Tag: anjaneya temple

  • ಆಂಜನೇಯ ದೇಗುಲ ನಿರ್ಮಾಣಕ್ಕೆ 1.83 ಲಕ್ಷ ದೇಣಿಗೆ ನೀಡಿದ ಭಿಕ್ಷುಕಿ

    ಆಂಜನೇಯ ದೇಗುಲ ನಿರ್ಮಾಣಕ್ಕೆ 1.83 ಲಕ್ಷ ದೇಣಿಗೆ ನೀಡಿದ ಭಿಕ್ಷುಕಿ

    – ದೇವರ ಕಾರ್ಯದಲ್ಲಿ ತನ್ನದೂ ಪಾಲಿರಲಿ ಅಂತ ದೇಣಿಗೆ

    ರಾಯಚೂರು: ಆಂಜನೇಯ ದೇಗುಲ ನಿರ್ಮಾಣಕ್ಕಾಗಿ ವಯಸ್ಸಾದ ಭಿಕ್ಷುಕಿಯೊಬ್ಬರು 1.83 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ರಾಯಚೂರು (Raichuru) ತಾಲೂಕಿನ ಬಿಜನಗೇರಾ ಗ್ರಾಮದಲ್ಲಿ ನಡೆದಿದೆ.

    ಹೌದು, ದಾನ ಮಾಡಲು, ದೇಣಿಗೆ ನೀಡಲು ಶ್ರೀಮಂತರೇ ಆಗಬೇಕಿಲ್ಲ. ಹೃದಯ ಶ್ರೀಮಂತಿಕೆಯಿದ್ರೆ ಭಿಕ್ಷುಕರು ಸಹ ಲಕ್ಷಾಂತರ ರೂಪಾಯಿ ದೇಣಿಗೆ ನೀಡಬಹುದು. ಹಾಗೆಯೇ 60 ವರ್ಷದ ರಂಗಮ್ಮ ಎಂಬುವವರು ಭಿಕ್ಷೆಯಿಂದ ಬಂದ ಹಣದಲ್ಲೇ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ.

    ಸುಮಾರು 30 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಬಂದು ಬಿಜನಗೇರಾ ಗ್ರಾಮದಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ರಂಗಮ್ಮ ಭಿಕ್ಷುಕಿಯಾದ್ರು ಮಹಾದಾನಿಯಾಗಿದ್ದಾಳೆ. ಯಾರ ಬಳಿಯೂ ಮಾತನಾಡದ ವೃದ್ಧೆ ಡಬ್ಬಿ, ಗಂಟುಗಳಲ್ಲಿ ಕೂಡಿಟ್ಟಿದ್ದ ಹಣ ಆಕಸ್ಮಿಕವಾಗಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಗ್ರಾಮಸ್ಥರೇ ಹಣವನ್ನ ಎಣಿಸಿ, ಈ ಹಣ ಏನು ಮಾಡುತ್ತಿಯಾ ಅಂತ ವೃದ್ಧೆಯನ್ನ ಕೇಳಿದ್ದಾರೆ. ಆಗ ಅವರು ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    ಇದಕ್ಕೂ ಮುನ್ನ ನಾಲ್ಕು ವರ್ಷಗಳ ಹಿಂದೆ ವೃದ್ಧೆಯ ಬಳಿ 30 ಸಾವಿರ ರೂ. ಇರುವುದನ್ನ ಗಮನಿಸಿದ ಗ್ರಾಮಸ್ಥರು ಪುಟ್ಟ ಸೂರನ್ನ ನಿರ್ಮಿಸಿ ಕೊಟ್ಟಿದ್ದರು. 4*5 ಅಡಿ ಸೂರಿನಲ್ಲೇ ಇರುವ ರಂಗಮ್ಮಳಿಗೆ ಜನ ಇದ್ದಲ್ಲಿಗೆ ಬಂದು ಭಿಕ್ಷೆ ಕೊಟ್ಟು ಹೋಗುತ್ತಾರೆ. ಊರಿನವರೇ ಸೀರೆ, ಊಟ ಕೊಡುತ್ತಿದ್ದಾರೆ. ದಾರಿಹೋಕರು, ಆಟೋ ರಿಕ್ಷಾ ಚಾಲಕರು, ಟಂಟಂ ಚಾಲಕರು ವೃದ್ಧೆಗೆ ಹಣ ನೀಡಿದರೆ ತಮ್ಮ ವ್ಯಾಪಾರ ಜೋರಾಗಿ ನಡೆಯುತ್ತದೆ ಎಂದು ನಿತ್ಯ ಹತ್ತು, ಇಪ್ಪತ್ತು, ನೂರು ರೂಪಾಯಿ ಸೇರಿ ತಿಳಿದಷ್ಟು ಕೊಡುತ್ತಾರೆ. ಈ ಭಿಕ್ಷೆಯ ಹಣವನ್ನೇ ವೃದ್ಧೆ ದೇವಸ್ಥಾನದ ನಿರ್ಮಾಣಕ್ಕೆ ತನ್ನ ಸೇವೆಯೂ ಇರಲಿ ಅಂತ ನೀಡಿದ್ದಾರೆ. ದೇವಸ್ಥಾನಗಳ ಮುಂದೆ ಸಾಮಾನ್ಯವಾಗಿ ಭಿಕ್ಷುಕರು ಕಾಣುತ್ತಾರೆ ಆದ್ರೆ ಇಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭಿಕ್ಷುಕಿಯೊಬ್ಬರು ದೇಣಿಗೆ ನೀಡಿದ್ದಾರೆ.

