Tag: Annasaheb Jolle

  • DCC Bank Election|  ಲಿಂಗಾಯತ ನಾಯಕರ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಚೆಕ್‌ಮೇಟ್!

    DCC Bank Election| ಲಿಂಗಾಯತ ನಾಯಕರ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಚೆಕ್‌ಮೇಟ್!

    ಚಿಕ್ಕೋಡಿ: ಡಿಸಿಸಿ ಬ್ಯಾಂಕ್ ಚುನಾವಣೆ (Belagavi DCC Bank) ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಜಾರಕಿಹೊಳಿ ಸಹೋದರರನ್ನು ಬದಿಗಿಟ್ಟು ಡಿಸಿಸಿ ಬ್ಯಾಂಕ್ ಹತೋಟಿಗೆ ಪಡೆಯುವ ಬೆಳಗಾವಿ ಜಿಲ್ಲೆಯ ಪಕ್ಷಾತೀತ ಲಿಂಗಾಯತ ನಾಯಕರ ಪ್ಲಾನ್ ಫ್ಲಾಪ್ ಮಾಡುವಲ್ಲಿ ಜಾರಕಿಹೊಳಿ ಸಹೋದರರು (Jarkiholi Brothers) ಯಶಸ್ವಿಯಾಗಿದ್ದಾರೆ.

    ಲಿಂಗಾಯತ ನಾಯಕರ ಸಭೆಗೆ (Lingayat Leaders Meeting) ಜಾರಕಿಹೊಳಿ ಬ್ರದರ್ಸ್‌ ಚೆಕ್ ಮೇಟ್ ನೀಡಿದ್ದು ಕೊಲ್ಲಾಪೂರ ಮಠವೊಂದರಲ್ಲಿ ನಡೆದ ಬೆಳಗಾವಿ ಲಿಂಗಾಯತ ನಾಯಕರ ಸಭೆ ಬಹುತೇಕ ವಿಫಲವಾದಂತಾಗಿದೆ. ಲಿಂಗಾಯತ ನಾಯಕರ ಸಭೆ ಬೆನ್ನಲ್ಲೇ ಲಿಂಗಾಯತ ಮುಖಂಡ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜೊತೆ ಜಾರಕಿಹೊಳಿ‌ ಸಹೋದರರು ಸಂಧಾನ ಮಾಡಿಕೊಂಡಿದ್ದಾರೆ.  ಇದನ್ನೂ ಓದಿ: ರಾಹುಲ್ ಗಾಂಧಿ ಆರೋಪ ನಿಜ, ಬೆಂ.ಗ್ರಾಮಾಂತರ ಕ್ಷೇತ್ರದ ಮತದಾನದಲ್ಲೂ ಗೋಲ್ಮಾಲ್ ನಡೆದಿದೆ ಡಿಕೆಶಿ

    ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದಲ್ಲಿರುವ ಅಣ್ಣಾಸಾಹೇಬ ಜೊಲ್ಲೆ (Annasaheb Jolle) ಮಾಲೀಕತ್ವದ ಬ್ಯಾಂಕಿನಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಜೊತೆಗೆ ಬಾಲಚಂದ್ರ ಜಾರಕಿಹೊಳಿ‌ ಸಭೆ ನಡೆಸಿದ್ದಾರೆ. ಸಚಿವ ಸತೀಶ ಜಾರಕಿಹೊಳಿ, ಶಾಸಕ ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಪ್ರಭಾಕರ ಕೋರೆ, ಬಾಲಚಂದ್ರ ಜಾರಕಿಹೊಳಿ‌, ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಚುನಾವಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.  ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ: ರಮ್ಯಾ

    ಎಲ್ಲ ಮುಖಂಡರ ಸೇರಿ ಸಮಿತಿ ಮಾಡಿ ಚುನಾವಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಕತ್ತಿ ಕುಟುಂಬ ಹೊರಗಿಟ್ಟು ಸಮಿತಿ ರಚನೆ ಮಾಡಲು ತಯಾರಿ ನಡೆಸಲಾಗುತ್ತಿದೆ.

  • ಮಾಜಿ ಸಚಿವೆ, ಸಂಸದರ ಜಮೀನಿನ ಮೇಲೂ ವಕ್ಫ್ ಕರಿನೆರಳು!

    ಮಾಜಿ ಸಚಿವೆ, ಸಂಸದರ ಜಮೀನಿನ ಮೇಲೂ ವಕ್ಫ್ ಕರಿನೆರಳು!

