Tag: anshree

  • ಹೊಸ ಮನೆ ಕಟ್ಟಿಸಲು ಭೂಮಿ ಪೂಜೆ ಮಾಡಿಸಿದ ಆ್ಯಂಕರ್ ಅನುಶ್ರೀ

    ಹೊಸ ಮನೆ ಕಟ್ಟಿಸಲು ಭೂಮಿ ಪೂಜೆ ಮಾಡಿಸಿದ ಆ್ಯಂಕರ್ ಅನುಶ್ರೀ

    ಚಂದನವನದಲ್ಲಿ ನಿರೂಪಣೆ, ಅಭಿನಯದ ಮೂಲಕ ಮೋಡಿ ಮಾಡಿರುವ ಅನುಶ್ರೀ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದ ನಿರೂಪಕಿ ಅನುಶ್ರೀ ಈಗ ಹೊಸ ಮನೆ ಕಟ್ಟಿಸಲು ಮುಂದಾಗಿದ್ದಾರೆ. ಮನೆಯ ಭೂಮಿ ಪೂಜೆ ಮೂಲಕ ಅನುಶ್ರೀ ಸಾಮಾಜಿಕ ಜಾಲತಾಣಲದಲ್ಲಿ ಸೌಂಡ್ ಮಾಡ್ತಿದ್ದಾರೆ.

    ನಿರೂಪಕಿ ಅನುಶ್ರೀ ಸಿನಿಮಾ, ನಿರೂಪಣೆಗೆ ಕೊಂಚ ಬ್ರೇಕ್ ಕೊಟ್ಟು ಇದೀಗ ಮಹತ್ತರದ ಹೆಜ್ಜೆಯನ್ನಿಟ್ಟಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಹೊಸ ಮನೆ ಕಟ್ಟಿಸಲು ತಮ್ಮ ಜಮೀನಿನಲ್ಲಿ ಭೂಮಿ ಪೂಜೆ ಮಾಡಿಸಿದ್ದಾರೆ. ಜಯನಗರದ ಹೌಸಿಂಗ್ ಸೋಸೈಟಿ ಲೇಔಟ್‌ನ ಸುಬ್ರಮಣ್ಯಪುರಂನಲ್ಲಿ ಜಾಗ ಖರೀದಿ ಮಾಡಿದ್ದಾರೆ. ಹೊಸ ಮನೆ ಹೊಸ ಶುಭಾರಂಭಕ್ಕೆ ರೆಡಿಯಾಗಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಕೊನೆಯ ಚಿತ್ರ `ರಾಜಮಾರ್ತಾಂಡ’ ರಿಲೀಸ್‌ ಡೇಟ್‌ ರಿವೀಲ್

    ಅನುಶ್ರೀ ಅವರ ತಾಯಿ ಮತ್ತು ಸಹೋದರ ಜತೆ ಭೂಮಿ ಪೂಜೆ ಸಲ್ಲಿಸಿದ್ದಾರೆ. ಅನುಶ್ರೀಗೆ ಆಪ್ತರಾಗಿರುವ ವಸ್ತ್ರ ವಿನ್ಯಾಸಕಿ ಅಂಜಲಿ ಕೂಡ ವೇಳೆ ಭಾಗಿಯಾಗಿದ್ದರು. ಇನ್ನು ಅನುಶ್ರೀ ಪಿಂಕ್ ಕಲರ್ ಸೆಲ್ವಾರ್‌ನಲ್ಲಿ ಮಿಂಚಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರೀಯರಾಗಿರುವ ಅನುಶ್ರೀಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

    Live Tv