Tag: AnnaBhagya Scheme

  • ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ಜಾರಿ – ಸಚಿವ ಮುನಿಯಪ್ಪ

    ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ಜಾರಿ – ಸಚಿವ ಮುನಿಯಪ್ಪ

    ಬೆಂಗಳೂರು: ಅನ್ನಭಾಗ್ಯ ಯೋಜನೆ (Annabhagya Scheme) ನಾಳೆಯಿಂದಲೇ ಜಾರಿಯಾಗಲಿದೆ. 5 ಅಕ್ಕಿ ನೀಡಲಾಗುವುದು, ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಜನರ ಬ್ಯಾಂಕ್‌ ಖಾತೆಗೆ ಹಾಕಲು ಹಣ ಕೂಡ ರೆಡಿ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ (KH Muniappa) ಹೇಳಿದ್ದಾರೆ.

    ಬ್ಯಾಂಕ್ ಖಾತೆ ಮಾಡಿಸಿಕೊಳ್ಳಿ:
    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆಯಿಂದಲೇ ಜನರ ಬ್ಯಾಂಕ್‌ ಖಾತೆಗೆ ಹಾಕಲು ಹಣ ರೆಡಿಯಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂ.ನಂತೆ ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿಯ ಹಣ ಸಿಗುತ್ತೆ. ಒಂದು ಮನೆಯಲ್ಲಿ 5 ಸದಸ್ಯರು ಇದ್ದರೆ, ಪ್ರತಿ ಕೆಜಿಗೆ 34 ರೂ.ನಂತೆ 25 ಕೆಜಿಗೆ 850 ರೂ. ಸಿಗುತ್ತದೆ. ಅಕ್ಕಿ ಕೊಡುವವರೆಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಮುಂದೆ ಅಕ್ಕಿ ಸಿಕ್ಕ ಕೂಡಲೇ ಕೊಡುವ ವ್ಯವಸ್ಥೆ ಮಾಡುತ್ತೇವೆ. ರೇಷನ್ ಕಾರ್ಡ್ ಪ್ರಕಾರ ಯಾರು ಮುಖ್ಯಸ್ಥರಿದ್ದಾರೋ ಅವರ ಅಕೌಂಟ್‌ಗೆ ಹಣ ಹಾಕುತ್ತೇವೆ. ಬಹುತೇಕ ಮಂದಿ ಬ್ಯಾಂಕ್ ಖಾತೆ (BankAccount) ಹೊಂದಿದ್ದಾರೆ. ಇಲ್ಲದವರು ತಕ್ಷಣ ಬ್ಯಾಂಕ್ ಖಾತೆ ಮಾಡಿಸಿಕೊಂಡರೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ರಾಗಿ/ಜೋಳ ಧಾನ್ಯ ಕೊಡುತ್ತೇವೆ:
    ಮುಂದುವರಿದು ಮಾತನಾಡಿ, ಈಗಾಗಲೇ ಸಿಎಂ ಕೂಡ ಅಕ್ಕಿ ಜೊತೆಗೆ ಧಾನ್ಯ ಕೊಡುತ್ತೇವೆ ಎಂದು ಹೇಳಿದ್ದಾರೆ. ದಕ್ಷಿಣ ಭಾಗದ ಜನರಿಗೆ ರಾಗಿ, ಉತ್ತರ ಕರ್ನಾಟಕ ಭಾಗದ ಜನರಿಗೆ ಜೋಳ ಕೊಡುತ್ತೇವೆ. ರಾಗಿ ದಾಸ್ತಾನಾಗಿದ್ದು, ಜೋಳ ಸಂಗ್ರಹಿಸಲಾಗುತ್ತಿದೆ. ದಾಸ್ತಾನು ಆದ ಕೂಡಲೇ ಧಾನ್ಯಗಳ ಹಂಚಿಕೆ ಮಾಡುತ್ತೇವೆ. ಹಣ ಸಿದ್ಧತೆ ಮಾಡಿಕೊಂಡಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತೆ. ನಾಳೆಯಿಂದಲೇ ಯೋಜನೆ ಜಾರಿಗೆ ಬರುತ್ತೆ. ಅನ್ನಭಾಗ್ಯ ಯೋಜನೆಗೆ ಸಮಾವೇಶದ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.

