Tag: ankola

  • ಕಾರವಾರ| ಸ್ನೇಹಿತರೊಂದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಶವ ಪತ್ತೆ

    ಕಾರವಾರ| ಸ್ನೇಹಿತರೊಂದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಶವ ಪತ್ತೆ

    ಕಾರವಾರ: ಸ್ನೇಹಿತರೊಂದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ ತಾಲೂಕಿನ ಕೈಗಡಿ ಬ್ರಿಡ್ಜ್ ಬಳಿ ನಡೆದಿದೆ.

    ಬುಧವಾರ ಕೈಗಡಿ ಬ್ರಿಡ್ಜ್‌ ಸಮೀಪ ಪ್ರವಾಸಕ್ಕೆ ಬಂದಿದ್ದ ಆರು ಯುವಕರ ತಂಡ ನೀರಿನಲ್ಲಿ ಇಳಿದಾಗ ಅಂಕೋಲ ತಾಲೂಕಿನ ಸಬಗೇರಿಯ ಸಾಗರ್ ದೇವಾಡಿಗ ನೀರಿನಲ್ಲಿ ಮುಳಗಿ ತೇಲಿಹೋಗಿದ್ದ. ಈತನ ಶೋಧ ಕಾರ್ಯಕ್ಕೆ ಪೊಲೀಸರು, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಅವಿರತ ಪ್ರಯತ್ನ ನಡೆಸಿದ್ದರು.

    ಇಂದು ಕಾಣೆಯಾದ ಅಣತಿ ದೂರದಲ್ಲಿಯೇ ಯುವಕನ ಶವವನ್ನು ಕಾರ್ಯಾಚರಣೆಯಲ್ಲಿ ಭಾಗಿಯಾದ ಕೈಗಡಿ ನಿವಾಸಿಗಳಾದ ಗಣಪ ಸಿದ್ದಿ, ರಾಮ ಸಿದ್ದಿ, ವೆಂಕಸಿದ್ದಿ ಹಾಗೂ ನಾರಾಯಣ ಸಿದ್ದಿ ಎಂಬವರು ಪತ್ತೆ ಮಾಡಿ ಹೊರತಂದಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂಕೋಲದಲ್ಲಿ ಕೇಣಿ ವಾಣಿಜ್ಯ ಬಂದರು ಯೋಜನೆ; ಹೇಗಿದೆ ನೀಲ ನಕ್ಷೆ – ಸಾಧಕ ಬಾಧಕಗಳೇನು?

    ಅಂಕೋಲದಲ್ಲಿ ಕೇಣಿ ವಾಣಿಜ್ಯ ಬಂದರು ಯೋಜನೆ; ಹೇಗಿದೆ ನೀಲ ನಕ್ಷೆ – ಸಾಧಕ ಬಾಧಕಗಳೇನು?

    ಕಾರವಾರ: ರಾಜ್ಯದಲ್ಲೇ ಅತೀ ಹೆಚ್ಚು 140 ಕಿಲೋಮೀಟರ್ ಕರಾವಳಿ ತೀರಪ್ರದೇಶವನ್ನು ಉತ್ತರ ಕನ್ನಡ ಜಿಲ್ಲೆ ಹೊಂದಿದೆ. ದೇಶದ ಪ್ರತಿಷ್ಠಿತ ಕದಂಬ ನೌಕಾನೆಲೆ ಸಹ ಈ ಜಿಲ್ಲೆಯಲ್ಲಿದ್ದು, 11,334 ಎಕರೆ ಭೂಮಿಯನ್ನು ಒಳಗೊಂಡಿದೆ. ಸಾಗರಮಾಲ, ಕೈಗಾ ಅಣುಸ್ಥಾವರ, ಚತುಷ್ಪತ ಹೆದ್ದಾರಿ ಅಗಲೀಕರಣ, ವಿದ್ಯುತ್ ಯೋಜನೆಗಳಿಗೆ ಜಿಲ್ಲೆಯ ಜನ ತಮ್ಮ ನೆಲವನ್ನು ಧಾರೆಯೆರೆದಿದ್ದಾರೆ.

    ಇದೀಗ ಉತ್ತರ ಕನ್ನಡ ಜಿಲ್ಲೆಗೆ ರಾಜ್ಯ ಸರ್ಕಾರ ಶರಾವತಿ ಪಂಪ ಸ್ಟೋರೇಜ್ ಯೋಜನೆ, ವರದಾ-ಬೇಡ್ತಿ ನದಿ ಜೋಡಣೆ, ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಯಾದ ಸಾಗರ ಮಾಲಾ ಯೋಜನೆಯಡಿ ಕಾರವಾರ ಬಂದರು ವಿಸ್ತರಣೆ, ಬೇಲಿಕೇರಿ ಬಂದರು ಯೋಜನೆ, ಕೇಣಿ ಗ್ರೀನ್ ಫೀಲ್ಟ್ ಬಂದರು ಯೋಜನೆ, ಹೊನ್ನಾವರ ಪಾವಿನಕುರ್ವ ಬಂದರು ಯೋಜನೆ ಹೀಗೆ ಒಟ್ಟು 4 ಬಂದರುಗಳನ್ನು ಅಭಿವೃದ್ಧಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೊಸ ಬಂದರು ನಿರ್ಮಾಣಕ್ಕೆ ಕೈಹಾಕಿದೆ. ಇದನ್ನೂ ಓದಿ: ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ – ಮಾ.15ರ ವರೆಗೆ ನಿಷೇಧಾಜ್ಞೆ ಮುಂದುವರಿಕೆ

    ಆದರೆ, ಇದೀಗ ಹೊನ್ನಾವರ ಪಾವಿನಕುರ್ವ, ಅಂಕೋಲದ ಕೇಣಿ, ಬೇಲಿಕೇರಿ ಖಾಸಗಿ ಬಂದರು ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಕೋರ್ಟ ಮೆಟ್ಟಿಲೇರಿದೆ. ಆದರೆ, ಇದೀಗ ಅಂಕೋಲದ ಕೇಣಿ ಖಾಸಗಿ ಬಂದರನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ 2022 ರಲ್ಲಿ ಅನುಮತಿಗೆ ಆದೇಶ ನೀಡಿ 2023 ರಲ್ಲಿ ಜೆಎಸ್‌ಡಬ್ಲೂ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಒಪ್ಪಂದಕ್ಕೆ ಸಹಿ ಹಾಕಿದೆ. ಕಳೆದ ಎರಡು ತಿಂಗಳ ಹಿಂದೆ ಕೇಣಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಕೇಣಿ ಬಂದರು ನಿರ್ಮಾಣಕ್ಕೆ ಮೊದಲ ಹಂತದ ಸರ್ವೆ ಕಾರ್ಯ ಪೂರ್ಣಗೊಳಿಸಿದೆ.

