Tag: Anna Bhagya scheme

  • ಜು.1 ರಿಂದ 10 ಕೆಜಿ ಉಚಿತ ಅಕ್ಕಿ ಕೊಡದಿದ್ರೆ ಹೋರಾಟ: ಸರ್ಕಾರದ ವಿರುದ್ಧ ಬೊಮ್ಮಾಯಿ ಗುಡುಗು

    ಜು.1 ರಿಂದ 10 ಕೆಜಿ ಉಚಿತ ಅಕ್ಕಿ ಕೊಡದಿದ್ರೆ ಹೋರಾಟ: ಸರ್ಕಾರದ ವಿರುದ್ಧ ಬೊಮ್ಮಾಯಿ ಗುಡುಗು

    – ಸಿಎಂ ಸಿದ್ದು ಆರೋಪಕ್ಕೆ ಬೊಮ್ಮಾಯಿ ಕೌಂಟರ್‌
    – ಎಫ್‌ಸಿಐ ಮೇಲೆ ರಾಜ್ಯ ಸರ್ಕಾರ ಅವಲಂಬನೆ ಸರಿಯಲ್ಲ
    – ನಮ್ಮ ಸರ್ಕಾರದ ಕಾಮಗಾರಿ, ಟೆಂಡರ್‌ನಂತೆ ವಿದ್ಯುತ್ ದರ ಏರಿಕೆಯನ್ನೂ ನಿಲ್ಲಿಸಲಿ

    ಬೆಂಗಳೂರು: ಜುಲೈ 1 ರಿಂದ 10 ಕೆಜಿ ಉಚಿತ ಅಕ್ಕಿ ಕೊಡದಿದ್ರೆ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ (Congress) ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಎಚ್ಚರಿಕೆ ನೀಡಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮಾಡಿದ ಆರೋಪಗಳನ್ನು ಅಲ್ಲಗಳೆದರು.

    ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ (Ranadeep Surjewala) ಗೌಪ್ಯ ಸಭೆ, ಅಕ್ಕಿ ಯೋಜನೆ ವಿಚಾರವಾಗಿ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಡ್ತಿಲ್ಲ ಅಂತ ಆರೋಪಿಸಿದ್ದಾರೆ. ಇದನ್ನು ನೋಡ್ತಿದ್ರೆ ರಾಜ್ಯ ಸರ್ಕಾರ ಅಕ್ಕಿ ಕೊಡ್ತೀವಿ ಅಂತ ಹೇಳಿ, ರಾಜ್ಯದ ಜನರಿಗೆ ಮೋಸ ಮಾಡ್ತಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ

    ರಾಜ್ಯ ಸರ್ಕಾರವು ಭಾರತೀಯ ಆಹಾರ ಆಯೋಗದ (ಎಫ್‌ಸಿಐ) ಮೇಲೆ ಅವಲಂಬನೆ ಆಗಬಾರದು. ನಾನು ಇದ್ದಾಗಲೂ ಅಧಿಕಾರಿಗಳಿಗೆ ಈ ಸೂಚನೆ ಕೊಟ್ಟಿದ್ದೆ. ಸಿದ್ದರಾಮಯ್ಯ ರಾಜಕೀಯ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ರಾಜಕೀಯ ಮಾಡ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲಿ. ಮಾತು ಕೊಟ್ಟಂತೆ ಜುಲೈ 1 ರಂದು ಅಕ್ಕಿ ಕೊಡಲಿ. ಸಮಯಕ್ಕೆ ಸರಿಯಾಗಿ ಉಚಿತ ಅಕ್ಕಿ ಕೊಡದಿದ್ರೆ, ಅಷ್ಟು ಪ್ರಮಾಣದ ಹಣ ಪಲಾನುಭವಿಗಳಿಗೆ ಕೊಡಲಿ. ಇದು ಗ್ಯಾರಂಟಿ ಅಲ್ಲ, ದೋಖಾ ಸೀರಿಸ್ ಅಂತ ಜನ ಮಾತಾಡ್ತಿದ್ದಾರೆ. ಜುಲೈ 1 ರಿಂದ ಹತ್ತು ಕೆಜಿ ಉಚಿತ ಅಕ್ಕಿ ಕೊಡದಿದ್ರೆ ಜನರನ್ನು ಸಂಘಟಿಸಿ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದರು.

    ಇನ್ನೊಂದು ಕಡೆ ತಮ್ಮ ದೋಖಾ ಮುಚ್ಚಿಕೊಳ್ಳಲು, ರೈತರಿಗೆ, ಜನರಿಗೆ ಕೊಟ್ಟ ಮಾತಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ರಾಜಕಾರಣ ಮಾಡ್ತಿದೆ. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಬಂದ ಮೇಲೆ ಎಲ್ಲರಿಗೂ ಐದು ಕೆಜಿ ಅಕ್ಕಿ ಕೊಡ್ತಾ ಬರ್ತಿದೆ. ಯಾವುದೇ ಖರ್ಚಿಲ್ಲದೇ ಐದು ಕೆಜಿ ಅಕ್ಕಿ ತಲಾ ವ್ಯಕ್ತಿಗೆ ಕೇಂದ್ರ ಕೊಡ್ತಿದೆ. ಸಾಗಣೆ ವೆಚ್ಚ, ನಿರ್ವಹಣಾ ವೆಚ್ಚಗಳನ್ನು ಕೇಂದ್ರವೇ ಭರಿಸುತ್ತಿದೆ. ಸತ್ಯ ಹೇಳಬೇಕಂದ್ರೆ ರಾಜ್ಯ ಸರ್ಕಾರ ಹತ್ತು ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು. ರಾಜ್ಯವು ಕೇಂದ್ರದ ಅಕ್ಕಿ ಸೇರಿ ಹದಿನೈದು ಕೆಜಿ ಕೊಡಬೇಕು. ಆದರೆ ಈಗ ಕೇಂದ್ರದ ಐದು ಕೆಜಿ + ಇವರ ಐದು ಕೆಜಿ ಸೇರಿಸಿ ಹತ್ತು ಕೆಜಿ ಕೊಡೋದಾಗಿ ಹೇಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಿಂಗಳಿಗೆ 2.28 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ – ಸಿಎಂ ಕಿಡಿ

