Tag: Annadani

  • ರಾಜ್ಯ ಸರ್ಕಾರದಲ್ಲಿ ದಲಿತ IAS, IPS ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ: ಅನ್ನದಾನಿ

    ರಾಜ್ಯ ಸರ್ಕಾರದಲ್ಲಿ ದಲಿತ IAS, IPS ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ: ಅನ್ನದಾನಿ

    ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ದಲಿತ IAS, IPS ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದಾರೆ ಅಂತ ಮಾಜಿ ಶಾಸಕ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಅನ್ನದಾನಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನ್ನದಾನಿ, ರಾಜ್ಯದಲ್ಲಿ ಅಹಿಂದ ಸರ್ಕಾರ ನಡೆಯುತ್ತಿದೆ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಮಾಡ್ತಿದ್ದಾರೆ. ಸಿದ್ದರಾಮಯ್ಯ ‌ಸಿಎಂ ಆಗಿ 7 ವರ್ಷ ಕಳೆದಿದೆ. 7 ವರ್ಷಗಳಲ್ಲಿ ಅಹಿಂದ ಸಮಾಜಕ್ಕೆ ಕೊಟ್ಟ ಕೊಡುಗೆ ಶೂನ್ಯ. ಯಾವುದೇ ಸಮಾಜಕ್ಕೆ ಇತಿಹಾಸದಲ್ಲಿ ಉಳಿಯೋ ಯೋಜನೆ ಕೊಡದೇ ಇರೋ ಇತಿಹಾಸ ಸಿದ್ದರಾಮಯ್ಯಗೆ. ದೇವರಾಜ್ ಅರಸ್ ಅವರನ್ನು ಅವಧಿ ಹಿಂದಿಕ್ಕಬೇಕು ಅಂತ ಅಧಿಕಾರ ಸಿದ್ದರಾಮಯ್ಯ ಮಾಡ್ತಿದ್ದಾರೆ. ಸಿದ್ದರಾಮಯ್ಯ ಮುಂದುವರೆಯಲಿ ನಮ್ಮದೇನು ತಕರಾರು ಇಲ್ಲ. ದಲಿತ ಸಮುದಾಯಕ್ಕೆ ಏನ್ ಕೊಟ್ಟಿದ್ದೀರಾ. ದಲಿತರ ಹಕ್ಕು ಸಿದ್ದರಾಮಯ್ಯ ಕಸಿಯುತ್ತಿದ್ದಾರೆ ಎಂದು ಕಿಡಿಕಾರಿದರು.

    ದಲಿತರಿಗೆ ಅನುಕೂಲ ಆಗೋ ಒಂದೇ ಒಂದು ಯೋಜನೆ ಸಿದ್ದರಾಮಯ್ಯ ಕೊಟ್ಟಿಲ್ಲ. ಕುಮಾರಸ್ವಾಮಿ ದಲಿತರ ಮನೆಯಲ್ಲಿ ವಾಸ ಮಾಡಿ ದಲಿತರ ಪರ ಯೋಜನೆ ಕೊಟ್ಟರು. ಕುಮಾರಸ್ವಾಮಿ ಬರೋ ಮುಂಚೆ ನಾಯಿ-ನರಿ ಓಡಾಡದೇ ಇರೋ ರೀತಿ ದಲಿತರ ಜಾಗ ಇತ್ತು. ದಲಿತರ ಕೇರಿಗಳು ಅಚ್ಚುಕಟ್ಟಾಗಲು ಕುಮಾರಸ್ವಾಮಿ ಅವರ ಕಾರ್ಯಕ್ರಮದಿಂದ. ದಲಿತರು ಸೇರಿ ಎಲ್ಲಾ ವರ್ಗದ ಜನ ಸಿದ್ದರಾಮಯ್ಯಗೆ ಅಧಿಕಾರ ಕೊಟ್ಟರು. ನಮ್ಮ ದಲಿತರ ವೋಟ್ ಹೆಚ್ಚಾಗಿ ಸಿದ್ದರಾಮಯ್ಯಗೆ ಕೊಟ್ಟರು. ಬಹುತೇಕ ಎಲ್ಲಾ ದಲಿತ ಕ್ಷೇತ್ರಗಳು ಸಿದ್ದರಾಮಯ್ಯಗೆ, ಕಾಂಗ್ರೆಸ್‌ಗೆ ಮತ ಹಾಕಿದ್ರು. ಆದರೆ, ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡಿದ್ದಾರ ಅಂತ ಕಿಡಿಕಾರಿದರು.

    ಈ ಸರ್ಕಾರದಲ್ಲಿ IAS, IPS, ಎ ಗ್ರೇಡ್ ದಲಿತ ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ. ಇದಕ್ಕೆ ದಲಿತ ಮಂತ್ರಿಗಳು ಉತ್ತರ ಕೊಡಬೇಕು. ಈ ಸರ್ಕಾರದಲ್ಲಿ IAS, IPS, KAS ದಲಿತರು ಆಯಕಟ್ಟಿನ ಜಾಗದಲ್ಲಿ ಇಲ್ಲ. ವಿಧಾನಸೌಧ, ಡಿಸಿ, ಎಸ್ಪಿ ಜಾಗದಲ್ಲಿ ಯಾರು ದಲಿತರು ಇದ್ದಾರೆ. ಸಿದ್ದರಾಮಯ್ಯ ಇದರ ಬಗ್ಗೆ ಲೆಕ್ಕಪತ್ರ ಹೊರಡಿಸಲಿ. ನಮ್ಮ ಜನರನ್ನ ಉಪಯೋಗ ಮಾಡಿಕೊಂಡು ನಮ್ಮ ಜನರಿಗೆ ಅನ್ಯಾಯ ಮಾಡ್ತಿದ್ದೀರಾ ಸಿದ್ದರಾಮಯ್ಯ ಅವರೇ ಅಂತ ಪ್ರಶ್ನೆ ಮಾಡಿದರು.

