Tag: anniversary

  • ಮಾಲ್ಡೀವ್ಸ್‌ನಲ್ಲಿ ರಾಜವರ್ಧನ್‌ – ದಿವ್ಯ ದಂಪತಿ ಆನಿವರ್ಸರಿ ಸೆಲಬ್ರೇಷನ್

    ಮಾಲ್ಡೀವ್ಸ್‌ನಲ್ಲಿ ರಾಜವರ್ಧನ್‌ – ದಿವ್ಯ ದಂಪತಿ ಆನಿವರ್ಸರಿ ಸೆಲಬ್ರೇಷನ್

    ಸ್ಯಾಂಡಲ್‌ವುಡ್‌ನ ನಟ, ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್‌ (Raja Vardan) ಹಾಗೂ ಪತ್ನಿ ದಿವ್ಯ ಮಾಲ್ಡೀವ್ಸ್‌ನ ಕಡಲ ಕಿನಾರೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನ (Marriage Anniversary) ಆಚರಿಸಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವ ಆಚರಣೆಯ ಬ್ಯೂಟಿಫುಲ್ ಮುಮೆಂಟ್ಸ್‌ಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾಗಳ ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈಹಾಕಿರುವ ರಾಜವರ್ಧನ್‌ ಇದರ ಮಧ್ಯದಲ್ಲಿಯೂ ಫ್ಯಾಮಿಲಿಗೆ ಕೂಡ ಟೈಂ ಕೊಟ್ಟಿದ್ದಾರೆ. ಸ್ಪೆಷಲ್ ಡೇಯನ್ನ ಸ್ಪೆಷಲ್ ಜಾಗದಲ್ಲಿ ಕಳೆಯೋಕೆ ವಿದೇಶಕ್ಕೆ ಹಾರಿದ್ದಾರೆ. ಇದೇ ವರ್ಷ ತೆರೆಕಂಡ ಗಜರಾಮ ಸಿನಿಮಾ ಬಳಿಕ ಜಾವಾ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ ರಾಜವರ್ಧನ್. ಇದನ್ನೂ ಓದಿ: ಉಪೇಂದ್ರಾಗೆ ಮಾಲಾಶ್ರೀ ಮಗಳು ಆರಾಧನಾ ಜೋಡಿ

    ಬಿಚ್ಚುಗತ್ತಿ, ಹಿರಣ್ಯ ಹಾಗೂ ಗಜರಾಮ ಸಿನಿಮಾದಲ್ಲಿ ನಟಿಸಿರುವ ರಾಜವರ್ಧನ್ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಹೊಸ ಪ್ರಯತ್ನ ಮಾಡಲು ಮುಂದಾಗಿದ್ದಾರೆ. ಸದ್ಯ ಮಾಲ್ಡೀವ್ಸ್‌ನ (Maldives) ಸುಂದರ ತಾಣದಲ್ಲಿ ಪತ್ನಿ ಜೊತೆ ಆ್ಯನಿವರ್ಸರಿ ಸೆಲಬ್ರೇಷನ್ ಮಾಡ್ತಿದ್ದಾರೆ. ಇದನ್ನೂ ಓದಿ: ʼಕೇರಂ, ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?

  • ಅಮಿತಾಬ್ ದಾಂಪತ್ಯಕ್ಕೆ 51ರ ಸಂಭ್ರಮ: ಜಯಾ ಜೊತೆಗಿನ ಜೀವನ ಹೇಗಿತ್ತು?

    ಅಮಿತಾಬ್ ದಾಂಪತ್ಯಕ್ಕೆ 51ರ ಸಂಭ್ರಮ: ಜಯಾ ಜೊತೆಗಿನ ಜೀವನ ಹೇಗಿತ್ತು?

    ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ (Amitabh Bachchan) ಹಾಗೂ ಜಯಾ ಭಾದೂರಿ (Jaya Bachchan) ಜೋಡಿ ಇಂದು (ಜೂನ್ 3) ತಮ್ಮ 51ನೇ ವಿವಾಹ (Wedding) ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಭರ್ತಿ 51 ವರ್ಷಗಳ ಯಶಸ್ವಿ ದಾಂಪತ್ಯ ಜೀವನ ನಡೆಸಿ ಯುವ ಜನತೆಗೆ ಮಾದರಿಯಾಗಿದ್ದಾರೆ ಬಾಲಿವುಡ್‌ನ ಹಿರಿಯ ನಟ-ನಟಿ.

    ತೆರೆಯ ಮೇಲಿನ ಹಿಟ್ ಜೋಡಿ ತೆರೆಯ ಹಿಂದೆಯೂ ಹಿಟ್ ಆಗುವುದು ಅಪರೂಪ. ಆದರೆ ಅದನ್ನು ಸುಳ್ಳಾಗಿಸಿದ್ದು ಅಮಿತಾಬ್ ಹಾಗೂ ಜಯ ಜೋಡಿ. ಇಬ್ಬರ ನಡುವೆ ಸಿನಿಮಾ ಸೆಟ್ಟಲ್ಲಿ ಹುಟ್ಟಿದ್ದ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡ್ತು. ಅಮಿತಾಬ್ ಹೆಸರು ಇನ್ನೋರ್ವ ನಟಿ ರೇಖಾ ಜೊತೆ ಕೇಳಿಬಂದಿದ್ದರೂ ಅಮಿತಾಬ್ ಕೈಹಿಡಿದಿದ್ದು ಸರಳ-ಸಹಜ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ಜಯಾ ಭಾದೂರಿಯನ್ನ, ಜಯಾರನ್ನ ಅಮಿತಾಬ್ ಮದುವೆಯಾದ ಬಳಿಕ ಬಂದಿದ್ದ ಹಿಂದಿಯ `ಸಿಲ್‌ಸಿಲಾ’ ಚಿತ್ರವಂತೂ ಮೂವರ ನೈಜ ಘಟನೆಯನ್ನೇ ಕೇಂದ್ರವಾಗಿಟ್ಟುಕೊಂಡು ಮಾಡಿರುವ ಚಿತ್ರ ಎಂದು ಆಗಿನ ಕಾಲಕ್ಕೆ ಸುದ್ದಿಯಾಗಿತ್ತು. ಬಳಿಕ ರೇಖಾ ಜೊತೆ ಅಮಿತಾಬ್ ಮುಂದೆ ಯಾವತ್ತೂ ತೆರೆ ಹಂಚಿಕೊಳ್ಳಲೇ ಇಲ್ಲ. ಕಾರಣ ಪತಿ ಅಮಿತಾಬ್‌ಗೆ ಜಯಾ ಹಾಕಿದ್ದ ಲಕ್ಷ್ಮಣ ರೇಖೆ ಎಂಬ ಮಾತಿದೆ.