    ಕೇಂದ್ರ ಅಕ್ಕಿ ಕೊಟ್ರೆ ಹಂಚುತ್ತೇವೆ:
    ಎಂಎಸ್‌ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ, ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. 8 ಕೆಜಿ ಅಕ್ಕಿ ಕೊಡುತ್ತೇವೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಈಗ ಅಕ್ಕಿ ಬದಲು ಹಣ ವರ್ಗಾವಣೆ ಮಾಡುತ್ತೇವೆ. ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ರೆ, ಅಕ್ಕಿಯನ್ನೇ ಹಂಚಿಕೆ ಮಾಡುತ್ತೇವೆ. ಇಲ್ಲವೇ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಎದುರಿಸುವಷ್ಟು ಶಕ್ತವಾಗಿದೆ: ಸಿದ್ದರಾಮಯ್ಯ

    ರಾಜ್ಯ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಎದುರಿಸುವಷ್ಟು ಶಕ್ತವಾಗಿದೆ: ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯ ಸರ್ಕಾರ (Government of Karnataka) ಎಲ್ಲಾ ಸಮಸ್ಯೆಗಳನ್ನು ಎದುರಿಸುವಷ್ಟು ಶಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಮಳೆ ಶುರುವಾಗಿದ್ದು, ಮಳೆ (Rain) ಇನ್ನಷ್ಟು ವ್ಯಾಪಕವಾಗಿ ಆಗಬೇಕಿದೆ. ಈಗಾಗಲೇ ಕೆಲವೆಡೆ ಬಿತ್ತನೆ ಪ್ರಾರಂಭವಾಗಿದ್ದು, ಮಳೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕೆಲವೆಡೆ ಕುಡಿಯುವ ನೀರಿಗೆ ಸಮಸ್ಯೆಯುಂಟಾಗಿದ್ದು, ಈಗಾಗಲೇ 2 ಬಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಬಿತ್ತನೆಗೆ ಸಿದ್ಧ:
    ಮಳೆ ಯಾವಾಗ ಬಂದರೂ ಬಿತ್ತನೆ ಮಾಡಲು ತಯಾರಾಗಿದ್ದೇವೆ. ಕೃಷಿ ಇಲಾಖೆ ಬೀಜ, ಗೊಬ್ಬರ ಹಾಗೂ ಔಷಧಿಗಳನ್ನು ಸಂಗ್ರಹಿಸಿ ಸರ್ವಸನ್ನದ್ಧವಾಗಿದೆ ಎಂದು ಹೇಳಿದರು.

    ಬಜೆಟ್ ನಂತರ ಪರಿಶೀಲನೆ:
    ಸಣ್ಣ ಕೈಗಾರಿಕೆಗಳು (Small Industries) ಹಾಗೂ ಕಾಸಿಯಾ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ತಮ್ಮ ಸಮಸ್ಯೆಗಳನ್ನ ತಿಳಿಸಿದ್ದಾರೆ. ಬಜೆಟ್ ಮಂಡನೆಯ ನಂತರ ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಹಸಿದವರ ಕೂಗಿಗೆ ಸಿದ್ದರಾಮಯ್ಯರ ಕಿವಿ ಯಾವಾಗಲೂ ತೆರೆದಿರುತ್ತದೆ: ನಾಡೋಜ ಹಂಪನಾ

    ಕೈಗಾರಿಕೆಗಳಿಗೆ 9 ತಿಂಗಳ ವಿದ್ಯುತ್ ತೆರಿಗೆ ವಿಧಿಸಲಾಗಿದೆ. ಇದರಿಂದ ತಮಗೆ ಹೊರೆಯಾಗಿದೆ ಎಂದು ಕೈಗಾರಿಕೋದ್ಯಮಿಗಳು ತಿಳಿಸಿದ್ದಾರೆ. ದರ ಪರಿಷ್ಕರಣೆ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದಲ್ಲ, ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ್ದು. ದರ ಪರಿಷ್ಕರಣೆಯನ್ನ ಪ್ರತಿ ವರ್ಷ ಕೆಇಆರ್‌ಸಿ ಮಾಡುತ್ತದೆ. ದರ ಏರಿಕೆಗೂ ನಮ್ಮ ಸರ್ಕಾರಕ್ಕೂ ಸಂಬಂಧವಿಲ್ಲ. ನಾವು ಕೂಡ ಅವರಿಗೆ ಎಷ್ಟು ಮಾಡಬೇಕೆಂದು ಮನವಿ ಸಲ್ಲಿಸಿರುತ್ತೇವೆ. ಅದೊಂದು ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಹೇಳಿದರು.

