Tag: Answer paper

  • ದ್ವಿತೀಯ PUC, SSLC ಟಾಪರ್ಸ್ ಉತ್ತರ ಪತ್ರಿಕೆ ವೆಬ್‍ಸೈಟ್‍ನಲ್ಲಿ ಲಭ್ಯ

    ದ್ವಿತೀಯ PUC, SSLC ಟಾಪರ್ಸ್ ಉತ್ತರ ಪತ್ರಿಕೆ ವೆಬ್‍ಸೈಟ್‍ನಲ್ಲಿ ಲಭ್ಯ

    ಬೆಂಗಳೂರು : ದ್ವಿತೀಯ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಇನ್ಮುಂದೆ ಇಲಾಖೆ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ.

    ಪ್ರತಿ ವರ್ಷ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಅಪ್ ಲೋಡ್ ಮಾಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಿಯುಸಿ ಬೋರ್ಡ್ ಮತ್ತು ಎಸ್‍ಎಸ್‍ಎಲ್‍ಸಿ ಬೋರ್ಡ್ ಗೆ ನಿರ್ದೇಶನ ನೀಡಿದ್ದಾರೆ. ಪ್ರಸಕ್ತ ವರ್ಷದಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಶೀಘ್ರವೇ ಇಲಾಖೆ ವೆಬ್‍ಸೈಟ್ ನಲ್ಲಿ ಲಭ್ಯವಾಗಲಿದೆ.

    ಸಚಿವ ಸುರೇಶ್ ಕುಮಾರ್ ಅವರ ಸಂವೇದನಾ ಫೋನ್ ಇನ್ ಕಾರ್ಯಕ್ರಮದಲ್ಲಿ ಟಾಪರ್ಸ್ ಉತ್ತರ ಪತ್ರಿಕೆ ಪ್ರಕಟಿಸುವಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ಮನವಿ ಮಾಡಿದ್ರು. ಮನವಿಗೆ ಸ್ಪಂದಿಸಿರೋ ಸಚಿವರು ಉತ್ತರ ಪತ್ರಿಕೆ ಅಪ್ಲೋಡ್ ಮಾಡುವಂತೆ ಪಿಯುಸಿ ಬೋರ್ಡ್ ಮತ್ತು ಎಸ್‍ಎಸ್‍ಎಲ್‍ಸಿ ಬೋರ್ಡ್ ಗೆ ಸೂಚನೆ ನೀಡಿದ್ದಾರೆ.

    ಅತಿ ಹೆಚ್ಚು ಅಂಕ ಪಡೆದವರ ಬರವಣಿಗೆ ಕೌಶಲ್ಯ ಹೇಗಿರುತ್ತೆ? ಪ್ರಶ್ನೆಗೆ ಉತ್ತರಿಸಿರುವ ವಿಧಾನ ಹೇಗಿದೆ? ಹೀಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ವಿಶೇಷತೆ ಬಗ್ಗೆ ತಿಳಿದುಕೊಳ್ಳಲು ಈ ವಿಧಾನ ಅನುಕೂಲವಾಗಲಿದೆ. ಟಾಪರ್ಸ್ ಉತ್ತರ ಪತ್ರಿಕೆ ನೋಡಿ ವಿದ್ಯಾರ್ಥಿಗಳು ಅದರಿಂದ ಪ್ರಭಾವಿತರಾಗಿ ಅತಿ ಹೆಚ್ಚು ಅಂಕ ಪಡೆಯಲು ಸಹಾಯವಾಗುತ್ತದೆ.

  • ಉತ್ತರ ಪತ್ರಿಕೆಯಲ್ಲಿ ಬಾಲಕಿ ಬರೆದಳು ಎಲ್ಲರೂ ಬೆಚ್ಚಿಬೀಳಿಸುವ ಸತ್ಯ

    ಉತ್ತರ ಪತ್ರಿಕೆಯಲ್ಲಿ ಬಾಲಕಿ ಬರೆದಳು ಎಲ್ಲರೂ ಬೆಚ್ಚಿಬೀಳಿಸುವ ಸತ್ಯ

    ಗುರುಗ್ರಾಮ: ಅಪ್ರಾಪ್ತೆಯೊಬ್ಬಳು ತನಗಾಗಿರುವ ಅತ್ಯಾಚಾರದ ಬಗ್ಗೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದು ಎಲ್ಲರನ್ನು ಬೆಚ್ಚಿಬೀಳಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ

    15 ವರ್ಷದ ಅಪ್ರಾಪ್ತೆಯೊಬ್ಬಳು ತಾನೂ ಅತ್ಯಾಚಾರಕ್ಕೆ ಒಳಗಾಗಿರುವ ಬಗ್ಗೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಳು. ಸದ್ಯ ಬಾಲಕಿಗೆ ಆದ ಅನ್ಯಾಯ ಈಗ ಬೆಳಕಿಗೆ ಬಂದಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ.