    ಚಿಕ್ಕೋಡಿ: ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ವಕ್ಫ್ ಜಮೀನು ವಿವಾದ (Waqf Property Dispute), ಇದೀಗ ಮಾಜಿ ಸಚಿವರು ಹಾಗೂ ಹಾಲಿ ಶಾಸಕರ ಜಮೀನಿನವರೆಗೂ ತಲುಪಿದೆ.

    ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ (Shashikala Jolle) ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ಪುತ್ರ ಬಸವ ಪ್ರಸಾದ್ ಜೊಲ್ಲೆ ಮಾಲೀಕತ್ವದ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಯಕ್ಸಂಬಾ ಪಟ್ಟಣದಲ್ಲಿರುವ ಜೊಲ್ಲೆ ಮಾಲೀಕತ್ವದ 3 ಎಕರೆಗಿಂತಲೂ ಹೆಚ್ಚಿನ ಜಮೀನಿನ ಮೇಲೆ ವಕ್ಫ್ ಕಣ್ಣು ಹಾಕಿದೆ. ಇಷ್ಟೇ ಅಲ್ಲದೇ ಯಕ್ಸಂಬಾ ಪಟ್ಟಣದ ಜೊಲ್ಲೆ ಕುಟುಂಬದ ಹಲವರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ.

    ಇದಕ್ಕೂ ಮೊದಲು ವಿಜಯಪುರದಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಕ್ಷೇತ್ರದ ಹೊನವಾಡ ಗ್ರಾಮದ 15 ರೈತರಿಗೆ ನೋಟಿಸ್ ಹೋಗಿತ್ತು. ನೋಟಿಸ್‌ನಲ್ಲಿ ನಿಮ್ಮ ಜಮೀನು ವಕ್ಫ್ ಆಸ್ತಿಯಾಗಿದ್ದು, ಪಹಣಿ ಪತ್ರದಲ್ಲಿ ಕಾಲಂ ನಂ 11 ಹಾಗೂ 9ರಲ್ಲಿ ಉಲ್ಲೇಖಿಸಿ, 2 ದಿನದಲ್ಲಿ ತಕರಾರು ಸಲ್ಲಿಸಲು ಸೂಚಿಸಲಾಗಿತ್ತು.

    ವಕ್ಫ್ ವಿವಾದದ (Waqf Board) ವಿಚಾರವಾಗಿ ಕರಾಳ ದೀಪಾವಳಿ ಆಚರಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಬಳಿಕ ರೈತರಿಗೆ ನೀಡಿದ್ದ ನೋಟಿಸ್‌ನ್ನು (Notice) ಜಿಲ್ಲಾಡಳಿತ (District Administration) ಹಿಂಪಡೆದಿತ್ತು.

  • ಪ್ರಿಯಾಂಕಾ ʻಕೈʼ ಹಿಡಿದ ಚಿಕ್ಕೋಡಿ – ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮುಗಿಲುಮುಟ್ಟಿದ ಸಂಭ್ರಮ

    ಪ್ರಿಯಾಂಕಾ ʻಕೈʼ ಹಿಡಿದ ಚಿಕ್ಕೋಡಿ – ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮುಗಿಲುಮುಟ್ಟಿದ ಸಂಭ್ರಮ

    ಚಿಕ್ಕೂಡಿ: ಜಿದ್ದಾಜಿದ್ದಿನ ಕಣವಾಗಿಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ (Congress Party) ಗೆಲುವಿನ ನಗೆ ಬೀರಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಗೆಲುವು ಸಾಧಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ (Annasaheb Jolle) ವಿರುದ್ಧ ಪ್ರಿಯಾಂಕಾ ಜಾರಕಿಹೊಳಿ 92,655 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ‌ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ 6,18,168 ಮತಗಳನ್ನು ಪಡೆದರೆ ಪ್ರಿಯಾಂಕಾ ಜಾರಕಿಹೊಳಿ 7,10,823 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.

