Tag: AnjaniPutra

  • 51 ನೇ ವಸಂತಕ್ಕೆ ಕಾಲಿಟ್ಟ ನಟ ರವಿಶಂಕರ್

    51 ನೇ ವಸಂತಕ್ಕೆ ಕಾಲಿಟ್ಟ ನಟ ರವಿಶಂಕರ್

    ಬೆಂಗಳೂರು: ಆರ್ಮುಗಂ ಖ್ಯಾತಿಯ ರವಿಶಂಕರ್ ಇಂದು 51ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ತಡರಾತ್ರಿ ಬೆಂಗಳೂರಿನ ನ್ಯಾಯಾಂಗ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಸಿಕೊಂಡರು. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು.

    ಇದೇ ವೇಳೆ ಮಾತನಾಡಿದ ರವಿಶಂಕರ್ ಅಭಿಮಾನಿಗಳ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಇಂದು ಅನಾಥಶ್ರಮಕ್ಕೆ ಹೋಗಿ ಹುಟ್ಟುಹಬ್ಬವನ್ನು ಆಚರಿಸುತ್ತೇನೆ. ಸದ್ಯ ಅಂಜನಿಪುತ್ರ ಚಿತ್ರದಲ್ಲಿ ಅಭಿನಯಿಸುತ್ತೀದ್ದೇನೆ ಎಂದು ಹೇಳಿದ್ದಾರೆ.

    ಕೆಂಪೇಗೌಡ ಚಿತ್ರದಿಂದ ಸ್ಯಾಂಡಲ್‍ವುಡ್ ಗೆ ಪಾದಾರ್ಪಣೆ ಮಾಡಿದ ರವಿಶಂಕರ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಖಳನಟನಾಗಿ, ಹ್ಯಾಸ ನಟನಾಗಿ ಅಭಿನಯಿಸಿ ಜನರನ್ನು ರಂಜಿಸುತ್ತಿದ್ದಾರೆ.

  • ಅಪ್ಪು ತೂಕ ಏರ್ತಿದೆ: ದಾಡಿ ದಟ್ಟವಾಗ್ತಿದೆ- ರಹಸ್ಯ ಇಲ್ಲಿದೆ!

    ಅಪ್ಪು ತೂಕ ಏರ್ತಿದೆ: ದಾಡಿ ದಟ್ಟವಾಗ್ತಿದೆ- ರಹಸ್ಯ ಇಲ್ಲಿದೆ!

    ಬೆಂಗಳೂರು: ನಗುಮುಖ, ಮುಗ್ಧತೆಯ ಮಾತು, ಕ್ಲೀನ್ ಫೇಸು ಇದು ಸದಾ ಅಪ್ಪು ಕಾಣಿಸ್ಕೊಳ್ಳುವ ಶೈಲಿ. ಆಕಸ್ಮಾತ್ ಅಪ್ಪು ಮುಖದಲ್ಲಿ ಸ್ವಲ್ಪ ಬದಲಾವಣೆಯಾದರೂ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇದೀಗ ಪುನೀತ್ ರಾಜ್‍ಕುಮಾರ್ ಮುಖದಲ್ಲಿ ಬದಲಾವಣೆಯಾಗಿದೆ. ಬಾಡಿ ಚೇಂಜ್ ಆಗಿದೆ. ಕ್ಲೀನ್ ಶೇವಿಂಗ್ ನಲ್ಲಿರುತ್ತಿದ್ದ ಅಪ್ಪು ಇದೀಗ ಗಡ್ಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಣ್ಣಕ್ಕೆ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚುತ್ತಿದ್ದ ಅಪ್ಪು ಕೊಂಚ ದಪ್ಪಗಾಗಿದ್ದಾರೆ.

