Tag: antarctica

  • ಅಂಟಾರ್ಕ್ಟಿಕಾದಲ್ಲಿ ಬೃಹತ್ ಓಝೋನ್ ರಂಧ್ರ ಪತ್ತೆ – ಕಳವಳಕ್ಕೀಡುಮಾಡುತ್ತಾ ಈ ನೈಸರ್ಗಿಕ ವಿದ್ಯಮಾನ?

    ಅಂಟಾರ್ಕ್ಟಿಕಾದಲ್ಲಿ ಬೃಹತ್ ಓಝೋನ್ ರಂಧ್ರ ಪತ್ತೆ – ಕಳವಳಕ್ಕೀಡುಮಾಡುತ್ತಾ ಈ ನೈಸರ್ಗಿಕ ವಿದ್ಯಮಾನ?

    ಅಂಟಾರ್ಕ್ಟಿಕಾದ ಮೇಲಿನ ಉಪಗ್ರಹ ಮಾಪನಗಳು ಓಝೋನ್ ಪದರದಲ್ಲಿ ದೈತ್ಯ ರಂಧ್ರವನ್ನು ಪತ್ತೆಹಚ್ಚಿದೆ. ವಿಜ್ಞಾನಿಗಳು ಓಝೋನ್ ಸವಕಳಿ ಪ್ರದೇಶ ಎಂದು ಕರೆಯುವ ರಂಧ್ರವು 2.60 ಕೋಟಿ ಚದರ ಕಿ.ಮೀ ಗಾತ್ರದಲ್ಲಿದ್ದು, ಸರಿಸುಮಾರು ಬ್ರೆಜಿಲ್ ದೇಶದ ಮೂರು ಪಟ್ಟು ದೊಡ್ಡದಾಗಿದೆ.

    ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಕೋಪರ್ನಿಕಸ್ ಸೆಂಟಿನೆಲ್-5ಪಿ ಉಪಗ್ರಹವು ಪರಿಸರ ಮೇಲ್ವಿಚಾರಣಾ ಕಾರ್ಯದ ಭಾಗವಾಗಿ ಇತ್ತೀಚೆಗೆ ಇದನ್ನು ಪತ್ತೆಹಚ್ಚಿತು. ಈ ರಂಧ್ರ ಇಲ್ಲಿಯವರೆಗೆ ಪತ್ತೆಹಚ್ಚಲಾದ ಅತಿ ದೊದ್ದ ಓಝೋನ್ ರಂಧ್ರಗಳಲ್ಲಿ ಒಂದಾಗಿದೆ ಎಂದು ಹೇಳಿತು. ಈ ವರ್ಷದ ಓಝೋನ್ ರಂಧ್ರ ಸಾಮಾನ್ಯಕ್ಕಿಂತ ಬೇಗನೆ ಪ್ರಾರಂಭವಾಗಿದ್ದು, ಈ ಕಾರಣಕ್ಕೆ ಅದು ಅತ್ಯಂತ ದೊಡ್ಡದಾಗಿ ಮಾರ್ಪಟ್ಟಿದೆ ಎಂಬುದು ತಿಳಿದುಬಂದಿದೆ. ಸದ್ಯ ಈ ಓಝೋನ್ ರಂಧ್ರ ಅಂಟಾರ್ಕ್ಟಿಕಾದ ಮೇಲ್ಮೈಯಲ್ಲಿ ತಾಪಮಾನವನ್ನು ಹೆಚ್ಚಿಸುವ ಸಾಧ್ಯತೆಯಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