    ಊಟಕ್ಕಾಗಿ ಮಾತ್ರ ಕೈ ಚಾಚುವ ರಂಗಮ್ಮನ ಬಳಿಯಿದ್ದ ದುಡ್ಡನ್ನ ಕೆಲ ಪುಂಡರು ಕದ್ದಿರುವ ಉದಾಹರಣೆಗಳೂ ಇವೆ. ತೆಲುಗು ಭಾಷೆ ಮಾತನಾಡುವ ರಂಗಮ್ಮ ಯಾರೊಂದಿಗೂ ಬೆರೆಯದೇ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಇತ್ತೀಚಿಗೆ ದೇವಸ್ಥಾನ ಲೋಕಾರ್ಪಣೆಯಾಗಿದ್ದು, ರಂಗಮ್ಮ ಗ್ರಾಮದ ದೈವದ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಗ್ರಾಮಸ್ಥರು ರಂಗಮ್ಮನ ಬಗ್ಗೆ ಈಗ ಹೆಮ್ಮೆ ವ್ಯಕ್ತಪಡಿಸುತ್ತಿದ್ದು, ಸನ್ಮಾನಿಸಿ ಗೌರವಿಸಿದ್ದಾರೆ.ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ‍್ಯ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ

  • ಧಾರವಾಡದಲ್ಲಿ ಗಾಳಿ ಸಹಿತ ಮಳೆ – ಆಂಜನೇಯ ದೇವಸ್ಥಾನದ ಮೇಲೆ ಬಿದ್ದ ಮರ

    ಧಾರವಾಡದಲ್ಲಿ ಗಾಳಿ ಸಹಿತ ಮಳೆ – ಆಂಜನೇಯ ದೇವಸ್ಥಾನದ ಮೇಲೆ ಬಿದ್ದ ಮರ

    ಧಾರವಾಡ: ನಗರದಲ್ಲಿ ಭಾರೀ ಗಾಳಿ ಸಹಿತ ಮಳೆಗೆ ಆಂಜನೇಯನ ದೇವಸ್ಥಾನದ (Anjaneya Temple) ಮೇಲೆ ಮರ ಬಿದ್ದ ಘಟನೆ ನಡೆದಿದೆ.

    ಧಾರವಾಡ (Dharwad) ಹೊರವಲಯದ ಹೊಯ್ಸಳನಗರದಲ್ಲಿ ಈ ಘಟನೆ ನಡೆದಿದ್ದು, ಹನುಮಜಯಂತಿ ಮುನ್ನಾ ದಿನವೇ ಆಂಜನೇಯನ ದೇವಸ್ಥಾನದ ಮೇಲೆ ಮರ ಬಿದ್ದಿದೆ. ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್..!

    ಆಂಜನೇಯನ ದೇವಸ್ಥಾನದ ಪಕ್ಕದಲ್ಲೇ ನಿಲ್ಲಿಸಿದ ಆಟೊ ಕೂಡ ಜಖಂ ಆಗಿದೆ. ಮಳೆ, ಗಾಳಿಗೆ ಬುಡ ಸಮೇತ ಮರ ಉರುಳಿ ಬಿದ್ದಿದೆ. ಇದನ್ನೂ ಓದಿ: ಮೈಸೂರು | ಮನೆ ಹಿಂಬಾಗಿಲಿನ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ

    ನಾಳೆ (ಏ.12) ಈ ದೇವಸ್ಥಾನದಲ್ಲಿ ಹನುಮಜಯಂತಿ ಕಾರ್ಯಕ್ರಮ ನಡೆಯಬೇಕಿತ್ತು. ಹನುಮಜಯಂತಿ ಮುನ್ನಾ ದಿನವೇ ಈ ಅವಘಡ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರ ಬಿದ್ದಿದ್ದರಿಂದ ದೇವಸ್ಥಾನದ ಹಿಂಭಾಗ ಮಾತ್ರ ಸ್ವಲ್ಪ ಡ್ಯಾಮೇಜ್ ಆಗಿದೆ. ಸದ್ಯ ಮರ ತೆರವುಗೊಳಿಸಿ ಶನಿವಾರ ಪೂಜೆಗೆ ದೇವಸ್ಥಾನವನ್ನು ಸಿದ್ಧಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಮೋದಾದೇವಿ ಒಡೆಯರ್‌ಗೆ ನಮ್ಮ ಗ್ರಾಮ ರಿಜಿಸ್ಟರ್‌ ಮಾಡಿಕೊಡಬೇಡಿ: ಡಿಸಿಗೆ ಗ್ರಾಮಸ್ಥರ ಮನವಿ

  • ದಾವಣಗೆರೆ | ಕೊಕ್ಕನೂರು ಆಂಜನೇಯ ಸ್ವಾಮಿಗೆ ದುಡ್ಡಿನ ಪಲ್ಲಕ್ಕಿ ಉತ್ಸವ – 12 ಲಕ್ಷ ರೂ. ನಗದಲ್ಲಿ ಅಲಂಕಾರ

    ದಾವಣಗೆರೆ | ಕೊಕ್ಕನೂರು ಆಂಜನೇಯ ಸ್ವಾಮಿಗೆ ದುಡ್ಡಿನ ಪಲ್ಲಕ್ಕಿ ಉತ್ಸವ – 12 ಲಕ್ಷ ರೂ. ನಗದಲ್ಲಿ ಅಲಂಕಾರ

    ದಾವಣಗೆರೆ: ಹರಿಹರ (Harihara) ತಾಲೂಕಿನ ಕೊಕ್ಕನೂರು ಆಂಜನೇಯ ಸ್ವಾಮಿಗೆ ದುಡ್ಡಿನ ಪಲ್ಲಕ್ಕಿ ಉತ್ಸವ (Duddina Palankki Utsava) ಅದ್ದೂರಿಯಾಗಿ ನೆರವೇರಿದೆ.

