Tag: Annadaneshwar Math

  • Gadaga| ಮಠದ 11 ಎಕ್ರೆಗೆ ಕನ್ನ – ಪ್ರಸಾದ ನಿಲಯ ಈಗ  ‘ವಕ್ಫ್’ ಆಸ್ತಿ

    Gadaga| ಮಠದ 11 ಎಕ್ರೆಗೆ ಕನ್ನ – ಪ್ರಸಾದ ನಿಲಯ ಈಗ ‘ವಕ್ಫ್’ ಆಸ್ತಿ

    ಗದಗ: ಜಿಲ್ಲೆಯ ಗಜೇಂದ್ರಗಡ (Gajendragad) ತಾಲೂಕಿನ ನರೇಗಲ್‌ನಲ್ಲಿರುವ ಹಾಲಕೇರಿ ಅನ್ನದಾನೇಶ್ವರ ಮಠ (Annadaneshwara Math) ಪ್ರಸಾದ ನಿಲಯ ವಕ್ಫ್ ಆಸ್ತಿ ಎಂದು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಪ್ರಸಾದ ನಿಲಯದ 11.19 ಎಕರೆ 2019ರಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿದೆ.

    ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಶ್ರೀ ಅಮ್ಮದಾನೇಶ್ವರ ವಿದ್ಯಾವರ್ಧಕ ಪ್ರಸಾದ ನಿಲಯ ಸಮಿತಿಯ ಉಚಿತ ಪ್ರಸಾದ ನಿಲಯಕ್ಕೆ ಸೇರಿದ 15.06 ಎಕರೆಯಲ್ಲಿ 11.19 ಎಕರೆ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. (ಕೆ.ವಿ.ಬಿ.ಎಂ) ಕೋಡಿಕೊಪ್ಪ ವೀರಪ್ಪಜ್ಜನವರ ಹಾಗೂ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯದ ಆಸ್ತಿ ಸರ್ವೆ ನಂಬರ್ 410/2ಬಿ ಈಗ ರಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನೋಂದಣಿಯಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಸುಲ್ತಾನಪುರ ಎಂದು ಒಂದು ಹಳ್ಳಿಯನ್ನೆ ನಿರ್ಮಾಣ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

    ಲಿಂಗೈಕ್ಯ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ. 11ರಲ್ಲಿ 2019-2020 ರಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ (Waqf Property) ಎಂದು ಸೇರ್ಪಡೆಯಾಗಿದೆ. ಉಚಿತ ಪ್ರಸಾದ ನಿಲಯಕ್ಕೆ ಸ್ಥಳೀಯ ರೈತರು, ದಾನಿಗಳ ಸಹಕಾರದಿಂದ ಸಾಕಷ್ಟು ಭೂಮಿಯನ್ನು ಶ್ರೀಮಠಕ್ಕೆ ನೀಡಲಾಗಿತ್ತು. ಆದರೆ, 2019-20 ರಲ್ಲಿ ಉಚಿತ ಪ್ರಸಾದ ನಿಲಯದ 15.06 ಎಕರೆ ಆಸ್ತಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಇದು ಭಕ್ತರು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹಿಂದಿನ ಪೀಠಾಧಿಪತಿಗಳಾಗಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದರು. ಆದರೆ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅದು ನೆನೆಗುದಿಗೆ ಬಿದ್ದಿದೆ. ಇದನ್ನೂ ಓದಿ: ವಕ್ಫ್‌ ಮಂಡಳಿಯ ಎಲ್ಲಾ ಬಗೆಯ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಿ: ಜೆಪಿಸಿಗೆ ಅಶೋಕ್‌ ಮನವಿ

  • ಅಭಿನವ ಶ್ರೀ ನಮಗೆ ಧೈರ್ಯ ತುಂಬಿ ಸನ್ಮಾರ್ಗದಲ್ಲಿ ಮುನ್ನಡೆಸುವ ಮಾರ್ಗದರ್ಶಕರಾಗಿದ್ದರು: ಸಿಸಿ ಪಾಟೀಲ್

    ಅಭಿನವ ಶ್ರೀ ನಮಗೆ ಧೈರ್ಯ ತುಂಬಿ ಸನ್ಮಾರ್ಗದಲ್ಲಿ ಮುನ್ನಡೆಸುವ ಮಾರ್ಗದರ್ಶಕರಾಗಿದ್ದರು: ಸಿಸಿ ಪಾಟೀಲ್

