Tag: Anju

  • ನಾವು ಆಕೆಯನ್ನು ಭೇಟಿ ಮಾಡುವುದಿಲ್ಲ – ಅಂಜು ಮಕ್ಕಳು ಹೇಳಿದ್ದಿಷ್ಟು…

    ನಾವು ಆಕೆಯನ್ನು ಭೇಟಿ ಮಾಡುವುದಿಲ್ಲ – ಅಂಜು ಮಕ್ಕಳು ಹೇಳಿದ್ದಿಷ್ಟು…

    ಜೈಪುರ: ತನ್ನ ಫೇಸ್‌ಬುಕ್ ಪ್ರೇಮಿ ನಸ್ರುಲ್ಲಾಳನ್ನು ಮದುವೆಯಾಗಲು ಪಾಕಿಸ್ತಾನಕ್ಕೆ (Pakistan) ತೆರಳಿದ್ದ ಭಾರತದ ಮಹಿಳೆ ಅಂಜು (Anju) ಅಲಿಯಾಸ್‌ ಫಾತಿಮಾ (34) ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಭಾರತಕ್ಕೆ ಬಂದಿರುವುದಾಗಿ ತಿಳಿಸಿದ್ದಾಳೆ. ಆದ್ರೆ ಮಕ್ಕಳು ಆಕೆಯನ್ನ ಭೇಟಿಯಾಗುವುದಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ದೆಹಲಿಗೆ (NewDelhi) ಬಂದಿದ್ದ ಅಂಜು, ತುಂಬಾ ಸಂತೋಷವಾಗಿದ್ದೀನಿ, ಬೇರೆ ಹೇಳೋದಕ್ಕೆ ಏನೂ ಇಲ್ಲ ಎಂದು ಹೇಳಿದ್ದರು. ಅಲ್ಲದೇ ಪತಿಗೆ ಡಿವೋರ್ಸ್‌ ನೀಡಿ, ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುವ ಬಗ್ಗೆ ಒಲವು ತೋರಿದ್ದರು. ಆದ್ರೆ ಅವರು ರಾಜಸ್ಥಾನದ ಭಿವಾಡಿಯಲ್ಲಿರುವ ತಮ್ಮ ತವರು ಮನೆಗೂ ತೆರಳಿಲ್ಲ, ಮಕ್ಕಳನ್ನು ಭೇಟಿಯಾಗಿಲ್ಲ. ತಾವಿರುವ ಸ್ಥಳವನ್ನೂ ಬಹಿರಂಗಪಡಿಸಿಲ್ಲ. ಆದ್ರೆ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಇರುವುದಾಗಿ ಸ್ಥಳೀಯ ಮೂಲಗಳು ತಿಳಿಸಿವೆ.

    ಅಂಜು ತಂಗಿರುವ ರೆಸಿಡೆನ್ಶಿಯಲ್ ಸೊಸೈಟಿಗೆ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲಾ ವಾಹನಗಳು ಮತ್ತು ಅಪರಿಚಿತರನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಪ್ರವೇಶಿಸಲು ಅನುಮತಿಸಲಾಗಿದೆ. ಇಂಟೆಲಿಜೆನ್ಸ್ ಬ್ಯೂರೋದ ತಂಡವು ಅಂಜು ಅವರ 15 ವರ್ಷದ ಮಗಳು ಮತ್ತು 6 ವರ್ಷದ ಮಗನನ್ನೂ ವಿಚಾರಣೆ ನಡೆಸುತ್ತಿದೆ.

    ಅಂಜು ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಭಿವಾಡಿ ಹೆಚ್ಚುವರಿ ಎಸ್ಪಿ ದೀಪಕ್ ಸೈನಿ ಹೇಳಿದ್ದಾರೆ. ಬೇಕಿದ್ದರೆ ಅಂಜು ಅವರನ್ನು ಕೂಡ ವಿಚಾರಣೆ ನಡೆಸಿ ಬಂಧಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ವೃದ್ಧಿ – ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

    ಅಂಜು ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ ನಂತರ, ಆಕೆಯನ್ನು ಪಂಜಾಬ್ ಪೊಲೀಸ್‌ನ ಗುಪ್ತಚರ ತಂಡ ಮತ್ತು ಅಮೃತಸರದಲ್ಲಿ ಐಬಿಯಲ್ಲಿ ವಿಚಾರಣೆಗೆ ಒಳಪಡಿಸಿದೆ. ಇದಕ್ಕೂ ಮುನ್ನ ಭಾರತದಲ್ಲಿರುವ ಪತಿ ಅರವಿಂದ್‌ಗೆ ವಿಚ್ಛೇದನ ನೀಡಿದ ನಂತರ ತನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾಳೆ. ಆದ್ರೆ ಅರವಿಂದ್‌ ಅವಳೊಂದಿಗೆ ಮಾತನಾಡಲು ಆಸಕ್ತಿ ಇಲ್ಲ. ಜೊತೆಗೆ ನಾನಿನ್ನೂ ವಿಚ್ಛೇದನ ಪಡೆದಿಲ್ಲ, ವಿಚ್ಛೇದನಕ್ಕೆ 3 ರಿಂದ 5 ತಿಂಗಳು ಸಮಯ ಬೇಕು ಎಂದಿದ್ದಾರೆ.

