ನ್ಯಾಯಬೆಲೆ ಅಂಗಡಿಗೆ ಪಡಿತರ ಬರುವುದಕ್ಕೂ ಮೊದಲೇ ಡೀಲರ್ ಇಬ್ರಾಹಿಂ ಅರಣ್ಯ ಪ್ರದೇಶದಲ್ಲೇ ಪಡಿತರನ್ನು ಮಾರಾಟ ಮಾಡುತ್ತಿದ್ದಾನೆ. ಅಕ್ರಮವಾಗಿ ಪಡಿತರ ಸಂಗ್ರಹಿಸಿ ಕಾಳಸಂತೆ ಪಾಲಾಗುತ್ತಿದ ಲಾರಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದೆ. ಲಾರಿಯನ್ನು ಬೆನ್ನಟ್ಟಿ ಗ್ರಾಮಸ್ಥರು ಶಾಕ್ ಮುಟ್ಟಿಸಿದ್ದಾರೆ.
ಜಿಲ್ಲೆಯ ಮಿರ್ಜಾಪುರ್ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕೇಳಿದಾಗ ಏನೇನು ಕಾರಣಗಳನ್ನು ಹೇಳಿ ಅಕ್ಕಿಯನ್ನು ಕೊಡದೇ ಗ್ರಾಮಸ್ಥರಿಗೆ ದೋಖಾ ಮಾಡುತ್ತಿದ್ದ. ಲಕ್ಷಾಂತರ ಮೌಲ್ಯದ ಪಡಿತರವನ್ನು ಲಾರಿಯಲ್ಲಿ ತುಂಬಿಕೊಂಡು ಕಾಳಸಂತೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಗ್ರಾಮಸ್ಥರು ತಡೆದು ನಿಲ್ಲಿಸಿದ್ದಾರೆ. ಇದನ್ನೂ ಪ್ರಶ್ನೆ ಮಾಡಿದಾಗ ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಎಂದು ಆವಾಜ್ ಹಾಕಿದ್ದಾನೆ. ಈ ವೇಳೆ ನ್ಯಾಯಬೆಲೆ ಅಂಗಡಿಯ ಡೀಲರ್ ಜೊತೆಗೆ ಗ್ರಾಮಸ್ಥರು ವಾಗ್ವಾದ ಮಾಡಿದ್ದಾರೆ.ಇದನ್ನೂ ಓದಿ: Cyclone Dana – ಸರಪಳಿ ಬಳಸಿ ರೈಲನ್ನು ಕಟ್ಟಿದ ಅಧಿಕಾರಿಗಳು
ಯಾದಗಿರಿ: ಅನ್ನಭಾಗ್ಯ ಯೋಜನೆಯಡಿ (AnnaBhagya Scheme) ಅಕ್ಕಿ ಪಡೆಯಲು ಪಡಿತರು ಪರದಾಡುವಂತಹ ಸ್ಥಿತಿ ಎದುರಾಗಿದ್ದು, ಸರ್ವರ್ ಸಮಸ್ಯೆಯಿಂದಾಗಿ ಕಳೆದ ಒಂದು ವಾರದಿಂದ ಪರದಾಡುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಿಗದ ಹಿನ್ನೆಲೆ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಜನರು ಆಗಮಿಸುತ್ತಿದ್ದಾರೆ. ಆದರೆ ಅಲ್ಲಿಯೂ ಜನರಿಗೆ ಅಕ್ಕಿ ಸಿಗುತ್ತಿಲ್ಲ. ಕೂಲಿ ಕೆಲಸ ಬಿಟ್ಟು ಪಡಿತರ ಧಾನ್ಯ ಪಡೆಯಲು ಗ್ರಾಹಕರು ಹರಸಾಹಸಪಡುತ್ತಿದ್ದಾರೆ. ಜೊತೆಗೆ ಜುಲೈ ತಿಂಗಳಿನಿAದ ಐದು ಕೆಜಿ ಅಕ್ಕಿಯ ಬದಲು ಹಣ ಪಡೆಯಬಹುದು ಎಂಬುವುದಕ್ಕೂ ಕತ್ತರಿ ಬಿದ್ದಿದೆ. ಒಂದು ಕಡೆ ಅಕ್ಕಿಯೂ ಇಲ್ಲ. ಇನ್ನೊಂಡು ಕಡೆ ಹಣವೂ ಇಲ್ಲ ಎನ್ನುವಂತಾಗಿದೆ. ಈ ಸಮಸ್ಯೆಯಿಂದಾಗಿ ಊಟಕ್ಕೆ ಅಕ್ಕಿ ಇಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ.
