Tag: ant

  • ಇರುವೆಗಳು ಕಚ್ಚಿದ್ದಕ್ಕೆ 3 ದಿನದ ಹಸುಗೂಸು ಬಲಿ

    ಇರುವೆಗಳು ಕಚ್ಚಿದ್ದಕ್ಕೆ 3 ದಿನದ ಹಸುಗೂಸು ಬಲಿ

    ಲಕ್ನೋ: ಇರುವೆಗಳು ಕಚ್ಚಿದ್ದರಿಂದ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿದ್ದ (ಎನ್‍ಐಸಿಯು) ಮೂರು ದಿನದ ಹಸುಗೂಸು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಹಿಳಾ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಅಲ್ಲದೇ ವೈದ್ಯರು ನಮ್ಮ ಬಳಿ 6,500 ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸುವ ಮೂಲಕ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಕುಲ್ಪಹಾರ್ ತಹಸಿಲ್ ಪ್ರದೇಶದ ಮುಧರಿ ಗ್ರಾಮದ ನಿವಾಸಿ ಸುರೇಂದ್ರ ರೈಕ್ವಾರ್ ಅವರು ಮೇ 30 ರಂದು ತಮ್ಮ ಗರ್ಭಿಣಿ ಪತ್ನಿ ಸೀಮಾ ಅವರೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಈ ದಂಪತಿಗೆ ಗಂಡು ಮಗುವಿಗೆ ಜನಿಸಿತ್ತು. ಆದರೆ ನವಜಾತ ಶಿಶು ಅಸ್ವಸ್ಥಗೊಂಡ ಹಿನ್ನೆಲೆ ವೈದ್ಯರು ವಿಶೇಷ ನವಜಾತ ಶಿಶು ನಿಗಾ ಘಟಕಕ್ಕೆ ದಾಖಲಿಸಿದ್ದರು. ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    ವಾರ್ಡ್ ಬಹಳ ಕೊಳಕಾಗಿದ್ದು, ಇರುವೆಗಳಿರುವ ಬಗ್ಗೆ ಈ ಮುನ್ನವೇ ಸಿಬ್ಬಂದಿ ಹಾಗೂ ವೈದ್ಯರಿಗೆ ದೂರು ನೀಡಿದ್ದರೂ ಗಮನಹರಿಸಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನಾ ಸ್ಥಳಕ್ಕೆ ಆಗಮಿಸಿದ ಎಸ್‍ಡಿಎಂ ಸದರ್ ಜಿತೇಂದ್ರ ಕುಮಾರ್ ಅವರು, ಮುಖ್ಯ ವೈದ್ಯಕೀಯ ಅಧೀಕ್ಷಕರನ್ನು(ಸಿಎಂಎಸ್) ತನಿಖೆಗೆ ಒಳಪಡಿಸುವಂತೆ ಆದೇಶಿಸಿದ್ದಾರೆ.

  • ಅರವಿಂದ್‍ಗೆ ಆನೆ, ಇರುವೆ ಜೋಕ್ ಹೇಳಿದ ವೈಷ್ಣವಿ!

    ಅರವಿಂದ್‍ಗೆ ಆನೆ, ಇರುವೆ ಜೋಕ್ ಹೇಳಿದ ವೈಷ್ಣವಿ!

    ದೊಡ್ಮನೆಯಲ್ಲಿರುವ ಪ್ರಾಪರ್ಟಿಗಳಿಗೆ ಹಾನಿಯಾದರೆ ಸ್ಪರ್ಧಿಗಳಿಗೆ ಶಿಕ್ಷೆಯಂತೂ ಖಂಡಿತ ಆಗೇ ಆಗುತ್ತದೆ. ಅದರಂತೆ ಪಾತ್ರೆ ತೊಳೆಯುವ ವೇಳೆ ಗ್ಲಾಸ್ ಹೊಡೆದು ಹಾಕಿದ್ದ ವೈಷ್ಣವಿಗೆ ಬಿಗ್‍ಬಾಸ್ ಚಿಕ್ಕ ಗ್ಲಾಸ್ ಕಳುಹಿಸಿ ತಮ್ಮ ಮುಂದಿನ ಆದೇಶದವರೆಗೂ ಆ ಚಿಕ್ಕ ಗ್ಲಾಸ್‍ನಲ್ಲಿಯೇ ನೀರು ಕುಡಿಯಬೇಕು ಎಂದು ತಿಳಿಸಿದ್ದರು. ಟ್ವಿಸ್ಟ್ ಏನಪ್ಪಾ ಅಂದರೆ ವೈಷ್ಣವಿ ನೀರು ಕುಡಿಯುವ ಮುನ್ನ ಮನೆಯ ಸದಸ್ಯರಿಗೆ ಒಂದು ಜೋಕ್ ಹೇಳಿ, ಅವರನ್ನು ನಗಿಸಿದ ನಂತರ ನೀರು ಕುಡಿಯಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದಾರೆ.