    ವಿದ್ಯುತ್ ದರ ಹೆಚ್ಚಳ ಬಗ್ಗೆ ಮಾತನಾಡಿದ ಅವರು, ಮಾರ್ಚ್ 13 ರಂದು ಕೆಇಆರ್‌ಸಿ ವಿದ್ಯುತ್ ದರ ಹೆಚ್ಚಿಸಿದಾಗ ನಮ್ಮ ಸರ್ಕಾರ ಒಪ್ಪಿರಲಿಲ್ಲ. ಮೇ 12 ರಂದು ಕೆಇಆರ್‌ಸಿ ಯವರು ದರ ಹೆಚ್ಚಳದ ನೋಟಿಫಿಕೇಷನ್ ಮಾಡಿದ್ರು. ಆಗ ಚುನಾವಣಾ ನೀತಿ ಸಂಹಿತೆ ಇತ್ತು. ನೀತಿ ಸಂಹಿತೆ ಬಂದಾಗ ಯಾವ ಸರ್ಕಾರವೂ ಏನೂ ಮಾಡಲು ಬರಲ್ಲ. ನಂತರ ಜೂನ್ 2 ರಂದು ಕೆಇಆರ್‌ಸಿ ದರ ಹೆಚ್ಚಳ ಆದೇಶ ಹೊರಡಿಸಿದ್ರು. ಜೂನ್ 2ರಲ್ಲಿ ಯಾರ ಸರ್ಕಾರ ಇತ್ತು? ಈ ರಾಜ್ಯ ಸರ್ಕಾರ ಸುಳ್ಳನ್ನ ಹೇಳೋ ಮೂಲಕ ರಾಜ್ಯದ ಜನತೆ ಇಟ್ಟ ನಂಬಿಕೆ ಹುಸಿಗೊಳಿಸಿದೆ. ಇದನ್ನ ನಾನು ಖಂಡಿಸ್ತೇನೆ. ಇವರ ಸರ್ಕಾರ ಬಂದ ಮೇಲೆ ವಿದ್ಯುತ್ ದರ ಹೆಚ್ಚಳ ಆದೇಶ ಜಾರಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಅನುದಾನ ನಿಲ್ಲಿಸೋದಾಗಿ ಬಿಜೆಪಿಯವ್ರು ಹೇಳಿದ್ರು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಬೊಮ್ಮಾಯಿ ನಿರಾಕರಿಸಿದರು. ಯಾರೂ ಹಾಗೆ ಹೇಳಿರಲಿಲ್ಲ. ಜವಾಬ್ದಾರಿ ಇದ್ದವರು ಹಾಗೆ ಹೇಳಿಲ್ಲ. ನಾನು ಹೇಳಿಲ್ಲ, ನಮ್ಮ ಸಚಿವರು ಹೇಳಿಲ್ಲ ಎಂದರು. ಇದನ್ನೂ ಓದಿ: ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ಖಚಿತ, ಸಾಲ ನಿಶ್ಚಿತ, ಬೆಲೆ ಏರಿಕೆ ಖಂಡಿತ – ಸುನೀಲ್‌ ಕುಮಾರ್‌ ಲೇವಡಿ

    ನಮ್ಮ ಸರ್ಕಾರದ ಹಲವು ಕಾಮಗಾರಿ, ಟೆಂಡರ್‌ಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಈಗ ವಿದ್ಯುತ್ ದರವನ್ನೂ ಇವರ ಸರ್ಕಾರ ನಿಲ್ಲಿಸಲಿ ಅಂತ ಬೊಮ್ಮಾಯಿ ಸವಾಲು ಹಾಕಿದರು.

    ಬೆಂಗಳೂರು ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿಯಾದ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಈ ಸಂಸ್ಕೃತಿ ಇದೆ. ಹಿಂದೆ ಬೆಂಗಳೂರು ಉಸ್ತುವಾರಿ ಇದ್ದಂತಹವರು ಒಂದು ಸಭೆ ಮಾಡಿದಾಗ ಇದೇ ರೀತಿಯ ಪ್ರಶ್ನೆ ಎದ್ದಿತ್ತು. ಈ ವಿಷಯದಲ್ಲಿ ಬಹಳ ಸ್ಪಷ್ಟವಾದ ರೂಲ್ಸ್ ಇದೆ. ಸರ್ಕಾರಿ ಸಭೆಗಳಲ್ಲಿ ಇಂತಹ ವ್ಯಕ್ತಿ ಭಾಗವಹಿಸಬಾರದು ಅಂತ ನಿಯಮ ಇದೆ. ಆದರೆ ಈ ಸಭೆಯಲ್ಲಿ ಇದು ಉಲ್ಲಂಘನೆ ಆಗಿದೆ. ಬಿಬಿಎಂಪಿ ಸಭೆ ಬಗ್ಗೆ ಶಿವಕುಮಾರ್ ಏನು ಬೇಕಾದರೂ ಹೇಳಬಹುದು. ಶಿವಕುಮಾರ್ ಜೊತೆ ಸುರ್ಜೇವಾಲ ಕೂತು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿರೋದು ಸ್ಪಷ್ಟವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹಿಡಿತ ಸಾಧಿಸಲು ಹೊರಟಿದೆ ಅನ್ಸುತ್ತೆ. ಕಾಂಗ್ರೆಸ್‌ನವ್ರು ಯಾವಾಗಲೂ ಕಾನೂನು ಉಲ್ಲಂಘನೆ ಮಾಡ್ತಾರೆ. ಹೀಗಾಗಿ ಈ ಉಲ್ಲಂಘನೆ ಬಗ್ಗೆ ಡಾ. ಹೆಚ್.ಸಿ.ಮಹದೇವಪ್ಪರಿಗೆ ರೆಫರ್ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿಸಿ ಮೋಹನ್, ಎಂಎಲ್‌ಸಿ ರವಿಕುಮಾರ್ ಇದ್ದರು.

  • ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ

    ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ

    – ತೆರೆದ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯಗಳಿಗೆ ಅಕ್ಕಿ ಮಾರಾಟ ಸ್ಥಗಿತಗೊಳಿಸಿ ಕೇಂದ್ರ ಪತ್ರ

    ಬೆಂಗಳೂರು: ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡು ಕನ್ನಡಿಗರ ಪಾಲು, ಬಡವರ ಪಾಲನ್ನು ಕಸಿದುಕೊಂಡಿದೆ. ಕೇಂದ್ರ ಸರ್ಕಾರ ಕನ್ನಡಿಗರ, ಬಡವರ ವಿರೋಧಿ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಶಕ್ತಿ ಭವನದಲ್ಲಿ ಬುಧವಾರ ಅನ್ನಭಾಗ್ಯ ಯೋಜನೆಗೆ (Anna Bhagya Scheme) ಸಂಬಂಧಿಸಿದಂತೆ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಈಗಾಗಲೇ ಒಂದು ಗ್ಯಾರಂಟಿಯನ್ನು ಜಾರಿ ಮಾಡಿದ್ದು, ಜುಲೈ 1 ರಂದು ಅಂತ್ಯೋದಯ ಹಾಗೂ ಬಿಪಿಎಲ್‌ ಕಾರ್ಡುದಾರರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಮಂಡಳಿ ಉಪಪ್ರಧಾನ ವ್ಯವಸ್ಥಾಪಕರಿಗೆ 2.28 ಲಕ್ಷ ಮೆಟ್ರಿಕ್‌ ಟನ್ ಅಗತ್ಯವಿದೆ ಎಂದು ಕೋರಿ ಜೂ.9 ರಂದು ಪತ್ರ ಬರೆಯಲಾಗಿತ್ತು. ಇದಕ್ಕೆ ಜೂ.12 ರಂದು ಭಾರತೀಯ ಆಹಾರ ನಿಗಮವು ಒಪ್ಪಿಗೆ ಸೂಚಿಸಿ ಕ್ವಿಂಟಾಲ್‌ಗೆ 3,400 ರೂ. ದರದಲ್ಲಿ ಅಕ್ಕಿ ಪೂರೈಕೆ ಮಾಡವುದಾಗಿ ಪತ್ರ ಬರೆದಿತ್ತು. ಇದಾದ ನಂತರ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತಿಂಗಳಿಗೆ 2.28 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ – ಸಿಎಂ ಕಿಡಿ

    ಜೂ.13 ರಂದು ಭಾರತ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು 15 ಲಕ್ಷ ಮೆ. ಟನ್ ಗೋಧಿ ಹಾಗೂ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆಯಡಿ (ಒಎಂಎಸ್‌ಎಸ್‌ಡಿ) ಮಾರಾಟ ಮಾಡಲು ಸೂಚಿಸಿದೆ. ಅಲ್ಲದೇ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಇತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿರುವ ಪತ್ರದ ವಿವರಗಳನ್ನು ಓದಿ ಹೇಳಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರ ರಾಜಕೀಯವಾಗಿ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು.

    ಎಫ್‌ಸಿಐ ಒಪ್ಪಿಗೆ ಪತ್ರದ ಆಧಾರದ ಮೇಲೆ ಜು.1 ರಿಂದ ಜಾರಿ ಮಾಡಲಾಗುವುದು ಎಂದು ಘೋಷಿಸಿದೆವು. ಎಫ್‌ಸಿಐನ ಪ್ರಧಾನ ವ್ಯವಸ್ಥಾಪಕ ಹರೀಶ್ ಎಂಬವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ತಿಳಿಸಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸದೇ ಇರುವಂತೆ ಅಡ್ಡಿಪಡಿಸುವುದು ಇದರ ಹಿಂದಿನ ಉದ್ದೇಶ ಎಂದು ಸಿಎಂ ಆರೋಪ ಮಾಡಿದರು. ಇದನ್ನೂ ಓದಿ: ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿ ವಿವಾದ : ಕಾಂಗ್ರೆಸ್ ವಿರುದ್ಧ ಫೀಲ್ಡಿಗಿಳಿದ ವಿಪಕ್ಷಗಳು

    ಭತ್ತ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರ, ಛತ್ತೀಸ್‍ಗಢ, ಹರಿಯಾಣದವರಿಗೆ ಈಗಾಗಲೇ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಅಕ್ಕಿ ಸಂಗ್ರಹವಿಲ್ಲದಿರುವುದರಿಂದ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ನಾಳೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಛತ್ತೀಸ್‌ಗಢ ರಾಜ್ಯದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಇಂದು ಸಂಜೆಯೊಳಗೆ ಲಭಿಸಲಿದೆ. ನಾಳೆ ಸಂಜೆಯೊಳಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

    ಅಕ್ಕಿ ಇಟ್ಟುಕೊಂಡು ಕೊಡಲಾಗುವುದಿಲ್ಲ ಎಂದರೆ ಇವರನ್ನು ಬಡವರ ವಿರೋಧಿಗಳು ಎಂದು ಕರೆಯಬೇಕು. ಕೇಂದ್ರ ಸರ್ಕಾರ ಉಚಿತವಾಗಿಯೇನೂ ಅಕ್ಕಿ ನೀಡುವುದಿಲ್ಲ. ನಾವು ಹಣ ನೀಡಿ ಪಡೆಯುವುದು. ಇತರರಿಗೆ ಕೊಡುವ ರೀತಿಯಲ್ಲಿ ನಮಗೂ ಕೊಡುತ್ತಿದ್ದರು. ಆದರೆ ಈಗ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೀಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಈಗಲೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಪುನಃ ಮನವಿ ಮಾಡುವುದು ಇದ್ದೇ ಇರುತ್ತದೆ. ಆದರೆ ಈ ರೀತಿ ಮಾಡಿರುವುದರಿಂದ ಇದೊಂದು ಷಡ್ಯಂತ್ರ ಎಂದೇ ಪರಿಗಣಿಸಬೇಕಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಉಪಸ್ಥಿತರಿದ್ದರು.

  • ಆ ಒಂದು ಘಟನೆ ‘ಅನ್ನಭಾಗ್ಯ’ ಯೋಜನೆ ತರಲು ಸಿದ್ದರಾಮಯ್ಯರನ್ನ ಪ್ರೇರೇಪಿಸಿತ್ತು!

