Tag: anna thangi serial

  • ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ‘ಅಣ್ಣ- ತಂಗಿ’ ಸೀರಿಯಲ್‌ ನಟಿ ಅಖಿಲಾ ಪ್ರಕಾಶ್

    ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ‘ಅಣ್ಣ- ತಂಗಿ’ ಸೀರಿಯಲ್‌ ನಟಿ ಅಖಿಲಾ ಪ್ರಕಾಶ್

    ಕಿರುತೆರೆಯ ಜನಪ್ರಿಯ ‌’ಅಣ್ಣ ತಂಗಿ’ (Anna Thangi) ಸೀರಿಯಲ್ ನಟಿ ಅಖಿಲಾ ಪ್ರಕಾಶ್ (Akhila Prakash) ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಹುಕಾಲದ ಗೆಳೆಯನ ಜೊತೆ ಮೈಸೂರಿನಲ್ಲಿ ಸರಳವಾಗಿ ನಟಿ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್‌ ಎಂಗೇಜ್‌ಮೆಂಟ್

    ಕನ್ನಡದ ‘ಸೋಜಿಗ’, ’18 ರಿಂದ 25′, ‘ರತ್ನಮಂಜರಿ’, ‘ಗಾಂಚಾಲಿ’ ಸಿನಿಮಾಗಳು ಹಾಗೂ ‘ಅಣ್ಣ ತಂಗಿ’ ಧಾರಾವಾಹಿಯಲ್ಲಿ ನಟಿಸಿರುವ ಅಖಿಲಾ ಪ್ರಕಾಶ್ ಅವರು ಭರತ್ ಕಾಂತ (Bharath Kanth) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಲವ್ ಮ್ಯಾರೇಜ್ ಎನ್ನಲಾಗಿದೆ.

    ಕೂರ್ಗ್ ಮೂಲದ ಅಖಿಲಾ ಅವರ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದರು. ಮೈಸೂರಿನಲ್ಲಿಯೇ ಬೆಳೆದ ಅಖಿಲಾ ಅವರು ವಾಹಿನಿಯೊಂದರಲ್ಲಿ ಪ್ರಸಾರ ಆಗುತ್ತಿದ್ದ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 3’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಟಾಪ್ 5 ಸ್ಪರ್ಧಿಗಳಲ್ಲಿ ಓರ್ವರಾಗಿದ್ದರು. ಡಾಕ್ಟರ್ ಆಗಬೇಕು ಎಂದುಕೊಂಡಿದ್ದ ಅಖಿಲಾ ಅವರು ಆಕ್ಟರ್ ಆದರು.

    ಪ್ರಸ್ತುತ ಅಣ್ಣ-ತಂಗಿ ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಅಖಿಲಾ ಪ್ರಕಾಶ್ ನಟಿಸುತ್ತಿದ್ದಾರೆ. ಅಖಿಲಾ ಎಂಗೇಜ್‌ಮೆಂಟ್ ಅಣ್ಣ ತಂಗಿ ಧಾರಾವಾಹಿ ತಂಡ ಆಗಮಿಸಿತ್ತು. ‘ರಾಜ ರಾಣಿ’ ಶೋ ಖ್ಯಾತಿಯ ಅಕ್ಷಿತಾ ರಜತ್ ಭಾಗಿಯಾಗಿ, ಹೊಸ ಜೋಡಿಗೆ ಶುಭಕೋರಿದ್ದಾರೆ.

  • ಅಣ್ಣ ತಂಗಿ ಸೀರಿಯಲ್‌ಗೆ ‘ಟಗರು’ ನಟಿ ಮಾನ್ವಿತಾ ಸಾಥ್

    ಅಣ್ಣ ತಂಗಿ ಸೀರಿಯಲ್‌ಗೆ ‘ಟಗರು’ ನಟಿ ಮಾನ್ವಿತಾ ಸಾಥ್

    ‘ಟಗರು’ (Tagaru) ಬ್ಯೂಟಿ ಮಾನ್ವಿತಾ ಹರೀಶ್ (Manvitha Harish) ಅವರು ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. ಕಿರುತೆರೆಯ ಸೀರಿಯಲ್‌ವೊಂದರಲ್ಲಿ ವಿಶೇಷ ಅತಿಥಿಯಾಗಿ ಮಾನ್ವಿತಾ ಸಾಥ್ ನೀಡಿದ್ದಾರೆ.

    ಕೆಂಡಸಂಪಿಗೆ, ಟಗರು, ಚೌಕ, ಶಿವ 143 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಮಾನ್ವಿತಾ ಗಮನ ಸೆಳೆದರು. ಮಾನ್ವಿತಾ ಅವರ ತಾಯಿ ಸುಜಾತ ಕಾಮತ್ ಏ.14ರಂದು ಕಿಡ್ನಿ ಫೆಲ್ಯೂರ್‌ನಿಂದ ನಿಧನರಾದರು. ತಾಯಿ ಅಗಲಿಕೆ ನೋವಿನ ನಡುವೆಯೇ ಮಾನ್ವಿತಾ ಕ್ಯಾಮೆರಾ ಮುಂದೆ ಬಂದಿದ್ದಾರೆ.

    ಅಮ್ಮ ಐ ಲವ್ ಯು, ಆ ದಿನಗಳು, ಆಟಗಾರ, ಚಿತ್ರಗಳ ನಿರ್ದೇಶಕ ಕೆ.ಎಮ್ ಚೈತನ್ಯ ಅವರ ನಿರ್ಮಾಣದ ‘ಅಣ್ಣ ತಂಗಿ’ (Anna Thangi) ಸೀರಿಯಲ್ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಸೀರಿಯಲ್‌ನಲ್ಲಿ ನಟಿ ಮಾನ್ವಿತಾ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರ ಎಂಟ್ರಿಯಿಂದ ಧಾರಾವಾಹಿಗೆ ಹೊಸ ಟ್ವಿಸ್ಟ್ ಕೂಡ ಸಿಗಲಿದೆ. ಈ ಬಗ್ಗೆ ನಟಿ ಮಾನ್ವಿತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ:ಮತ್ತೆ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ- ಹುಡುಗ ಯಾರು?

    ಈಗಾಗಲೇ ಲವ್ಲಿ ಸ್ಟಾರ್ ಪ್ರೇಮ್‌ಗೆ (Prem) ನಾಯಕಿಯಾಗಿ ಮಾನ್ವಿತಾ ಕಾಮತ್ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಇನ್ನೂ ನಿರ್ದೇಶನದ ಕಡೆಗೂ ಮಾನ್ವಿತಾಗೆ ಒಲವಿದೆ. ಈ ಎಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ಮಾನ್ವಿತಾ ಅಪ್‌ಡೇಟ್ ನೀಡಲಿದ್ದಾರೆ.