    ಕೇಣಿ ಬಂದರು ವ್ಯಾಪ್ತಿ ಯೋಜನಾ ವೆಚ್ಚ ಎಷ್ಟು?
    5,611 ಕೋಟಿಯ ಯೋಜನಾ ವೆಚ್ಚ ಹೊಂದಿರುವ JSW ಕಂಪನಿ ಈ ಯೋಜನೆಗೆ 457 ಎಕರೆ ಪ್ರದೇಶದ ಸ್ವಾಧೀನಕ್ಕೆ ಬೇಡಿಕೆ ಇಟ್ಟಿದೆ. ಸರಕು ಸಂಗ್ರಹಣೆಗಾಗಿ 309 ಎಕರೆ, ರಸ್ತೆ, ರೈಲ್ವೆ ಸಂಚಾರ ಮಾರ್ಗಕ್ಕಾಗಿ 116 ಎಕರೆ, ಜಲಮಾರ್ಗದಲ್ಲಿ 11.2 ಕಿಲೋಮೀಟರ್ ಉದ್ದ, ಸಂಪರ್ಕ ರಸ್ತೆಗಾಗಿ 4.5 ಕಿಲೋಮೀಟರ್, ರೈಲ್ವೆಗಾಗಿ 6.50 ಕಿಲೋಮೀಟರ್ ಬಳಸಿಕೊಳ್ಳಲಿದ್ದು, 103 ಗ್ರಾಮಗಳು ಯೋಜನಾ ವ್ಯಾಪ್ತಿಗೆ ಬರಲಿದೆ. 2025 ರ ಡಿಸೆಂಬರ್‌ನಲ್ಲಿ ಕಾಮಗಾರಿ ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ.

    ಕೇಣಿ ಖಾಸಗಿ ಬಂದರಿನಿಂದ ಲಾಭ ಏನು?
    ಬಂದರು ನಿರ್ಮಾಣದಿಂದ ಸ್ಥಳೀಯ ಹಾಗೂ ಜಿಲ್ಲೆಯ ಜನರಿಗೆ ಉದ್ಯೋಗ, CSR ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ, ಸ್ಥಳೀಯ ಆರ್ಥಿಕ ಅಭಿವೃದ್ಧಿ ಲಾಭದ ನಿರೀಕ್ಷೆ ಹೊಂದಲಾಗಿದೆ. ಪರಿಸರ ನಿರ್ವಹಣಾ ಯೋಜನೆ ಜಾರಿ (EMP), (ಅರಣ್ಯ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಸಾಗರ ಮಾಲಿನ್ಯ ನಿಯಂತ್ರಣ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಇತ್ಯಾದಿ). ಕೇಣಿ ಬಂದರು ಯೋಜನೆಯಿಂದ ಆಮದು-ರಫ್ತು ಚಟುವಟಿಕೆ ನಡೆಯುವುದರ ಮೂಲಕ ಕೇವಲ ಬಂದರು ವ್ಯಾಪ್ತಿಯಲ್ಲಷ್ಟೇ ಅಲ್ಲದೆ ಸುತ್ತಮುತ್ತಲೂ ಕೈಗಾರಿಕೆ ಸ್ಥಾಪನೆಗೆ, ವಾಣಿಜ್ಯ ಚಟುವಟಿಕೆ ವೃದ್ಧಿಗೆ ಅವಕಾಶ ಆಗಲಿದೆ. ಬಂದರು ನಿರ್ಮಾಣದ ವೇಳೆಯಲ್ಲೇ ಕನಿಷ್ಠ 2,000 ಉದ್ಯೋಗ ಸೃಷ್ಟಿಯಾಗಲಿದೆ. ಬಂದರು ನಿರ್ಮಾಣದ ಬಳಿಕ, ನಿರ್ವಹಣೆ ವಿಭಾಗದಲ್ಲಿ 500 ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ. ಬಂದರು ಯೋಜನೆ ಜಾರಿಯಾದರೆ ಬಂದರಿಗೆ ಸರಕು ಸಾಗಣೆಗೆ ಪೂರಕವಾಗಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಕಾರ್ಯಗತಗೊಳಿಸಲಾಗುತ್ತದೆ. ಇದಕ್ಕಾಗಿ ಗರಿಷ್ಠ ಪ್ರಯತ್ನವನ್ನು ನಡೆಸಲಿದೆ. ಯೋಜನೆಗೆ ರಸ್ತೆ, ರೈಲು ಸಂಪರ್ಕಕ್ಕೆ 140 ಎಕರೆಯಷ್ಟು ಜಾಗ ಮಾತ್ರ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಸುಮಾರು 75 ಮನೆಗಳು ತೆರವುಗೊಳ್ಳಬಹುದು. ಅವುಗಳಿಗೆ ಪರಿಹಾರ ಸಿಗಲಿದೆ. ಜೊತೆಗೆ ಸ್ಥಳೀಯರ ಆರ್ಥಿಕ ಸಬಲೀಕರಣಕ್ಕೆ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುವುದು. ಉದ್ಯೋಗಾವಕಾಶ ಲಭ್ಯತೆಗೆ ಪೂರಕವಾಗಿ ಕೌಶಲ ತರಬೇತಿ ನೀಡಲಾಗುವುದು. ಇದನ್ನೂ ಓದಿ: ಕೇಣಿ ಬಂದರು ಸರ್ವೇಗೆ ತೀವ್ರ ವಿರೋಧ – ಸಮುದ್ರಕ್ಕೆ ಹಾರಿ ಪ್ರತಿಭಟನಾಕಾರ ಆಕ್ರೋಶ

    ಆರಂಭದಲ್ಲಿ ವಾರ್ಷಿಕ ಮೂರು ಕೋಟಿ ಟನ್ (ಎಂಟಿಪಿಎ), ಬಳಿಕ ಹಂತ ಹಂತವಾಗಿ ವಾರ್ಷಿಕವಾಗಿ 9.2 ಕೋಟಿ ಟನ್ ಸರಕು ಸಾಗಣೆ ವಹಿವಾಟು ನಡೆಸಲು ಬಂದರು ಬಳಕೆಯಾಗಲಿದೆ. ಕಲ್ಲಿದ್ದಲು, ಕಚ್ಚಾ ಲೋಹದ ಸೂಕ್ಷ್ಮ ವಸ್ತುಗಳು, ಎಲ್‌ಪಿಜಿ, ಕಚ್ಚಾ ತೈಲದ ಕಾರ್ಗೋಗಳು, ಕಂಟೇನರ್ ಕಾರ್ಗೋಗಳ ಮೂಲಕ ಅಗತ್ಯ ವಸ್ತುಗಳ ಆಮದು, ರಫ್ತು ಚಟುವಟಿಕೆ ನಡೆಯಲಿದೆ.