    ಆ ಒಂದು ಘಟನೆ ‘ಅನ್ನಭಾಗ್ಯ’ ಯೋಜನೆ ತರಲು ಸಿದ್ದರಾಮಯ್ಯರನ್ನ ಪ್ರೇರೇಪಿಸಿತ್ತು!

    2013 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರು (Siddaramaiah) ಅನೇಕ ಜನಪರ, ಬಡವರ ಪರ ಯೋಜನೆಗಳನ್ನು ಜಾರಿಗೆ ತಂದರು. ಬಡಜನರಿಗೆ ಹಲವು ಭಾಗ್ಯಗಳನ್ನೇ ನೀಡಿದರು. ಅದರಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ. ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯನವರು ಅಪ್ಪಟ ಹಳ್ಳಿಹೈದ. ತನ್ನ ಸುತ್ತಲಿನ ಬಡತನ, ಅನಕ್ಷರತೆ, ಶೋಷಣೆ, ಮೂಢನಂಬಿಕೆ, ಜನರ ಸಂಕಷ್ಟ, ನೋವು-ನಲಿವುಗಳನ್ನು ಕಣ್ಣಾರೆ ಕಂಡವರು. ಅವರೇ ಹೇಳಿಕೊಳ್ಳುವಂತೆ, “ಇಂಥ ದುಃಸ್ಥಿತಿಯ ವಾತಾವರಣ ನನ್ನೊಳಗೆ ನೋವು, ಸಿಟ್ಟು ಹೆಪ್ಪುಗಟ್ಟದೆ ಹೋಗಿದ್ದರೆ, ಬಹುಶಃ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ”. ಇವುಗಳೆಲ್ಲಾ ಕಣ್ಣೆದುರಿಗೆ ಬಂದಾಗ, ಈ ಸಾಮಾಜಿಕ ಸ್ಥಿತಿ ಯಾವ ತೆರನದು? ಅದರ ಫಲಾನುಭವತೆ ಯಾವ ಸ್ವರೂಪದ್ದು? ಈ ಸಾಮಾಜಿಕ ನ್ಯಾಯ ಸ್ಥಿರತೆಗೊಳಿಸುವುದು ಹೇಗೆ? ನೊಂದವರ, ಶೋಷಿತರ, ಬಡವರ ಮಡಿಲಿಗೆ ತಲುಪಿಸುವುದು ಹೇಗೆ? ಸಮಸಮಾಜ ನಿರ್ಮಾಣದ ಬಗೆಗೆ ಅವರ ಮನ ಸದಾ ತುಡಿಯುತ್ತಲೇ ಇತ್ತು.

    ಸಿದ್ದರಾಮಯ್ಯ ಅವರು ಅನ್ನಭಾಗ್ಯ (Anna Bhagya Scheme) ಯೋಜನೆ ಪ್ರಕಟಿಸಿದಾಗ ಗ್ರಾಮೀಣ ಭಾಗದ ಬಡಜನರು ಸಂತೋಷ ಪಟ್ಟರು. ಆದರೆ ಕೆಲವರು ಈ ಯೋಜನೆ ವಿರುದ್ಧ ಕುಹಕದ ಮಾತುಗಳನ್ನಾಡಿದ್ದರು. “ಜನರನ್ನು ಸೋಂಬೇರಿಗಳನ್ನಾಗಿ ಮಾಡುತ್ತೀರಿ. ಈ ಭಾಗ್ಯಗಳಿಗೆ ಹಣ ಎಲ್ಲಿಂದ ತರುತ್ತೀರಿ” ಎಂದೆಲ್ಲ ಪ್ರಶ್ನೆ ಮಾಡಿದ್ದರು. ಎಲ್ಲಾ ಕುಹಕ, ಲೇವಡಿ ಮಾತುಗಳನ್ನು ಸಹಿಸಿಕೊಂಡು ಸಿದ್ದರಾಮಯ್ಯ ತಾವು ನೀಡಿದ ಭರವಸೆಗಳಿಗೆ ಬದ್ಧರಾಗಿ ಯೋಜನೆ ಜಾರಿಗೆ ತಂದರು. ಬಹುಮುಖ್ಯವಾಗಿ ಅವರು ಅನ್ನಭಾಗ್ಯ ಜಾರಿಗೆ ತರಲು ಆ ಒಂದು ಘಟನೆ ಪ್ರಮುಖ ಕಾರಣವಾಗಿತ್ತು. ಇದನ್ನೂ ಓದಿ: ತಂದೆಗೆ ಮಗ ಡಾಕ್ಟರ್‌ ಆಗ್ಬೇಕು ಅನ್ನೋ ಆಸೆ; ಆದ್ರೆ ಸಿದ್ದು ಆಗಿದ್ದು ವಕೀಲ, ಮಾಡಿದ್ದು ರಾಜಕೀಯ