    ಅಂಜು ಭಾರತಕ್ಕೆ ಬರಲು ಕೇವಲ 1 ತಿಂಗಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದಿದ್ದಾರೆ. ಕಾನೂನು ತಜ್ಞರ ಪ್ರಕಾರ, ವಿಚ್ಛೇದನದ ನಂತರವೇ ಅವಳು ತನ್ನ ಮಕ್ಕಳ ಪಾಲನೆಯನ್ನು ಪಡೆಯಬಹುದು ಮತ್ತು ಅದಕ್ಕಿಂತ ಮೊದಲು ಅಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಪತಿಗೆ ಡಿವೋರ್ಸ್ ಕೊಟ್ಟು ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲಿದ್ದಾಳಂತೆ ಅಂಜು!

    ಅಂಜು ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆಯಾಗಿದ್ದು, ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯನ್ನು ಭೇಟಿಯಾಗಲು ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಕೆಲ ದಿನ ಜೈಪುರಕ್ಕೆ ಹೋಗುವುದಾಗಿ ಆಕೆ ತನ್ನ ಮೊದಲ ಪತಿ ಅರವಿಂದ್‍ಗೆ ಹೇಳಿದ್ದಳು. ಆದರೆ ಅಂಜು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿರುವುದು ಆಕೆಯ ಪತಿಗೆ ಮಾಧ್ಯಮಗಳ ಮೂಲಕ ತಿಳಿದುಬಂದಿತ್ತು.

  • ಪತಿಗೆ ಡಿವೋರ್ಸ್ ಕೊಟ್ಟು ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲಿದ್ದಾಳಂತೆ ಅಂಜು!

    ಪತಿಗೆ ಡಿವೋರ್ಸ್ ಕೊಟ್ಟು ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲಿದ್ದಾಳಂತೆ ಅಂಜು!

    ನವದೆಹಲಿ: ಮಕ್ಕಳನ್ನು ನೋಡಬೇಕು ಎಂದು ಹೇಳಿ ಈಗಾಗಲೇ ಪಾಕಿಸ್ತಾನದಿಂದ (Pakistan) ಭಾರತಕ್ಕೆ ಬಂದಿರುವ ಅಂಜು ಇದೀಗ ಮತ್ತೆ ಪಾಕಿಸ್ತಾನಕ್ಕೆ ಹೋಗುವ ಪ್ಲಾನ್ ಮಾಡಿಕೊಂಡಿದ್ದಾಳೆ.

    ಹೌದು. ಪತಿಗೆ ಡಿವೋರ್ಸ್ ಕೊಟ್ಟು, ಮಕ್ಕಳೊಂದಿಗೆ ಮತ್ತೆ ಪಾಕಿಸ್ತಾನಕ್ಕೆ ತೆರಳಿ ಫೇಸ್‍ಬುಕ್ (Facebook) ಗೆಳೆಯನ ಜೊತೆ ಜೀವನ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದಾಗಿ ವರದಿಯಾಗಿದೆ.

    ಭಾರತಕ್ಕೆ (India) ಹಿಂದಿರುಗಿದ ಬಳಿಕ ತನ್ನ ವಿಚಾರಣೆಯ ವೇಳೆ ಅಂಜು, ಭಾರತದಲ್ಲಿ ತನ್ನ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದಳು. ಅಲ್ಲದೆ ತಾನು ಮತ್ತೆ ಪಾಕಿಸ್ತಾನಕ್ಕೆ ಹಿಂದಿರುಗುವುದಾಗಿ ಹೇಳಿದಳು. ಭಾರತದಲ್ಲಿರುವ ತನ್ನ ಪತಿ ಅರವಿಂದ್‍ಗೆ ವಿಚ್ಛೇದನ ನೀಡಿದ ನಂತರ ತನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುತ್ತೇನೆ. ತಾನು ಈ ವರ್ಷ ಜುಲೈ 27 ರಂದು ಪಾಕಿಸ್ತಾನಕ್ಕೆ ಹೋಗಿದ್ದೆ. ತಾನು ಇಸ್ಲಾಂಗೆ ಮತಾಂತರಗೊಂಡು ನುಸ್ರುಲ್ಲಾನನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

    ಇತ್ತ ಅಂಜು ಭಾರತಕ್ಕೆ ವಾಪಸ್ ಆಗಿರುವುದು ಹಾಗೂ ವಿಚ್ಛೇದನದ ಕುರಿತು ಕೇಳಿದಾಗ, ಈ ಬಗ್ಗೆ ತನಗೆ ತಿಳಿದಿಲ್ಲ. ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೆಳೆಯನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ತವರಿಗೆ ವಾಪಸ್