ಓರ್ವ ಗ್ರಾಹಕಿ ಮಾತನಾಡಿ, ಸರ್ಕಾರ ಅಕ್ಕಿಯ ಒಂದು ರೂಪಾಯಿ ಹಣವನ್ನು ಪಾವತಿ ಮಾಡಿಲ್ಲ. ಒಂದು ಕಡೆ ರೇಷನ್ ಹಣವೂ ಇಲ್ಲ ಮತ್ತೊಂದೆಡೆ ಊಟ ಮಾಡಲು ಮನೆಯಲ್ಲಿ ಅಕ್ಕಿಯೂ ಇಲ್ಲ, ನಾವು ಬಡವರು ಹೇಗೆ ಬದುಕಬೇಕು. ಸರ್ವರ್ ಇಲ್ಲವೆಂದು ಅಕ್ಕಿ ಕೊಡುತ್ತಿಲ್ಲ. ನಾವು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ತಪ್ಪು ಮಾಡಿದ್ದೇವೆ. ಸಿದ್ದರಾಮಯ್ಯರನ್ನು ನಂಬಿ ನಾವು ಅಧಿಕಾರಕ್ಕೆ ತಂದಿದ್ದೇವೆ. ಈಗ ಅಕ್ಕಿ ಇಲ್ಲದೇ ನಾವು ಹೇಗೆ ಊಟ ಮಾಡಬೇಕು. ಬೇರೆಯವರಿಂದ ಅಕ್ಕಿ ಸಾಲ ಪಡೆದು ಊಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಒಡಿಶಾ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ಮುಟ್ಟಿನ ರಜೆ ಘೋಷಣೆ
ಹುಬ್ಬಳ್ಳಿ: ಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ (Rice) ಕೊಡಲು ರೆಡಿಯಿದೆ. ಆದ್ರೆ ಅಕ್ಕಿ ಖರೀದಿಸೋಕೆ ರಾಜ್ಯ ಸರ್ಕಾರದ (Karnataka Government) ಬಳಿಯೇ ದುಡ್ಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ.
ನಾವು ಕೇಳಿದಾಗ ಕೇಂದ್ರ ಅಕ್ಕಿ ಕೊಡಲಿಲ್ಲ. ಈಗ ಭಾರತ್ ಅಕ್ಕಿ (Bharat Rice) ಕೂಡ ನಿಲ್ಲಿಸಿದ್ದಾರೆ. ಶೀಘ್ರವೇ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಅಕ್ಕಿ ಮಾರಾಟ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಒತ್ತಾಯಿಸಿದ್ದರು. ಈ ಹೇಳಿಕೆ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ, ಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ಕೊಡಲು ರೆಡಿಯಿದೆ. ಆದ್ರೆ ಅಕ್ಕಿ ಖರೀದಿಸೋಕೆ ರಾಜ್ಯ ಸರ್ಕಾರದ ಬಳಿಯೇ ದುಡ್ಡಿಲ್ಲ. ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಲ್ಲಾ ರಾಜಕೀಯ ಪಕ್ಷಗಳು ಹಾಳಾಗಿ ಹೋಗಿವೆ – ಹೆಚ್.ವಿಶ್ವನಾಥ್ ಬೇಸರ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ ಆಗಿ ಪರಿವರ್ತನೆ ಆಗಿದೆ. ಒಂದು ರಸ್ತೆ ಮಾಡಿಸೋದಕ್ಕೂ ದುಡ್ಡಿಲ್ಲ. ಕಳೆದ ಬಾರಿ ನಮ್ಮ ಬಳಿ ಅಕ್ಕಿ ಬಫರ್ ಸ್ಟಾಕ್‌ಗೆ ಹತ್ತಿರ ಇತ್ತು. ದೇಶಾದ್ಯಂತ ಅಕ್ಕಿ ಸಂಗ್ರಹ ಕಡಿಮೆ ಆಗುತ್ತೆ ಅನ್ನುವ ಆತಂಕ ಇತ್ತು, ಆದ್ದರಿಂದ ಅಕ್ಕಿ ನಿಲ್ಲಿಸಿದ್ದೆವು. ಈಗ ನಮ್ಮ ಬಳಿ ಅಕ್ಕಿ ಸ್ಟಾಕ್ ಇದೆ. ಮುಕ್ತ ಮಾರುಕಟ್ಟೆ ಸಪೋರ್ಟ್ ಸಿಸ್ಟಮ್‌ನಲ್ಲಿ (Open Market Support System) ನಾವು ಅಕ್ಕಿ ಕೊಡ್ತಿದ್ದೇವೆ. 