    ಇನ್ನೂ ಅಂಚೆ ಮತ ಎಣಿಕೆ ಹಾಗೂ ಇಟಿಪಿಬಿಎಸ್ ಮತ ಎಣಿಕೆ ಜಾರಿಯಿದ್ದು ಕೈ ಅಭ್ಯರ್ಥಿಯ ಗೆಲುವಿನ ಅಂತರದಲ್ಲಿ ಅಲ್ಪ ವ್ಯತ್ಯಾಸ ಆಗುವ ಸಾಧ್ಯತೆಗಳಿವೆ. 22 ಸುತ್ತಿನ ಮತ ಎಣಿಕೆಯ ಒಂದೇ ಒಂದು ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮುನ್ನಡೆ ಸಾಧಿಸಲಿಲ್ಲ. ಎಲ್ಲ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ ಪಡೆದುಕೊಂಡಿದ್ದು ವಿಶೇಷ. ಅಲ್ಲದೇ ಪತ್ನಿ ಶಶಿಕಲಾ ಅವರು ಶಾಸಕರಾಗಿರುವ ನಿಪ್ಪಾಣಿ ಕ್ಷೇತ್ರದಲ್ಲೇ ಕಾಂಗ್ರೆಸ್‌ 29,752 ಮತಗಳ ಮುನ್ನಡೆ ಸಾಧಿಸಿರುವುದು ಬಿಜೆಪಿಗೆ ತೀವ್ರ ಮುಖಭಂಗವುಂಟುಮಾಡಿದೆ.

    ಪ್ರಧಾನಿ ಮೋದಿ ಅಲೆಯ ನಡುವೆಯೂ ಚಿಕ್ಕೋಡಿ ಮತದಾರ ಪ್ರಭುಗಳು ಜಾರಕಿಹೊಳಿ ಕುಟುಂಬಕ್ಕೆ ಜೈ ಎಂದಿದ್ದಾರೆ. ತಂದೆ ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ್‌ ಜಾರಕಿಹೊಳಿ ಹಾಗೂ ಅಭ್ಯರ್ಥಿ ಪ್ರೀಯಾಂಕಾ ಜಾರಕಿಹೊಳಿ ಹಗಲಿರುಳು ಕ್ಷೇತ್ರದಲ್ಲಿ ಗೆಲುವಿಗಾಗಿ ಶ್ರಮಿಸಿದ್ದರು.

    ಅಲ್ಲದೇ, ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವುದೇ ಕಷ್ಟ ಎನ್ನುತ್ತಿದ್ದವರಿಗೆ ಜಾತಿಗಿಂತ ವ್ಯಕ್ತಿ ಮುಖ್ಯ ಎನ್ನುವ ಸಂದೇಶವನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನರು ಸಾರಿದ್ದಾರೆ.

  • ಜೊಲ್ಲೆ ದಂಪತಿ ವಿರುದ್ಧ ಹರಿಹಾಯ್ದ ಪ್ರಕಾಶ್ ಹುಕ್ಕೇರಿ

    ಜೊಲ್ಲೆ ದಂಪತಿ ವಿರುದ್ಧ ಹರಿಹಾಯ್ದ ಪ್ರಕಾಶ್ ಹುಕ್ಕೇರಿ

    ಬೆಳಗಾವಿ: ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸದ ಅಣ್ಣಾಸಾಹೇಬ ಜೊಲ್ಲೆ ಚುನಾವಣೆಯಲ್ಲಿ ಎಲ್ಲಿಯೂ ಸಹ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಕೇವಲ ಯಕ್ಸಂಬಾ ಹಾಗೂ ಬೋರಗಾಂವ ಪಟ್ಟಣ ಪಂಚಾಯ್ತಿಗೆ ಮಾತ್ರ ಒತ್ತು ನೀಡಿದ್ದಾರೆ. ಆದರೂ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿರುವುದು ದುರ್ದೈವ. ಬೋರಗಾಂವ ಪಟ್ಟಣ ಪಂಚಾಯ್ತಿಯಲ್ಲಿ ಒಂದು ಸ್ಥಾನ ಆಯ್ಕೆಯಾಗಿಲ್ಲ. ಯಕ್ಸಂಬಾ ಪಟ್ಟಣ ಪಂಚಾಯ್ತಿಯಲ್ಲಿ ಕೇವಲ ಒಬ್ಬರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ ಎಂದು ಸಿಡಿದರು. ಇದನ್ನೂ ಓದಿ: ನಾಳೆಯ ಕರ್ನಾಟಕ ಬಂದ್ ವಾಪಸ್

    ಸಂಸದ ಹಾಗೂ ಸಚಿವೆ ತಮ್ಮ ಕಾರ್ಯ ವೈಖರಿ ಬಗ್ಗೆ ಚಿಂತನೆ ಮಾಡಬೇಕು. ಅವರ ಹೆಸರು ತೆಗೆದುಕೊಳ್ಳಲು ನನಗೆ ಮರ್ಯಾದೆ ಅನಿಸುವುದಿಲ್ಲ. ಜೊಲ್ಲೆ ದಂಪತಿ ಕ್ಷೇತ್ರದ ಜನರಿಂದ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