    ಹಿಂದಿರುಗುತ್ತಿದ್ದ ಅಂಜು ದೆಹಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು ಮಾತನಾಡಿಸಲು ತೆರಳಿದರು. ಈ ವೇಳೆ ಆಕೆ, ತನ್ನ ತಾಯ್ನಾಡಿಗೆ ಆಗಮನದ ಬಗ್ಗೆ ಮಾತನಾಡಲು ನಿರಾಕರಿಸಿದಳು. ನಾನು ಈಗಲೇ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ತಿಳಿಸಿದ್ದಾಳೆ. ಮೂಲಗಳ ಪ್ರಕಾರ, ಆಕೆಯ ಮದುವೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಆಕೆಯ ಬಳಿ ಇರಲಿಲ್ಲ. ತನ್ನ ಗೆಳೆಯ ನಸ್ರುಲ್ಲಾ ಬಗ್ಗೆ ಮಾತನಾಡುತ್ತಾ, ಅವರು ಔಷಧಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

    ಅಂಜು ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆಯಾಗಿದ್ದು, ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯನ್ನು ಭೇಟಿಯಾಗಲು ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಕೆಲ ದಿನ ಜೈಪುರಕ್ಕೆ ಹೋಗುವುದಾಗಿ ಆಕೆ ತನ್ನ ಮೊದಲ ಪತಿ ಅರವಿಂದ್‍ಗೆ ಹೇಳಿದ್ದಳು. ಆದರೆ ಅಂಜು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿರುವುದು ಆಕೆಯ ಪತಿಗೆ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅರವಿಂದ್, ನನ್ನ ಪತ್ನಿ ವಾಟ್ಸಪ್‍ನಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿದ್ದಾಳೆ. ಆಕೆ ಲಾಹೋರ್‍ಗೆ ತೆರಳಿದ ದಿನ ಸಂಜೆ 4 ಗಂಟೆ ಸುಮಾರಿಗೆ ಕರೆ ಮಾಡಿದ್ದು, ತಾನು ಲಾಹೋರ್‍ನಲ್ಲಿದ್ದೇನೆ ಮತ್ತು 2-3 ದಿನಗಳಲ್ಲಿ ಮರಳುತ್ತೇನೆಂದು ಹೇಳಿದ್ದಾಗಿ ತಿಳಿಸಿದ್ದರು. ಪಾಕಿಸ್ತಾನದಲ್ಲಿ ಅಂಜು ತನ್ನ ಗೆಳೆಯನನ್ನು ಭೇಟಿಯಾಗಲು ಹೋಗಿರುವ ಬಗ್ಗೆ ಕೇಳಿದಾಗ, ಅವರಿಬ್ಬರ ಸಂಬಂಧದ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಆಕೆ ಮುಂದೊಂದು ದಿನ ನನ್ನ ಬಳಿಗೆ ಬರುತ್ತಾಳೆ ಎಂಬ ಭರವಸೆ ವ್ಯಕ್ತಪಡಿಸಿದ್ದರು. ಇದೀಗ ಆಕೆ ಭಾರತಕ್ಕೆ ಬಂದಿದ್ದು, ಮತ್ತೆ ವಾಪಸ್ ಹೋಗುವುದಾಗಿ ಹೇಳುತ್ತಿದ್ದಾಳೆ.

  • ಗೆಳೆಯನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ತವರಿಗೆ ವಾಪಸ್

    ಗೆಳೆಯನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ತವರಿಗೆ ವಾಪಸ್

    ನವದೆಹಲಿ: ಈ ವರ್ಷ ಜುಲೈನಲ್ಲಿ ತನ್ನ ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು (Nasrullah) ಮದುವೆಯಾಗಲು ಪಾಕಿಸ್ತಾನಕ್ಕೆ (Pakistan) ಹೋಗಿದ್ದ ಮಹಿಳೆ ಅಂಜು (Anju) ಇತ್ತೀಚೆಗೆ ವಾಘಾ ಗಡಿ ಮೂಲಕ ಭಾರತಕ್ಕೆ (India) ಮರಳಿದ್ದಾಳೆ.

    ಫಾತಿಮಾ (Fatima) ಎಂದು ಹೆಸರನ್ನು ಬದಲಿಸಿಕೊಂಡಿರುವ ಅಂಜು (34) ಜುಲೈನಲ್ಲಿ ಪಾಕಿಸ್ತಾನಕ್ಕೆ ತೆರಳಿ ಖೈಬರ್ ಪಖ್ತುಂಕ್ವಾದಲ್ಲಿ ವಾಸವಾಗಿದ್ದಳು. ಆಕೆ ಪಾಕಿಸ್ತಾನದಲ್ಲಿ ತನ್ನ ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರವಾಗಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

    ಪಾಕಿಸ್ತಾನಕ್ಕೆ ತೆರಳಿದ್ದಾಗ ಅಂಜು ಆರಂಭದಲ್ಲಿ ತನ್ನ ಗೆಳೆಯನನ್ನು ಭೇಟಿಯಾಗಲು ಹಾಗೂ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಹೋಗುವುದಾಗಿ ತಿಳಿಸಿದ್ದಳು. ಈ ವೇಳೆ ನಸ್ರುಲ್ಲಾನನ್ನು ಮದುವೆಯಾಗುವ ಯಾವುದೇ ಯೋಜನೆ ಇಲ್ಲ, ತನ್ನ ವೀಸಾ ಅವಧಿ ಮುಗಿದ ಬಳಿಕ ಆಗಸ್ಟ್ 20ಕ್ಕೆ ಭಾರತಕ್ಕೆ ಮರಳುವುದಾಗಿ ಹೇಳಿದ್ದಳು.

