Tag: Anti-conversion Bill

  • ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿಸಿ ಪ್ರತಿಭಟನೆಗೆ ತೆರಳುತ್ತಿದ್ದ ಸ್ವಾಮೀಜಿ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

    ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿಸಿ ಪ್ರತಿಭಟನೆಗೆ ತೆರಳುತ್ತಿದ್ದ ಸ್ವಾಮೀಜಿ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

    ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ (Anti Conversion Bill) ರದ್ದು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸ್ವಾಮೀಜಿಯೊಬ್ಬರ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾಕತಿ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೃತರನ್ನು ಸ್ವಾಮೀಜಿಯ ಸೇವಕರು ಎನ್ನಲಾಗಿದ್ದು ಅವರ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಉಚಿತ ಪ್ರಯಾಣ ಹಿನ್ನೆಲೆ ಒಂದು ಇಡೀ ಬಸ್ ಬುಕ್ ಮಾಡೋಕೆ ಬಂದ ಅಜ್ಜಿ

    (ಗಾಯಗೊಂಡಿರುವ ಸ್ವಾಮೀಜಿ)

    ಬೆಳಗಾವಿಯಲ್ಲಿ (Belagavi) ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ (Bajrang Dal) ನಡೆಸುತ್ತಿದ್ದ ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ರದ್ದಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಧಾರ್ಮಿಕ ಸಂರಕ್ಷಣಾ ಅಧಿನಿಯಮ- 2022 ನ್ನು ರದ್ದುಗೊಳಿಸಿ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ- 2023ಕ್ಕೆ ಅನುಮೋದನೆ ನೀಡಲಾಗಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

    ರಾಜ್ಯದಲ್ಲಿ ಮತಾಂತರ ತಡೆಯುವ ಉದ್ದೇಶದಿಂದ ಬಿಜೆಪಿ (BJP) ನೇತೃತ್ವದ ಸರ್ಕಾರ ಕಾಯ್ದೆಯೊಂದನ್ನು ಜಾರಿಗೆ ತಂದಿತ್ತು. 2021ರ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಅಂಗೀಕರಿಸಲಾಗಿತ್ತು. ನಂತರ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದನ್ನೂ ಓದಿ: ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ – ಡಿಕೆ ಸುರೇಶ್ ವೈರಾಗ್ಯದ ಮಾತು

  • ಮತಾಂತರ ಪ್ರಕರಣ: ಹಿಂದೂ ಯುವಕನಿಗೆ ಬಲವಂತದ ಖತ್ನಾ ಮಾಡಲಾಗಿದೆ: ಮುತಾಲಿಕ್ ಕಿಡಿ

    ಮತಾಂತರ ಪ್ರಕರಣ: ಹಿಂದೂ ಯುವಕನಿಗೆ ಬಲವಂತದ ಖತ್ನಾ ಮಾಡಲಾಗಿದೆ: ಮುತಾಲಿಕ್ ಕಿಡಿ

    ಧಾರವಾಡ: ಮಂಡ್ಯ (Mandya) ಮೂಲದ ಶ್ರೀಧರ್‌ಗೆ ಬಲವಂತದ ಖತ್ನಾ (ಮುಂಜಿ) ಮಾಡಿ ಮತಾಂತರ (Conversion) ಮಾಡಲಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಧಾರವಾಡದಲ್ಲಿ ಘಟನೆ ಖಂಡಿಸಿ ಮಾತನಾಡಿದ ಅವರು, ಮತಾಂತರ ಘಟನೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಆತ ಹುಡುಗಿಯನ್ನು ಭೇಟಿಯಾಗಲು ಬಂದಿದ್ದನೋ ಏನೋ ಗೊತ್ತಿಲ್ಲ. ಆತನಿಗೆ ಬಲವಂತದ ಖತ್ನಾ ಮಾಡಲಾಗಿದೆ. ಆತನ ಕೈಯಲ್ಲಿ ಪಿಸ್ತೂಲು ನೀಡಿ ಫೋಟೋ ತೆಗೆದಿದ್ದಾರೆ. 35 ಸಾವಿರ ಹಣವನ್ನು ಖಾತೆಗೆ ಹಾಕಿದ್ದಾರೆ. ಆತನೇ ಇದೀಗ ದೂರು ನೀಡಿದ್ದಾನೆ ಎಂದು ಹೇಳಿದರು.‌ ಇದನ್ನೂ ಓದಿ: ಬಲವಂತವಾಗಿ ಮತಾಂತರಕ್ಕೆ ಯತ್ನ – 11 ಮಂದಿಯ ವಿರುದ್ಧ ಎಫ್‍ಐಆರ್

    ಸರ್ಕಾರ (Government) ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮತಾಂತರ ಕಾಯ್ದೆ ಅಡಿ ಕೇಸ್ ದಾಖಲಾಗಬೇಕು. ಈ ಪ್ರಕರಣದ ಹಿಂದೆ 11 ಜನರಷ್ಟೇ ಇಲ್ಲ. ಮಸೀದಿ, ಮದರಸಾ ಕೆಲಸ ಮಾಡುತ್ತಿವೆ. ಸರಿಯಾಗಿ ತನಿಖೆ ಮಾಡಬೇಕು. ಅಂದಾಗ ಮಾತ್ರ ಇಂತಹ ಪ್ರಕರಣಗಳು ಹೊರಗೆ ಬರುತ್ತವೆ. ಈ ಬಗ್ಗೆ ನಾನು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಪತ್ರ ಬರೆದು ಮಾಹಿತಿ ತಿಳಿಸುತ್ತೇನೆ. ಯಾವ ಯಾವ ಮಸೀದಿಗಳಲ್ಲಿ ಮತಾಂತರ ನಡೆಯುತ್ತಿವೆ ಅನ್ನೋ ಮಾಹಿತಿ ಕೊಡುತ್ತೇನೆ ಎಂದರು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    Live Tv
    [brid partner=56869869 player=32851 video=960834 autoplay=true]

