Tag: anna bhagya

  • ಅನ್ನಭಾಗ್ಯದ ಅಕ್ಕಿ ಬೇಕಂದ್ರೆ ಕೊಡ್ಬೇಕು 250 ರೂ. – ಚಿಲ್ಲರೆ ಹಣಕ್ಕೆ ಏನಾದ್ರೂ ತಗೊಂಡರಷ್ಟೇ ಉಚಿತ ಅಕ್ಕಿ

    ಅನ್ನಭಾಗ್ಯದ ಅಕ್ಕಿ ಬೇಕಂದ್ರೆ ಕೊಡ್ಬೇಕು 250 ರೂ. – ಚಿಲ್ಲರೆ ಹಣಕ್ಕೆ ಏನಾದ್ರೂ ತಗೊಂಡರಷ್ಟೇ ಉಚಿತ ಅಕ್ಕಿ

    – ಶಿವಾನಂದನಗರದ ನ್ಯಾಯಬೆಲೆ ಅಂಗಡಿಯಲ್ಲಿ ಘಟನೆ

    ಬೆಂಗಳೂರು: ರಾಜ್ಯ ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಅಕ್ಕಿ ತೆಗೆದುಕೊಳ್ಳಲು 250 ರೂ. ಕೊಡಬೇಕು. ಇಲ್ಲ ಅಂದ್ರೆ ಅಕ್ಕಿ ಕೊಡಲ್ಲ ಎಂದು ನ್ಯಾಯಬೆಲೆ ಅಂಗಡಿಯೊಂದರಲ್ಲಿ ಜನರ ಮೇಲೆ ದರ್ಪ ತೋರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರು ಜಿಲ್ಲೆಯ ಉತ್ತರ ತಾಲೂಕಿನ ಶಿವಾನಂದ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ಅದರ ಸನ್ನದುದಾರರು ತಾವು ಮಾಡಿದ್ದೇ ರೂಲ್ಸ್ ಎಂಬಂತೆ ವರ್ತಿಸಿದ್ದಾರೆ. ಅಕ್ಕಿ ಕೇಳಿದ ಜನರ ಮೇಲೆ ಕೂಗಾಗಿದ್ದಾರೆ. ಇದನ್ನು ಜನರು ವೀಡಿಯೋ ಮಾಡಿಕೊಂಡು ಹರಿಬಿಟ್ಟಿದ್ದಾರೆ.

    ಸರ್ಕಾರ ಉಚಿತವಾಗಿ ನೀಡುವ ಅಕ್ಕಿ ಜೊತೆಗೆ ನ್ಯಾಯಬೆಲೆ ಅಂಗಡಿಯವರು ಕೊಡುವ ಚಿಲ್ಲರೆ ಐಟಂ ತೆಗೆದುಕೊಳ್ಳಲೇಬೇಕು. ಅದಕ್ಕೆ 250 ರೂಪಾಯಿ ನೀಡಬೇಕು. ಇಲ್ಲ ಅಂದರೆ ರೇಷನ್ ಕೊಡಲ್ಲ. ಇದನ್ನು ಯಾರಾದರು ಪ್ರಶ್ನೆ ಮಾಡಿದರೆ ಮುಗೀತು. ಪ್ರಶ್ನಿಸಿದ ಪಡಿತರ ಚೀಟಿದಾರರ ಮೇಲೆ ಸನ್ನದುದಾರ ದರ್ಪ ತೋರಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ಪಡಿತರ ಚೀಟಿದಾರ: ನಾವ್ಯಾಕೆ 250 ರೂಪಾಯಿ ಕೊಡಬೇಕು..?
    ರೇಷನ್ ಅಂಗಡಿಯವನು: ಬೇಕಂದ್ರೆ ತಗೊಳ್ಳಿ.. ಬೇಡ ಅಂದ್ರೆ ಹೋಗ್ತಾ ಇರಿ.. ಅವರೆಲ್ಲಾ ಬೆಳಗ್ಗೆಯಿಂದ ನಿಂತಿಲ್ವಾ..?
    ಪಡಿತರ ಚೀಟಿದಾರ: ಈಚೆಗೆ ಹೋಗೋದು ಗೊತ್ತು.
    ರೇಷನ್ ಅಂಗಡಿಯವನು: ಹೇ ಹೋಗೋ… (ಆಡಿಯೋ ಮ್ಯೂಡಿ ಮಾಡಿ) ಏನಕ್ಕೆ ವಿಡಿಯೋ ಮಾಡ್ತಿಯಾ, ಇಳ್ಸೋ..
    ಪಡಿತರ ಚೀಟಿದಾರ: ಏನಕ್ಕೆ ನಿಲ್ಲಿಸಬೇಕು..
    ರೇಷನ್ ಅಂಗಡಿಯವನು: ಅಂಗಡಿ ನಮ್ದೋ.. ತಗೋಳಂಗಿದ್ರೆ ತಗೋ.. ಇಲ್ಲ ಏನ್ ಮಾಡ್ತಿಯಾ ಮಾಡೋ..
    ಪಡಿತರ ಚೀಟಿದಾರ: ನಮಗೆ ಬೇಡ ಅಂತಿಲ್ವಾ, ಗೌರ್ಮೆಂಟ್ ಏನ್ ಕೊಟ್ಟಿದೆಯೋ ಕೊಡಿ…
    ರೇಷನ್ ಅಂಗಡಿಯವ: ಅದು ಎಲ್ಲಿ ಹಾಕ್ತಿಯೋ ಹಾಕ್ಕೋ ಹೋಗು.. 250 ರೂ.ಗೆ ತಗೋ ಅಂದಿದ್ದು.