    ರಾಹುಲ್ ಗಾಂಧಿ, ಸುರ್ಜೇವಾಲ 2023 ರಲ್ಲಿ ದಲಿತರ ಪರ ನಾವು ಇರುತ್ತೇವೆ ಅಂದರು. ಅಧಿಕಾರಕ್ಕೆ ಬಂದು ಈಗ ದಲಿತ ವಿರೋಧಿ ಆಗಿದ್ದೀರಾ. ಇದು ದಲಿತ ವಿರೋಧಿ ಸರ್ಕಾರ. ಬೇಕಾದವರಿಗೆ ಎರಡೆರಡು ಹುದ್ದೆ.‌ ಕೊಟ್ಟವರಿಗೆ ಪದೇ ಪದೇ ಹುದ್ದೆ ಕೊಡೋ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ. ಅಧಿಕಾರ ಮದದಲ್ಲಿ ನೀವು ಮರೆತು ಹೋಗಿರಬಹುದು. ಬಿಜೆಪಿ ಇದ್ದಾಗ ಅನೇಕ ಜಿಲ್ಲೆಗಳಿಗೆ ದಲಿತರನ್ನ ಡಿಸಿಗಳಾಗಿ ಮಾಡಿದ್ರು. ದಲಿತರಿಗೆ ಜಿಲ್ಲಾ ನಿಭಾಯಿಸೋ ಶಕ್ತಿ ಇಲ್ಲವಾ ಸಿದ್ದರಾಮಯ್ಯ ಅವರೇ. ACS, DC, SP ಹುದ್ದೆ ನಿಭಾಯಿಸೋ ಶಕ್ತಿ ದಲಿತರಿಗೆ ಇಲ್ಲ. ನೀವು ದಲಿತರ ರಕ್ಷಣೆ ಮಾಡ್ತೀರಾ. ದಲಿತರಿಗೆ ನೀವು ಮೋಸ ಮಾಡ್ತಿದ್ದೀರಾ ಅಂತ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

    ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಅಧಿಕಾರಿಗಳಿಗೂ ಅನ್ಯಾಯ ಆಗ್ತಿದೆ.‌ ಸಿದ್ದರಾಮಯ್ಯ ಅವರೇ ಸ್ವಜನ ಪಕ್ಷಪಾತ ಬೇಡ. ಎಲ್ಲಾ ಸಮುದಾಯಕ್ಕೆ ಹುದ್ದೆಗಳನ್ನು ಸಮಾನವಾಗಿ ಕೊಡಿ. ದಲಿತರಿಗೂ ACS ಹುದ್ದೆ ಕೊಡಿ. ಹೇಳೋವಾಗ ದಲಿತ ಪರ. ಮಾಡೋವಾಗ ದಲಿತರಿಗೆ ಮೋಸ ಮಾಡೋದು. ದಲಿತ ಅಧಿಕಾರಿಗಳು ಅಸಮರ್ಥರಾ? ಹೊರ ರಾಜ್ಯದ ದಲಿತ ಅಧಿಕಾರಿಗಳಿಗೆ ಹುದ್ದೆ ಕೊಟ್ಟು ನಿಮ್ಮ ಸಮುದಾಯಕ್ಕೆ ಕೊಟ್ಡಿದ್ದೇನೆ ಅಂತೀರಾ. ನಿಮಗೆ ಮುಂದೆ ಸಹಕಾರ ಬೇಕಾದ್ರೆ ದಲಿತರ ಪರ ಕೆಲಸ ಮಾಡಿ. ಈಗಾಗಲೇ ನಿಮಗೆ ಸಹಕಾರ ಕಳೆದು ಹೋಗಿದೆ. ಸಿದ್ದರಾಮಯ್ಯ ಜೆಡಿಎಸ್ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಈಗಲೂ ನಮ್ಮ ಮಾತು ಸಿದ್ದರಾಮಯ್ಯ ಕೇಳೋದಿಲ್ಲ. ದಲಿತರಿಗೆ ಆಗಿರೋ ಅನ್ಯಾಯ ಸರಿ ಮಾಡಿ. ಇಲ್ಲ ಅಂದರೆ ಸಿದ್ದರಾಮಯ್ಯ ಅವರನ್ನೇ ದಲಿತರು ಸರಿ ಮಾಡ್ತಾರೆ ಅಂತ ಎಚ್ಚರಿಕೆ ಕೊಟ್ಟರು.

    ದಲಿತ ಸಚಿವರು ಸಿಎಂ ಬಳಿ ಹೋಗಿ ನಮ್ಮ ಸಮುದಾಯ ಅನ್ಯಾಯದ ಬಗ್ಗೆ ಮಾತಾಡಿ. ಪರಮೇಶ್ವರ್ ಸೇರಿದಂತೆ ದಲಿತ ಸಚಿವರಿಗೆ IAS, IPS ಕೂಗು ಕೇಳುತ್ತಿಲ್ಲವಾ? ಈ ಅನ್ಯಾಯದ ಬಗ್ಗೆ ಮಾತಾಡಿ ಅಂತ ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್‌‌ನಲ್ಲಿ ದಲಿತ ಶಾಸಕರು, ಮಂತ್ರಿಗಳು ಮಾತಾಡದೇ ಇರೋ ಸ್ಥಿತಿ ನಿರ್ಮಾಣ ಆಗಿದೆ ಅಂತ ಮಾಜಿ ಶಾಸಕ ಜೆಡಿಎಸ್ ಪರಿಶಿಷ್ಟ ಜಾತಿ ಘಟದ ಅಧ್ಯಕ್ಷ ಅನ್ನದಾನಿ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಕಾಂಗ್ರೆಸ್ ‌ಪಕ್ಷದಲ್ಲಿ ದಲಿತ ಶಾಸಕರಿಗೂ, ಮಂತ್ರಿಗಳಿಗೂ ಕಷ್ಟ ಆಗ್ತಿದೆ. ಇದನ್ನ ಹೇಳಿಕೊಳ್ಳಲು ಆಗ್ತಿಲ್ಲ. ಅಂಬೇಡ್ಕರ್ ಅವರಿಗೆ ಕಷ್ಟ ಕೊಟ್ಟ ಪಕ್ಷ ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಸೋಲಿಸಿದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್‌‌ನಲ್ಲಿ ಭಯದ ವಾತಾವರಣದಲ್ಲಿ ಶಾಸಕರು, ಸಚಿವರು ಕೆಲಸ ಮಾಡ್ತಿದ್ದಾರೆ. ದಲಿತರ ಮೇಲಿನ ಅನ್ಯಾಯವನ್ನ ಸಿದ್ದರಾಮಯ್ಯ ಅವರು ನೋಡಿಯೂ ನೋಡದಂತೆ ಇದ್ದಾರೆ. ಸಚಿವರು ಮಾತಾಡಿದ್ರೆ ಸಚಿವ ಸ್ಥಾನ ಹೋಗುತ್ತದೆ ಅನ್ನೋ ಭಯ. ಶಾಸಕರಿಗೆ ಮುಂದೆ ಟಿಕೆಟ್ ಕೊಡದೇ ಇರ್ತಾರೆ ಅನ್ನೋ ಭಯ. ಹೀಗಾಗಿ, ಯಾರು ಮಾತಾಡುತ್ತಿಲ್ಲ. ಮುಂದೊಂದು ದಿನ ಇದು ಸ್ಫೋಟ ಆಗುತ್ತದೆ. ಅವರು ಹೇಳಿಲ್ಲ ಅಂದರೆ ನಾವೇ ಮುಂದೆ ಕಾಂಗ್ರೆಸ್‌‌ನಲ್ಲಿ ದಲಿತ ಶಾಸಕರು, ಮಂತ್ರಿಗಳಿಗೆ ತೊಂದರೆ ಆಗ್ತಿದೆ ಅಂತ ಹೇಳೋಣ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

