Tag: Annigeri

  • ಕ್ರೂಸರ್, ಕಾರ್ ಮುಖಾಮಖಿ ಡಿಕ್ಕಿ – ಸ್ಥಳದಲ್ಲೇ ನಾಲ್ವರ ಸಾವು

    ಕ್ರೂಸರ್, ಕಾರ್ ಮುಖಾಮಖಿ ಡಿಕ್ಕಿ – ಸ್ಥಳದಲ್ಲೇ ನಾಲ್ವರ ಸಾವು

    – ಅಣ್ಣಿಗೇರಿ ಬಳಿ ಭೀಕರ ಅಪಘಾತ

    ಧಾರವಾಡ: ಕ್ರೂಸರ್ ಮತ್ತು ಕಾರ್ ಮುಖಾಮುಖಿ ಡಿಕ್ಕಿಯಾದ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿಯ ಕೊಂಡಿಕೊಪ್ಪ ಕ್ರಾಸ್ ಬಳಿ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಅಪಘಾತ ಸಂಭವಿಸಿದೆ.

    ಸಣ್ಣಗಂಗಣ್ಣ (52), ನಾಗಮ್ಮ (48), ಹನಮಪ್ಪ ಭೋವಿ (37) ಹಾಗೂ ಈರಣ್ಣಾ (24) ಮೃತ ದುರ್ದೈವಿಗಳು. ಮೃತರೆಲ್ಲರೂ ರಾಯಚೂರು ಜಿಲ್ಲೆಯ ಮಾನ್ವಿಯ ವಿಠ್ಠಲ ನಗರ ನಿವಾಸಿಗಳು ಎಂದು ತಿಳಿದು ಬಂದಿದೆ. ಸಣ್ಣ ಈರಣ್ಣ ಮತ್ತು ಲಕ್ಷ್ಮಿ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಾರ್ ಮಾನ್ವಿಯಿಂದ ಕಾರವಾರದ ಹಲಗದ ಆಸ್ಪತ್ರೆಗೆ ಹೋಗುತ್ತಿತ್ತು. ಅಪಘಾತದ ತೀವ್ರತೆಗೆ ಕಾರ್ ನಲ್ಲಿದ್ದ ಆರು ಜನರ ಪೈಕಿ ನಾಲ್ವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಕ್ರೂಸರ್ ಚಾಲಕನೂ ಕೂಡಾ ಗಾಯಗೊಂಡಿದ್ದು, ಆತನಿಗೆ ಕೂಡಾ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ಸ್ಯಾಂಡಲ್‍ವುಡ್ ಆಯ್ತು- ಇದೀಗ ಪುರಸಭೆಯಲ್ಲೂ ಮೀಟೂ ಸದ್ದು

    ಸ್ಯಾಂಡಲ್‍ವುಡ್ ಆಯ್ತು- ಇದೀಗ ಪುರಸಭೆಯಲ್ಲೂ ಮೀಟೂ ಸದ್ದು

    ಧಾರವಾಡ: ದೇಶಾದ್ಯಂತ ಮೀಟೂ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದು, ಈಗ ಇದು ಪುರಸಭೆಗೂ ವ್ಯಾಪಿಸಿಕೊಂಡಿದೆ. ಹೌದು ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಪುರಸಭೆ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ.

    ಸಾವಿತ್ರಿ ಪೂಜಾರ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಮಹಿಳೆ. ನಗರಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಒಂದು ವರ್ಷದ ಹಿಂದೆ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಹೇಳಿಕೊಂಡಿದ್ದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