    ಪೀಣ್ಯ ಅಂದ್ರಳ್ಳಿ ಭಾಗದಲ್ಲಿ ಬರುವ ಶಿವನಾಂದನಗರದ ರೇಷನ್ ಅಂಗಡಿಯ ಮಾಲೀಕ ಕಾಳೇಗೌಡ ಅಂತ. ಮೊದಲು ಐಟಮ್ ತಗೋತ್ತಾರೆ. ಆಮೇಲೆ 200 ಕೊಡಿ ಅಂತಾರೆ. ಇಷ್ಟು ತಿಂಗಳು 200 ರೂಪಾಯಿ ತಗೊಂಡು ಅದಕ್ಕೆ ಬೇಡದೇ ಇರೋ ಸೋಪು, ಉಪ್ಪು, ಗೋಧಿಹಿಟ್ಟು ಕೊಡ್ತಾರೆ. ಹಣ ಕೊಡಲ್ಲ ಅಂದ್ರೆ ಸರ್ಕಾರದ ಉಚಿತ ರೇಷನ್ ಕೂಡ ಇಲ್ಲ ಅಂತಾರೆ. ಈ ತಿಂಗಳಿಂದ 250 ರೂ. ಕೊಡಬೇಕಂತಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ರೆ ಕೈ ಮಾಡಲು ಬರ್ತಾರೆ ಅಂತ ತಮ್ಮ ಅಸಹಾಯಕತೆಯನ್ನು ಪಡಿತರ ಚೀಟಿದಾರ ಹೇಳಿಕೊಂಡಿದ್ದಾರೆ.

  • ವಿದೇಶಕ್ಕೆ ಅನ್ನಭಾಗ್ಯ ಅಕ್ಕಿ ಸಾಗಣೆ; ವಾಹನಗಳಿಗೆ GPS ಟ್ರ್ಯಾಕರ್, ಗೋದಾಮುಗಳಿಗೆ ಸಿಸಿಟಿವಿ ಅಳವಡಿಕೆಗೆ ಸಿಎಂ ಸೂಚನೆ

    ವಿದೇಶಕ್ಕೆ ಅನ್ನಭಾಗ್ಯ ಅಕ್ಕಿ ಸಾಗಣೆ; ವಾಹನಗಳಿಗೆ GPS ಟ್ರ್ಯಾಕರ್, ಗೋದಾಮುಗಳಿಗೆ ಸಿಸಿಟಿವಿ ಅಳವಡಿಕೆಗೆ ಸಿಎಂ ಸೂಚನೆ

    ಬೆಂಗಳೂರು: ಅನರ್ಹ ಬಿಪಿಎಲ್ ಕಾರ್ಡ್‌ಗಳ ಆಪರೇಷನ್‌ಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಮುನಿಯಪ್ಪ, ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ ಸಾಗಾಣೆ ಪ್ರಕರಣದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಆಹಾರ ಧಾನ್ಯಗಳ ಸರಬರಾಜು ವಾಹನಗಳಿಗೆ ಜಿಪಿಎಸ್ ಟ್ರ‍್ಯಾಕರ್, ಗೋದಮುಗಳಿಗೆ ಸಿಸಿಟಿವಿ ಕಡ್ಡಾಯ ಅಳವಡಿಕೆಗೆ ಸಿಎಂ ಆದೇಶಿಸಿದ್ದಾರೆ.

    ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದರೆ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಅಂದಹಾಗೆ ಈಗಾಗಲೇ ಗುರುತಿಸಲಾಗಿರುವ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರ ಪೈಕಿ 3,65,614 ಪಡಿತರ ಚೀಟಿಗಳನ್ನು ರದ್ದು/ವರ್ಗ ಬದಲಾವಣೆ ಮಾಡಲಾಗಿದೆ.

  • ಅನ್ನ ಭಾಗ್ಯ | 260 ಕೋಟಿ ಬಾಡಿಗೆ ಬಾಕಿ – ಇಂದಿನಿಂದ ಸಾಗಾಣಿಕೆ ಬಂದ್‌

    ಅನ್ನ ಭಾಗ್ಯ | 260 ಕೋಟಿ ಬಾಡಿಗೆ ಬಾಕಿ – ಇಂದಿನಿಂದ ಸಾಗಾಣಿಕೆ ಬಂದ್‌

    – ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ  ಲಾರಿ ಮಾಲೀಕರು

    ಬೆಂಗಳೂರು: ಸರ್ಕಾರದ ಅನ್ನಭಾಗ್ಯ ಗ್ಯಾರಂಟಿ ಯೋಜನೆಗೆ ಮತ್ತೊಂದು ವಿಘ್ನ ಎದುರಾಗಿದೆ. ಬಾಡಿಗೆ ನೀಡದ ಸರ್ಕಾರದ ವಿರುದ್ದ ಲಾರಿ ಚಾಲಕರು ಮತ್ತು ಮಾಲೀಕರು ಆಕ್ರೋಶ ಹೊರಹಾಕಿ ಆಹಾರ ಧಾನ್ಯ ಸಾಗಾಣಿಕೆಯನ್ನು ಇಂದಿನಿಂದ ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

    ಫೆಬ್ರವರಿಯಿಂದ ಮೇ ತಿಂಗಳವರೆಗೆ ಸರ್ಕಾರ ಬಾಕಿ ಮೊತ್ತ ಪಾವತಿಸಿಲ್ಲ. ಬಾಕಿ ಹಣ ಪಾವತಿಯಾಗುವವರೆಗೆ ಅನ್ನಭಾಗ್ಯದ ಅಕ್ಕಿ ಸರಬರಾಜು ಮಾಡುವುದಿಲ್ಲ. ಹಣ ಪಾವತಿಯಾಗದ ಕಾರಣ ಮೂರರಿಂದ ನಾಲ್ಕು ಸಾವಿರ ಲಾರಿ ಮಾಲೀಕರು ಕಂ ಚಾಲಕರು ಸಂಕಷ್ಟದಲ್ಲಿದ್ದಾರೆ. ಮುಷ್ಕರದಿಂದ ಯಶವಂತ‌ಪುರ ಎಂಪಿಎಂಸಿ, ಚಾಮರಾಜಪೇಟೆ ಲಾರಿ ಸ್ಟ್ಯಾಂಡ್‌ ಬಳಿ‌ ಲಾರಿಗಳು ನಿಂತಲ್ಲೇ ನಿಂತಿವೆ. ಇದನ್ನೂ ಓದಿ: ಮಾಟ ಮಾಡ್ತಾರೆ ಅಂತ ಒಂದೇ ಕುಟುಂಬದ ಐವರನ್ನು ಜೀವಂತವಾಗಿ ಸುಟ್ಟು ಹತ್ಯೆ