    ಅದರಂತೆ ನಿನ್ನೆಯಿಂದ ನೀರು ಕುಡಿಯಬೇಕೆಂದು ಅನಿಸಿದಾಗಲೆಲ್ಲ ವೈಷ್ಣವಿ ಮನೆಯ ಓರ್ವ ಸದಸ್ಯರಿಗೆ ಜೋಕ್ ಹೇಳಿ ನೀರು ಕುಡಿಯುತ್ತಿದ್ದಾರೆ. ಸದ್ಯ ನಿನ್ನೆ ಅರವಿಂದ್‍ಗೆ ವೈಷ್ಣವಿ ಆನೆ ಇರುವೆ ಜೋಕ್ ಹೇಳಿದ್ದಾರೆ.

    ಒಮ್ಮೆ ಆನೆ ಇರುವೆ ಹೋಗುತ್ತಿರುತ್ತದೆ. ಇರುವೆ ಚೆನ್ನಾಗಿ ಡ್ರೆಸ್ ಮಾಡಿಕೊಂಡಿರುತ್ತದೆ. ಆದರೆ ಆನೆ ಮರೆತು ಹೋಗಿ ನಾರ್ಮಲ್ ಬಟ್ಟೆ ಹಾಕಿಕೊಂಡು ಹಾಗೆಯೇ ಹೋಗಿರುತ್ತದೆ ಎಂದಾಗ, ಅರವಿಂದ್ ಎರಡು ಇರುವೆ ಒಂದು ಆನೆನಾ ಎಂದು ಕೇಳುತ್ತಾರೆ. ಇಲ್ಲ ಒಂದು ಇರುವೆ ಒಂದು ಆನೆ ಇಬ್ಬರೂ ಕೂಡ ಬೆಸ್ಟ್ ಫ್ರೆಂಡ್ಸ್ ಎಂದು ವೈಷ್ಣವಿ ಹೇಳುತ್ತಾರೆ. ನಂತರ ಇರುವೆ ಆನೆಗೆ ಕೇಳುತ್ತದೆ ಯಾಕೆ ನೀನು ನಾರ್ಮಲ್ ಬಟ್ಟೆ ಹಾಕಿಕೊಂಡಿದ್ಯಾ? ಇನ್ನೊಂದು ಬಟ್ಟೆ ಏನಾಯಿತು ಅಂತಾ ಅದಕ್ಕೆ ಆನೆ ಏನು ಹೇಳಬಹುದು ಎಂದು ವೈಷ್ಣವಿ ಅರವಿಂದ್‍ಗೆ ಕೇಳುತ್ತಾರೆ.

    ಆಗ ಅರವಿಂದ್ ನಾನು ನಿನ್ನನ್ನು ಏಪ್ರಿಲ್ ಫೂಲ್ ಮಾಡಿದೆ ಎಂದು ಹೇಳಬಹುದು ಎನ್ನುತ್ತಾರೆ. ಆಗ ವೈಷ್ಣವಿ ಇಲ್ಲ. ಆನೆ ಹೇಳುತ್ತದೆ ನನ್ನ ಬಟ್ಟೆ ಕಳೆದುಹೋಗಿದೆ ಎಂದು ನಗುತ್ತಾ ಹಾಸ್ಯಮಯವಾಗಿ ಹೇಳುತ್ತಾರೆ. ಈ ಜೋಕ್ ಕೇಳಿ ಅರವಿಂದ್ ಅಚ್ಚರಿಯಿಂದ ಜೋರಾಗಿ ನಗುತ್ತಾರೆ.