  • ವಿರೋಧದ ಮಧ್ಯೆ ಮತಾಂತರ ನಿಷೇಧ ಮಸೂದೆ ಅಂಗೀಕಾರ

    ವಿರೋಧದ ಮಧ್ಯೆ ಮತಾಂತರ ನಿಷೇಧ ಮಸೂದೆ ಅಂಗೀಕಾರ

    ಬೆಂಗಳೂರು: ವಿಪಕ್ಷಗಳ ತೀವ್ರ ವಿರೋಧದ ಮಧ್ಯೆ ವಿಧಾನ ಪರಿಷತ್‍ನಲ್ಲಿ(Vidhan Parishad) ಮತಾಂತರ ನಿಷೇಧ ಮಸೂದೆ(Anti Conversion Bill) ಧ್ವನಿ ಮತದ ಮೂಲಕ ಅಂಗೀಕಾರಗೊಂಡಿದ್ದು ಬಿಜೆಪಿ(BJP) ಶಾಸಕರು ಸಂಭ್ರಮಿಸಿದ್ದಾರೆ.

    ಈ ಬಿಲ್ ಪಾಸ್ ಆಗುವ ಹಂತದಲ್ಲಿ ಕಾಂಗ್ರೆಸ್‍ನ(Congress) ಬಿಕೆ ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿ ಹಲವರು ವಿಧೇಯಕದ ಪ್ರತಿ ಹರಿದೆಸೆದು ಆಕ್ರೋಶ ಹೊರಹಾಕಿದರೆ ಜೆಡಿಎಸ್(JDS) ಸದಸ್ಯರು ಸಭಾತ್ಯಾಗ ಮಾಡಿದರು.

    ಇದಕ್ಕೂ ಮುನ್ನ, ಪರಿಷತ್‍ನಲ್ಲಿ ಸುದೀರ್ಘವಾಗಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2022ರ ಮೇಲೆ ಚರ್ಚೆ ನಡೆಯಿತು. ಚರ್ಚೆ ವೇಳೆ ಹಲವು ಬಾರಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು.

    ಬಲವಂತದ ಮತಾಂತರ ನಿಷೇಧ ಮಸೂದೆ ಪರವಾಗಿ ಸಿಎಂ ಬೊಮ್ಮಾಯಿ, ಆರಗ ಜ್ಞಾನೇಂದ್ರ ಸೇರಿ ಹಲವರು ಸಚಿವರು ಬ್ಯಾಟ್ ಬೀಸಿದರು. ಆದರೆ ಎಲ್ಲಿ ಮತಾಂತರ ನಡೆಯುತ್ತಿದೆ? ಇದರ ಅಗತ್ಯವಾದ್ರೂ ಏನು? ಇದು ಸಂವಿಧಾನ ವಿರೋಧಿ ವಿಧೇಯಕ ಎಂದು ಮೇಲ್ಮನೆ ವಿಪಕ್ಷ ನಾಯಕರು ಆಕ್ಷೇಪಿಸಿದ್ರು. ಇದನ್ನೂ ಓದಿ: ಬಿಕೆ ಹರಿಪ್ರಸಾದ್‌ ಕ್ರಿಶ್ಚಿಯನ್‌ ಆದ್ರೆ ನಮ್ಮದೇನೂ ತಕರಾರಿಲ್ಲ: ಮಾಧುಸ್ವಾಮಿ

     
    ರಾಜ್ಯದಲ್ಲಿ ಮತಾಂತರ ನಡೆಯುತ್ತಿಲ್ಲ. ಒಂದು ವೇಳೆ ನಡೆಯುತ್ತಿದ್ದರೆ ಮುಸ್ಲಿಮರು, ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಾಗಬೇಕಿತ್ತು. ಆದರೆ ಅವರ ಸಂಖ್ಯೆ ಕುಸಿಯುತ್ತಿದೆ ಎಂದು ಬಿಕೆ ಹರಿಪ್ರಸಾದ್ ಲೆಕ್ಕ ಹೇಳಿದರು. ಅಲ್ಲದೇ ಈ ವಿಧೇಯಕವನ್ನು ವಿರೋಧಿಸುವ ಭರದಲ್ಲಿ ಬಿಕೆ ಹರಿಪ್ರಸಾದ್ ಬ್ರಿಟೀಷರು, ಮೊಘಲರನ್ನು ಸಮರ್ಥಿಸಿದರು. ಅವರ ಕಾಲದಲ್ಲಿ ಕೂಡ ಮತಾಂತರ ಮಾಡಿರಲಿಲ್ಲ ಎಂದರು. ಇಷ್ಟಪಟ್ಟು ಮತಾಂತರ ಆದರೆ ತಪ್ಪೇನು ಎಂದು ಪ್ರಶ್ನಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬಿಕೆ ಹರಿಪ್ರಸಾದ್‌ ಕ್ರಿಶ್ಚಿಯನ್‌ ಆದ್ರೆ ನಮ್ಮದೇನೂ ತಕರಾರಿಲ್ಲ: ಮಾಧುಸ್ವಾಮಿ

    ಬಿಕೆ ಹರಿಪ್ರಸಾದ್‌ ಕ್ರಿಶ್ಚಿಯನ್‌ ಆದ್ರೆ ನಮ್ಮದೇನೂ ತಕರಾರಿಲ್ಲ: ಮಾಧುಸ್ವಾಮಿ

    ಬೆಂಗಳೂರು: ಮತಾಂತರ ನಿಷೇಧ ಮಸೂದೆಯ(Anti Conversion Bill) ಬಗ್ಗೆ ವಿಧಾನ ಪರಿಷತ್‌ನಲ್ಲಿ (Vidhan Parishad) ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿ ಅವರು ಬಿಕೆ ಹರಿಪ್ರಸಾದ್‌ ಅವರ ಕಾಲೆಳೆದ ಪ್ರಸಂಗವೂ ನಡೆಯಿತು.