    ಈ ಹೇಳಿಕೆ ನೀಡಿದ ಒಂದು ದಿನದ ಬಳಿಕ ಅಂಜು ನಸ್ರುಲ್ಲಾನನ್ನು ವಿವಾಹವಾದಳು ಹಾಗೂ ತನ್ನ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಳು. ಆಗಸ್ಟ್‌ನಲ್ಲಿ ಪಾಕಿಸ್ತಾನ ಆಕೆಯ ವೀಸಾವನ್ನು 1 ವರ್ಷಕ್ಕೆ ವಿಸ್ತರಿಸಿತು. ನಂತರ ಸೆಪ್ಟೆಂಬರ್‌ನಲ್ಲಿ ನಸ್ರುಲ್ಲಾ ತನ್ನ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ, ತನ್ನ ಮಕ್ಕಳನ್ನು ನೋಡಲು ಬಯಸಿದ್ದಾಳೆ ಎಂದು ಹೇಳಿಕೊಂಡಿದ್ದರು. ಇದೀಗ ಅಂಜು ಭಾರತಕ್ಕೆ ಮರಳಿದ್ದಾಳೆ. ಇದನ್ನೂ ಓದಿ: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಬ್ಲಾಸ್ಟ್ – ಯುವಕ ಗಂಭೀರ

    ಅಂಜು ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆಯಾಗಿದ್ದು, ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯನ್ನು ಭೇಟಿಯಾಗಲು ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಕೆಲ ದಿನ ಜೈಪುರಕ್ಕೆ ಹೋಗುವುದಾಗಿ ಆಕೆ ತನ್ನ ಮೊದಲ ಪತಿ ಅರವಿಂದ್‌ಗೆ ಹೇಳಿದ್ದಳು. ಆದರೆ ಅಂಜು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿರುವುದು ಆಕೆಯ ಪತಿಗೆ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅರವಿಂದ್, ನನ್ನ ಪತ್ನಿ ವಾಟ್ಸಪ್‌ನಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿದ್ದಾಳೆ. ಆಕೆ ಲಾಹೋರ್‌ಗೆ ತೆರಳಿದ ದಿನ ಸಂಜೆ 4 ಗಂಟೆ ಸುಮಾರಿಗೆ ಕರೆ ಮಾಡಿದ್ದು, ತಾನು ಲಾಹೋರ್‌ನಲ್ಲಿದ್ದೇನೆ ಮತ್ತು 2-3 ದಿನಗಳಲ್ಲಿ ಮರಳುತ್ತೇನೆಂದು ಹೇಳಿದ್ದಾಗಿ ತಿಳಿಸಿದ್ದರು.

    ಪಾಕಿಸ್ತಾನದಲ್ಲಿ ಅಂಜು ತನ್ನ ಗೆಳೆಯನನ್ನು ಭೇಟಿಯಾಗಲು ಹೋಗಿರುವ ಬಗ್ಗೆ ಕೇಳಿದಾಗ, ಅವರಿಬ್ಬರ ಸಂಬಂಧದ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಆಕೆ ಮುಂದೊಂದು ದಿನ ನನ್ನ ಬಳಿಗೆ ಬರುತ್ತಾಳೆ ಎಂಬ ಭರವಸೆ ವ್ಯಕ್ತಪಡಿಸಿದ್ದರು.

    ಅಂಜು ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಅರವಿಂದ್ ಅವರನ್ನು ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇದನ್ನೂ ಓದಿ: ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು

  • ಫೇಸ್‍ಬುಕ್ ಗೆಳೆಯನಿಗಾಗಿ ಪಾಕ್‍ಗೆ ತೆರಳಿದ್ದಾಕೆಗೆ ಈಗ ಮಕ್ಕಳನ್ನು ನೋಡುವ ಬಯಕೆ!

    ಫೇಸ್‍ಬುಕ್ ಗೆಳೆಯನಿಗಾಗಿ ಪಾಕ್‍ಗೆ ತೆರಳಿದ್ದಾಕೆಗೆ ಈಗ ಮಕ್ಕಳನ್ನು ನೋಡುವ ಬಯಕೆ!

    – ಭಾರತಕ್ಕೆ ವಾಪಸ್ ಆಗುತ್ತಾಳಾ ಅಂಜು..?