    ಒಟ್ಟಾರೆ ಬಿಗ್‍ಬಾಸ್ ವೈಷ್ಣವಿಗೆ ಶಿಕ್ಷೆ ನೀಡಿದ್ದರೆ, ವೈಷ್ಣವಿ ಜೋಕ್ ಹೇಳುವ ಮೂಲಕ ಮನೆಮಂದಿಗೆ ಗೋಳೋಯ್ದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.

  • ವೀಡಿಯೋ ವೈರಲ್- ಚಿನ್ನದ ಸರ ಕದ್ದು ಸಾಗಿದ ಇರುವೆಗಳು

    ವೀಡಿಯೋ ವೈರಲ್- ಚಿನ್ನದ ಸರ ಕದ್ದು ಸಾಗಿದ ಇರುವೆಗಳು

    ರಾಯ್ಪರ: ಚಿನ್ನದ ಸರವನ್ನು ಕದ್ದು ಸಾಗಿಸುತ್ತಿರುವ ಕಳ್ಳ ಇರುವೆಗಳ ವೀಡಿಯೋ ಸಖತ್ ವೈರಲ್ ಆಗಿದೆ.

    ಚಿನ್ನ, ಬೆಳ್ಳಿಯಂತಹ ದುಬಾರಿ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಇರುವೆಗಳ ಗುಂಪು ಚಿನ್ನದ ಸರವನ್ನು ಕದ್ದೊಯ್ಯುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುವುದರ ಜೊತೆಗೆ ಆಶ್ಚರ್ಯವನ್ನುಂಟು ಮಾಡಿದೆ.

    ವೈರಲ್ ವೀಡಿಯೋದಲ್ಲಿ ಏನಿದೆ?
    ಇರುವೆಗಳ ಗುಂಪು ಚಿನ್ನದ ಸರವನ್ನು ತೆಗೆದುಕೊಂಡು ಹೋಗುತ್ತಿವೆ. ಸುಮಾರು ದೂರ ಎಳೆದುಕೊಂಡು ಹೋಗಿವೆ. 15 ಸೆಕೆಂಡ್‍ಗಳ ಕಾಲ ಇರುವ ಈ ವೀಡಿಯೋಗೆ ಅತ್ಯಂತ ಕಿರಿಯ ಚಿನ್ನ ಕಳ್ಳ ಸಾಗಾಣೆಗಾರರು ಎಂದು ಬರೆದುಕೊಂಡು ಛತ್ತೀಸ್‍ಗಢದ ಐಪಿಎಸ್ ಅಧಿಕಾರಿ ದಪಾನ್ಯು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡೀಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಕಳ್ಳ ಇರುವೆ ಬಂಧಿಸಲಾಗಿದೆಯೇ? ಅಥವಾ ಎಸ್ಕೇಪ್ ಆದರಾ? ಎಂದು ನೆಟ್ಟಿಗರು ಈ ವೀಡಿಯೋಗೆ ಹಾಸ್ಯಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ.

  • ಒಗ್ಗಟ್ಟಿನಲ್ಲಿ ಬಲ- ಸಾಬೀತುಪಡಿಸಿದ ಇರುವೆ ಸೈನ್ಯ

    ಒಗ್ಗಟ್ಟಿನಲ್ಲಿ ಬಲ- ಸಾಬೀತುಪಡಿಸಿದ ಇರುವೆ ಸೈನ್ಯ

    -ಸ್ಪೂರ್ತಿ ಚಿಲುಮೆಯ ವಿಡಿಯೋ ನೋಡಿ

    ಬೆಂಗಳೂರು: ಓರ್ವನಿಂದ ಸಾಧ್ಯವಾಗದಿದ್ದರೆ ಅದಕ್ಕೆ ಮತ್ತೋರ್ವನ ಸಹಾಯ ಪಡೆದುಕೊಳ್ಳಬೇಕು. ಒಗ್ಗಟ್ಟಿನಿಂದ ಯಾವುದೇ ಕೆಲಸ ಮಾಡಿದ್ದಲ್ಲಿ ಅದಕ್ಕೆ ಯಶಸ್ಸು ಸಿಗುತ್ತೆ ಎಂಬ ಮಾತನ್ನು ಇರುವೆಗಳ ಸೈನ್ಯವೊಂದು ಸಾಬೀತು ಮಾಡಿದೆ. ಇರುವೆ ಸೈನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದೊಂದು ಸ್ಪೂರ್ತಿಯ ಚಿಲುಮೆ ಎಂದು ಹಾಡಿ ಹೊಗಳಿದ್ದಾರೆ.