    ಮಸೂದೆಯ ಬಗ್ಗೆ ವಿರೋಧ ಮಾಡಿ ಮಾತನಾಡಿದ ಕಾಂಗ್ರೆಸ್‌ನ ಮೇಲ್ಮನೆಯ ನಾಯಕ  ಬಿ.ಕೆ. ಹರಿಪ್ರಸಾದ್‌(BK Hariprasad) ಹಿಂದೂ ಧರ್ಮದ ರಕ್ಷಣೆಗೆ ಮಸೂದೆಯನ್ನು ತರಲಾಗಿದೆ ಎಂದು ಹೇಳಿದರು. ಈ ವೇಳೆ ಎದ್ದು ನಿಂತ ಮಾಧುಸ್ವಾಮಿ(Madhuswamy), ಇದು ಹಿಂದೂ ಧರ್ಮ ಮಾತ್ರ ಅಲ್ಲ ಎಲ್ಲಾ ಧರ್ಮದವರ ರಕ್ಷಣೆ ತರಲಾಗಿದೆ ಎಂದು ಉತ್ತರಿಸಿದರು.

    ಮಸೂದೆಯಲ್ಲಿ ಬಲವಂತದ ಮತಾಂತರವನ್ನು ಮಾತ್ರ ನಿಷೇಧಿಸಲಾಗಿದೆ. ಪ್ರೀತಿ, ಹಣ, ಶಿಕ್ಷಣ, ಉದ್ಯೋಗ ಈ ರೀತಿ ಆಮಿಷ ಒಡ್ಡಿ ಅಶಕ್ತರನ್ನು ಮತಾಂತರ ಮಾಡುವಂತಿಲ್ಲ. ಮುಸ್ಲಿಮ್‌ ವ್ಯಕ್ತಿಯನ್ನು ಬಲವಂತವಾಗಿ ಹಿಂದೂ ಧರ್ಮಕ್ಕೆ ಮತಾಂತರ ಮಾಡಿದರೆ ಕೇಸ್‌ ದಾಖಲಿಸಬಹುದು. ಈ ಎಲ್ಲ ಅಂಶಗಳು ಮಸೂದೆಯಲ್ಲಿದೆ ಎಂದರು. ಇದನ್ನೂ ಓದಿ: ನೈಋತ್ಯ ರೈಲ್ವೆ ಸಾಧನೆ- ಪ್ಯಾಸೆಂಜರ್ ರೈಲಿನಿಂದ ದಾಖಲೆ ಆದಾಯ ಗಳಿಕೆ

    ಮಾತನ್ನು ಮುಂದುವರಿಸಿದ ಅವರು, ಸ್ವಂತ ಇಚ್ಛೆಯಿಂದ ಯಾರು ಬೇಕಾದರೂ ಮತಾಂತರ ಆಗಬಹುದು. ಬೇಕಾದರೆ ಬಿಕೆ ಹರಿಪ್ರಸಾದ್‌ ಅವರು ಕ್ರಿಶ್ಚಿಯನ್‌ ಆದರೆ ನಮ್ಮದೇನೂ ತಕರಾರಿಲ್ಲ ಏನು ಇಲ್ಲ. ಆದರೆ ಒಂದು ಅರ್ಜಿ ಕೊಟ್ಟರೆ ಆಯ್ತು ಎಂದು ಹೇಳಿ ಕಾಲೆಳೆದರು.

    ಇದಕ್ಕೆ ಅರ್ಜಿ ಯಾಕೆ ಕೊಡಬೇಕು ಎಂದು ಹರಿಪ್ರಸಾದ್‌ ಕೇಳಿದಾಗ, ಆ ವಿಚಾರವೇ ಈ ಮಸೂದೆಯಲ್ಲಿದೆ. ಅದೇ ಪಾಯಿಂಟ್‌. ಯಾರಿಗೆ ಅರ್ಜಿ ಕೊಡಬೇಕು? ಯಾರು ತನಿಖೆ ನಡೆಸಬೇಕು ಈ ಎಲ್ಲ ಅಂಶಗಳು ಇದರಲ್ಲಿ ಇದೆ ಎಂದು ಹೇಳಿ ತಿರುಗೇಟು ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ವಿಧಾನ ಪರಿಷತ್‍ನಲ್ಲಿಂದು ಮತಾಂತರ ನಿಷೇಧ ವಿಧೇಯಕ ಮಂಡನೆ

    ವಿಧಾನ ಪರಿಷತ್‍ನಲ್ಲಿಂದು ಮತಾಂತರ ನಿಷೇಧ ವಿಧೇಯಕ ಮಂಡನೆ

    ಬೆಂಗಳೂರು: ವಿಧಾನ ಪರಿಷತ್‍ನಲ್ಲಿಂದು (Vidhana Parishad) ಮತಾಂತರ ನಿಷೇಧ ವಿಧೇಯಕ (Anti Conversion Bill) ಮಂಡನೆ ಆಗಲಿದೆ. ವಿಧಾನಸಭೆಯಿಂದ ಅಂಗೀಕಾರವಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2022ನ್ನು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಂಡನೆ ಮಾಡಲಿದ್ದಾರೆ.

    ವಿಪಕ್ಷ ಕಾಂಗ್ರೆಸ್ (Congress) ಈ ಬಿಲ್‍ಗೆ ವಿಧಾನಸಭೆಯಲ್ಲಿ ವಿರೋಧಿಸಿತ್ತು. ಇದೀಗ ವಿಧಾನ ಪರಿಷತ್‍ನಲ್ಲೂ ವಿರೋಧಿಸುವ ಸಾಧ್ಯತೆ ಇದೆ. ಸದ್ಯ ಪರಿಷತ್‍ನಲ್ಲಿ ಬಿಜೆಪಿಗೆ (BJP) ಬಹುಮತ ಇದ್ದು, ಬಹುತೇಕ ವಿಧೇಯಕ ಪಾಸ್ ಆಗಲಿದೆ. ಜೆಡಿಎಸ್ (JDS) ಕೂಡಾ ಬಿಲ್‍ಗೆ ವಿರೋಧಿಸುವ ಸಾಧ್ಯತೆ ಇದೆ. ಆಡಳಿತ-ವಿಪಕ್ಷಗಳ ನಡುವೆ ಗದ್ದಲ ಗಲಾಟೆ ಸಾಧ್ಯತೆ ಇದೆ. ಇದನ್ನೂ ಓದಿ: ಸರ್ಕಾರದ ಡಬಲ್ ಗೇಮ್ ಬಯಲು – ಕೈ ಪ್ರಭಾವಿ ನಾಯಕ ಜಾರ್ಜ್ ಒತ್ತುವರಿ ಕಾಟಾಚಾರಕ್ಕೆ ತೆರವು