    ಇಸ್ಲಾಮಾಬಾದ್: ತನ್ನ ಫೇಸ್‍ಬುಕ್ (Facebook) ಗೆಳೆಯನನ್ನು ಮದುವೆ ಮಾಡಿಕೊಳ್ಳಲೆಂದು ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ (Pakistan) ತೆರಳಿದ್ದಾಕೆಗೆ ಇದೀಗ ತನ್ನ ಮಕ್ಕಳನ್ನು ನೋಡುವ ಬಯಕೆಯಾಗಿದೆ.

    ಈ ಸಂಬಂಧ ಅಂಜು ಪಾಕಿಸ್ತಾನದ ಪತಿ ನುಸ್ರುಲ್ಲಾ ಮಾತನಾಡಿದ್ದಾನೆ. ಅಂಜು ತಮ್ಮ ಮಕ್ಕಳನ್ನು ಭೇಟಿ ಮಾಡಲು ಭಾರತಕ್ಕೆ (India) ತೆರಳಲು ಕಾಯುತ್ತಿದ್ದಾಳೆ ಎಂದು ತಿಳಿಸಿದ್ದಾನೆ.

    ತನ್ನ ಇಬ್ಬರು ಮಕ್ಕಳನ್ನು ಪ್ರತಿದಿನ ನೆನಪು ಮಾಡಿಕೊಂಡು ಅಂಜು ಮಾನಸಿಕವಾಗಿ ಕುಗ್ಗುತ್ತಿದ್ದಾಳೆ. ಹೀಗಾಗಿ ಭಾರತಕ್ಕೆ ಹೋಗಿ ಮಕ್ಕಳನ್ನು ಭೇಟಿ ಮಾಡಬೇಕು ಎಂದು ಪಟ್ಟುಹಿಡಿದಿದ್ದಾಳೆ. ಅಂತೆಯೇ ಎನ್‍ಒಸಿಇಗಾಗಿ (ನಿರಾಕ್ಷೇಪಣಾ ಪ್ರಮಾಣಪತ್ರ) ಅರ್ಜಿ ಸಲ್ಲಿಸಿದ್ದಾಳೆ. ಪಾಕಿಸ್ತಾನದ ಆಂತರಿಕ ಸಚಿವಾಲಯಾದಿಂದ ಇದಕ್ಕೆ ಅನುಮತಿ ಸಿಕ್ಕ ಕೂಡಲೇ ವಾಘಾ ಗಡಿ ಮೂಲಕ ಭಾರತಕ್ಕೆ ತೆರಳಿ ಮಕ್ಕಳನ್ನು ಭೇಟಿ ಮಾಡಿ ಮತ್ತೆ ಪಾಕಿಸ್ತಾನಕ್ಕೆ ಮರಳುತ್ತಾಳೆ ಎಂದು ಆತ ತಿಳಿಸಿದ್ದಾನೆ. ಇದನ್ನೂ ಓದಿ: ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬ- ಇಡೀ ಮನೆ ಭಸ್ಮ

    ಸಾಮಾಜಿಕ ಜಾಲತಾಣ ಫೇಸ್‍ಬುಕ್ ಮೂಲಕ ಅಂಜುಗೆ ಪಾಕಿಸ್ತಾನದ ನುಸ್ರುಲ್ಲಾ ಪರಿಚಯವಾಗಿದೆ. ಈ ಪರಿಚಯವು ಪ್ರೇಮಕ್ಕೆ ತಿರುಗಿ ಆತನನ್ನು ಭೇಟಿ ಮಾಡಲು ಬಯಸುತ್ತಾಳೆ. ಅಂತೆಯೇ ತನ್ನಿಬ್ಬರು ಮಕ್ಕಳು ಹಾಗೂ ಪತಿಯನ್ನು ಬಿಟ್ಟು ಪಾಕ್‍ಗೆ ತೆರಳಿದ್ದಾಳೆ. ಇದೀಗ ಆಕೆ ತನ್ನ ಮಕ್ಕಳನ್ನು ನೋಡುವ ಹಂಬಲ ವ್ಯಕ್ತಪಡಿಸಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಠ ಮಾಡಿ ಇಲ್ಲಿಗೆ ಬಂದೆ, ಇದೀಗ ಹಠದಲ್ಲೇ ಹೋಗ್ತಿದ್ದೀನಿ: ಅಂಜು ಡೆತ್‍ನೋಟ್

    ಹಠ ಮಾಡಿ ಇಲ್ಲಿಗೆ ಬಂದೆ, ಇದೀಗ ಹಠದಲ್ಲೇ ಹೋಗ್ತಿದ್ದೀನಿ: ಅಂಜು ಡೆತ್‍ನೋಟ್

    ಬೆಂಗಳೂರು: ಪ್ರೀತಿಸಿ ಮದುವೆಯಾಗಿ 4 ತಿಂಗಳಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಮಹಿಳಾ ಎಂಜಿನಿಯರ್ ಅಂಜು ಅವರು ತಾವು ನಿರ್ಧಾರ ತೆಗೆದುಕೊಳ್ಳುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದಾರೆ.

