Tag: AnjaniPutra

  • ಪುನೀತ್ ನಟನೆಯ ‘ಅಂಜನಿಪುತ್ರ’ ಮರು ಬಿಡುಗಡೆ

    ಪುನೀತ್ ನಟನೆಯ ‘ಅಂಜನಿಪುತ್ರ’ ಮರು ಬಿಡುಗಡೆ

    ಎಂ.ಎನ್.ಕೆ‌ ಮೂವೀಸ್ ಲಾಂಛನದಲ್ಲಿ ಎಂ.ಎನ್ ಕುಮಾರ್ ನಿರ್ಮಿಸಿ, ಎ.ಹರ್ಷ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ (Puneeth Rajkumar) ಅವರು ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್  ಚಿತ್ರ ‘ ಅಂಜನಿಪುತ್ರ’ (Anjaniputra) ಮೇ 10 ರಂದು ಮರು ಬಿಡುಗಡೆಯಾಗುತ್ತಿದೆ.

    ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಮರು ಬಿಡುಗಡೆ(ರೀ ರಿಲೀಸ್) (Rerelease) ಮಾಡುತ್ತಿರುವುದಾಗಿ ನಿರ್ಮಾಪಕ‌ ಎಂ ಎನ್ ಕುಮಾರ್ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು.

     

    ರವಿ ಬಸ್ರೂರ್ ಅವರ‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ ‘ಬಾರಿ ಖುಷಿ ಮಾರೆ ನಂಗೆ’ ಸೇರಿದಂತೆ ಎಲ್ಲಾ ಹಾಡುಗಳು‌ ಜನಪ್ರಿಯವಾಗಿದೆ. ಬೇಸಿಗೆ ರಜೆಯ ಈ ಸಮಯದಲ್ಲಿ ಸೂಪರ್ ಹಿಟ್ ಅಂಜನಿ ಪುತ್ರ ಚಿತ್ರವನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಲು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  • ‘ಅಂಜನಿಪುತ್ರ’ ನಿರ್ಮಾಪಕ ಕುಮಾರ್ ತಂಗಿ ಮಗನ ಕೊಲೆ ಪ್ರಕರಣ: ಇಬ್ಬರ ಬಂಧನ

    ‘ಅಂಜನಿಪುತ್ರ’ ನಿರ್ಮಾಪಕ ಕುಮಾರ್ ತಂಗಿ ಮಗನ ಕೊಲೆ ಪ್ರಕರಣ: ಇಬ್ಬರ ಬಂಧನ

    ಬೆಂಗಳೂರು: ಅಂಜನಿಪುತ್ರ ಸಿನಿಮಾ ನಿರ್ಮಾಪಕ ಕುಮಾರ್ ತಂಗಿ ಮಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಸದ್ದಾಂ ಹುಸೇನ್ ಹಾಗೂ ಮೊಹಮ್ಮದ್ ಶಫಿ ಬಂಧಿತ ಆರೋಪಿಗಳು. ಏಪ್ರಿಲ್ 13 ರಂದು ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿದ್ದು, ಮೊಬೈಲ್ ದೋಚಲು ಹೋಗಿ ಆರೋಪಿಗಳು ರಾಹುಲ್ ನನ್ನು ಕೊಲೆ ಮಾಡಿದ್ದರು.

    ರಾಹುಲ್ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಆರೋಪಿಗಳು ಆತನ ಮೊಬೈಲ್ ಕಸಿದುಕೊಳ್ಳಲು ಬಂದಿದ್ದರು. ಈ ವೇಳೆ ರಾಹುಲ್ ಕುತ್ತಿಗೆಗೆ ಚಾಕು ಹಾಕಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.

    ಪೊಲೀಸರು ರಾಹುಲ್ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಆರೋಪಿಗಳ ಮೇಲೆ ಚಂದ್ರ ಲೇಔಟ್, ವಿಜಯನಗರ ಠಾಣೆಯಲ್ಲಿ ಡಕಾಯತಿ ಕೇಸ್ ದಾಖಲಾಗಿದೆ.

  • ಇಂದಿನಿಂದ ಅಂಜನಿಪುತ್ರ ಪ್ರದರ್ಶನ ರದ್ದು

    ಇಂದಿನಿಂದ ಅಂಜನಿಪುತ್ರ ಪ್ರದರ್ಶನ ರದ್ದು

    ಬೆಂಗಳೂರು: ಅಂಜನಿಪುತ್ರ ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶ ಪಾಲನೆಗಾಗಿ ಡಿಜಿ ಐಜಿಪಿಗೆ ನೋಟಿಸ್ ಜಾರಿ ಮಾಡಿದೆ.