    ಏನಿದು ಓಝೋನ್ ಪದರ?
    ಓಝೋನ್ ಪದರವು ವಾಯುಮಂಡಲದಲ್ಲಿನ ಒಂದು ರೀತಿಯ ಅನಿಲವಾಗಿದ್ದು, ಭೂಮಿಯ ವಾತಾವರಣದ 4 ಪದರಗಳಲ್ಲಿ ಒಂದಾಗಿದೆ. ಇದು ನೇರಳಾತೀತ ವಿಕಿರಣವನ್ನು ಹೀರಿಕೊಳ್ಳುವ ರಕ್ಷಣಾತ್ಮಕ ಅನಿಲ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನ ಅಪಾಯಕಾರಿ ಪ್ರಮಾಣದ ಯುವಿ ಕಿರಣಗಳಿಣದ ಮಾನವರು ಮತ್ತು ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಕೆಲಸವನ್ನು ಇದು ಮಾಡುತ್ತದೆ. ಯುವಿ ಕಿರಣಗಳು ಚರ್ಮದ ಕ್ಯಾನ್ಸರ್‌ಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಯುವಿ ಕಿರಣಗಳಿಂದ ನಮ್ಮನ್ನು ರಕ್ಷಿಸಲು ಹಾಗೂ ಕ್ಯಾನ್ಸರ್ ದರವನ್ನು ಕಡಿಮೆ ಮಾಡಲು ಈ ಓಝೋನ್ ಪದರ ಸಹಾಯ ಮಾಡುತ್ತದೆ.

    ಓಝೋನ್ ರಂಧ್ರ ಎಂದರೇನು?
    ಓಝೋನ್ ರಂಧ್ರಗಳು ಪ್ರತಿ ವರ್ಷ ಬೆಳೆಯುತ್ತವೆ ಮತ್ತು ಕುಗ್ಗುತ್ತವೆ. ಅಂಟಾರ್ಕ್ಟಿಕಾದ ಮೇಲಿನ ಓಝೋನ್ ರಂಧ್ರದ ಗಾತ್ರ ಪ್ರತಿ ವರ್ಷವೂ ಏರಿಳಿತಗೊಳ್ಳುತ್ತದೆ. ಈ ರಂಧ್ರ ಪ್ರತಿ ವರ್ಷ ಆಗಸ್ಟ್‌ನಲ್ಲಿ ತೆರೆಯುತ್ತದೆ ಮತ್ತು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮತ್ತೆ ಮುಚ್ಚುತ್ತದೆ. ಅಂಟಾರ್ಕ್ಟಿಕಾದ ಮುಚ್ಚಿದ ಭೂಪ್ರದೇಶದ ಮೇಲೆ ಭೂಮಿಯ ತಿರುಗುವಿಕೆಯಿಂದಾಗಿ ಒಂದು ರೀತಿಯ ವಿಶೇಷ ಗಾಳಿ ಉಂಟಾಗುತ್ತದೆ. ಇದರಿಂದಾಗಿ ಓಝೋನ್ ರಂಧ್ರ ತೆರೆದುಕೊಳ್ಳುತ್ತದೆ. ಈ ಗಾಳಿ ಕಡಿಮೆಯಾದಂತೆ ರಂಧ್ರ ಮುಚ್ಚಲಾರಂಭಿಸುತ್ತದೆ.

    ಈ ವರ್ಷ ದೈತ್ಯ ಓಝೋನ್ ರಂಧ್ರಕ್ಕೆ ಕಾರಣವೇನು?
    ವಿಜ್ಞಾನಿಗಳು ಈ ವರ್ಷದ ದೊಡ್ಡ ಓಝೋನ್ ರಂಧ್ರವು ಡಿಸೆಂಬರ್ 2022 ಮತ್ತು ಜನವರಿ 2023ರ ಅವಧಿಯಲ್ಲಿ ಹಂಗಾ ಟೊಂಗೈನ್ ಟೊಂಗಾದಲ್ಲಿ ಉಂಟಾದ ಭಾರೀ ಜ್ವಾಲಾಮುಖಿ ಸ್ಫೋಟಗಳಿಂದ ಉಂಟಾಗಿರಬಹುದು ಎಂದು ತಿಳಿಸಿದ್ದಾರೆ. ಸಾಮಾನ್ಯ ಪರಿಸ್ಥಿತಿಗಳಲ್ಲಿ, ಜ್ವಾಲಾಮುಖಿ ಸ್ಫೋಟದಿಂದ ಬಿಡುಗಡೆಯಾಗುವ ಅನಿಲ ವಾಯುಮಂಡಲದ ಮಟ್ಟಕ್ಕಿಂತ ಕೆಳಗಿರುತ್ತದೆ. ಆದರೆ ಈ ಸ್ಫೋಟ ಹೆಚ್ಚಿನ ನೀರಿನ ಆವಿಯನ್ನು ವಾಯುಮಂಡಲಕ್ಕೆ ಕಳುಹಿಸಿದೆ. ಈ ಕಾರಣಕ್ಕೆ ಬೃಹತ್ ರಂಧ್ರ ತೆರೆದುಕೊಂಡಿದೆ ಎಂದು ನಂಬಲಾಗಿದೆ. ಇದನ್ನೂ ಓದಿ: 2021ರ ಹೊಸ ಐಟಿ ನಿಯಮವೇನು? ಭಾರತದಲ್ಲಿ 74 ಲಕ್ಷ ವಾಟ್ಸಪ್ ‌ಖಾತೆಗಳ ನಿಷೇಧವೇಕೆ?