34 ರೂ. ಇದ್ದ ಅಕ್ಕಿ ಬೆಲೆ 28 ರೂ.ಗೆ ಇಳಿಕೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮುಡಾ ಪ್ರಕರಣ ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಲಿ: ಬೊಮ್ಮಾಯಿ
ನೀವು 170 ರೂ. ಎಷ್ಟು ಜನರಿಗೆ ಅಕ್ಕಿ ಕೊಟ್ಟಿದ್ದೀರಿ? ಕಳೆದ 2 ತಿಂಗಳಿಂದ ಗೃಹಲಕ್ಷ್ಮಿ ಹಣವೇ ಬಂದಿಲ್ಲ. ವೃದ್ಯಾಪ್ಯ ವೇತನವೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಯಾಕೆ ಹೆಚ್ಚಿಸಿದ್ರಿ? ನಾಚಿಕೆ ಆಗಲ್ವಾ ನಿಮಗೆ? ಜನರಿಗೆ ದ್ರೋಹ ಮಾಡೋ ಸರ್ಕಾರ ಸಿದ್ಧರಾಮಯ್ಯ ಸರ್ಕಾರ. ಎಲ್ಲ ಬೆಲೆಯನ್ನು ಜಾಸ್ತಿ ಮಾಡಿದ್ದಾರೆ. ಜನರಿಗೆ ಹೊರೆ ಹಾಕೋ ಕೆಲಸ ಮಾಡಿದ್ದಾರೆ. ಯಾವುದೇ ಸಣ್ಣ ಕೆಲಸಕ್ಕೂ ದುಡ್ಡಿಲ್ಲ ಅಂತಿದ್ದಾರೆ. ಇವಾಗ ಅಕ್ಕಿ ತಗೊಳ್ಳಿ ಅಂದ್ರೆ ಅದಕ್ಕೂ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ಸಿದ್ದರಾಮಯ್ಯ ಏನಾಗ್ತಿದೆ ಎಂದು ಅಧಿಕಾರಿಗಳಿಂದ ತಿಳಿದುಕೊಂಡು ಮಾತಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: 2ನೇ ವಿಮಾನ ನಿಲ್ದಾಣದ ಬಗ್ಗೆ ವಿಸ್ತೃತ ಚರ್ಚೆ ಬಳಿಕ ಸೂಕ್ತ ತೀರ್ಮಾನ: ಎಂ.ಬಿ.ಪಾಟೀಲ್
– ಡಿಸೆಂಬರ್ನಲ್ಲಿ ಸಿಗಲಿದೆ ಅನ್ನಭಾಗ್ಯದ ಬಾಕಿ ದುಡ್ಡು
– 9 ಲಕ್ಷ ಅನ್ನಭಾಗ್ಯ ಡಿಬಿಟಿ ವಂಚಿತರಿಗೆ ಸಿಗಲಿದೆ ಕಾಂಚಾಣ
ಬೆಂಗಳೂರು: ಅನ್ನಭಾಗ್ಯದ DBT ಹಣ ಇದುವರೆಗೆ ರೇಷನ್ ಕಾರ್ಡ್ನಲ್ಲಿ (Ration Card) ನಮೂದಾಗಿದ್ದ ಮುಖ್ಯಸ್ಥರಿಗೆ ಬರುತ್ತಿತ್ತು. ಆದ್ರೆ ತಾಂತ್ರಿಕ ದೋಷದಿಂದ ರಾಜ್ಯದಲ್ಲಿ ಸುಮಾರು 9 ಲಕ್ಷ ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗಿದ್ರು. ಈಗ ಇಲಾಖೆ ಇವರಿಗೆ ರಾಜ್ಯ ಸರ್ಕಾರ (Government of Karnataka) ಗುಡ್ನ್ಯೂಸ್ ನೀಡಿದೆ.
ಅನೇಕರಿಗೆ ಅನ್ನಭಾಗ್ಯದ ದುಡ್ಡು ಖಾತೆಗೆ ಜಮೆಯಾಗಿದ್ರೂ ಕೆಲವು ರೇಷನ್ ಕಾರ್ಡ್‍ನ ಮುಖ್ಯಸ್ಥರಿಗೆ ತಾಂತ್ರಿಕ ದೋಷದಿಂದ ದುಡ್ಡು ಜಮೆಯಾಗಿರಲಿಲ್ಲ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಆಹಾರ ಇಲಾಖೆ ಮನೆಯ 2ನೇ ಯಜಮಾನರ ಬ್ಯಾಂಕ್ ಖಾತೆಗೆ (Bank Account) ನೇರವಾಗಿ ಹಣ ಹಾಕಲಿದೆ. ಈ ತಿಂಗಳಿಂದಲೇ ಮನೆಯ 2ನೇ ಯಜಮಾನರ ಖಾತೆಗೆ ದುಡ್ಡು ಹೋಗಲಿದೆ.