    ಉತ್ಸವ ಹೊರಟ ಪಲ್ಲಕ್ಕಿಗೆ ಈ ಬಾರಿ 12 ಲಕ್ಷ ರೂ. ನಗದು ಹಣದಲ್ಲಿ ಅಲಂಕಾರ ಮಾಡಲಾಗಿತ್ತು. ಪಲ್ಲಕ್ಕಿ ಕೊಕ್ಕನೂರು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿತ್ತು. ಈ ವೇಳೆ ಪಲ್ಲಕ್ಕಿಗೆ ಭಕ್ತರು ನೋಟಿನ ಹಾರ ಹಾಕಿ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಅಲ್ಲದೇ ನೋಟಿನ ಹಾರ ಹಾಕಿ ಹರಕೆ ಕಟ್ಟಿಕೊಳ್ಳುವ, ಹರಕೆ ತೀರಿಸುವ ಸಂಪ್ರದಾಯ ಸಹ ಇಲ್ಲಿದೆ. ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್‌ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

    ದುಡ್ಡಿನ ಪಲ್ಲಕ್ಕಿ ಉತ್ಸವದಲ್ಲಿ ಈ ಬಾರಿ ಒಟ್ಟು 14.80 ಲಕ್ಷ ರೂ. ಸಂಗ್ರಹವಾಗಿದೆ. ಕಳೆದ ಪಲ್ಲಕ್ಕಿ ಉತ್ಸವದಲ್ಲಿ 12 ಲಕ್ಷ ರೂ. ಸಂಗ್ರಹವಾಗಿತ್ತು. ಈ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ.

    ಕೊಕ್ಕನೂರು ಆಂಜನೇಯ ದೇವಸ್ಥಾನ ಅತೀ ಪ್ರಸಿದ್ಧಿ ಪಡೆದಿದ್ದು, ಇಲ್ಲಿನ ಆಂಜನೇಯ ಸ್ವಾಮಿ ಭಕ್ತಿಯಿಂದ ಬರುವ ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ. ಇದನ್ನೂ ಓದಿ: ಕೋರ್ಟ್‌ಗೆ ಗೈರು, ಸಿನಿಮಾ ವೀಕ್ಷಣೆಗೆ ದರ್ಶನ್‌ ಹಾಜರ್

  • Chikkaballapura | ಪುರಾತನ ಆಂಜನೇಯಸ್ವಾಮಿ ದೇವಾಲಯವೂ ವಕ್ಫ್ ಆಸ್ತಿ!

    Chikkaballapura | ಪುರಾತನ ಆಂಜನೇಯಸ್ವಾಮಿ ದೇವಾಲಯವೂ ವಕ್ಫ್ ಆಸ್ತಿ!

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಪುರಾತನ ಗುಟ್ಟಾಂಜನೇಯಸ್ವಾಮಿ ದೇವಾಲಯವನ್ನೇ (GuttaAnjaneya Temple) ಖಬರಸ್ತಾನ್ ವಕ್ಪ್ ಆಸ್ತಿಯಾಗಿ (Waqf Property) ನಮೂದು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಅಂದಹಾಗೆ 2018-19 ರಲ್ಲೇ ಸರ್ಕಾರದ ಆದೇಶದ ಪ್ರಕಾರ ಬೆಳ್ಳೂಟಿ ಗ್ರಾಮದ ಸರ್ವೆ ನಂಬರ್ ೦6ರ 1 ಎಕೆರೆ 30 ಗುಂಟೆ ಜಾಗವನ್ನ ವಕ್ಪ್ ಆಸ್ತಿಯಾಗಿ ನಮೂದು ಮಾಡಲಾಗಿದೆ. 1 ಎಕರೆ 30 ಗುಂಟೆಯಲ್ಲಿ ಗುಟ್ಟಾಂಜನಯೇಸ್ವಾಮಿ ದೇವಾಲಯ ಸೇರಿದಂತೆ ಪಕ್ಕದಲ್ಲೇ ಮಸೀದಿ ದರ್ಗಾವೂ ಇದೆ. ಆದ್ರೆ ಪೂರಾ 1 ಎಕೆರೆ 30 ಗುಂಟೆಯೂ ಖಬರಸ್ತಾನ್ ವಕ್ಪ್ ಆಸ್ತಿಯಾಗಿ ಬದಲಾಗಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅನ್ನಭಾಗ್ಯ ಫಲಾನುಭವಿಗಳಿಗೆ ಸರ್ಕಾರ ಶಾಕ್ – ಕಳೆದೆರಡು ತಿಂಗಳಿಂದ ಸಿಕ್ಕಿಲ್ಲ ಅಕ್ಕಿ ದುಡ್ಡು

    ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಅವರು ವ್ಯಾಸಂಗ ಮಾಡಿದ್ದ ಸರ್ಕಾರಿ ಶಾಲೆಯನ್ನೂ ವಕ್ಫ್‌ ಹೆಸರಿಗೆ ಪರಭಾರೆ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿತ್ತು. ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಸರ್ಕಾರಿ ಮಾದರಿ‌ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್‌ ಸ್ವತ್ತು ಎಂದು ಬದಲಾವಣೆ ಮಾಡಲಾಗಿದೆ. ಇದನ್ನೂ ಓದಿ: ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ – ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ

    2015-16 ರಲ್ಲಿ ಪಹಣಿಯಲ್ಲಿ ಸ್ಕೂಲು ಬದಲು ವಕ್ಫ್ ಸ್ವತ್ತು ಎಂದು ನಮೂದಾಗಿದೆ. ಸರ್ಕಾರಿ ಶಾಲೆಯ ಜಾಗದ ಉಳಿವಿಗಾಗಿ ಗ್ರಾಮಸ್ಥರು ಶಿಕ್ಷಕರು ನಿರಂತರ ಹೋರಾಟ ನಡೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಶಾಲಾ ಆವರಣದಲ್ಲಿ ದರ್ಗಾ ತಲೆ ಎತ್ತಿದೆ. ಗ್ರಾಮಸ್ಥರು ಸರ್ಕಾರಿ ಶಾಲೆ ಉಳಿವಿಗಾಗಿ ಕಾನೂನು ಮೊರೆ ಹೋಗಿದ್ದಾರೆ. ಈ ಬೆನ್ನಲ್ಲೇ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚೋಟಾ ಮುಂಬೈಯಲ್ಲಿ ಬೆಲೆ ನಿಯಂತ್ರಿಸಲು ಅಖಾಡಕ್ಕಿಳಿದ ಕೇಂದ್ರ; ಹುಬ್ಬಳ್ಳಿ- ಧಾರವಾಡದಲ್ಲಿ ಭಾರತ್ ಬ್ರ‍್ಯಾಂಡ್ ಆಹಾರ ಧಾನ್ಯ ಪೂರೈಕೆಗೆ ಚಾಲನೆ

  • ಈಗ ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಯಲ್ಲೂ ವ್ಯಾಪಾರ ದಂಗಲ್‌

    ಈಗ ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಯಲ್ಲೂ ವ್ಯಾಪಾರ ದಂಗಲ್‌

    ಬೆಂಗಳೂರು: ವ್ಯಾಪಾರ ದಂಗಲ್ ಮುಂದುವರಿದಿದ್ದು ಈಗ ಜಯನಗರದ ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಯಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ಅನುಮತಿಸಬಾರದೆಂಬ ಆಗ್ರಹ ಕೇಳಿಬಂದಿದೆ.

    ಈ ಬಗ್ಗೆ ದೇವಸ್ಥಾನ ಮಂಡಳಿ ಪ್ರತಿಕ್ರಿಯಿಸಿದ್ದು, ನಮ್ಮದು ಟ್ರಸ್ಟ್ ಆಧಾರಿತ ದೇಗುಲ. ಹೀಗಾಗಿ ನಮ್ಮ ಅಧಿಕಾರ ಏನಿದ್ದರೂ ದೇವಾಲಯದ ಆವರಣಕ್ಕೆ ಸೀಮಿತ ಎಂದು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜಿಲ್ಲ: ಬೊಮ್ಮಾಯಿ

    ಹಿಂದೂ ಸಂಘಟನೆಗಳ ಕರೆಗೆ ಬೀದಿ ಬದಿ ವ್ಯಾಪಾರಿಗಳ ಸಂಘ ಆಕ್ರೋಶ ಹೊರಹಾಕಿದೆ. ಮುಜುರಾಯಿ ಇಲಾಖೆಯೂ ಸ್ಪಷ್ಟನೆ ನೀಡಿ, ದೇವಾಲಯದ ಹೊರಗೆ ಇಂಥವರೇ ವ್ಯಾಪಾರ ಮಾಡಬೇಕು ಎಂಬ ನಿಯಮವಿಲ್ಲ. ಈ ರೀತಿಯ ನಿರ್ಬಂಧದ ಕರೆ ನೀಡುವುದು ತಪ್ಪು. ಯಾರಾದರೂ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದೆ.

    ಮುಜುರಾಯಿ ವ್ಯಾಪ್ತಿಯ ದೇಗುಲಗಳಿಗೆ ಮಾತ್ರ ಹಿಂದೂಯೇತರರ ವ್ಯಾಪಾರರ ನಿರ್ಬಂಧಕ್ಕೆ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿದೆ.

    ಎರಡು ದಿನದ ಹಿಂದೆ ವಿವಿ ಪುರಂ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಅನ್ಯಧರ್ಮಿಯರ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು.

    Live Tv
    [brid partner=56869869 player=32851 video=960834 autoplay=true]

  • ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿ ಅರೆಸ್ಟ್

    ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿ ಅರೆಸ್ಟ್

    ಹಾವೇರಿ: ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ ವ್ಯಕ್ತಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆರೋಪಿಯನ್ನು 32 ವರ್ಷದ ಜಾಫರ್ ಕನ್ಯಾನವರ ಎಂದು ಗುರುತಿಸಲಾಗಿದೆ. ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಜಾಫರ್‌ನ ಕೃತ್ಯ ಸೆರೆಯಾಗಿದೆ. ದೇವಸ್ಥಾನದ ಆವರಣದಲ್ಲಿ ಮಲಗಿ, ಎದ್ದು ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿ ದೇವಸ್ಥಾನ ಅಪವಿತ್ರಗೊಳಿಸಿದ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್

    ಇದೀಗ ಆರೋಪಿ ಜಾಫರ್ ವಿರುದ್ಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಟ್ಯಾಕ್ಸ್ ಕಟ್ಟುವುದರಲ್ಲೂ ಅಕ್ಷಯ್ ಕುಮಾರ್ ಮುಂದು: ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ

    Live Tv
    [brid partner=56869869 player=32851 video=960834 autoplay=true]

  • ಆಂಜನೇಯಸ್ವಾಮಿ ದೇವಾಲಯವನ್ನು ಕೆಡವಿ ವಿಗ್ರಹವನ್ನು ಕಾವೇರಿಗೆ ಎಸೆಯಲಾಗಿತ್ತು – ಶತಮಾನದ ಹಿಂದಿನ ದಾಖಲೆ ಬಿಡುಗಡೆ