    ಬಳ್ಳಾರಿಯಲ್ಲಿ ಬೃಹತ್‌ ಮಟ್ಟದಲ್ಲಿ ಕೈಗಾರಿಕೆ ಹೊಂದಿರುವ ಜೆಎಸ್‌ಡಬ್ಲ್ಯುಕಂಪನಿ ಕಚ್ಚಾ ವಸ್ತುಗಳ ಆಮದು, ಸಿದ್ಧವಸ್ತುಗಳ ರಫ್ತು ಚಟುವಟಿಕೆಗೆ ಬಂದರು ಬಳಕೆಯಾಗಲಿದೆ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿನ ಕೈಗಾರಿಕೆಗಳಿಗೆ ಪೂರಕವಾಗಿ ಅಗತ್ಯ ಸರಕು ಪೂರೈಕೆ-ಸಾಗಾಟಕ್ಕೂ ನೆರವಾಗಲಿದೆ. ಈ ಮೂಲಕ ಉತ್ತರ ಕರ್ನಾಟಕ, ಪಶ್ಚಿಮ ಕರ್ನಾಟಕ ಭಾಗದಲ್ಲಿನ ಕೈಗಾರಿಕೋದ್ಯಮಿಗಳು ಸರಕು ಸಾಗಾಟಕ್ಕೆ ಗೋವಾ, ಆಂಧ್ರ ಪ್ರದೇಶದ ಬಂದರುಗಳನ್ನು ಅವಲಂಬಿಸುವುದು ತಪ್ಪಲಿದೆ ಎಂಬುದು ಕೇಣಿ ಪೋರ್ಟ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಯೋಜನಾ ನಿರ್ದೇಶಕ ಭರಮಪ್ಪ ಕುಂಟಿಗೇರಿ ಅವರು ಹೇಳುತ್ತಾರೆ.

    ಯೋಜನೆಯ ರೂಪ ಪರಿಹಾರಗಳು
    ಬಂದರನ್ನು ಕಡಲ ತೀರದಿಂದ 400 ಮೀಟರ್ ಅಂತರದಲ್ಲಿ ಸಮುದ್ರದಲ್ಲಿ ನಿರ್ಮಾಣ ಮಾಡಲಾಗುವುದು. ಬಂದರು ನಿರ್ಮಾಣದ ನಂತರ ಧಕ್ಕೆಯನ್ನು(Berth) ಹೊರತುಪಡಿಸಿ ಉಳಿದ ಭಾಗದಲ್ಲಿ ಮೀನುಗಾರಿಕೆಗೆ ಅವಕಾಶ, ಹಡಗಿನ ಸಂಚಾರ ಹೊರತುಪಡಿಸಿ ಅಗತ್ಯವಿದ್ದಲ್ಲಿ ಮೀನುಗಾರಿಕೆಗೆ ಅವಕಾಶ. ಕೇಣಿ ಬಂದರು ನಿರ್ಮಾಣದ ಬಳಿಕ ಸರಕು ಸಾಗಣೆ ವೇಳೆ ಈ ಭಾಗದಲ್ಲಿ ಸಮುದ್ರ ಮಾಲಿನ್ಯ ನಡೆಯುವುದು ಸಹಜ ಎಂದು ಯೋಜನೆಗೆ ಸಂಬಂಧಿಸಿದ ಪರಿಸರ ಪರಿಣಾಮ ಮೌಲ್ಯಮಾಪನ ವರದಿಯಲ್ಲಿ (ಇಐಎ) ಉಲ್ಲೇಖಿಸಲಾಗಿದೆ.

    ವಾರ್ಷಿಕವಾಗಿ 3.4 ಕೋಟಿ ಟನ್ ಕಲ್ಲಿದ್ದಲು, 80 ಲಕ್ಷ ಟನ್‌ಗಳಷ್ಟು ಲೈಮ್ ಸ್ಟೋನ್, ಡೋಲೊಮೈಟ್, ಬೆಂಟೋಮೈಟ್‌ಗಳ ಸಾಗಾಟ ನಡೆಯಲಿದೆ. ತಲಾ 30 ಲಕ್ಷ ಟನ್ ಸಿಮೆಂಟ್ ಕ್ಲಿಂಕರ್ ಮತ್ತು ಹಾರುಬೂದಿ, ಬಾಕ್ಸೆಟ್ ಮುಂತಾದ ಅದಿರುಗಳನ್ನು ಸಾಗಿಸಲಾಗುತ್ತದೆ. ಇದಲ್ಲದೇ ದ್ರವರೂಪದ ಸರಕುಗಳು, ಆಹಾರ ಸಾಮಗ್ರಿಗಳೂ ಇದೇ ಬಂದರು ಮೂಲಕ ಆಮದಾಗಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಹಡಗು, ಇತರ ಸರಕು ಸಾಗಣೆ ವಾಹನಗಳಿಂದ ಹೊರಸೂಸುವ ತೈಲ, ಹೊಗೆಗಳಿಂದ ಪರಿಸರದ ಮೇಲೆ ಪರಿಣಾಮ ಬೀರುವುದು ಸಹಜ. ಆದರೆ, ಅವುಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಲು ಮಾರ್ಗೋಪಾಯಗಳನ್ನು ಕೈಗೊಳ್ಳಲು ಸಲಹೆಗಳನ್ನೂ ವರದಿಯಲ್ಲಿ ನೀಡಲಾಗಿದೆ.