    ಸಿನಿಮಾ ಸೆಲೆಬ್ರಿಟಿ ದಂಪತಿ ನಡುವೆ ವಿಚ್ಚೇದನ ಸಹಜವಾಗ್ತಿರುವ ಬೆನ್ನಲ್ಲೇ ಅಮಿತಾಬ್-ಜಯಾ ಜೋಡಿಯ ಐದು ದಶಕದ ಸುಖೀ ದಾಂಪತ್ಯದ ಸುದ್ದಿ ಯುವ ಜನತೆಗೆ ಮಾದರಿ ವಿಷಯ. ಜಯಾ ಬಚ್ಚನ್ ಇನ್ಸ್ಟಾದಲ್ಲಿ ಈ ವಿಚಾರ ಹಂಚಿಕೊಳ್ಳುತ್ತಿದ್ದಂತೆ ಜೋಡಿಗೆ ಶುಭಾಶಯದ ಕಾಮೆಂಟ್ಸ್ ಬರುತ್ತಿದೆ. ಸುಖೀ ದಾಂಪತ್ಯದ ಸಲಹೆ ಕೇಳುತ್ತಿದ್ದಾರೆ ಇನ್ನೂ ಹಲವರು. ಆದರೆ ವೈಯಕ್ತಿಕ ರಾಗದ್ವೇಷಗಳಿಗಿಂತ ಹೆಚ್ಚಾಗಿ ಕೌಟುಂಬಿಕ ಮೌಲ್ಯವನ್ನ ಮಾತ್ರ ನಂಬಿರುವುದೇ 50 ವರ್ಷದ ಸುದೀರ್ಘ ದಾಂಪತ್ಯ ಅಡಿಪಾಯ ಅನ್ನೋದನ್ನ ನಂಬಬೇಕು. ಯಾಕಂದ್ರೆ ಚಿಕ್ಕ-ಪುಟ್ಟ ಮನಸ್ತಾಪಗಳು ಎದುರಾದರೂ ದೂರಾಗುವ ಮನಸ್ಥಿತಿಗಳ ನಡುವೆ ಅಸಹಜ ಎನ್ನಿಸಿದ್ದ ಜೋಡಿ ಅಮಿತಾಬ್ ಜಯಾರದ್ದು. ಮದುವೆ ಸಂದರ್ಭದಲ್ಲಂತೂ ಈಗಿನ ಕಾಲದಂತೆ ಟ್ರೋಲ್ ಪೇಜ್‌ಗಳಿದ್ದರೆ ಅದೆಷ್ಟು ಟ್ರೋಲ್ ಆಗುತ್ತಿದ್ದರೋ. ಯಾಕಂದ್ರೆ ಈ ಜೋಡಿ ನೋಡ್ದವರೆಲ್ಲಾ ಬಚ್ಚನ್ ಆರಡಿ ಜಯಾ ಮೂರಡಿ ಎಂದು ಕಾಲೆಳೆದವರೇ ಹೆಚ್ಚು. ಯಾಕಂದ್ರೆ ಜೋಡಿಗೆ ಎತ್ತರದಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಆದರೂ ಟೀಕೆ ಟಿಪ್ಪಣಿ ನಡುವೆಯೂ ಯಶಸ್ವಿ ಗ್ರಹಸ್ಥಾಶ್ರಮ ನಡೆಸುತ್ತಿದ್ದಾರೆ ಈ ದಂಪತಿ.

    ಅಮಿತಾಬ್ ಜಯಾ ಜೋಡಿ 1973 ಜೂನ್ 3ರಂದು ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ. ಬಳಿಕ ಅಭಿಷೇಕ್ ಹಾಗೂ ಶ್ವೇತಾ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಬಳಿಕವೂ ಇಬ್ಬರೂ ಚಿತ್ರದಲ್ಲಿ ನಟಿಸುತ್ತಲೇ ಇರ್ತಾರೆ. ಇದೀಗ ರಾಜಕೀಯದಲ್ಲೂ ಹೆಸರುಮಾಡಿರುವ ಜಯಾ ಬಚ್ಚನ್‌ರನ್ನ ಬ್ರೇವ್ ಲೇಡಿ ಎಂದೇ ಕರೆಯಲಾಗುತ್ತೆ. ಅಮಿತಾಬ್ ಬಚ್ಚನ್ ಯಶಸ್ಸಿನ ಹಿಂದೆ ಜಯಾ ಬಚ್ಚನ್ ಇದ್ದಾರೆ ಅನ್ನೋದನ್ನ ಅಮಿತಾಬ್ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ ಭಾರತೀಯ ಚಿತ್ರರಂಗದ ಮೊದಲ ಹೆಸರಾಂತ ತಾರಾಜೋಡಿಗೆ ಭರ್‌ಪೂರ್ ಶುಭಾಶಯ ಬರುತ್ತಿದೆ.

  • ಪಬ್ಲಿಕ್‌ ಮ್ಯೂಸಿಕ್‌ ನವ ಸಂಭ್ರಮದಲ್ಲಿ ನವ ತಾರೆಯರ ಮೆರುಗು

    ಪಬ್ಲಿಕ್‌ ಮ್ಯೂಸಿಕ್‌ ನವ ಸಂಭ್ರಮದಲ್ಲಿ ನವ ತಾರೆಯರ ಮೆರುಗು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಾಲಕ್ಷ್ಮಿ-ರವೀಂದರ್ ವಿವಾಹ ವಾರ್ಷಿಕೋತ್ಸವ:  ಪತ್ನಿಗೆ ಬರೆದ ಪತ್ರದಲ್ಲೇನಿದೆ?

    ಮಹಾಲಕ್ಷ್ಮಿ-ರವೀಂದರ್ ವಿವಾಹ ವಾರ್ಷಿಕೋತ್ಸವ: ಪತ್ನಿಗೆ ಬರೆದ ಪತ್ರದಲ್ಲೇನಿದೆ?