    ಬಡವರ ಕಾರ್ಯಕ್ರಮಕ್ಕೆ ಕೇಂದ್ರದಿಂದ ತೊಂದರೆ:
    ಬಡವರ ಕಾರ್ಯಕ್ರಮಗಳಿಗೆ ತೊಂದರೆ ಕೊಡಬೇಕೆಂದು ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿದೆ. ಅವರ ಬಳಿ ಲಕ್ಷ ಟನ್‌ಗಟ್ಟಲೆ ಅಕ್ಕಿ ಇದೆ. ಅದನ್ನ ಖಾಸಗಿಯವರಿಗೆ ಹರಾಜು ಮಾಡ್ತಿದ್ದಾರೆ ಹೊರತು ರಾಜ್ಯಗಳಿಗೆ ಕೊಡುತ್ತಿಲ್ಲ. ಪ್ರತಿ ಕೆಜಿ ಅಕ್ಕಿಗೆ 36.70 ರೂ. ಕೊಡಲು ಒಪ್ಪಿದರೂ ಅಕ್ಕಿ ಕೊಡು‌ತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಕ್ಕಿ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡೋದು ಬೇಡ – ಅಮಿತ್ ಶಾಗೆ ಸಿದ್ದರಾಮಯ್ಯ ಮನವಿ

    ಅಕ್ಕಿ ಖರೀದಿಗೆ ಸರ್ಕಾರಿ ಏಜೆನ್ಸಿಗಳೊಂದಿಗೆ ಮಾತುಕತೆ
    5 ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಒಂದು ಯೋಜನೆಗೆ ಚಾಲನೆ ನೀಡಲಾಗಿದೆ. ಜುಲೈ 1ರಿಂದ ಉಚಿತ ವಿದ್ಯುತ್ ಯೋಜನೆ ಜಾರಿಗೆ ಬರಲಿದೆ. ಅಕ್ಕಿಯನ್ನೂ ನೀಡಬೇಕೆಂಬ ಉದ್ದೇಶವಿದ್ದರೂ ಅಕ್ಕಿ ದೊರೆಯುತ್ತಿಲ್ಲ. ದೊರೆತರೂ ಹೆಚ್ಚಿನ ದರ ಕೇಳುತ್ತಾರೆ. 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಎಲ್ಲಿಯೂ ಸಿಗುತ್ತಿಲ್ಲ. ಎಲ್ಲ ರಾಜ್ಯದವರಿಂದಲೂ ಪೂರ್ಣಪ್ರಮಾಣದ ಅಕ್ಕಿ ದೊರೆಯುತ್ತಿಲ್ಲವಾದ್ದರಿಂದ ಬೇರೆ ಸರ್ಕಾರಿ ಏಜೆನ್ಸಿಗಳಿಂದ ಎನ್‌ಸಿಸಿಎಫ್‌ ನಿಂದ ಕೇಂದ್ರೀಯ ಭಂಡಾರ್, ನ್ಯಾಫೆಡ್ ಸಂಸ್ಥೆಗಳಿಂದ ದರಪಟ್ಟಿ ಕರೆಯಲಾಗಿದ್ದು, ಮಾತುಕತೆ ನಡೆದಿದೆ. ಈ ಬಗ್ಗೆ ಮಾತುಕತೆ ನಡೆಸಿ ಎಷ್ಟು ಅಕ್ಕಿ? ದರ ಎಷ್ಟು? ಎನ್ನುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಪಡೆಯಲು ಟೆಂಡರ್ ಕರೆಯಬೇಕು. ಜೋಳ, ರಾಗಿ ವಿತರಣೆ 6 ತಿಂಗಳಿಗಾಗುವಷ್ಟಿದೆ. 2 ಕೆಜಿಯಂತೆ ನೀಡಬಹುದು. ಇನ್ನೂ 3 ಕೆಜಿ ಅಕ್ಕಿ ನೀಡಬೇಕಿದೆ. ಇಡೀ ವರ್ಷ ನೀಡುವಷ್ಟು ರಾಗಿ, ಜೋಳವಿಲ್ಲ ಎಂದು ವಿವರಿಸಿದರು.