  • ನಾನು ಸೋತರೆ ಆರ್ಕೆಸ್ಟ್ರಾದಲ್ಲಿ ಹಾಡಿ ಜೀವನ ಮಾಡ್ತೀನಿ: ಅನ್ನದಾನಿ

    ನಾನು ಸೋತರೆ ಆರ್ಕೆಸ್ಟ್ರಾದಲ್ಲಿ ಹಾಡಿ ಜೀವನ ಮಾಡ್ತೀನಿ: ಅನ್ನದಾನಿ

    ಮಂಡ್ಯ: ಮುಂದಿನ ಚುನಾವಣೆಯಲ್ಲಿ (Election) ನಾನು ಸೋತರೆ ಆರ್ಕೆಸ್ಟ್ರಾದಲ್ಲಿ ಹಾಡು ಹೇಳ್ಕೊಂಡು ಜೀವನ ಮಾಡುತ್ತೇನೆ ಎಂದು ಮಳವಳ್ಳಿಯ ಜೆಡಿಎಸ್ (JDS) ಶಾಸಕ ಕೆ‌.ಅನ್ನದಾನಿ (K Annadani) ಹೇಳಿದರು.

    ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ಪಟ್ಟಣದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ನನ್ನ ಕೈ ಬಿಟ್ರೆ ನಾನು ಹಾಡು ಹೇಳಿಕೊಂಡು, ನಾಟಕವಾಡಿ ಜೀವನ ಮಾಡುತ್ತೇನೆ. ನಾನೊಬ್ಬ ಸಾಂಸ್ಕೃತಿಕ ವ್ಯಕ್ತಿ, ಬರೀ ರಾಜಕೀಯನೇ ನೆಚ್ಚಿಕೊಂಡಿಲ್ಲ, ರಾಜಕೀಯನೇ ಅಂಟಿಕೊಂಡು ಅದರಿಂದಲೇ ಆಸ್ತಿ ಮಾಡಿಕೊಂಡು ರಾಜಕೀಯದಲ್ಲೇ ಶ್ರೀಮಂತನಾಗಬೇಕೆಂಬುದು ನನಗಿಲ್ಲ ಎಂದರು.

    ನಾನು ಹಾಡು ಹೇಳುತ್ತೇನೆ, ನಾಟಕ ಕಲಿತಿದ್ದೀನಿ, ನೀವೇನಾದ್ರು ನನ್ನ ತೆಗೆದು ಆಚೆಗೆ ಹಾಕಿದರೆ, ಆರ್ಕೆಸ್ಟ್ರಾದಲ್ಲಿ ಹಾಡು ಹೇಳ್ಕೊಂಡು ಜೀವನ ಮಾಡ್ತೀನಿ. ಜೀವನ ಮಾಡಲು ನನಗೆ ತೊಂದರೆ ಇಲ್ಲ. ಹಲವು ಕಲಾವಿದರು ನನಗೆ ಸ್ನೇಹಿತರಿದ್ದಾರೆ. ನಾಲ್ಕು ಒಳ್ಳೆ ಹಾಡು ಹೇಳಿದ್ರೆ ಬದುಕು ನಡೆಸಿಕೊಂಡು ಹೋಗಬಹುದು. ದೇವೇಗೌಡ್ರು, ಕುಮಾರಸ್ವಾಮಿ ಅವರು ಸಣ್ಣ ಲೋಪ ಇಲ್ಲದೆ ಆಡಳಿತ ನಡೆಸಿದ್ದಾರೆ. ಅವರ ಶಿಷ್ಯನಾಗಿ ನಾನು ಇಲ್ಲಿ ಏನ್ ಮಾಡ್ಬೇಕು ಎಂಬ ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯಗೆ ಸಿದ್ಧವಾಯ್ತು ಹೈಫೈ ಪ್ರಚಾರದ ಬಸ್

    ಕಮಿಷನ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಿಮಗ್ಯಾರಾದ್ರು ಕಮಿಷನ್ ಇಸ್ಕೊತ್ತಾರೆ ಅಂತ ಹೇಳಿದ್ರೆ, ಅದು ಬರೀ ರಾಜಕೀಯ ಟೀಕೆಯಾಗಿದೆ. ಕನಕದಾಸರನ್ನೇ ಬಿಡಲಿಲ್ಲ ಸಮಾಜ, ಇನ್ನ ನನ್ನ ಬಿಡ್ತಾರಾ ಎಂದು ತಮ್ಮ ಮೇಲೆ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿದರು. ಇದನ್ನೂ ಓದಿ: ದೇಗುಲ ಮಠದ ಮೂವರು ವಿದ್ಯಾರ್ಥಿಗಳು ನಾಪತ್ತೆ‌- ದೂರು ನೀಡಿದ ವಾರ್ಡನ್

    Live Tv
    [brid partner=56869869 player=32851 video=960834 autoplay=true]

  • ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ

    ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ

    ಬೆಳಗಾವಿ: ಕೊಲ್ಲಾಪುರದಲ್ಲಿ ಎಂಇಎಸ್ ಪುಂಡರು ಕನ್ನಡ ಧ್ವಜ ಸುಟ್ಟ ಪ್ರಕರಣ ಖಂಡಿಸಿ ವಿಧಾನಸಭೆಯಲ್ಲಿ ಇವತ್ತು ಖಂಡನಾ ನಿರ್ಣಯ ಮಂಡಿಸಲಾಯಿತು. ಜೆಡಿಎಸ್ ಶಾಸಕ ಅನ್ನದಾನಿ ಎಂಇಎಸ್ ಪುಂಡರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಖಂಡನಾ ನಿರ್ಣಯ ಮಂಡಿಸಿದ್ರು. ಈ ಖಂಡನಾ ನಿರ್ಣಯಕ್ಕೆ ಪಕ್ಷಬೇಧ ಮರೆತು ಸಹಮತ ವ್ಯಕ್ತವಾಯ್ತು.

    ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಕನ್ನಡ ಧ್ವಜ ಹಿಡಿದು ಶೂನ್ಯವೇಳೆಯಲ್ಲಿ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ನನ್ನ ತಾಯಿ. ನನ್ನ ತಾಯಿಗೆ ಬೆಂಕಿ ಹಚ್ಚಿದ್ದಾರೆ. ಮಂಗಳವಾರ ಬೆಂಕಿ ಹಚ್ಚಿದ್ದು, ಮಹಾರಾಷ್ಟ್ರ ಸರ್ಕಾರ ಏನು ಮಾಡುತ್ತಿದೆ? ಎರಡು ದಿನ ಆದ್ರೂ ಕ್ರಮ ಕೈಗೊಂಡಿಲ್ಲ. ಕರುನಾಡ ಜನ ಕರುಣಾಮಯಿಗಳು, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಾಡು ನಮ್ಮದು. ಉದ್ದೇಶಪೂರ್ವಕವಾಗಿ ನಮ್ಮನ್ನ ಕೆಣಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡಿ ಎಂದು ಧರಣಿ ಕೂಡ ನಡೆಸಿದ್ರು. ಇದನ್ನೂ ಓದಿ:  ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!