ಒಟ್ಟು 9 ಲಕ್ಷ ಜನರಿಗೆ ಇದುವರೆಗೆ ಅನ್ನಭಾಗ್ಯದ ದುಡ್ಡು ಜಮೆಯಾಗಿಲ್ಲ. ಈ ಫಲಾನುಭವಿಗಳ ರೇಷನ್ ಕಾರ್ಡ್ನಲ್ಲಿದ್ದ ಮನೆಯ ಹಿರಿಯ ಸದಸ್ಯರ ಆಕೌಂಟ್ ನಿಷ್ಕ್ರಿಯ, ಆಧಾರ್ ಸೀಡಿಂಗ್ ಸಮಸ್ಯೆ ಕೆ ವೈಸಿ ಸಮಸ್ಯೆ ಇತ್ತು. ಆದ್ದರಿಂದ ಈ ವಿವರವನ್ನು ಈಗಾಗಲೇ ಆಹಾರ ಇಲಾಖೆ ಕಲೆ ಹಾಕಿದೆ. ಹೀಗಾಗಿ ಈ ತಿಂಗಳಿಂದಲೇ ಬಿಪಿಎಲ್ ಕಾರ್ಡ್ದಾರರ ತಾಂತ್ರಿಕ ದೋಷವಿರುವ ರೇಷನ್ ಕಾರ್ಡ್‍ನ 2ನೇ ಯಜಮಾನರ ಬ್ಯಾಂಕ್ ಖಾತೆಗೆ ದುಡ್ಡು ಜಮೆಯಾಗಲಿದೆ. ಇದಕ್ಕೆ ಸಾರ್ವಜನಿಕರು ಅರ್ಜಿ ಸಲ್ಲಿಕೆ ಮಾಡಬೇಕಾಗಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಇರಲಿದೆ ಎಂದು ಆಹಾರ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ `ಪಬ್ಲಿಕ್ ಟಿವಿ’ಗೆ ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಗೂ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು, ಅನ್ಯಾಯ ಆಗೋಕೆ ಬಿಡಲ್ಲ – ಮುಸ್ಲಿಂ ಸಮಾವೇಶದಲ್ಲಿ ಸಿಎಂ ಅಭಯ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರೋ ಅನ್ನಭಾಗ್ಯ ಯೋಜನೆ (Annabhagya Scheme) ಜಾರಿಗೆ ಬಂದು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಬಿಪಿಎಲ್ ಕಾರ್ಡ್‍ನ (BPL Card) ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ಕೊಡ್ತಿವಿ ಅಂದಿದ್ದ ಸರ್ಕಾರದ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗದೇ 5 ಕೆಜಿ ಅಕ್ಕಿಯ ಬದಲಿಗೆ ಖಾತೆಗೆ ಹಣ ಹಾಕ್ತಿದ್ದಾರೆ.
ಯಾರ ಮನೆಯಲ್ಲಿ ವೈಟ್ ಬೋರ್ಡ್ ಕಾರ್ (White Board Card) ಇದೇಯೋ ಅಂತಹವರ ಬಿಪಿಎಲ್ ಕಾರ್ಡ್ ಅಮಾನ್ಯ ಮಾಡಲು ಆಹಾರ ಇಲಾಖೆ ಆರ್‍ಟಿಓ ಬಳಿ ಮಾಹಿತಿ ಕೇಳಿದೆ. ಸದ್ಯ ರಾಜ್ಯದಲ್ಲಿ ಒಟ್ಟು 44.62.107 ವೈಟ್ ಬೋರ್ಡ್ ಕಾರುಗಳ ಬಗ್ಗೆ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ವೈಟ್‍ಬೋರ್ಡ್ ಹೊಂದಿರುವವರ ಒಟ್ಟು 12,100 ಕಾರ್ಡ್‍ಗಳನ್ನ ಆಹಾರ ಇಲಾಖೆ ರದ್ದು ಮಾಡಿದ್ದು, ಇದರಲ್ಲಿ ಐಷಾರಾಮಿ ಕಾರುಗಳಾದ ಬೇನ್ಸ್, ರ್ಆಡಿ ಸೇರಿದಂತೆ ಅನೇಕ ಟಾಪ್‍ಕ್ಲಾಸ್ ಕಾರುಗಳು ಹೊಂದಿದ್ದವರು ಇದ್ದಾರೆ. ಜೊತೆಗೆ 20,000 ಸರ್ಕಾರಿ ನೌಕರರು ಸಹ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಇವರ ಕಾರ್ಡ್‍ಗಳನ್ನ ರದ್ದು ಮಾಡಿ ಒಟ್ಟಾರೆ 13 ಕೋಟಿ ದಂಡವನ್ನ ವಸೂಲಿ ಮಾಡಿದ್ದಾರೆ.