     

    ಸರ್ಕಾರ ಅನ್ನಭಾಗ್ಯ ಅಕ್ಕಿ ಸಾಗಣೆಯ ಸುಮಾರು 260 ಕೋಟಿ ರೂ. ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘ ಇಂದಿನಿಂದ ಬಂದ್‌ಗೆ ಕರೆ ನೀಡಿವೆ ಎಂದು ಲಾರಿ‌ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ

    ಬಾಡಿಗೆ ನೀಡದ ಕಾರಣ ಇಪಿಎಫ್, ಇಎಸ್ಐ ಕಟ್ಟಿಲ್ಲ. ಸರ್ಕಾರದ ಜೊತೆಗೆ ಅಧಿಕಾರಿಗಳೇ ಓಡಿಸಿಕೊಳ್ಳಲಿ. ಸಾಗಾಣಿಕೆ ಟೆಂಡರ್‌ಗಳಲ್ಲಿ ಭಾಗವಹಿಸುವಾಗ ನೀಡಿದ್ದ ಇಎಂಡಿ ಮೊತ್ತವನ್ನು ಬ್ಯಾಂಕ್ ಗ್ಯಾರಂಟಿ ನೀಡಿದ ನಂತರವೂ ಗುತ್ತಿಗೆದಾರರಿಗೆ ಮರುಪಾವತಿ ಮಾಡಿಲ್ಲ. ಆಯ್ಕೆಯಾಗದ ಬಿಡ್‌ದಾರರಿಗೂ ಇಎಂಡಿ ಹಣ ಹಿಂತಿರುಗಿಸಿಲ್ಲ. ಒಂದು ದಿನ ತೆರಿಗೆ ಕಟ್ಟದೇ ಇದ್ದರೆ ದಂಡ ವಿಧಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

  • ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊಡೆತ – ಶೀಘ್ರದಲ್ಲೇ ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು?

    ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊಡೆತ – ಶೀಘ್ರದಲ್ಲೇ ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು?

    ಬೆಂಗಳೂರು: ಬಿಪಿಎಲ್ ಕಾರ್ಡ್‌ಗಳ (BPL Card) ವಿತರಣೆಯಲ್ಲಿ ಭಾರೀ ಎಡವಟ್ಟಾಗಿದೆ. ಬಡವರಿಗೆ ಹಂಚಬೇಕಾದ ಕಾರ್ಡ್‌ಗಳು ಉಳ್ಳವರಿಗೇ ಹೆಚ್ಚು ಹಂಚಿಕೆ ಆಗಿದೆ ಅನ್ನೋ ಸತ್ಯ ಬಯಲಾಗಿದೆ.

    ಬಡವರಿಗಿಂತಲೂ ಬಡತನ ರೇಖೆಗಿಂತ ಮೇಲಿದ್ದವರಿಗೆ ಹೆಚ್ಚಿನ ಪ್ರಮಾಣದ ಕಾರ್ಡ್‌ಗಳನ್ನು ಪಡೆದಿದ್ದಾರೆ. ಬಡತನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಹಂಚಿಕೆ ಆಗಿವೆ. ಜಿಲ್ಲಾವಾರು ಬಡವರ ಸಂಖ್ಯೆಗಿಂತಲೂ ಹತ್ತಾರು ಪಟ್ಟು ಹೆಚ್ಚು ಕಾರ್ಡ್‌ಗಳ ಹಂಚಿಕೆ ಆಗಿದೆ. ಯಾವ ಜಿಲ್ಲೆಗಳಲ್ಲಿ ಬಡತನ ಪ್ರಮಾಣ ಶೇ.1 ರಿಂದ 5 ಇದೆಯೋ ಅಲ್ಲೇ 80% ಗಿಂತಲೂ ಅಧಿಕ ಬಿಪಿಎಲ್ ಕಾರ್ಡ್ ಹಂಚಿಕೆ ಆಗಿದೆ. ಅನರ್ಹರ ಬಳಿ ಬಿಪಿಎಲ್ ಕಾರ್ಡ್‌ಗಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಹೀಗಾಗಿ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಅಭಿಯಾನಕ್ಕೆ ನಿರ್ಧಾರ ಕೈಗೊಂಡಿದೆ. ಗ್ಯಾರಂಟಿಗಳ ಪರಿಶೀಲನೆ ನೆಪದಲ್ಲಿ ಪಂಚಾಯಿತಿ ಮಟ್ಟದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನ ನಡೆಸಲಿದೆ ಎಂದು ಉನ್ನತ ಮೂಲಗಳು ʻಪಬ್ಲಿಕ್‌ ಟಿವಿʼಗೆ ತಿಳಿಸಿವೆ.

    ಅಂಕಿ ಅಂಶ
    ಮಂಡ್ಯ
    ಜನಸಂಖ್ಯೆ – 16.92 ಲಕ್ಷ
    ಬಿಪಿಎಲ್ ಕಾರ್ಡ್-15.33 ಲಕ್ಷ (90.6%)
    ಬಡತನ ಪ್ರಮಾಣ-2.47%

    ರಾಮನಗರ
    ಜನಸಂಖ್ಯೆ – 10.49 ಲಕ್ಷ
    ಬಿಪಿಎಲ್ ಕಾರ್ಡ್-9.29 ಲಕ್ಷ (88.6%)
    ಬಡತನ ಪ್ರಮಾಣ- 0.88%

    ಹಾಸನ
    ಜನಸಂಖ್ಯೆ – 16.82 ಲಕ್ಷ
    ಬಿಪಿಎಲ್ ಕಾರ್ಡ್- 14.61 ಲಕ್ಷ (86.9%)
    ಬಡತನ ಪ್ರಮಾಣ- 2.43%