    ಮಿಸ್ ಮ್ಯಾಚ್ ಜೋಡಿ ಎಂದೇ ಸಖತ್ ವೈರಲ್ ಆಗಿದ್ದ ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೆಪ್ಟಂಬರ್ 1ರಂದು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಸುಂದರಿ ಮಹಾಲಕ್ಷ್ಮಿಯು ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು. ರವೀಂದರ್ ದಪ್ಪ ಅನ್ನುವ ಕಾರಣಕ್ಕಾಗಿ ಈ ಜೋಡಿ ಅಪಹಾಸ್ಯಕ್ಕೆ ಗುರಿಯಾಗಿತ್ತು. ಏನೇ ಹಾಸ್ಯ ಮಾಡಿದರೂ, ಈ ಜೋಡಿ ಒಂದು ವರ್ಷಗಳ ದಾಂಪತ್ಯ ಮುಗಿಸಿ ತಣ್ಣಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

    ಈ ಕುರಿತು ರವೀಂದರ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಹೆಂಡತಿಯ ಗುಣಗಾನ ಮಾಡಿದ್ದಾರೆ. ‘ಮಹಾಲಕ್ಷ್ಮಿ ತನ್ನ ಬಾಳಿಗೆ ಬಂದ ನಂತರ ತಮ್ಮ ಬದುಕು ಸುಂದರವಾಗಿ ಎಂದಿದ್ದಾರೆ. ಆಕೆ ಕೊಡುವ ಪ್ರೀತಿಗೆ ನಾನು ಅರ್ಹನಲ್ಲ. ಆದರೂ, ಸುಂದರ ಜೀವನ ನಡೆಸುತ್ತಿದ್ದೇವೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಸಹಾಯಕನ ಮದುವೆಗೆ ರಶ್ಮಿಕಾ ಹಾಜರಿ- ನಟಿಯ ಕಾಲಿಗೆ ಬಿದ್ದ ನವಜೋಡಿ

    ಹಾಗಂತ ಪತ್ನಿಯನ್ನು ಕೇವಲ ಹೊಗಳಿಲ್ಲ. ‘ಅವಳು ದುರಂಹಕಾರಿ, ಆಕೆಯ ಪ್ರೀತಿ ಒರಟು. ಆದರೂ, ಕೋಪ ಬಂದಾಗ ಅಡುಗೆ ಮನೆಗೆ ಸೀದಾ ಹೋಗಿ ನನಗಾಗಿ ತಿಂಡಿಯನ್ನು ಮಾಡಿಕೊಂಡು ಬರುತ್ತಾಳೆ. ಒಂದೊಂದು ಸಲ ಕೆಟ್ಟದ್ದಾಗಿಯೂ ಅಡುಗೆ ಮಾಡಿದ್ದಾಳೆ. ಆಗ ಹೋಟೆಲ್ ನಮಗೆ ಅನಿವಾರ್ಯವಾಗುತ್ತದೆ’ ಎಂದು ಕಾಲೆಳೆದಿದ್ದಾರೆ.

     

    ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಈ ದಂಪತಿ ಸಿಂಪಲ್ ಆಗಿ ಆಚರಿಸಿಕೊಂಡಿದೆ. ಆದರೆ, ಪ್ರೀತಿಯನ್ನು ಮಾತ್ರ ಅಗಾಧವಾಗಿ ಹಂಚಿಕೊಂಡಿದೆ. ರವೀಂದ್ರನ್ ಪತ್ನಿಗಾಗಿ ಉದ್ದದ ಪತ್ರವನ್ನೇ ಬರೆದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮಿತಾಭ್ ಮದುವೆಗೆ 50 ವರ್ಷ : ಶುಭ ಹಾರೈಸಿದ ಪುತ್ರಿ ಶ್ವೇತಾ ಬಚ್ಚನ್

    ಅಮಿತಾಭ್ ಮದುವೆಗೆ 50 ವರ್ಷ : ಶುಭ ಹಾರೈಸಿದ ಪುತ್ರಿ ಶ್ವೇತಾ ಬಚ್ಚನ್

    ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮದುವೆಯಾಗಿ ಇಂದಿಗೆ 50 ವರ್ಷಗಳು ತುಂಬಿವೆ. ಈ ಸಂದರ್ಭವನ್ನು ಅವರು ವಿಶೇಷವಾಗಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿಯೇ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅಮಿತಾಭ್, ಇನ್ನೂ ಕೆಲವೇ ಹೊತ್ತಿನಲ್ಲಿ ಜೂನ್ 3ನೇ ತಾರೀಖು ಬರುತ್ತದೆ. ನಾವಿಬ್ಬರೂ ಮದುವೆಯಾಗಿ (Wedding) ಐವತ್ತು ವರ್ಷ ತುಂಬುತ್ತದೆ ಎಂದು ಪತ್ನಿಗೆ ಅವರು ನೆನಪಿಸಿದ್ದಾರೆ.

    ಜಯಾ ಬಚ್ಚನ್ (Jaya Bachchan) ಅವರನ್ನು ಅಮಿತಾಭ್ ಮದುವೆಯಾಗಿ ಐವತ್ತು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಪುತ್ರಿ ಶ್ವೇತಾ ಬಚ್ಚನ್ (Shweta Bachchan) ಶುಭ ಹಾರೈಸಿದ್ದಾರೆ.  ಅಪ್ಪ ಅಮ್ಮನ ದಾಂಪತ್ಯಕ್ಕೆ ಸುವರ್ಣ ಮಹೋತ್ಸವ. ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುತ್ತೇನೆ. ನಿಮ್ಮ ಸುದೀರ್ಘ ದಾಂಪತ್ಯದ ಗುಟ್ಟೇನು ಎಂದು ಅಪ್ಪನನ್ನು ಕೇಳಿದ್ದೆ. ಅವರು ಅಮ್ಮನನ್ನು ನೆನಪಿಸಿಕೊಂಡಿದ್ದರು ಎಂದು ಅಪ್ಪನ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ದಾಂಪತ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಮತ್ತಷ್ಟು ಹಾರೈಕೆ, ಪ್ರೀತಿಯನ್ನು ಬಯಸಿರುವ ಅಮಿತಾಭ್, ಮುಂದೆ ಬರಲಿರುವ, ಈಗ ಬಂದಿರುವ ಹಾರೈಕೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಬಚ್ಚನ್ ಕುಟುಂಬವು ಈ ದಿನವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದೆ.

  • ಪಬ್ಲಿಕ್ ಮ್ಯೂಸಿಕ್‌ಗೆ 8ರ ಸಂಭ್ರಮ

    ಪಬ್ಲಿಕ್ ಮ್ಯೂಸಿಕ್‌ಗೆ 8ರ ಸಂಭ್ರಮ

    ಬೆಂಗಳೂರು: 8 ವರ್ಷಗಳಿಂದ ಸೂಪರ್ ಹಿಟ್ ಹಾಡುಗಳ ಜೊತೆ ಲೈವ್ ಶೋ, ಹಬ್ಬ-ಹರಿದಿನಗಳಲ್ಲಿ ವಿಶೇಷ ಕಾರ್ಯಕ್ರಮ, ಸ್ಪೆಷಲ್ ಕಾಂಟೆಸ್ಟ್ ಹಾಗೂ ಸೆಲೆಬ್ರೆಟಿ ಷೋಗಳೊಂದಿಗೆ ಕನ್ನಡಿಗರ ಮನಗೆದ್ದ ಪಬ್ಲಿಕ್ ಮ್ಯೂಸಿಕ್ (Public Music) ಇಂದು 8 ನೇ ವಾರ್ಷಿಕೋತ್ಸವವನ್ನು (Anniversary) ಆಚರಿಸಿಕೊಂಡಿದೆ.