    ಆಂಜನೇಯಸ್ವಾಮಿ ದೇವಾಲಯವನ್ನು ಕೆಡವಿ ವಿಗ್ರಹವನ್ನು ಕಾವೇರಿಗೆ ಎಸೆಯಲಾಗಿತ್ತು – ಶತಮಾನದ ಹಿಂದಿನ ದಾಖಲೆ ಬಿಡುಗಡೆ

    – ಶ್ರೀರಂಗಪಟ್ಟಣ ಜಾಮಿಯಾ ಮಸೀದಿಯ ವಿವಾದಕ್ಕೆ ಮತ್ತೊಂದು ಟ್ವಿಸ್ಟ್‌
    – ಆರ್ಕಿಯಾಲಜಿ ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಉಲ್ಲೇಖ
    – ದಾಖಲೆಯೊಂದಿಗೆ ಕಾನೂನು ಹೋರಾಟಕ್ಕೆ ಮುಂದಾದ ಹಿಂದೂ ಸಂಘಟನೆಗಳು

    ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ವಿವಾದಕ್ಕೆ ದಿನಕ್ಕೊಂದು ತಿರುವು ದೊರೆಯುತ್ತಿದೆ. ಮೊನ್ನೆ ಈ ವಿವಾದದ ಸಂಬಂಧ ದಶಕಗಳ ಹಿಂದಿನ ಪುಸ್ತಕವೊಂದು ಪತ್ತೆಯಾಗಿತ್ತು. ಇದೀಗ ಈ ವಿಚಾರ ಸಂಬಂಧ ಪುರಾತ್ವ ಇಲಾಖೆಗೆ ಸಂಬಂಧಿಸಿದ ದಾಖಲೆಯೊಂದು ಲಭ್ಯವಾಗಿದ್ದು ಹಿಂದೂ ಸಂಘಟನೆಗಳಿಗೆ ಪ್ರಮುಖ ಅಸ್ತ್ರ ಸಿಕ್ಕಿದಂತಾಗಿದೆ.

    ಮೊನ್ನೆಯಷ್ಟೇ ದಶಕಗಳ ಹಿಂದೆ ಬಾಲಗಣಪತಿ ಭಟ್ಟ ಎಂಬವರು ಬರೆದಿದ್ದ ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ಸುಪ್ರಭಾತ ಎಂಬ ಪುಸ್ತಕ ದೊರೆತಿತ್ತು. ಈ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಕೆಡವಿ ಅಲ್ಲಿದ್ದ ವಿಗ್ರಹವನ್ನು ಕಾವೇರಿ ನದಿಗೆ ಎಸೆದು ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ ಎಂದು ಉಲ್ಲೇಖವಾಗಿತ್ತು. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!

    ಈ ಪುಸ್ತಕ ದೊರೆತ ನಂತರ ಇದೀಗ ಪ್ರಧಾನಿ ಮೋದಿ ಮಂಚ್ ವಿಚಾರ ವೇದಿಕೆ ಇನ್ನೊಂದು ಅಧಿಕೃತ ದಾಖಲೆಯನ್ನು ಬಿಡುಗಡೆ ಮಾಡಿದೆ. 1912ರಲ್ಲಿ ಪ್ರಕಟವಾದ ಆರ್ಕಿಯಾಲಜಿ(ಪುರಾತತ್ತ್ವ ಶಾಸ್ತ್ರ) ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಜಾಮಿಯಾ ಮಸೀದಿ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಲಾಗಿದೆ.

    ಪುಸ್ತಕದಲ್ಲಿ ಏನಿದೆ?
    ಟಿಪ್ಪು ಸುಲ್ತಾನ್ ಮಸೀದಿ ಮತ್ತು ಮಿನಾರ್ ನಿರ್ಮಾಣದ ಉದ್ದೇಶದಿಂದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶಪಡಿಸಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇಲ್ಲಿದ್ದ ಮೂಡಲ ಬಾಗಿಲು ಆಂಜನೇಯಸ್ವಾಮಿ ವಿಗ್ರಹವನ್ನು ಕಾವೇರಿ ನದಿಯ ಗೌರಿಘಡ ಎಂಬಲ್ಲಿ ಎಸೆಯಲಾಗಿತ್ತು. ಟಿಪ್ಪು ಸುಲ್ತಾನ್ ನಿಧನದ ನಂತರ ದಳವಾಯಿ ದೊಡ್ಡಯ್ಯ ದೇಣಿಗೆ ಸಂಗ್ರಹಿಸಿ ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಮರುಸ್ಥಾಪನೆ ಮಾಡಿದ್ದಾನೆ ಎಂಬ ಅಂಶವಿದೆ.

    ಪಠ್ಯದಿಂದ ಕೈಬಿಡಿ:
    ಈ ಪುಸ್ತಕದಿಂದ ಟಿಪ್ಪು ಸುಲ್ತಾನ್ ವಿಗ್ರಹ ಭಂಜಕ ಎಂದು ರುಜುವಾತು ಮಾಡುತ್ತದೆ. ಹೀಗಾಗಿ ಟಿಪ್ಪು ಸುಲ್ತಾನ್ ಬಗ್ಗೆ ಪಠ್ಯ ಪುಸ್ತಕದ ವಿಚಾರಗಳನ್ನು ಕೈ ಬಿಡಬೇಕೆಂದು ಮೋದಿ ವಿಚಾರ ಮಂಚ್ ವೇದಿಕೆಯ ಪದಾಧಿಕಾರಿಗಳು ಈಗ ಸರ್ಕಾರವನ್ನು ಆಗ್ರಹ ಮಾಡುತ್ತಿದ್ದಾರೆ.