ಈಗ ರಾಜ್ಯದಲ್ಲಿರೋ ಕಾರ್ ಗಳ ಸಂಖ್ಯೆ ಸಿಕ್ಕಿದೆ. ಕಳೆದ 15 ದಿನಗಳಿಂದ ಫಲನುಭವಿಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಶುರು ಮಾಡಿದ್ದು, ಇ ಜನ್ಮ ಪೋರ್ಟಲ್ ಮೂಲಕ ಸಾವನ್ನಪ್ಪಿರುವವ ಮಾಹಿತಿಯನ್ನ ಪಡೆದುಕೊಂಡಿದೆ. ಇದರಲ್ಲಿ ಬಿಪಿಎಲ್ ಕಾರ್ಡ್‍ನಲ್ಲಿರುವ ಬರೋಬ್ಬರಿ 4,65,000 ಮೃತಪಟ್ಟಿದ್ದು, ಈಗ ಈ ಹೆಸರುಗಳನ್ನ ಬಿಪಿಎಲ್ ಕಾರ್ಡ್‍ನಿಂದ ಡಿಲೀಟ್ ಮಾಡೋ ಪ್ರಕ್ರಿಯೆ ಶುರು ಮಾಡಲಾಗಿದೆ ಅಂತಾ ಆಹಾರ ಇಲಾಖೆಯ ಎಂಡಿ ಜ್ಞಾನೇಂದ್ರ ತಿಳಿಸಿದ್ದಾರೆ. ಇದನ್ನೂ ಓದಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ತಾತ್ಕಾಲಿಕ ಸ್ಥಗಿತ- ಪ್ರವಾಸಿಗರಿಗೆ ನಿರಾಸೆ
ಇದರಿಂದ ಮುಂದಿನ ತಿಂಗಳಿಂದ ಆಹಾರ ಇಲಾಖೆಗೆ 8 ಕೋಟಿಯಷ್ಟು ಹಣ ಉಳಿತಾಯ ಆಗಲಿದೆ.. ಇನ್ನೂ ಈ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯಕ್ಕೆ ಹೀಗೆ ಸತ್ತವರ ಹೆಸರನಲ್ಲಿ ರೇಷನ್ ಪಡೆಯುತ್ತಿರೋರಿಗೆ ದಂಡವನ್ನ ಹಾಕುವ ಪ್ಲಾನ್ ಕೂಡ ಮಾಡಲಾಗ್ತಿದ್ದು, ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯೋದಾಗಿ ಎಂಡಿ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಮಾನದಂಡ ಏನು?: ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು. 3 ಹೆಕ್ಟರ್‍ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು. ವೈಟ್‍ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು. ಯಾವುದೇ ಸರ್ಕಾರಿ ನೌಕರರಾಗಿರಬಾರದು. ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 ಅಡಿ ಮೀರಬಾರದು. ವಾಣಿಜ್ಯ ತೆರಿಗೆ, ಆದಾಯ ತೆರಿಗೆ, ಐಟಿ ರಿಟನ್ರ್ಸ್ ಪಾವತಿದಾರರಾಗಿರಬಾರದು.
ಬೆಂಗಳೂರು: ರಾಜ್ಯ ಸರ್ಕಾರದ (State Government) ವಿರುದ್ಧ ನಿರಂತರವಾಗಿ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧ ಅನಾಮಿಕರೊಬ್ಬರು ಬರೆದ ಪತ್ರ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಆಹಾರ ಇಲಾಖೆಯಲ್ಲೂ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.
ಆಹಾರ ಇಲಾಖೆ (Food Department) ಅಧಿಕಾರಿಗಳ ವಿರುದ್ಧ ಲಂಚದ ಬಾಂಬ್ ಹಾಕಿದ್ದಾರೆ. ಪಡಿತರ ವಿತರಕರೇ ಸಿಎಂ ಸೇರಿದಂತೆ ಸಚಿವ ಕೆ.ಹೆಚ್ ಮುನಿಯಪ್ಪ ಅವರಿಗೆ ಪಿನ್ ಟು ಪಿನ್ ಮಾಹಿತಿ ಕೊಟ್ಟು ಪತ್ರ ಬರೆದಿದ್ದಾರೆ. ತುಮಕೂರಿನ ಪಾವಗಡದ ಶಿರಸ್ತೇದಾರ ಕೃಷ್ಣಮೂರ್ತಿ ಹಾಗೂ ಆಹಾರ ನಿರೀಕ್ಷಕ ಮಂಜುನಾಥ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ, ಲಂಚಾವತಾರದ ಆರೋಪದ ಬಗ್ಗೆ ಆರೋಪ ಕೇಳಿಬಂದಿದೆ. 15 ದಿನಗಳ ಹಿಂದೆಯೇ ಪತ್ರ ಬಂದಿದೆ. ಅಧಿಕಾರಿಗಳಿಗೆ ತನಿಖೆ ಮಾಡಲು ಆದೇಶ ನೀಡಿದ್ದೇನೆ. ತನಿಖೆ ವರದಿ ಬಂದ ಬಳಿಕ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನವೆಂಬರ್ 30ರ ವರೆಗೆ ಕಾಲುವೆಗೆ ನೀರು – ಐಸಿಸಿ ಸಭೆ ಬಳಿಕ ಶಿವರಾಜ್ ತಂಗಡಗಿ ಮಾಹಿತಿ