    ಚಿತ್ರದಲ್ಲಿ ವಕೀಲ ವೃತ್ತಿಗೆ ಅಪಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಜ.2ರವರೆಗೂ ಈ ಚಿತ್ರದ ಪ್ರದರ್ಶನಕ್ಕೆ ನ್ಯಾಯಾಲಯ ತಡೆ ನೀಡಿತ್ತು. ಆದರೆ ಚಿತ್ರ ತಂಡ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಸಿನಿಮಾದಲ್ಲಿ ಪ್ರದರ್ಶನ ಮುಂದುವರಿಸಿತ್ತು. ಅಷ್ಟೇ ಅಲ್ಲದೇ ವಿವಾದಾತ್ಮಕ ಡೈಲಾಗ್‍ನ್ನು ಸಹ ಚಿತ್ರದಿಂದ ತೆಗೆಯದೆ ಪ್ರದರ್ಶನ ಮಾಡಿತ್ತು. ಇದನ್ನೂ ಓದಿ: ಅಂಜನಿಪುತ್ರ ಚಿತ್ರಕ್ಕೆ ತಡೆಯಾಜ್ಞೆ- ನಿರ್ಮಾಪಕ, ವಿತರಕ ಜಾಕ್ ಮಂಜು ಪ್ರತಿಕ್ರಿಯೆ

    ಚಿತ್ರ ತಂಡ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಕೀಲ ನಾರಾಯಣಸ್ವಾಮಿ ಅವರು ಮತ್ತೆ ಕೋರ್ಟ್‍ಗೆ ಮೊರೆ ಹೋಗಿ ನ್ಯಾಯಾಂಗ ನಿಂದನೆಯ ಅರ್ಜಿ ದಾಖಲಿಸಿದ್ರು. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಕೂಡಲೇ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ. ಇದನ್ನೂ ಓದಿ: ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ

    ಇಂದಿನ ಕಲಾಪದಲ್ಲಿ ಚಿತ್ರತಂಡ ಇದುವರೆಗೂ ಕೋರ್ಟ್ ಆದೇಶವನ್ನು ಪಾಲಿಸಿಲ್ಲ. ಅಲ್ಲದೇ ವಿವಾದಾತ್ಮಕ ಹೇಳಿಕೆಯನ್ನು ಸಹ ತೆಗೆದಿಲ್ಲ ಹಾಗಾಗಿ ಇದು ನ್ಯಾಯಾಂಗ ನಿಂದನೆಯಾಗುತ್ತೆ ಎಂದು ವಾದ ಮಾಡಿದರು. ಇದನ್ನೂ ಓದಿ: ‘ಅಂಜನಿಪುತ್ರ’ ತಡೆಯಾಜ್ಞೆಗೆ ಪವರ್ ಸ್ಟಾರ್ ಪ್ರತಿಕ್ರಿಯಿಸಿದ್ದು ಹೀಗೆ

    ಏನಿದು ಪ್ರಕರಣ?
    “ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ” ಎಂದು ರವಿ ಶಂಕರ್ ಇನ್ಸ್ ಪೆಕ್ಟರ್ ಆಗಿ ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲರಿಗೆ ಅವಮಾನವಾಗಿದೆ. ಹೀಗಾಗಿ ಒಂದೋ ಅಂಜನಿಪುತ್ರ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಮಾತನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ವಿಚಾರಣೆ ವೇಳೆ ಕೋರ್ಟ್ ಜ. 2ರವರೆಗೆ ಚಿತ್ರಪ್ರದರ್ಶನ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.  ಕೋರ್ಟ್ ಆದೇಶವಿದ್ದರೂ ಅಂಜನಿಪುತ್ರ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ವಕೀಲ ಜಿ. ನಾರಾಯಣ ಸ್ವಾಮಿ ಸೇರಿದಂತೆ ಐವರು ವಕೀಲರು ನಿರ್ಮಾಪಕ, ನಿರ್ದೇಶಕರ ವಿರುದ್ಧ ನ್ಯಾಯಾಂಗ ನಿಂದನೆ ದೂರನ್ನು ನೀಡಿದ್ದರು. ಬುಧವಾರ ಈ ಅರ್ಜಿಯನ್ನು ನ್ಯಾ.ಐ.ಎಫ್. ಬಿದರಿ ಅವರಿದ್ದ ಪೀಠ ಮಾನ್ಯ ಮಾಡಿತ್ತು.

     

  • ಅಂಜನಿಪುತ್ರ ಚಿತ್ರ ತಂಡಕ್ಕೆ ಮತ್ತೊಂದು ಸಂಕಷ್ಟ

    ಅಂಜನಿಪುತ್ರ ಚಿತ್ರ ತಂಡಕ್ಕೆ ಮತ್ತೊಂದು ಸಂಕಷ್ಟ

    ಬೆಂಗಳೂರು: ಅಂಜನಿಪುತ್ರ ಚಿತ್ರ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ತನ್ನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ದೂರಿನ ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದೆ.

    ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇದೆ. ಹೀಗಾಗಿ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ವಕೀಲ ಜಿ. ನಾರಾಯಣಸ್ವಾಮಿ ಕೋರ್ಟ್ ನಲ್ಲಿ ದೂರು ಸಲ್ಲಿಸಿ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಅಂಜನಿಪುತ್ರ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಆದೇಶಿಸಿ ಜ. 3ಕ್ಕೆ ವಿಚಾರಣೆ ಮುಂದೂಡಿತ್ತು. ಇದನ್ನೂ ಓದಿ: ಅಂಜನಿಪುತ್ರ ಚಿತ್ರಕ್ಕೆ ತಡೆಯಾಜ್ಞೆ- ನಿರ್ಮಾಪಕ, ವಿತರಕ ಜಾಕ್ ಮಂಜು ಪ್ರತಿಕ್ರಿಯೆ

    ಕೋರ್ಟ್ ಆದೇಶವಿದ್ದರೂ ಅಂಜನಿಪುತ್ರ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ವಕೀಲ ಜಿ. ನಾರಾಯಣ ಸ್ವಾಮಿ ಸೇರಿದಂತೆ ಐವರು ವಕೀಲರು ನಿರ್ಮಾಪಕ, ನಿರ್ದೇಶಕರ ವಿರುದ್ಧ ನ್ಯಾಯಾಂಗ ನಿಂದನೆ ದೂರನ್ನು ನೀಡಿದ್ದರು. ಬುಧವಾರ ಈ ಅರ್ಜಿಯನ್ನು ನ್ಯಾ.ಐ.ಎಫ್. ಬಿದರಿ ಅವರಿದ್ದ ಪೀಠ ಮಾನ್ಯ ಮಾಡಿದೆ. ಇದನ್ನೂ ಓದಿ: ‘ಅಂಜನಿಪುತ್ರ’ ತಡೆಯಾಜ್ಞೆಗೆ ಪವರ್ ಸ್ಟಾರ್ ಪ್ರತಿಕ್ರಿಯಿಸಿದ್ದು ಹೀಗೆ

    ಏನಿದು ಪ್ರಕರಣ?
    “ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ” ಎಂದು ರವಿ ಶಂಕರ್ ಇನ್ಸ್ ಪೆಕ್ಟರ್ ಆಗಿ ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲರಿಗೆ ಅವಮಾನವಾಗಿದೆ. ಹೀಗಾಗಿ ಒಂದೋ ಅಂಜನಿಪುತ್ರ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಮಾತನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ವಿಚಾರಣೆ ವೇಳೆ ಕೋರ್ಟ್ ಜ. 3ರವರೆಗೆ ಚಿತ್ರಪ್ರದರ್ಶನ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ಸಂಬಂಧ ನೋಟಿಸ್ ಕೂಡ ಜಾರಿಯಾಗಿದೆ. ಆದರೆ ಆ ಸಂಭಾಷಣೆಯ ದೃಶ್ಯಾವಳಿಯನ್ನು ತೆಗೆದುಹಾಕದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಚಿತ್ರಪ್ರದರ್ಶನ ಮಾಡಲಾಗುತ್ತಿದೆ ಎಂದು ವಕೀಲ ನಾರಾಯಣಸ್ವಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ

    ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದ್ದು ಗುರುವಾರ ಬಿಡುಗಡೆಯಾಗಿತ್ತು. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

     

     

  • ಅಂಜನಿಪುತ್ರ ಚಿತ್ರಕ್ಕೆ ತಡೆಯಾಜ್ಞೆ- ನಿರ್ಮಾಪಕ, ವಿತರಕ ಜಾಕ್ ಮಂಜು ಪ್ರತಿಕ್ರಿಯೆ

    ಅಂಜನಿಪುತ್ರ ಚಿತ್ರಕ್ಕೆ ತಡೆಯಾಜ್ಞೆ- ನಿರ್ಮಾಪಕ, ವಿತರಕ ಜಾಕ್ ಮಂಜು ಪ್ರತಿಕ್ರಿಯೆ

    ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಅಂಜನಿಪುತ್ರ’ ಚಿತ್ರಕ್ಕೆ ಒಂದಲ್ಲ ಒಂದು ಕಂಟಕಗಳು ಎದುರಾಗುತ್ತಲೇ ಇವೆ. ಚಿತ್ರ ಪ್ರದರ್ಶಗೊಂಡ ದಿನದಂದೇ ಅಪ್ಪು ಅಭಿಮಾನಿಯೊಬ್ಬ ಸಿನಿಮಾವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಬೆನ್ನಲ್ಲೇ ಇದೀಗ ಕೋರ್ಟ್ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ.