    ಈ ಡೆತ್‍ನೋಟ್‍ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿರುವ ಕುರಿತು ಹೇಳಿಕೊಂಡಿದ್ದಾರೆ. ಅಲ್ಲದೆ ಅಮ್ಮನ ಬಳಿ ಕ್ಷಮೆಯಾಚಿಸಿದ್ದಾರೆ. ಹಠ ಮಾಡಿ ಮದುವೆಯಾಗಿ ಇಲ್ಲಿಗೆ ಬಂದೆ. ಇದೀಗ ಅದೇ ಹಠದಿಂದ ಇಲ್ಲಿಂದ ಹೋಗುತ್ತಿರುವುದಾಗಿ ಅಂಜು ಬರೆದಿದ್ದಾರೆ.

    ಡೆತ್ ನೋಟ್ ನಲ್ಲಿ ಏನಿದೆ..?: ನನ್ನ ಸಾವಿಗೆ ನಾನೇ ಕಾರಣ. ನನ್ನ ಮನಸ್ಥಿತಿ ಸರಿ ಇಲ್ಲ. ಏನು ಮಾಡ್ತಿದ್ದೀನಿ ಗೊತ್ತಾಗ್ತಿಲ್ಲ ಅಂಜನ್. ಐ ಡೋಂಟ್ ನೋ ವಾಟ್ ಐ ಆ್ಯಮ್ ಡೂಯಿಂಗ್. ನನಗೆ ಬೆನ್ನು ನೋವಿದೆ. ಆದರೂ ಹೇಳಿಕೊಳ್ಳಲು ಆಗ್ತಿಲ್ಲ. ಕೋಪ ಹಠ ಮಾಡಿಕೊಳ್ಳುತ್ತಿದ್ದೆ. ನನಗೆ ಹರ್ಟ್ ಆಗ್ತಿತ್ತು. ನನ್ನ ಜೊತೆ ಇದ್ದರೂ ದೂರ ಇದ್ದೀಯಾ ಅಂತಾ ಅನ್ನಿಸ್ತಿದೆ. ಏನೂ ಗೊತ್ತಾಗ್ತಿಲ್ಲ ಬರಿಯೋದಕ್ಕೆ. ಬಾಯ್ ಇನ್ಯಾವತ್ತೂ ನಿನಗೆ ಹಿಂಸೆ ಕೊಡೋದಕ್ಕೆ ಬರೋದಿಲ್ಲ. ಅಮ್ಮಾ ಐ ಲವ್ ಯೂ, ಹಠ ಮಾಡಿಕೊಂಡು ಇಲ್ಲಿಗೆ ಬಂದೆ. ಹಠ ಮಾಡಿಕೊಂಡು ಹೋಗ್ತಿದ್ದೀನಿ. ಅಮ್ಮಾ ನನ್ನ ಕ್ಷಮಿಸು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಪೋಷಕರ ಆರೋಪವೇನು..?: ಕಡೂರು ತಾಲೂಕು ಬೋಳನಹಳ್ಳಿಯ ರವಿಕುಮಾರ್ ಹೇಮಾವತಿ ದಂಪತಿಯ ಎರಡನೇ ಪುತ್ರಿಯಾಗಿರುವ ಅಂಜು ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಅಗಿ ಕೆಲಸ ನಿರ್ವಹಿಸುತ್ತಿದ್ದರು. ಈಕೆ ಪ್ರೀತಿ ಮಾಡಿ ಕಳೆದ 4 ತಿಂಗಳ ಹಿಂದೆಯಷ್ಟೇ ಅರಕಲಗೂಡು ನಿವಾಸಿ ಅಂಜನ್ ಕಣಿಯಾರ್ (28) ಎಂಬಾತನನ್ನು ವರಿಸಿದ್ದರು. ಇದನ್ನೂ ಓದಿ: ಪ್ರೀತಿಸಿ 4 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಮಹಿಳಾ ಎಂಜಿನಿಯರ್ ಆತ್ಮಹತ್ಯೆ

    ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಇ ಮಾಡಿದ್ದ ಅಂಜು ಹಾಸನದಲ್ಲಿ ಓದುವಾಗ ಇಬ್ಬರ ನಡುವೆ ಪ್ರೀತಿಯಾಗಿತ್ತು. ನಂತರ ಪೋಷಕರನ್ನ ಒಪ್ಪಿಸಿ ಕಳೆದ ಫೆಬ್ರವರಿಯಲ್ಲಿ ಕಡೂರಿನ ಬಳ್ಳೆಕೆರೆಯಲ್ಲಿ ಮದುವೆಯಾಗಿದ್ದರು. ಬಳಿಕ ಯುವತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿತ್ತು. ಅಲ್ಲದೆ ತನ್ನ ತಾಯಿ ಬಳಿ ಆಗಾಗ ಅಂಜು ಕಷ್ಟ ಹೇಳಿಕೊಳ್ಳುತ್ತಿದ್ದರಂತೆ. ಹೀಗಾಗಿ ಇದೀಗ ಹುಡುಗನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಅಂಜು ಪೋಷಕರು ಆರೋಪ ಮಾಡುತ್ತಿದ್ದಾರೆ.

