Tag: Anoop Bhandari

  • ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು – ಕ್ಷಮೆ ಕೇಳಿದ ಅನೂಪ್ ಭಂಡಾರಿ

    ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು – ಕ್ಷಮೆ ಕೇಳಿದ ಅನೂಪ್ ಭಂಡಾರಿ

    ಬೆಂಗಳೂರು: ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು ಎಂದಿದ್ದ ನಿರ್ದೇಶಕ ಅನೂಪ್ ಭಂಡಾರಿ ಈಗ ಕ್ಷಮೆ ಕೇಳಿದ್ದಾರೆ.

    ರಾಜರಥ ಸಿನಿಮಾದ ಸಂಬಂಧ ಮಹಿಳಾ ರೇಡಿಯೋ ಜಾಕಿಯೊಬ್ಬರು ನಡೆಸಿದ ಕಾರ್ಯಕ್ರಮದಲ್ಲಿ ನಿರ್ದೇಶಕ ಅನೂಪ್ ಭಂಡಾರಿ, ನಾಯಕ ನಿರೂಪ್ ಭಂಡಾರಿ ಮತ್ತು ಚಿತ್ರದ ನಾಯಕಿ ಅವಾಂತಿಕಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ರಾಜರಥ ಸಿನಿಮಾ ನೋಡದವರು “ಕಚಡ ನನ್ ಮಕ್ಳು” ಎಂದು ಮೂವರು ಹೇಳಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ರಂಗಿತರಂಗ ಸಿನಿಮಾ ನಿರ್ದೇಶಿಸಿದ ಬಳಿಕ ಅನೂಪ್ ಭಂಡಾರಿ ರಾಜರಥವನ್ನು ನಿರ್ಮಿಸಿದ್ದರು. ಈ ಸಿನಿಮಾ ಎರಡು ವಾರಗಳ ಹಿಂದೆ ಬಿಡುಗಡೆಯಾಗಿತ್ತು. ಆದರೆ ‘ರಂಗಿತರಂಗ’ ರೇಂಜ್ ಗೆ ಈ ಸಿನಿಮಾ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈಗ ‘ರಾಜರಥ’ ಸಿನಿಮಾ ನೋಡದ ಪ್ರೇಕ್ಷಕರಿಗೆ ಅಣ್ಣ-ತಮ್ಮ ಇಬ್ಬರೂ “ಕಚಡ ನನ್ ಮಕ್ಳು” ಎಂದು ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆ ವ್ಯಕ್ತವಾಗಿದೆ.

    ಭಂಡಾರಿ ಸಹೋದರರು ಹೇಳಿದ್ದು ಏನು?
    ಸಂದರ್ಶನದ ನಡುವೆ ನಿರೂಪಕಿ “ರಾಜರಥ ಸಿನಿಮಾ ನೋಡದ ಪ್ರೇಕ್ಷಕರು______” ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ ಕೇಳುತ್ತಾರೆ. ಮೊದಲು ಉತ್ತರಿಸಿದ ಅನೂಪ್ ಭಂಡಾರಿ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ನನ್ ಮಕ್ಳು” ಎಂದು ಹೇಳುತ್ತಾರೆ. ನಂತರ ಆ ಪ್ರಶ್ನೆ ನಟಿ ಅವಾಂತಿಕಾ ಶೆಟ್ಟಿಗೆ ಹೋಗುತ್ತದೆ. ಅವರೂ ಸಹ ಅನೂಪ್ ಅವರ ಉತ್ತರವನ್ನೇ ಮತ್ತೆ ಹೇಳುತ್ತಾರೆ. ಕೊನೆಗೆ ನಿರೂಪ್ ಭಂಡಾರಿ ಕೂಡ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು” ಎಂದು ಹೇಳಿದ್ದಾರೆ.

