Tag: anklets

  • ಕಾಲು ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

    ಕಾಲು ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

    ಜೈಪುರ್: ಬೆಳ್ಳಿ ಕಾಲು ಗೆಜ್ಜೆಗಾಗಿ ಮಹಿಳೆಯ ಕಾಲನ್ನು ಹಂತಕರು ಕತ್ತರಿಸಿ ಕಳ್ಳತನ ಮಾಡಿರುವ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯ ಜಮ್ವಾ ರಾಮಗಢದಲ್ಲಿ ನಡೆದಿದೆ.

    ಗೀತಾ ದೇವಿ ಶರ್ಮಾ(55) ಮೃತ ಮಹಿಳೆಯಾಗಿದ್ದಾಳೆ. ದರೋಡೆಕೋರರು ಆಕೆಯ ಕಾಲಿನಲ್ಲಿದ್ದ ಬೆಳ್ಳಿಯ ಗೆಜ್ಜೆಗಳನ್ನು ತೆಗೆಯಲಾಗದೆ ಪಾದಗಳನ್ನೇ ಕತ್ತರಿಸಿದ್ದಾರೆ. ಕಳ್ಳರು ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ಓಡಿಹೋಗುವ ಮುನ್ನ ಮನೆಯ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೊಂದು ಆಕೆಯ ಸರ, ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ.

    ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಹಣವನ್ನು ಬಾಚಿಕೊಂಡಿದ್ದಾರೆ. ನಂತರ ಶಬ್ದ ಕೇಳಿ ಮನೆಯತ್ತ ಬರುತ್ತಿದ್ದ ಆಕೆ ಮೇಲೆ ಹೊಲದಲ್ಲೇ ದಾಳಿ ಮಾಡಿದ ದರೋಡೆಕೋರರು ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಆಕೆಯನ್ನು ಕೊಲೆ ಮಾಡಿ ಓಡಿಹೋಗುವಾಗ ಕೆಳಗೆ ಬಿದ್ದಿದ್ದ ಆಕೆಯ ಕಾಲಿನಲ್ಲಿದ್ದ ಬೆಳ್ಳಿ ಗೆಜ್ಜೆ ಅವರ ಕಣ್ಣಿಗೆ ಬಿದ್ದಿದೆ. ಹೀಗಾಗಿ ಮಹಿಳೆಯ ಕಾಲು ಕತ್ತರಿಸಿ ಗೆಜ್ಜೆಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಸಂತ್ರಸ್ತೆಯ ಕುಟುಂಬವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೋರಿದೆ. ಹಾಗೇ ರಾಜಸ್ಥಾನ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಕೋರಿದೆ. ನನ್ನ ತಾಯಿ ಇಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಯಾರು ದಾಳಿ ಮಾಡಿದರು ಎಂದು ನಮಗೆ ತಿಳಿದಿಲ್ಲ. ತನಿಖೆಗಳ ಬಗ್ಗೆ ಪೊಲೀಸರು ನಮಗೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ.

  • ಬೆಳ್ಳಿ ಕಾಲುಚೈನಿಗೋಸ್ಕರ 55ರ ಮಹಿಳೆಯ ಕಾಲುಗಳನ್ನೇ ಕತ್ತರಿಸಿ, ಕೊಲೆಗೈದು ಬಿಸಾಕಿದ್ರು!

    ಬೆಳ್ಳಿ ಕಾಲುಚೈನಿಗೋಸ್ಕರ 55ರ ಮಹಿಳೆಯ ಕಾಲುಗಳನ್ನೇ ಕತ್ತರಿಸಿ, ಕೊಲೆಗೈದು ಬಿಸಾಕಿದ್ರು!

    ಹೈದರಾಬಾದ್: ಕಾಲುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಹೈದರಾಬಾದ್‍ನ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಪತ್ತೆಯಾಗಿದೆ.

    ಮೃತ ಮಹಿಳೆಯನ್ನು 55 ವರ್ಷದ ನರ್ಸಮ್ಮ ಎಂದು ಗುರುತಿಸಲಾಗಿದ್ದು, ಇವರು ನಲ್ಲಕುಂಟ ನಿವಾಸಿ ಎನ್ನಲಾಗಿದೆ. ಮಹಿಳೆ ಧರಿಸಿದ್ದ ಕಾಲುಚೈನಿಗೋಸ್ಕರ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಅಂತ ಎಸ್‍ಆರ್ ನಗರ ಪೊಲೀಸರು ಶಂಕಿಸಿದ್ದಾರೆ.