    ಈ ಕುರಿತು ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಕೋರ್ಟ್ ಚಿತ್ರಕ್ಕೆ ತಡೆಯಾಜ್ಞೆ ನೀಡಿರುವ ಕುರಿತು ಹಾಗೂ ಯಾಕ್ ನೀಡಿದೆ ಅನ್ನೋದರ ಬಗ್ಗೆ ನನಗೆ ಈವರೆಗೂ ಮಾಹಿತಿ ಬಂದಿಲ್ಲ. ಇನ್ನು ಸಿನಿಮಾದಲ್ಲಿರೋ ಸನ್ನಿವೇಶದಲ್ಲಿ ವಕೀಲರಿಗೆ ಏನಾದ್ರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಅಂತ ಹೇಳಿದ್ರು.

    ನನ್ನ ಸಿನಮಾ ತಂಡದ ಜೊತೆ ಮಾತನಾಡಿ, ಆ ಸಿನಿಮಾವನ್ನು ನೋಡಿ ನೋಟೀಸ್ ಇಲ್ಲದೆನೆ ತೆಗೆಯುವುದಕ್ಕೆ ಪ್ರಯತ್ನಿಸುತ್ತೇನೆ. ಆದರೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಅನ್ನೋ ವಿಚಾರದ ಕುರಿತು ಇದುವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಕರ್ನಾಟಕದಾದ್ಯಂತ ಎಲ್ಲಾ ಚಿತ್ರ ಮಂದಿರಗಳಲ್ಲೂ ಚಿತ್ರ ಪ್ರದರ್ಶನವಾಗುತ್ತಿದೆ. ನಾನು ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡುವುದಿಲ್ಲ. ಕಾನೂನಿಗೆ ತಲೆಬಾಗ್ತೀನಿ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಎಂದು ಆ ಪ್ರತಿ ನನ್ನ ಕೈಗೆ ಬಂದ ಪಕ್ಷದಲ್ಲಿ ನಾನು ಅದನ್ನು ಫಾಲೋ ಮಾಡುತ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ

    ವಕೀಲರು ತಿಳಿದವರು, ಬುದ್ಧಿವಂತರು. ಹೀಗಾಗಿ ಇದರಿಂದ ದಯವಿಟ್ಟು ಕೋಪ ಮಾಡಿಕೊಳ್ಳಬೇಡಿ. ಯಾಕಂದ್ರೆ ಚಿತ್ರದ ಮೊದಲಿನಲ್ಲೇ ಇಲ್ಲಿ ಬರುವ ಸನ್ನಿವೇಶಗಳೆಲ್ಲವೂ ಕಾಲ್ಪನಿಕವೆಂದು ನಾವು ಹೇಳಿರುತ್ತೇವೆ. ಉದಾಹರಣೆಗೆ ಒಂದು ಸಿನಿಮಾದಲ್ಲಿ 10 ಮಂದಿಯನ್ನು ಸಾಯಿಸೋದು ಅಥವಾ ಅತ್ಯಾಚಾರ ಮಾಡುವಂತಹ ಸನ್ನಿವೇಶಗಳು ಬರುತ್ತವೆ. ಆದ್ರೆ ನೀವು ಯಾವತ್ತೂ ಈ ಕುರಿತು ಕಾನೂನು ಮೆಟ್ಟಿಲು ಹತ್ತಿರುವುದಿಲ್ಲ. ಆದ್ರೆ ಇದೀಗ ವಕೀಲರಿಗೆ ಏನೋ ಒಂದು ಮಾತು ಅಂದಿದ್ದಾರೆ ಅಂತ ಈ ರೀತಿ ಮಾಡುವುದು ಸರಿಯಲ್ಲ. ಸೆನ್ಸಾರ್ ಮಂಡಳಿಯವರು ಈ ಚಿತ್ರವನ್ನು ನೋಡಿ, ಚಿತ್ರದಲ್ಲಿ ಬರುವ ಪ್ರತಿಯೊಂದು ಸನ್ನಿವೇಶಗಳನ್ನು ನೋಡಿಯೇ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರು ಸಿನಿಮಾಟೋಗ್ರಾಫಿಯನ್ನು ಓದಿಯೇ ಮಾಡಿದ್ದಾರೆ. ಹೀಗಾಗಿ ತಪ್ಪು ಅಂತ ಅವರಿಗೂ ಅನಿಸಿಲ್ಲ. ಇವೆಲ್ಲದರ ಮಧ್ಯೆ ನಿಮಗೆ ನೋವಾಗಿದ್ದರೆ ಕ್ಷಮಿಸಿ ಬಿಡಿ ಅಂದ್ರು. ಇದನ್ನೂ ಓದಿ:  ಪುನೀತ್ ಅಭಿನಯದ ಅಂಜನಿಪುತ್ರ ಪ್ರದರ್ಶನಕ್ಕೆ ಬ್ರೇಕ್