    ಕಾನೂನು ಹೋರಾಟ:
    ಆರ್ಕಿಯಾಲಜಿ ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಇರುವ ದಾಖಲೆಯನ್ನು ಇಟ್ಟುಕೊಂಡು ಕಾನೂನು ಹೋರಾಟ ಮಾಡಲು ಈಗ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದಾರೆ.

  • 150 ಪೊಲೀಸರ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ 5 ದಲಿತ ಮಹಿಳೆಯರು

    150 ಪೊಲೀಸರ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ 5 ದಲಿತ ಮಹಿಳೆಯರು

    ಯಾದಗಿರಿ: 150ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ 5 ಮಂದಿ ದಲಿತ ಮಹಿಳೆಯರು ದೇವಾಲಯವನ್ನು ಪ್ರವೇಶಿಸಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಅಂಬಲಿಹಾಳ ಗ್ರಾಮದ ಆಂಜನೇಯ ದೇವಾಲಯಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ದಲಿತ ಮಹಿಳೆಯರು ಪ್ರವೇಶ ಮಾಡಿದ್ದಾರೆ.

    ಎಸ್‌ಪಿ ಡಾ. ಸಿಬಿ ವೇದಮೂರ್ತಿ ಹಾಗೂ ಸಹಾಯಕ ಆಯುಕ್ತ ಶಾಲಂ ಹುಸೇನ್ ನೇತೃತ್ವದಲ್ಲಿ ಮಹಿಳೆಯರು ಪೊಲೀಸ್ ವಾಹನದಲ್ಲಿ ದೇವಾಯಕ್ಕೆ ಆಗಮಿಸಿದರು. ಬಳಿಕ ಆಂಜನೇಯ ದೇಗುಲ ಪ್ರವೇಶಿಸಿದ ಮಹಿಳೆಯರು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ

    ಮೂಲತಃ ಅಂಬಲಿಹಾಳ ಗ್ರಾಮದ ದಲಿತ ಮಹಿಳೆಯರು ಸುಮಾರು ವರ್ಷಗಳಿಂದ ಮಾವಿನಹಾಳ ಗ್ರಾಮದಲ್ಲಿ ವಾಸವಿದ್ದರು. ಆಂಜನೇಯ ಭಕ್ತರೂ ಆಗಿದ್ದ ಮಹಿಳೆಯರು, ಇತ್ತೀಚೆಗೆ ಆಂಜನೇಯ ಗುಡಿಗೆ ಪ್ರವೇಶ ಮಾಡಿ ಜಾತ್ರೆ ಮಾಡುತ್ತೇವೆ ಎಂದಿದ್ದರು. ಇದಕ್ಕೆ ಅಂಬಲಿಹಾಳ ಗ್ರಾಮದ ಮೇಲ್ವರ್ಗದ ಜನರು ವಿರೋಧ ವ್ಯಕ್ತಪಡಿಸಿದ್ದರು.

    ಶನಿವಾರ ಅಮಾವಾಸ್ಯೆ ಹಾಗೂ ವಿವಿಧ ಕಾರ್ಯಕ್ರಮದ ವೇಳೆ ದೇಗುಲದಲ್ಲಿ ದಲಿತ ಮಹಿಳೆಯರು ದರ್ಶನ ಪಡೆಯಲು ಮುಂದಾಗಿದ್ದರು. ಆದರೆ ಇದಕ್ಕೆ ಮೇಲ್ವರ್ಗದ ಜನರು ವಿರೋಧ ಮಾಡಿದ ಹಿನ್ನೆಲೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಭಾನುವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ದೇಗುಲ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ

    ಖಾಕಿ ಕಟ್ಟೆಚ್ಚೆರ:
    ದಲಿತ ಮಹಿಳೆಯರು ದೇಗುಲ ಪ್ರವೇಶ ಮಾಡಿದ ಹಿನ್ನೆಲೆ, ಅಂಬಲಿಹಾಳ ಹಾಗೂ ಹೂವಿನಹಳ್ಳಿ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ್ದ ಕೆಂಡದಂತಾಗಿದೆ.  ಮೇಲ್ವರ್ಗದ ಜನರು ಗಲಾಟೆ ಮಾಡುವ ಸಾಧ್ಯತೆ ಇದ್ದು, ಅಂಬಲಿಹಾಳ ಹಾಗೂ ಹೂವಿನಹಳ್ಳಿ ಗ್ರಾಮಕ್ಕೆ ಪೊಲೀಸ್ ಭದ್ರತೆ ಇರಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 2 ಕೆಎಸ್‌ಆರ್‌ಪಿಡಿಆರ್ ತುಕಡಿ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಲಾಗಿದೆ.

  • ಶ್ರೀರಂಗಪಟ್ಟಣದ ಆಂಜನೇಯ ದೇವಾಲಯ ಮಸೀದಿಯಾಗಿದೆ: ಮುತಾಲಿಕ್

    ಶ್ರೀರಂಗಪಟ್ಟಣದ ಆಂಜನೇಯ ದೇವಾಲಯ ಮಸೀದಿಯಾಗಿದೆ: ಮುತಾಲಿಕ್

    ಧಾರವಾಡ: ಶ್ರೀರಂಗಪಟ್ಟಣದ ಆಂಜನೇಯನ ದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಅದು ಪ್ರಾಚ್ಯ ಇಲಾಖೆಯ ಕಟ್ಟಡ. ಅಲ್ಲಿ ಬೋರ್ಡ್ ಕೂಡಾ ಇದೆ. ಅಲ್ಲಿ ಆಂಜನೇಯ ದೇವಸ್ಥಾನ ಪ್ರತಿಷ್ಠಾಪನೆ ಮಾಡಬೇಕೆಂಬ ಒತ್ತಡ ಕೂಡಾ ಬಂದಿದೆ. ಅಲ್ಲಿ ನಡೆದಿರುವ ವಾದ ನೂರಕ್ಕೆ ನೂರು ಸತ್ಯ ಎಂದರು. ಇದನ್ನೂ ಓದಿ: ದಿವ್ಯಾಂಗರಿಗೆ ಸರ್ಕಾರದ ಸೌಲಭ್ಯ ತಲುಪಿಸುವಲ್ಲಿ ಸಾರ್ವಜನಿಕರ ಪಾತ್ರ ಮುಖ್ಯ: ರಾಜ್ಯಪಾಲ