    ಪತಿ ಹೇಳಿದ್ದೇನು..?: ನಿನ್ನೆ ಬೆಳಗ್ಗೆ ಸಂಬಂಧಿ ಹುಟ್ಟುಹಬ್ಬಕ್ಕೆ ಕುಟುಂಬಸ್ಥರ ಜೊತೆ ತೆರಳಿದ್ದೆ. ಅಂಜು ಮನೆಯಲ್ಲಿಯೇ ಇದ್ದಳು. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರ್ಯಕ್ರಮ ಮುಗಿಸಿ ಸಂಜೆ 6 ಗಂಟೆಗೆ ವಾಪಸ್ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಂಜನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಡೆತ್ ನೋಟ್ ಪ್ರಕಾರ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಂಜುಗೆ ಅನಾರೋಗ್ಯ ಸಮಸ್ಯೆ ಕಾಡ್ತಿತ್ತಂತೆ. ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದ ಅಂಜುಗೆ ಹಲವು ಕಡೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೇ ಕಾರಣಕ್ಕೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರೊ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಸ್ಪೆನ್ಸ್, ಥ್ರಿಲ್ಲರ್ ‘ಅಂಜು’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

    ಸಸ್ಪೆನ್ಸ್, ಥ್ರಿಲ್ಲರ್ ‘ಅಂಜು’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

    ತ್ತೀಚೆಗೆ ಸೆಟ್ಟೇರಿದ್ದ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವುಳ್ಳ ‘ಅಂಜು’ ಚಿತ್ರ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಚಿಕ್ಕಾಬಳ್ಳಾಪುರ, ಚಿಂತಾಮಣಿ, ನಂದಿ ಗಿರಿಧಾಮಗಳಲ್ಲಿ ‘ಅಂಜು’ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಸೆರೆ ಹಿಡಿಯಲಾಗಿದೆ. ಚಿತ್ರಕ್ಕೆ ರಾಜೀವ್ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ.

    ಹೊಸ ಹಾಗೂ ನವ ಉತ್ಸಾಹಿ ಪ್ರತಿಭೆಗಳ ದಂಡೇ ‘ಅಂಜು’ ಚಿತ್ರದಲ್ಲಿದೆ. ಸಿನಿಮಾ ನಾಯಕ, ನಾಯಕಿಯರಾಗಬೇಕೆಂದು ಆಡಿಷನ್ ಗಾಗಿ ಬೆಂಗಳೂರಿನಿಂದ ಹೈದರಾಬಾದ್‍ಗೆ ಪ್ರಯಾಣ ಬೆಳೆಸುವ ಮೂವರು ನಾಯಕ, ನಾಯಕಿಯರು ಸೈಕೋಗಳಿಂದ ಎದುರಿಸುವ ಸಮಸ್ಯೆ ಹಾಗೂ ಅವರಿಂದ ಪಾರಾಗಲು ಏನೆಲ್ಲ ಮಾಡುತ್ತಾರೆ ಎಂಬ ಕುತೂಹಲಕಾರಿ ಕಥಾಹಂದರ ‘ಅಂಜು’ ಚಿತ್ರದಲ್ಲಿದೆ. ಚಿತ್ರದಲ್ಲಿ ನಾಯಕಿಯರಾಗಿ ಬಿಗ್‍ಬಾಸ್ ಸ್ಪರ್ಧಿ ಸೋನು ಪಾಟೀಲ್, ರಮ್ಯ, ಯಶಸ್ವಿನಿ ನಾಯಕನಟರಾಗಿ ಊಲಿಬೆಲೆ ರಾಜೇಶ್ ರೆಡ್ಡಿ, ರಾಜ್ ಪ್ರತೀಕ್ ಮತ್ತು ಸಿದ್ದಾರ್ಥ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

    ಖಳನಟನ ಪಾತ್ರದಲ್ಲಿ ಬಾಂಬೆ ಮೂಲದ ರಾಜೇಶ್ ಮುಂಡ್ಕೂರ್ ಮತ್ತು ಆನಂದ್ ರಂಗ್ರೇಜ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದ ತಾರಾಬಳಗದಲ್ಲಿ ನರಸಾಪುರ ಭಕ್ತರಹಳ್ಳಿ ರವಿ, ರೇಣುಕಾ, ಜೀವನ್ ಶಿವು, ಅಬ್ದುಲ್ ರೆಹಮಾನ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ. ಹಿರಿಯ ನಟ ಅಭಿಜಿತ್ ಹಾಗೂ ಜೂನಿಯರ್ ರವಿಚಂದ್ರನ್ ‘ಅಂಜು’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    ವಿನು ಮನಸು ಸಂಗೀತ ಸಂಯೋಜನೆ, ಸುರೇಶ್ ಕಂಬಳಿ ಸಾಹಿತ್ಯ, ರಮೇಶ್ ಕೊಯಿರಾ ಛಾಯಾಗ್ರಹಣ ಚಿತ್ರಕ್ಕಿದ್ದು, ಟೆನ್ ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ‘ಅಂಜು’ ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಅಂಜು’ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಉತ್ತರ ಕರ್ನಾಟಕದತ್ತ ಪಯಣ ಬೆಳೆಸಲಿದೆ