    ಅಪ್ಪು ಎಂದರೆ ಕಣ್ಣ ಮುಂದೆ ಬರೋದು ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್. ಚಿತ್ರಗಳೂ ಕೂಡ ಹಾಗೇ ಇರುತ್ತವೆ. ಅವರ ಅಭಿಮಾನಿಗಳು ಬಯಸೋದು ಅದನ್ನೇ. ಈ ವರ್ಷದಲ್ಲೇ ತೆರೆ ಕಂಡಿದ್ದ ರಾಜಕುಮಾರ ಚಿತ್ರ ಅಪ್ಪು ಬದುಕಿನ ದಿಕ್ಕನ್ನೇ ಬದಲಾಯಿಸಿದೆ ಎಂದು ಹೇಳಿದರೆ ಆಶ್ಚರ್ಯವಿಲ್ಲ. ಹಾಗೆ ನೋಡೋದಾದರೆ ಕಮರ್ಷಿಯಲ್ ಚಿತ್ರಗಳ ಭರಾಟೆಯಲ್ಲಿ ಮಾಸ್ ಮೇನಿಯಾದಲ್ಲಿ ಕೌಟುಂಬಿಕ ಚಿತ್ರ ಕೈ ಹಿಡಿಯುತ್ತೆ ಎಂದರೆ ಅದು ದೊಡ್ಡ ಸಾಧನೆಯೇ ಸರಿ. ರಾಜಕುಮಾರ ಚಿತ್ರದ ಯಶಸ್ಸು ಚಿತ್ರರಂಗದಲ್ಲಿ ಸರ್ವರ ಯಶಸ್ಸು. ಅಲ್ಲಿಂದ ಅಪ್ಪು ಹಿಡಿದದ್ದು ಹೊಸ ಶ್ರೇಯಸ್ಸು.

    ಪುನೀತ್ ದೇಹದ ಲುಕ್ ಬದಲಾಗಿರೋದಕ್ಕೂ ರಾಜಕುಮಾರ ಚಿತ್ರಕ್ಕೂ ಅದೇನು ಸಂಬಂಧ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲೇ ಇದೆ. ಹಿಂದೆಲ್ಲಾ ಒಂದು ಚಿತ್ರ ಮುಗಿಯೋ ಹೊತ್ತಿಗೆ ಅಪ್ಪು ಮುಂದಿನ ಚಿತ್ರದ ಮುಹೂರ್ತ ಆಗೇಬಿಡುತ್ತಿತ್ತು, ಇಲ್ಲವೇ ಅನೌನ್ಸ್ ಆಗ್ತಿತ್ತು. ಆದರೆ ಇನ್ನೇನು ಕೆಲವು ವಾರಗಳಲ್ಲೇ ಅಂಜನಿಪುತ್ರ ತೆರೆಗೆ ಬಂದು ಬಿಡುತ್ತೆ. ಅಂಜನಿಪುತ್ರ ಕೂಡ ಪಕ್ಕಾ ಫ್ಯಾಮಿಲಿ ಎಂಟರ್‍ ಟೈನರ್ ಅನ್ನೋದು ಟ್ರೇಲರ್ ನೋಡಿದರೆ ಗೊತ್ತಾಗೋ ವಿಷ್ಯ. ಆದರೆ ಅದ್ಯಾಕೋ ಅಪ್ಪು ಮುಂದಿನ ಪ್ರಾಜೆಕ್ಟ್ ಅನೌನ್ಸ್ ಆಗಿಲ್ಲ. ಹಾಗ್ ನೋಡೋದಾದರೆ ಅಪ್ಪು ಸಿಕ್ಕಾಪಟ್ಟೆ ಬ್ಯುಸಿ.

