Tag: annu kapoor

  • ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್‌’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ

    ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್‌’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ

    ನ್ನು ಕಪೂರ್ ಅಭಿನಯದ ‘ಹಮಾರೆ ಬಾರಹ್‌’ (Hamare Baarah) ಚಿತ್ರದ ಬಿಡುಗಡೆಗೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ತಡೆಯಾಜ್ಞೆ ನೀಡಿದೆ.

    ಚಿತ್ರವು ಇಸ್ಲಾಂ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿದೆ ಬಿಂಬಿಸಿದೆ ಎಂದು ಆರೋಪಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್‌ಗೆ ಸುಪ್ರೀಂ ಸೂಚಿಸಿದೆ.‌ ಇದನ್ನೂ ಓದಿ: ‘ರಾಖಾ’ ಚಿತ್ರಕ್ಕೆ ಚಾಲನೆ ನೀಡಿದ ಸಚಿವ ತಂಗಡಗಿ

    ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು, ಶುಕ್ರವಾರ (ಜೂ.14) ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ತಡೆ ನೀಡಿ ಆದೇಶ ಹೊರಡಿಸಿದೆ.

    ನಾವು ಬೆಳಿಗ್ಗೆ ಚಲನಚಿತ್ರದ ಟ್ರೇಲರ್ ಅನ್ನು ನೋಡಿದ್ದೇವೆ. ಟ್ರೇಲರ್‌ನಲ್ಲಿ ಎಲ್ಲಾ ಆಕ್ಷೇಪಾರ್ಹ ಸಂಭಾಷಣೆಗಳು ಇವೆ ಎಂದು ಪೀಠವು ತಿಳಿಸಿದೆ. ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥವಾಗುವವರೆಗೆ, ಪ್ರಶ್ನಾರ್ಹ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ನಾವು ಹೈಕೋರ್ಟ್‌ಗೆ ತಿಳಿಸಲಾಗಿದೆ ಎಂದು ಪೀಠವು ಹೇಳಿದೆ. ಇದನ್ನೂ ಓದಿ: ದರ್ಶನ್ ಗೆ ನಾನ್ಯಾಕೆ ಟಾಂಗ್ ಕೊಡಲಿ: ಇಂದ್ರಜಿತ್ ಲಂಕೇಶ್

    ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಪ್ರಮಾಣೀಕರಣದ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

    ಚಿತ್ರದ ನಿರ್ಮಾಪಕ ವೀರೇಂದ್ರ ಭಗತ್ ಮಾತನಾಡಿ, ಸಿನಿಮಾವು ಮಹಿಳಾ ಸಬಲೀಕರಣ ಮತ್ತು ಜನಸಂಖ್ಯೆಯ ಜಾಗೃತಿಯ ಚಲನಚಿತ್ರವಾಗಿದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ. ಬಾಂಬೆ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದೆ. ಬಾಂಬೆ ಹೈಕೋರ್ಟ್ ನಿರ್ಧರಿಸಿದಂತೆ ಚಲನಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ತಿಳಿಸಿದರು. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಕ್ಷಿತ್, ರಾಜ್ ಬಿ ಶೆಟ್ಟಿ

  • ತೀವ್ರ ಎದೆನೋವಿನಿಂದ ಬಾಲಿವುಡ್ ನಟ ಅನ್ನು ಕಪೂರ್ ಆಸ್ಪತ್ರೆಗೆ ದಾಖಲು

    ತೀವ್ರ ಎದೆನೋವಿನಿಂದ ಬಾಲಿವುಡ್ ನಟ ಅನ್ನು ಕಪೂರ್ ಆಸ್ಪತ್ರೆಗೆ ದಾಖಲು

    ಹಿಂದಿ ಚಿತ್ರರಂಗದ ನಟ ಅನ್ನು ಕಪೂರ್ (Annu Kapoor) ಎದೆನೋವಿನಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಗುರುವಾಗ ಬೆಳಿಗ್ಗೆ (ಜ.26) ತೀವ್ರ ಎದೆ ನೋವು ಕಾಣಿಸಿಕೊಂಡ ಬೆನ್ನಲ್ಲೇ ಅನ್ನು ಕಪೂರ್‌ನ್ನು ದೆಹಲಿ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟನ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್‌ನಲ್ಲಿ ಹೇಳಲಾಗಿದೆ.

    ಬಾಲಿವುಡ್‌ನ (Bollywood) ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟ ಅನ್ನು ಕಪೂರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಗಂಗಾರಾಮ್ ಆಸ್ಪತ್ರೆ ವೈದ್ಯ ಡಾ.ಅಜಯ್ ಸ್ವರೂಪ್ (Ajay Swaroop) ಈ ಕುರಿತು ಮಾಹಿತಿ ನೀಡಿದ್ದಾರೆ. ಅನ್ನು ಕಪೂರ್ ಅವರಿಗೆ ಎದೆನೋವಿನ ಕಾರಣದಿಂದ ಗಂಗಾ ರಾಮ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅನ್ನು ಕಪೂರ್ ಅವರಿಗೆ ಕಾರ್ಡಿಯಾಲಜಿಸ್ಟ್ ವೈದ್ಯ ಸುಶಾಂತ್ ವತ್ತಾಲ್ ಅವರ ತಂಡ ಚಿಕಿತ್ಸೆ ನೀಡಿದ್ದಾರೆ. ಇದೀಗ ನಟನ ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ ಎಂದಿದ್ದಾರೆ.

    ನಟ ಅನ್ನು ಕಪೂರ್ 1979ರಲ್ಲಿ ಅಮಿತಾಬ್ ಬಚ್ಚನ್ ಅಭಿನಯದ `ಕಾಲಾ ಪಥ್ಥರ್’ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟರು. ಇನ್ನೂ ಇವರು ನಟನಾಗಿ ಮಾತ್ರವಲ್ಲ ನಿರ್ದೇಶಕ, ಗಾಯಕ, ರೇಡಿಯೋ ಜಾಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k