  • ಬೆಳಗಾವಿ ಜನರ ಪ್ರೀತಿಗೆ ಬಿ.ಸಿ.ಪಾಟೀಲ್ ಸಂತಸ -“ರೈತರೊಂದಿಗೊಂದು ದಿನ” ಬಗ್ಗೆ ಕೌರವನ ಮಾತು

    ಬೆಳಗಾವಿ ಜನರ ಪ್ರೀತಿಗೆ ಬಿ.ಸಿ.ಪಾಟೀಲ್ ಸಂತಸ -“ರೈತರೊಂದಿಗೊಂದು ದಿನ” ಬಗ್ಗೆ ಕೌರವನ ಮಾತು

    ಬೆಳಗಾವಿ: ಬೆಳಗಾವಿ ಜಿಲ್ಲೆಯ ರೈತರು ಜನರು ತೋರಿಸಿದ ಪ್ರೀತಿ ಸಂಸ್ಕೃತಿ ಹಳ್ಳಿ ಪದ್ಧತಿ ಕಂಡು ಸಂತಸವಾಗಿದೆ. ಇಲ್ಲಿ ಬಂದು “ರೈತರೊಂದಿಗೊಂದು ದಿನ”ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಸಾರ್ಥಕವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

    B.C Patil

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬಿವಶಿ ಗ್ರಾಮದಲ್ಲಿ ನಡೆದ 11ನೇ ರೈತರೊಂದಿಗೊಂದು ದಿನ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಮೇಲೆ ಮಾತನಾಡಿದ ಅವರು, ಕೃಷಿಯಲ್ಲಿ ಅಭಿವೃದ್ದಿಯಾದರೂ ಕೃಷಿಕರು ಅಭಿವೃದ್ದಿಯಾಗುತ್ತಿಲ್ಲ. ಹೀಗಾಗಿ ಇದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ “ರೈತರೊಂದಿಗೊಂದು ದಿನ” ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಸಚಿವರಾದ ಬಳಿಕ ಕೃಷಿ ಇಲಾಖೆಯ ಉನ್ನತಾಧಿಕಾರಿಗಳ ಉಪಕುಲಪತಿಗಳ ತಜ್ಞರ ಸಭೆ ನಡೆಸಿ ರೈತರ ಆತ್ಮಹತ್ಯೆಗೆ ಕಾರಣವನ್ನು ಅರಿತು ಪರಿಹರಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರವನ್ನು ಹುಡುಕಿಕೊಂಡು ರೈತರು ಹೋಗಬಾರದು, ರೈತರನ್ನು ಹುಡುಕಿಕೊಂಡು ಸರ್ಕಾರ ಅವರ ಹತ್ತಿರ ಹೋಗಬೇಕು. ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ “ರೈತರೊಂದಿಗೊಂದು ದಿನ”ಕಾರ್ಯಕ್ರಮ ಮುಂದುವರೆಸಲಾಗಿದೆ. ರೈತರ ಸಮಸ್ಯೆಯನ್ನು ರೈತರಿಂದಲೇ ಕೇಳಿ ತಿಳಿದು ಪರಿಹಾರ ಕೊಡಬೇಕೆಂಬ ಉದ್ದೇಶ ತಮ್ಮದಾಗಿದೆ ಎಂದರು.