    ಪವನ್ ಒಡೆಯರ್ ನಿರ್ದೇಶನದ ಚಿತ್ರವೊಂದು ಕಳೆದ ಕೆಲ ಫೆಬ್ರವರಿಯಲ್ಲಿ ಮುಹೂರ್ತ ಮಾಡಿಕೊಂಡಿತ್ತು. ಸಂತೋಷ್ ಆನಂದ್ ರಾಮ್ ಜೊತೆ ಇನ್ನೊಂದು ಚಿತ್ರ ಮಾಡುವ ಪ್ಲ್ಯಾನ್ ಇತ್ತು. ಯೋಗರಾಜ್ ಭಟ್ ಜೊತೆ ಇನ್ನೊಂದು ಚಿತ್ರ ಮಾಡಬೇಕಿತ್ತು. ತಮಿಳು ನಿರ್ದೇಶಕ ಸಮುದ್ರ ಖನಿ ಜೊತೆಗೊಂದು ಪ್ರಾಜೆಕ್ಟ್ ಕೈ ಹಿಡಿದಿತ್ತು. ಇಷ್ಟೆಲ್ಲಾ ಇದ್ಮೇಲೆ ಇದೀಗ ಶುರುವಾಗುತ್ತಿರೋ ಪ್ರಾಜೆಕ್ಟ್ ಯಾವುದು ಅನ್ನೋದು ಬಯಲಾಗಿಲ್ಲ. ಅದಕ್ಕೆ ಕಾರಣವೇ ರಾಜಕುಮಾರ.

    ಅಪ್ಪು ಹಿಂದಿನಂತೆ ಕಥೆ ಮಾಡುವಂತಿಲ್ಲ. ಅವರನ್ನು ನೋಡುವ ಫಾಲೋ ಮಾಡುವ ಬಣ ದೊಡ್ಡದಾಗಿದೆ. ಯುವಕರನ್ನೇ ಅಲ್ಲ ವೃದ್ಧರನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಬೇಕು. ಹೀಗಾಗಿ ಕೊಂಚ ಸಮಯ ತೆಗೆದುಕೊಂಡಿದ್ದಾರೆ ಮುಂದಿನ ಪ್ರಾಜೆಕ್ಟ್ ಅನೌನ್ಸ್ ಮಾಡೋಕೆ ಎನ್ನುವ ಸುದ್ದಿ ಹಬ್ಬಿದೆ.

    ಅಪ್ಪು ಮುಂದಿನ ಪ್ರಾಜೆಕ್ಟ್ ತಡವಾಗುತ್ತೆ ಅಂದಮೇಲೆ ತುಂಬಾ ತಡವಾಗುತ್ತದೆ ಅನ್ನುವ ಲೆಕ್ಕಾಚಾರ ಹಾಕಿದ್ದರೆ ತಪ್ಪು. ಯಾಕೆಂದರೆ ಅಪ್ಪು ಕೈಲಿ ಐದಾರು ಪ್ರಾಜೆಕ್ಟ್ ಇದೆ. ಆದರೆ ಅದೆಲ್ಲವನ್ನೂ ಮತ್ತೆ ಮರು ಪರಿಶೀಲಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿಯೇ ಮುಂದಿನ ಚಿತ್ರಕ್ಕಾಗಿ ತಯರಾಗೋಕೆ ಅಪ್ಪು ಇದೀಗ ಕೊಂಚ ಬದಲಾಗಿದ್ದಾರೆ.

    ಅಪ್ಪು ಜಿಮ್ ಟ್ರೈನರ್ ಸುಧಾಕರ್ ಶೆಟ್ಟಿ ಅಪ್ಪುಗೆ ಹೆವೀ ವರ್ಕೌಟ್ ಮಾಡಿಸುತ್ತಿದ್ದಾರೆ. ಒಂದೆರಡು ತಿಂಗಳ ಗ್ಯಾಪ್ ನಲ್ಲಿ ಅಪ್ಪು ಕಂಪ್ಲೀಟ್ ಬದಲಾದ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಅಪ್ಪು ದಪ್ಪವಾಗಿರೋದನ್ನ ನೋಡಿ ರೆಸ್ಟ್ ಮಾಡುತ್ತಿರಬೇಕು ಎಂದು ಊಹಿಸಿದ್ದರೆ ತಪ್ಪು. ಯಾಕೆಂದರೆ ಕೆಲವೇ ದಿನದಲ್ಲಿ ಅಪ್ಪು ಹೊಸ ಲುಕ್ ನಲ್ಲಿ ಹೊಸ ಚಿತ್ರದ ಹೊಸಬರ ಜೊತೆ ಕನ್ನಡಿಗರ ಕಣ್ಮುಂದೆ ರಾರಾಜಿಸಲಿದ್ದಾರೆ.