    ಇತ್ತ ಆರ್‌ಎಸ್‌ಎಸ್‌ (RSS) ಮುಖಂಡರ ಜೊತೆ ಬಿಜೆಪಿಯ ಆಯ್ದ ಪರಿಷತ್ ಸದಸ್ಯರು ರಾತ್ರಿ ಚಾಮರಾಜಪೇಟೆಯ ಕೇಶವಾಕೃಪಾದಲ್ಲಿ ಸಭೆ ನಡೆಸಿದ್ರು. ಮತಾಂತರ ತಡೆ ವಿಧೇಯಕ ಬಗ್ಗೆ ಪರಿಷತ್‍ನಲ್ಲಿ ಸಮರ್ಪಕವಾಗಿ ಮನವರಿಕೆ ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಈಗಾಗಲೇ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ವಿಧಾನ ಪರಿಷತ್‍ನಲ್ಲಿ ಈವರೆಗೆ ಮಸೂದೆಯನ್ನು ಸರ್ಕಾರ ಮಂಡಿಸಿರಲಿಲ್ಲ. ಮಸೂದೆ ಮಂಡಿಸುವ ತಡವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಪ್ರಸ್ತುತ ವಿಧಾನ ಪರಿಷತ್‍ನಲ್ಲಿ ಬಿಜೆಪಿಯ 41 ಸದಸ್ಯರಿದ್ದಾರೆ. ಕಾಂಗ್ರೆಸ್‍ನ 26 ಮತ್ತು ಜೆಡಿಎಸ್‍ನ 8 ಸದಸ್ಯರಿದ್ದಾರೆ. ಹಾಗಾಗಿ ಸಂಖ್ಯಾಬಲದಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವುದರಿಂದ ಮಸೂದೆ ಅಂಗೀಕಾರವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ಜಗಳ- ತಾಯಿ, ಮಗಳು ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ

    ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ

    ಬೆಂಗಳೂರು: ಕೊನೆಗೂ ಮತಾಂತರ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸುಗ್ರಿವಾಜ್ಞೆ ಮೂಲಕ ಮತಾಂತರ ಕಾಯ್ದೆ ಜಾರಿಗೆಗೆ ಸರ್ಕಾರ ತೀರ್ಮಾನ ಮಾಡಿದೆ.

    ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಅನುಮೋದನೆ ಪಡೆದಿತ್ತು. ಆದರೆ ಪರಿಷತ್ ನಲ್ಲಿ ಬಹುಮತ ಇಲ್ಲದ್ದಕ್ಕೆ ಕಾಯ್ದೆ ಮಂಡನೆಯನ್ನು ಸರ್ಕಾರ ಮುಂದೂಡಿತ್ತು.

    ಈ ಬಾರಿ ಬಜೆಟ್ ಅಧೀವೇಶದಲ್ಲಿ ಕೂಡ ಸರ್ಕಾರ ಮಂಡನೆ ಮಾಡಲಿಲ್ಲ. ಆದರೆ ಇದೀಗ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರ ಇಂದು ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಆಧ್ಯಾದೇಶ 2022 ಇದಕ್ಕೆ ಅನುಮೋದನೆ ನೀಡಿದೆ.

    ಸಂಪುಟ ಅನುಮೋದನೆ ಪಡೆದು ರಾಜ್ಯಪಾಲರಿಗೆ ಸುಗ್ರಿವಾಜ್ಞೆ ಹೊರಡಿಸುವಂತೆ ಶಿಫಾರಸು ಮಾಡಲಿದೆ. ರಾಜ್ಯಪಾಲರ ಅಂಕಿತದ ಬಳಿಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅಧಿಕೃತವಾಗಿ ಜಾರಿಗೆ ಬರುತ್ತದೆ.

    ಮತಾಂತರ ತಡೆ ಸುಗ್ರೀವಾಜ್ಞೆ ಹೈಲೈಟ್ಸ್
    > ಬಲವಂತದ ಮತಾಂತರ ಜಾಮೀನುರಹಿತ ಅಪರಾಧ ಮತ್ತು ಅಸಿಂಧು.
    > ಉಡುಗೊರೆ, ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ.
    > ಭಾವನಾತ್ಮಕವಾಗಿ ಸೆಳೆದು ಮತಾಂತರ ಮಾಡುವುದು ಅಪರಾಧ.

    > ಅಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಆ ಮದುವೆ ಅಸಿಂಧು ಆಗಲಿದೆ.
    > ಈ ಬಗ್ಗೆ ಘೋಷಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಈ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
    > ಸಾಮೂಹಿಕ ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ಮಿಕ ಮಿಷನರಿ, ಎನ್‍ಜಿಓಗಳು ಪಾಲ್ಗೊಳ್ಳುವಂತಿಲ್ಲ.
    > ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸಲಾಗುವುದು.

    ದಂಡ ಮತ್ತು ಶಿಕ್ಷೆ
    > ಎಸ್‍ಸಿ,ಎಸ್‍ಟಿ ಸಮುದಾಯದವರನ್ನು ಬಲವಂತವಾಗಿ ಮತಾಂತರ ಮಾಡುವ ಹಾಗಿಲ್ಲ
    > ಅಪ್ರಾಪ್ತರು, ಮಹಿಳೆಯರು, ಬುದ್ದಿಮಾಂದ್ಯರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡಬಾರದು.
    > ಕಾಯ್ದೆ ಉಲ್ಲಂಘಿಸಿದ್ದಲ್ಲಿ ಕನಿಷ್ಠ 3ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ.