    ನಾನು ಈಗ 10ನೇ ತರಗತಿ ಓದುತ್ತಿದ್ದೇನೆ. ನನ್ನ ಅಪ್ರಾಪ್ತ ಸಹೋದರ ಹಾಗೂ 23 ವರ್ಷದ ಬಾದಶಾಪುರ ಯುವಕನೊಬ್ಬ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

    ಅಕ್ಟೋಬರ್ 1ರಂದು ಬಾಲಕಿ ತನ್ನ ಮೇಲೆ ಆಗಿರುವ ಅತ್ಯಾಚಾರದ ಬಗ್ಗೆ ಬರೆದಿದ್ದಳು. ಆಗ ಶಾಲೆಯ ಸಿಬ್ಬಂದಿಯವರು ಬಾಲಕಿಯ ಉತ್ತರ ಪತ್ರಿಕೆ ನೋಡಿ ಆಕೆಗೆ ಆಗಿರುವ ಅನ್ಯಾಯವನ್ನು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಪೊಲೀಸರು ಪೋಸ್ಕೋ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಪ್ರಾಪ್ತ ಬಾಲಕ ಹಾಗೂ ಯುವಕ ಈ ಕೃತ್ಯವೆಸಗಿದ್ದು, ಇಬ್ಬರಲ್ಲಿ ಒಬ್ಬ ಬಾಲಕಿಗೆ ಸಹೋದರ ಆಗಬೇಕು. ಬಾಲಕಿಯ ತಾಯಿ ಹಾಗೂ ಆರೋಪಿಯ ತಾಯಿ ಸಹೋದರಿಯರು ಎಂದು ತಿಳಿದು ಬಂದಿದೆ. ಸದ್ಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಎಸಿಪಿ ಶಕುಂತಲಾ ಯಾದವ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 1600 ವಿದ್ಯಾರ್ಥಿಗಳ ಉತ್ತರ ಪತ್ರಿಕೆ ನಾಪತ್ತೆ- ವಿದ್ಯಾರ್ಥಿಗಳಿಗೆ ಬೋನಸ್ ಅಂಕ

    1600 ವಿದ್ಯಾರ್ಥಿಗಳ ಉತ್ತರ ಪತ್ರಿಕೆ ನಾಪತ್ತೆ- ವಿದ್ಯಾರ್ಥಿಗಳಿಗೆ ಬೋನಸ್ ಅಂಕ

    ಮುಂಬೈ: ಪರೀಕ್ಷೆ ಬರೆದಿದ್ದ 1600 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆಯಾಗಿರುವ ಘಟನೆ ಮುಂಬೈ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಇಷ್ಟು ವಿದ್ಯಾರ್ಥಿಗಳಿಗೂ ಬೋನಸ್ ಅಂಕಗಳನ್ನು ನೀಡಲು ವಿಶ್ವವಿದ್ಯಾಲಯ ತೀರ್ಮಾನ ತೆಗೆದುಕೊಂಡಿದೆ.

    ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದಿಂದ ಉತ್ತರ ಪತ್ರಿಕೆಗಳು ನಾಪತ್ತೆಯಾಗಿದ್ದು, ಈ ಕುರಿತು ತೀರ್ಮಾನವನ್ನು ಕೈಗೊಳ್ಳಲು ವಿಶ್ವವಿದ್ಯಾಲಯದ ಅಧಿಕಾರಿಗಳು ಗುರುವಾರ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಾಯದಂತೆ ಎಲ್ಲ ವಿದ್ಯಾರ್ಥಿಗಳಿಗೂ ಇತರೆ ವಿಷಯಗಳಲ್ಲಿ ತೆಗೆದುಕೊಳ್ಳಲಾಗಿರುವ ಅಂಕಗಳಿಗೆ ಆಧಾರವಾಗಿ ಬೋನಸ್ ಅಂಕಗಳನ್ನು ನೀಡುವ ತೀರ್ಮಾನವನ್ನು ಅಡಳಿತ ಮಂಡಳಿ ಕೈಗೊಂಡಿದೆ.

    ಪರೀಕ್ಷೆಯ ಉತ್ತರ ಪತ್ರಿಕೆಗಳು ಕಳೆದು ಹೋಗಲು ಹೊಸ ಮೌಲ್ಯಮಾಪನ ತಂತ್ರಜ್ಞಾನವನ್ನು(ಆನ್‍ಸ್ಕ್ರೀನ್ ಮಾರ್ಕೆಟಿಂಗ್ ಸಿಸ್ಟಮ್-ಓಎಸ್‍ಎಂ) ಅಳವಡಿಸಿಕೊಂಡಿರುವುದೇ ಕಾರಣವಾಗಿದೆ. ಈಗಾಗಲೇ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಮೆರಿಟ್ಟ್ರಾಕ್ನೊ ಕಂಪೆನಿ(ಐಟಿ)ಯೊಂದಿಗೆ ಒಂದು ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದನ್ನು ಹಾಗೆಯೇ ಮುಂದುವರೆಸಲಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದು ಹೋಗಿರುವ ಉತ್ತರ ಪತ್ರಿಕೆಗಳನ್ನು ಹುಡುಕಲು ಸಾಧ್ಯವಾಗಿಲ್ಲ. ಅದರಿಂದ ವಿದ್ಯಾರ್ಥಿಗಳ ಫಲಿತಾಂಶವನ್ನು ಘೋಷಣೆ ಮಾಡಲು ಈ ಕ್ರಮವನ್ನು ಕೈಗೊಳ್ಳುತ್ತಿದೆ. ಹೊಸ ತಂತ್ರಜ್ಞಾನದ ಅಳವಡಿಕೆಯ ಸಂದರ್ಭದಲ್ಲಿ ಮಾಹಿತಿಯ ಕೊರತೆಯಿಂದ ಈ ತಪ್ಪು ನಡೆದಿದೆ. ಅದರಿಂದ ವಿಶ್ವವಿದ್ಯಾಲಯವು ಮುಂದಿನ 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ತೀರ್ಮಾನಕೈಗೊಂಡಿದೆ. ಮುಂದಿನ ಬಾರಿ ಸಾಫ್ಟ್ ವೇರ್‍ನಲ್ಲಿ ಬದಲಾವಣೆಗಳನ್ನು ಮಾಡಿ ಅಳವಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.