    B.C Patil

    ಯುವಕರನ್ನು ಕೃಷಿಯತ್ತ ಆಕರ್ಷಿಸುವ ನಿಟ್ಟಿನಲ್ಲಿ “ರೈತರೊಂದಿಗೊಂದು ದಿನ” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗಾವಿ ನಿಜಕ್ಕೂ ಸಮೃದ್ಧಿ ಜಿಲ್ಲೆಯಾಗಿದೆ. ಕೋಲಾರದಲ್ಲಿ ಮಳೆ ಕಡಿಮೆ ಬಂದರೂ ರೈತರು ಸಮೃದ್ಧವಾಗಿದ್ದಾರೆ ಎನ್ನುವುದಕ್ಕೆ ಕಾರಣ “ಸಮಗ್ರ ಕೃಷಿ ಪದ್ಧತಿ”. ಹೀಗಾಗಿ ಕೋಲಾರದ ಸಮಗ್ರ ಕೃಷಿ ಪದ್ಧತಿ ಎಲ್ಲರಿಗೂ ಮಾದರಿಯಾಗಬೇಕು. ಹತ್ತು ಬೆಳೆಗಳಲ್ಲಿ ಐದು ಬೆಳೆಗಳಿಗಾದರೂ ಲಾಭ ಬಂದೇ ಬರುತ್ತದೆ. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯುತ್ತದೆ. ವೈಜ್ಞಾನಿಕ ಪದ್ಧತಿಯನ್ನು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು. ಇದನ್ನೂ ಓದಿ: ಪಾಳೆಗಾರ ಓಬಣ್ಣ ನಾಯಕನ ಸಮಾಧಿ ಧ್ವಂಸ ವೇಳೆ ನಾಗರಹಾವು ಅಡ್ಡಿ – ವೀಡಿಯೋ ವೈರಲ್

    B.C Patil

    ರೈತರು ಬೆಳೆಯುವ ರೀತಿ ಬದಲಾಗಬೇಕೆಂಬ ನಿಟ್ಟಿನಲ್ಲಿ ಅವರ ಮನೆ ಬಾಗಿಲಿಗೆ ಹೋಗಿ ಸ್ಫೂರ್ತಿ ತುಂಬುವ ಉತ್ತೇಜನಕಾರಿ ಕಾರ್ಯಕ್ರಮ “ರೈತರೊಂದಿಗೊಂದು ದಿನ”. ಸಾವಯವ ಆಹಾರಕ್ಕೆ ಉತ್ತಮ ಬೇಡಿಕೆಯಿದ್ದು, ಅವುಗಳ ಮಾರುಕಟ್ಟೆಯಾಗಬೇಕು. ಎಫ್.ಪಿ.ಓ ಮೂಲಕ ಸಾವಯವ ಆಹಾರ ಉತ್ಪನ್ನಗಳನ್ನು ತಯಾರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಹಾರ ಸಂಸ್ಕರಣ ಘಟಕಗಳನ್ನು ಕೂಡ ರೈತರಿಗೆ ಸರ್ಕಾರ ನೀಡುತ್ತಿದೆ. ಹೈನು, ಕುರಿಸಾಗಾಣಿಕೆ, ಜೇನುಸಾಗಾಣಿಕೆ ಹೀಗೆ ಎಲ್ಲವನ್ನು ಕೃಷಿಕರು ಅಳವಡಿಸಿಕೊಳ್ಳಬೇಕು. ಕಬ್ಬಿನ ಹೊಸ, ಹೊಸ ತಳಿಗಳನ್ನು ಕಂಡು ಸಂತಸವಾಗಿದೆ. ರೈತರ ಜೊತೆಗೆ ಅವರ ಮಕ್ಕಳೊಂದಿಗೆ ಸಂವಾದ ಮಾಡುವುದಾಗಿ ಹೇಳಿದರು.

    B.C Patil

    ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್ ಪರಿಹಾರ ಕಾರ್ಯ ನಡೆದು ವರದಿ ಸಲ್ಲಿಕೆಯಾಗಿದೆ. ಸದ್ಯದಲ್ಲಿಯೇ ಎನ್.ಡಿ.ಆರ್.ಎಫ್ ಎಸ್.ಡಿ.ಆರ್.ಎಫ್ ಅಡಿ ಪರಿಹಾರ ರೈತರಿಗೆ ಬರಲಿದೆ ಎಂದರು. ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಜಿಲ್ಲೆಯ ಮುಖಂಡರು ಕೃಷಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: 18 ತಿಂಗಳ ಬಳಿಕ ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಅವಕಾಶ- ಕಂಡಿಶನ್ಸ್ ಅಪ್ಲೈ

  • ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಬೆಳಗಾವಿ: ನಿಮಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಪರಿಹಾರ ಕೇಳಲು ಧೈರ್ಯವಿಲ್ಲ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಸಂತ್ರಸ್ತರು ಗ್ರಾಮದಿಂದ ಘೇರಾವ್ ಹಾಕಿದ್ದಾರೆ.

