Tag: antarapata serial

  • ‘ಭಾಗ್ಯಲಕ್ಷ್ಮಿ’ ನಕಲಿ ಅಪ್ಪನಾಗಿ ಬಿಗ್ ಬಾಸ್ ಮಂಜು ಪಾವಗಡ ಎಂಟ್ರಿ

    ‘ಭಾಗ್ಯಲಕ್ಷ್ಮಿ’ ನಕಲಿ ಅಪ್ಪನಾಗಿ ಬಿಗ್ ಬಾಸ್ ಮಂಜು ಪಾವಗಡ ಎಂಟ್ರಿ

    ಬಿಗ್ ಬಾಸ್ ಸೀಸನ್ 8ರ (Bigg Boss Kannada) ವಿನ್ನರ್ ಆಗಿರುವ ಮಂಜು ಪಾವಗಡ (Manju Pavagada) ಅಂತರಪಟ ಸೀರಿಯಲ್‌ನಲ್ಲಿ ತಂದೆಯಾಗಿ ಕಾಣಿಸಿಕೊಳ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈಗ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಕಲಿ ಅಪ್ಪನಾಗಿ ಮಂಜು ಪಾವಗಡ ಎಂಟ್ರಿ ಕೊಡ್ತಿದ್ದಾರೆ.

    ಬಿಗ್ ಬಾಸ್ (Bigg Boss) ಬಳಿಕ ಒಂದಿಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಮಂಜು ಪಾವಗಡ ಈಗ ಮತ್ತೆ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸುಷ್ಮಾ ರಾವ್- ಸುದರ್ಶನ್ ರಂಗಪ್ರಸಾದ್ ನಟನೆಯ ‘ಭಾಗ್ಯಲಕ್ಷ್ಮಿ’ ಸೀರಿಯಲ್‌ನಲ್ಲಿ ನಕಲಿ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಪ್ರೋಮೋ ವಾಹಿನಿಯ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿದ್ದು, ಪ್ರೋಮೋ ಸಖತ್‌ ಸದ್ದು ಮಾಡುತ್ತಿದೆ.

    ಇಷ್ಟವಿಲ್ಲದೇ ತಾಯಿಯ ಹಠಕ್ಕೆ ಮಣಿದು ತಾಂಡವ್ ಅಲಿಯಾಸ್ ಸುದರ್ಶನ್ ಭಾಗ್ಯಳನ್ನು ಮದುವೆಯಾಗುತ್ತಾನೆ. ಈ ಕಡೆ ತನ್ನ ಆಫೀಸಿನಲ್ಲಿ ಕೆಲಸ ಮಾಡುವ ಶ್ರೇಷ್ಠಾ ಜೊತೆ ತಾಂಡವ್ ಅಫೇರ್ ಇಟ್ಟುಕೊಂಡಿರುತ್ತಾನೆ. ಈಗ ಶ್ರೇಷ್ಠಾ ಮನೆಯವರು ಮದುವೆಯಾಗುವ ಒತ್ತಡವನ್ನ ತಾಂಡವ್ ಮುಂದಿಟ್ಟಿದ್ದಾರೆ. ಅಮ್ಮನ ಮಾತಿಗೆ ಭಯಪಡುವ ತಾಂಡವ್‌ಗೆ ಸಾಥ್ ನೀಡಲು ಶ್ರೇಷ್ಠಾ ನಕಲಿ ತಂದೆಯಾಗಿ ಮಂಜು ಪಾವಗಡ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:D51: ಧನುಷ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಎಜುಕೇಷನ್ ಇಲ್ಲಾ ಅಂತಾ ಹಂಗಿಸೋ ತಾಂಡವ್ ಮುಂದೆ ಗೆಲ್ಲಲು ಭಾಗ್ಯ ಈಗ ಸ್ಕೂಲಿಗೆ ಹೋಗುತ್ತಿದ್ದಾಳೆ. ಸೊಸೆಯನ್ನು ಓದಿಸಲೇಬೇಕು ಅಂತಾ ಅತ್ತೆ ಪಣ ತೊಟ್ಟಿದ್ದಾಳೆ. ಇದೆಲ್ಲದರ ನಡುವೆ ಭಾಗ್ಯಳ ಸಂಸಾರದ ಬಂಡಿಗೆ ಬ್ರೇಕ್ ಹಾಕಲು ಕೆಡಿ ಶ್ರೇಷ್ಠಾ ಜೊತೆ ಮಂಜು ಪಾವಗಡ ಜೊತೆಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

    ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

    ಗುನ್ನಾ, ಶಿಷ್ಯ, ಖುಷಿ (Kushi) ಸಿನಿಮಾಗಳಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ನಟಿ ಚೈತ್ರಾ ಹಳ್ಳಿಕೇರಿ ಅವರು ‘ಬಿಗ್ ಬಾಸ್’ (Bigg Boss Kannada) ಶೋ ಬಳಿಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ‘ಅಂತರಪಟ’ (Antarapata) ಸೀರಿಯಲ್‌ನ ಚಾಂದಿನಿ ಪಾತ್ರದ ಮೂಲಕ ಮನಗೆಲ್ಲಲು ಸಜ್ಜಾಗಿದ್ದಾರೆ.

    ಕನ್ನಡ ಚಿತ್ರಗಳಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ ನಟಿ ಚೈತ್ರಾ ಅವರು ಪೀಕ್‌ನಲ್ಲಿರುವಾಗಲೇ ಮದುವೆಯಾದರು. ಕ್ಯಾಮೆರಾ ಕಣ್ಣಿಂದ ದೂರ ಸರಿದರು. ಬಳಿಕ ಕಳೆದ ವರ್ಷದ ಬಿಗ್ ಬಾಸ್ ಒಟಿಟಿ ಶೋನಲ್ಲಿ ಗಟ್ಟಿ ಸ್ಪರ್ಧಿಯಾಗಿ ಚೈತ್ರಾ ಗುರುತಿಸಿಕೊಂಡರು. ಈಗ ಮತ್ತೆ ಚೈತ್ರಾ ಅವರ ಕಿರುತೆರೆಯ ಪರ್ವ ಶುರುವಾಗಿದೆ. ಇದನ್ನೂ ಓದಿ:ನನ್ನ ಪಾಲಿಗೆ ಇಂದು, ಭವಿಷ್ಯವೂ ನೀನೇ : ಚಿರು ನೆನದ ಮೇಘನಾ ರಾಜ್

    ಸ್ವಪ್ನ ಕೃಷ್ಣ (Swapna Krishna) ನಿರ್ದೇಶನದ ‘ಅಂತರಪಟ’ ಧಾರಾವಾಹಿಯಲ್ಲಿ ನಟಿ ಚೈತ್ರಾ (Chaitra Hallikeri) ಅವರು ಚಾಂದಿನಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರ ಕೂಡ ಮಹಿಳಾ ಸಬಲೀಕರಣವನ್ನೇ ಸಾರುತ್ತದೆ. ಸ್ವಾವಲಂಬಿ ಮಹಿಳೆಯಾಗಿರುವ ಚಾಂದಿನಿ ತನ್ನ ಬ್ಯುಸಿನೆಸ್ ಅನ್ನು ತಾನೇ ಪರಿಶ್ರಮದಿಂದ ಮುಂದೆ ತಂದಿರುವಂತಹ ದಿಟ್ಟೆ. ಜೊತೆಗೆ ‘ಅಂತರಪಟ’ ಧಾರಾವಾಹಿಯ ಮುಖ್ಯ ಪಾತ್ರಧಾರಿ ಆರಾಧನಾಳ ಬ್ಯುಸಿನೆಸ್ ಗುರುವಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

    ಚಾಂದಿನಿ ಪಾತ್ರ ಕೂಡ ಚೈತ್ರಾ ಅವರ ರಿಯಲ್ ಲೈಫ್‌ಗೆ ಒಪ್ಪುವಂತಿದೆ. ಅವರು ರಿಯಲ್ ಲೈಫ್‌ನಲ್ಲಿ ಗಟ್ಟಿ ವ್ಯಕ್ತಿಯಾಗಿದ್ದಾರೆ. ಎಲ್ಲದನ್ನೂ ಸವಾಲಾಗಿ ಸ್ವೀಕರಿಸುತ್ತಾರೆ. ಒಟ್ನಲ್ಲಿ ‘ಅಂತರಪಟ’ ಸೀರಿಯಲ್ ಮೂಲಕ ಚೈತ್ರಾ ಮೋಡಿ ಮಾಡ್ತಿದ್ದಾರೆ.

  • ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್

    ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್

    ಕೃಷ್ಣ ರುಕ್ಮಿಣಿ, ನಾಗಿಣಿ, ಬಿಗ್ ಬಾಸ್ ಶೋಗಳ ಮೂಲಕ ಟಿವಿ ಪರದೆಯಲ್ಲಿ ಮಿಂಚಿದವರು ದೀಪಿಕಾ ದಾಸ್. ಇದೀಗ ತಮ್ಮ ಅಭಿಮಾನಿಗಳು ಸಂಭ್ರಮಿಸುವಂತಹ ಸುದ್ದಿ ನೀಡಿದ್ದಾರೆ. ದೀಪಿಕಾ ದಾಸ್ (Deepika Das) ಮತ್ತೆ ಕಿರುತೆರೆಗೆ (Tv) ಕಮ್‌ಬ್ಯಾಕ್ ಆಗಿದ್ದಾರೆ.

    ‘ನಾಗಿಣಿ’ (Nagini)  ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟಿ ದೀಪಿಕಾ ದಾಸ್, ಬಳಿಕ ದೊಡ್ಮನೆ ಅಂಗಳಕ್ಕೆ ಕಾಲಿಟ್ಟರು ಫೈನಲಿಸ್ಟ್ ಆಗಿ ಗಟ್ಟಿ ಫೈಟ್ ನೀಡಿದ್ದರು. ಶೈನ್ ಶೆಟ್ಟಿ -ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ (Bigg Boss Kannada) ಟ್ರೋಫಿ ಗೆದ್ದ 2 ಸೀಸನ್‌ನಲ್ಲಿ ದೀಪಿಕಾ ದಾಸ್ ಕೊನೆಯ ಹಂತದವರೆಗೂ ಇದ್ದು ಬಿಗ್ ಫೈಟ್ ನೀಡಿದ್ದರು. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಪೋಸ್ ನೀಡಿದ ಕನ್ನಡದ ʻಹೆಡ್‌ಬುಷ್ʼ ನಟಿ ಪಾಯಲ್

     

    View this post on Instagram

     

    A post shared by Deepika Das (@deepika__das)

    ಇದೀಗ ‘ಬಿಗ್ ಬಾಸ್’ ಸೀಸನ್ 9 ಶೋ ಮುಗಿದ ಮೇಲೆ ಫೀಮೇಲ್ ಓರಿಯೆಂಟೆಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಟಿವಿ ಪ್ರೇಕ್ಷಕರಿಗೆ ದೀಪಿಕಾ ಗುಡ್ ನ್ಯೂಸ್ ನೀಡಿದ್ದಾರೆ. ‘ಅಂತರಪಟ’ ಸೀರಿಯಲ್‌ನಲ್ಲಿ ದೀಪಿಕಾ ದಾಸ್ ಅವರು ಸಮೀರಾ ಎಂಬ ಪಾತ್ರದ ಮೂಲಕ ಕಾಣಿಸಿಕೊಳ್ತಿದ್ದಾರೆ. ಸಂಸ್ಥೆಯೊಂದರ ಸಿಇಓ ಆಗಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ದೀಪಿಕಾ ದಾಸ್ ‘ಅಂತರಪಟ’ ಸೀರಿಯಲ್‌ಗೆ ಸಾಥ್ ನೀಡಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿ ಅಭಿನಯಿಸಿದ್ದಾರೆ.

    ಇನ್ನೂ ನಟಿ ದೀಪಿಕಾ ದಾಸ್‌ಗೆ ಶೂಟಿಂಗ್‌ಗೆ ಬ್ರೇಕ್ ಇದ್ದಾಗ, ಟ್ರಾವೆಲಿಂಗ್ ಮಾಡೋದು ಅಂದರೆ ತುಂಬಾ ಇಷ್ಟ. ಸೋಲೋ ಟ್ರಾವೆಲ್ ಕೂಡ ಅಷ್ಟೇ ಇಷ್ಟಪಡುತ್ತಾರೆ.