    ಬಂದರು ಯೋಜನೆ ಜಾರಿಯಿಂದ ಆಗುವ ಸಮಸ್ಯೆ ಏನು?
    ಯೋಜನೆ ಜಾರಿಯಿಂದ 103 ಗ್ರಾಮದ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ನೆಲೆ ಕಳೆದುಕೊಳ್ಳುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ಬೀಳಲಿದೆ. ಪರ್ಯಾಯ ವ್ಯವಸ್ಥೆಗೆ ಯಾವುದೇ ನಿಯಮ ಜಾರಿ ಮಾಡದೇ ನಿರ್ಲಕ್ಷ್ಯ ಮಾಡಿರುವುದು. ಜೀವವೈವಿಧ್ಯ ಸಂಕುಲ ನಾಶವಾಗುವ ಆತಂಕ. ಈಗಾಗಲೇ ಕೇಣಿ ಬಳಿಯೇ ಬೇಲಿಕೇರಿ ಬಂದರು ಇದ್ದು, ಇದರ ನಂತರ 35 ಕಿಲೋಮೀಟರ್ ದೂರದ ಕಾರವಾರದಲ್ಲಿ ಸಹ ವಾಣಿಜ್ಯ ಬಂದರು ಇದ್ದು, ಅಲ್ಲಿಯೂ ಅವಕಾಶ ಇದ್ದರೂ ಹೊಸದಾಗಿ ಕೇಣಿಯಲ್ಲಿ ಮಾಡುವುದರಿಂದ ಜನವಸತಿ ಪ್ರದೇಶ ಹಾಗೂ ಸ್ಥಳೀಯ ಉದ್ಯೋಗಕ್ಕೆ ಹೊಡೆತ ಬೀಳುವ ಆತಂಕ ಇದೆ.

    ಸಿಆರ್‌ಝಡ್ ನಿಯಮ ಉಲ್ಲಂಘನೆಯ ಆರೋಪ
    ಅಂಕೋಲದ ಕೇಣಿ ಬಂದರು ಯೋಜನೆ ಜಾರಿಯಾದಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಕಾಯ್ದೆಯ ಸಂಪೂರ್ಣ ಉಲ್ಲಂಘನೆ ಆಗಲಿದೆ. ಯೋಜನೆಗೆ ಸಮುದ್ರದಲ್ಲಿನ 4.44 ಕೋಟಿ ಘನ ಮೀಟರ್‌ಗಳಷ್ಟು ಮಣ್ಣು ತೆಗೆಯಲಾಗುತ್ತದೆ. ಹಡಗುಗಳ ಸಂಚಾರಕ್ಕಾಗಿ ಸಮುದ್ರದಲ್ಲಿ 10 ಕಿ.ಮೀ ದೂರದವರೆಗೆ ಬೃಹತ್‌ ಯಂತ್ರಗಳ ಮೂಲಕ ಹೂಳೆತ್ತುವ ಕಾಮಗಾರಿ ನಡೆಯಲಿದೆ. ಇದು ಜಲಚರಗಳ ನಾಶಕ್ಕೆ ಕಾರಣವಾಗಲಿದೆ. ಜೊತೆಗೆ ಯೋಜನೆಗೆ ನಿರ್ಮಿಸುವ ಅಲೆ ತಡೆಗೋಡೆಗಳಿಂದ ಕಡಲು ಕೊರೆತದ ಸಮಸ್ಯೆ ಹೆಚ್ಚಲಿದೆ. ಇವೆಲ್ಲವೂ ಸಿಆರ್‌ಝಡ್ ಕಾಯ್ದೆಯ ಉಲ್ಲಂಘನೆ ಆಗಲಿದೆ ಎಂದು ಪರಿಸರ ವಿಜ್ಞಾನಿ ಮಹಾಬಲೇಶ್ವರ ಭಟ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    ಯೋಜನೆ ವ್ಯಾಪ್ತಿಯ ಪ್ರದೇಶದಲ್ಲಿ ಕಾಂಡ್ಲಾ, ಮರಳುಗುಡ್ಡಗಳು, ಸಸ್ಯ ಮತ್ತು ಜೀವವೈವಿಧ್ಯ ಇಲ್ಲ. ಸಂವೇದನಾಶೀಲ ಪರಿಸರ ವ್ಯವಸ್ಥೆ ಇಲ್ಲದ ಕಾರಣ ಈ ಪ್ರದೇಶವು ಸಿಆ‌ಝಡ್‌ನ ಮೊದಲ ಹಂತದ ಪ್ರದೇಶಕ್ಕೆ ಸೇರುವುದಿಲ್ಲ ಎಂದು ಇಐಎ ವರದಿಯಲ್ಲಿ ಉಲ್ಲೇಖಿಸಿರುವುದು ಸರಿಯಲ್ಲ, ಪರಿಸರ, ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಡಲ ಜೀವ ವಿಜ್ಞಾನಿ ವಿಎನ್ ನಾಯ್ಕ ವಿರೋಧಿಸಿದ್ದಾರೆ.

    ಕೊನೆಗೂ ಸಾರ್ವಜನಿಕ ಅಹವಾಲು ಸಭೆ ಆಯೋಜನೆ
    2023 ರಲ್ಲಿಯೇ ರಾಜ್ಯ ಸರ್ಕಾರ ಕೇಣಿ ಬಂದರು ಯೋಜನೆ ಒಡಂಬಡಿಕೆ ಮಾಡಿಕೊಂಡಿದ್ದರೂ ಪಬ್ಲಿಕ್ ಹಿಯರಿಂಗ್ ಕರೆಯದೇ ಸರ್ವೆ ಕಾರ್ಯ ಸಹ ಮಾಡಿತ್ತು‌.

  • ಕಾರವಾರ | ಹಳ್ಳಕ್ಕೆ ಬಿದ್ದ ಖಾಸಗಿ ಬಸ್ – ಓರ್ವ ಸಾವು, ಐವರು ಗಂಭೀರ

    ಕಾರವಾರ | ಹಳ್ಳಕ್ಕೆ ಬಿದ್ದ ಖಾಸಗಿ ಬಸ್ – ಓರ್ವ ಸಾವು, ಐವರು ಗಂಭೀರ

    ಕಾರವಾರ: ಬೆಂಗಳೂರಿನಿಂದ ಮಂಗಳೂರಿನ ಕಡೆ ತೆರಳುತ್ತಿದ್ದ ಖಾಸಗಿ ಬಸ್ (Private Bus) ಹಳ್ಳಕ್ಕೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿರುವ ಘಟನೆ ಅಂಕೋಲದ (Ankola) ರಾಷ್ಟ್ರೀಯ ಹೆದ್ದಾರಿ 63ರ ಅಗಸೂರು ಬಳಿ ನಡೆದಿದೆ.