    ಒಟ್ಟಿನಲ್ಲಿ ಈ ವಿಚಾರದ ಕುರಿತು ದಯವಿಟ್ಟು ನೋವಾಗಬೇಡಿ. ಒಂದು ವೇಳೆ ನೀವು ಈ ಕುರಿತು ಕೋರ್ಟ್ ಮೊರೆ ಹೋಗಿದ್ದರೆ ದಯವಿಟ್ಟು ಅದನ್ನು ವಾಪಾಸ್ ತೆಗೆದುಕೊಳ್ಳಿ. ಯಾಕಂದ್ರೆ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಸಿನಿಮಾ ರಂಗದಲ್ಲಿ ಬಹಳಷ್ಟು ಒದ್ದಾಡುತ್ತಿದ್ದೇವೆ. ಹೀಗಾಗಿ ದಯವಿಟ್ಟು ಇದನ್ನು ಮುಂದುವರೆಸೋದು ಬೇಡ ಅಂತ ವಕೀಲರಿಗೆ ಜಾಕ್ ಮನವಿ ಮಾಡಿಕೊಂಡರು. ಇದನ್ನೂ ಓದಿ: ಅಂಜನಿಪುತ್ರ ಎಫ್‍ಬಿ ಲೈವ್ ಮಾಡಿದ್ದು ಯಾಕೆ? ಯುವಕ ಹೇಳಿದ್ದು ಏನು?

    ಚಿತ್ರಪ್ರದರ್ಶನ ನಿಂತು ಬಿಟ್ಟರೆ ಸುಮಾರು 400ರಿಂದ 500 ಜನರ ಜೀವನ ಬೀದಿಗೆ ಬರುತ್ತೆ. ಅವರೆಲ್ಲರ ಮನೆ, ಮಡದಿ ಮಕ್ಕಳು ಕೂಡ ಬೀದಿಗೆ ಬರುತ್ತಾರೆ. ಇದರಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಇವರಿಬ್ಬರೇ ಇರಲ್ಲ. ನಿರ್ಮಾಪಕರು ಬಂಡವಾಳ ಹಾಕಿರುತ್ತಾರೆ. ವಿತರಕರು ಅವರಿಂದ ತೆಗೆದುಕೊಂಡಿರುತ್ತಾರೆ. ನಾನಿದನ್ನು ತಪ್ಪು ಅಂತ ಹೇಳ್ತಿಲ್ಲ ಆದ್ರೆ ವಕೀಲರು ಸನ್ನಿವೇಶದ ಕ್ಲಿಪ್ಪಿಂಗ್ಸನ್ನು ತೆಗದುಕೊಂಡು ಹೋಗಿ ಕೋರ್ಟ್ ನಲ್ಲಿ ತೋರಿಸಬೇಕು ಅಂದ್ರೆ ಅವರು ಕೂಡ ಅದನ್ನು ಕದ್ದು ಹೋಗಿರುವುದೇ ಆಗಿದೆ ಅಲ್ಲವೇ. ಇದು ಕೂಡ ಕಾನೂನು ರೀತಿಯಲ್ಲಿ ತಪ್ಪು ಅಲ್ಲವೇ ಅಂತ ಅವರು ಪ್ರಶ್ನಿಸಿದ್ರು. ಇದನ್ನೂ ಓದಿ: ದಯವಿಟ್ಟು ಕಟೌಟ್‍ ಗಳಿಗೆ ಹಾಲು ಹಾಕಿ ಪೋಲು ಮಾಡ್ಬೇಡಿ: ಅಭಿಮಾನಿಗಳಿಗೆ ಅಪ್ಪು ಮನವಿ

    ಕನ್ನಡ ಚಿತ್ರರಂಗ ಬಹಳ ಕಷ್ಟದಲ್ಲಿದೆ. ಹೀಗಾಗಿ ಥಿಯೇಟರ್ ನಲ್ಲಿ ಸಿನಿಮಾವನ್ನು ಕದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತಹ ಕೆಲಸವನ್ನು ದಯವಿಟ್ಟು ಮಾಡಬೇಡಿ. ನೀವು ಚಿತ್ರಮಂದಿರಕ್ಕೆ ಬರೋದಿಕೆ ಇಷ್ಟವಿಲ್ಲ ಎಂದ್ರೂ ಪರವಾಗಿಲ್ಲ. ಆದ್ರೆ ಇಂತಹ ತಪ್ಪು ಕೆಲಸಗಳನ್ನು ಮಾಡಕ್ಕೆ ಹೋಗಬೇಡಿ ಅಂತ ಕಿವಿ ಮಾತು ಹೇಳಿದ್ರು. ಇದನ್ನೂ ಓದಿ:  ರಿಲೀಸ್ ಆಗಿದ್ದ ಅಂಜನಿಪುತ್ರನಿಗೆ ಅಭಿಮಾನಿಯಿಂದ ಶಾಕ್!

    ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದೆ. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್‍ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • `ಅಂಜನಿಪುತ್ರ’ ತಡೆಯಾಜ್ಞೆಗೆ ಪವರ್ ಸ್ಟಾರ್ ಪ್ರತಿಕ್ರಿಯಿಸಿದ್ದು ಹೀಗೆ

    `ಅಂಜನಿಪುತ್ರ’ ತಡೆಯಾಜ್ಞೆಗೆ ಪವರ್ ಸ್ಟಾರ್ ಪ್ರತಿಕ್ರಿಯಿಸಿದ್ದು ಹೀಗೆ

    ಬಳ್ಳಾರಿ: ಅಂಜನಿಪುತ್ರ ಚಿತ್ರಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಬಗ್ಗೆ ನಾಯಕ ನಟ ಪುನೀತ್ ರಾಜಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

    ಅಂಜನಿಪುತ್ರ ಚಿತ್ರದ ವಿರುದ್ಧವಾಗಿ ಯಾರು ಕೇಸ್ ಹಾಕಿದ್ದಾರೋ ಅವರ ಬಳಿ ಹೋಗಿ ಕೇಳಿ. ತಡೆಯಾಜ್ಞೆಗೆ ನಿರ್ಮಾಪಕ ಉತ್ತರ ನೀಡಲಿದ್ದಾರೆ. ಈ ಕುರಿತು ಈಗಾಗಲೇ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಬಗ್ಗೆ ಏನೂ ಮಾತನಾಡಲಾರೆ ಅಂದಿದ್ದಾರೆ.

    ಹೊಸಪೇಟೆ ಜೊತೆ ನಮ್ಮ ಕುಟುಂಬದ ಸಂಬಂಧ ಹೆಚ್ಚಾಗುತ್ತಿದೆ. ಟಗರು ಆಡಿಯೋ ಬಿಡುಗಡೆ ಸಮಾರಂಭ ಸಕ್ಸಸ್ ಆಗಿರುವುದು ಖುಷಿ ತಂದಿದೆ ಅಂದ್ರು. ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದೆ. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

    ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್‍ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

     

     

  • ಪುನೀತ್ ಅಭಿನಯದ ಅಂಜನಿಪುತ್ರ ಪ್ರದರ್ಶನಕ್ಕೆ ಬ್ರೇಕ್

    ಪುನೀತ್ ಅಭಿನಯದ ಅಂಜನಿಪುತ್ರ ಪ್ರದರ್ಶನಕ್ಕೆ ಬ್ರೇಕ್

    ಬೆಂಗಳೂರು: ಪುನೀತ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.

    ವಕೀಲ ಜಿ. ನಾರಾಯಣಸ್ವಾಮಿ ಅವರು ನಿರ್ದೇಶಕ, ನಿರ್ಮಾಪಕ, ಸೆನ್ಸಾರ್ ಬೋರ್ಡ್, ಫಿಲಂ ಚೇಂಬರ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅರ್ಜಿ ವಿಚಾರಣೆಯನ್ನು ಶನಿವಾರ ನಡೆಸಿದ ಕೋರ್ಟ್ ಅಂಜನಿಪುತ್ರ ಸಿನಿಮಾ ಪ್ರದರ್ಶನ ಮಾಡದಂತೆ ಆದೇಶಿಸಿ ಜ. 2ಕ್ಕೆ ವಿಚಾರಣೆ ಮುಂದೂಡಿದೆ.

    “ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ” ಎಂದು ರವಿ ಶಂಕರ್ ಇನ್ಸ್ ಪೆಕ್ಟರ್ ಆಗಿ ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲರಿಗೆ ಅವಮಾನವಾಗಿದೆ. ಹೀಗಾಗಿ ಒಂದೋ ಅಂಜನಿಪುತ್ರ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಮಾತನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಗುರುವಾರ ರಿಲೀಸ್ ಆಗಿದ್ದ ಅಂಜನಿಪುತ್ರನಿಗೆ ಅಭಿಮಾನಿಯಿಂದ ಶಾಕ್!

    ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದ್ದು ಗುರುವಾರ ಬಿಡುಗಡೆಯಾಗಿತ್ತು. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

    ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

     

     

     

     

     

     

  • ಅಂಜನಿಪುತ್ರ ಎಫ್‍ಬಿ ಲೈವ್ ಮಾಡಿದ್ದು ಯಾಕೆ? ಯುವಕ ಹೇಳಿದ್ದು ಏನು?