    ಚಾಮರಾಜನಗರ
    ಜನಸಂಖ್ಯೆ – 9.97 ಲಕ್ಷ
    ಬಿಪಿಎಲ್ ಕಾರ್ಡ್- 8.66 ಲಕ್ಷ(86.8%)
    ಬಡತನ ಪ್ರಮಾಣ- 5.15%

    ತುಮಕೂರು
    ಜನಸಂಖ್ಯೆ – 25.51 ಲಕ್ಷ
    ಬಿಪಿಎಲ್ ಕಾರ್ಡ್- 21.88 ಲಕ್ಷ(85.6%)
    ಬಡತನ ಪ್ರಮಾಣ- 4.69%

    ಹಾವೇರಿ
    ಜನಸಂಖ್ಯೆ – 16.63 ಲಕ್ಷ
    ಬಿಪಿಎಲ್ ಕಾರ್ಡ್- 14.05 ಲಕ್ಷ(84.5%)
    ಬಡತನ ಪ್ರಮಾಣ- 11.38%

    ಚಿಕ್ಕಮಗಳೂರು
    ಜನಸಂಖ್ಯೆ – 10.31 ಲಕ್ಷ
    ಬಿಪಿಎಲ್ ಕಾರ್ಡ್- 8.41 ಲಕ್ಷ(81.6%)
    ಬಡತನ ಪ್ರಮಾಣ- 3.74%

    ಚಿತ್ರದುರ್ಗ
    ಜನಸಂಖ್ಯೆ – 16.94 ಲಕ್ಷ
    ಬಿಪಿಎಲ್ ಕಾರ್ಡ್- 13.77 ಲಕ್ಷ(81.3%)
    ಬಡತನ ಪ್ರಮಾಣ- 5.84

    ಚಿಕ್ಕಬಳ್ಳಾಪುರ
    ಜನಸಂಖ್ಯೆ – 12.79 ಲಕ್ಷ
    ಬಿಪಿಎಲ್ ಕಾರ್ಡ್- 10.17 ಲಕ್ಷ(79.5%)
    ಬಡತನ ಪ್ರಮಾಣ- 3.39%

    ದಾವಣಗೆರೆ
    ಜನಸಂಖ್ಯೆ – 16.50 ಲಕ್ಷ
    ಬಿಪಿಎಲ್ ಕಾರ್ಡ್- 13/03 ಲಕ್ಷ(79%)
    ಬಡತನ ಪ್ರಮಾಣ 5.95%

  • ಅನ್ನಭಾಗ್ಯ ಯೋಜನೆ ಅಡಿ ಇನ್ಮುಂದೆ ಹಣದ ಬದಲು 10 ಕೆಜಿ ಅಕ್ಕಿ – ಸಚಿವ ಮುನಿಯಪ್ಪ

    ಅನ್ನಭಾಗ್ಯ ಯೋಜನೆ ಅಡಿ ಇನ್ಮುಂದೆ ಹಣದ ಬದಲು 10 ಕೆಜಿ ಅಕ್ಕಿ – ಸಚಿವ ಮುನಿಯಪ್ಪ

    – ಹಣದ ಬದಲು ಅಕ್ಕಿ ಕೊಟ್ಟರೆ ಯೋಜನೆ ಖರ್ಚು ವೆಚ್ಚ ಎಷ್ಟು?

    ಬೆಂಗಳೂರು: ಅನ್ನಭಾಗ್ಯ ಯೋಜನೆ (Anna Bhagya Scheme) ಅಡಿ ಇನ್ನು ಮುಂದೆ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಸಿಗಲಿದೆ. ಇಷ್ಟು ದಿನ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ. ಕೊಡ್ತಿದ್ದ ಸರ್ಕಾರ ಇನ್ನು ಮುಂದೆ ಹಣದ ಬದಲಾಗಿ 10 ಕೆಜಿ ಅಕ್ಕಿಯೇ ನೀಡಲಿದೆ ಅಂತ ಆಹಾರ ಸಚಿವ ಮುನಿಯಪ್ಪ (KH Muniyappa) ತಿಳಿಸಿದ್ದಾರೆ. ಈ ತಿಂಗಳಿಂದಲೇ 10 ಕೆಜಿ ಅಕ್ಕಿ ಹಂಚಿಕೆಯಾಗಲಿದೆ.

    ವಿಧಾನಸೌಧದಲ್ಲಿ (Vidhana Soudha) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಇಷ್ಟು ದಿನ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಒಪ್ಪದೇ ಇರೋದ್ರೀಂದ 5 ಕೆಜಿ ಅಕ್ಕಿ ಮತ್ತು 5 ಕೆಜಿಗೆ ಹಣ ಕೊಡ್ತಿದ್ವಿ. ಈಗ ಕೇಂದ್ರ ಸರ್ಕಾರ 22.50 ರೂಪಾಯಿ ಕಡಿಮೆ ಬೆಲೆಯಲ್ಲಿ ಅಕ್ಕಿ ಕೊಡಲು ‌ಒಪ್ಪಿದೆ. ಹೀಗಾಗಿ ಇನ್ನು ಮುಂದೆ 10 ಕೆಜಿ ಅಕ್ಕಿ ಕೊಡೋದಾಗಿ ಸ್ಪಷ್ಟಪಡಿಸಿದರು.

    ನಮಗೆ ಪ್ರತಿ ತಿಂಗಳು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಇದಕ್ಕಾಗಿ 536.71 ಕೋಟಿ ಹಣ ಖರ್ಚಾಗಲಿದೆ. ಈ ಹಣ ನಾವು ಕೇಂದ್ರಕ್ಕೆ ಕೊಡಲು ಒಪ್ಪಿದ್ದೇವೆ. ರಾಜ್ಯದಲ್ಲಿ ಸುಮಾರು 1.53 ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್ ಇದ್ದು, 4.50 ಕೋಟಿ ಜನರಿಗೆ ಅಕ್ಕಿ ಕೊಡ್ತಿದ್ದೇವೆ. ಸಾಗಣೆ ವೆಚ್ಚವೂ ಸೇರಿ 25 ರೂ.ಗೆ ನಮಗೆ ಅಕ್ಕಿ ಸಿಗಲಿದೆ. ಹಣದ ಬದಲಾಗಿ ಅಕ್ಕಿ ಕೊಡೋದ್ರೀಂದ ಸರ್ಕಾರಕ್ಕೆ ಪ್ರತಿ ತಿಂಗಳು 150 ರಿಂದ 190 ಕೋಟಿ ರೂ. ಉಳಿತಾಯವಾಗಲಿದೆ ಅಂತ ಸಚಿವರು ತಿಳಿಸಿದರು.