    > ಇತರರನ್ನು ಬಲವಂತವಾಗಿ ಮತಾಂತರಿಸಿದ್ದಲ್ಲಿ 3ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ.
    > ಸಾಮೂಹಿಕ ಮತಾಂತರ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ.
    > ಬಲವಂತದ ಮತಾಂತರ ಸಾಬೀತಾದಲ್ಲಿ ಮತಾಂತರಕ್ಕೆ ಒಳಗಾದವನಿಗೆ ಗರಿಷ್ಠ 5 ಲಕ್ಷ ಪರಿಹಾರ ನೀಡಬೇಕಾಗುತ್ತದೆ.

    > ಪರಿಹಾರದ ಮೊತ್ತವನ್ನು ಮತಾಂತರ ಮಾಡಿದವನಿಂದಲೇ ವಸೂಲಿ ಮಾಡಬೇಕಾಗುತ್ತದೆ.
    > ಈ ಹಿಂದೆಯೂ ಮತಾಂತರ ಮಾಡಿದ್ದು ಸಾಬೀತಾದಲ್ಲಿ ದುಪ್ಪಟ್ಟು ದಂಡ ವಿಧಿಸಲಾಗುವುದು.
    > ಧರ್ಮ ಬದಲಿಸುವ 60 ದಿನ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು.

    > ಮತಾಂತರ ಆಗುವವರು, ಮಾಡುವವರಿಗೆ ಡಿಸಿ, ಪೊಲೀಸ್ ಸಮ್ಮುಖದಲ್ಲಿ ವಿಚಾರಣೆ ಇರುತ್ತದೆ.
    > ಶಾಲೆ, ಕಾಲೇಜು ಸಕ್ಷಮ ಪ್ರಾಧಿಕಾರಕ್ಕೆ ಮತ ಬದಲಾವಣೆಗೆ ಡಿಸಿ ಸೂಚಿಸಬೇಕು.
    > ಮತಾಂತರಗೊಂಡ ಎಸ್‍ಸಿ, ಎಸ್‍ಟಿ ವ್ಯಕ್ತಿಗಳಿಗೆ ಸಿಗುವ ಮೀಸಲಾತಿ, ಇತರೆ ಸೌಲಭ್ಯ ರದ್ದುಗೊಳಿಸಲಾಗುತ್ತದೆ.

  • ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಕೊಪ್ಪಳ: ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದ ಆರ್ಟಿಕಲ್ 25 ಪ್ರತಿಪಾದಿಸುವ, ಭಾರತೀಯ ಜನತೆಯ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಹಾಗೂ ಪ್ರತಿಯೊಬ್ಬ ಭಾರತೀಯನ ಧಾರ್ಮಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುವ ಹುನ್ನಾರವಾಗಿದೆ ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ – ಕೊಪ್ಪಳ ಜಿಲ್ಲಾ ಅಧ್ಯಕ್ಷರು ಹುಜಾರ್ ಆಹೆಮದ್ ಆರೋಪಿಸಿದ್ದಾರೆ.

    ಈ ಬಗ್ಗೆ ಪತಿಭಟನೆ ನಡೆಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್‍ಡಿಪಿಐ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಎನ್ನುವ ಆಕರ್ಷಕ ಹಣೆ ಪಟ್ಟಿ ಹೊಂದಿರುವ ಸದರಿ ಮಸೂದೆಯು, ಅಪ್ರಾಪ್ತ, ಅಸ್ವಸ್ಥ ಚಿತ್ತ, ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎನ್ನುವ ಮೂಲಕ ದಲಿತ ಸಮುದಾಯವನ್ನು ಮಾನಸಿಕ ಅಸ್ವಸ್ಥರು, ಎನ್ನುವ ಮೂಲಕ ತುಂಬಾ ಅವಮಾನಕರವಾಗಿ ಬಿಂಬಿಸಲಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

    ಅಕ್ರಮ ಮತಾಂತರ ನಡೆದಿದೆ ಎಂಬ ಆರೋಪವನ್ನು ಮಾಡಿ ಮತಾಂತರಗೊಂಡವರ ಬಂಧುಗಳು, ಸ್ನೇಹಿತರು ಹಾಗೂ ಪರಿಚಿತರ ಪೈಕಿ ಯಾರು ಬೇಕಾದರು ದೂರು ನೀಡಬಹುದು ಮತ್ತು ಆರೋಪ ಮಾಡಿದವರ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆಯೂ ಇರುವುದಿಲ್ಲ. ತಾನು ನಿರ್ದೂಷಿ ಎಂದು ಸಾಬೀತುಪಡಿಸುವ ಹೊಣೆ ಆರೋಪಕ್ಕೆ ಗುರಿಯಾದವರದೇ ಆಗಿರುತ್ತದೆ ಎನ್ನುವ ಮೂಲಕ ವೈಯಕ್ತಿಕ ದ್ವೇಷ, ಷಡ್ಯಂತ್ರ ಮತ್ತು ಅನ್ಯ ಕೋಮಿನವರ ನಾಶಕ್ಕೆ ಹಾಗೂ ಅವರನ್ನು ದುರುದ್ದೇಶಪೂರ್ವಕವಾಗಿ ತೊಂದರೆಗೆ ಸಿಲುಕಿಸುವ ಕೋಮುವಾದಿ ಧೋರಣೆಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