    ಈ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ವಿಚಾರ ಮಂಚ್ ಹೋರಾಟ ಮಾಡುತ್ತಿದೆ. ಅದಕ್ಕೆ ನಾನು ಬೆಂಬಲ ಕೊಡುತ್ತೇನೆ. ಆಂಜನೇಯ ದೇವಾಲಯ ಪ್ರತಿಷ್ಠಾಪನೆಗೆ ಜಿಲ್ಲಾಧಿಕಾರಿ ಹಾಗೂ ಮುಸ್ಲಿಂ ಸಮಾಜ ಅವಕಾಶ ಮಾಡಿ ಕೊಡಬೇಕು. ಈ ವಿಚಾರದಲ್ಲಿ ಸಂಘರ್ಷ ಆಗದೇ ಸೌಹಾರ್ದ ಶಾಂತ ರೀತಿಯಲ್ಲಿ ಬಗೆಹರಿಸಬೇಕು ಎಂದು ವಿನಂತಿಸಿಕೊಂಡರು.

    ಪಠ್ಯದಲ್ಲಿ ಹೆಡಗೆವಾರ್ ಸ್ವಾಗತಾರ್ಹ:
    ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಹೆಡಗೆವಾರ್ ಇವರ ವಿಚಾರ ಧಾರೆ ಮುದ್ರಿಸಿದ್ದು ಸ್ವಾಗತಾರ್ಹ. ಇದು ವಿರೋಧಾತ್ಮಕ ಪ್ರಕ್ರಿಯೆ ಅಲ್ಲ, ಇದು ರಾಷ್ಟ್ರೀಯ ವಾದ. ದೇಶ ಭಕ್ತಿಯ ಹಿನ್ನೆಲೆಯಲ್ಲಿ ಆದ ಘಟನೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ಇದನ್ನು ವಿರೋಧ ಮಾಡುವ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಮೇ 19ಕ್ಕೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ

    Pramod Muthalik (3)

    ಇಲ್ಲಿವರೆಗೆ ನಾಸ್ತಿಕವಾದ, ಅರಾಷ್ಟ್ರೀಯತೆ, ಮುಸ್ಲಿಂ ಗುಲಾಮಿ ರಾಜರ ವೈಭವಿಕರಣ ಪಠ್ಯ ಪುಸ್ತಕದಲ್ಲಿತ್ತು. ಟಿಪ್ಪು, ಔರಂಗಜೇಬ, ಅಕ್ಬರನ ಪಾಠ ಸಾಕು. ಈಗ ಹೆಡಗೆವಾರ್, ಭಗತಸಿಂಗ್, ಸಾವರಕರ್, ರಾಯಣ್ಣ, ಚನ್ನಮ್ಮರಂತವರ ಬಗ್ಗೆ ಹಾಕುತ್ತಿರುವದು ಒಳ್ಳೆಯ ವಿಚಾರ ಎಂದರು.

  • ದೇಗುಲಕ್ಕೆ ಬಂದ ಭಿಕ್ಷುಕಿಯನ್ನು ಬೈದು ಹೊರಗೆ ಕಳುಹಿಸಿದ್ರೂ ಆಕೆ ಕೊಟ್ಳು 10 ಸಾವಿರ ರೂ.!

    ದೇಗುಲಕ್ಕೆ ಬಂದ ಭಿಕ್ಷುಕಿಯನ್ನು ಬೈದು ಹೊರಗೆ ಕಳುಹಿಸಿದ್ರೂ ಆಕೆ ಕೊಟ್ಳು 10 ಸಾವಿರ ರೂ.!

    ಚಿಕ್ಕಮಗಳೂರು: ಆಂಜನೇಯ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನ ದಿನ ಭಿಕ್ಷುಕಿಯೊಬ್ಬರು ದೇವಸ್ಥಾನದ ಅಧ್ಯಕ್ಷ ಎಲ್ಲಿ ಅಧ್ಯಕ್ಷ ಎಲ್ಲಿ ಎಂದು ಹುಡುಕುತ್ತಿದ್ದರು. ಎಲ್ಲರೂ ಭಿಕ್ಷೆ ಕೆಳುವುದಕ್ಕೆ ಎಂದು ಭಾವಿಸಿ ಆಕೆಗೆ ಬೈದು ಕಳುಹಿಸುತ್ತಿದ್ದರು. ಆದರೆ, ಆಕೆ ಅಧ್ಯಕ್ಷ ಸಿಗಲಿಲ್ಲ ಎಂದು ಸೀದಾ ದೇವಸ್ಥಾನದ ಒಳಗೆ ಹೋಗಿ ಅಲ್ಲಿದ್ದ ಸ್ವಾಮಿಜಿ ಬಳಿ 500 ಮುಖ ಬೆಲೆಯ 20 ನೋಟುಗಳನ್ನು ನೀಡಿ ಆಂಜನೇಯನಿಗೆ ಬೆಳ್ಳಿ ಮುಖವಾಡ ಮಾಡಿಸಿ ಎಂದು ಮನವಿ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.