    ಇದೇ ವೇಳೆ ಮಧ್ಯಪ್ರವೇಶ ಮಾಡಿ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅನ್ನದಾನಿ ಬಹಳ ಪ್ರಾಮುಖ್ಯ ವಿಷಯ ಪ್ರಸ್ತಾಪಿಸಿದ್ದಾರೆ. ಮಹಾರಾಷ್ಟ್ರ ಪುಂಡರು ಬಾವುಟ ಸುಟ್ಟು ಹಾಕಿದ್ದಾರೆ. ಅವರನ್ನು ಮತಿಹೀನರು ಎಂದು ಕರೆಯಬೇಕಾಗುತ್ತದೆ. ನಾವೆಲ್ಲರೂ ಭಾರತೀಯರು, ಆದರೆ ಭಾಷವಾರು ಪ್ರಾಂತ್ಯವನ್ನಾಗಿ ಮಾಡಿಕೊಂಡಿದ್ದೇವೆ. ಕನ್ನಡ ಬಾವುಟದ ಮೇಲೆ ಭಾವನಾತ್ಮಕ ಸಂಬಂಧ ಇದೆ. ಇದನ್ನು ನಾನು ನಿಜವಾಗಿಯೂ ಖಂಡಿಸುತ್ತೇನೆ. ಇದರಿಂದ ರಾಜ್ಯ-ರಾಜ್ಯಗಳ ನಡುವೆ ದ್ವೇಷ ಅಸೂಯೆಗಳು ಉಂಟಾಗುತ್ತೆ. ಹೀಗಾಗಿ ಕನ್ನಡಕ್ಕೆ ಒಂದು ನಿರ್ಣಯ ಮಾಡಿ, ಶಿಕ್ಷೆ ಕೊಡಿ ಎಂದು ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡೋಣ ಎಂದು ತಿಳಿಸಿದರು.

    ಬಳಿಕ ಸರ್ಕಾರದ ಪರವಾಗಿ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ಖಂಡನಾ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದ್ರು. ಇದು ನಿಜವಾಗಿಯೂ ನಮಗೆಲ್ಲ ನೋವನ್ನು ತಂದಿದೆ. ಯಾವುದೇ ಸರ್ಕಾರ ಇದ್ರು, ನೆಲ, ಜಲ, ಭಾಷೆ ರಕ್ಷಣೆ ಮಾಡೋದು ನಮ್ಮೆಲ್ಲರ ಕರ್ತವ್ಯ. ಎಂಇಎಸ್ ಅವರು ಪದೇ-ಪದೇ ಪುಂಡಾಡಿಕೆ ಮಾಡ್ತಿದ್ದಾರೆ. ಧ್ವಜ ಸುಟ್ಟು ಹಾಕಿರುವರು ಕಿಡಿಗೇಡಿಗಳು. ನಮ್ಮ ನೆಲದಲ್ಲಿ ಈ ರೀತಿ ಆಗಿದಿದ್ರೆ ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಆದರೆ ಅಲ್ಲಿನ ನೆಲದಲ್ಲಿ ಆಗಿರೋದ್ರಿಂದ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತಾಡ್ತೇವೆ. ಜೊತೆಗೆ ಖಂಡನಾ ನಿರ್ಣಯವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಕಳುಹಿಸಿಕೊಡ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪಾಂಡವರ ಕಾಲದ ಕೋಟೆ ಬೆಟ್ಟ ಬೊಳ್ಲಪ್ಪ ಈಶ್ವರ ದೇವಾಲಯದಲ್ಲಿ ಉತ್ಸವ

  • ಅಂಬೇಡ್ಕರ್ ಫೋಟೋ ಅಳವಡಿಕೆ –  ಶಾಸಕ ಅನ್ನದಾನಿ ಮೇಲೆ ಸ್ಪೀಕರ್ ಗರಂ

    ಅಂಬೇಡ್ಕರ್ ಫೋಟೋ ಅಳವಡಿಕೆ – ಶಾಸಕ ಅನ್ನದಾನಿ ಮೇಲೆ ಸ್ಪೀಕರ್ ಗರಂ

    ಬೆಳಗಾವಿ: ಸುವರ್ಣ ಸೌಧದ ಸದನದಲ್ಲಿ ಅಂಬೇಡ್ಕರ್ ಭಾವಚಿತ್ರ ಇನ್ನೂ ಅಳವಡಿಸದ ವಿಚಾರ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.

    ಬೆಳಗಾವಿ ವಿಧಾನಸಭೆಯ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಹಾಕಬೇಕು ಅಂತಾ ಹೇಳಿ ಎರಡು ವರ್ಷ ಆದ್ರೂ ಹಾಕಿಲ್ಲ ಎಂದು ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಎರಡು ಡೋಸ್ ಆಗಿದೆ, 2023ಕ್ಕೆ ಬೂಸ್ಟರ್ ಡೋಸ್ – ಜೆಡಿಎಸ್‌ಗೆ ತಿವಿದ ರಾಜೇಂದ್ರ

    ಈ ವೇಳೆ ಕುಳಿತುಕೊಳ್ಳುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನ್ನದಾನಿಗೆ ಸೂಚಿಸಿದರು. ಸ್ಪೀಕರ್ ಮಾತು ಪರಿಗಣಿಸದೇ ಅನ್ನದಾನಿ ಅವರು ತಮ್ಮ ಆಸನದಿಂದ ಹೊರಗೆ ಬಂದು ನಿಂತರು. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

    ಈ ವೇಳೆ ಮತ್ತೆ ಕುಳಿತುಕೊಳ್ಳುವಂತೆ ಶಾಸಕ‌ ಅನ್ನದಾನಿಗೆ ಸ್ಪೀಕರ್ ವಾರ್ನಿಂಗ್ ನೀಡಿ, ಸಂತೆಯಲ್ಲಿ ಮಾತಾಡಿದಂತೆ ಜೋರಾಗಿ ಒದರಿಕೊಂಡು ಮುಂದೆ ಬಂದರೆ ಅದು ಅಶಿಸ್ತಿನ ಪರಮಾವಧಿ ಎಂದೇ ಪರಿಗಣಿಸಬೇಕಾಗುತ್ತದೆ. ಡಾ. ಅನ್ನದಾನಿ ನೀವು ಗೌರವದಿಂದ ನಡೆದುಕೊಳ್ಳಿ ಎಂದು ಸ್ಪೀಕರ್ ಕಾಗೇರಿ ಹೇಳಿದರು.