    ಕೋಮು ಆಧಾರಿತ ಗಲಭೆಗಳಿಗೆ ಮತ್ತು ಅಶಾಂತಿಯ ವಾತಾವರಣಕ್ಕೆ ರಾಜ್ಯವನ್ನು ದೂಡಿ, ಇದನ್ನೇ ಬಂಡವಾಳ ಮಾಡಿಕೊಂಡು ಚುನಾವಣೆಯಲ್ಲಿ ರಾಜಕೀಯ ಲಾಭಗಳಿಸುವುದು.ದಲಿತ, ಆದಿವಾಸಿ, ಅಲೆಮಾರಿ ಸಮುದಾಯಗಳು ಜಾತಿ ತಾರತಮ್ಯದಿಂದ ಮುಕ್ತಿ ಪಡೆಯದೆ ಮತ್ತದೇ ಜಾತಿವಾದದ ಕಪಿ ಮುಷ್ಟಿಯಲ್ಲಿ ನರಳಿ ಸಾಯುವಂತೆ ಮಾಡುವುದು. ಧರ್ಮ ನಿರಪೇಕ್ಷತೆಯನ್ನು ಪ್ರೋತ್ಸಾಹಿಸುವ ಅಂತರ್ ಧರ್ಮೀಯ ಮದುವೆಗಳನ್ನು ನಿರ್ಬಂಧಿಸುವುದು. ಮಹಿಳೆಯರ ಹಕ್ಕುಗಳನ್ನು ಕಸಿಯುವುದು. ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಥೆಗಳ ಮೇಲೆ ದಾಳಿಗೆ ಪ್ರಚೋಧಿಸುವುದು, ಸದರಿ ಕಾಯ್ದೆಯ ಮೂಲಕ ಕಾನೂನನ್ನು ದುರ್ಬಳಕೆ ಮಾಡಿಕೊಂಡು ತೊಂದರೆ ಮಾಡುವುದು. ಅವರ ಆಸ್ತಿಗಳನ್ನು ಲಪಟಾಯಿಸಿ, ಆ ಮೂಲಕ ಅವರ ಸೇವಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡುವುದು. ಮಾನವ ಹಕ್ಕುಗಳ ಪ್ರತಿಪಾದಕರು, ಚಳುವಳಿಗರಾರರು, ಹೋರಾಟಗಾರರು ಸಾಹಿತಿಗಳನ್ನು ದಿಕ್ಕು ತಪ್ಪಿಸಿ, ಅವರ ಆದ್ಯತೆಗಳ ದಾರಿ ಬದಲಿಸಿ, ಭಾವನಾತ್ಮಕ ಇಂತಹ ಜಟಾಪಟಿಗಳಲ್ಲೇ ಮುಳುಗಿಸಿ ಅಗತ್ಯವಾದ ವಿಚಾರಗಳ ಸುತ್ತ ಹೋರಾಟಗಳು ನಡೆಯದಂತೆ ಈ ಕಾಯ್ದೆಯ ಮೂಲಕ ಹುನ್ನಾರ ನಡೆಸಲಾಗುತ್ತಿದೆ.

    ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನೂ ಅವಿರತವಾಗಿ ನಡೆಸಿಕೊಂಡು ಬರುತ್ತಿರುವ ಹಲವು ಧಾರ್ಮಿಕ ಸಂಸ್ಥೆಗಳ ಮೇಲೆ ಈ ರೀತಿಯ ಭಯೋತ್ಪಾದನಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಸೇವಾ ಸಂಸ್ಥೆಗಳು ನಾಡಿನ ಶೋಷಿತ ಸಮುದಾಯಗಳಿಗೆ ನೀಡುತ್ತಿದ್ದ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತಿತರ ಸೇವೆಗಳನ್ನು ತಡೆಗಟ್ಟಿ ಶೋಷಣೆ ಮಾಡಲು ಹೊರಟಿದೆ. ಸದರಿ, ಮತಾಂತರ ನಿಷೇಧ ಕಾಯ್ದೆಯ ಮೂಲಕ ಸರ್ಕಾರವು, ಸಮಾಜದಲ್ಲಿ ಅಕ್ಷರಶಃ ಆತಂಕ, ಭಯ, ದಾಳಿಯ ವಾತಾವರಣ ಸೃಷ್ಟಿಸಿ ಧಾರ್ಮಿಕ ಹಕ್ಕಿನ ಸ್ವಾತಂತ್ರ್ಯವನ್ನು ಧಮನಿಸಿ ತನ್ನ ಕೋಮುವಾದಿ ಅಜೆಂಡಾವನ್ನು ಮೆರೆಯಲು ಹೊರಟಿದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಕಾಪಾಡಬೇಕಾದ ಮಹತ್ವದ ಅಧಿಕಾರ ಹೊಂದಿರುವ ರಾಜ್ಯಪಾಲರು, ಯಾವ ಕಾರಣಕ್ಕೂ ಈ ಮತಾಂತರ ನಿಷೇದ ಕಾಯ್ದೆ ಎಂಬ ಈ ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಮಸೂದೆಗೆ ಅನುಮತಿ ನೀಡಬಾರದೆಂದು ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಮ್ ಮನಿಯಾರ್ ಒತ್ತಾಯಿಸಿದ್ದಾರೆ.

  • ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

    ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

    ಬೆಂಗಳೂರು: ಕರ್ನಾಟಕ ಸರ್ಕಾರವು ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನ ವಿರೋಧಿಯು ಮತ್ತು ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಕೃತ್ಯವೂ ಆಗಿದೆ ಎಂಬ ನಿಲುವನ್ನು ಎಸ್‍ಡಿಪಿಐ ಈಗಾಗಲೇ ಪ್ರಕಟಿಸಿದ್ದು, ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ.