    ಕ್ಷಮೆ ಕೇಳಿದ ಅನೂಪ್ ಭಂಡಾರಿ:
    ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕು ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೆ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://twitter.com/anupsbhandari/status/980852507319574528

  • 5 ಸಾವಿರ ಬಾರಿ `ರಾಜರಥ’ ಸಿನಿಮಾ ನೋಡಿದ ನಟ

    5 ಸಾವಿರ ಬಾರಿ `ರಾಜರಥ’ ಸಿನಿಮಾ ನೋಡಿದ ನಟ

    ಬೆಂಗಳೂರು: ಒಂದು ಸಿನಿಮಾವನ್ನು ಒಂದು ಬಾರಿ ನೋಡಬಹುದು. ತುಂಬಾ ಇಷ್ಟವಾದರೆ ಐದಾರು ಬಾರಿ ನೋಡಬಹುದು. `ರಾಜರಥ’ ಸಿನಿಮಾ ಶುಕ್ರವಾರದಂದು ರಾಜಾದ್ಯಂತ ಬಿಡುಗಡೆಯಾಗಿದ್ದು, ನಟರೊಬ್ಬರು ಈ ಸಿನಿಮಾವನ್ನ ಐದು ಸಾವಿರ ಬಾರಿ ನೋಡಿದ್ದಾರೆ.

    `ರಾಜರಥ’ ಚಿತ್ರವನ್ನು ಐದು ಸಾವಿರ ಬಾರಿ ನೋಡಿದವರು ಬೇರೆ ಯಾರು ಅಲ್ಲ, ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ. ಅನೂಪ್ ಸಿನಿಮಾದ ಚಿತ್ರದ ಬಿಡುಗಡೆಗೆ ಮುಂಚೆ ಮಾತನಾಡಿ ರಂಗಿತರಂಗ ಸಿನಿಮಾಕ್ಕಿಂತ ರಾಜರಥ ಸಿನಿಮಾಗೆ ಹೆಚ್ಚು ಕಷ್ಟಪಟ್ಟಿದ್ದೇನೆ. ಎರಡು ವರ್ಷ ಈ ಸಿನಿಮಾಗಾಗಿ ಮೀಸಲಿಟ್ಟಿದ್ದೇನೆ. ಇದುವರೆಗೆ ಐದು ಸಾವಿರ ಸಲ ಸಿನಿಮಾ ನೋಡಿದರೂ ನನಗೆ ಬೋರ್ ಆಗಲಿಲ್ಲ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.

    ರಾಜರಥ ಎಂಬ ಹೈಟೆಕ್ ಬಸ್ ನಲ್ಲಿ ಚೆನ್ನೈಗೆ ಹೊರಟಿರುವ ಪ್ರಯಾಣಿಕರ ಕಥೆಯೇ ಈ ಸಿನಿಮಾ. ಬಸ್ ನಲ್ಲಿ ಪ್ರಯಾಣ ಬೆಳೆಸುವವರ ಪರಿಚಯ ಒಂದೆಡೆ ಆದರೆ, ಇದ್ದಕ್ಕಿದ್ದಂತೆ ಭುಗಿಲೇಳುವ ಹಿಂಸಾಚಾರದ ಹಿನ್ನಲೆ ಇನ್ನೊಂದು ಕಡೆ. ಹಿಂಸಾಚಾರದಲ್ಲಿ ಪ್ರಯಾಣಿಕರು ಸೇಫ್ ಆಗುತ್ತಾರಾ, ಇಲ್ವಾ ಎಂಬುದು ಕ್ಲೈಮ್ಯಾಕ್ಸ್ ಆಗಿದೆ.

    ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿನಿಮಾ ಮೂಡಿದ್ದು, ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ನಿರೂಪ್ ಗೆ ಜೊತೆಯಾಗಿ ನಟಿ ಆವಂತಿಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ತಮಿಳು ನಟ ಆರ್ಯ, ರವಿಶಂಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

  • ರಂಗಿತರಂಗದ ನಂತ್ರ ಮತ್ತೊಮ್ಮೆ ಮೋಡಿ ಮಾಡಲು ತೆರೆಗೆ ಬರ್ತಿದೆ ‘ರಾಜರಥ’

    ರಂಗಿತರಂಗದ ನಂತ್ರ ಮತ್ತೊಮ್ಮೆ ಮೋಡಿ ಮಾಡಲು ತೆರೆಗೆ ಬರ್ತಿದೆ ‘ರಾಜರಥ’

    ಬೆಂಗಳೂರು: ರಂಗಿತರಂಗ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿ ಬಂದಿರುವ ರಾಜರಾಥ ಸಿನಿಮಾ ಇದೇ ಶುಕ್ರವಾರ ಅಂದರೆ ಮಾರ್ಚ್ 23ರಂದು ತೆರೆಕಾಣಲಿದೆ.

    ವಿಭಿನ್ನ ಕಥಾ ಹಂದರವುಳ್ಳ ರಂಗಿತರಂಗ ಸಿನಿಮಾ ನೀಡಿದ ಬಳಿಕ ಅನೂಪ್ ಭಂಡಾರಿ ರಾಜರಥದಲ್ಲಿ ಸಾಗುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿನಿಮಾ ಮೂಡಿದ್ದು, ನಿರೂಪ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ನಿರೂಪ್ ಗೆ ಜೊತೆಯಾಗಿ ನಟಿ ಆವಂತಿಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನೂ ತಮಿಳು ನಟ ಆರ್ಯ, ರವಿಶಂಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

    ರಾಜರಥ ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಗಾಂಧಿನಗರದಲ್ಲಿ ಭರವಸೆಯನ್ನು ಮೂಡಿಸಿದೆ. ಕಾಲೇಜು, ಸ್ವೀಟ್ ಲವ್ ಸ್ಟೋರಿಯನ್ನು ಸಿನಿಮಾ ಕಥೆ ಎಂಬುದನ್ನು ಹಾಡುಗಳು ಈಗಾಗಲೇ ಹೇಳ್ತಿವೆ. ಆದ್ರೆ ಚಿತ್ರದ ಸಂಪೂರ್ಣ ಕಥಾ ಹಂದರವನ್ನು ಎಲ್ಲಿಯೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಹಿಂದೆ ಅನೂಪ್ ಭಂಡಾರಿ ರಂಗಿತರಂಗ ಸಿನಿಮಾದಲ್ಲಿ ನೋಡುಗರನ್ನು ಕೊನೆಯವರೆಗೂ ಹಿಡಿದಿಟ್ಟಿಕೊಂಡಿದ್ದರು. ಇದನ್ನೂ ಓದಿ: ಮತ್ತೆ ಬರ್ತಿದೆ ರಂಗಿತರಂಗ ಜೋಡಿ- ಇದು ಅವರ ಕಥೆಯಲ್ಲ, ನನ್ನ ಕಥೆ ಅಂತಿದೆ ರಾಜರಥ ನೋಡಿ

    ಸಿನಿಮಾದ ಕಥೆ ಕಣ್ಣಮುಂದೆಯೇ ಬರುವಂತೆ ಚಿತ್ರೀಕರಿಸಲಾಗಿದೆ. ಜನರು ಏನು ನೋಡಬೇಕೆಂದು ಥಿಯೇಟರ್ ಗೆ ಬರುತ್ತಾರೆ ಅದಕ್ಕಿಂತ ಹೆಚ್ಚಿನದನ್ನು ರಾಜರಥ ನೀಡಲಿದೆ. ಒಂದು ಸಿನಿಮಾ ಯಶಸ್ಸಿನ ಬಳಿಕ ಅಂತಹ ಚಿತ್ರವನ್ನು ಮಾಡಬೇಕೆಂದು ಮಾಡಿಲ್ಲ. ಇದು ರಂಗಿತರಂಗ ಚಿತ್ರಕ್ಕಿಂತ ವಿಭಿನ್ನವಾದ ಹೊಸತನದ ಕಥೆಯನ್ನು ಹೊಂದಿದೆ. ಈ ಹಿಂದೆ ಸರಳ ಹುಡಗನಾಗಿ ಕಾಣಿಸಿದ್ದ ನಿರೂಪ್ ಈ ಬಾರಿ ತರಲೆ ಕಾಲೇಜು ಹುಡಗನಾಗಿ ವಿಭಿನ್ನ ಲುಕ್ ನಲ್ಲಿ ಮಿಂಚಿದ್ದಾರೆ ಅಂತಾ ಚಿತ್ರತಂಡ ತಿಳಿಸಿದೆ.

    ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತವನ್ನು ಚಿತ್ರ ಹೊಂದಿದೆ. ಜಾನಿ ಮಾಸ್ಟರ್ ಮತ್ತು ಬೋಸ್ಕೋ ಕೇಸರ್ ಕ್ಯಾಮೆರಾ ಕಾರ್ಯ ನಿರ್ವಹಿಸಿದ್ದಾರೆ. ಮೊದಲ ಟ್ರೇಲರ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಿನ್ನೆಲೆ ಧ್ವನಿಯಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಕನ್ನಡ ಮತ್ತು ತೆಲಗುವಿನಲ್ಲಿಯೂ ಮೂಡಿಬಂದಿದೆ.

  • ಮದುವೆಯಾದ ಬಳಿಕ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ ನಟಿ ರಾಧಿಕಾ ಪಂಡಿತ್-ಹೀರೋ ಯಾರು ಗೊತ್ತಾ?

    ಮದುವೆಯಾದ ಬಳಿಕ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ ನಟಿ ರಾಧಿಕಾ ಪಂಡಿತ್-ಹೀರೋ ಯಾರು ಗೊತ್ತಾ?

    ಬೆಂಗಳೂರು: ಸ್ಯಾಂಡಲ್ ವುಡ್ ನ ನಟಿ, ನಟ ಯಶ್‍ನ ಮುದ್ದಿನ ಮಡದಿ ರಾಧಿಕಾ ಪಂಡಿತ್ ಮದುವೆ ನಂತರ ಮೊದಲ ಬಾರಿಗೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

    ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಧಿಕಾ ಪಂಡಿತ್ ಜೊತೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಟನಾಗಿ ಅಭಿನಯಿಸುತ್ತಿದ್ದಾರೆ. ಇಂದು ಸಿನಿಮಾ ಮುಹೂರ್ತ ನಡೆಯಲಿದ್ದು, ವಿ. ಪ್ರಿಯಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಜೊತೆ ಸಹಾಯಕರಾಗಿ ಕೆಲಸ ಮಾಡಿರುವ ಪ್ರಿಯಾ ಈಗಾಗಲೇ ಮೂರು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿ ಬಂದಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ತಾರಾ, ಸುಚೇಂದ್ರ ಪ್ರಸಾದ್ ಕೂಡ ನಟಿಸುತ್ತಿದ್ದು, ಸಿನಿಮಾದಲ್ಲಿ ಪ್ರೀತಂ ಜಯರಾಂ ಅವರ ಛಾಯಾಗ್ರಹಣ ಇರುತ್ತದೆ. ಡಿಸೆಂಬರ್ 11 ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

    ರಾಧಿಕಾ ಪಂಡಿತ್ ಅವರ ಈ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿಲ್ಲ. ಅವರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಹೀರೋ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆಯಂತೆ. ಚಿತ್ರದ ಟೈಟಲ್ ಇನ್ನು ಬಹಿರಂಗ ಆಗಿಲ್ಲ. ರಾಧಿಕಾ ಪಂಡಿತ್ ಮದುವೆಯ ಸಂದರ್ಭದಲ್ಲಿ `ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ವರ್ಷದ ಬಳಿಕ ಮತ್ತೆ ರಾಧಿಕಾ ಪಂಡಿತ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕಥೆ ತುಂಬ ಇಷ್ಟ ಆಗಿದ್ದು, ರಾಧಿಕಾ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.