ಬೆಳಗಾವಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯ ಅವಶ್ಯಕತೆ ಏನಿದೆ ಎಂದು ಸರ್ಕಾರಕ್ಕೆ ಮಾಜಿ ಸಚಿವ ಎಚ್.ಡಿ ರೇವಣ್ಣ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಯ ಉದ್ದೇಶ ಸಮುದಾಯದ ಟಾರ್ಗೆಟ್ ಅಲ್ಲ, ಇದು ವೋಟ್‍ಗಳು ಟಾರ್ಗೆಟ್ ಆಗಿದೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆಗೆ ನಮ್ಮ ಸಂಪೂರ್ಣ ವಿರೋಧ ಇದೆ. ಮಹಾತ್ಮಾ ಗಾಂಧಿಜೀಯವರು ಹೇಳಿದಂತೆ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂಬುದು ನಮ್ಮ ಭಾವನೆ. ಇಚ್ಛೆ ಇದ್ದವರು ಮತಾಂತರ ಆಗುತ್ತಾರೆ, ಇಲ್ಲದವರು ಆಗಲ್ಲ. ನಾವು ಈ ಮಸೂದೆ ವಿರೋಧ ಮಾಡುತ್ತೇವೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಶಾಸಕರೊಬ್ಬರ ಸಂತೃಪ್ತಿಗೆ ಡಿಕೆಶಿ ಎಂಇಎಸ್ ಪರ ಬ್ಯಾಟಿಂಗ್: ಸಚಿವ ಈಶ್ವರಪ್ಪ

ನಮ್ಮದು ಪ್ರಾದೇಶಿಕ ಪಕ್ಷ, ಉತ್ತರ ಕರ್ನಾಟಕದ ಅಭಿವೃದ್ಧಿ ಉದ್ದೇಶವಿಟ್ಟೇ ಎಚ್.ಡಿಕೆ ಬೆಳಗಾವಿಯಲ್ಲಿ ಅಧಿವೇಶನಕ್ಕೆ ನಾಂದಿ ಹಾಡಿದರು. ಉತ್ತರ ಕರ್ನಾಟಕಕಕ್ಕೆ ಕುಮಾರಸ್ವಾಮಿ ಏನೇನು ಮಾಡಿದ್ದಾರೆ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಬೆಳಗಾವಿಯಲ್ಲಿ ನಡೆದ ಘಟನೆ ಬಗ್ಗೆ ರಾಷ್ಟ್ರೀಯ ಪಕ್ಷಗಳ ನಾಯಕರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಪ್ರಚೋದನೆ ಮಾಡುವ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂಬುದು ನಮ್ಮ ನಿಲುವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

ನಮ್ಮ ಪಕ್ಷದ ಶಾಸಕರು ಕಿಡಿಗೇಡಿಗಳ ಕೃತ್ಯವನ್ನು ಸದನದಲ್ಲಿ ಖಂಡಿಸಿದ್ದಾರೆ. ಆದರೆ ಬೆಳಗಾವಿಯ ನಾಯಕರು ಹಾಗೂ ಎರಡು ರಾಷ್ಟ್ರೀಯ ಪಕ್ಷಗಳು ವೋಟ್‍ಗಾಗಿ ಹಿಂದೆ ಬಿದ್ದಿವೆ. ಮತಕ್ಕಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕರ್ನಾಟಕದ ಸಮಗ್ರ ಅಭಿವೃದ್ಧಿ, ನೀರಾವರಿ ಯೋಜನೆಗಳ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಲಿದ್ದೇವೆ. ಮಹದಾಯಿ ವಿವಾದ ಬಗೆಹರಿಸಲು ಇಷ್ಟು ವರ್ಷ ಬೇಕಾ? ಮಹದಾಯಿ, ಕೃಷ್ಣಾ, ಘಟಪ್ರಭಾ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆಗೆ ನಿಲುವಲಿ ಸೂಚನೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಳ್ಳ ಸೇರುತ್ತಿದೆ ಉಮೇಶ್ ಕತ್ತಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ ತ್ಯಾಜ್ಯ ನೀರು