    ಅಪ್ಪಟ ಹಳ್ಳಿಹೈದ ಹುಡುಗನಾಗಿದ್ದ ಸಿದ್ದರಾಮಯ್ಯ ತನ್ನ ಸುತ್ತಮುತ್ತಲ ಜನರ ಕಷ್ಟ-ಕಾರ್ಪಣ್ಯಗಳನ್ನು ಕಣ್ಣಾರೆ ಕಂಡು ಬೆಳೆದವರು. “ಚಿಕ್ಕ ಹುಡುಗನಾಗಿದ್ದಾಗ 2 ಘಟನೆಗಳು ನನ್ನ ಜೀವನದಲ್ಲಿ ದೊಡ್ಡ ಪರಿಣಾಮ ಬೀರಿದರು. ನಮ್ಮ ಊರಿನಲ್ಲಿ ಬಹಳ ಜನರಿಗೆ ಕುಷ್ಕಿ ಜಮೀನು ಇತ್ತು. ಕೆಲವೇ ಜನರಿಗೆ ಮಾತ್ರ ತರೀ ಜಮೀನು ಇತ್ತು. ಭತ್ತ ಬೆಳೆಯುತ್ತಿದ್ದವರು ಅವರ ಮನೆಯಲ್ಲಿ ಆಗಾಗ ಅನ್ನ ಮಾಡಿಕೊಂಡು ತಿನ್ನುತ್ತಿದ್ದರು. ಕುಷ್ಕಿ ಜಮೀನು ಇದ್ದವರು, ಹಬ್ಬ-ಹರಿದಿನಗಳಲ್ಲಿ ನೆಂಟರು ಬಂದಾಗ ಮಾತ್ರ ಅನ್ನ ಮಾಡಿಕೊಂಡು ತಿನ್ನುತ್ತಿದ್ದರು. ಇವರ ಮನೆಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಕಾಯಿಲೆ ಅಥವಾ ಜ್ವರ ಬಂದರೆ, ಅನ್ನ ಮಾಡುವವರ ಮನೆ ಬಳಿ ಹೋಗಿ ಅನ್ನಕ್ಕಾಗಿ ಕಾಯುತ್ತಿದ್ದರು. ಜ್ವರ ಬಂದವರಿಗೆ, ಕಾಯಿಲೆ ಇದ್ದವರಿಗೆ ಮುದ್ದೆ ತಿನ್ನಿಸೋಕೆ ಆಗಲ್ಲ. ಆಗ ಒಂದಿಷ್ಟು ಅನ್ನಕ್ಕೆ ಬೇರೆಯವರ ಮನೆಯಲ್ಲಿ ಬೇಡುತ್ತಿದ್ದರು. ಏನಪ್ಪ ಇದು.. ಸಮಾಜದಲ್ಲಿ ಹೀಗೆಲ್ಲ ಪರಿಸ್ಥಿತಿ ಇದೆಯಲ್ಲಾ? ಮಕ್ಕಳಿಗೆ ಅನ್ನ ಕೊಡಲು ಜನ ಕಷ್ಟ ಪಡ್ತಾರಲ್ಲ ಅಂತ ಯೋಚಿಸಿದ್ದೆ. ಇಂತಹ ಸನ್ನಿವೇಶಗಳನ್ನು ಕಣ್ಣಾರೆ ಕಂಡಿದ್ದ ನಾನು ಮುಖ್ಯಮಂತ್ರಿಯಾದಾಗ, ಕರ್ನಾಟಕದಲ್ಲಿ ಯಾರು ಕೂಡ ಹಸಿದು ಮಲಗಬಾರದು. 2 ಹೊತ್ತು ಊಟ ಮಾಡಲೇಬೇಕು. ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕು ಅಂತ ಈ ಯೋಜನೆ ಜಾರಿಗೆ ತಂದೆ” ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

    ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೊದಲು ಬಿಪಿಎಲ್‌ ಕುಟುಂಬದ ಒಬ್ಬ ಸದಸ್ಯನಿಗೆ ಕನಿಷ್ಠ 4 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಗೋಧಿಯಂತೆ ಒಂದು ಕುಟುಂಬಕ್ಕೆ ಗರಿಷ್ಠ 20 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿಯನ್ನು ವಿತರಿಸಲಾಗುತ್ತಿತ್ತು. ಅನ್ನಭಾಗ್ಯ ಯೋಜನೆ ಜಾರಿಗೆ ಬಂದಾಗ, ಅರ್ಹ ಬಿಪಿಎಲ್‌ ಏಕ ಸದಸ್ಯ ಕುಟುಂಬಗಳಿಗೆ 10 ಕೆ.ಜಿ, ದ್ವಿ ಸದಸ್ಯ ಕುಟುಂಬಗಳಿಗೆ 20 ಕೆ.ಜಿ, 3 ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 30 ಕೆ.ಜಿ ಆಹಾರಧಾನ್ಯವನ್ನು ಪ್ರತಿ ಕೆ.ಜಿ.ಗೆ 1 ರೂ. ದರದಂತೆ ವಿತರಿಸಲಾಯಿತು. ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಮಾಣವನ್ನು ಕಡಿಮೆ ಮಾಡಲಾಯಿತು. ಇದನ್ನೂ ಓದಿ: ಹಳ್ಳಿಗಾಡಿನ ಜೀವನ, ದನ ಕಾಯುತ್ತಿದ್ದ ಹುಡುಗನಿಂದ ಮುಖ್ಯಮಂತ್ರಿ ಗಾದಿವರೆಗೆ; ಸಿದ್ದರಾಮಯ್ಯ ಸಾಗಿಬಂದ ಹಾದಿ..

    2023ರ ಚುನಾವಣೆ ಹೊತ್ತಿನಲ್ಲಿ ಅನ್ನಭಾಗ್ಯ ಯೋಜನೆ ಕುರಿತು ಕಾಂಗ್ರೆಸ್‌ ಮತ್ತೆ ಘೋಷಣೆ ಹೊರಡಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದರು. ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಇದು ಒಂದು ಭರವಸೆಯಾಗಿದೆ. ಅದರಂತೆ ಈಗ ಕಾಂಗ್ರೆಸ್‌ 135 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದೆಗೆ ಏರಲು ಸಿದ್ಧವಾಗಿದೆ.

  • ಅನ್ನಭಾಗ್ಯ ಕೊಡ್ತೀವಿ ಅಂತ ಸಿದ್ದರಾಮಯ್ಯ ಕನ್ನ ಹಾಕಿದ್ದಾರೆ – ಸಿಎಂ ವಾಗ್ದಾಳಿ

    ಅನ್ನಭಾಗ್ಯ ಕೊಡ್ತೀವಿ ಅಂತ ಸಿದ್ದರಾಮಯ್ಯ ಕನ್ನ ಹಾಕಿದ್ದಾರೆ – ಸಿಎಂ ವಾಗ್ದಾಳಿ

    ಶಿವಮೊಗ್ಗ: ಸಿದ್ದರಾಮಯ್ಯ (Siddaramaiah) ಅವರ ಅವಧಿಯಲ್ಲಿ ರಾಜ್ಯ ಅಧೋಗತಿಗೆ ಹೋಯಿತು. ಅನ್ನಭಾಗ್ಯ (Anna Bhagya Scheme) ಕೊಡುತ್ತೇವೆ ಎಂದು ಹೇಳಿ ಕನ್ನ ಹಾಕಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದ ಬಿಜೆಪಿ (BJP) ಜನಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಕೇವಲ ಮಾತನಾಡುತ್ತಾರೆ ಕೆಲಸ ಮಾಡೋದಿಲ್ಲ ಎಂದು ಕಾಂಗ್ರೆಸ್ ನವರು ಆರೋಪ ಮಾಡ್ತಾರೆ. ಬಿಜೆಪಿ ವಿರುದ್ಧ ಆರೋಪ ಮಾಡುವುದೇ ಅವರ ಕೆಲಸವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹೆಣ್ಮಕ್ಳು ಮನೆಯಲ್ಲಿರೋಕೆ ಲಾಯಕ್ಕು – ಚಹಾ ಅಂಗಡಿ ಬಂದ್ ಆಗಿದ್ದಕ್ಕೆ ಬಿಕ್ಕಿ, ಬಿಕ್ಕಿ ಅತ್ತ ಚಾಯ್‌ವಾಲಿ

    ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯ ಅಧೋಗತಿಗೆ ಹೋಯಿತು. ಭ್ರಷ್ಟಾಚಾರ ಅಂದ್ರೆನೇ ಕಾಂಗ್ರೆಸ್. ಎಸ್ಸಿ – ಎಸ್ಟಿ (SCST Community) ಮಕ್ಕಳ ಹಾಸಿಗೆ, ದಿಂಬಿನಲ್ಲು ಬಿಡಲಿಲ್ಲ. ಅದರಲ್ಲೂ ಹಣ ತಿಂದು ತೇಗಿದರು. ಕೆಲಸವನ್ನೇ ಮಾಡದೇ ಹಣ ಹೊಡೆದಿದ್ದಾರೆ. ಅನ್ನಭಾಗ್ಯ ಕೊಡುತ್ತೀವಿ ಅಂತೇಳಿ ಕನ್ನ ಹಾಕಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ಜನ ನಿಮ್ಮನ್ನು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಕೊಟ್ಟ ಕುದುರೆ ಸರಿಯಾಗಿ ಏರಲಿಲ್ಲ. ಜನಪರವಾದ ಕೆಲಸ ಮಾಡಲಿಲ್ಲ. ಇವರು ಅಜ್ಞಾನಿಗಳು, ಅವಿವೇಕಿಗಳು ಇಂತಹವರ ಕೈಗೆ ಅಧಿಕಾರ ಕೊಟ್ಟರೆ ಏನಾಗುತ್ತದೆ ಎಂಬುದನ್ನು ಯೋಚಿಸಬೇಕಿದೆ. ಕೇವಲ ಅಧಿಕಾರಯುತ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಅಭಿವೃದ್ಧಿ ಪರವಾದ ರಾಜಕಾರಣ ಬಿಜೆಪಿ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸಿದ್ದು ಸಿಎಂ ಅಂತಾ ಡಿಕೆಶಿ ಹೇಳಲಿ:
    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ನೀವು ಸಿಎಂ ಆಗಲು ಡಿಕೆಶಿ ಬೆಂಬಲ ಕೊಡುತ್ತಾರೋ, ಇಲ್ಲವೋ ಎಂಬುದನ್ನು ಮೊದಲು ಕೇಳಿ. ಡಿಕೆಶಿ (Dk Shivakumar) ಅವರಿಂದ ಈ ಬಗ್ಗೆ ಬಹಿರಂಗವಾಗಿ ಹೇಳಿಸಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಕ್ಕಿಕಾಳಿನ ಆಕೃತಿ ನಿರ್ಮಿಸಿ, ಅನ್ನಭಾಗ್ಯ ಸ್ಮರಿಸಿದ ಸಿದ್ದು ಅಭಿಮಾನಿ

    ಅಕ್ಕಿಕಾಳಿನ ಆಕೃತಿ ನಿರ್ಮಿಸಿ, ಅನ್ನಭಾಗ್ಯ ಸ್ಮರಿಸಿದ ಸಿದ್ದು ಅಭಿಮಾನಿ

    ಚಾಮರಾಜನಗರ: ವಿಪಕ್ಷ ನಾಯಕ ಸಿದ್ದರಾಮಯ್ಯರ ಅಮೃತಮಹೋತ್ಸವಕ್ಕೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಲಕ್ಷಾಂತರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

    ಒಂದೆಡೆ ಛಾಯಾಚಿತ್ರಗಳಲ್ಲಿ ಸಿದ್ದರಾಮಯ್ಯರ ಬದುಕು ಮತ್ತು ಸಾಧನೆ ಅನಾವರಣಗೊಳಿಸಲಾಗಿದೆ. ಕೆಲವು ಅಭಿಮಾನಿಗಳು ಎದೆಯ ಮೇಲೆ ಟ್ಯಾಟು ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ. ಈ ನಡುವೆ ಯುವ ಕಲಾವಿದನೊಬ್ಬ ಅಕ್ಕಿ ಕಾಳಿನಲ್ಲಿ ಸಿದ್ದರಾಮಯ್ಯ ಅವರ ಪುತ್ಥಳಿ ನಿರ್ಮಿಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಷ್ಟಲಿಂಗ ಪೂಜೆ ಹೇಳಿಕೊಡಲು ದೆಹಲಿಗೆ ಬನ್ನಿ ಅಂದ ರಾಹುಲ್

    ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಟಿ.ಹೊಸೂರು ಗ್ರಾಮದ ಕಲಾವಿದ ಬಿ.ಮಹೇಶ್ ತಮ್ಮ ಕೈಳಕದಿಂದ ಅಕ್ಕಿ ಕಾಳಿನಲ್ಲಿ ಸಿದ್ದರಾಮಯ್ಯರ ಆಕೃತಿ ನಿರ್ಮಿಸಿ, ಅನ್ನಭಾಗ್ಯ ಯೋಜನೆಯನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ: ಈಡಿಗ-ಬಿಲ್ಲವ ಸಮುದಾಯದ ಯುವಕರನ್ನು ಬಿಜೆಪಿ ಯೂಸ್ & ಥ್ರೋ ಮಾಡುತ್ತಿದೆ: ಪ್ರಣವಾನಂದ ಸ್ವಾಮೀಜಿ

    ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ನಂತರ ಮೊದಲು ಘೋಷಣೆ ಮಾಡಿದ ಮಹತ್ವ ಪೂರ್ಣ ಯೋಜನೆಯೇ ಅನ್ನಭಾಗ್ಯ. ಅವರ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಯೋಜನೆಯನ್ನು ನೆನಪಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸಮಾರಂಭದಲ್ಲಿ ಅಕ್ಕಿ ಕಾಳಿನ ಪ್ರತಿಮೆಯನ್ನು ಸಿದ್ದರಾಮಯ್ಯರಿಗೆ ಕೊಡಲು ಅಭಿಮಾನಿ ಮಹೇಶ್ ತೆರಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಡವರಿಗಲ್ಲ, ರೈಸ್ ಮಿಲ್‍ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ

    ಬಡವರಿಗಲ್ಲ, ರೈಸ್ ಮಿಲ್‍ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ

    ಕೋಲಾರ: ಬಡವರ ಹಸಿವು ನೀಗಿಸಲು ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಜಿಲ್ಲೆಯ ಬಂಗಾರಪೇಟೆಯ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ.