  • ಅಕ್ಕಿಯಲ್ಲೂ ಕಮಿಷನ್ ಹೊಡೆಯೋ ಹುನ್ನಾರ – ವಿಜಯೇಂದ್ರ ಆರೋಪ

    ಅಕ್ಕಿಯಲ್ಲೂ ಕಮಿಷನ್ ಹೊಡೆಯೋ ಹುನ್ನಾರ – ವಿಜಯೇಂದ್ರ ಆರೋಪ

    – ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುತ್ತೆ ಎಂದ ಶಾಸಕ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಛತ್ತಿಸ್‌ಗಢ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದೆ. ಈ ಮೂಲಕ ಅಕ್ಕಿ ಖರೀದಿಯಲ್ಲೂ ಕಮಿಷನ್ ಹೊಡೆಯುವ ಹುನ್ನಾರ ನಡೆಸಿದೆ ಎಂದು ಶಾಸಕ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

    ಬಿಜೆಪಿ ಪ್ರಮುಖ ನಾಯಕರಾದ ಆರ್. ಅಶೋಕ್, ವಿಜಯೇಂದ್ರ, ಅಶ್ವಥ್ ನಾರಾಯಣ್ ಅವರಿಂದು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಿವಕುಮಾರ್ ಅಣ್ಣ.. ಭರವಸೆ ಕೊಟ್ಟಿರೋದು ನೀವು, ಮೋದಿ ಅಲ್ಲ: ಅಶೋಕ್ ಕಿಡಿ

    ಈ ವೇಳೆ ಶಾಸಕ ವಿಜಯೇಂದ್ರ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ ಸರ್ಕಾರ (Union Government) 5 ಕೆಜಿ ಕೊಡ್ತಿದೆ. ಉಳಿದ 5 ಕೆಜಿ ಅಕ್ಕಿಯನ್ನ ಬೇರೆ ಕಡೆ ಖರೀದಿ ಮಾಡಬಹುದು. ಛತ್ತೀಸ್‌ಗಢ, ಹರಿಯಾಣ, ತೆಲಂಗಾಣದಲ್ಲಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ. ಇದರಲ್ಲಿ ಕಮೀಷನ್ ಹೊಡೆಯುವ ಹುನ್ನಾರ ಇದೆ. ನಮ್ಮ ರಾಜ್ಯದ ರೈತರಿಂದ ಅಕ್ಕಿ ಖರೀದಿ ಮಾಡಿದ್ರೆ ರೈತರಿಗೂ ಅನುಕೂಲವಾಗುವುದಿಲ್ಲವೇ? ಕಮಿಷನ್ ಹೊಡೆಯೋ ಉದ್ದೇಶವಿರೋಧಕ್ಕೆ ಬೇರೆ ರಾಜ್ಯದಿಂದ ಖರೀದಿ ಮಾಡೋಕೆ ಮುಂದಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಕಾಂಗ್ರೆಸ್ ಧೋರಣೆ ನೋಡಿದ್ರೆ ನಮಗೆ ಬಹುಮತ ಬಂದಿದೆ, ನಾವು ಖುಷಿ ಬಂದ ಹಾಗೆ ಆಡಳಿತ ಮಾಡ್ತೀವಿ. ಆನೆ ನಡೆದಿದ್ದೇ ದಾರಿ ಅಂತಾ ನಡೆಯುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ರು. ವಾಸ್ತವಿಕತೆ ಈಗ ಅವರಿಗೆ ಅರ್ಥ ಆಗ್ತಿದೆ. ಬಹುಶಃ ಗ್ಯಾರಂಟಿ ಕಾರ್ಡ್ ಕೊಡುವಾಗ ಕಾಂಗ್ರೆಸ್ ಬಹುಮತ ಪಡೆಯುತ್ತೇ ಅಂದುಕೊಂಡಿರಲಿಲ್ಲ. ಅದಕ್ಕಾಗಿ ಮನಸೋ ಇಚ್ಚೆ ಗ್ಯಾರಂಟಿ ಘೋಷಣೆ ಮಾಡಿದ್ರು. ಈಗ ಪೀಕಲಾಟ ಶುರುವಾಗಿದ್ದು, ಗ್ಯಾರಂಟಿ ಜಾರಿ ಮಾಡೋದು ಅಸಾಧ್ಯ ಅನ್ನೋದು ಸಿಎಂಗೆ ಮನವರಿಕೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಳಸು ಅಂದ್ರೆ ಬೇಸರವಿಲ್ಲ, ಚೈಲ್ಡ್ ಆಗಿಯೇ ಪ್ರಶ್ನೆ ಕೇಳ್ತೀನಿ – ಪ್ರತಾಪ್ ಸಿಂಹ