    ನರ್ಸಮ್ಮ ಮಗಳು ಗರ್ಭಿಣಿಯಾಗಿದ್ದು, ಹೀಗಾಗಿ ಆಕೆಯನ್ನು ತವರು ಮನೆಗೆ ಕರೆದುಕೊಂಡು ಹೋಗಲೆಂದು ಅವರು ಕೆಲ ದಿನಗಳ ಹಿಂದೆ ಮಗಳಿರೋ ರೆಹಮತ್ ನಗರಕ್ಕೆ ಬಂದಿದ್ದರು ಅಂತ ಡಿಸಿಪಿ ಎಆರ್ ಶ್ರೀನಿವಾಸ್ ಹೇಳಿದ್ದಾರೆ.

    ಇದೇ ಜೂನ್ 13ರಂದು ನರ್ಸಮ್ಮ ಅವರು ಮದ್ಯಪಾನ ಮಾಡಬೇಕು ಅಂತ ಹೇಳಿದ್ದರು. ಹೀಗಾಗಿ ಮದ್ಯ ಖರೀದಿಸಲೆಂದು ಅಳಿಯ ಅಂಗಡಿ ಬಳಿ ಬಿಟ್ಟು ಹೋಗಿದ್ದರು. ಇದೇ ವೇಳೆ ದುಷ್ಕರ್ಮಿಗಳು ನರ್ಸಮ್ಮ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ. ದುಷ್ಕರ್ಮಿಗಳು ಮಹಿಳೆಯನ್ನು ಅಪಹರಿಸುವ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಆಸ್ಪತ್ರೆ ಆವರಣದಲ್ಲಿ ಮಹಿಳೆಯೊಬ್ಬರ ಶವವನ್ನು ಕಂಡು ಸ್ಥಳೀಯರು ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನಿಡಿದ್ದಾರೆ. ಹೀಗಾಗಿ ಸಂಜೆ 4 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಮಹಿಳೆಯ ಕಾಲುಚೈನಿಗೋಸ್ಕರ ಆಕೆಯ ಪಾದಗಳನ್ನು ಕತ್ತರಿಸಿ, ಬಳಿಕ ಆಕೆಯನ್ನು ಬರ್ಬರವಾಗಿ ಕೊಲೆಗೈದಿದ್ದಾರೆ. ಮಾತ್ರವಲ್ಲದೇ ತನಿಖೆಯ ದಾರಿ ತಪ್ಪಿಸಲು ಆಕೆಯ ಮೃತದೇಹವನ್ನು ಬೇರೆ ಬೇರೆ ಕಡೆ ಬಿಸಾಕಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.

    ದುರಂತವೆಂದರೆ ಆಸ್ಪತ್ರೆಯಲ್ಲಿ ಸುಮಾರು 16 ಸಿಸಿಟಿವಿ ಕ್ಯಾಮೆರಾಗಳಿದ್ದು, ಆದ್ರೆ ಕೊಲೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿಗಳಿರಲಿಲ್ಲ. ಅದಲ್ಲದೇ ಮೃತ ಮಹಿಳೆ ಆಸ್ಪತ್ರೆಯ ರೋಗಿಯೂ ಅಲ್ಲ. ಯಾಕಂದ್ರೆ ಮಹಿಳೆಯ ಮೃತದೇಹ ಸಿಕ್ಕಿದ ಕೂಡಲೇ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿಗಳ ಹಾಜರಿ ಕರೆದಿದ್ದಾರೆ. ಈ ವೇಳೆ ಎಲ್ಲಾ ರೋಗಿಗಳು ಆಸ್ಪತ್ರೆಯಲ್ಲೇ ಇದ್ದರು. ಹೀಗಾಗಿ ಮೃತ ಮಹಿಳೆ ಆಸ್ಪತ್ರೆಯ ರೋಗಿ ಅಲ್ಲ ಎಂಬುದಾಗಿ ತಿಳಿದುಬಂದಿದೆ.

    ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಸ್ಥಳೀಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.