    ಅಂಜನಿಪುತ್ರ ಎಫ್‍ಬಿ ಲೈವ್ ಮಾಡಿದ್ದು ಯಾಕೆ? ಯುವಕ ಹೇಳಿದ್ದು ಏನು?

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾವನ್ನು ಒಂದು ಘಂಟೆಗೂ ಹೆಚ್ಚು ಕಾಲ ಫೇಸ್ ಬುಕ್ ಲೈವ್ ಮಾಡಿದ್ದ ನಿತೀಶ್ ತನ್ನ ತಪ್ಪನ್ನು ಒಪ್ಪಿಕೊಂಡು ಪುನೀತ್ ಅಭಿಮಾನಿಗಲ್ಲಿ ಕ್ಷಮೆ ಕೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ನಿತೀಶ್, ಚಿತ್ರದ ಲೈವ್ ಮಾಡಿದ್ದು ನಾನಲ್ಲ, ಹಲವು ದಿನಗಳ ಹಿಂದೆ ನನ್ನ ಸ್ನೇಹಿತನ ಮೊಬೈಲ್‍ನಲ್ಲಿ ನಾನು ಫೇಸ್ ಬುಕ್ ಖಾತೆ ತೆರೆದಿದ್ದೆ. ಅದನ್ನು ನನ್ನ ಸ್ನೇಹಿತ ಬಳಕೆ ಮಾಡುತ್ತಿದ್ದ. ಆದರೆ ಇಂದು ಆತ ಈ ರೀತಿ ಲೈವ್ ಮಾಡಿರುವುದು ನನಗೂ ಬೇಸರ ತರಿಸಿದೆ. ತಕ್ಷಣ ಈ ವಿಡಿಯೋವನ್ನು ಫೇಸ್ ಬುಕ್ ಖಾತೆಯಿಂದ ಡಿಲಿಟ್ ಮಾಡಿಸಿರುವುದಾಗಿ ತಿಳಿಸಿದ್ದಾರೆ.

    ಚಿತ್ರದ ಲೈವ್ ಮಾಡುವ ಸಂದರ್ಭದಲ್ಲಿ ನಾನು ಸ್ಥಳದಲ್ಲೇ ಇದ್ದೆ. ಆದರೆ ಈ ರೀತಿ ಲೈವ್ ಮಾಡಿರುವುದು ನಮ್ಮ ತಪ್ಪು. ಅಭಿಮಾನಿಗಳಿಗೆ ಇದರಿಂದ ತುಂಬ ನೋವಾಗಿದೆ. ನಮ್ಮ ತಪ್ಪು ತಿಳಿದಿದ್ದೇವೆ ಇನ್ನು ಮುಂದೆ ಎಂದು ಈ ರೀತಿ ನಡೆಯುವುದಿಲ್ಲ. ರಾಜ್ಯದ ಎಲ್ಲಾ ಪುನೀತ್ ಅಭಿಮಾನಿಗಳು ಹಾಗೂ ಚಿತ್ರ ತಂಡದವರ ಜೊತೆ ಕ್ಷಮೆ ಕೇಳುತ್ತೇವೆ ಎಂದರು.

    ಏನಿದು ಘಟನೆ: ಬೆಂಗಳೂರಿನ ಯಲಹಂಕ ಮೂಲದ ನಿತೀಶ್ ಆತನ ನಾಲ್ಕು ಸ್ನೇಹಿತರು ಸೇರಿ ಈ ಕೃತ್ಯ ಎಸಗಿದ್ದಾರೆ. ಇಂದು ಯಲಹಂಕ ಉಲ್ಲಾಸ ಚಿತ್ರಮಂದಿರ ಬೆಳಗ್ಗಿನ ಷೋ ನಲ್ಲಿ ಬರೋಬ್ಬರಿ 1 ಗಂಟೆ 10 ನಿಮಿಷ ಅವಧಿ ಅಧಿಕ ಹೊತ್ತು ಸಿನಿಮಾವನ್ನು ಲೈವ್ ತೋರಿಸಿದ್ದಾರೆ. ಈ ಸಂಬಂಧ ಚಿತ್ರತಂಡ ನಿತೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಿದ್ಧತೆ ನಡೆಸುತ್ತಿದೆ.

    https://www.youtube.com/watch?v=8UvhKPPU2xo

     