    ನಿನ್ನೆ ಜಿಲ್ಲೆಯ ಕಡೂರು ಪಟ್ಟಣದ ಕೋಟೆ ಪಾತಾಳಾಂಜನೇಯ ಸ್ವಾಮಿ ದೇಗುಲದ ಪುನರ್ ಪ್ರತಿಷ್ಠಾಪನ ಮಹೋತ್ಸವ ನಡೆಯಿತು. ಈ ವೇಳೆ ಭಿಕ್ಷುಕಿಯೊಬ್ಬರು ದೇವಸ್ಥಾನಕ್ಕೆ 10 ಸಾವಿರ ದೇಣಿಗೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ದೇವಸ್ಥಾನಕ್ಕೆ ದೇಣಿಗೆ ನೀಡಿದ 80 ವರ್ಷ ಪ್ರಾಯದ ಭಿಕ್ಷುಕಿ ಹೆಸರು ಕೆಂಪಜ್ಜಿ. ಕಡೂರು ಪಟ್ಟಣದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ವೃದ್ಧೆ. ಆಂಜನೇಯ ಸ್ವಾಮಿಯ ದೇಗುಲದ ಕಾರ್ಯಕ್ರಮದ ವೇಳೆ ಹೊರಗೆ ಕುಳಿತಿದ್ದ ಅಜ್ಜಿ ಹೋಗಿ-ಬರುವವರನ್ನೆಲ್ಲಾ ಅಧ್ಯಕ್ಷರು ಎಲ್ಲಿ ಎಂದು ಕೇಳುತ್ತಿದ್ದಳು. ಹಣ ಕೇಳಲು ಎಂದೇ ತಿಳಿದು ಎಲ್ಲರೂ ವೃದ್ಧೆಯನ್ನು ದೂರ ಹೋಗಲು ಹೇಳುತ್ತಿದ್ದರು. ಆದರೆ, ಆ ಭಿಕ್ಷುಕಿ ನೇರವಾಗಿ ದೇಗುಲದೊಳಗೆ ಹೋಗಿ ಅಲ್ಲಿದ್ದ ದತ್ತ ವಾಸುದೇವ ಸ್ವಾಮೀಜಿಗೆ 500 ಮುಖಬೆಲೆಯ 20 ನೋಟುಗಳನ್ನು ಕಾಣಿಕೆ ಎಂದು ನೀಡಿದಾಗ ಎಲ್ಲರಿಗೂ ಆಶ್ಚರ್ಯ. ಮೂಕವಿಸ್ಮಿತರಾಗಿ ನಿಂತರು. ಕೆಂಪಜ್ಜಿಯ ದೊಡ್ಡತನಕ್ಕೆ ಎಲ್ಲರಿಂದಲೂ ಮೆಚ್ಚುಗೆ ದೊರೆಯಿತು. ಇದನ್ನೂ ಓದಿ: ಪಕ್ಷಕ್ಕೆ ಬರುವಂತೆ ಪುನೀತ್‍ಗೆ ಹಲವು ಬಾರಿ ಗಾಳ ಹಾಕಿದ್ದೆ: ಡಿಕೆಶಿ

    ಕೆಂಪಜ್ಜಿ 2019ರಲ್ಲಿ ಪಾತಾಳಾಂಜನೇಯ ದೇಗುಲ ಜೀರ್ಣೋದ್ಧಾರ ಆರಂಭವಾದಾಗಲೂ ಹತ್ತು ಸಾವಿರ ನೀಡಿದ್ದರು. ಪಟ್ಟಣದ ಸಾಯಿಬಾಬಾ ದೇವಾಲಯದ ಬಳಿ ಭಿಕ್ಷೆ ಬೇಡುವ ಕೆಂಪಜ್ಜಿಗೆ ಪಟ್ಟಣದ ವಿನಾಯಕ ಹೋಟೆಲ್ ಮಾಲೀಕ ಭಾಸ್ಕರ್ ಪ್ರತಿದಿನ ತಿಂಡಿ-ಊಟ ನೀಡುತ್ತಾರೆ. ಅಜ್ಜಿಗೆ ಆರೋಗ್ಯ ಸಮಸ್ಯೆಯಾದಾಗಲೂ ಇದೇ ಭಾಸ್ಕರ್ ಚಿಕಿತ್ಸೆ ಕೊಡಿಸುತ್ತಾರೆ. ದೇಗುಲಕ್ಕೆ ಸಾವಿರಾರು ಜನ ಲಕ್ಷಾಂತರ ಹಣ ನೀಡಬಹುದು. ಆದರೆ, ಈ 10 ಸಾವಿರ ತುಂಬಾ ಮೌಲ್ಯಯುತವಾದದ್ದು ಎಂದು ಭಕ್ತರು ಭಾವಿಸಿದ್ದಾರೆ. ತಾನು ನೀಡಿದ 10 ಸಾವಿರ ಹಣದಲ್ಲಿ ಆಂಜನೇಯ ಸ್ವಾಮಿಗೆ ಬೆಳ್ಳಿ ಮುಖವಾಡ ಮಾಡಿಸಿ ಹಾಕಬೇಕೆಂದು ಕೆಂಪಜ್ಜಿ ಬೇಡಿಕೊಂಡಿದ್ದಾಳೆ. ಆರಂಭದಲ್ಲಿ ಭಿಕ್ಷುಕಿಗೆ ಬೈತಿದ್ದ ಜನ ಕೊನೆಗೆ ಆಕೆ ಜೊತೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಖಷಿಪಟ್ಟಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಗಾಳ ಹಾಕಿದ್ದ ಬಿಜೆಪಿ – ಮೋದಿ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್