ಅಹಾರ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಮಾತನಾಡಿ, ಈ ಆರೋಪದ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದೆ. ಆದ್ರೆ ಅನ್ನಭಾಗ್ಯದ ಕೆಲಸ ಕಾರ್ಯದಲ್ಲಿ ನಾವು ಒತ್ತಡದಲ್ಲಿದ್ದೆವು. ಆರೋಪ ಎದುರಿಸುತ್ತಿರುವ ಇಬ್ಬರು ಸಿಬ್ಬಂದಿಗೂ ನಾವು ನೋಟಿಸ್ ನೀಡಿದ್ದೇವೆ. ಈ ಬಗ್ಗೆ ವಿಚಾರಣೆ ಕೂಡ ನಡೆಯುತ್ತಿದೆ. ಈಗಾಗಲೇ ಆಂತರಿಕ ವಿಚಾರಣೆಗೆ ಪ್ರತ್ಯೇಕ ಟೀಂ ರಚನೆ ಆಗಿದೆ. ಈ ತಿಂಗಳ ಅಂತ್ಯದಲ್ಲಿ ತನಿಖಾ ವರದಿ ನಮ್ಮ ಕೈಸೇರಲಿದೆ. ಒಂದು ವೇಳೆ ಆರೋಪ ನಿಜವಾಗಿದ್ರೆ ಕಠಿಣ ಕ್ರಮ ವಹಿಸುತ್ತೇವೆ. ತನಿಖಾ ವರದಿ ಬಾರದೇ ಏನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಗುರುರಾಜ್ ಗಂಟಿಹೋಳಿ, ಅನ್ನಭಾಗ್ಯ ಯೋಜನೆಯನ್ನ ಸ್ವಾಗತಿಸಿದರು. ಯೋಚನೆ ಮತ್ತು ಯೋಜನೆ ರೂಪಿಸಿದವರಿಗೆ ಅಭಿನಂದನೆ, ಬಡವರ ಹೊಟ್ಟೆ ತುಂಬಿಸುವ ಯೋಜನೆ. ಯಾವುದೇ ಸರ್ಕಾರ ಈ ಯೋಜನೆ ಜಾರಿ ಮಾಡಿರಲಿ, ನಾನು ಸ್ವಾಗತ ಮಾಡುತ್ತೇನೆ ಎಂದು ನುಡಿದರು. ಇದನ್ನೂ ಓದಿ: ಮೋದಿ ವಿರುದ್ಧ ಒಗ್ಗಟ್ಟಿನ ರಣಕಹಳೆ- ಇಂದಿನಿಂದ 2 ದಿನ ವಿಪಕ್ಷಗಳ ಒಕ್ಕೂಟ ಸಭೆ
ನಂತರ ಮಾತನಾಡಿದ ಬಿಜೆಪಿ ಸದಸ್ಯ ಬಿ.ವೈ ವಿಜಯೇಂದ್ರ, ಸಿದ್ದರಾಮಯ್ಯ ಅನುಭವಿ ಸಿಎಂ, ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಆದ್ರೆ ಸದನವನ್ನ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಲು ಬಳಸಿಕೊಂಡಿದ್ದಾರೆ. ಪ್ರಧಾನಿ ಮೋದಿ 140 ಕೋಟಿ ಜನರನ್ನ ಪ್ರತಿನಿಧಿಸುತ್ತಾರೆ. ಅವರನ್ನ ನಾವು ಗೌರವಿಸಬೇಕು. ಕಾಂಗ್ರೆಸ್ 5 ಗ್ಯಾರಂಟಿ ಜಾರಿಗೆ ಯಾವ ಮೂಲಗಳಿಂದ ಹಣ ಕ್ರೋಢೀಕರಣದ ಬಗ್ಗೆ ಹೇಳಿಲ್ಲ. ಅಬಕಾರಿ ತೆರಿಗೆ ಹೆಚ್ಚಳದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹಾಗಾದ್ರೆ ಇದರ ಪರಿಣಾಮ ಏನಾಗಬಹುದು? ಗ್ರಾಮೀಣ ಭಾಗದಲ್ಲಿ ಕಳ್ಳ ಭಟ್ಟಿ ತಯಾರಿಸಲು ಅವಕಾಶ ಆಗುತ್ತದೆ. ಇದರಿಂದ ಬಡವರ ಮೇಲೆ ಪರಿಣಾಮ ಬೀರಲಿದೆ. ಇದನ್ನ ಸಿಎಂ ಸಿದ್ದರಾಮಯ್ಯ ಗಮನಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಬಜೆಟ್‌ನಲ್ಲಿ ಇಲಾಖಾವರು ಹಣ ಕಡಿತಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿ ಇಲಾಖೆಗೂ ಹಣ ಕಡಿತಗೊಳಿಸಲಾಗಿದೆ. ಅಭಿವೃದ್ಧಿ ಪರವಾಗಿ ಬಜೆಟ್ ಮಂಡನೆ ಆಗಿಲ್ಲ. ಕೇವಲ ಗ್ಯಾರಂಟಿಗಳ ಜಾರಿಗಾಗಿ ಅಭಿವೃದ್ಧಿ ಕುಂಟಿತಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕರಾದ ಶಿವಲಿಂಗೇಗೌಡ ಹಾಗೂ ಕೋನರಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು. ಸ್ಪೀಕರ್ ಖಾದರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.