    ಬೆಂಗಳೂರಿನಿಂದ ಮಂಗಳೂರು ಕಡೆ 18 ಜನರನ್ನು ಕರೆದೊಯ್ಯುತ್ತಿದ್ದ ವೇಳೆ ಅತೀ ವೇಗದಲ್ಲಿ ಬಂದ ಬಸ್ ಅಗಸೂರಿನ ಹೆದ್ದಾರಿಯ ಬ್ರಿಡ್ಜ್ ತಡೆಗೋಡೆಗೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದಿದೆ. ಪರಿಣಾಮ ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಕತ್ರಾ ಮಾತಾ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ – ನಾಲ್ವರಿಗೆ ಗಾಯ

    ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದವರಿಗೆ ಅಂಕೋಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೃತನ ಗುರುತು ಪತ್ತೆಯಾಗಬೇಕಿದೆ. ಇದನ್ನೂ ಓದಿ: ಮುಡಾ ಕೇಸ್ | ಸಿಎಂ ಪತ್ನಿ ವಿಚಾರಣೆ ರದ್ದು – ನಿಮ್ಮನ್ಯಾಕೆ ರಾಜಕೀಯಕ್ಕೆ ಬಳಕೆ ಮಾಡ್ತಾರೆ?: ಇ.ಡಿಗೆ ಸುಪ್ರೀಂ ಛೀಮಾರಿ

    ಸ್ಥಳಕ್ಕೆ ಅಂಕೋಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಬಸ್ಸನ್ನು ಹಳ್ಳದಿಂದ ಮೇಲಕ್ಕೆತ್ತಿದ್ದಾರೆ. ಘಟನೆ ಸಂಬಂಧ ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Uttara Kannada | ಗೊಬ್ಬರದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು

    Uttara Kannada | ಗೊಬ್ಬರದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು

    ಕಾರವಾರ: ತಂದೆಯ ನಿರ್ಲಕ್ಷ್ಯದಿಂದ ಗೊಬ್ಬರದ ಗುಂಡಿಗೆ (Manure Pit) ಬಿದ್ದು ಎರಡು ವರ್ಷದ ಹೆಣ್ಣುಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ.

    ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2) ಮೃತ ಹೆಣ್ಣುಮಗು. ಶ್ರೀಕಾಂತ್ ಹೆಬ್ಬಾರ್ ದನದ ಕೊಟ್ಟಿಗೆ ಕೆಲಸಕ್ಕಾಗಿ ಕೊಟ್ಟಿಗೆಗೆ ತೆರಳಿದ್ದು, ಇವರೊಂದಿಗೆ ಪುಟ್ಟ ಮಗುವನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಆಟವಾಡುತ್ತಾ ಕೊಟ್ಟಿಗೆ ಬಳಿ ಇದ್ದ ಗೊಬ್ಬರದ ಗುಂಡಿಗೆ ಬಿದ್ದಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರು ಖುಲಾ ಮೂಲಕ ವಿಚ್ಛೇದನ ಪಡೆಯಲು ಪತಿಯ ಒಪ್ಪಿಗೆ ಅಗತ್ಯವಿಲ್ಲ – ತೆಲಂಗಾಣ ಹೈಕೋರ್ಟ್

    ಕೊಟ್ಟಿಗೆಯಲ್ಲಿ ಕೆಲಸದಲ್ಲಿ ಮಗ್ನರಾಗಿದ್ದ ಶ್ರೀಕಾಂತ್ ಮಗುವಿನ ಚಲನವಲನದ ಬಗ್ಗೆ ಗಮನ ಹರಿಸಿರಲಿಲ್ಲ. ಮಗು ಸದ್ದು ಮಾಡದಿದ್ದುದನ್ನು ಗಮನಿಸಿ ಹುಡುಕಿದಾಗ ಗೊಬ್ಬರದ ಗುಂಡಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣವೇ ಅಂಕೋಲದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನೂ ಓದಿ: ಭಯೋತ್ಪಾದನೆ, ಶಾಂತಿ ಒಟ್ಟಿಗೆ ಇರಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್ ಗುಡುಗು

  • ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ – ಇಬ್ಬರು ಆರೋಪಿಗಳ ಕಾಲಿಗೆ ಗುಂಡು!

    ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ – ಇಬ್ಬರು ಆರೋಪಿಗಳ ಕಾಲಿಗೆ ಗುಂಡು!

    ಕಾರವಾರ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಅಂಕೋಲಾ (Ankola) ಪೊಲೀಸರು ಗುಂಡು ಹಾರಿಸಿದ್ದಾರೆ.

    ಗುಂಡೇಟು ತಿಂದ ಆರೋಪಿಗಳನ್ನು ಮಂಗಳೂರು (Mangaluru) ಮೂಲದ ತಲ್ಲತ್ತ ಮತ್ತು ನವಫಾಲ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ, ಜ.29 ರಂದು ರಾಮನಗುಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆಯಾಗಿದ್ದ ಕಾರಿನಲ್ಲಿ ಸಿಕ್ಕ ಒಂದು ಕೋಟಿ ರೂ. ಪ್ರಕರಣದಲ್ಲಿ ಬಂಧಿತರಾಗಿದ್ದರು.ಇದನ್ನೂ ಓದಿ: Ankola| ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ಹಣ ಪತ್ತೆ

    ಸ್ಥಳ ಮಹಜರಿಗಾಗಿ ಆರೋಪಿಗಳನ್ನ ಅಂಕೋಲಾ ಕಡೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಕೊಲೆಗೈದು ಅಂತ್ಯಸಂಸ್ಕಾರ ಮಾಡಿ ಜೈಲುಪಾಲಾಗಿದ್ದ ಪತಿಗೆ ಶಾಕ್‌ – 4 ವರ್ಷದ ಬಳಿಕ ಪ್ರಿಯಕರನ ಜೊತೆ ಪತ್ನಿ ಪ್ರತ್ಯಕ್ಷ!

    ಘಟನೆಯಲ್ಲಿ ಮೂವರು ಪೊಲೀಸರ ಕಾಲಿಗೆ ಮತ್ತು ತಲೆಗೆ ಗಾಯವಾಗಿದೆ. ಗಾಯಾಳುಗಳನ್ನ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಉತ್ತರ ಕನ್ನಡ ಎಸ್ಪಿ ಎಂ ನಾರಾಯಣ ಭೇಟಿ ನೀಡಿದ್ದಾರೆ.