    ಇಂದು ಪಬ್ಲಿಕ್ ಮ್ಯೂಸಿಕ್‌ನ 8ನೇ ವಾರ್ಷಿಕೋತ್ಸವದ ಹಿನ್ನೆಲೆ ಹಲವು ಕಾರ್ಯಕ್ರಮಗಳಿಗೆ ಪಬ್ಲಿಕ್ ಟಿವಿ (Public TV) ಮುಖ್ಯಸ್ಥರಾದ ಹೆಚ್‌ಆರ್ ರಂಗನಾಥ್ (HR Ranganath), ಅವರು ದೀಪ ಬೆಳಗಿ ಚಾಲನೆ ನೀಡಿದರು.

    ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ ತಮ್ಮ ಬಾಲ್ಯದ ದಿನಗಳನ್ನು ಹಾಗೂ ಸಂಗೀತದೊಂದಿಗಿನ ಒಡನಾಟವನ್ನು ನೆನೆಸಿಕೊಂಡರು. ನಾನು ಚಿಕ್ಕವನಾಗಿದ್ದಾಗ ತುಂಬಾ ತುಂಟನಾಗಿದ್ದೆ. ಮನೆಯಲ್ಲಿ ಊಟದ ತಟ್ಟೆಯನ್ನು ಕವುಚಿ ಹಾಕಿ, ಅದರ ಮೇಲೆ ಊಟ ಮಾಡುತ್ತಿದ್ದೆ. ನನಗೆ ಅದೇ ದೊಡ್ಡ ಉಗ್ರ ಹೋರಾಟವಾಗಿತ್ತು. ಬಳಿಕ ನನ್ನ ಪೋಷಕರು ನನ್ನ ತುಂಟತನವನ್ನು ತಾಳಲಾರದೇ ಸಂಗೀತ ತರಗತಿಗೆ ಕಳುಹಿಸಿದರು ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 8ರ ಸಂಭ್ರಮ – ಇಡೀ ದಿನ ಹಲವು ಕಾರ್ಯಕ್ರಮಗಳ ರಸದೌತಣ

    ಈ ಸಂದರ್ಭದಲ್ಲಿ ವಾಹಿನಿಗೆ ಪ್ರೋತ್ಸಾಹ ನೀಡಿದ ಡಿಟಿಎಚ್ ವಾಹಿನಿಗಳಿಗೆ, ಕೇಬಲ್‌ಗಳಿಗೆ ಮತ್ತು ಜನತೆಗೆ ಎಚ್.ಆರ್.ರಂಗನಾಥ್ ಧನ್ಯವಾದ ಹೇಳಿದರು.

    ಲಹರಿ ಕಂಪನಿಯ ಮುಖ್ಯಸ್ಥ ಲಹರಿ ವೇಲು, ಸಿಒಒ ಹರೀಶ್, ಸಂಪಾದಕರಾದ ದಿವಾಕರ್ ಉಪಸ್ಥಿತರಿದ್ದರು. ಅತಿಥಿಗಳಾಗಿ ಅಶ್ವಿನಿ ರೆಕಾರ್ಡಿಂಗ್ ಕಂಪನಿ ಮಾಲೀಕರಾದ ಅಶ್ವಿನಿ ರಾಮ್‌ಪ್ರಸಾದ್, ಜೇಂಕಾರ್ ಮ್ಯೂಸಿಕ್‌ನ ಭರತ್ ಜೈನ್, ನಟರಿಷಭ್ ಶೆಟ್ಟಿ, ನಿರ್ದೇಶಕ ಜೋಗಿ ಪ್ರೇಮ್, ನಟಿ ಧನ್ಯಾರಾಮ್ ಕುಮಾರ್ ಹಾಗೂ ನಟ ಚಿಕ್ಕಣ್ಣ ಅತಿಥಿಗಳಾಗಿ ಭಾಗವಹಿಸಿದರು. 

    ಕಾರ್ಯಕ್ರಮದ ಕೊನೆಯಲ್ಲಿ ರಂಗನಾಥ್ ಅವರು ಪಬ್ಲಿಕ್ ಮ್ಯೂಸಿಕ್ ವತಿಯಿಂದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

    Live Tv
    [brid partner=56869869 player=32851 video=960834 autoplay=true]

  • ಅಪ್ಪ ಅಮ್ಮನ ಮದುವೆ ದಿನಾನೇ ಮರೆತ ರಶ್ಮಿಕಾ ಮಂದಣ್ಣ : ತಡವಾಗಿ ವಿಶ್ ಮಾಡಿದ ನಟಿ

    ಅಪ್ಪ ಅಮ್ಮನ ಮದುವೆ ದಿನಾನೇ ಮರೆತ ರಶ್ಮಿಕಾ ಮಂದಣ್ಣ : ತಡವಾಗಿ ವಿಶ್ ಮಾಡಿದ ನಟಿ

    ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಲವು ನಟರ ಹುಟ್ಟು ಹಬ್ಬವನ್ನು ಮರೆತು ಟ್ರೋಲ್ ಆಗಿದ್ದನ್ನು ನೋಡಿದ್ದೀರಿ. ಅದರಲ್ಲೂ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಟಾಪ್ ನಟರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರದೇ ಅಭಿಮಾನಿಗಳಿಂದ ಹಿಡಿ ಶಾಪ ಹಾಕಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಅವರ ತಂದೆ ತಾಯಿಯ ಮದುವೆ ದಿನವನ್ನೇ ಮರೆತು, ತಡವಾಗಿ ವಿಶ್ ಮಾಡಿದ್ದಾರೆ. ಈ ವಿಷಯಕ್ಕೂ ಅವರು ಟ್ರೋಲ್ ಆಗಿದ್ದಾರೆ.