    ಗಾಂಧೀಜಿ 150ನೇ ಜನ್ಮದಿನಾಚರಣೆ ಅಂಗವಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಅಣ್ಣಾಸಾಬ್ ಜೊಲ್ಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಿಂದ ಪಾದಯಾತ್ರೆ ಆರಂಭ ಮಾಡಿದ ಸಂಸದರನ್ನು ತಡೆದ ಗಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರವಾಹ ಬಂದು ಎರಡು ತಿಂಗಳಾದರೂ ಯಾರೂ ನಮ್ಮ ಕಷ್ಟ ಕೇಳಲು ಬಂದಿಲ್ಲ. ನಿಮ್ಮ ಸರ್ಕಾರದಿಂದ ಪರಿಹಾರ ಬಂದಿಲ್ಲ ಸ್ಥಳೀಯ ಶಾಸಕ ಸತೀಶ್ ಜಾರಕಿಹೊಳಿ ಎಲ್ಲ ಮಾಡಿದ್ದಾರೆ. ನೀವೇನು ಮಾಡಿದ್ದೀರಿ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಕೋಪಗೊಂಡ ಸಂಸದರು, ಎಲ್ಲವನ್ನೂ ನಾವು ಮಾಡುತ್ತಿದ್ದೇವೆ ಎಂದು ಸಂತ್ರಸ್ತರನ್ನು ತಳ್ಳಿ ಮುಂದೆ ಹೋಗಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಬಳಿ ಪರಿಹಾರ ಕೊಡಿಸಲು ನಿಮಗೆ ಧೈರ್ಯವಿಲ್ಲ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಂತ್ರಸ್ತರು ಘೇರಾವ್ ಹಾಕಿದ್ದಾರೆ.

  • ಚಿಕ್ಕೋಡಿಯಲ್ಲಿ ಹುಕ್ಕೇರಿಗೆ ಸೋಲು – ಅಣ್ಣಾಸಾಹೇಬ ಜೊಲ್ಲೆ ಭರ್ಜರಿ ಗೆಲುವು

    ಚಿಕ್ಕೋಡಿಯಲ್ಲಿ ಹುಕ್ಕೇರಿಗೆ ಸೋಲು – ಅಣ್ಣಾಸಾಹೇಬ ಜೊಲ್ಲೆ ಭರ್ಜರಿ ಗೆಲುವು

    ಬೆಳಗಾವಿ: ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರ ಜೋರಾಗಿದೆ. ಮೈತ್ರಿ ಅಭ್ಯರ್ಥಿ, ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ 1,16,361 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

    ಅಣ್ಣಾಸಾಹೇಬ ಜೊಲ್ಲೆ 6,41,232 ಮತಗಳನ್ನು ಪಡೆದರೆ, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ 5,24,871 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

    ಬಿಜೆಪಿ ಗೆದ್ದಿದ್ದು ಹೇಗೆ?
    ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿ ಅಲೆ ಜೋರಾಗಿದೆ. ನಿಪ್ಪಾಣಿ ಶಾಶಕಿ ಹಾಗೂ ಪತ್ನಿ ಶಶಿಕಲಾ ಜೊಲ್ಲೆ, ಅಣ್ಣಾಜೊಲ್ಲೆಗೆ ಬಲವಾಗಿದ್ದರು. ಪಕ್ಷದಲ್ಲಿನ ಕತ್ತಿ ಸಹೋದರರ ವಿರೋಧಿಗಳ ಒಗ್ಗಟ್ಟು ಹಾಗೂ ಕಾಂಗ್ರೆಸ್‍ನ ಕೆಲ ಮುಖಂಡರ ಅಸಮಧಾನದಿಂದ ಅಣ್ಣಾಸಾಹೇಬ್ ಗೆಲುವು ಕಂಡಿದ್ದಾರೆ.

    ಪ್ರಕಾಶ್ ಹುಕ್ಕೇರಿ ಸೋತಿದ್ದು ಯಾಕೆ?
    ತಮ್ಮ ಮಗನ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ದೃಷ್ಟಿ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ರಾಜಕಾರಣದಲ್ಲಿ ಮುತ್ಸದಿಯಾದರೂ ಸಹ ಕ್ಷೇತ್ರ ಬಿಟ್ಟು ಇನ್ನು ಹೊರಬಂದಿರಲಿಲ್ಲ. ಚಿಕ್ಕೋಡಿಯಲ್ಲಿ ಇನ್ನೂ ಅಧಿಕೃತವಾಗಿ ಸಂಸದರ ಕಚೇರಿಯನ್ನು ಮಾಡಿಕೊಂಡಿಲ್ಲ. ಪ್ರಕಾಶ್ ಚಿಕ್ಕೋಡಿ ಬಿಟ್ಟು ಬೇರೆ ಮತಕ್ಷೇತ್ರಗಳತ್ತ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

    ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಗಳ ಪರ ಕಾಂಗ್ರೆಸ್‍ನಿಂದ ರಾಹುಲ್ ಗಾಂಧಿ ಚಿಕ್ಕೋಡಿಗೆ ಬಂದು ಪ್ರಚಾರ ಮಾಡಿದ್ದರೆ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಧಾನಿ ಮೋದಿ ಚಿಕ್ಕೋಡಿಗೆ ಬಂದು ಪ್ರಚಾರ ಮಾಡಿದ್ದರು.

  • ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಫ್ಯಾಮಿಲಿ ವಾರ್

    ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಫ್ಯಾಮಿಲಿ ವಾರ್

    ಚಿಕ್ಕೋಡಿ/ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಫ್ಯಾಮಿಲಿ ವಾರ್ ಪ್ರಾರಂಭವಾಗಿದೆ. ಒಂದು ಕಡೆ ಅಪ್ಪ ಗೆಲ್ಲಬೇಕು ಅಂತ ಕಾಂಗ್ರೆಸ್ ಗಣೇಶ್ ಮತಯಾಚನೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಪತಿ ಗೆಲ್ಲಬೇಕು ಎಂದು ಶಶಿಕಲಾ ಜೊಲ್ಲೆ ಪ್ರಚಾರ ಮಾಡುತ್ತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮತ್ತು ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ರಾಜ್ಯದಲ್ಲಿ ಚಿಕ್ಕೋಡಿ ಮತಕ್ಷೇತ್ರ ಗಮನ ಸೆಳೆಯುತ್ತಿದೆ. ಯಾಕೆಂದರೆ ಇಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಹಿಂದೆ ನಿಂತು ಮನೆಯಲ್ಲಿನ ಎಂಎಲ್‍ಎಗಳು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಸಂಸದ ಪ್ರಕಾಶ್ ಹುಕ್ಕೇರಿ ಪರವಾಗಿ ಮಗ ಗಣೇಶ್ ಹುಕ್ಕೇರಿ ಗ್ರಾಮ ಗ್ರಾಮಗಳನ್ನು ಸುತ್ತಿ ತಂದೆಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಬಿಜೆಪಿಯ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪತ್ನಿ ಶಶಿಕಲಾ ಜೊಲ್ಲೆಯವರು ಕೂಡ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.

    ಈ ಬಗ್ಗೆ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಕೇಳಿದರೆ, ನನಗೆ ಹೆಗಲಿಗೆ ಹೆಗಲು ಕೊಟ್ಟು ಬೆಳೆಸಿದ ಪತಿ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಪ್ರಚಾರ ನಡೆಸಿದ್ದೇನೆ. ನಾನು ಹೆಂಡತಿಯಾಗಿಯೂ ಮತ್ತು ಪಕ್ಷದ ಒಬ್ಬ ಶಾಸಕಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇತ್ತ ನಮ್ಮ ತಂದೆಯ ಹೆಗಲಿಗೆ ಹೆಗಲು ಕೊಟ್ಟು ದುಡಿದು ಅವರನ್ನ ಆರಿಸಿ ಮತ್ತೆ ಪಾರ್ಲಿಮೆಂಟ್‍ಗೆ ಕಳುಹಿಸುತ್ತೀನಿ ಎಂದು ಗಣೇಶ್ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇನ್ನು ಕಳೆದ ಬಾರಿ ನಡೆದ ವಿಧಾನಸಭೆ ಚುಣಾವಣೆಯಲ್ಲಿಯೂ ಸಹ ಬೆಳಗಾವಿ ಜಿಲ್ಲೆಯ ಈ ಪ್ರತಿಷ್ಠಿತ ಎರಡು ಮನೆತನಗಳು ಎದುರಾಗಿದ್ದವು. ಆಗ ಶಾಸಕ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಎದುರಾಳಿಯಾಗಿ ಸ್ಪರ್ಧಿಸಿದ್ದರು. ಈಗ ಲೋಕಸಭೆ ಚುಣಾವಣೆಯಲ್ಲೂ ಸಹ ಅದೇ ರೀತಿಯ ವಾತಾವರಣ ಮುಂದುವರೆದಿದ್ದು, ಗಣೇಶ್ ಹುಕ್ಕೇರಿಯವರ ತಂದೆ ಸಂಸದ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಸೆಣಸಲು ರೆಡಿಯಾಗಿದ್ದಾರೆ.