    ಕಾರು ಪತ್ತೆಯಾದ ತಿಂಗಳ ಬಳಿಕ ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು. ಕಾರಿನಲ್ಲಿ ಪತ್ತೆಯಾಗಿದ್ದು ದರೋಡೆ ಮಾಡಿ ಕೊಂಡೊಯ್ಯುತ್ತಿದ್ದ ಹಣ ಎಂದು ಶಂಕಿಸಲಾಗಿತ್ತು. ಇದನ್ನೂ ಓದಿ: 180 ರೂ. ಟೋಲ್‌ ಉಳಿಸಲು ಹೋಗಿ ದುರಂತ ಅಂತ್ಯ – ಒಂದೇ ಕುಟುಂಬದ ನಾಲ್ವರ ಸಾವು

  • ಕೇಣಿ ಬಂದರು ಸರ್ವೇಗೆ ತೀವ್ರ ವಿರೋಧ – ಸಮುದ್ರಕ್ಕೆ ಹಾರಿ ಪ್ರತಿಭಟನಾಕಾರ ಆಕ್ರೋಶ

    ಕೇಣಿ ಬಂದರು ಸರ್ವೇಗೆ ತೀವ್ರ ವಿರೋಧ – ಸಮುದ್ರಕ್ಕೆ ಹಾರಿ ಪ್ರತಿಭಟನಾಕಾರ ಆಕ್ರೋಶ

    – ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

    ಕಾರವಾರ: ಕೇಣಿ ಗ್ರೀನ್ ಫೀಲ್ಡ್ (Keni Green Field) ಖಾಸಗಿ ಬಂದರು ಯೋಜನೆಯ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿಷೇಧಾಜ್ಞೆ ನಡುವೆಯೇ ಪ್ರತಿಭಟನಾನಿರತ ಮೀನುಗಾರರು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ಜೆ.ಎಸ್.ಡಬ್ಲ್ಯು ಕಂಪನಿಯು 4,119 ಕೋಟಿ ರೂ. ವೆಚ್ಚದಲ್ಲಿ ಉತ್ತರ ಕನ್ನಡ (Uttar Kannada) ಜಿಲ್ಲೆಯ ಅಂಕೋಲದ (Ankola)  ಕೇಣಿಯಲ್ಲಿ ಗ್ರೀನ್ ಫೀಲ್ಡ್ ಖಾಸಗಿ ಬಂದರು ಯೋಜನೆಯ ಸರ್ವೇ ಕಾರ್ಯಕ್ಕೆ ಮುಂದಾಗಿದೆ. ಇದಕ್ಕೆ ಅನುಮತಿ ನೀಡಿದ ಜಿಲ್ಲಾಡಳಿತದ ಈ ನಡೆಯನ್ನು ಖಂಡಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: HALನಲ್ಲಿ ಲಘು ಯುದ್ಧ ವಿಮಾನಗಳ ಉತ್ಪಾದನೆಯಲ್ಲಿ ವಿಳಂಬ – ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ ರಚನೆ

    ಈ ವೇಳೆ ಸರ್ವೇ ಖಂಡಿಸಿ ಮೂವರು ಮಹಿಳೆಯರು ಸಮುದ್ರಕ್ಕೆ ಹಾರಿದ್ದಾರೆ. ಮೂವರು ಮಹಿಳೆಯರನ್ನ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಸರ್ವೇ ಕಾರ್ಯ ನಿಲ್ಲಿಸುವವರೆಗೂ ಉಗ್ರ ಪ್ರತಿಭಟನೆ ಮಾಡುತ್ತೇವೆ. ಬಂದರು ಯೋಜನೆಯನ್ನು ಕೈಬಿಡದಿದ್ದರೇ ಮತ ಬಹಿಷ್ಕಾರದ ಜೊತೆ ಸಾಮೂಹಿಕವಾಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಡಲ ತೀರದಲ್ಲಿ ಸೇರಿದ ನೂರಾರು ಮೀನುಗಾರಿಕಾ ಮಹಿಳೆಯರು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಯುಎಸ್‌ಏಡ್‌ ಉದ್ಯೋಗಿಗಳಿಗೆ ಟ್ರಂಪ್‌ ಶಾಕ್‌ – 1,600ಕ್ಕೂ ಹೆಚ್ಚು ಮಂದಿ ವಜಾ

    ಪ್ರತಿಭಟನೆ ಹಿನ್ನೆಲೆ ಕೇಣಿಯಲ್ಲಿ 2 ದಿನ ಬಿ.ಎನ್.ಎಸ್ 163 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

  • Ankola| ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ಹಣ ಪತ್ತೆ

    Ankola| ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ಹಣ ಪತ್ತೆ

    ಕಾರವಾರ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ (Car) 1.15 ಕೋಟಿ ರೂ. ಪತ್ತೆಯಾದ ಘಟನೆ ಅಂಕೋಲದ (Ankola) ರಾಮನಗುಳಿ ಬಳಿಯ ರಾಷ್ಟ್ರಿಯ ಹೆದ್ದಾರಿ 66ರ ಪಕ್ಕದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

    ಮಂಗಳವಾರ ಸಂಜೆಯಿಂದ ನಿರ್ಜನ ಪ್ರದೇಶದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಈ ಬಗ್ಗೆ ಅಂಕೋಲಾ ಪೊಲೀಸರಿಗೆ ಸಾರ್ವಜನಿಕರಿಂದ ಮಾಹಿತಿ ಸಿಗುತ್ತಿದ್ದಂತೆ ಪರಿಶೀಲನೆಗೆ ಬಂದ ಪೊಲೀಸರು ಕಾರಿನ ಬಾಗಿಲು ಓಪನ್ ಮಾಡಿ ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ ಕಬ್ಬಿಣದ ಬಾಕ್ಸ್ ಸಿಕ್ಕಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ 1.15 ಕೋಟಿ ಹಣ (Money) ಇರುವುದು ಕಂಡುಬಂದಿದೆ. ಇದನ್ನೂ ಓದಿ: MUDA Scam| ಒಂದೇ ದಿನದಲ್ಲಿ ಒಬ್ಬನ ಹೆಸರಿಗೆ 31 ಸೈಟ್ ರಿಜಿಸ್ಟರ್ – ಇಡಿಯಿಂದ 160 ಸೈಟ್‌ ಜಪ್ತಿ