ಬೆಂಗಳೂರು: ಕೊನೆಗೂ ಅನ್ನಭಾಗ್ಯದ (Congress Annabhagya Scheme) ಹಣಭಾಗ್ಯಕ್ಕೆ ಮುಹೂರ್ತ ಕೂಡಿಬಂದಿದೆ. ಇದೇ ಜುಲೈ 9, 10 ಕ್ಕೆ ಅಕೌಂಟ್‍ಗೆ ಹಣ ಹಾಕಲು ಸರ್ಕಾರ ಮುಂದಾಗಿದೆ. ವಿರೋಧ ಪಕ್ಷಗಳ ಪಟ್ಟು ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ (State Government) ಈ ನಿರ್ಧಾರಕ್ಕೆ ಬಂದಿದೆ.
ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ (Congress manifesto) 10 ಕೆ.ಜಿ ಅಕ್ಕಿ ಕೊಡುವ ಭರವಸೆ ನೀಡಿದರು. ಆದರೆ ಕಾಲಕ್ರಮೇಣ ಕೇಂದ್ರ ಸರ್ಕಾರ ತಮ್ಮ ಪಾಲಿನ ಅಕ್ಕಿಯನ್ನಷ್ಟೇ ನೀಡುತ್ತೇವೆ ಎಂದು ಹೇಳಿ ಕೈತೊಳೆದುಕೊಂಡಿತ್ತು. ಈಗ 5 ಕೆ.ಜಿ ಅಕ್ಕಿ ಜೊತೆ 5 ಕೆ.ಜಿಗೆ ಹಣ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.
ಈ ನಡುವೆ ಅಕ್ಕಿ ಹಣ ನೀಡುವುದು ಮತ್ತಷ್ಟು ವಿಳಂಬ ಅನ್ನೋದನ್ನ ಸ್ಪಷ್ಟವಾಗಿ ಹೇಳ್ತಿದೆ. ಸರ್ಕಾರದಿಂದ ಈಗ ಅಕೌಂಟ್‍ಗೆ ಹಣ ಹಾಕಲು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಜುಲೈ 15ರಂದು ಹಣಹಾಕುವ ಚಿಂತನೆಯಲ್ಲಿದ್ದರು. ಇದೀಗ ಜುಲೈ 10ರೊಳಗೆ ಹಣ ಹಾಕುವಂತೆ ಸರ್ಕಾರ ಸೂಚಿಸಿದ್ದು, ಜುಲೈ 9ರಂದೇ ಅಕೌಂಟ್‍ಗೆ ಹಣಹಾಕಲು ಆಹಾರ ಇಲಾಖೆಯಿಂದ ಚಿಂತನೆ ನಡೆಸಲಾಗ್ತಿದೆ ಎಂದು ಹೇಳಲಾಗುತ್ತಿದೆ.
ಅನ್ನ `ಹಣ’ಭಾಗ್ಯ ಸಿದ್ಧತೆ ಹೇಗಿದೆ?: ಜುಲೈ 9 ಅಥವಾ 10ರಂದೇ ಅಕೌಂಟ್‍ಗೆ ಹಣ ಹಾಕುವ ಸಾಧ್ಯತೆಗಳಿದ್ದು, ಜಿಲ್ಲಾವಾರು ಖಾತೆಗೆ ಹಣ ಹಾಕಲು ತಯಾರಿ ನಡೆಸಲಾಗುತ್ತಿದೆ. ಪ್ರತಿನಿತ್ಯ 2 ಜಿಲ್ಲೆ ಆಯ್ಕೆ ಮಾಡಿ ಹಣ ಹಾಕಲು ಚಿಂತನೆ ನಡೆಯುತ್ತಿದೆ. ಇದನ್ನೂ ಓದಿ: ಹನುಮಂತನಿಗೆ ಅಪಮಾನ ಮಾಡಿದ ಆರೋಪ- ಶಪಥ ಮಾಡಿ ನದಿಯಲ್ಲೇ ಕುಳಿತ ಸ್ವಾಮೀಜಿ
ಆರಂಭಿಕ ಹಂತದಲ್ಲಿ ಮೈಸೂರು, ಕೋಲಾರ ಜಿಲ್ಲೆಗಳಿಗೆ ಹಣ ಜಮೆ ಹಾಗೂ ಹಂತ ಹಂತವಾಗಿ ಎರೆಡೆರಡು ಜಿಲ್ಲೆಗಳಿಗೆ ಹಣ ಹಾಕಲು ನಿರ್ಧಾರ ಮಾಡಲಾಗುತ್ತದೆ. 3 ತಿಂಗಳು ಪಡಿತರ ಅಕ್ಕಿ ತೆಗೆದುಕೊಳ್ಳದೇ ಇರೋರಿಗೆ ಅಕ್ಕಿ ಹಣ ಅನುಮಾನವಿದೆ. ಏಪ್ರಿಲ್, ಮೇ, ಜೂನ್‍ನಲ್ಲಿ ಅಕ್ಕಿ ತೆಗೆದುಕೊಳ್ಳದಿದ್ರೆ ಹಣ ನೀಡೋದು ಡೌಟು ಎನ್ನಲಾಗಿದೆ.