  • ದೊಡ್ಮನೆಯಿಂದ ಬರುತ್ತಿದೆ ಆಡಿಯೋ ಕಂಪನಿ- ಇದು ಪುನೀತ್ ರಾಜ್‍ಕುಮಾರ್ ಹೊಸ ದನಿ

    ದೊಡ್ಮನೆಯಿಂದ ಬರುತ್ತಿದೆ ಆಡಿಯೋ ಕಂಪನಿ- ಇದು ಪುನೀತ್ ರಾಜ್‍ಕುಮಾರ್ ಹೊಸ ದನಿ

    ಬೆಂಗಳೂರು: ಅದೆಷ್ಟು ಹಾಡುಗಳಿಗೆ ಅಪ್ಪು ದನಿಯಾಗಿಲ್ಲ ಹೇಳಿ. ಪವರ್ ಫುಲ್ ಅಭಿನಯದ ಜೊತೆ ಪದೇ ಪದೇ ಕೇಳುವಂತೆ ಹಾಡುವ ಪ್ರತಿಭಾನ್ವಿತ ಅಪ್ಪು. ಇಂಥಹ ಅಪ್ಪು ಸಿನಿಮಾ ಮೇಲಿನ ಪ್ರೀತಿಯಿಂದ ಕಳೆದ ತಿಂಗಳು ಚಿತ್ರ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಅಪ್ಪು ಪಿಆರ್‍ಕೆ ಆಡಿಯೋ ಕಂಪನಿ ಶುರು ಮಾಡಿದ್ದಾರೆ.

    ಅಪ್ಪುಗೆ ಹಾಡು ಎಂದರೆ ಚಿಕ್ಕಂದಿನಿಂದಲೂ ಇಷ್ಟ. ಹೀಗಾಗಿಯೇ ಸಿನಿಮಾ ಶೂಟಿಂಗ್ ನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಅಪ್ಪು ಬೇರೆಯವರ ಚಿತ್ರಕ್ಕಾಗಿ ಸದಾ ಹಾಡುತ್ತಾ ಬಂದಿದ್ದಾರೆ. ಗಾಯನ ಸಾಮಥ್ರ್ಯ ರಕ್ತದಲ್ಲೇ ಇದೆ. ಹೀಗೆ ಹಾಡನ್ನು ಇಷ್ಟಪಡುವ ಅಪ್ಪು ತಮ್ಮದೇ ಸ್ವಂತ ಆಡಿಯೋ ಕಂಪನಿಯೊಂದನ್ನು ಯಾಕೆ ಕಟ್ಟಬಾರದು ಎಂದು ಯೋಚಿಸಿ ಇದೀಗ ಅದನ್ನು ಅನುಷ್ಟಾನಕ್ಕೆ ತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿ ದೇವರುಗಳಿಗೆ ಸುಳಿವು ಬಿಟ್ಟುಕೊಡುತ್ತಿದ್ದಂತೆಯೇ ಅಪ್ಪು ಹೊಸ ಯೋಜನೆಗೆ ಶುಭಾಶಯಗಳ ಸುರಿಮಳೆ ಬಂದಿದೆ.

    ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರ `ಅಂಜನಿಪುತ್ರ’ ಇದೀಗ ಬಿಡುಗಡೆಗೆ ಸಿದ್ಧವಿದ್ದು ಇದೇ ತಿಂಗಳು 24ಕ್ಕೆ ಅಂಜನಿಪುತ್ರ ಚಿತ್ರದ ಧ್ವನಿಸಾಂದ್ರಿಕೆ ರಿಲೀಸ್ ಆಗುತ್ತೆ. ಈ ಚಿತ್ರದ ಆಡಿಯೋ ರೈಟ್ಸ್ ಪಡೆದಿರೋದು ಪಿಆರ್‍ಕೆ ಆಡಿಯೋ ಕಂಪನಿ. ರವಿ ಬಸರೂರ್ ಸಂಗೀತ ನಿರ್ದೇಶನದ ಅಂಜನಿಪುತ್ರ ಧ್ವನಿಸಾಂದ್ರಿಕೆಯನ್ನು ಅಪ್ಪು ಒಡೆತನದ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಅಲ್ಲಿಂದ ಪಿಆರ್‍ಕೆ ಕಂಪನಿಯಿಂದ ಹಾಡುಗಳ ರೈಟ್ಸ್ ಪಡೆದುಕೊಳ್ಳೋಕೆ ಶುಭಾರಂಭ ಸಿಕ್ಕಂತಾಗುತ್ತೆ.