    ರಾಸಾಯನಿಕ ಕ್ರಿಯೆಗಳ ಮೂಲಕ ನೀರು ಓಝೋನ್ ಪದರದ ಮೇಲೆ ಪ್ರಭಾವ ಬೀರುತ್ತದೆ. ಮತ್ತು ಅದರ ತಾಪನ ದರವನ್ನು ಬದಲಾಯಿಸುತ್ತದೆ. ನೀರಿನ ಆವಿಯು ಬ್ರೋಮಿನ್ ಮತ್ತು ಅಯೋಡಿನ್‌ನಂತಹ ಓಝೋನ್ ಅನ್ನು ಸವಕಳಿ ಮಾಡುವ ಅಂಶಗಳನ್ನು ಒಳಗೊಂಡಿದೆ. ಆದರೆ ಈ ಬಾರಿ ಉಂಟಾಗಿರುವ ಬೃಹತ್ ರಂಧ್ರಕ್ಕೆ ಮಾನವರೇ ಕಾರಣ ಎಂಬುದಕ್ಕೆ ಹೆಚ್ಚಿನ ಪುರಾವೆಗಳಿಲ್ಲ.

    ಮಾನವರಿಂದ ಉಂಟಾಗಿತ್ತು ಬೃಹತ್ ಓಝೋನ್ ರಂಧ್ರ:
    1970 ರ ವೇಳೆ ವಿಜ್ಞಾನಿಗಳು ಮಾನವನ ಚಟುವಟಿಕೆಗಳಿಂದ ಭಾರೀ ಓಝೋನ್ ರಂಧ್ರ ಸೃಷ್ಟಿಯಾಗುತ್ತಿರುವುದನ್ನು ಪತ್ತೆಹಚ್ಚಿದರು. ನೆಲ ಮತ್ತು ಉಪಗ್ರಹ ಆಧಾರಿತ ಮಾಪನಗಳು ಕ್ಲೋರೊಫ್ಲೋರೋಕಾರ್ಬನ್ ಎಂಬ ರಾಸಾಯನಿಕಗಳ ವ್ಯಾಪಕ ಬಳಕೆಯಿಂದ ಉಂಟಾದ ಈ ರಂಧ್ರಗಳನ್ನು ಪತ್ತೆಹಚ್ಚಿದವು. ಈ ರಾಸಾಯನಿಕವನ್ನು ಮಾನವರು ಹೇರ್ ಸ್ಪ್ರೇ, ಶೇವಿಂಗ್ ಜೆಲ್ ಹಾಗೂ ಫ್ರಿಜ್‌ಗಳಲ್ಲಿ ವ್ಯಾಪಕವಾಗಿ ಬಳಸುತ್ತಿದ್ದರು. ಇದರ ಅನಿಲದ ಪ್ರೊಪೆಲ್ಲಂಟ್‌ಗಳು ಕ್ಲೋರಿನ್ ಅನ್ನು ಹೊಂದಿರುತ್ತವೆ. ಇದು ವಾಯುಮಂಡಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ ಮತ್ತು ಓಝೋನ್ ಅನ್ನು ಖಾಲಿ ಮಾಡುತ್ತದೆ ಎಂಬುದು ತಿಳಿದುಬಂತು.