    ಇದೇ ವೇಳೆ ಅಂಬೇಡ್ಕರ್ ಪೋಟೋ ಹಾಕುವುದಕ್ಕೆ ವಿವಾದವೇ ಆಗಬಾರದು ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

    ಅಂಬೇಡ್ಕರ್ ಫೋಟೋ ಹಾಕುವ ವಿಚಾರ ಕಲಾಪದಲ್ಲಿ ಚರ್ಚೆಯ ವಿಚಾರ ಅಲ್ಲ. ಅಂಬೇಡ್ಕರ್ ಫೋಟೋ ಹಾಕಿಯೇ ಹಾಕ್ತೀವಿ. ಅಂಬೇಡ್ಕರ್ ಫೋಟೋ ಒಳಗೊಂಡಂತೆ ಇನ್ನೂ ಯಾರದೆಲ್ಲ ಫೋಟೋ ಹಾಕಬೇಕು ಎಂದು ಪ್ರಮುಖ ನಾಯಕರ ಸಲಹೆ ಪಡೆದು ಹಾಕ್ತೀವಿ ಎಂದ ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದರು.

    ಸದನದಲ್ಲಿ ಯಾವುದೇ ವಿಚಾರ ಪ್ರಸ್ತಾಪ ಮಾಡುವುದಿದ್ದರೂ ಮೊದಲು ನನ್ನ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.

  • ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಕೇಳಿದ್ರೆ ರೋಮಾಂಚನವಾಗುತ್ತೆ: ಅನ್ನದಾನಿ

    ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಕೇಳಿದ್ರೆ ರೋಮಾಂಚನವಾಗುತ್ತೆ: ಅನ್ನದಾನಿ

    – ಮಾಜಿ ಸಿಎಂ ಹಾಡಿಹೊಗಳಿದ ಜೆಡಿಎಸ್ ಶಾಸಕ

    ಮಂಡ್ಯ: ಸಿದ್ದರಾಮಯ್ಯ ಹಿಂದುಳಿದವರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಿದ ಧೀಮಂತ ನಾಯಕರು. ಅವರ ಯೋಜನೆಗಳು ಇಂದಿಗೆ ನಮ್ಮ ಮನಸ್ಸಿನಲ್ಲಿ ಇದೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣ ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ ಎಂದು ಜೆಡಿಎಸ್ ಶಾಸಕ ಅನ್ನದಾನಿ ಅವರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಾಹಳ್ಳಿ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ನದಾನಿ, ವೇದಿಕೆಯ ಮೇಲೆ ಕೂತಿದ್ದ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು. ಸಿದ್ದರಾಮಯ್ಯ ಅವರು ನಮ್ಮ ನಾಯಕರು ಎಂದು ಪದೇ ಪದೇ ಭಾಷಣದ ಉದ್ದಕ್ಕೂ ಹೇಳಿದರು. ಅಲ್ಲದೆ ಮಾಜಿ ಸಿಎಂ ನಮ್ಮ ನಾಯಕರು, ನಾನು ಅವರ ಅಭಿಮಾನಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.

    ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಕಂಡ ಶೇಷ್ಠ ನಾಯಕ, ನಾನು ಅವರ ಅಭಿಮಾನಿ ಆಗಿದ್ದೇನೆ. ನಾನು ಮೊದಲು ಸಿದ್ದರಾಮಯ್ಯ ಅವರ ಗರಡಿಯಲ್ಲಿ ಬೆಳೆದವನು. ಮೊದಲು ಅವರು ಜೆಡಿಎಸ್‍ನಲ್ಲಿ ಇದ್ದಾಗ ನಾನು ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದೆ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು, ಕಾಂಗ್ರೆಸ್ಸಿಗೆ ಹೋದರು. ನಾನು ಕುಮಾರಸ್ವಾಮಿ ಹಾಗೂ ದೇವೇಗೌಡರ ಬಳಿ ಉಳಿದುಕೊಂಡು ಬಿಟ್ಟೆ. ಆದರು ಸಹ ಈಗಲೂ ನಾನು ಸಿದ್ದರಾಮಯ್ಯ ಅವರ ಜೊತೆ ಚೆನ್ನಾಗಿ ಇದ್ದೀನಿ ಎಂದರು.

    ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಒಂದು ಇತಿಹಾಸ ಇದ್ದ ಹಾಗೆ, ಇಂತಹ ಇತಿಹಾಸ ಇಲ್ಲಿಗೆ ಬಂದಿರೋದು ಒಂದು ಇತಿಹಾಸ ಆಗಲಿದೆ ಎಂದರು.

  • ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಸಹಮತ, ವಿಲೀನಕ್ಕೆ ವಿರೋಧವಿದೆ: ಶಾಸಕ ಅನ್ನದಾನಿ

    ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಸಹಮತ, ವಿಲೀನಕ್ಕೆ ವಿರೋಧವಿದೆ: ಶಾಸಕ ಅನ್ನದಾನಿ

    ಮಂಡ್ಯ: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಸಹಮತವಿದೆ, ಆದರೆ ವಿಲೀನಕ್ಕೆ ನನ್ನ ವಿರೋಧವಿದೆ ಎಂದು ಜೆಡಿಎಸ್ ಶಾಸಕ ಅನ್ನದಾನಿ ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಸ್ಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಜೆಡಿಎಸ್ ವಿಲೀನಕ್ಕೆ ನನ್ನ ವಿರೋಧ ಇದೆ. ಬಿಜೆಪಿ ಜಾತಿ ಆಧಾರದಲ್ಲಿ ಪಕ್ಷ ಕಟ್ಟಲು ಹೊರಟಿದೆ. ಬಿಜೆಪಿ ಸಿದ್ದಾಂತಕ್ಕೂ ನಮ್ಮ ಸಿದ್ದಾಂತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂದರು.

    ಕೆಲವು ರಾಜಕೀಯ ವಿಚಾರ ಬಂದಾಗ ಹೊಂದಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ. ಮೈತ್ರಿಗೆ ಸಹಮತ ಇದೆ. ಆದ್ರೆ ವೀಲನಕ್ಕೆ ನನ್ನ ವಿರೋಧವಿದೆ ಎಂದು ಹೇಳಿದರು. ಇದನ್ನೂ ಓದಿ: ಕೆಲ ವಿಷಯಗಳಲ್ಲಿ ದಳದ ಜೊತೆ ಹೊಂದಾಣಿಕೆ: ಗೋವಿಂದ ಕಾರಜೋಳ

    ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತೆ. ಈಗಿದ್ದ ಸನ್ನವೇಶ ರಾತ್ರಿ 10 ಗಂಟೆ ಆದ ಬಳಿಕ ಏನು ಬೇಕಾದರು ಆಗಬಹುದು. ರಾಜಕೀಯ ನಿಂತ ನೀರಲ್ಲ. ಬದಲಾವಣೆ ಸಹಜ ಎಂದು ತಿಳಿಸಿದರು.

  • ಸಿಎಂ ಆದೇಶದಂತೆ ನಾವು ರೆಸಾರ್ಟ್‌ನಲ್ಲಿ ಇರುತ್ತೇವೆ: ಶಾಸಕ ಅನ್ನದಾನಿ

    ಸಿಎಂ ಆದೇಶದಂತೆ ನಾವು ರೆಸಾರ್ಟ್‌ನಲ್ಲಿ ಇರುತ್ತೇವೆ: ಶಾಸಕ ಅನ್ನದಾನಿ

    – ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೋಬೇಡಿ ಎಂದಿದ್ದಾರೆ ಸಿಎಂ

    ಚಿಕ್ಕಬಳ್ಳಾಪುರ: ಸಿಎಂ ನೇತೃತ್ವದಲ್ಲಿ ನಾವು ರೆಸಾರ್ಟ್ ಗೆ ಬಂದಿದ್ದೇವೆ ಹಾಗೂ ಅವರ ಆದೇಶದಂತೆ ನಾವು ಇಲ್ಲಿಯೇ ಇರುತ್ತೇವೆ. ಆದರೆ ಎಷ್ಟು ದಿನ ಇರಬೇಕು ಎಂಬ ಮಾಹಿತಿ ನಮಗೆ ಇಲ್ಲ ಎಂದು ಮಳವಳ್ಳಿ ಶಾಸಕ ಡಾ.ಕೆ. ಅನ್ನದಾನಿ ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ಅನ್ನದಾನಿ, ಸಿಎಂ ನೇತೃತ್ವದಲ್ಲಿ ನಾವು ರೆಸಾರ್ಟ್ ಗೆ ಬಂದಿದ್ದು, ಅವರ ಆದೇಶದಂತೆ ನಾವು ಇಲ್ಲಿ ಇರುತ್ತೇವೆ. ಇನ್ನೂ ಎಷ್ಟು ದಿನ ಇರಬೇಕು ಎಂಬ ಮಾಹಿತಿ ಇಲ್ಲ. ಸಿಎಂ ಹೇಳಿಕೆಗೆ ನಾವು ಬದ್ಧ ಅವರು ಯಾವಾಗ ಹೊರಡಿ ಎಂದು ಹೇಳುತ್ತಾರೋ ಆಗ ನಾವೆಲ್ಲಾ ಹೊರಡುತ್ತೇವೆ ಎಂದು ಹೇಳಿದ್ದಾರೆ.

    ನಮ್ಮನ್ನ ಯಾವುದೇ ಪಕ್ಷದ ಶಾಸಕರು ಸಂಪರ್ಕಿಸಿಲ್ಲ. ಅಲ್ಲದೆ ನಮಗೆ ಯಾರ ಹೆದರಿಕೆಯೂ ಇಲ್ಲ. ನಮ್ಮ ನಾಯಕರ ಹೇಳಿಕೆಯಂತೆ ನಾವು ಇಲ್ಲಿ ಇದ್ದೀವಿ. ರೆಸಾರ್ಟ್ ರಾಜಕಾರಣದ ಈ ರೀತಿಯ ಪರಿಸ್ಥಿತಿ ಹೊಸದೇನಿಲ್ಲ. ಈ ಹಿಂದೆ ಸುಮಾರು ಬಾರಿ ರಾಜಕೀಯದ ಇತಿಹಾಸದಲ್ಲಿ ಈ ರೀತಿ ನಡೆದಿದೆ. ಮಾಧ್ಯಮದವರ ಬಳಿ ಯಾವುದೇ ಮಾಹಿತಿ ಹಂಚಿಕೋ ಬೇಡಿ ಎಂದು ಸಿಎಂ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಈಗಿನ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದೇವೆ. ಪರಿಸ್ಥಿತಿ ಈ ರೀತಿ ಇರುವುದರಿಂದ ಕೆಲವು ಸಂದರ್ಭದಲ್ಲಿ ಮೊಬೈಲ್‍ನಲ್ಲಿ ಮಾತಾಡುವುದರಿಂದ ಒಳ್ಳೆಯದು ಆಗುತ್ತೆ ಹಾಗೂ ಕೆಟ್ಟದೂ ಆಗುತ್ತೆ. ಮೊಬೈಲ್ ಸ್ವಿಚ್ಛ್ ಮಾಡಿರುವುದಕ್ಕೆ ಯಾರೂ ತಪ್ಪು ತಿಳಿದುಕೊಳ್ಳಬೇಡಿ. ನಮ್ಮ ಕ್ಷೇತ್ರದ ಮತದಾರರು ನಾನು ದೂರವಾಣಿ ಕರೆ ಸ್ವೀಕರಿಸಲಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ. ರಾಜಕಾರಣದ ಕೆಲವು ವ್ಯತ್ಯಾಸಗಳಿಂದ ಸಣ್ಣಪುಟ್ಟ ಸಮಸ್ಯೆಗಳು ಇರುವುದು ಸಹಜ. ಸರ್ಕಾರಕ್ಕೆ ಏನೂ ಆಗುವುದಿಲ್ಲ, ಎಲ್ಲ ನಿಭಾಯಿಸುತ್ತಿದ್ದಾರೆ ಎಂದರು.

    ನಮ್ಮ ತಾಲೂಕಿನಲ್ಲಿ ಸಮಸ್ಯೆಗಳು ಇದೆ. ಆದರೂ ನಾವು ಅಧಿಕಾರಿಗಳ ಸಂಪರ್ಕದಲ್ಲಿ ಇದ್ದೇವೆ. ರೆಸಾರ್ಟ್‍ನಲ್ಲಿಯೇ ಕುಳಿತು ನಾವು ತಾಲೂಕಿನ ಸಮಸ್ಯೆ ಬಗೆಹರಿಸುತ್ತಿದ್ದೇವೆ ಎಂದು ಜೆಡಿಎಸ್ ಶಾಸಕ. ಡಾ.ಕೆ ಅನ್ನದಾನಿ ಹೇಳಿದ್ದಾರೆ. ಈ ವೇಳೆ ಕಾರ್ಯಕರ್ತರು ಶಾಸಕರ ಸಹಿ ಪಡೆಯಲು ರೆಸಾರ್ಟ್‍ಗೆ ಬಂದಿದ್ದರು.

  • ಮಂಡ್ಯದಲ್ಲಿ ದೋಸ್ತಿಗಳ ನಡ್ವೆ ವಾರ್- ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಅನ್ನದಾನಿ

    ಮಂಡ್ಯದಲ್ಲಿ ದೋಸ್ತಿಗಳ ನಡ್ವೆ ವಾರ್- ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಅನ್ನದಾನಿ

    ಮಂಡ್ಯ: ಅಭಿವೃದ್ಧಿ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜಗಳ ಬೀದಿಗೆ ಬಂದಿದೆ. ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರನ್ನು ಹಾಲಿ ಶಾಸಕ ಅನ್ನದಾನಿ ಬಹಿರಂಗವಾಗಿಯೇ ಅವಾಚ್ಯವಾಗಿ ನಿಂದಿಸುತ್ತಾ ತೆಂಗಿನಕಾಯಿಂದ ಹಲ್ಲೆ ನಡೆಸಲು ಹೋದ ಘಟನೆ ನಡೆದಿದೆ.

    ಮಳವಳ್ಳಿ ತಾಲೂಕು ಮಾಗನೂರು ಬಳಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಇಂದು ಶಾಸಕ ಅನ್ನದಾನಿ ಭೂಮಿ ಪೂಜೆ ನೆರವೇರಿಸಲು ಆಗಮಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರು, ಸಿದ್ದರಾಮಯ್ಯ ಸಿಎಂ ಆಗಿ ನರೇಂದ್ರಸ್ವಾಮಿ ಶಾಸಕರಾಗಿದ್ದಾಗ ಭೂಮಿ ಪೂಜೆ ಮಾಡಿ, ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಂದು ಇದೇ ಸ್ಥಳದಲ್ಲಿ ಶಾಸಕ ಅನ್ನದಾನಿ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಲು ಬಂದಿದ್ದಾರೆ ಎಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.

    ಈ ವೇಳೆ ಹಾಲಿ ಶಾಸಕ ಅನ್ನದಾನಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ತಾಳ್ಮೆ ಕಳೆದುಕೊಂಡ ಶಾಸಕ ಅನ್ನದಾನಿ, ಕಾಂಗ್ರೆಸ್ ಕಾರ್ಯಕರ್ತರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸ್ತೀರೇನ್ರೋ. ಎಲ್ಲರನ್ನು ಜೈಲಿಗೆ ಕಳುಹಿಸುತ್ತೀನಿ ಎಂದು ಕೈಯಲ್ಲಿದ್ದ ತೆಂಗಿನಕಾಯಿಯಿಂದ ಹಲ್ಲೆ ನಡೆಸಲು ಮುಂದಾದರು.

    ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು. ಕಾರ್ಯಕ್ರಮದ ನಂತರ ಮಾತನಾಡಿದ ಶಾಸಕ ಅನ್ನದಾನಿ, ನಾನೇನು ಶಂಕುಸ್ಥಾಪನೆ ನೆರವೇರಿಸಲು ಇಲ್ಲಿಗೆ ಬರಲಿಲ್ಲ. ಇಂದಿನಿಂದ ಕೆಲಸ ಆರಂಭಿಸಲು ಶುಭವಾಗಲಿ ಎಂದು ಪೂಜೆ ಮಾಡಲು ಮಾತ್ರ ಬಂದಿದ್ದೆ. ಇದನ್ನೇ ತಪ್ಪಾಗಿ ತಿಳಿದು ಉದ್ದೇಶಪೂರ್ವಕವಾಗಿ ನರೇಂದ್ರಸ್ವಾಮಿ ಬೆಂಬಲಿಗರು ತೊಂದರೆ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

  • ಮಾಜಿ ಶಾಸಕ ನರೇಂದ್ರಸ್ವಾಮಿಗೆ ಶಾಸಕ ಅನ್ನದಾನಿ ಬಹಿರಂಗ ಸವಾಲು

    ಮಾಜಿ ಶಾಸಕ ನರೇಂದ್ರಸ್ವಾಮಿಗೆ ಶಾಸಕ ಅನ್ನದಾನಿ ಬಹಿರಂಗ ಸವಾಲು

    ಮಂಡ್ಯ: ಜಿಲ್ಲೆಯಲ್ಲಿ ದೋಸ್ತಿ ಕುಸ್ತಿ ಮತ್ತಷ್ಟು ಉಲ್ಬಣವಾಗಿದ್ದು, ಮೈತ್ರಿ ಧರ್ಮದ ಪಾಲನೆ ವಿಚಾರವಾಗಿ ಮಹದೇಶ್ವರ ಬೆಟ್ಟದಲ್ಲಿ ಪ್ರಮಾಣ ಮಾಡಲು ಬರುವಂತೆ ಶಾಸಕ ಅನ್ನದಾನಿ ಅವರು ಮಾಜಿ ಶಾಸಕ ನರೇಂದ್ರಸ್ವಾಮಿಗೆ ಸವಾಲು ಎಸೆದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಸ್ವಾಮಿ ಸುಮಲತಾ ಪರ ಪ್ರಚಾರ ಮಾಡದೆ ತಟಸ್ಥವಾಗಿದ್ದೆ ಎಂದು ಹೇಳುತ್ತಾರೆ. ಹಾಗೊಂದು ವೇಳೆ ಸುಮಲತಾ ಪರ ಚುನಾವಣಾ ಪ್ರಚಾರ ಮಾಡಿಯೇ ಇಲ್ಲ ಅನ್ನೋದಾದ್ರೆ ಮಲೈ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ. ನನ್ನ ಜೊತೆ ಬರಲು ಸಾಧ್ಯವಿಲ್ಲ ಅನ್ನೋದಾದ್ರೆ ಅವರೇ ಹೋಗಿ ಪ್ರಮಾಣ ಮಾಡಿ ಬರಲಿ. ಆ ಬಳಿಕ ನಾನು ಹೋಗಿ ಪ್ರಮಾಣ ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ.

    ಯಾವಾಗಲೂ ದೇವರ ಮೇಲಿನ ಭಕ್ತಿಯಿಂದ ಹಣೆ ಮೇಲೆ ಬೊಟ್ಟು ಇಡುತ್ತಾರೆ ಅದಕ್ಕಾದರೂ ಬೆಲೆ ಬರಲಿ. ಸುಮಲತಾ ಪರ ಪ್ರಚಾರ ಮಾಡಿಲ್ಲ ಎಂದರೆ ಗ್ರಾಮಪಂಚಾಯಿತಿ ಮಟ್ಟದ ಕಾರ್ಯಕರ್ತರ ಸಭೆ ಏಕೆ ಕರೆಯಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

    ನಾವು ಗುಲಾಮಗಿರಿ ರಾಜಕೀಯ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಯಾರು ಗುಲಾಮಗಿರಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಾಬೀತು ಪಡಿಸಲಿ. ರಾಜಕಾರಣಿಗಳೆಲ್ಲರೂ ಮತದಾರರ ಗುಲಾಮರು. ಇವರು ಯೋಜನೆ ಸರಿಯಾಗಿ ರೂಪಿಸದೇ ಅಧಿಕಾರಿಗಳು ಕೆಲಸ ನಿಲ್ಲಿಸಿದರೆ ನಾನೇ ನಿಲ್ಲಿಸಿದೆ ಅಂತಾರೆ. ಭೀಮಾನದಿ ಕಾಮಗಾರಿಯ ಯೋಜನೆ ಹೊನ್ನಗನಹಳ್ಳಿಯಿಂದ ಏಕೆ ತರಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.