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ನನಗೆ ವರ್ಗಾವಣೆ (Transfer) ಮಾಡೋ ಅಧಿಕಾರವೇ ಇರಲಿಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy), ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರು ನೆನಪು ಮಾಡಿಕೊಳ್ಳಬೇಕು. ನಾನು ಸಿಎಂ ಆಗಿದ್ದಾಗ ನಿಮ್ಮ ಮಂತ್ರಿಗಳು ನನ್ನನ್ನ ಯಾವ ರೀತಿ ನಡೆಸಿಕೊಂಡಿದ್ದಾರೆ ಅನ್ನೋದನ್ನ ಒಮ್ಮೆ ನೆನಪು ಮಾಡಿಕೊಳ್ಳಬೇಕು. ನಿಮ್ಮ ಪಕ್ಷ ಸಚಿವರು ಪೊಗರುದಸ್ತು ಇಲಾಖೆ ಇಟ್ಟುಕೊಂಡಿದ್ರು. ಏನ್ ಜನರ ಕೆಲಸ ಮಾಡಲಿಕ್ಕೆ ಇಟ್ಟುಕೊಂಡಿದ್ರಾ ಇಲಾಖೆಗಳನ್ನ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನಗೆ ವರ್ಗಾವಣೆ ಮಾಡೋ ಅಧಿಕಾರವೇ ಇರಲಿಲ್ಲ. ಕಾಂಗ್ರೆಸ್ ಅವರು ಹೇಳಿದಂತೆ ನಾನು ವರ್ಗಾವಣೆ ಮಾಡಬೇಕಿತ್ತು ಅಂತಾ ತಿಳಿಸಿದರು.
ನನ್ನ ಕಾಲದಲ್ಲಿ ವಿಧಾನಸೌಧದಲ್ಲೇ ಚರ್ಚೆ ಮಾಡಿದ್ದೇನೆ. ಬೆಂಗಳೂರು ಪ್ರಾಧಿಕಾರಕ್ಕೆ 10-15 ಕೋಟಿ ಹಣ ಕೊಡ್ತೀವಿ ಅಂತಾ ಬಂದವರನ್ನ ಆಚೆಗಿಟ್ಟಿದೆ. ಯಲಹಂಕ ತಹಶೀಲ್ದಾರ್‌ಗೆ 1.5 ಕೋಟಿ ಕೊಡೋಕೆ ಬಂದಿದ್ದವರನ್ನ ಉಗಿದು ಆಚೆಗಿಟ್ಟಿದ್ದೆ. ಇದು ಕುಮಾರಸ್ವಾಮಿ ನಡೆದುಕೊಂಡಂತ ರೀತಿ. ನನ್ನ ಅವಧಿಯಲ್ಲಿ 5 ರೂ. ತೆಗೆದುಕೊಳ್ಳದೇ ಪ್ರಾಮಾಣಿಕವಾಗಿ ವರ್ಗಾವಣೆ ಮಾಡಿದ್ದೇನೆ ಅಂತಾ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಈ ತಿಂಗಳ ಉಚಿತ ವಿದ್ಯುತ್ ಪಡೆಯೋಕೆ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಿ: ಇಂಧನ ಇಲಾಖೆ ಸೂಚನೆ
ಇದೇ ವೇಳೆ ಅನ್ನಭಾಗ್ಯ ಯೋಜನೆಗೆ ಹಣ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಈ ಸರ್ಕಾರದಲ್ಲಿ ಎಷ್ಟೋ ಜನ ಸಿಎಂ ಇದ್ದಾರೆ. ಸಿದ್ದರಾಮಯ್ಯ ಒಬ್ಬರೇ ಈ ಸರ್ಕಾರದ ಸಿಎಂ ಅಲ್ಲ. ಹಲವಾರು ಜನ ಸಿಎಂ ಇದ್ದಾರೆ. ಸಿದ್ದರಾಮಯ್ಯ ಅವರು 15 ದಿನಗಳಲ್ಲಿ ಹಣ ಕೊಡ್ತೀನಿ ಅಂದ್ರು. ಆದ್ರೆ ಸಚಿವ ಸತೀಶ್ ಜಾರಕಿಹೊಳಿ ಆಗಸ್ಟ್ ಅಂತಾರೆ. ಯಾರ ಮಾತು ನಂಬಬೇಕು? ಈ ಸರ್ಕಾರದಲ್ಲಿ ಎಷ್ಟು ಜನ ಸಿಎಂ ಇದ್ದಾರೆ? ಇವರ ಹೈಕಮಾಂಡ್ ಯಾರ್ಯಾರಿಗೆ ಮಾತನಾಡುವ ಅಧಿಕಾರ ಕೊಟ್ಟಿದೆ? ಎಂದು ಕಿಡಿ ಕಾರಿದ್ದಾರೆ.