    ಈಗಾಗಲೇ ಅಕ್ಟೋಬರ್ ವರೆಗೆ ಹಣ ಪಾವತಿ ಮಾಡಿದ್ದು ನವೆಂಬರ್, ಡಿಸೆಂಬರ್, ಜನವರಿ ಹಣ ಸಕಾಲಕ್ಕೆ ಫಲಾನುಭವಿಗಳಿಗೆ ಸೇರಲಿದೆ. ಅಲ್ಲದೇ ಈಗಾಗಲೇ ಫೆಬ್ರವರಿ ತಿಂಗಳ ಪಡಿತರ ಪಡೆದಿದ್ದರೆ ಹೆಚ್ಚುವರಿ ಅಕ್ಕಿಯನ್ನ ಮಾರ್ಚ್ ತಿಂಗಳು ಕೊಡಲಿದ್ದೇವೆ ಅಂತ ಸಚಿವರು ತಿಳಿಸಿದರು.

    ಹಣದ ಬದಲು ಅಕ್ಕಿ ಕೊಟ್ಟರೆ ಅನ್ನಭಾಗ್ಯ ಯೋಜನೆ ಖರ್ಚು ವೆಚ್ಚ ಎಷ್ಟು?

    >. ಕರ್ನಾಟಕಕ್ಕೆ ಅಗತ್ಯ ಇರುವ ಅಕ್ಕಿ 2.10 ಲಕ್ಷ ಮೆಟ್ರಿಕ್ ಟನ್
    >. ಒಟ್ಟು 1,16,39,179 ಕಾರ್ಡ್ ಗಳು, 4,12,16,838 ಮಂದಿ ಫಲಾನುಭವಿಗಳು
    >. ಎಫ್‌ಸಿಐನಿಂದ 22 ರೂ. 50 ಪೈಸೆಗೆ ಅಕ್ಕಿ ಖರೀದಿಸಲಿರುವ ರಾಜ್ಯ ಸರ್ಕಾರ
    >. ಸಾಗಾಣಿಕಾ ವೆಚ್ಚ ಸೇರಿಸಿದ್ರೆ ಪ್ರತಿ ಕೆಜಿ ಅಕ್ಕಿಗೆ ಒಟ್ಟು 25 ರೂಪಾಯಿ ಅಂದಾಜು ವೆಚ್ಚ
    >. ಈ ಹಿಂದೆ ಅನ್ನಭಾಗ್ಯಕ್ಕೆ ತಿಂಗಳಿಗೆ 890 ಕೋಟಿ ವೆಚ್ಚ, ವರ್ಷಕ್ಕೆ 10,092 ಕೋಟಿ ವೆಚ್ಚ
    >. 5 ಕೆಜಿ ಅಕ್ಕಿಗೆ ಬದಲಾಗಿ ಪ್ರತಿ ಫಲಾನುಭವಿಗೆ ಖಾತೆಗೆ ತಿಂಗಳಿಗೆ 170 ರೂಪಾಯಿ ಜಮೆ ಮಾಡ್ತಿದ್ದ ಸರ್ಕಾರ
    >. ಈಗ ಅಕ್ಕಿ ಕೊಟ್ಟರೆ ಸರ್ಕಾರಕ್ಕೆ ಪ್ರತಿ ತಿಂಗಳಿಗೆ 537 ಕೋಟಿ, ವರ್ಷಕ್ಕೆ 6,444 ಕೋಟಿ ವೆಚ್ಚ
    >. ಪ್ರತಿ ಫಲಾನುಭವಿಯಿಂದ 50 ರೂಪಾಯಿ ಉಳಿತಾಯ
    >. ತಿಂಗಳಿಗೆ ಅಂದಾಜು 150 ರಿಂದ 190 ಕೋಟಿ ರೂ., ವಾರ್ಷಿಕ 1,600 ರಿಂದ 2,000 ಕೋಟಿ ಉಳಿತಾಯ.

  • ಇನ್ನುಂದೆ ʻಅನ್ನಭಾಗ್ಯʼ ಹಣದ ಬದಲು ಅಕ್ಕಿ ಕೊಡಲು ಸರ್ಕಾರ ತೀರ್ಮಾನ

    ಇನ್ನುಂದೆ ʻಅನ್ನಭಾಗ್ಯʼ ಹಣದ ಬದಲು ಅಕ್ಕಿ ಕೊಡಲು ಸರ್ಕಾರ ತೀರ್ಮಾನ

    – ಕೇಂದ್ರದಿಂದ ಅಕ್ಕಿ ಖರೀದಿಸಲು ನಿರ್ಧಾರ

    ಚಿಕ್ಕಬಳ್ಳಾಪುರ: 2023ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ (Congress) ಘೋಷಿಸಿದ್ದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ (Anna Bhagya) ಫಲಾನುಭವಿಗಳಿಗೆ ನೀಡುತ್ತಿದ್ದ ಹಣದ ಬದಲಿಗೆ ಅಕ್ಕಿಯನ್ನೇ ಕೊಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಹೇಳಲಾಗುತ್ತಿದೆ.