    ಏನಿದು ಪ್ರಕರಣ?:
    ಅಣ್ಣಿಗೇರಿ ಪುರಸಭೆಯಲ್ಲಿ ನಾನು 2008ರಿಂದ 2017ರವರಿಗೆ ಕೆಲಸ ಮಾಡುತ್ತಿದ್ದೆ. ಕೆಲಸ ಕೊನೆಯ ವರ್ಷ 2016-17ರಲ್ಲಿ ಕಂದಾಯ ನಿರೀಕ್ಷಕ ವಿ.ಎಸ್.ಬಣಗಾರ, ಸಿಬ್ಬಂದಿ ಬಿ.ಎಫ್.ಜಿಡ್ಡಿ, ಗುತ್ತಿಗೆದಾರ ಮುತ್ತು ಸೂಡಿ ಸೇರಿದಂತೆ ಹಲವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವಿರುದ್ಧ ಧ್ವನಿ ಎತ್ತಿ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ 2017 ಸೆಪ್ಟೆಂಬರ್ 8ರಂದು ದೂರು ದಾಖಲಿಸಿದ್ದೆ. ಇದರಿಂದ ಕೋಪಗೊಂಡ ಅಧಿಕಾರಿಗಳು ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ನಾನು ಕಾನೂನು ಹೋರಾಟ ನಡೆಸಿದರೂ ನನಗೆ ನ್ಯಾಯ ಸಿಕ್ಕಿಲ್ಲ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಅಮಾನತು ಮಾಡಬೇಕು ಎಂದು ಸಂತ್ರಸ್ತೆ ಸಾವಿತ್ರಿ ಕೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಣ್ಣಿಗೇರಿ ಪುರಸಭೆಯ ಅಧ್ಯಕ್ಷೆ ಸಹಿ ಮಾಡಲು ಪತಿಯಿಂದ್ಲೇ ಬರಬೇಕು ಆರ್ಡರ್!

    ಅಣ್ಣಿಗೇರಿ ಪುರಸಭೆಯ ಅಧ್ಯಕ್ಷೆ ಸಹಿ ಮಾಡಲು ಪತಿಯಿಂದ್ಲೇ ಬರಬೇಕು ಆರ್ಡರ್!

    ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪುರಸಭೆಯ ಅಧ್ಯಕ್ಷೆ ರೂಪಾ ಕಲ್ಲೂರ ಜನರ ಇಚ್ಛೆಗೆ ತಕ್ಕಂತೆ ಕೆಲಸ ಮಾಡಲ್ಲ. ಬದಲಾಗಿ ಅವರ ಪತಿ ಶಿವಶಂಕರ್ ಏನ್ ಹೇಳ್ತಾರೋ ಅಷ್ಟನ್ನೇ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಪುರಸಭೆಯಲ್ಲಿ ನಡೆಯೋ ಸಭೆಯಲ್ಲಿಯೂ ರೂಪಾ ಅವರು ಮೊಬೈಲ್ ಮೂಲಕ ಗಂಡನಿಂದ ಡೈರೆಕ್ಷನ್ ಪಡೆಯುತ್ತಾರೆ. ಬಾಗಿಲ ಬಳಿಯೇ ನಿಂತ ಪತಿ ಶಿವಶಂಕರ್ ಪತ್ನಿಗೆ ಹೀಗೀಗೆ ಮಾಡು ಅಂತಾ ಸಲಹೆ ಕೊಡುತ್ತಾರೆ. ಪತಿಯ ಆದೇಶವನ್ನು ರೂಪಾ ಪಾಲಿಸುತ್ತಾರೆ. ಈ ಎಲ್ಲ ದೃಶ್ಯಗಳು ಪುರಸಭೆಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಪುರಸಭೆ ಸದಸ್ಯರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಧ್ಯಕ್ಷೆಯ ಪತಿ ಕೂಡಾ ಪುರಸಭೆ ಸದಸ್ಯರಾಗಿದ್ದರು. ಆದರೆ ಕೆಲವು ಕಾರಣಗಳಿಂದಾಗಿ ಅವರ ಸದಸ್ಯತ್ವ ರದ್ದಾದ ನಂತರ ಅಧಿಕಾರ ಇಲ್ಲದೇ ಹಪಹಪಿಸುತ್ತಿದ್ದಾರಂತೆ. ಆದರೆ ಪತ್ನಿ ಪುರಸಭೆ ಅಧ್ಯಕ್ಷೆಯಾದ ಮೇಲೆ ಮತ್ತೆ ತಮ್ಮ ವರಸೆ ಶುರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.