Tag: Annabaghya

  • ಅಕ್ರಮ ಅನ್ನಭಾಗ್ಯ ಅಕ್ಕಿ ದಂಧೆ ಅಡ್ಡೆ ಮೇಲೆ ದಾಳಿ – ಓರ್ವ ವಶಕ್ಕೆ

    ಅಕ್ರಮ ಅನ್ನಭಾಗ್ಯ ಅಕ್ಕಿ ದಂಧೆ ಅಡ್ಡೆ ಮೇಲೆ ದಾಳಿ – ಓರ್ವ ವಶಕ್ಕೆ

    ಗದಗ: ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಓರ್ವನನ್ನು ವಶಕ್ಕೆ ಪಡೆದ ಘಟನೆ ಗದಗದ (Gadag) ಬೆಟಗೇರಿ ಬಣ್ಣದ ನಗರದಲ್ಲಿ ನಡೆದಿದೆ.

    ಅನ್ನಭಾಗ್ಯ ಅಕ್ಕಿಗೆ ಖದೀಮರು ಕನ್ನ ಹಾಕಿ, ರೂಮ್‌ನಲ್ಲಿ ಸುಮಾರು 20 ಕ್ವಿಂಟಲ್‌ನಷ್ಟು ಅಕ್ಕಿ ಸಂಗ್ರಹಿಸಿದ್ದರು. ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಅಕ್ಕಿ ದಂಧೆ ಜಾಲ ಪತ್ತೆಯಾಗಿದೆ. ಇದನ್ನೂ ಓದಿ: Kolar| ದೇವಾಲಯ, ಮನೆ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    ಅಕ್ರಮ ಅಕ್ಕಿ ದಂಧೆಯಲ್ಲಿ ಪಾಲ್ಗೊಂಡಿದ್ದ ಶ್ರಿಕಾಂತ್ ಭಜಂತ್ರಿ ಎಂಬಾತನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗದಗನ ಬೆಟಗೇರಿ ಪೊಲೀಸ್ (Betageri Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದಂಧೆಯ ಜಾಲವನ್ನು ಬೆನ್ನು ಹತ್ತಿದ್ದಾರೆ.

  • ಕರ್ನಾಟಕದಲ್ಲಿ 67% ಬಡವರಿದ್ದಾರಾ? – ಸಿಎಂ ಟ್ವೀಟ್‌ಗೆ ಮೋಹನ್ ದಾಸ್ ಪೈ ಕಿಡಿ

    ಕರ್ನಾಟಕದಲ್ಲಿ 67% ಬಡವರಿದ್ದಾರಾ? – ಸಿಎಂ ಟ್ವೀಟ್‌ಗೆ ಮೋಹನ್ ದಾಸ್ ಪೈ ಕಿಡಿ

    ಬೆಂಗಳೂರು: ಕರ್ನಾಟಕದಲ್ಲಿ 67% ಕನ್ನಡಿಗರು ಬಡತನದಲ್ಲಿದ್ದಾರಾ ಎಂಬ ಪ್ರಶ್ನೆಯನ್ನು ಉದ್ಯಮಿ ಮೋಹನ್ ದಾಸ್ ಪೈ ಎತ್ತಿದ್ದಾರೆ. ಸಿಎಂ ಪ್ರಕಾರ 67% ರಾಜ್ಯದಲ್ಲಿ ಅತಿ ಕಡುಬಡವರು ಇದ್ದಾರೆ. ಇದು ಕರ್ನಾಟಕಕ್ಕೆ ಶೇಮ್. ಆದರೆ ಭಾರತದ ಜಿಡಿಪಿ ಪ್ರಕಾರ ಕರ್ನಾಟಕ ಶ್ರೀಮಂತ ರಾಜ್ಯ ಎಂದು ವ್ಯಂಗ್ಯವಾಡಿದ್ದಾರೆ.

    ಅನ್ನಭಾಗ್ಯದ ಲಾಭ ಬಡ ಜನರಿಗೆ ತಲುಪುತ್ತಿದೆ. ಬಡತನ ಮುಕ್ತ ಕರ್ನಾಟಕ ಎಂಬ ಮುಖ್ಯಮಂತ್ರಿಗಳ ಟ್ವೀಟ್‍ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಸಿದ್ದರಾಮಯ್ಯ ಸರ್ಕಾರ ವಿಪರೀತವಾಗಿ ಸಾಲ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಇದಕ್ಕೆ ಪೂರಕವಾಗಿಯೇ ಡಿಸಿಎಂ ಮಾತಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಸಾಲ ಸೋಲಾ ಮಾಡಿಯಾದರು ಬೆಂಗಳೂರು ಜನಕ್ಕೆ ರಿಲೀಫ್ ಕೊಡ್ತೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿರೋದು ಚರ್ಚೆಗೆ ಗ್ರಾಸವಾಗಿದೆ. 5 ಕೆಜಿ ಫ್ರೀ ಅಕ್ಕಿಗಿಂತ ಮೂಲಭೂತ ಸೌಕರ್ಯ, ಒಳ್ಳೆಯ ಉದ್ಯೋಗ ಕೊಡಿ. ನಿಜವಾದ ಬಡವರಿಗೆ ಸಬ್ಸಿಡಿ ಕೊಡಿ. 67% ಕನ್ನಡಿಗರಿಗಲ್ಲ ಎಂದು ಅನ್ನಭಾಗ್ಯ ಯೋಜನೆಯನ್ನು ಅವರು ವಿರೋಧಿಸಿದ್ದಾರೆ.

    ಡಿ.ಕೆ ಶಿವಕುಮಾರ್‌ ಅವರು, ಸಾಲ ಸೂಲ ಏನಾದರೂ ಮಾಡಿ ಬೆಂಗಳೂರು ಜನಕ್ಕೆ ರಿಲೀಫ್ ಕೊಡ್ತೇವೆ. ಟನಲ್ ಆಗೇ ಆಗುತ್ತೇ. ಹೊಸ ಮೆಟ್ರೋ ಏನೇ ಮಾಡಿದ್ರು ಅದರ ಜೊತೆ ಎಲಿವೇಟೇಡ್ ಕಾರಿಡರ್ ಕೂಡ ನಾವು ಮಾಡ್ತೇವೆ. 300 ಕಿಮೀ ರಸ್ತೆ. ಕಾಲುವೆ ಪಕ್ಕದಲ್ಲಿ 50 ಅಡಿ ಬಿಟ್ಟು ರಸ್ತೆ ನಿರ್ಮಾಣ ಮಾಡ್ತೇವೆ. ಅದರ ಬದಲಾಗಿ ಅವರಿಗೆ ಟಿಡಿಆರ್ ಕೊಟ್ಟು ಅಲ್ಲಿ ರೋಡ್ ಮಾಡ್ತೇವೆ ಎಂದು ಹೇಳಿದ್ದರು.