    ಮಾರಾಟವಾದ ಅಕ್ಕಿಯು ಅಕ್ರಮವಾಗಿ 15ಕ್ಕೂ ಹೆಚ್ಚು ರೈಸ್ ಮಿಲ್‍ಗಳನ್ನು ಸೇರುತ್ತಿವೆ. ಹಲವು ಬಾರಿ ದಾಳಿ ನಡೆದರೂ ದಂಧೆ ಮಾತ್ರ ನಿಂತಿಲ್ಲ. ಈ ಹಿಂದೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ 2017ರಲ್ಲಿ ಟನ್‍ಗಟ್ಟಲೆ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದರು. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ

    ಕಳೆದ ವರ್ಷ ಪಿಆರ್‍ಎಸ್ ಆಗ್ರೋಟೆಕ್ ರೈಸ್ ಮಿಲ್ ಮೇಲೆ ದಾಳಿ ಮಾಡಿ, ಸುಮಾರು 8,497 ಕ್ವಿಂಟಾಲ್‍ನಷ್ಟು ಅಂದರೆ 1 ಕೋಟಿ 7 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿಯನ್ನು ಹರಾಜು ಮಾಡಿದ್ದರು. ಕೋರ್ಟ್ ಆದೇಶದಂತೆ ಕೆಲ ರೈಸ್‍ಮಿಲ್‍ಗಳಿಗೆ ಬೀಗ ಹಾಕಲಾಗಿದೆ. ಆದರೂ ಕೆಲ ಮಿಲ್ ಮಾಲೀಕರು ಭಯಪಡದೇ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿ ಮಾಡುತ್ತಿದ್ದಾರೆ.  ಇದನ್ನೂ ಓದಿ: ಮಂಗಳೂರು ದರ್ಗಾ ವಿವಾದ – ಇಂದು ತಾಂಬೂಲ ಪ್ರಶ್ನೆ, ಪೊಲೀಸ್‌ ಬಂದೋಬಸ್ತ್‌

    ಬಂಗಾರಪೇಟೆ ತಾಲೂಕಿನಲ್ಲಿ 14 ರೈಸ್ ಮಿಲ್‍ಗಳಿದ್ದು, 3 ಮಿಲ್‍ಗಳು ಸ್ಟಾಪ್ ಆಗಿವೆ. ಉಳಿದಂತೆ ಬಹುತೇಕ ಮಿಲ್‍ಗಳಲ್ಲಿ ಸರ್ಕಾರ ಬಡವರಿಗೆ ಕೊಡುವ ಅಕ್ಕಿಯೇ ಸಿಗುತ್ತಿದೆ. ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಮಾತ್ರ ಎಂದಿನಿಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಕಡಿವಾಣ ಹಾಕ್ತೀವಿ ಎಂದು ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ.

  • ದೋಸ್ತಿ ಸರ್ಕಾರದಲ್ಲಿ ‘ಕೆಜಿ’ ಲೆಕ್ಕದಲ್ಲಿ ಜಗಳ

    ದೋಸ್ತಿ ಸರ್ಕಾರದಲ್ಲಿ ‘ಕೆಜಿ’ ಲೆಕ್ಕದಲ್ಲಿ ಜಗಳ

    ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಹೆಚ್ಚಳ ಕುರಿತು ಇಂದು ಕ್ಯಾಬಿನೆಟ್‍ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜಮೀರ್ ಮಧ್ಯೆ ಕಾವೇರಿದ ಚರ್ಚೆ ನಡೆದಿದೆ ಎನ್ನುವ ವಿಚಾರಗಳ ಮೂಲಗಳಿಂದ ತಿಳಿದು ಬಂದಿದೆ.

    ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ ಮಾತ್ರ ಅಕ್ಕಿ ವಿತರಣೆ ಮಾಡಿದರೆ ಒಳಿತು ಎಂದು ಸಿಎಂ ಕುಮಾರಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಎಂ ಅವರ ಈ ಅಕ್ಕಿ ಪ್ರಮಾಣ ಇಳಿಕೆ ಪ್ರಸ್ತಾಪಕ್ಕೆ ಸಚಿವ ಜಮೀರ್ ಅಹಮದ್ ವಿರೋಧ ವ್ಯಕ್ತಪಡಿಸಿದರು.

    ಯೋಜನೆಯ ಅಡಿ ವಿತರಣೆ ಮಾಡುವ ಅಕ್ಕಿಯನ್ನು 10 ಕೆಜಿಗೆ ಏರಿಸಲು ಸಾಧ್ಯವಾಗದಿದ್ದರೆ ಪರವಾಗಿಲ್ಲ. ಆದರೆ 5 ಕೆಜಿಗೆ ಇಳಿಸುವುದು ಬೇಡ. ಕೇಂದ್ರ ಸರ್ಕಾರವೇ 5 ಕೆಜಿ ಅಕ್ಕಿಯನ್ನ ನೀಡುತ್ತಿದ್ದು, 7 ರಿಂದ 5 ಕೆಜೆ ಅಕ್ಕಿಗೆ ಇಳಿಸಿದರೆ ರಾಜ್ಯ ಸರ್ಕಾರ ಏನು ಕೊಟ್ಟ ಹಾಗೆ ಆಗುತ್ತದೆ ಎಂದು ಜಮೀರ್ ಅಹಮದ್ ಪ್ರಶ್ನೆ ಮಾಡಿದ್ದಾರೆ.

