂದು ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ ಸಂದರ್ಭದಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಈ ಮೂಲಕ ಡಿಆರ್‌ಡಿಒ ತನ್ನ ಸಂಶೋಧನಾ ಶಕ್ತಿ ಪ್ರದರ್ಶಿಸಿದೆ.

    ಇಂದು ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಡಿಆರ್‌ಡಿಒ ಇದನ್ನು ಪರಿಚಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಸಮಾರಂಭ ನಡೆದ ಕೆಂಪು ಕೋಟೆಯ ಬಳಿ ಡ್ರೋನ್‍ಗಳ ಮೇಲೆ ಕಣ್ಣಿಡಲು ಹಾಗೂ ಡ್ರೋನ್ ನಿಷ್ಕ್ರಿಯಗೊಳಿಸಲು ಈ ಸಾಧನವನ್ನು ಬಳಸಲಾಗಿತ್ತು.

    ಡಿಆರ್‌ಡಿಒ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದು 3 ಕಿ.ಮೀ.ಯೊಳಗೆ ಯಾವುದೇ ಮೈಕ್ರೋ ಡ್ರೋನ್ ಇದ್ದರೂ ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಲೇಸರ್ ತಂತ್ರಜ್ಞಾನದ ಮೂಲಕ ಡ್ರೋನ್‍ಗಳನ್ನು ಹೊಡೆದುರುಳಿಸುತ್ತದೆ. ಸುಮಾರು 1-2.5 ಕಿ.ಮೀ.ಯೊಳಗೆ ಯಾವುದೇ ರೀತಿಯ ಡ್ರೋನ್ ಇದ್ದರೂ ತನ್ನ ಲೇಸರ್ ಸಾಮರ್ಥ್ಯದ ಅನುಗುಣವಾಗಿ ಡ್ರೋನ್‍ಗಳನ್ನು ಹೊಡೆದುರುಳಿಸುವ ಶಕ್ತಿ ಹೊಂದಿದೆ.

    ದೇಶದ ಪಶ್ಚಿಮ ಹಾಗೂ ಉತ್ತರ ವಲಯದಲ್ಲಿ ಡ್ರೋನ್‍ಗಳ ಉಪಟಳ ಹೆಚ್ಚುತ್ತಿದ್ದು, ಈ ಸಾಧನದಿಂದ ಅಂತಹ ಡ್ರೋನ್‍ಗಳಿಗೆ ತಕ್ಕ ಉತ್ತರ ನೀಡಬಹುದಾಗಿದೆ, ಅಂತಹ ಡ್ರೋನ್‍ಗಳನ್ನು ಹೊಡೆದುರುಳಿಸಲಿದೆ ಎಂದು ಹೇಳಲಾಗಿದೆ.

    74ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ 7ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಇಂದು ಬೆಳಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗಡಿ ತಂಟೆ ಹಾಗೂ ಸೈನಿಕರ ಪರಾಕ್ರಮದ ಕುರಿತು ಮಾತನಾಡಿದ್ದಾರೆ. ಎಲ್‍ಓಸಿ, ಎಲ್‍ಎಸಿ ಬಳಿ ಯಾರು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಾರೋ ಅವರಿಗೆ ನಮ್ಮ ಸೈನಿಕರು ಸರಿಯಾಗಿ ತಿರುಗೇಟು ನೀಡಿದ್ದಾರೆ ಎಂದು ಹೇಳುವ ಮೂಲಕ ಚೀನಾ ಮತ್ತು ಪಾಕಿಸ್ತಾನಕ್ಕೆ ಬಲವಾದ ಸಂದೇಶ ರವಾನಿಸಿದರು.

    ಎಲ್‍ಓಸಿ(ಪಾಕಿಸ್ತಾನ ಬಳಿ ಇರುವ ಗಡಿ ನಿಯಂತ್ರಣ ರೇಖೆ)ಯಿಂದ ಎಲ್‍ಎಸಿ(ಚೀನಾ ಜೊತೆ ಹಂಚಿಕೊಂಡಿರುವ ವಾಸ್ತವಿಕ ನಿಯಂತ್ರಣ ರೇಖೆ)ವರೆಗೆ ಯಾರು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಾರೋ ಅವರಿಗೆ ನಮ್ಮ ಸೈನಿಕರು ಅರ್ಥವಾಗುವ ಭಾಷೆಯಲ್ಲೇ ಸರಿಯಾದ ತಿರುಗೇಟು ನೀಡಿದ್ದಾರೆ ಎಂದರು.

    ಗಲ್ವಾನ್ ಕಣಿವೆಯಲ್ಲಿ ಚೀನಾ ಜೊತೆ ಘರ್ಷಣೆಯಲ್ಲಿ ಹುತಾತ್ಮರಾದ 20 ಸೈನಿಕರ ತ್ಯಾಗವನ್ನು ಸ್ಮರಿಸಿದ ಮೋದಿ, ನಮ್ಮ ಸೈನಿಕರು ಏನು ಮಾಡಬಹುದು, ದೇಶ ಏನು ಮಾಡಬಹುದು ಎಂಬುದನ್ನು ಲಡಾಖ್ ವಿಚಾರದಲ್ಲಿ ವಿಶ್ವಕ್ಕೆ ಗೊತ್ತಾಗಿದೆ. ಆ ಎಲ್ಲ ಧೈರ್ಯಶಾಲಿ ಸೈನಿಕರಿಗೆ ನಾನು ಕೆಂಪುಕೋಟೆಯಲ್ಲಿ ನಿಂತು ನಮಸ್ಕರಿಸುತ್ತೇನೆ ಎಂದು ಹೇಳಿದರು.

    ಅದು ಭಯೋತ್ಪಾದನೆಯಾಗಲಿ, ವಿಸ್ತರಣಾವಾದವಾಗಲಿ ಭಾರತ ಎರಡರ ವಿರುದ್ಧವೂ ಹೋರಾಡುತ್ತಿದೆ. ಭಾರತದ ಶಕ್ತಿಯ ಬಗ್ಗೆ ವಿಶ್ವದ ನಂಬಿಕೆ ಬಲಗೊಳ್ಳುತ್ತಿದೆ ಎಂದು ತಿಳಿಸಿದರು.