    ಇರುವೆಗಳ ಸಾಲೊಂದು ಕಾಂಪೌಂಡ್ ಗಳಿಗೆ ಅಳವಡಿಸಿರುವ ಬ್ಯಾರಿಕೇಡ್ ಮೇಲೆ ಹೊರಟಿದೆ. ಆದ್ರೆ ಕಾಂಪೌಂಡ್ ಗಳಿಗೆ ಅಳವಡಿಸಿಲಾಗಿರುವ ಬ್ಯಾರಿಕೇಡ್ ಗಳ ನಡುವೆ ಅಂತರವಿದೆ. ಈ ಅಂತರವನ್ನು ದಾಟಲು ಎಲ್ಲ ಇರುವೆಗಳು ಒಂದಕ್ಕೊಂದು ತಾಗಿಕೊಂಡು ಸೇತುವೆ ರೀತಿ ಮಾಡಿಕೊಂಡಿದೆ. ಈ ಪುಟ್ಟ ಸೇತುವೆ ಮೇಲೆ ಉಳಿದ ಇರುವೆಗಳು ಹೊರಟಿವೆ.

    14 ಸೆಕೆಂಡಿನ ವಿಡಿಯೋ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಂದೇಶವನ್ನು ನೋಡುಗರಿಗೆ ಹೇಳುತ್ತದೆ. ಐಪಿಎಸ್ ಅಧಿಕಾರಿ ಸ್ವಾತಿ ಎಂಬವರು ಈ ವಿಶೇಷ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಟೀಂ ಎಫರ್ಟ್ ಎಂದು ಬರೆದುಕೊಂಡಿದ್ದಾರೆ.

     

  • ಗದಗ ಜಿಲ್ಲಾಸ್ಪತ್ರೆಯಲ್ಲಿ ಇರುವೆಗಳ ಕಾಟ

    ಗದಗ ಜಿಲ್ಲಾಸ್ಪತ್ರೆಯಲ್ಲಿ ಇರುವೆಗಳ ಕಾಟ

    ಗದಗ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಪ್ಪು ಇರುವೆಗಳ ಹಾವಳಿಯಿಂದ ಬಾಣಂತಿಯರು ಮತ್ತು ಹಸುಗೂಸುಗಳು ರಾತ್ರಿ ನಿದ್ರೆಯಿಲ್ಲದೆ ಹೈರಾಣಾಗುತ್ತಿದ್ದಾರೆ.

    ನಗರದ ಜಿಮ್ಸ್ ಆಸ್ಪತ್ರೆ ಸ್ವಚ್ಛತೆ ಇಲ್ಲದಿರೋದರಿಂದ ಬಹುತೇಕ ವಾರ್ಡ್ ಗಳಲ್ಲಿ ಇರುವೆಗಳ ಲೋಕವೇ ಸೃಷ್ಟಿಯಾಗುತ್ತದೆ. ಇರುವೆಗಳಿಂದ ತಪ್ಪಿಸಿಕೊಳ್ಳಲು ಬಾಣಂತಿಯರು ಕಷ್ಟಪಡುವ ದೃಶ್ಯಗಳು ಜಿಮ್ಸ್ ನಲ್ಲಿ ಕಾಣಸಿಗುತ್ತವೆ. ಇತ್ತ ಬಾಣಂತಿಯರಿಗೆ ನಮಗೆ ಕಚ್ಚಿದ್ರೆ ಸಹಿಸಿಕೊಳ್ಳಬಹುದು, ನವಜಾತ ಶಿಶುಗಳಿಗೆ ಕಚ್ಚಿದರೆ ಮುಂದೇನು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಈ ಸಂಬಂಧ ರೋಗಿಗಳು ವೈದ್ಯರು ಮತ್ತು ಸಿಬ್ಬಂದಿಗೆ ತಿಳಿಸಿದರೂ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇಂದು ಆಸ್ಪತ್ರೆಯಲ್ಲಿ ಮಾಧ್ಯಮಗಳ ಕ್ಯಾಮೆರಾ ಕಂಡ ಕೂಡಲೇ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.