    ಹೌದು. ಅನ್ಯಭಾಗ್ಯ ಯೋಜನೆ ಅಡಿ ಬಿಪಿಎಲ್‌ ಕಾರ್ಡ್‌ (BPL Card) ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್‌ ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ನಂತರದ ದಿನಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಅಕ್ಕಿ ಲಭ್ಯವಾಗದ ಕಾರಣ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಕೊಟ್ಟು, ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ. ನೀಡಲಾಗುತ್ತಿತ್ತು. ಇದನ್ನೂ ಓದಿ: ಬ್ರಿಟಿಷರ ಮೆಂಟಾಲಿಟಿ ಸಿದ್ದರಾಮಯ್ಯನವರದ್ದು – ನೆಟ್ಟಗೆ ಆಡಳಿತ ಮಾಡಿ, ಇಲ್ಲವೇ ರಾಜೀನಾಮೆ ಕೊಡಿ: ಶೋಭಾ ಕರಂದ್ಲಾಜೆ

    ಈ ತಿಂಗಳಿನಿಂದಲೇ ಅಕ್ಕಿ ವಿತರಣೆಗೆ ಸಿದ್ಧತೆ:
    ಇದೀಗ ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನೆಲೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒಎಂಎಸ್‌ಎಸ್‌ (OMSS) ಯೋಜನೆ ಅಡಿಯಲ್ಲಿ ಖರೀದಿಸಿ ಈ ತಿಂಗಳಿನಿಂದಲೇ ಅಕ್ಕಿ ವಿತರಿಸಲು ತೀರ್ಮಾನಿಸಿದೆ.

    ಈ ಸಂಬಂಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್‌ ಮುನಿಯಪ್ಪ (KH Muniyappa) ಅವರು ಪ್ರಕಟಣೆ ಹೊರಡಿಸಿದ್ದಾರೆ.  ಇದನ್ನೂ ಓದಿ: Ind vs Pak ಬ್ಲಾಕ್‌ಬಸ್ಟರ್ ಪಂದ್ಯದ VIP ಟಿಕೆಟ್‌ 3.50 ಕೋಟಿಗೆ ಮಾರಿಕೊಂಡ ಪಿಸಿಬಿ ಅಧ್ಯಕ್ಷ

    ಅನ್ನ ಭಾಗ್ಯ ಯೋಜನೆ ಆರಂಭದಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ಸರಿಯಾಗಿ ಸ್ಪಂದನೆ ಸಿಗದೇ ಇದ್ದಾಗ ರಾಜ್ಯ ಸರ್ಕಾರ ಅನ್ನಭಾಗ್ಯದ ಹಣ ನೀಡಲಾಗುವುದು ಎಂದು ತಿಳಿಸಿತ್ತು. ಅದರಂತೆ ಸರ್ಕಾರ ಒಂದು ಕೆಜಿ ಅಕ್ಕಿಗೆ 34 ರೂ. ಪಾವತಿ ಮಾಡಬೇಕಿತ್ತು. ಒಂದು ಪಡಿತರ ಕುಟುಂಬದಲ್ಲಿ ಐವರು ಸದಸ್ಯರಿದ್ದರೆ 20 ಕೆಜಿಗೆ ಅಕ್ಕಿಗೆ ಪ್ರತಿ ತಿಂಗಳು 850 ರೂ. ಜಮೆ ಮಾಡಬೇಕಿತ್ತು. ಆದ್ರೆ ಕಳೆದ 2 ತಿಂಗಳಿನಿಂದಲೂ ಯಾವುದೇ ಹಣ ಜಮೆಯಾದ ಹಿನ್ನೆಲೆ ಈ ಬಗ್ಗೆ ಫಲಾನುಭವಿಗಳು ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಅಲ್ಲದೇ ಸರ್ಕಾರದ ವಿರುದ್ಧ ಆಕ್ರೋಶವೂ ಹೊರಹಾಕಿದ್ದರು. ಆದರೀಗ ಹಣದ ಬದಲಿಗೆ ಅಕ್ಕಿಯನ್ನೇ ಕೊಡುವುದಕ್ಕೆ ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

  • ಅನ್ನಭಾಗ್ಯ ದುಡ್ಡು ಇಲ್ಲ, ಗೃಹಲಕ್ಷ್ಮಿಯೂ ಇಲ್ಲ – ಗ್ಯಾರಂಟಿಗೆ ʼಗ್ಯಾರಂಟಿʼ ಇಲ್ಲ!

    ಅನ್ನಭಾಗ್ಯ ದುಡ್ಡು ಇಲ್ಲ, ಗೃಹಲಕ್ಷ್ಮಿಯೂ ಇಲ್ಲ – ಗ್ಯಾರಂಟಿಗೆ ʼಗ್ಯಾರಂಟಿʼ ಇಲ್ಲ!

    – 5 ತಿಂಗಳಿನಿಂದ ಅನ್ನ ಭಾಗ್ಯದ ದುಡ್ಡು ಬಂದಿಲ್ಲ
    – 3 ತಿಂಗಳಿನಿಂದ ಮಹಿಳೆಯರ ಖಾತೆಗೆ 2 ಸಾವಿರ ಜಮೆಯಾಗಿಲ್ಲ

    ಬೆಂಗಳೂರು: ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಘೋಷಿಸಿದ ಎರಡು ಮಹತ್ವಾಕಾಂಕ್ಷಿ ಗ್ಯಾರಂಟಿ ಸ್ಕೀಂ (Congress Guarantee) ಯೋಜನೆಗಳಾದ ಅನ್ನಭಾಗ್ಯ (Anna Bhagya) ಮತ್ತು ಗೃಹಲಕ್ಷ್ಮಿ ಯೋಜನೆಯ (Gruhalakshmi) ಫಲಾನುಭವಿಗಳಿಗೆ ನೀಡುತ್ತಿದ್ದ ಹಣ ಸ್ಥಗಿತಗೊಂಡಿದೆ.

    ಅನ್ಯಭಾಗ್ಯದಡಿ ಬಿಪಿಎಲ್‌ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ನೀಡಲಾಗುತ್ತಿದ್ದ ಹಣ 5 ತಿಂಗಳಿನಿಂದ ಸ್ಥಗಿತಗೊಂಡಿದ್ದರೆ ಗೃಹಲಕ್ಷ್ಮಿ ಹಣ 3 ತಿಂಗಳಿನಿಂದ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ.