    ಬೆಂಗಳೂರು: ನಮ್ಮ ನಾಡಿನ ಧಾರ್ಮಿಕ, ಶಿಕ್ಷಣ, ಸಾಮಾಜಿಕ ಸೇವೆ, ಸಾಹಿತ್ಯ, ಸಂಸ್ಕøತಿ ಮತ್ತು ಕೃಷಿ ಕ್ಷೇತ್ರಗಳಿಗೆ ತಮ್ಮದೇ ಆದ ಅನುಪಮ ಕೊಡುಗೆ ನೀಡಿದ್ದ ಗದಗ ಜಿಲ್ಲೆಯ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಶ್ರೀ ಸಂಗನಬಸವ ಮಹಾಸ್ವಾಮಿಗಳು ಇಂದು ಲಿಂಗೈಕ್ಯರಾಗಿರುವುದು ನನಗೆ ಮತ್ತು ನನ್ನಂತಹ ಅಪಾರ ಭಕ್ತರಿಗೆ ತೀವ್ರ ದುಃಖ ಉಂಟು ಮಾಡಿದೆ. ಅಗಲಿದ ಈ ಮಹಾನ್ ಚೇತನಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದರು.

    ಇತ್ತೀಚೆಗಷ್ಟೇ ನಾನು ಹಾಲಕೆರೆ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿ ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡು ಕೃತಾರ್ಥನಾಗಿದ್ದೆ. ಅನೇಕ ಸಂಕಷ್ಟದ ಸಂದರ್ಭಗಳಲ್ಲಿ ಅವರು ನಮಗೆಲ್ಲಾ ಧೈರ್ಯ ತುಂಬಿ ಸನ್ಮಾರ್ಗದಲ್ಲಿ ಮುನ್ನಡೆಸುವ ಮಾರ್ಗದರ್ಶಕರಾಗಿದ್ದರು. ಈಗ ಅವರಿಲ್ಲದಿದ್ದರೂ ಅವರು ಹಾಕಿಕೊಟ್ಟ ಮೇಲ್ಪಂಕ್ತಿ, ಆದರ್ಶ, ಮೌಲ್ಯ, ಜೀವನ ಸಿದ್ಧಾಂತಗಳೇ ನಮ್ಮ ಬಾಳಿಗೆ ಬೆಳಕಾಗಬಲ್ಲವು ಎಂದು ನಾನು ನಂಬುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಲಿಂಗ ತಾರತಮ್ಯವಿಲ್ಲದೇ ಒಂದೇ ರೀತಿ ಸಮವಸ್ತ್ರ ನೀಡಿದ ಕೇರಳ ಶಾಲೆ

    ಶ್ರೀಗಳ ತತ್ವಾದರ್ಶಗಳನ್ನು ನಾವೆಲ್ಲ ನಮ್ಮ ನಡೆನುಡಿಗಳಲ್ಲಿ ಶ್ರದ್ಧೆಯಿಂದ ಪಾಲಿಸುವುದೇ ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಹಾಲಕೆರೆ, ಅನ್ನದಾನೇಶ್ವರ ಮಠ, ಕೊಟ್ಟೂರು ಮಠ, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಮುಂತಾದ ಅನೇಕ ಧಾರ್ಮಿಕ ಕೇಂದ್ರಗಳನ್ನು ಮತ್ತು ಇತರ ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳನ್ನು ಬೆಳೆಸಿದ, ನಮ್ಮ ನಡುವಿನ ನಡೆದಾಡುವ ದೇವರೆಂದೇ ಭಕ್ತರಿಂದ ಕರೆಸಿಕೊಳ್ಳುತ್ತಿದ್ದ ಶ್ರೀಗಳು, ಹಲವಾರು ಮಾದರಿ ಕೃಷಿ ಜಾಗೃತಿ ಚಟುವಟಿಕೆಗಳನ್ನು ನಡೆಸಿ ರೈತಬಂಧು ಎಂದೇ ಖ್ಯಾತರಾಗಿದ್ದರು. ತಮ್ಮ ಜೀವನದುದ್ದಕ್ಕೂ ಬಸವ ತತ್ವವನ್ನು ಆರಾಧಿಸಿ, ಅನುಷ್ಠಾನಗೊಳಿಸುವ ಮೂಲಕ ಅವರು ಅಮರರಾಗಿದ್ದಾರೆ. ಇದನ್ನೂ ಓದಿ:  ಮದುವೆ ಫೋಟೋ ಜೊತೆಗೆ ಭಾವನಾತ್ಮಕ ಸಾಲು ಬರೆದು ಶೇರ್ ಮಾಡಿ ಶಿಲ್ಪಾ ಶೆಟ್ಟಿ