Tag: anna malai

  • ಅಣ್ಣಾ ಮಲೈ ಸೇರಿ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳು ಬೆಂಗ್ಳೂರಿಗೆ ವರ್ಗಾವಣೆ

    ಅಣ್ಣಾ ಮಲೈ ಸೇರಿ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳು ಬೆಂಗ್ಳೂರಿಗೆ ವರ್ಗಾವಣೆ

    ಬೆಂಗಳೂರು: ಅಲೋಕ್ ಕುಮಾರ್ ಮತ್ತು ಗಿರೀಶ್ ಅವರಂತಹ ಖಡಕ್ ಪೊಲೀಸ್ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ, ದಂಧೆಕೋರರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಸಿ ಮುಟ್ಟಿಸಿದ್ದಾರೆ. ಇದರ ಬೆನ್ನಲ್ಲೇ ಐವರು ಖಡಕ್ ಆಫೀಸರ್ ಗಳನ್ನು ವರ್ಗಾವಣೆ ಮಾಡಿದ್ದಾರೆ.

    ಭೂ ಮಾಫಿಯಾ ಮಟ್ಟ ಹಾಕಲು ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅಣ್ಣಾ ಮಲೈ ಹಾಗೂ ಪೂರ್ವ ವಿಭಾಗ ಡಿಸಿಪಿಯಾಗಿ ರಾಹುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬೆಂಗಳೂರು ವಿಭಾಗದ ಹೆಚ್ಚುವರಿ ಸಂಚಾರ ಆಯುಕ್ತರಾಗಿ ಹರಿಶೇಖರನ್, ಕೆಎಸ್‍ಆರ್‍ಪಿ 1ನೇ ಬೆಟಾಲಿಯನ್ ಕಮಾಂಡೆಂಟ್‍ಗೆ ಅಜಯ್ ಹಿಲೋರಿ ಹಾಗೂ ಚಿಕ್ಕಮಗಳೂರು ಎಸ್‍ಪಿಯಾಗಿ ಹರೀಶ್ ಪಾಂಡೆ ಅವರು ವರ್ಗಾವಣೆಯಾಗಿದ್ದಾರೆ. ಇದನ್ನು ಓದಿ: ಭೂಕಳ್ಳರನ್ನು ಮಟ್ಟ ಹಾಕಲು ಬೆಂಗ್ಳೂರಿಗೆ ಬರ್ತಿದ್ದಾರೆ ಎಸ್‍ಪಿ ಅಣ್ಣಾ ಮಲೈ

    ಈ ಮೂಲಕ ಮತ್ತೆ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಮಣೆ ಹಾಕಿ, ಕಳ್ಳರಿಗೆ ಹಾಗೂ ನಿಯಮ ಉಲ್ಲಂಘನೆ ಮಾಡುವವರಲ್ಲಿ ನಡುಕ ಹುಟ್ಟಿಸಲು ಎಚ್.ಡಿ.ಕುಮಾರಸ್ವಾಮಿ ಅವರು ತಂತ್ರ ಹೆಣೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಖುರ್ಚಿಯಿಂದ ಇಳಿಯುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪಗೆ ಶಾಕ್ !

    ಖುರ್ಚಿಯಿಂದ ಇಳಿಯುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪಗೆ ಶಾಕ್ !

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಶಾಕ್ ನೀಡಿದ್ದಾರೆ.

    ಇವತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಯಡಿಯೂರಪ್ಪ ಸರ್ಕಾರ ಮಾಡಿದ್ದ ಪೊಲೀಸ್ ಅಧಿಕಾರಿಗಳ ವರ್ಗಾವಣೆ ರದ್ದುಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ.

    ಯಡಿಯೂರಪ್ಪ ತಾವು ಸಿಎಂ ಆದ ಬಳಿಕ ಚಿಕ್ಕಮಗಳೂರಿನ ಎಸ್‍ಪಿ ಅಣ್ಣಾಮಲೈ ಅವರನ್ನು ದಿಢೀರ್ ಅಂತಾ ರಾಮನಗರಕ್ಕೆ ವರ್ಗಾವಣೆ ಮಾಡಿದ್ರು. ಇತ್ತ ಶನಿವಾರ ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವಲ್ಲಿ ವಿಫಲವಾದ ಕಾರಣ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ರು.

    ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರೈತರ ಸಾಲಮನ್ನಾ ಮಾಡುವ ಚಿಂತನೆ ನಡೆಸಿದ್ದರು. ಆದ್ರೆ ಸುಪ್ರೀಂ ಕೋರ್ಟ್ ಸಾಬೀತು ಮಾಡುವ ಮುನ್ನ ಯಡಿಯೂರಪ್ಪ ಯಾವುದೇ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಅಂತಾ ಅದೇಶಿಸಿತ್ತು.