    ಈ ಬಗ್ಗೆ ಧ್ವನಿ ಎತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಘನತೆವೆತ್ತ ರಾಜ್ಯಪಾಲರು ಈ ಮಸೂದೆಯನ್ನು ತಿರಸ್ಕರಿಸಬೇಕು ಎಂಬ ಒತ್ತಾಯದ ಮನವಿಗಳನ್ನು ರಾಜ್ಯದಾದ್ಯಂತ ನಡೆಸಲಾದ ಪ್ರತಿಭಟನೆಗಳ ಮೂಲಕ ಸಲ್ಲಿಸಲಾಗಿದೆ. ಯುವಜನರ ಧರ್ಮಾಂತರದ ವೈವಾಹಿಕ ಜೀವನದ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿಯುವ ಮತ್ತು ಭಾರತದ ಪ್ರತಿಯೊಬ್ಬ ಪ್ರಜೆಯ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮತ್ತು ಇನ್ನೂ ಹತ್ತು ಹಲವು ಒತ್ತಾಯಗಳು ಮತ್ತು ಹೇರಿಕೆಗಳ ಮೂಲಕ ಜನತೆಯಲ್ಲಿ ಆತಂಕ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸಲು ಕಾರಣವಾಗಿರುವ ಮತಾಂತರ ನಿಷೇಧ ಎಂಬ ಭಯೋತ್ಪಾದಕ ಕಾಯ್ದೆಯನ್ನು ಜಾರಿಗೊಳಿಸಿದ್ದೇ ಆದಲ್ಲಿ, ಎಸ್‍ಡಿಪಿಐ ನಾಡಿನ ಸರ್ವ ಜನರ ಹಿತದೃಷ್ಟಿಯಿಂದ ಘನ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಸ್‍ಡಿಪಿಐ ತೀರ್ಮಾನಿಸಿದೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

    ಮತಾಂತರ ನಿಷೇಧ ಕಾಯ್ದೆಯು ವಿಧಾನ ಪರಿಷತ್ತಿನಲ್ಲಿ ಚರ್ಚೆಗೆ ಬಂದಾಗ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಕುಂಟು ನೆಪಗಳನ್ನು ಹೇಳದೇ, ಸಭೆಯನ್ನು ಬಹಿಷ್ಕರಿಸದೇ, ತನ್ನ ಎಲ್ಲಾ ಸದಸ್ಯರಿಗೂ ವಿಪ್ ಜಾರಿಗೊಳಿಸಿ ಮತಾಂತರ ನಿಷೇಧ ಕಾಯ್ದೆಯ ಚರ್ಚೆಯಲ್ಲಿ ಕಡ್ಡಾಯವಾಗಿ ಬಾಗವಹಿಸುವಂತೆ ನೋಡಿಕೊಳ್ಳಬೇಕು. ವಿಧಾನಸಭೆಯಲ್ಲಿ ಸದರಿ ಮಸೂದೆಯ ಕರಡನ್ನು ಮಂಡಿಸಿದಾಗ ಕಾಂಗ್ರೆಸ್‍ನ ಪ್ರಮುಖ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಹಾಜರಿರದೆ ಮಸೂದೆಯು ಮಂಡನೆಯಾದ ಮೇಲೆ ತಡವಾಗಿ ಸಭೆಗೆ ಆಗಮಿಸಿ, ನಮ್ಮಿಂದ ಮಸೂದೆಯನ್ನು ಮುಚ್ಚಿಟ್ಟು, ಚರ್ಚೆಗೆ ಅವಕಾಶ ನೀಡದೇ ಮಸೂದೆಯನ್ನು ಮಂಡಿಸಲಾಗಿದೆ ಎಂದು ತಕರಾರು ತೆಗೆದು ಮಾತನಾಡಿರುವ ಬಗ್ಗೆ ಎಸ್‍ಡಿಪಿಐ ಗಮನಿಸಿದೆ. ಇದು ತಪ್ಪು ಎಂದು ಅಭಿಪ್ರಯಾಪಟ್ಟಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

    ಸಭೆಗೆ ಸರಿಯಾದ ಸಮಯಕ್ಕೆ ಆಗಮಿಸಿ ಕರಡು ಮಂಡನೆಯಾಗದಂತೆ ನೋಡಿಕೊಳ್ಳಬೇಕಾಗಿದ್ದು ವಿರೋಧ ಪಕ್ಷಗಳ ಜವಾಬ್ದಾರಿ ಆಗಿತ್ತು. ಈಗಲಾದರೂ ಮಸೂದೆಯು ವಿಧಾನ ಪರಿಷತ್ತಿಗೆ ಚರ್ಚೆಗೆ ಬಂದಾಗ, ಯಾವ ನೆಪವನ್ನೂ ಹೇಳದೇ ವಿರೋಧ ಪಕ್ಷದ ಸರ್ವ ಸದಸ್ಯರು ಖುದ್ದು ಹಾಜರಿದ್ದು ಮಸೂದೆಯನ್ನು ವಿರೋಧಿಸಿ, ಪರಿಷತ್ತಿನಲ್ಲಿ ತಿರಸ್ಕಾರವಾಗುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

  • ಬಸವರಾಜ ಬೊಮ್ಮಾಯಿ ಕೋಮುವಾದಿ ಸಿಎಂ: ನಟ ಚೇತನ್

    ಬಸವರಾಜ ಬೊಮ್ಮಾಯಿ ಕೋಮುವಾದಿ ಸಿಎಂ: ನಟ ಚೇತನ್

    ದಾವಣಗೆರೆ: ಬಸವರಾಜ ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ, ಯಾವ ಸಿಎಂ ಕೂಡ ಇಷ್ಟು ಕೋಮುವಾದಿಯಾಗಿರಲಿಲ್ಲ. ಇವರಲ್ಲಿ ಎಲ್ಲರಿಗಿಂತ ಹೆಚ್ಚು ಕೋಮುವಾದ ಇದೆ ಎಂದು ನಟ ಚೇತನ್ ಅಹಿಂಸಾ ಕಿಡಿಕಾರಿದರು.