    ಈ ವಿಚಾರವನ್ನು ವಿಜ್ಞಾನಿಗಳು ಪತ್ತೆಹಚ್ಚಿದ ತಕ್ಷಣ ಜಗತ್ತು ತ್ವರಿತವಾಗಿ ಕ್ರಮವನ್ನು ತೆಗೆದುಕೊಂಡಿತು. 1987 ರಲ್ಲಿ ಈ ಹಾನಿಕಾರಕ ಪದಾರ್ಥಗಳ ಉತ್ಪಾದನೆಯನ್ನು ಹಂತಹಂತವಾಗಿ ಕಡಿಮೆ ಮಾಡುವ ಮೂಲಕ ಓಝೋನ್ ಪದರವನ್ನು ರಕ್ಷಿಸಲು ಮಾಂಟ್ರಿಯಲ್ ಪ್ರೋಟೋಕಾಲ್ ಅನ್ನು ರಚಿಸಲಾಯಿತು. ಈ ಪ್ರೋಟೋಕಾಲ್ ಪರಿಣಾಮಕಾರಿಯಾಯಿತು. ಓಝೋನ್ ರಂಧ್ರ ಸೃಷ್ಟಿಗೆ ಕಾರಣವಾಗುತ್ತಿದ್ದ ಅನಿಲ ಹೊರಸೂಸುವಿಕೆಯ ನಿಯಂತ್ರಣದ ನಂತರ ದಶಕಗಳಲ್ಲಿ ಓಝೋನ್ ರಂಧ್ರಗಳು ಚಿಕ್ಕದಾಗಿದೆ.

    ಓಝೋನ್ ರಂಧ್ರಕ್ಕೆ ಹವಾಮಾನ ಬದಲಾವಣೆಯೂ ಕಾರಣವೆ?
    ಓಝೋನ್ ಸವಕಳಿಗೆ ಜಾಗತಿಕ ಹವಾಮಾನ ಬದಲಾವಣೆ ಪ್ರಮುಖ ಕಾರಣವಲ್ಲ ಎಂದು ವಿಜ್ಞಾನಿಗಳು ಒಪ್ಪುತ್ತಾರೆ. ಆದರೂ ಇತ್ತೀಚೆಗೆ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಓಝೋನ್ ರಂಧ್ರಗಳ ಮೇಲೆ ಪರಿಣಾಮ ಬೀರುವ ಲಕ್ಷಣಗಳೂ ಕಂಡುಬಂದಿದೆ ಎನ್ನಲಾಗಿದೆ. ಓಝೋನ್ ರಂಧ್ರದ ತಗ್ಗಿಸುವಿಕೆಯನ್ನು 1980 ರ ದಶಕದಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಆದರೆ 2020 ಓಝೋನ್ ರಂಧ್ರ ತುಂಬಾ ದೊಡ್ಡದಾಗಿ ಹಾಗೂ ದೀರ್ಘಕಾಲ ಉಳಿಯುವುದು ಗಮನಕ್ಕೆ ಬಂದ ಬಳಿಕ ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ.

    2020 ರಲ್ಲಿ ದೊಡ್ಡ ಓಝೋನ್ ರಂಧ್ರಕ್ಕೆ ಮುಖ್ಯ ಕಾರಣವೆಂದರೆ ಆಗ್ನೇಯ ಆಸ್ಟ್ರೇಲಿಯಾದಲ್ಲಿ ಆ ವರ್ಷ ಸಂಭವಿಸಿದ ಕಾಳ್ಗಿಚ್ಚು ಎಂದು 2021ರಲ್ಲಿ ನಡೆಸಿದ ಸಂಶೋಧನೆಯೊಂದು ತೋರಿಸಿದೆ. ಹವಾಮಾನ ಬಿಕ್ಕಟ್ಟು ಮುಂದುವರಿದಂತೆ, ಭೂಮಿ ಬೆಚ್ಚಗಾಗುವುದು ಮುಂದುವರಿಸುವುದರೊಂದಿಗೆ ಬೆಂಕಿಯ ದುರಂತಗಳೂ ಪ್ರಪಂಚದಾದ್ಯಂತ ಸಾಮಾನ್ಯವಾಗುತ್ತಿದೆ. ನಾವು ಹೆಚ್ಚು ಹೊಗೆಯನ್ನು ವಾಯುಮಂಡಲಕ್ಕೆ ಬಿಟ್ಟಷ್ಟೂ ಓಝೋನ್ ಸವಕಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.

  • ಇತಿಹಾಸದಲ್ಲಿಯೇ ಮೊದಲಬಾರಿಗೆ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ

    ಇತಿಹಾಸದಲ್ಲಿಯೇ ಮೊದಲಬಾರಿಗೆ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ

    ಅಂಟಾರ್ಟಿಕಾ: ಇತಿಹಾಸದಲ್ಲಿಯೇ ಮೊದಲಬಾರಿಗೆ ಏರ್ಬಸ್ ಎ340 ಹಿಮಾವೃತಗೊಂಡ ಅಂಟಾರ್ಟಿಕಾದಲ್ಲಿ ಲ್ಯಾಂಡ್ ಆಗಿದೆ.

    ನಾವು ವಿಮಾನವನ್ನು ಎಲ್ಲ ಕಡೆ ಹಾರಾಡುವುದನ್ನು ನೋಡಿದ್ದೇವೆ. ಎಂದೂ ವಿಮಾನ ಹಿಮಾವೃತಗೊಂಡ ಪ್ರದೇಶದಲ್ಲಿ ಲ್ಯಾಂಡ್ ಆಗಿರುವುದನ್ನು ನೋಡಿರಲಿಲ್ಲ. ಆದರೆ ಈಗ ಇತಂಹ ಅದ್ಭುತ ಸಾಹಸವನ್ನು ಹಾಯ್ ಫ್ಲೈ ಮಾಡಿದೆ. ಹಾಯ್ ಫ್ಲೈ ನ ಉಪಾಧ್ಯಕ್ಷ ಕ್ಯಾಪ್ಟನ್ ಕಾರ್ಲೋಸ್ ಮಿರ್ಪುರಿ ಅವರ ತಂಡ ಏರ್ಬಸ್ ಎ340 ನೊಂದಿಗೆ ನವೆಂಬರ್ 2 ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್‍ನಿಂದ ಹೊರಟು ಅಂಟಾರ್ಟಿಕಾದ ವುಲ್ಫ್ಸ್ ಫಾಂಗ್ ರನ್ ವೇ ಎಂದು ಕರೆಯಲ್ಪಡುವ ನೀಲಿ ಗ್ಲೇಶಿಯಲ್ ಲ್ಯಾಂಡಿಂಗ್ ಸ್ಟ್ರಿಪ್‍ನಲ್ಲಿ ಲ್ಯಾಂಡ್ ಆಗಿದೆ. ಇದನ್ನೂ ಓದಿ: ವಿದೇಶಗನ ಜೊತೆ ಸಖತ್ ಸ್ಟೆಪ್ ಹಾಕಿದ ಅಜ್ಜ – ವೀಡಿಯೋ ವೈರಲ್

    ಇಲ್ಲಿರುವ ವಿಶೇಷ ಸಂಗತಿ ಎಂದರೆ, ಅಂಟಾರ್ಟಿಕಾದಲ್ಲಿನ ಸಾಹಸ ಶಿಬಿರವಾದ ವುಲ್ಫ್ಸ್ ಫಾಂಗ್ ಈ ಐತಿಹಾಸಿಕ ಕಾರ್ಯಾಚರಣೆಯನ್ನು ನಿರ್ವಹಿಸಲು ಹೈ ಫ್ಲೈ ಅನ್ನು ನೇಮಿಸಿಕೊಂಡಿದೆ. ಈ ಎ340 ಏರ್ಬಸ್ ಒಟ್ಟು 4630 ಕಿಲೋಮೀಟರ್ ಪ್ರಯಾಣಿಸಿತು. ತಾಂತ್ರಿಕವಾಗಿ ವಿಮಾನ ನಿಲ್ದಾಣವಾಗದಿದ್ದರೂ, ಸಿ-ಲೆವೆಲ್ ವಿಮಾನ ನಿಲ್ದಾಣವಾಗಿ ಗೊತ್ತುಪಡಿಸಲಾದ ವುಲ್ಫ್ಸ್ ಫಾಂಗ್ ಆಸ್ತಿಯಲ್ಲಿನ ನೀಲಿ-ಐಸ್ ರನ್‍ವೇಯಲ್ಲಿ ಏರ್ಬಸ್ ಅನ್ನು ಇಳಿಸಲಾಯಿತು.

    ಪೈಲಟ್ ಕಾರ್ಲೋಸ್ ಮಿರ್ಪುರಿ ಈ ಕುರಿತು, ವಿಮಾನವು ಸುಗಮವಾಗಿ ಸಾಗಿತ್ತು. ಆದರೆ ಲ್ಯಾಂಡ್ ಮಾಡಬೇಕಾದ ವೇಳೆ ರನ್‍ವೇಯನ್ನು ಗುರುತಿಸುವುದು ಸುಲಭವಾಗಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ನಾವು ರಾಜೀಯಾಗುವುದಿಲ್ಲ: ಅಮೀರ್‌ಗೆ ರಾಕಿಬಾಯಿ ಯಶ್ ಉತ್ತರ

    ಈ ಐತಿಹಾಸಿಕ ವಿಮಾನವು ಅಂಟಾರ್ಟಿಕಾಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕು ಎಂದು ಇಷ್ಟಪಡುವ ಪ್ರಯಾಣಿಕರ ಆಸೆಯನ್ನು ನೆರವೇರಿಸುತ್ತೆ. ಆದರೆ ಅಂಟಾರ್ಟಿಕಾದಲ್ಲಿ ಯಾವುದೇ ಅಧಿಕೃತ ವಿಮಾನ ನಿಲ್ದಾಣವಿಲ್ಲದಿದ್ದರೂ 50 ಲ್ಯಾಂಡಿಂಗ್ ಸ್ಟ್ರಿಪ್‍ಗಳು ಮತ್ತು ರನ್‍ವೇಗಳಿವೆ.

  • ಬೇರ್ಪಟ್ಟಿದೆ ಲಕ್ಷ ಕೋಟಿ ಟನ್ ತೂಕದ ಹಿಮಬಂಡೆ: ಭಾರತದ ಮೇಲಾಗುವ ಪರಿಣಾಮ ಏನು?

    ಬೇರ್ಪಟ್ಟಿದೆ ಲಕ್ಷ ಕೋಟಿ ಟನ್ ತೂಕದ ಹಿಮಬಂಡೆ: ಭಾರತದ ಮೇಲಾಗುವ ಪರಿಣಾಮ ಏನು?

    ಲಂಡನ್: ಜಾಗತಿಕ ತಾಪಮಾನದಿಂದಾಗಿ ಭಾರೀ ದೊಡ್ಡ ಹಿಮಬಂಡೆಯೊಂದು ಅಂಟಾರ್ಟಿಕಾದಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಹಿಮಬಂಡೆಯಾಗಿರುವ ಲಾರ್ಸೆನ್ ಸಿ ಯಿಂದ ಜುಲೈ 10- 12ರ ಮಧ್ಯಭಾಗದಲ್ಲಿ ಬೇರ್ಪಟ್ಟಿದೆ.

    ಈ ಹಿಮಬಂಡೆ ಸರಿ ಸುಮಾರು 5 ಸಾವಿರ 800 ಚದರ ಕಿ.ಮೀ. ಅಷ್ಟು ದೊಡ್ಡದಾಗಿದ್ದು, ಒಂದು ಲಕ್ಷ ಕೋಟಿ ಟನ್ ತೂಕವಿದೆ. ಅಂದ್ರೆ ಬರೋಬ್ಬರಿ ನಾಲ್ಕು ದೆಹಲಿಯಷ್ಟು ದೊಡ್ಡದು. ಈ ಹಿಮಬಂಡೆ ತುಂಡಾಗಿರುವುದಿಂದ ವಿಶ್ವದಲ್ಲೇ ಭಾರೀ ಪ್ರತಿಕೂಲ ಪರಿಣಾಮವಾಗಲಿದೆ ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ. ವಿಶೇಷವಾಗಿ ದಕ್ಷಿಣ ಧ್ರುವದ ಬಳಿ ಸಂಚರಿಸುವ ಹಡಗುಗಳಿಗೆ ಗಂಭೀರ ಅಪಾಯವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