  • ಚಿಕ್ಕಮಗಳೂರಿನಲ್ಲಿ ಕಾಡು ಬಿಟ್ಟು ನಾಡಿನಲ್ಲಿ ನಕ್ಸಲರ ಸೈಲೆಂಟ್ ಹೋರಾಟ!

    ಚಿಕ್ಕಮಗಳೂರಿನಲ್ಲಿ ಕಾಡು ಬಿಟ್ಟು ನಾಡಿನಲ್ಲಿ ನಕ್ಸಲರ ಸೈಲೆಂಟ್ ಹೋರಾಟ!

    – ಜುಲ್ಫಿಕರ್, ಶ್ರೀಧರ್ ಮೇಲೆ ಖಾಕಿ ಕಣ್ಣು

    ಚಿಕ್ಕಮಗಳೂರು: ಇತ್ತೀಚಿಗೆ ರಾಜ್ಯದ ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸುತ್ತಿದೆ ಎಂದು ಸರ್ಕಾರ ಭಾವಿಸಿತ್ತು. ಆದ್ರೆ, ಇದೀಗ ನಕ್ಸಲರು ನಗರ ಪ್ರದೇಶಗಳಲ್ಲಿಯೇ ಸಂಘಟನೆ ಮಾಡ್ತಿದ್ದಾರೆ ಅನ್ನೋ ಅಂಶ ಬೆಳಕಿಗೆ ಬಂದಿದೆ. ಇದರಿಂದ ಈಗ ಶರಣಾಗಿರುವ ನಕ್ಸಲರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದೆ.

    ಇಷ್ಟು ದಿನ ಕಾಡೊಳಗೆ ಬಂದೂಕು ಹಿಡಿದು ಹೋರಾಟ ಮಾಡ್ತಿದ್ದ ನಕ್ಸಲರು ಇದೀಗ ಹೋರಾಟದ ದಿಕ್ಕನ್ನ ಬದಲಾಯಿಸಿದ್ದಾರೆ. ಕಾಡಲ್ಲಿದ್ದು ಹೋರಾಟ ಮಾಡೋಕೆ ಸ್ಥಳೀಯರ ಸಹಕಾರ ಅಗತ್ಯ ಆದ್ರೆ ಸ್ಥಳೀಯರು ಹೋರಾಟಕ್ಕೆ ಬೆಂಬಲ ನೀಡಲ್ಲ. ಅದಕ್ಕಾಗಿ ನಾಡಲ್ಲಿದ್ದು ಹೇಗೆ ಸಂಘಟನೆ, ಹೋರಾಟ ಬಲಪಡಿಸ್ಬೇಕು ಅಂತ ಪ್ಲಾನ್ ಮಾಡ್ತಿದ್ದಾರಂತೆ.

    ಈ ಹಿಂದೆ ಶರಣಾಗಿದ್ದ ನಕ್ಸಲರಾದ ನೂರ್ ಜುಲ್ಫಿಕರ್, ಶ್ರೀಧರ್ ಮುಖ್ಯವಾಹಿನಿಗೆ ಬಂದ್ಮೇಲೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡು, ಹೋರಾಟ ಮಾಡ್ತಿದ್ದಾರೆ. ಇವರ ಸಂಘಟನೆ ಮೇಲೂ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಜೊತೆಗೆ ಜಾಮೀನು ರದ್ದುಪಡಿಸುವಂತೆ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಅಂತಾ ಚಿಕ್ಕಮಗಳೂರು ಎಸ್ಪಿ ಅಣ್ಣಾ ಮಲೈ ಹೇಳಿದ್ದಾರೆ.

    `ಅರ್ಬನ್ ಆ್ಯಕ್ಷನ್ ಟೀಂ’ ಹೆಸರಿನಲ್ಲಿ ನಕ್ಸಲರು ನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲವರು ಭೂಮಿ ಹೋರಾಟ ಸಮಿತಿ ಅಂತಾ ಹೇಳಿಕೊಂಡು ಸಂಘಟನೆಗಳನ್ನು ನಡೆಸುತ್ತಾ ಇದ್ದಾರೆ. ತೆರೆಮರೆಯಲ್ಲಿ ನಡೆಸ್ತಿದ್ದ ಹೋರಾಟ ನಾಡಿನಲ್ಲಿ ಶುರುವಾಗುತ್ತಾ ಅನ್ನೋ ಆತಂಕ ಹೆಚ್ಚಾಗಿದೆ.