    ಕೆಎ 51 ಎಮ್‌ಬಿ 9634 ನಂಬರ್ ಪ್ಲೇಟಿನ ಕಾರು ಇದಾಗಿದೆ. ಕಾರಿನ ರಿಜಿಸ್ಟ್ರೇಷನ್ ನಂಬರ್ ಅನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು ತೋರಿಸಿದ್ದು, ಮಡಿಕೇರಿ ಆರ್‌ಟಿಓ ಪಾಸಿಂಗ್ ಹೊಂದಿದೆ. ಅಸಲಿಗೆ ಇದು ಕ್ರೇಟಾ ಕಾರಾಗಿದ್ದು, ಈ ಕಾರಿನ ಬಾನೆಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ ಹಾಗೂ ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಇದನ್ನೂ ಓದಿ: ಮೈಸೂರು ಮಹಾರಾಣಿ ಕಾಲೇಜು ಕಟ್ಟಡ ಕುಸಿತ – ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸಾವು

    ಸದ್ಯ ಅಂಕೋಲ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದು ,ಯಾವುದೋ ದರೋಡೆ ಮಾಡಿ ಹಣ ಸಾಗಿಸುತ್ತಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ – 10 ಸಾವು

  • ಪರಿಸರ ಸಂರಕ್ಷಿಸಲು ಜೀವನ ಮುಡಿಪಾಗಿಟ್ಟರು: ತುಳಸಿ ಗೌಡ ನಿಧನಕ್ಕೆ ಮೋದಿ ಸಂತಾಪ

    ಪರಿಸರ ಸಂರಕ್ಷಿಸಲು ಜೀವನ ಮುಡಿಪಾಗಿಟ್ಟರು: ತುಳಸಿ ಗೌಡ ನಿಧನಕ್ಕೆ ಮೋದಿ ಸಂತಾಪ

    ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola) ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ (Tulsi Gowda) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

    ಈ ಕುರಿತು  ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಮೋದಿ (Narendra Modi) ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಗೌರವಾನ್ವಿತ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಪ್ರಕೃತಿಯನ್ನು ಪೋಷಿಸಲು, ಸಾವಿರಾರು ಸಸಿಗಳನ್ನು ನೆಡಲು ಮತ್ತು ನಮ್ಮ ಪರಿಸರವನ್ನು ಸಂರಕ್ಷಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇವರು ಪರಿಸರ ಸಂರಕ್ಷಣೆಗೆ ಮಾರ್ಗದರ್ಶಕ ಬೆಳಕಾಗಿ ಉಳಿಯುತ್ತಾರೆ. ಅವರ ಕೆಲಸ ನಮ್ಮ ಭೂಮಿಯನ್ನು ರಕ್ಷಿಸಲು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾ ಗೌಡ ಬಿಡುಗಡೆ

    ತುಳಸಿ ಗೌಡ ಯಾರು?
    ತುಳಸಿ ಗೌಡ ಅವರು ವಯೋಸಹಜತೆಯಿಂದ ಸೋಮವಾರ ಸಂಜೆ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಹಾಲಕ್ಕಿ ಬುಡಕಟ್ಟು ಜನಾಂಗದ ಮಹಿಳೆಯಾಗಿರುವ ಇವರಿಗೆ ಸುಬ್ರಾಯ ಮತ್ತು ಸೋಮಿ ಎಂಬ ಇಬ್ಬರು ಮಕ್ಕಳಿದ್ದಾರೆ. ತುಳಸಿ ಗೌಡ ನಾಲ್ಕು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನ- ಒಂದೇ ದಿನ 15 ಗಂಟೆ ವಿಧಾನಸಭಾ ಕಲಾಪ

    ವರ್ಷಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ತುಳಸಿ ಗೌಡ ಅವರು ನೆಟ್ಟು ಬೆಳೆಸುತ್ತಿದ್ದರು. ಈವರೆಗೆ ಲಕ್ಷಾಂತರ ಗಿಡಗಳನ್ನು ಬೆಳೆಸಿ ಪಾಲನೆ ಮಾಡಿದ ಕೀರ್ತಿ ಇವರದ್ದು. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಸಾಕಲು ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ ಇವರು ಅಲ್ಲಿಯೇ ಗಿಡಗಳ ಆರೈಕೆ ಪೋಷಣೆ ಮಾಡುತ್ತಾ ಇಲಾಖೆಯಿಂದ ಹೇಳದಿದ್ದರೂ ಸಂಬಳ ಬಯಸದೇ ಸೇವೆ ರೂಪದಲ್ಲಿ ಅರಣ್ಯ ಬೆಳಸುವ ಕಾಯಕಕ್ಕೆ ಕೈಹಾಕಿದರು. ಇದಲ್ಲದೇ ಅರಣ್ಯದಲ್ಲಿ ಅಳವಿನಂಚಿನಲ್ಲಿ ಇರುವ ಹಲವು ಕಾಡು ಗಿಡಗಳ ಬೀಜ ಸಂಗ್ರಹಿಸಿ ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಸದ್ದಿಲ್ಲದೇ ಹಸಿರು ಕ್ರಾಂತಿ ಮಾಡಿದರು. ಇದನ್ನೂ ಓದಿ: Bengaluru| ಕೌಟುಂಬಿಕ ಕಲಹದಿಂದ ಮನನೊಂದು ಕ್ರಿಕೆಟ್ ಪಟು ನೇಣಿಗೆ ಶರಣು

    ಹಾಲಕ್ಕಿ ಜನಾಂಗದಲ್ಲಿ ಹುಟ್ಟಿದ ಇವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಸಿರು ಬೆಳಸುವ ಕಾಯಕ ಮಾಡುತ್ತಾ ಸಾಗಿದರು. ಅಳಿವಿನಂಚಿನ ಸಸ್ಯಗಳನ್ನು ಬೆಳೆಸಿದ ಕೀರ್ತಿ ಇವರದ್ದು. ಇದನ್ನೂ ಓದಿ: ಗ್ಯಾರಂಟಿ ಎಫೆಕ್ಟ್ – ಮಹಿಳಾ ಕಾರ್ಮಿಕರು ಸಿಗದೇ ರೈತರ ಪರದಾಟ

  • ಕೆಟ್ಟು ನಿಂತ ಕಾರಿಗೆ ಲಾರಿ ಡಿಕ್ಕಿ – ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

    ಕೆಟ್ಟು ನಿಂತ ಕಾರಿಗೆ ಲಾರಿ ಡಿಕ್ಕಿ – ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

    ಕಾರವಾರ: ಕೆಟ್ಟು ನಿಂತ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 15 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಅಂಕೋಲದ (Ankola) ರಾಷ್ಟ್ರೀಯ ಹೆದ್ದಾರಿ 67ರ ಬಾಳೆಗುಳಿ ಕ್ರಾಸ್ ಬಳಿ ನಡೆದಿದೆ.