  • ವಿಶ್ವ ಸುಂದರಿಯ ಕತೆ ಹೇಳುವ ಅಂಜು ಚಿತ್ರದ ಮುಹೂರ್ತ

    ವಿಶ್ವ ಸುಂದರಿಯ ಕತೆ ಹೇಳುವ ಅಂಜು ಚಿತ್ರದ ಮುಹೂರ್ತ

    ಬೆಂಗಳೂರು: ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಅಂಜು ಎಂಬ ಬಾಲಕಿ ಮುಂದೆ ತನ್ನ ಪರಿಶ್ರಮದಿಂದ ಸಾಧನೆ ಮಾಡಿ ವಿಶ್ವಸುಂದರಿಯಾಗಿ ಇತಿಹಾಸ ನಿರ್ಮಿಸುವ ಕಥಾನಕ ಹೊಂದಿರುವ ಚಿತ್ರ ಅಂಜು. ಈ ಹೊಸ ಚಿತ್ರದ ಮುಹೂರ್ತ ಸಮಾರಂಭ ಬಿ.ಟಿ.ಎಂ. ಲೇಔಟ್ ನ ಶಿರಡಿ ಸಾಯಿಬಾಬಾ ಆಶ್ರಮದಲ್ಲಿ ನಡೆಯಿತು.

    ನಾಯಕಿ ಅಂಜನಾ ಶೆಟ್ಟಿ ಬಾಬಾ ಸನ್ನಿಧಿಯಲ್ಲಿ ಪ್ರಾರ್ಥಿಸುವ ಚಿತ್ರದ ಮುಹೂರ್ತ ಸನ್ನಿವೇಶಕ್ಕೆ 2015ರ ಮಿಸಸ್ ಏಷ್ಯಾ ವಿಜೇತೆ ಪ್ರತಿಭಾ ಆರಂಭ ಫಲಕ ತೋರಿಸಿದರೆ ಜಿ.ವಿ. ರಾಮರಾವ್ ಕ್ಯಾಮೆರಾ ಚಾಲನೆ ಮಾಡಿದರು.

    ಎಂ.ಎಸ್. ರಾಜಶೇಖರ್, ರೇಣುಕಾಶರ್ಮ, ದೊರೆ ಭಗವಾನ್ ಅವರಂಥ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿದ್ದ ಎ. ವಿಶ್ವನಾಥ್ ನಿರ್ದೇಶನದ ಪ್ರಥಮ ಚಿತ್ರ ಇದಾಗಿದೆ. ಭದ್ರಾವತಿ ಮೀನಾ ಕುಮಾರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ನಾಯಕಿ ಅಂಜನಾ ಶೆಟ್ಟಿ ರಂಗಾಯಣದ ಪ್ರತಿಭೆ. ಹಲವಾರು ನಾಟಕ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದು ಮೊದಲ ಬಾರಿಗೆ ನಾಯಕಿಯಾಗಿದ್ದಾರೆ.

    ಶಿವಣ್ಣ ಅಭಿನಯದ ಚಿತ್ರದಲ್ಲಿ ಕೂಡಾ ಈಕೆ ನಟಿಸುತ್ತಿದ್ದಾರೆ. ಚಿತ್ರದ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್‍ಗೆ ಕೂಡಾ ಇದು ಮೊದಲ ಚಿತ್ರ. ಬೇಬಿ ಅಂಕಿತಾ ನಟಿಸುತ್ತಿದ್ದಾರೆ. ಅಲ್ಲದೆ, ತಾಯಿ ಪಾತ್ರಕ್ಕೆ ಹೆಸರಾಂತ ಹಿರಿಯ ನಟಿಯೊಬ್ಬರು ಆಯ್ಕೆಯಾಗಲಿದ್ದಾರೆ.

    ರಾಜ್ ಕಿಶೋರ್ ಅವರ ಸಂಗೀತ, ಮನು ಕ್ಯಾಮೆರಾ, ವಿಕ್ರಮ್ ಸಾಹಸ ಚಿತ್ರಕ್ಕಿದೆ. ಎಂ. ರಾಜೇಂದ್ರ ಕುಮಾರ್ ಆರ್ಯ, ಜಿ.ವಿ. ರಾಮರಾವ್, ಮಹೇಶ್ ಕುಮಾರ್, ವೈಭವ್, ಮಂಡ್ಯ ನಾಗರಾಜ್, ಶ್ರೀನಿವಾಸ್, ರೂಪಾ, ಸುಪ್ರೀತಾ ಸೇರಿದಂತೆ ಇನ್ನೂ ಅನೇಕ ಗಣ್ಯರು ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.