    basavaraj bommai

    ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವದಾಸಿಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದನ್ನು ನೋಡುವಷ್ಟು ತಾಳ್ಮೆ ರಾಜಕಾರಣಿಗೆ ಇಲ್ಲ. ಸಿಎಂ ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ. ಯಾವ ಸಿಎಂ ಕೂಡ ಇಷ್ಟು ಕೋಮುವಾದಿಯಾಗಿರಲಿಲ್ಲ. ಇವರಲ್ಲಿ ಎಲ್ಲರಿಗಿಂತ ಹೆಚ್ಚು ಕೋಮುವಾದ ಇದೆ. ಅವರ ತಂದೆ ಒಳ್ಳೆಯ ಪ್ರಗತಿಪರ ಸಿಎಂ ಆಗಿದ್ದರು. ಮತಾಂತರ ನಿಷೇಧ ಕಾಯ್ದೆ ಸಂವಿಧಾನದ ವಿರೋಧ ನೀತಿ. ಅಂಬೇಡ್ಕರ್, ಬಸವಣ್ಣನವರು ಕೂಡ ಅವರಿಗೆ ಬೇಕಾದ ಧರ್ಮ ಸ್ಥಾಪನೆ ಮಾಡಿದ್ದಾರೆ. ಜನರು ಅವರಿಗೆ ಬೇಕಾದ ಧರ್ಮಕ್ಕೆ ಸೇರಬಹುದು ಎನ್ನುವುದು ಸಂವಿಧಾನದಲ್ಲಿದೆ. ಬಲವಂತವಾಗಿ ಮತಾಂತರ ಮಾಡಿದರೆ ಅದಕ್ಕೆ ಬೇಕಾದರೆ ಕ್ರಮ ಕೈಗೊಳ್ಳಲಿ. ಜನರಿಗೆ ಹೆದರಿಸಿ, ಬೆದರಿಸಿ ಕಾಯ್ದೆ ತರುವುದು ಸರಿಯಲ್ಲ. ಅಲ್ಪಸಂಖ್ಯಾತ, ಕ್ರಿಸ್ಚಿಯನ್‍ರ ಮೇಲೆ ದಬ್ಬಾಳಿಕೆ ಮಾಡಿ ಕಾಯ್ದೆ ತರುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ಕೆಲ ಸ್ವಾಮೀಜಿಗಳು ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯುವಂತೆ ಕೇಳುತ್ತಿರುವುದು ಬೇಸರದ ವಿಚಾರ. ಮೊಟ್ಟೆ ತಿನ್ನುವವರ ಶಾಲೆ, ಮಟನ್ ತಿನ್ನುವವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ ಚಿದ್ರ ಮಾಡುವುದು ಸ್ವಾಮೀಜಿಗಳ ಉದ್ದೇಶವೆ? ಅನುಭವ ಮಂಟಪದಲ್ಲಿ ಸಹ ಮಾಂಸಾಹಾರಿಗಳಿದ್ದರು. ಇದನ್ನು ಸ್ವಾಮೀಜಿಗಳು ಅರಿತುಕೊಳ್ಳಬೇಕು. ಇಡೀ ರಾಜ್ಯವೇ ದೇಶಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದರು. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

  • ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ: ನಳಿನ್ ಕುಮಾರ್ ಕಟೀಲ್

    ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ: ನಳಿನ್ ಕುಮಾರ್ ಕಟೀಲ್

    ಬೆಂಗಳೂರು: ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ 2023ರ ಚುನಾವಣೆ ವೇಳೆಗೂ ಬೊಮ್ಮಾಯಿಯವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ 2023ರ ಚುನಾವಣೆ ವೇಳೆಗೂ ಬೊಮ್ಮಾಯಿಯವರೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಕೇವಲ ಕಪೋಲಕಲ್ಪಿತ. ಬಿಜೆಪಿ ಸರ್ಕಾರದಲ್ಲಿ ಅರಾಜಕತೆ ಹುಟ್ಟುಹಾಕಲು ಇಂತಹ ಸುದ್ದಿ ಹರಡಿಸುತ್ತಾರೆ.  ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಸಿಎಂಗೆ ಯಾವುದೇ ಅನಾರೋಗ್ಯ ಇಲ್ಲ, ಕಾಲು ನೋವು ಮಾತ್ರ ಇದೆ. ಅದಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೊಮ್ಮಾಯಿ ಅವರು ವಿದೇಶಕ್ಕೂ ಹೋಗಲ್ಲ, ಅವರ ಕಾಲಿನ ಸಮಸ್ಯೆಗೆ ಇಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಫೋಬಿಯಾ ಎನ್ನುವಂತೆ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ: ಪ್ರಹ್ಲಾದ್ ಜೋಶಿ

    ಇದೇ ವೇಳೆ ಸಚಿವ ಸಂಪುಟ ಪುನರ್ ರಚನೆ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟ ವಿಚಾರ. ಒಂದು ವೇಳೆ ಪುನರ್ ರಚನೆ ಆಗುವುದಾದರೆ ನಮ್ಮ ಜೊತೆ ಚರ್ಚೆ ಮಾಡುತ್ತಾರೆ. ಮರುದಿನ ಅದರ ಬಗ್ಗೆ ನಿಮಗೆ ತಿಳಿಸುತ್ತೇನೆ ಎಂದರು.  ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

    ಮತಾಂತರದಿಂದ ಸಾಮಾಜಿಕ ಕಲಹ ಆಗುತ್ತಿತ್ತು. ಅದಕ್ಕೆ ತಡೆಯೊಡ್ಡಲು ಕಾಯ್ದೆ ಜಾರಿ ಮಾಡಲಾಗಿದೆ. ಬಡತನ, ನಿರುದ್ಯೋಗದಿಂದ ನಗರದಲ್ಲಿ ಇದ್ದ ಮತಾಂತರ ಹಳ್ಳಿಗೂ ವ್ಯಾಪಿಸಿದೆ. ಹಾಗಾಗಿ ಬೊಮ್ಮಾಯಿ ಒಳ್ಳೆ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ವಿರೋಧ ಮಾಡುವುದು ಸಹಜ. ಸಿದ್ದರಾಮಣ್ಣನೇ ಮತಾಂತರ ನಿಷೇಧ ಕಾಯ್ದೆಗೆ ಸಹಿ ಹಾಕಿದ್ದಾರೆ. ಅಧಿಕಾರ ಇದ್ದಾಗ ಒಂದು, ಇಲ್ಲದಾಗ ಒಂದು. ಅವರಿಗೆ ಮರೆವು. ಅರಳು, ಮರಳು ಇಲ್ಲಿ ಬಂದು ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಶಾಸಕರೇ ನಾವು ತಂದ ಕಾಯ್ದೆ ಪರವಾಗಿದ್ದಾರೆ ಎಂದು ಟಾಂಗ್ ನೀಡಿದರು.