    ಕಾಂಗ್ರೆಸ್ ಸರ್ಕಾರ ಗ್ಯಾರಂಟಿ (Congress Guarantee) ಜಾರಿ ಮಾಡೋದಕ್ಕೆ ಆಗ್ತಿಲ್ಲ. ಅದಕ್ಕಾಗಿ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನ ರದ್ದು ಮಾಡಿ, ಜನರ ಗಮನ ಬೇರೆಡೆಗೆ ಸೆಳೆಯಲು ಮುಂದಾಗಿದ್ದಾರೆ. ಕುಣಿಯೋದಕ್ಕೆ ಬಾರದವರು ನೆಲ ಡೊಂಕು ಅಂದ ಹಾಗೆ ಕಾಂಗ್ರೆಸ್ ವರ್ತನೆ ಇದೆ ಲೇವಡಿ ಮಾಡಿದ್ದಾರೆ.

    ಬಿಎಸ್‌ವೈ ಗುಡುಗಿದ್ರೆ, ವಿಧಾನಸೌಧ ನಡುಗುತ್ತೆ:
    ಕಾಂಗ್ರೆಸ್‌ನವರು ಬಹುಮತ ಇದೆ ಅಂತಾ ಏನು ಬೇಕಾದ್ರು ಮಾಡಬಹುದು ಅಂದುಕೊಳ್ಳಬೇಡಿ. ಯಡಿಯೂರಪ್ಪ ಹೋರಾಟ ಮಾಡಿದ ಪಕ್ಷ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಅಂತಾ ಹೋರಾಟ ಮಾಡಿದ್ರು. ನಿಮಗೆ ಗ್ಯಾರಂಟಿ ಕೊಡೋದಕ್ಕೆ ಆಗ್ಲಿಲ್ಲ ಅಂದ್ರೆ ಜನರ ಮುಂದೆ ಕ್ಷಮೆ ಕೇಳಿ, ಅದು ಬಿಟ್ಟು ಬಿಜೆಪಿ, ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ.

    ಮೊದಲು ಹೇಳಿದಂತೆ ಯಾವುದೇ ಷರತ್ತುಗಳಿಲ್ಲದೇ ಗ್ಯಾರಂಟಿಗಳನ್ನ ಕಾಂಗ್ರೆಸ್ ಜಾರಿಗೊಳಿಸಬೇಕು. ಇಲ್ಲದಿದ್ದರೆ, ನಮ್ಮ ಪಕ್ಷದಲ್ಲೂ ಹಾಲಿ 66 ಶಾಸಕರು ಇದ್ದೇವೆ, ದೊಡ್ಡ ಹೋರಾಟ ಮಾಡ್ತೀವಿ. ಜೂನ್ 19ರಂದೇ ಸಭೆ ಮಾಡಿ ಹೋರಾಟದ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರ ಆರೋಪ:
    * ಟಿಪ್ಪು ಯುಗ ಸ್ಥಾಪನೆ ಮಾಡೋ ಕೆಲಸ ಕಾಂಗ್ರೆಸ್ ಮತ್ತೆ ಶುರು ಮಾಡಿದೆ.
    * ಮತಾಂತರ ರಾಯಭಾರಿ ಆಗೋಕೆ ಕಾಂಗ್ರೆಸ್ ಹೊರಟಿದೆ
    * ಮತಾಂತರ ಬ್ರ‍್ಯಾಂಡ್ ಅಂಬಾಸಿಡರ್ ಆಗೋಕೆ ಕಾಂಗ್ರೆಸ್ ಮುಂದಾಗಿದೆ.
    * 35 ಲಕ್ಷಕ್ಕೂ ಹೆಚ್ಚು ಹಿಂದೂಗಳೂ ಆಮಿಷಕ್ಕೆ ಮತಾಂತರ ಆಗಿರೋ ಮಾಹಿತಿ ಇದೆ.
    * ಯಾರಿಗಾಗಿ ಮತಾಂತರ ಕಾಯ್ದೆ ತರುತ್ತಿದ್ದಾರೆ? ಅಂಬೇಡ್ಕರ್, ಗಾಂಧಿಯವರು ಮತಾಂತರಕ್ಕೆ ವಿರೋಧ ಮಾಡಿದ್ರು