    ಇನ್ಸ್ಟಾಗ್ರಾಮ್ ನಲ್ಲಿ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವವನ್ನು ತಡವಾಗಿ ನೆನಪಿಸಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ರಶ್ಮಿಕಾ, ಈ ಜಗತ್ತಿಗೆ ನನ್ನನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಮತ್ತು ಜನ್ಮ ಕೊಟ್ಟಿದ್ದಕ್ಕೆ ಧನ್ಯವಾದಗಳು. ಇವತ್ತು ನಾನು ಈ ಮಟ್ಟದಲ್ಲಿ ಇದ್ದೇನೆ ಅಂದರೆ, ಅದಕ್ಕೆ ನೀವೇ ಕಾರಣ. ಸದಾ ನಾನು ನಿಮಗೆ ಋಣಿಯಾಗಿರುವೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ವಿಶ್ ಮಾಡುತ್ತಿರುವುದಕ್ಕೆ ತಡವಾದ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    ಈ ಕುರಿತು ಕೆಲವರು ಪ್ರತಿಕ್ರಿಯಿಸಿದ್ದು, ಪುಣ್ಯಕ್ಕೆ ತಡವಾದರೂ ವಿಶ್ ಮಾಡಿದ್ದೀರಲ್ಲ ಗ್ರೇಟ್ ಎಂದು ಕಾಮೆಂಟ್ ಬರೆದಿದ್ದರೆ, ಇನ್ನೂ ಕೆಲವರು ಮರೆತಿದ್ದರೆ ಇನ್ನೂ ಅನಾಹುತ ಆಗಿರುವುದು ಎಂದು ಎಚ್ಚರಿಸಿದ್ದಾರೆ. ತಂದೆ ತಾಯಿಯನ್ನೇ ಮರೆತಿರುವುದರಿಂದ ಈ ಹಿಂದಿನ ಎಲ್ಲಾ ಆವಾಂತರಗಳನ್ನು ಕ್ಷಮಿಸಲಾಗುವುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ಏನೇ ಮಾಡಿದರೂ ಸುದ್ದಿ ಆಗುತ್ತಾರೆ. ಈ ಬಾರಿ ಅಪ್ಪ ಅಮ್ಮನಿಗೆ ಅಭಿಮಾನದ ಸಂದೇಶ ಕಳುಹಿಸಿ ಸುದ್ದಿಯಾಗಿದ್ದಾರೆ.

    Live Tv

  • ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾವು ಸದಾ ಚಿರಋಣಿ

    ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾವು ಸದಾ ಚಿರಋಣಿ

    ನ್ಯೂಸ್ ಬೇಕು ಅಂದ್ರೆ ಸುದ್ದಿ ಪತ್ರಿಕೆಗಳೇ ಮೂಲಾಧಾರವಾಗಿದ್ದ ಕಾಲವೊಂದಿತ್ತು. ನಿಗದಿತ ಅವಧಿಯಲ್ಲಿ ಇಂತಿಷ್ಟು ಮಾತ್ರವೇ ಸುದ್ದಿ ಬಿತ್ತರವಾಗುತ್ತಿದ್ದ ಸಮಯ ಈಗಿಲ್ಲ. ಈಗೇನಿದ್ದರೂ ಈ ಕ್ಷಣ ಘಟಿಸಿದ್ದು ಮರುಘಳಿಗೆಯೇ ಟಿವಿ ಪರದೆ ಮೇಲೆ ಮೂಡಿ ಬರುವ ಹೈಟೆಕ್ ಟೆಕ್ನಾಲಜಿಯ ಯುಗ. ಸುದ್ದಿ ಮನೆಗೆ ಯಾವಾಗ ತಂತ್ರಜ್ಞಾನದ ಸ್ಪರ್ಶ ಸಿಕ್ಕಿತೋ ಸಕಲವೂ ಬದಲಾಗಿ ಹೋಗಿದೆ. ಸುದ್ದಿ ಪ್ರಪಂಚ ಜನರ ಪಾಲಿಗೆ ನಿತ್ಯ ಅಗತ್ಯ ವಸ್ತುವಿನಂತಾಗಿ ಬೆಳೆದು ನಿಂತಿದೆ. ಬೆಳಗೆದ್ದು ಕಾಫಿ ಹೀರುವಷ್ಟೇ ಇಂಪಾರ್ಟೆಂಟು ಮುಂಜಾವಿನ ಮೊದಲ ವಾರ್ತೆ. ಇದಿಲ್ಲದ ಹೊರತು ಹೊಸ ದಿನಕ್ಕೆ ಕಿಕ್ ಸ್ಟಾರ್ಟ್ ಸಿಗದು.

    ನಿಷ್ಪಕ್ಷಪಾತ ಸುದ್ದಿ ಬಿತ್ತರಿಸಿ, ವಸ್ತುನಿಷ್ಠ ವಿಶ್ಲೇಷಣೆ ಜೊತೆಗೆ ಸ್ಪಷ್ಟ ಮತ್ತು ನಿಖರ ಮಾಹಿತಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಅಂಥ ಸವಾಲಿನ ಮಧ್ಯೆ ಯಾವುದೇ ಪೂರ್ವಾಗ್ರಹವಿಲ್ಲದೆ ಸುದ್ದಿಯೂ ನೀಡುತ್ತಾ, ನೊಂದವರಿಗೆ ನೆರವಿನ ಹಸ್ತ ಚಾಚುತ್ತಾ, ಅನ್ಯಾಯದ ವಿರುದ್ಧ ಛಾಟಿ ಬೀಸುತ್ತಾ ಸುದ್ದಿ ಬಿತ್ತರಿಸುವ ಚಾನೆಲ್‌ನ ಅನಿವಾರ್ಯತೆ ಕನ್ನಡಿಗರಿಗೆ ಖಂಡಿತ ಇತ್ತು. ಅದನ್ನು ಪರಿಪೂರ್ಣವಾಗಿ ಈಡೇರಿಸಿದ ಶ್ರೇಯ ನಿಮ್ಮ ಪಬ್ಲಿಕ್ ಟಿವಿಯದ್ದು. ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ ಎಂಬ ಘೋಷವಾಕ್ಯ ಹೊತ್ತು ಫೆಬ್ರವರಿ 12, 2012ರಂದು ಕರುನಾಡ ಮನೆ ಮನ ತುಂಬಿದ ನಿಮ್ಮ ಪಬ್ಲಿಕ್ ಟಿವಿಗೆ ಈಗ ದಶಕ ಪೂರೈಸಿದ ಸಡಗರ. 10 ವರ್ಷದ ಸಾರ್ಥಕ ಸಂಭ್ರಮ.

    ಹೌದು. ಸುದ್ದಿ ಲೋಕ ಅಗಾಧವಾಗಿ ಬೆಳೆದಿದೆ. ಊಹಿಸಲಸಾಧ್ಯ ತಂತ್ರಜ್ಞಾನದ ನೆರವಿಂದ ಕಾರ್ಯಕ್ಷಮತೆಯೂ ವಿಸ್ತರಿಸಿದೆ. ಜೊತೆ ಜೊತೆಗೆ ನ್ಯೂಸ್ ಜಗತ್ತಿನತ್ತ ಸದಾ ದೃಷ್ಟಿಯಿಡುವ ವೀಕ್ಷಕರೂ ಬಹಳ ಜಾಣರಾಗಿದ್ದಾರೆ. ಕೊಟ್ಟ ಸುದ್ದಿಯನ್ನೆಲ್ಲಾ ದೇಗುಲದ ಸಿಹಿ ತೀರ್ಥದಂತೆ ಸ್ವೀಕರಿಸುವ ವೀಕ್ಷಕರು ಈಗಿಲ್ಲ. ನಿಖರ ಮತ್ತು ಪ್ರಖರ ಸುದ್ದಿಯ ಜೊತೆಗೆ ಪರದೆ ಮೇಲೆ ತೋರುವ ಸುದ್ದಿಯ ಗುಣಮಟ್ಟ ಅಳೆಯಬಲ್ಲ ಚಾಣಾಕ್ಷತೆ ವೀಕ್ಷಕರಿಗಿದೆ. ಅಂತಹ ಕೋಟ್ಯಂತರ ಪ್ರಜ್ಞಾವಂತ ಸುದ್ದಿಪ್ರಿಯರ ಅಚ್ಚುಮೆಚ್ಚಿನ ಚಾನೆಲ್ಲಾಗಿ ಪಬ್ಲಿಕ್ ಟಿವಿ ಹೊರಹೊಮ್ಮಿದ ಹಾದಿ ನಮ್ಮ ಪಾಲಿಗೆ ಖಂಡಿತ ಹೂವಿನದ್ದಾಗಿರಲಿಲ್ಲ. ಆದರೆ ಆ ಗಮ್ಯವನ್ನು ತಲುಪಲೇಬೇಕೆಂಬ ಹಠ ತೊಟ್ಟು ನಾವೆಯ ಚುಕ್ಕಾಣಿ ಹಿಡಿದದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್.