  • ಯುಗಾದಿ ಹಬ್ಬದ ನಿಮಿತ್ತ ಜೊಲ್ಲೆ ದಂಪತಿ ಭರ್ಜರಿ ಪ್ರಚಾರ!

    ಯುಗಾದಿ ಹಬ್ಬದ ನಿಮಿತ್ತ ಜೊಲ್ಲೆ ದಂಪತಿ ಭರ್ಜರಿ ಪ್ರಚಾರ!

    ಬೆಳಗಾವಿ(ಚಿಕ್ಕೋಡಿ): ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಇಂದು ಭರ್ಜರಿ ಪ್ರಚಾರ ಆರಂಭಿಸಿದ್ದು, ಅವರಿಗೆ ಪತ್ನಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಕೂಡ ಯುಗಾದಿ ಹಬ್ಬದ ದಿನಂದಂದು ಸಾಥ್ ನೀಡಿದ್ದಾರೆ.

    ಭರ್ಜರಿ ಪ್ರಚಾರದ ನಡುವೆಯೇ ಯುಗಾದಿ ಹಬ್ಬದ ನಿಮಿತ್ತ ಇಂದು ಜೊಲ್ಲೆ ದಂಪತಿ ಟೆಂಪಲ್ ರನ್ ನಡೆಸಿದ್ದಾರೆ. ರಾಯಬಾಗ ತಾಲೂಕಿನ ಸುಪ್ರಸಿದ್ದ ಚಿಂಚಲಿ ಮಾಯಕ್ಕ ದೇವಿ ದೇವಾಲಯ, ಮುಗಳಖೋಡ ಮಠ, ನಿಡಸೋಷಿ ದುರದುಂಡೇಶ್ವರ ಮಠ ಹಾಗೂ ಅಲಕನೂರು ಅರಣ್ಯಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಜೊಲ್ಲೆ ದಂಪತಿ ದರ್ಶನ ಪಡೆದರು.

    ಶಾಸಕ ಪಿ. ರಾಜೀವ್ ಹಾಗೂ ಕುಡಚಿ ಕ್ಷೇತ್ರದ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಜೋಡಿಯಾಗಿ ಮತಯಾಚನೆ ನಡೆಸಿದರು. ಅಲ್ಲದೆ ಈ ಬಾರಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕ್ಷೇತ್ರದ ಮತದಾರರ ಬಳಿ ಮನವಿ ಮಾಡಿಕೊಂಡರು.

  • ನಾಮಪತ್ರ ಸಲ್ಲಿಸುವ ಮುನ್ನ ಸ್ವಗೃಹದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

    ನಾಮಪತ್ರ ಸಲ್ಲಿಸುವ ಮುನ್ನ ಸ್ವಗೃಹದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

    ಬೆಳಗಾವಿ/ಚಿಕ್ಕೋಡಿ: ನಾಮಪತ್ರ ಸಲ್ಲಿಕೆಗೂ ಮುನ್ನ ಅಣ್ಣಾಸಾಬ್ ಜೊಲ್ಲೆ ಕುಟುಂಬಸ್ಥರು ಮನೆಯಲ್ಲಿ ಪೂಜೆ ಸಲ್ಲಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಆಗಿರುವ ಅಣ್ಣಾಸಾಬ್ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಕ್ಕಳಾದ ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಯಕ್ಸಂಬಾದ ತಮ್ಮ ಸ್ವಗೃಹದಲ್ಲಿ ಪೂಜೆ ಸಲ್ಲಿಸಿದ್ದಾರೆ.

    ಇಂದು ಮುಂಜಾನೆ 11 ಗಂಟೆ ಸುಮಾರಿಗೆ ನಾಮಪತ್ರ ಸಲ್ಲಿಕೆ ಮಾಡಲಿರುವ ಅಣ್ಣಾಸಾಬ್ ಜೊಲ್ಲೆಗೆ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಸಾಥ್ ನೀಡಲಿದ್ದಾರೆ. ನಂತರ ಸಂಜೆ 4 ಗಂಟೆಗೆ ನಗರದ ಆರ್.ಡಿ ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.

    ಈ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.;ಎಸ್ ಈಶ್ವರಪ್ಪ, ಸಂಸದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿ.ಎಂ ಜಗದೀಶ್ ಶೆಟ್ಟರ್ ಭಾಗವಹಿಸಲಿದ್ದಾರೆ.