  • ದಯವಿಟ್ಟು ಕಟೌಟ್‍ ಗಳಿಗೆ ಹಾಲು ಹಾಕಿ ಪೋಲು ಮಾಡ್ಬೇಡಿ: ಅಭಿಮಾನಿಗಳಿಗೆ ಅಪ್ಪು ಮನವಿ

    ದಯವಿಟ್ಟು ಕಟೌಟ್‍ ಗಳಿಗೆ ಹಾಲು ಹಾಕಿ ಪೋಲು ಮಾಡ್ಬೇಡಿ: ಅಭಿಮಾನಿಗಳಿಗೆ ಅಪ್ಪು ಮನವಿ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿದ ಅಂಜನಿಪುತ್ರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯದ ಹಲವೆಡೆ ಬೆಳಗ್ಗೆ ಸುಮಾರು 5 ಗಂಟೆಗೆ ಚಿತ್ರ ರಿಲೀಸ್ ಆಗಿದೆ. ಈ ಸಮಯದಲ್ಲಿ ಪುನೀತ್ ಅಭಿಮಾನಿಗಳಿಗೆ ಕಟೌಟ್ ಗಳ ಮೇಲೆ ಹಾಲು ಹಾಕದಂತೆ ಟ್ವಿಟ್ಟರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಅಂಜನಿಪುತ್ರ ಚಿತ್ರದ ಬಿಡುಗಡೆ ವೇಳೆ ಪುನೀತ್, “ನಾಳೆ ಬಿಡುಗಡೆ ಆಗುತ್ತಿರುವ ನನ್ನ ಚಿತ್ರ ಅಂಜನಿಪುತ್ರ ಚಿತ್ರಕ್ಕೆ ದಯವಿಟ್ಟು ಕಟೌಟ್ ಗಳ ಮೇಲೆ ಹಾಲು ಹಾರ ಹಾಕಿ ಪೋಲು ಮಾಡುವ ಬದಲು ಹಸಿದ ಮಕ್ಕಳಿಗೆ ಅಥವಾ ವೃದ್ಧರಿಗೆ ಕೊಡಿ. ಸಿನಿಮಾ ಇಷ್ಟ ಆದ್ರೆ ನಿಮ್ಮ ಸ್ನೇಹಿತ ಅಥವಾ ನಿಮ್ಮ ಅಪ್ಪ ಅಮ್ಮ ಜೊತೆ ಇರೋ ಫೋಟೋ ಕಳಿಸಿ, ನನಗೆ ಅದೆ ಖುಷಿ ಕೊಡುತ್ತದೆ” ಎಂದು ಪುನೀತ್ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ರಾಜಕುಮಾರ ಚಿತ್ರದ ಯಶಸ್ಸಿನ ನಂತರ ಪುನೀತ್ ‘ಅಂಜನಿಪುತ್ರ’ ನಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಕಾತರರಾಗಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳು ಹೌಸ್‍ಫುಲ್ ಆಗಿದ್ದು, ರಾಜ್ಯದ್ಯಂತ ಸುಮಾರು 400 ಥಿಯೇಟರ್‍ಗಳಲ್ಲಿ ಸಿನಿಮಾ ಶುರುವಾಗಿದೆ.

    ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದೆ. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

    ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್‍ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಅಂಜನಿಪುತ್ರ ಚಿತ್ರದ ಅದ್ಧೂರಿ ಮೇಕಿಂಗ್ ರಿಲೀಸ್

    ಅಂಜನಿಪುತ್ರ ಚಿತ್ರದ ಅದ್ಧೂರಿ ಮೇಕಿಂಗ್ ರಿಲೀಸ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದ ಆಕರ್ಷಕ ಮೇಕಿಂಗ್ ರಿಲೀಸ್ ಆಗಿದೆ.

    ಮುಂದಿನ ವಾರ ಚಿತ್ರ ಬಿಡುಗಡೆಯಾಗೋದಕ್ಕೆ ಸಜ್ಜಾಗಿದೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿರುವ ಚಿತ್ರ ಅಂಜನಿಪುತ್ರ. ಎ. ಹರ್ಷ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಜೊತೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ವಾರದ ಹಿಂದೆ ಚಿತ್ರದ ಮೇಕಿಂಗ್‍ ವೊಂದು ರಿಲೀಸ್ ಆಗಿತ್ತು. ಇದೀಗ ಮತ್ತೊಂದು ಮೇಕಿಂಗ್ ರಿಲೀಸ್ ಆಗಿದ್ದು, ಅಂಜನಿಪುತ್ರ ಚಿತ್ರದ ಭರ್ಜರಿ ಪ್ರಚಾರ ಶುರುವಾಗಿದೆ.

    ಪುನೀತ್ ರಾಜ್ ಕುಮಾರ್ ಅವರ ಒಡೆತನದ ಪಿಆರ್ ಕೆ ಆಡಿಯೋ ಸಂಸ್ಥೆ ಮೊದಲ ಬಾರಿಗೆ ಹಾಡುಗಳ ಹಕ್ಕುಗಳನ್ನು ಪಡೆದಿದೆ. ಅಂಜನಿಪುತ್ರ ಚಿತ್ರದ ಮೂಲಕ ಮೊದಲ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

    ಈ ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.