    ಸುದ್ದಿವಾಹಿನಿ ಅಂದ್ಮೇಲೆ ಇಲ್ಲಿ ಪ್ರತಿ ದಿನವೂ ಪ್ರತಿ ನಿಮಿಷವೂ ಸಹಜ ಸ್ಪರ್ಧೆ ಇದ್ದೇ ಇರುತ್ತದೆ. ಅದಾಗ್ಲೇ ಬೇರೂರಿದ್ದ ಇತರೆ ವಾಹಿನಿಗಳ ಮುಂದೆ ಪುಟ್ಟ ಕೂಸಾಗಿ ಕಾಲಿಟ್ಟ ಪಬ್ಲಿಕ್ ಟಿವಿ ಅಲ್ಪಾವಧಿಯಲ್ಲೇ ಕನ್ನಡ ನ್ಯೂಸ್ ಜಗತ್ತಿನ ಆಧಿಪತ್ಯದತ್ತ ದಾಪುಗಾಲಿಟ್ಟದ್ದು ಹೆಮ್ಮೆಯ ವಿಚಾರ. ದಿನನಿತ್ಯದ ಆಗು ಹೋಗುಗಳನ್ನು ಕಾಟಾಚಾರದ ಸುದ್ದಿಯಾಗಿಸದೇ ಸಮಾಚಾರಕ್ಕೊಂದು ಸದಾಚಾರದ ಚೌಕಟ್ಟು ಹಾಕಿ, ವೃತ್ತಾಂತಕ್ಕೆ ವೃತ್ತಿಪರತೆಯ ವಿಶ್ಲೇಷಣೆ ನೀಡುವುದು ಪಬ್ಲಿಕ್ ಟಿವಿಯ ಟ್ರೇಡ್ ಮಾರ್ಕ್. ಟಿಆರ್‌ಪಿ ಸಮರದಲ್ಲಿ ಬೇರುಮಟ್ಟದಿಂದ ಶುರುಮಾಡಿ ಅಲ್ಪಕಾಲದಲ್ಲೇ ಕನ್ನಡಿಗರ ಮನೆ ಮನ ಗೆದ್ದ ಹೆಮ್ಮೆ ನಮ್ಮದು.

    ಸುದ್ದಿಪ್ರಿಯ ಬಳಗಕ್ಕೆ ಸದಾ ಸತ್ಯ, ಸ್ಪಷ್ಟ ಮತ್ತು ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡುವುದು ಪಬ್ಲಿಕ್ ಟಿವಿಯ ಧ್ಯೇಯ. ಮಾಹಿತಿ ಜೊತೆ ಮನರಂಜನೆ ಅಂತ ಹಣೆಪಟ್ಟಿ ಹೊತ್ತ ಚಾನೆಲ್ಲುಗಳ ಮಧ್ಯೆ, ಆಳುವವರ ಕಿವಿ ಹಿಂಡುತ್ತಾ, ನಿತ್ಯದ ವಿದ್ಯಮಾನಗಳಿಗೆ, ರಾಜಕಾರಣದ ಚರ್ಚೆಗಳಿಗೆ, ಗಾಂಭೀರ್ಯತೆಯ ಮೆರುಗು, ಸಲಹೆಯ ಸೂತ್ರ, ಅಗತ್ಯವಿದ್ದಾಗ ಮಾತಿನ ಪೆಟ್ಟು, ಲಘು ಹಾಸ್ಯದ ಲೇಪ ಕೊಟ್ಟು ಪ್ರತಿದಿನ ರಾತ್ರಿ ಒಂಭತ್ತರ ಪ್ರೈಮ್ ಟೈಮಿಗೆ ಸರಿ ಸಾಟಿಯಿಲ್ಲದ ವೀಕ್ಷಕ ವೃಂದವನ್ನು ಹೆಚ್.ಆರ್.ರಂಗನಾಥ್ ಕಟ್ಟಿಕೊಂಡ ಪರಿ ಅತ್ಯಮೋಘ. ಅದಕ್ಕೇ ಇವತ್ತಿಗೂ ಈ ಕ್ಷಣಕ್ಕೂ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್, ಕನ್ನಡ ಸುದ್ದಿವಾಹಿನಿ ಇತಿಹಾಸದ ಮೈಲಿಗಲ್ಲು.

    ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಲಾಕ್‌ಡೌನ್ ಸಮಯವನ್ನು ನಾವು ಮರೆಯುವಂತೆಯೇ ಇಲ್ಲ. ಎಲ್ಲ ವರ್ಗದ ಜನರನ್ನೂ ಜಾತಿ‌, ವರ್ಣ, ಅಂತಸ್ತಿನ ಭೇದವಿಲ್ಲದೆ ನೋಯಿಸಿದೆ ಮಹಾಮಾರಿ ವೈರಸ್. ಈ ವೇಳೆ ಹೆಚ್.ಆರ್.ರಂಗನಾಥ್ ಮನೆಯೇ ಮಂತ್ರಾಲಯ ಮೂಲಕ ಅದೆಷ್ಟೋ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳಿದ್ದು ಅದನ್ನು ಸಾರ್ಥಕ ಕಾರ್ಯಕ್ರಮವಾಗಿಸಿತ್ತು. ಬರೀ ಮಾತಿನ ಮುಲಾಮು ಹಚ್ಚದೇ, ಅಸಲಿಗೆ ನೆರವಿನ ನೆಂಟಿನ ಪಾತ್ರವಹಿಸಿದ ಅರ್ಥಪೂರ್ಣ ಕಾರ್ಯಕ್ರಮವಾಯ್ತು ಮನೆಯೇ ಮಂತ್ರಾಲಯ.

    ಪಬ್ಲಿಕ್ ಟಿವಿಯ ಮತ್ತೊಂದು ಸಮಾಜಮುಖಿ ಕಾರ್ಯಕ್ರಮ ಜ್ಞಾನದೀವಿಗೆ. ಕೊರೊನಾ ಹೆಮ್ಮಾರಿಯ ಹೊಡೆತದಿಂದ ವಿದ್ಯಾಭ್ಯಾಸದ ದಿಕ್ಕುತಪ್ಪಿ ದಿಕ್ಕು ತೋಚದಂತಾದ ಗ್ರಾಮೀಣ ಭಾಗದ ಎಸ್ಎಸ್ಎಲ್‌ಸಿ ಮಕ್ಕಳಿಗೆ ಆನ್‌ಲೈನ್‌ ಪಾಠಕ್ಕೆ ಅಡ್ಡಿಯಾಗದಂತೆ ಮಾಡಲು ಸೃಷ್ಟಿಯಾದ ಮಹಾ ಅಭಿಯಾನವೇ ಜ್ಞಾನದೀವಿಗೆ.

    ಸರ್ಕಾರಿ ಶಾಲೆಯ 10ನೇ ತರಗತಿ ಮಕ್ಕಳ ಸಮಸ್ಯೆ ಅರಿತ ಪಬ್ಲಿಕ್ ಟಿವಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ಈ ಮಹಾ ಜ್ಞಾನಯಜ್ಞಕ್ಕೆ ಮುನ್ನುಡಿ ಬರೆಯಿತು. ಜ್ಞಾನದೀವಿಗೆ ಹೆಸರಿನ 10ನೇ ತರಗತಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಿಸುವ ಈ ಮಹಾ ಅಭಿಯಾನ ನಿರ್ವಿಘ್ನವಾಗಿ ನೆರವೇರಿತು. ಮಹಾದಾನಿಗಳ ಉದಾರ ನೆರವಿಂದ ಸಾವಿರಾರು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಯ್ತು.  ಇದನ್ನೂ ಓದಿ: ಸಿದ್ದಗಂಗಾ ಮಠದಲ್ಲಿ ಪಬ್ಲಿಕ್ ಟಿವಿ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ

    ಪಬ್ಲಿಕ್ ಟಿವಿಯ ಮತ್ತೊಂದು ಹೆಮ್ಮೆಯ ಕಾರ್ಯಕ್ರಮ. ನೊಂದವರ ಕಣ್ಣೀರನ್ನು ಒರೆಸೋದಷ್ಟೇ ಅಲ್ಲ, ಅವರಿಗೆ ವಾಸ್ತವದಲ್ಲಿ ಕೈಯಲ್ಲಾದ ಸಹಾಯ ಮಾಡುವ ಅರ್ಥಪೂರ್ಣ ಕಾರ್ಯಕ್ರಮವಿದು. ಕಳೆದ 10 ವರ್ಷಗಳಲ್ಲಿ ಇಂಥ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪಬ್ಲಿಕ್ ಟಿವಿ ಯಶಸ್ವಿಯಾಗಿ ಪ್ರಸಾರ ಮಾಡಿದೆ. ಈ ಪೈಕಿ ಪಬ್ಲಿಕ್ ಹೀರೋ ಸಹ ಒಂದು. ಸಮಾಜದಲ್ಲಿ ಎಲೆಮರೆ ಕಾಯಿಗಳಂತಿದ್ದೂ, ಸಮಾಜಮುಖಿ ಕಾರ್ಯಗಳನ್ನು ಮಾಡುವ ಅಸಲಿ ಹೀರೋಗಳನ್ನು ಗುರುತಿಸಿ, ಅಭಿನಂದಿಸುವ ಕಾರ್ಯವನ್ನು ಪಬ್ಲಿಕ್ ಟಿವಿ ನಿರಂತವಾಗಿ ಮಾಡುತ್ತಿದೆ. ತನ್ಮೂಲಕ ವೀಕ್ಷಕ ಪ್ರಭುಗಳ ಹೃದಯವನ್ನೂ ಗೆದ್ದಿದೆ.

    ಪಬ್ಲಿಕ್ ಟಿವಿ ಪ್ರಾರಂಭವಾದಾಗಿಂದ ಈವರೆಗೂ ಇಂಥ ಅದೆಷ್ಟೋ ಸಮಾಜ ಕಟ್ಟುವ ಕಾರ್ಯಗಳನ್ನು, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತ ಬಂದಿದೆ. ಈ ಮೂಲಕ ವೀಕ್ಷಕ ದೊರೆಯ ಮನಗೆದ್ದಿದೆ. ಸುದ್ದಿ ವಲಯದಲ್ಲಿ ಗೆದ್ದು ಬೀಗಿ ಲೋಕಪ್ರಸಿದ್ಧವಾಗಲು ಸಹಕರಿಸಿದ ಕನ್ನಡಿಗರಿಗೆ ಪಬ್ಲಿಕ್ ಟಿವಿ ಕೊಟ್ಟ ಮತ್ತೆರಡು ಉಡುಗೊರೆ ಅಂದ್ರೆ ಅದು ಪಬ್ಲಿಕ್ ಮ್ಯೂಸಿಕ್ ಹಾಗೂ ಪಬ್ಲಿಕ್ ಮೂವೀಸ್. ಕನ್ನಡಿಗರ ನೆಚ್ಚಿನ ಸಿನಿಮಾ ವಾಹಿನಿ ಪಬ್ಲಿಕ್ ಮೂವೀಸ್‌ಗೆ ಇಂದು ನಾಲ್ಕನೇ ವರ್ಷದ ಹುಟ್ಟುಹಬ್ಬ. 2018 ಫೆಬ್ರವರಿ 12ರಂದೇ ಲೋಕಾರ್ಪಣೆಗೊಂಡಿತ್ತು ನಿಮ್ಮ ಪ್ರೀತಿಯ ಪಬ್ಲಿಕ್ ಮೂವೀಸ್.

    ವೀಕ್ಷಕ ಮಹಾಪ್ರಭುಗಳೇ. ನೀವಿಲ್ಲದೆ ನಾವಿಲ್ಲ. ಈ 10 ವರ್ಷ ನಮ್ಮನ್ನು ಬೆಂಬಲಿಸಿ ಬೆಳೆಸಿದ್ದೀರಿ. ಬೆನ್ನು ತಟ್ಟಿ ಬಲ ತುಂಬಿದ್ದೀರಿ. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದ್ದೀರಿ. ಎಲ್ಲಾ ಪರಿಸ್ಥಿತಿಗಳಲ್ಲೂ ನಾವಿದ್ದೀವಿ ಅಂತ ನಮ್ಮ ಜೊತೆ ನಿಂತಿದ್ದೀರಿ. ನಮ್ಮ ಅನ್ನದಾತರಾದ ನಿಮ್ಮ ಪ್ರೀತಿ ಪೂರ್ವಕ ಸಹಕಾರ ಹೀಗೇ ಇರಲಿ ಅಂತ ವಿನಮ್ರವಾಗಿ ಕೇಳಿಕೊಳ್ಳುತ್ತೇವೆ. ಧನ್ಯವಾದ ಕರ್ನಾಟಕ.

  • ಉಪೇಂದ್ರ ಕೆಲ್ಸಕ್ಕೆ ಅಣ್ಣನ ಸಾಥ್ – ವಿವಾಹ ವಾರ್ಷಿಕೋತ್ಸವದ ಹಣ ನೀಡಿದ ಸುಧೀಂದ್ರ

    ಉಪೇಂದ್ರ ಕೆಲ್ಸಕ್ಕೆ ಅಣ್ಣನ ಸಾಥ್ – ವಿವಾಹ ವಾರ್ಷಿಕೋತ್ಸವದ ಹಣ ನೀಡಿದ ಸುಧೀಂದ್ರ

    ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಕ್ಕೆ ಅವರ ಅಣ್ಣ ಸುಧೀಂದ್ರ ಅವರು ಉಪೇಂದ್ರ ಅವರ ಜೊತೆಗೆ ಕೈ ಜೋಡಿಸಿದ್ದಾರೆ.

    ಉಪೇಂದ್ರ ಅವರ ಅಣ್ಣ ಸುಧೀಂದ್ರ ಹಾಗೂ ಅತ್ತಿಗೆ ವೀಣಾ ಅವರು ಇಂದು 26ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಆಟೋ ಚಾಲಕರಿಗೆ ದಿನಸಿ ಕಿಟ್‍ಗಳನ್ನು ನೀಡುವ ಸಲುವಾಗಿ ಈ ದಿನ ಮೂರು ಲಕ್ಷ ರೂಪಾಯಿಗಳನ್ನು ಉಪೇಂದ್ರ ಅವರ ಕೈಗೆ ನೀಡಿದ್ದಾರೆ. ವಿವಾಹ ವಾರ್ಷೀಕೋತ್ಸವ ಅಂಗವಾಗಿ ಆರ್ಥಿಕ ನೆರವನ್ನು ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಈ ಬಗ್ಗೆ ಉಪೇಂದ್ರ ಅವರು ಬಹಳ ಖುಷಿ ಹಾಗೂ ಹೆಮ್ಮೆಯಿಂದಲೇ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದು, ಅಣ್ಣ ಸುಧೀಂದ್ರ ಮತ್ತು ಅತ್ತಿಗೆ ವೀಣಾ ಅವರ 26 ನೇ ಮದುವೆ ವಾರ್ಷಿಕೋತ್ಸವ ಸಲುವಾಗಿ ಮೂರು ಲಕ್ಷ ರೂಗಳನ್ನು ಆಟೋ ಚಾಲಕರಿಗೆ ಕಿಟ್ ವಿತರಿಸಲು ನೀಡಿದ್ದಾರೆ. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

    ಉಪೇಂದ್ರ ಅವರು, ಹಿರಿಯ ಕಲಾವಿದರು, ಬಡವರು , ಆಟೋಚಾಲಕರು ಹೀಗೆ ಹಲವು ಮಂದಿಗೆ ದಿನಸಿ ಕಿಟ್ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉಪೆಂದ್ರ ಅವರ ಸಾಮಾಜಿಕ ಕಾರ್ಯಕ್ಕೆ ಹಲವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

  • ಸನ್ನಿಗೆ ಪತಿಯಿಂದ ಸಿಕ್ತು ಸ್ಪೆಷಲ್ ಗಿಫ್ಟ್

    ಸನ್ನಿಗೆ ಪತಿಯಿಂದ ಸಿಕ್ತು ಸ್ಪೆಷಲ್ ಗಿಫ್ಟ್

    ಮುಂಬೈ: 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಸನ್ನಿ ಲಿಯೋನ್‍ಗೆ ಪತಿಯಿಂದ ಚಂದದ ಡೈಮಂಡ್ ಹಾರ ಉಡುಗೊರೆಯಾಗಿ ಸಿಕ್ಕಿದೆ.

     

    ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ವೆಬರ್ ಅತ್ಯಂತ ಸ್ವೀಟ್ ಸೆಲೆಬ್ರಿಟಿ ದಂಪತಿಗಳಾಗಿದ್ದಾರೆ. ಇವರು ಸುಖ ಸಂಸಾರ ನಿನ್ನೆ 10 ವರ್ಷ ಪೂರೈಸಿದೆ. ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಸನ್ನಿಗೆ ಪತಿ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದಾರೆ. ಈ ಕುರಿತಾಗಿ ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಮ್‍ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Sunny Leone (@sunnyleone)

    ನಮ್ಮ ವಾರ್ಷಿಕೋತ್ಸವಕ್ಕಾಗಿ ನನಗೆ ವಜ್ರದ ಹಾರವನ್ನು ನೀಡಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ಒಂದು ಕನಸಾಗಿದೆ. ನಾವಿಬ್ಬರು ಮದುವೆಯಾಗಿ 10 ವರ್ಷಗಳಾಗಿವೆ. ಆದರೆ ನಮ್ಮ ಜೀವನವನ್ನು ಒಟ್ಟಿಗೆ ಕಳೆಯಲಾರಂಭಿಸಿ 13 ವರ್ಷಗಳಾಗಿವೆ. ನಾವು ಯಾರ ಊಹೆಗೂ ನಿಲುಕದ ರೀತಿಯಲ್ಲಿ ಅದ್ಭುತವಾದ ಜೀವನವನ್ನು ನಡೆಸುತ್ತಿದ್ದೇವೆ. ಲವ್ ಯೂ ಎಂದು ಬರೆದುಕೊಂಡು ಪತಿ ಕೊಡಿಸಿರುವ ವಜ್ರದ ಹಾರದೊಂದಿಗೆ ಒಂದು ಸೆಲ್ಫಿ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಪ್ರೀತಿಯ ಪತಿಗೆ ಸಿಹಿಯಾದ ಧನ್ಯವಾದವನ್ನು ಸೋಶಿಯಲ್ ಮೀಡಿಯಾದ ಮೂಲಕವಾಗಿ ಸನ್ನಿ ಲಿಯೋನ್ ತಿಳಿಸಿದ್ದರೆ. ಡೇನಿಯಲ್ ಉಡುಗೊರೆಯಾಗಿ ನೀಡಿದ ವಜ್ರದ ಹಾರವನ್ನು ತೋರಿಸಿರುವ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿ ವಾರ್ಷಿಕೋತ್ಸವದ ಶುಭಾಶಯವನ್ನು ಕೋರಿದ್ದಾರೆ.