    ಸಚಿವ ಡಿಕೆಶಿ ಅವರು ನೀರಾವರಿ ಯೋಜನೆ ರೂಪಿಸಿ ಮಳವಳ್ಳಿಯಿಂದ ನೀರು ತೆಗೆದುಕೊಂಡು ಹೋಗಿದ್ದಾರೆ. ಆ ಯೋಜನೆಯಲ್ಲೇ ನಮ್ಮ ಭಾಗದ ಹಳ್ಳಿಗೆ ನೀರು ತರಬಹುದಿತ್ತು. ಏಕೆ ಮಾಡಲಿಲ್ಲ ಎಂದು ಶಾಸಕರು ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ದರ್ಶನ್, ಯಶ್ ನೋಡೋಕೆ ಮುದ್ದು ಮುದ್ದಾಗಿದ್ದಾರೆ, ಅವರು ಸಿನಿಮಾ ಮಾಡ್ಕೊಂಡು ಇರಲಿ: ಅನ್ನದಾನಿ

    ದರ್ಶನ್, ಯಶ್ ನೋಡೋಕೆ ಮುದ್ದು ಮುದ್ದಾಗಿದ್ದಾರೆ, ಅವರು ಸಿನಿಮಾ ಮಾಡ್ಕೊಂಡು ಇರಲಿ: ಅನ್ನದಾನಿ

    ಬೆಂಗಳೂರು: ನಾವು ಬೇಜಾನ್ ಸ್ಟಾರ್ ಗಳನ್ನು ನೋಡಿದ್ದೇವೆ. ನಟ ದರ್ಶನ್ ಹಾಗೂ ಯಶ್ ನೋಡೋಕೆ ಮುದ್ದು ಮುದ್ದಾಗಿದ್ದಾರೆ. ಅವರು ಸಿನಿಮಾ ಮಾಡ್ಕೊಂಡು ಇರಲಿ ಎಂದು ಜೆಡಿಎಸ್ ಶಾಸಕ ಅನ್ನದಾನಿ ಹೇಳಿದ್ದಾರೆ.

    ಡಿ.ಕೆ ಶಿವಕುಮಾರ್ ಮನೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಸ್ಟಾರ್ ಗಳನ್ನು ನಾವು ಬಹಳ ನೋಡಿದ್ದೇವೆ. ರಾಜ್ ಕುಮಾರ್ ಗಿಂತಲೂ ದೊಡ್ಡ ನಟರು, ಸ್ಟಾರ್ ಯಾರಿದ್ದಾರೆ? ಅವರೇ ರಾಜಕೀಯಕ್ಕೆ ಬರಲಿಲ್ಲ. ಯಶ್, ದರ್ಶನ್ ಸಿನಿಮಾದಲ್ಲಿ ಒಳ್ಳೆ ಹೆಸರಿದೆ. ನೋಡೋಕು ಮುದ್ದು ಮುದ್ದಾಗಿದ್ದಾರೆ. ಆದರೆ ಜನರ, ರೈತರ ಕಷ್ಟ ಸುಖ ನೋಡೋರು ನಾವು. ಜನರ ಮಧ್ಯೆ ಇರೋದು ನಾವುಗಳೇ ಹೊರತು ಸಿನಿಮಾ ಸ್ಟಾರ್ ಗಳಲ್ಲ. ನಮಗೆ ದೇವೇಗೌಡರೇ ಸ್ಟಾರ್, ಕುಮಾರಸ್ವಾಮಿ, ಡಿಕೆ ಶಿವಕುಮಾರ್ ನಮಗೆ ಸ್ಟಾರ್ ಗಳು” ಎಂದು ಹೇಳಿ ಹೊಗಳಿದರು.

    ಬಳಿಕ ಮಾತನಾಡಿದ ಅವರು, ಜನರ ತಿಥಿ ಆದ್ರು, ಮದುವೆ ಆದ್ರೂ ನಾವೇ ಹೋಗೋದು. ಉಳಿದ ಸಿನಿಮಾ ಸ್ಟಾರ್ ಗಳಿಗೆ ಗ್ರೌಂಡ್ ರಿಯಾಲಿಟಿ ಏನು ಗೊತ್ತಿದೆ? ಸಿನಿಮಾ ಮಾಡಲಿ, ಬೇಡ ಅಂತಲ್ಲ. ಆದರೆ ಜನರ ಮಧ್ಯೆ ನಿಜಾವಾಗಿ ಇರೋದು ನಾವು. ಬಡವರ ಮಧ್ಯೆ ಕೆಲಸ ಮಾಡುತ್ತಿರುವುದು ನಾವು. ಸಿನಿಮಾ ಸ್ಟಾರ್ ಗಳೆಲ್ಲ ಯಾವಾಗ ಬಡವರ ಮಧ್ಯೆ ಇರೋದಕ್ಕೆ ಸಾಧ್ಯವಾಗಿದೆ. ಹೀಗಾಗಿ ಜನರು ನಮ್ಮ ಕೈ ಬಿಡಲ್ಲ ಎನ್ನುವ ವಿಶ್ವಾಸವಿದೆ. ಜನರ ಕಾಲಿಗೆ ಬಿದ್ದು ಮತ ಕೇಳ್ತೀವಿ ಎಂದು ಹೇಳಿದ್ದಾರೆ.

    ಕೆ.ಆರ್ ಪೇಟೆ ಶಾಸಕ ನಾರಾಯಣಸ್ವಾಮಿ ಅವರು ಯಶ್ ಮತ್ತು ದರ್ಶನ್ ಅವರಿಗೆ ಎಚ್ಚರಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ನೀವು ಮನೆಯಲ್ಲಿ ಇದ್ದರೆ ನಿಮಗೆ ಗೌರವ, ಇಲ್ಲದಿದ್ದರೆ ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ತಕ್ಕ ಪಾಠ ಕಲಿಸುತ್ತೇವೆ. ಸರ್ಕಾರ ನಮ್ಮದಿದೆ. ಸುಮ್ಮಿನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ. ಶೂಟಿಂಗ್ ಮಾಡ್ಕೊಂಡು ಗೌರವವಾಗಿ ಇರಿ. ರಾಜಕಾರಣದ ಬಗ್ಗೆ ಮಾತಾಡಲು ನಿಮಗೆ ಹಕ್ಕಿಲ್ಲ. ನೀವು ಭಾರತ ದೇಶವನ್ನೇ ನೋಡಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಹೇಳಿದ್ದರು.