    ಕಾರಿಗೆ ಲಾರಿ ಡಿಕ್ಕಿ ಹೊಡೆದ ಬಳಿಕ ಚಾಲಕ ನಾಪತ್ತೆಯಾಗಿದ್ದಾನೆ. ಇದರ ಬೆನ್ನಲ್ಲೇ ಶೋಧ ನಡೆಸಿದಾಗ ಲಾರಿಯಲ್ಲಿ ಅಕ್ರಮವಾಗಿ 15 ಕ್ಕೂ ಹೆಚ್ಚು ಗೋವುಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಜಾರ್ಖಂಡ್‌ನ ಹಲವೆಡೆ ಭೂಮಿ ಕಂಪನ – ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

    ಅಂಕೋಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, 15 ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಆದರೆ ಈ ಗೋವುಗಳನ್ನು ಎಲ್ಲಿಗೆ? ಯಾರು ತೆಗೆದುಕೊಂಡು ಹೋಗುತಿದ್ದರು? ಲಾರಿ ಮಾಲೀಕ ಯಾರು ಎಂಬ ಬಗ್ಗೆ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಗ್ರರನ್ನು ಕೊಲ್ಲುವ ಬದಲು ಬಂಧಿಸಿ: ಫಾರೂಖ್ ಅಬ್ದುಲ್ಲಾ ಆಗ್ರಹ

  • ಶಿರೂರು ಭೂ ಕುಸಿತ ದುರಂತ – ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ

    ಶಿರೂರು ಭೂ ಕುಸಿತ ದುರಂತ – ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ

    ಕಾರವಾರ: ಶಿರೂರು ಭೂ ಕುಸಿತ ದುರಂತದ (Shiruru LandSlide) ಹಿನ್ನೆಲೆ ನಡೆಯುತ್ತಿದ್ದ ಮೂರನೇ ಹಂತದ ಡ್ರಜ್ಜಿಂಗ್ ಕಾರ್ಯಾಚರಣೆಯನ್ನು (Dregding Operation) ಸ್ಥಗಿತಮಾಡಲಾಗಿದೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲದ (Ankola) ಶಿರೂರು ಭೂ ಕುಸಿತದ ಹಿನ್ನೆಲೆ ಮೂರನೇ ಹಂತದ ಕಾರ್ಯಾಚರಣೆಯು ನಡೆಯುತ್ತಿತ್ತು. 13 ದಿನ ಪೂರೈಸಿದ ಡ್ರಜ್ಜಿಂಗ್ ಬೋಟ್ ಮೂಲಕ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಇಂದು ಸ್ಥಗಿತಮಾಡಲಾಗಿದೆ.ಇದನ್ನೂ ಓದಿ: ಒಳಮೀಸಲಾತಿಗೆ ಆಗ್ರಹಿಸಿ ರಾಯಚೂರು ಬಂದ್: ಬಸ್ ಸಂಚಾರ ಸಂಪೂರ್ಣ ಸ್ಥಗಿತ

    ಕಳೆದ 13 ದಿನದಿಂದ ಅಂಕೋಲದ ಗಂಗಾವಳಿ ನದಿಯಲ್ಲಿ ಓಷಿಯನ್ ಕಂಪನಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. 90 ಲಕ್ಷದ ಮೊತ್ತದಲ್ಲಿ 13 ದಿನ ಕಾರ್ಯಾಚರಣೆ ಪೂರ್ಣಗೊಂಡಿದೆ. 13 ದಿನದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಶವ ಹಾಗೂ ಲಾರಿ ಹೊರತೆಗೆದಿದ್ದು, ನಂತರ ಮನುಷ್ಯನ ಮೂಳೆಗಳು ಹಾಗೂ ಕೆಲವು ವಸ್ತುಗಳನ್ನು ಸಹ ಹೊರತೆಗೆಯಲಾಗಿದೆ.

    ಇದಾದ ಬಳಿಕ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಬೃಹತ್ ಆಲದ ಮರ ಹೊರತೆಗೆಯಲಾಗಿತ್ತು. ಆದರೆ ಇದೀಗ ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧರಿಸಿದ್ದಾರೆ. ಇದರ ಬದಲಿಗೆ ಇಂದಿನಿಂದ ಇಬ್ಬರು ಮುಳುಗು ತಜ್ಞರು ಹಾಗೂ ಪೋಕ್ ಲೈನ್ ಮೂಲಕ ಹೋಟೆಲ್ ಕುಸಿದುಹೋದ ಸ್ಥಳದಲ್ಲಿ ನಿಗದಿ ಮಾಡಿದ ಎರಡನೇ ಪಾಯಂಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಭೂಕುಸಿತ ದುರಂತದಲ್ಲಿ ಸತತ 77 ದಿನದ ದೀರ್ಘ ಕಾರ್ಯಾಚರಣೆ ಇದಾಗಿದ್ದು, ಒಟ್ಟು ಮೂರು ಹಂತದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಸಿಕ್ಕ ಮೂಳೆಗಳ ಡಿ.ಎನ್.ಎ ವರದಿ ಬರಬೇಕಿದ್ದು, ಕಾಣೆಯಾದ ಜಗನ್ನಾಥ್, ಲೋಕೇಶ್ ಶವ ಶೋಧ ನಡೆಯಬೇಕಿದೆ.ಇದನ್ನೂ ಓದಿ: 1 ವರ್ಷ ದೇವಿಯ ಆಶೀರ್ವಾದ ಸಿಗಲಿ ಎನ್ನುತ್ತಾ ಅಧಿಕಾರ ಹಂಚಿಕೆಯ ಸುಳಿವು ನೀಡಿದ್ರಾ? – ಕುತೂಹಲ ಮೂಡಿಸಿದ ಸಿಎಂ ಮಾತು