Tag: annabond film

  • ವೈಟ್ ಡ್ರೆಸ್‌ನಲ್ಲಿ ಮಿಂಚಿದ ಬಹುಭಾಷಾ ನಟಿ ಪ್ರಿಯಾಮಣಿ

    ವೈಟ್ ಡ್ರೆಸ್‌ನಲ್ಲಿ ಮಿಂಚಿದ ಬಹುಭಾಷಾ ನಟಿ ಪ್ರಿಯಾಮಣಿ

    ಹುಭಾಷಾ ನಟಿ ಪ್ರಿಯಾಮಣಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪ್ರಿಯಾಮಣಿ ವೈಟ್ ಡ್ರೆಸ್‌ನಲ್ಲಿ ಹಾಟ್ ಲುಕ್‌ನಿಂದ ಗಂಡ್ ಹೈಕ್ಳ ನಿದ್ದೆಗೆಡಿಸಿದ್ದಾರೆ. ನಯ ಅವತಾರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾರೆ.

    ಪುನೀತ್ ನಟನೆಯ `ರಾಮ್’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ, ನಂತರ ಸಾಲು ಸಾಲು ಕನ್ನಡ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಟಾಲಿವುಡ್ ಮತ್ತು ಬಾಲಿವುಡ್‌ನಲ್ಲೂ ಬಹುಬೇಡಿಕೆಯ ನಟಿಯಾಗಿ ಮಿಂಚ್ತಿದ್ದಾರೆ. ಈಗ ಸಿನಿಮಾಗಳ ಮಧ್ಯೆ ಕೊಂಚ ಫೋಟೋಶೂಟ್‌ಗೆ ಟೈಮ್ ಕೊಟ್ಟು, ಕ್ಯಾಮೆರಾ ಎದುರು ಮಿರ ಮಿರ ಅಂತಾ ಮಿಂಚಿದ್ದಾರೆ. ಇದನ್ನೂ ಓದಿ:‘ಆಸ್ಕರ್’ ಕಮಿಟಿಯಲ್ಲಿ ಭಾರತದ ಮೂವರಿಗೆ ಸ್ಥಾನ : ತಮಿಳು ನಟ ಸೂರ್ಯಗೂ ಚಾನ್ಸ್

     

    View this post on Instagram

     

    A post shared by Priya Mani Raj (@pillumani)

    ಕಣ್ಣಿಗೆ ಚೆಂದದ ಸ್ಟೈಲೀಶ್‌ ಗ್ಲ್ಯಾಸ್ ಹಾಕಿ, ವೈಟ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ನಯಾ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ಕನ್ನಡ, ತಮಿಳು, ತೆಲುಗು ಸೇರಿದಂತೆ ಸಾಲು ಸಾಲು ಚಿತ್ರಗಳು ಪ್ರಿಯಾಮಣಿ ಕೈಯಲ್ಲಿದೆ.

    Live Tv

  • ಮತ್ತೆ ಚಿತ್ರರಂಗಕ್ಕೆ ಪಂಚರಂಗಿ ಬೆಡಗಿ ಕಂಬ್ಯಾಕ್

    ಮತ್ತೆ ಚಿತ್ರರಂಗಕ್ಕೆ ಪಂಚರಂಗಿ ಬೆಡಗಿ ಕಂಬ್ಯಾಕ್

    ಸ್ಯಾಂಡಲ್‌ವುಡ್ ಬ್ಯೂಟಿ ನಿಧಿ ಸುಬ್ಬಯ್ಯ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅದಕ್ಕಾಗಿಯೇ ಚೆಂದದ ಫೋಟೋಶೂಟ್ ಮಾಡಿಸಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸದ್ಯ ಈ ಫೋಟೋಶೂಟ್ ಬಾರೀ ವೈರಲ್ ಆಗುತ್ತಿದೆ.

    `ಅಭಿಮಾನಿ’ ಚಿತ್ರದ ಮೂಲಕ ಚಂದನವನಕ್ಕೆ ಲಗ್ಗೆಯಿಟ್ಟ ಸುಂದರಿ ನಿಧಿ ಸುಬ್ಬಯ್ಯ ನಂತರ ದಿಗಂತ್ ಜತೆ `ಪಂಚರಂಗಿ’, ಪುನೀತ್ ರಾಜ್‌ಕುಮಾರ್ ಜತೆ `ಅಣ್ಣಾಬಾಂಡ್’ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ್ರು. ಕನ್ನಡದ ಜತೆ ಬಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದಾರೆ. ಬಿಗ್ ಬಾಸ್ 8ರ ಸೀಸನ್‌ನಲ್ಲಿ ನಿಧಿ ಸ್ವರ್ಧಿಯಾಗಿ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದ್ರು. ಇದೀಗ ಹೊಸ ಅವತಾರದಲ್ಲಿ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

     

    View this post on Instagram

     

    A post shared by Nidhi Subbaiah (@nidhisubbaiah)

    ʻಪಂಚರಂಗಿʼ ನಟಿ ಮತ್ತೆ ಸಿನಿಮಾಗಳತ್ತ ಬರಲು ಸಣ್ಣಗಾಗಿ ಭರ್ಜರಿ ಫೋಟೋಶೂಟ್ ಮಾಡಿಸಿದ್ದಾರೆ. ಬರೋಬ್ಬರಿ ೧೩ ಕೆಜಿ ಇಳಿಸಿಕೊಂಡಿರುವ ನಿಧಿ ವೆಸ್ಟರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ನಟಿಯ ಹೊಸ ಲುಕ್ಕಿಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಈ ಹಿಂದಿನ ಪಂಚರಂಗಿ ನಿಧಿಯಂತೆನೇ ಸಣ್ಣಗಾಗಿ ಸಖತ್ ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತು ಸಿನಿಮಾ: ಸಂದೀಪ್ ತಂದೆಯ ಪಾತ್ರದಲ್ಲಿ ಪ್ರಕಾಶ್ ರೈ

     

    View this post on Instagram

     

    A post shared by Nidhi Subbaiah (@nidhisubbaiah)

    ಮಾಡೆಲ್ ಮತ್ತು ನಟಿಯಾಗಿ ಈಗಾಗಲೇ ಸೈ ಎನಿಸಿಕೊಂಡಿರುವ ನಿಧಿ ಸುಬ್ಬಯ್ಯ ಪವರ್‌ಫುಲ್ ಕಥೆಯ ಜತೆ ಬರಲು ನಿರ್ಧರಿಸಿದ್ದಾರಂತೆ. ಒಂದೊಳ್ಳೆ ಕತೆ ಮತ್ತು ಪಾತ್ರ ಸಿಕ್ಕರೆ ನಟಿಸೋದು ನಿಜ ಅಂತಿದ್ದಾರೆ. ಹೊಸ ಪಾತ್ರದ ಹುಡುಕಾಟದಲ್ಲಿರೋ ನಿಧಿ ಕಂಬ್ಯಾಕ್ ಕುರಿತು ಫ್ಯಾನ್ಸ್ ಖುಷಿಯಾಗಿದ್ದಾರೆ.