    ಈ ವೇಳೆ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆ 7 ಕೆಜಿ ಅಕ್ಕಿಯಿಂದ 10 ಕೆಜಿ ಅಕ್ಕಿಗೆ ಏರಿಕೆ ಮಾಡದೆ, 7 ಕೆಜಿ ಅಕ್ಕಿಯನ್ನೇ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

  • ಯೋಜನೆ ರಾಜ್ಯದಲ್ಲ, ಅನ್ನಭಾಗ್ಯಕ್ಕೆ ‘ಪ್ರಧಾನಮಂತ್ರಿ ಅನ್ನಭಾಗ್ಯ ಯೋಜನೆ’ ಹೆಸರಿಡಬೇಕು: ಬಿಎಸ್‍ವೈ

    ಯೋಜನೆ ರಾಜ್ಯದಲ್ಲ, ಅನ್ನಭಾಗ್ಯಕ್ಕೆ ‘ಪ್ರಧಾನಮಂತ್ರಿ ಅನ್ನಭಾಗ್ಯ ಯೋಜನೆ’ ಹೆಸರಿಡಬೇಕು: ಬಿಎಸ್‍ವೈ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಜನರಿಗೆ ಒಳ್ಳೆದಾಗಲಿ ಅಂತ ಅಕ್ಕಿ, ಹಣ್ಣು ಹಂಪಲು ವಿತರಣೆ ಮಾಡ್ತಿದ್ದೀವಿ ಇದರಲ್ಲಿ ಯಾವುದೇ ಪ್ರಚಾರದ ಗಿಮಿಕ್ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ನಮ್ಮದು ಅನ್ನೋ ಸಿಎಂ ಸಿದ್ದರಾಮಯ್ಯ ಹೇಳಿಕೆ ಅನ್ನಭಾಗ್ಯ ಅಕ್ಕಿ ಸಿದ್ದರಾಮಯ್ಯನವರ ಕೊಡುಗೆ ಅಲ್ಲ. ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಕೇಂದ್ರದ ಅನುದಾನ ಪಡೆದು ನಮ್ಮ ಯೋಜನೆ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ಕೇಂದ್ರದ ಅನುದಾನ ನೀಡ್ತಿರೋದ್ರಿಂದ ಇದಕ್ಕೆ ‘ಪ್ರಧಾನಮಂತ್ರಿ ಅನ್ನಭಾಗ್ಯ ಯೋಜನೆ’ ಅಂತ ಹೆಸರಿಡಬೇಕು ಅಂತ ಆಗ್ರಹಿಸಿದ್ರು.

    ಅನ್ನಭಾಗ್ಯದ ಅಕ್ಕಿ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಕಾಳ ಸಂತೆಯಲ್ಲಿ ಮಾರಾಟವಾಗ್ತಿದೆ. ಹಣ ಲೂಟಿ ಹೊಡೆಯಲಾಗ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಇದೆಲ್ಲವನ್ನು ಸರಿ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸ್ಲಂ ನಿವಾಸಿಗಳಿಗೆ ಯಡಿಯೂರಪ್ಪ ಅವರು ಅಕ್ಕಿ ವಿತರಣೆ ಮಾಡಿದರು. ಅಲ್ಲದೇ ನಗರದ ಎಲ್.ಆರ್.ಕಾಲೋನಿಗೆ ತೆರಳಿದ ಅಲ್ಲಿನೂ ಸಹ ಮಳೆಯಿಂದ ಹಾನಿಯಾದ ಕುಟುಂಬಗಳಿಗೆ ಅಕ್ಕಿ ವಿತರಣೆ ಮಾಡಿದರು. ಇದಕ್ಕೆ ಯಡಿಯೂರಪ್ಪ ಅವರ ಜೊತೆ ಸಂಸದ ಪಿಸಿ ಮೋಹನ್ ಅವರು ಸಾಥ್ ನೀಡಿದರು.

    ಬಿಜೆಪಿ ಕಚೇರಿಯಲ್ಲಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಬಿಎಸ್‍ವೈ, ಇವತ್ತು ಹೈದ್ರಾಬಾದ್ ಕಾರ್ನಾಟಕ ವಿಮೋಚನಾ ದಿನವಾಗಿದೆ. ನಾನು ಸಿಎಂ ಅಗಿದ್ದಾಗ ಅಲ್ಲಿ ಹೋಗಿ ಬರುತ್ತಿದ್ದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಶುರುವಾಗಿವೆ. ಕೇಂದ್ರದ ಇಬ್ಬರು ಸಚಿವರನ್ನ ರಾಜ್ಯದ ಉಸ್ತುವಾರಿಗೆ ಕೊಟ್ಟಿದ್ದಾರೆ. ಹಾಗಾಗಿ ನಮ್ಮೆಲ್ಲರ ಶ್ರಮದಿಂದ ಕನಿಷ್ಠ 150 ಸೀಟು ಗೆಲ್ಲುವಂತೆ ಆಗಬೇಕು ಎಂದರು.

    ದೈವ ಬಲ, ಜನ ಬಲ ಇದ್ದಾಗ ನಾವು ಅಧಿಕಾರಕ್ಕೆ ಬರೋದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈ ರಾಜ್ಯ ಸರ್ಕಾರದ ಸಚಿವರು ಲೂಟಿಯಲ್ಲಿ ತೊಡಗಿದ್ದಾರೆ. ಶೀಘ್ರದಲ್ಲೇ ಭ್ರಷ್ಟ ಸಚಿವರ ವಿರುದ್ಧ ಆರೋಪ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಯಡಿಯೂರಪ್ಪ ಹೇಳಿದರು.

    ಮೋದಿ ಅವರು ನದಿ ಜೋಡಣೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ರೈತನಿಗೂ ನೀರು ಸಿಗುವಂತಾಗಬೇಕು ಎಂಬ ಯೋಜನೆಗಳನ್ನ ಹಾಕಿಕೊಳ್ಳುತ್ತಿದ್ದಾರೆ. ಅವರ ಜನಪ್ರಿಯ ಯೋಜನೆಗಳು ಮನೆ ಮನೆಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.