    ಯೋಜನೆ ಆರಂಭದಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ಸರಿಯಾಗಿ ಸ್ಪಂದನೆ ಸಿಗದೇ ಇದ್ದಾಗ ರಾಜ್ಯ ಸರ್ಕಾರ ಅನ್ನಭಾಗ್ಯದ ಹಣ ನೀಡಲಾಗುವುದು ಎಂದು ತಿಳಿಸಿತ್ತು.

    ಅದರಂತೆ ಸರ್ಕಾರ ಒಂದು ಕೆಜಿ ಅಕ್ಕಿಗೆ 34 ರೂ. ಪಾವತಿ ಮಾಡಬೇಕಿತ್ತು. ಒಂದು ಪಡಿತರ ಕುಟುಂಬದಲ್ಲಿ ಐವರು ಸದಸ್ಯರಿದ್ದರೆ 20 ಕೆಜಿಗೆ ಅಕ್ಕಿಗೆ ಪ್ರತಿ ತಿಂಗಳು 850 ರೂ. ಜಮೆ ಮಾಡಬೇಕಿತ್ತು. ಈ ವಿಚಾರದ ಬಗ್ಗೆ ಫಲಾನುಭವಿಗಳು ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಣದ ಬದಲಿಗೆ ಅಕ್ಕಿಯನ್ನೇ ನೀಡಲಾಗುವುದು ಅಂತ ಹೇಳುತ್ತಿದ್ದಾರೆ. ಇದನ್ನೂ ಓದಿ: ಮೂವರನ್ನು ಕೊಲೆ ಮಾಡಿದ್ದೇನೆ, ನಾನು ಸಾಯ್ತಿನಿ – ಅಮೆರಿಕದಲ್ಲಿರುವ ಅಣ್ಣನಿಗೆ ಫೋನ್‌ ಮಾಡಿ ಹೇಳಿದ್ದ ಚೇತನ್‌

     

    ಕುಟುಂಬದ ಯಜಮಾನಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಹಣ ಕಳೆದ ಮೂರು ತಿಂಗಳಿಂದ ಪಾವತಿಯಾಗಿಲ್ಲ. ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಎಂಬ ಕಾರಣ ನೀಡಿ ಸರಿಯಾದ ಸಮಯಕ್ಕೆ ಪಾವತಿ ಆಗುತ್ತಿರಲಿಲ್ಲ. ಈಗ ಯಾವ ಕಾರಣಕ್ಕೆ ಪಾವತಿಯನ್ನು ನಿಲ್ಲಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್‌

    ಈ ವಿಚಾರದ ಬಗ್ಗೆ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಮಹಿಳೆಯರು, ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ದುಡ್ಡು ಕೊಡುತ್ತೇವೆ ಅಂತ ಹೇಳಿದ್ರು. 10 ಕೆಜಿ ಅಕ್ಕಿ ಸಿಗುತ್ತೆ ಎಂದಿದ್ದರು. ಚುನಾವಣಾ ಸಮಯದಲ್ಲಿ ಮನೆಗೆ ಮನೆಗೆ ಬಂದು ಕಾರ್ಡ್‌ ಹಂಚಿ ಹೋಗಿದ್ದರು. ಈಗ ಅಕ್ಕಿಯೂ ಇಲ್ಲ, ದುಡ್ಡು ಇಲ್ಲ. ಈ ರೀತಿ ಅನ್ಯಾಯ ಮಾಡುವುದು ಸರಿಯೇ? ಕೂಡಲೇ ಸರ್ಕಾರ ಘೋಷಣೆ ಮಾಡಿದಂತೆ ಹಣ್‌ ಮತ್ತು ಅಕ್ಕಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ತಾಲೂಕು ಪಂಚಾಯಿತಿಯಿಂದ ಬಿಡುಗಡೆಯಾಗಲಿದೆ ಗೃಹಲಕ್ಷ್ಮಿ ಹಣ!

  • ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

    ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

    ಬೆಂಗಳೂರು: ಅನ್ನಭಾಗ್ಯ ಯೋಜನೆಗೆ (Anna Bhagya Scheme) ಅಕ್ಕಿ ನೀಡದ ಕೇಂದ್ರ ಸರ್ಕಾರ ಧರ್ಮದ ಹೆಸರಲ್ಲಿ ಅಕ್ಷತೆಯ (Mantrakshate) ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ (Mahadevappa) ಕಿಡಿಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ (Social Media) ಈ ಸಂಬಂಧ ಕೇಂದ್ರ ಸರ್ಕಾರ ನಡೆಯನ್ನು ವಿರೋಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ

    ಪೋಸ್ಟ್‌ನಲ್ಲಿ ಏನಿದೆ?
    ಹಸಿವು ಮುಕ್ತ ಕರ್ನಾಟಕದ (Karnataka) ಉದ್ದೇಶದಿಂದ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರದಿಂದ ಅಕ್ಕಿ ನೀಡದವರು ಈ ದಿನ ಧರ್ಮದ ಹೆಸರಲ್ಲಿ ಅಕ್ಷತೆಯ ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ. ಬಡವರ ಹಸಿವಿಗೆ ಅನ್ನ ನೀಡುವುದಕ್ಕಿಂತಲೂ ದೊಡ್ಡ ಧರ್ಮ ಇದೆಯೇ?

    ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ ಮಾಡುವಂತಹ ಅಮಾನವೀಯ ಪ್ರವೃತ್ತಿ ತೋರಿದ ಇವರು ಧರ್ಮದ ಕುರಿತಂತೆ ಮಾತನಾಡುತ್ತಿದ್ದರೆ ಅದನ್ನು ಕಂಡು ನಗಬೇಕೋ ಅಳಬೇಕೋ ಎಂದು ನನಗೆ ತಿಳಿಯುತ್ತಿಲ್ಲ.  ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

     

  • `ಗ್ಯಾರಂಟಿ’ ಗುಡ್‍ನ್ಯೂಸ್: ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮೆಗೆ ಡೆಡ್‍ಲೈನ್

    `ಗ್ಯಾರಂಟಿ’ ಗುಡ್‍ನ್ಯೂಸ್: ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮೆಗೆ ಡೆಡ್‍ಲೈನ್

    ಬೆಂಗಳೂರು: ಲೋಕಸಭೆ ಚುನಾವಣೆ (Loksabha Election) ಬೆನ್ನಲ್ಲೆ ಗ್ಯಾರಂಟಿ ಸಮರ್ಪಕ ಜಾರಿಗೆ ಸರ್ಕಾರ ಕಸರತ್ತು ನಡೆಸುತ್ತಿದೆ. ರಾಜ್ಯದ ಜನತೆಗೆ `ಗ್ಯಾರಂಟಿ’ ಗುಡ್‍ನ್ಯೂಸ್ ಒಂದು ಸಿಕ್ಕಿದೆ.

    ರಾಜ್ಯದಲ್ಲಿ ಅನ್ನಭಾಗ್ಯ (Anna Bhagya) ಹಾಗೂ ಗೃಹಲಕ್ಷ್ಮಿ (Gruhalakshmi) ಹಣ ವಿಳಂಬವಾಗುತ್ತಿದ್ದ ಬೆನ್ನಲ್ಲೇ ಫಲಾನುಭವಿಗಳಿಗೆ ಹಣ ತಲುಪಿಸೋಕೆ ನಿಗದಿತ ಡೆಡ್‍ಲೈನ್ ಅನ್ನು ಆರ್ಥಿಕ ಇಲಾಖೆ ನೀಡಿದೆ.

    ಆರ್ಥಿಕ ಇಲಾಖೆಯ ಡಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈ ಮೂಲಕ ಹಣ ತಲುಪಲು ಪ್ರತಿ ತಿಂಗಳಲ್ಲೂ ದಿನಾಂಕ ಫಿಕ್ಸ್ ಮಾಡಲಾಗುತ್ತಿದೆ. ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ಖಾತೆಗೆ ಜಮೆ ಆಗಲು ಇನ್ಮುಂದೆ ಡೆಡ್ ಲೈನ್ ಇರಲಿದೆ. ಇದನ್ನೂ ಓದಿ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್

    ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳ 20ಕ್ಕೆ ಹಾಕಲು ಆರ್ಥಿಕ ಇಲಾಖೆ ಸುತ್ತೋಲೆ ನೀಡಿದೆ. ಅನ್ನಭಾಗ್ಯದ ದುಡ್ಡನ್ನು 10-15 ದಿನಾಂಕದೊಳಗೆ ಪ್ರಕ್ರಿಯೆಗೆ ಸೂಚನೆ ನೀಡಲಾಗಿದೆ. ಹಾಗೆಯೇ ಗೃಹಲಕ್ಷ್ಮಿ ಹಣ ತಿಂಗಳ 15- 20 ರೊಳಗೆ ಜಮೆಗೆ ಸೂಚನೆ ನೀಡಲಾಗಿದೆ.

  • 12 ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಅನ್ನ ಭಾಗ್ಯದ ಹಣ

    12 ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಅನ್ನ ಭಾಗ್ಯದ ಹಣ

    ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Government) ಮಹತ್ವಾಕಾಂಕ್ಷೆಯ ಅನ್ನ ಭಾಗ್ಯದ (Anna Bhagya) ಹೆಚ್ಚುವರಿ 5 ಕೆಜಿಯ ಬದಲಾಗಿ 170 ರೂಪಾಯಿ ಹಣ ನೀಡುವ (Cash Transfer) ಯೋಜನೆಗೆ ಚಾಲನೆ ಸಿಕ್ಕಿ 1 ವಾರ ಕಳೆದರೂ 12 ಜಿಲ್ಲೆಗಳ ಫಲಾನುಭವಿಗಳಿಗೆ ಈವರೆಗೂ ಹಣ ಸಿಕ್ಕಿಲ್ಲ. ಕೇವಲ 19 ಜಿಲ್ಲೆಯ ಫಲಾನುಭವಿಗಳಿಗೆ ಮಾತ್ರ ಅನ್ನಭಾಗ್ಯದ ಹಣ ಜಮೆಯಾಗಿದೆ.

    ಉಳಿದ 12 ಜಿಲ್ಲೆಗಳಿಗೆ ಹಣ ತಲುಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆಧಾರ್ ಕಾರ್ಡ್, ಅಕೌಂಟ್ ಲಿಂಕ್ ಆಗದೇ ಇರುವುದು ಒಂದು ಸಮಸ್ಯೆಯಾದರೆ ಮತ್ತೊಂದು ಕಡೆ ಒಂದು ಫೈಲ್‍ನಲ್ಲಿ 20 ಸಾವಿರ ಕುಟುಂಬಗಳಿಗೆ ಮಾತ್ರ ಹಣ ಹಾಕಲು ಸಾಧ್ಯವಾಗುತ್ತಿದೆ.

     

    ಹಂತ ಹಂತವಾಗಿ ಹಣ ಹಾಕಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ. 12 ಜಿಲ್ಲೆಗಳಿಗೆ ಹಣ ತಲುಪಲು 8 ರಿಂದ 12 ದಿನ ಬೇಕಾಗಬಹುದು ಎನ್ನುತ್ತಿದ್ದಾರೆ ಆಹಾರ ಇಲಾಖೆ ಅಧಿಕಾರಿಗಳು.  ಇದನ್ನೂ ಓದಿ: ವಸತಿ ಯೋಜನೆಗೆ ಫಲಾನುಭವಿಗಳು ನಿರಾಸಕ್ತಿ ತೋರಿದರೆ ಬೇರೆ ಅರ್ಹರಿಗೆ ಹಂಚಿಕೆ ಮಾಡಿ: ಜಮೀರ್‌

    ಹಣ ಜಮೆಯಾಗದ ಜಿಲ್ಲೆಗಳು:
    ಚಾಮರಾಜನಗರ, ಮಂಡ್ಯ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯನಗರ, ಹಾಸನ, ವಿಜಯಪುರ, ಹಾವೇರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]