    ಭಾರತದ ಮೇಲಾಗುವ ಪರಿಣಾಮ ಏನು?
    ಭಾರತ ಪರ್ಯಾಯ ದ್ವೀಪರಾಷ್ಟ್ರ. ಮೂರು ಕಡೆ ನೀರಿನಿಂದ ತುಂಬಿದೆ. ಹೀಗಾಗಿ, ತುಂಡಾಗಿರುವ ಮಂಜುಗಡ್ಡೆ ನಿಧಾನವಾಗಿ ಕರಗಲು ಆರಂಭಿಸುತ್ತದೆ. ಆಗ ಸಮುದ್ರ ಮಟ್ಟ ಏರಿಕೆಯಾಗೋದು ಸಾಮಾನ್ಯ. ಹಾಗಾಗಿ, ಭಾರತದ ಕಡಲ ಕಿನಾರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಅರಬ್ಬಿಸಮುದ್ರದ ಮುಂಬೈ, ಹಿಂದೂ ಮಹಾಸಾಗರದ ಚೆನ್ನೈ, ಬಂಗಾಳಕೊಲ್ಲಿಯ ಕೊಲ್ಕತ್ತಾದ ಮೇಲೆ ಪರಿಣಾಮ ಆಗಲಿದೆ.

    2050ರೊಳಗೆ ಸಮುದ್ರ ಏರಿಕೆಯಾಗಲಿರುವ ಬಗ್ಗೆ ವಿಜ್ಞಾನಿಗಳು ಅಂದಾಜಿಸಿದ್ದು 2100ನೇ ಇಸ್ವಿಯೊಳಗಾಗಿ 30 ರಿಂದ 100 ಸೆ.ಮೀ. ನೀರು ಏರಿಕೆಯಾಗಬಹುದು. ಕೆಲವು ಪ್ರದೇಶದಲ್ಲಿ 200 ರಿಂದ 300 ಸೆ.ಮೀ. ಸಾಗರ ಮಟ್ಟ ಏರಿಕೆಯಾಗಬಹುದು.

    ಈಗಾಗಲೇ ಸುಂದರ್‍ಬನ್ಸ್ ಹಾಗೂ ಮಜೌಲಿಯಲ್ಲಿ ಸಮುದ್ರ ಮಟ್ಟ ಏರಿಕೆಯಾಗುತ್ತಿದ್ದು, ಭಾರತ, ಚೀನಾ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ಸಮಸ್ಯೆಯಾಗಬಹುದು. ಪ್ರಮುಖವಾಗಿ ದಕ್ಷಿಣ ಏಷ್ಯಾ ಹಾಗೂ ಆಗ್ನೇಯಾ ಏಷ್ಯಾ ದೇಶಗಳಿಗೆ ತೊಂದರೆಯಾಗಲಿದೆ.

    ನೀರಿನ ಮಟ್ಟ ಏರಿಕೆಯಾದಲ್ಲಿ ವಾತಾವರಣದಲ್ಲಿ ಹವಾಮಾನ ವೈಪರಿತ್ಯವಾಗಿ ಮಳೆ ಮೇಲೆ ಪರಿಣಾಮ ಆಗಬಹುದು. ಇದರಿಂದಾಗಿ ಹಲವು ದೇಶಗಳಲ್ಲ ಪ್ರವಾಹ ಹೆಚ್ಚಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿ ಬಿಗ್ ಬುಲೆಟಿನ್ ನಲ್ಲಿ ಪರಿಸರವಾದಿ ಅಕ್ಷಯ್ ಹೆಬ್ಳಿಕರ್ ಮಾತನಾಡಿ, ಸದ್ಯಕ್ಕೆ ಏನೂ ಪರಿಣಾಮ ಆಗುವುದಿಲ್ಲ. 15-20 ವರ್ಷದಲ್ಲಿ ಭಾರತದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಸಮುದ್ರದಲ್ಲಿ ಜೀವ ವೈವಿಧ್ಯಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಸಿಹಿ ನೀರು ಉಪ್ಪು ನೀರಿಗಳು ಸೇರುವುದರಿಂದ ಜಲಚರಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.