    ಪಿಆರ್‍ಕೆ ಬ್ಯಾನರ್ ಮೂಲಕ ಹೊಸಬರಿಗೆ ಅವಕಾಶ ಕೊಡುವ ಅಪ್ಪು ಇದೀಗ ತಮ್ಮ ಆಡಿಯೋ ಸಂಸ್ಥೆಯ ಮೂಲಕ ಅನೇಕ ಚಿತ್ರಗಳ ಸುಶ್ರಾವ್ಯ ಗಾಯನದ ಆಲ್ಬಂ ಪಡೆದುಕೊಳ್ಳಲಿದ್ದಾರೆ. ಇನ್ನೂ ಆಡಿಯೋ ಕಂಪನಿಯ ಲೊಗೋ ರಿಲೀಸ್ ಆಗಿದ್ದು, ವರನಟ ಡಾ. ರಾಜ್‍ಕುಮಾರ್ ಹಾಡುವ ಭಾವಚಿತ್ರದ ಲೋಗೋ ಅತ್ಯಾಕರ್ಷಕವಾಗಿದೆ.

    AnjaniPutra movie-ya modalaneya haaDu indu record maaDidhwi. #StayTuned

    A post shared by Puneeth Rajkumar (@puneethrajkumar) on


     

  • ಅಣ್ಣಾವ್ರ ಹಾಡಿನ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಅಪ್ಪು

    ಅಣ್ಣಾವ್ರ ಹಾಡಿನ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಅಪ್ಪು

    ಬೆಂಗಳೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ್ಯಾಂಡಲ್‍ವುಡ್‍ನ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ವಿಶೇಷವಾದ ಉಡುಗರೆಯೊಂದನ್ನ ನೀಡಿದ್ದಾರೆ.

    ತಂದೆ ಡಾ.ರಾಜ್‍ಕುಮಾರ್ ಅವರು ಹಾಡಿರುವ `ಚಲಿಸುವ ಮೋಡಗಳು’ ಚಿತ್ರದ “ಜೇನಿನ ಹೊಳೆಯೋ ಹಾಲಿನ ಮಳೆಯೋ” ಹಾಡನ್ನ ಭಾವತುಂಬಿ ಹಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಪುನೀತ್ ಈ ಸಂದರ್ಭದಲ್ಲಿ ತಮ್ಮ ತಂದೆಯನ್ನ ನೆನೆದಿದ್ದಾರೆ. ಸದ್ಯದಲ್ಲಿಯೇ `ಅಂಜನಿಪುತ್ರ’ ಚಿತ್ರದ ಹಾಡುಗಳು ನಿಮಗೆ ತಲುಪಲಿವೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.

    ಅಂಜನಿಪುತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಜೊತೆಯಾಗಿದ್ದಾರೆ. ಸಿನಿಮಾಗೆ ಹರ್ಷ ನಿರ್ದೇಶನವಿದ್ದು, ಎಂ.ಎನ್.ಕುಮಾರ್ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು ಸ್ವಾಮಿ ಅವರ ಛಾಯಾಗ್ರಹಣವಿದೆ. ಚಿತ್ರವು ರಮ್ಯಾಕೃಷ್ಣ, ರವಿಶಂಕರ್, ಮುಖೇಶ್ ತಿವಾರಿ, ಚಿಕ್ಕಣ್ಣ, ಹರಿಪ್ರಿಯಾ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ.