Tag: Anjaneya Swamy

  • ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು ಲಕ್ಷ್ಮೀನಾರಾಯಣ, ಆಂಜನೇಯ ಸ್ವಾಮಿ ರಥೋತ್ಸವ

    ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು ಲಕ್ಷ್ಮೀನಾರಾಯಣ, ಆಂಜನೇಯ ಸ್ವಾಮಿ ರಥೋತ್ಸವ

    ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ (Mariyammanahalli Town) ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ (Lakshminarayana Swamy) ಮತ್ತು ಶ್ರೀ ಆಂಜನೇಯ ಸ್ವಾಮಿ (Anjaneya Swamy) ಜೋಡಿ ರಥೋತ್ಸವ ಅದ್ದೂರಿಯಾಗಿ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು.

    ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ್ ನಾಯ್ಕ್ ಹಾಗೂ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಜೋಡಿ ರಥೋತ್ಸವ ಎಳೆದು ಚಾಲನೆ ನೀಡಿದರು. ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಜೋಡಿ ರಥೋತ್ಸವ ಎಳೆಯುವ ಸಂಪ್ರದಾಯಕ್ಕೆ 650-700 ವರ್ಷಗಳ ಇತಿಹಾಸ ಇದೆ. ಇದನ್ನೂ ಓದಿ: ಇಂದು ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ

    ಈ ವರ್ಷ ಹೊಸ ಜೋಡಿ ರಥೋತ್ಸವಗಳನ್ನ ಮಾಡಿಸಲಾಗಿತ್ತು. ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ಲಕ್ಷ್ಮೀನಾರಾಯಣ ಹಾಗೂ ಆಂಜನೇಯನ ಕೃಪೆಗೆ ಪಾತ್ರರಾದರು. ಇದನ್ನೂ ಓದಿ: ಕಾಶಿಯಲ್ಲಿ ಮುಸ್ಲಿಂ ಮಹಿಳೆಯರಿಂದ ʻಶ್ರೀರಾಮ ಆರತಿʼ – ಏಕತೆ ಸಂದೇಶ ಸಾರಿದ ರಾಮನವಮಿ ಆಚರಣೆ

    ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿಯ ಫೋಟ 8 ಲಕ್ಷ ರೂ.ಗೆ ಹರಾಜು ಆದರೆ ಶ್ರೀ ಆಂಜನೇಯ ಸ್ವಾಮಿಯ ಫೋಟೋ 12.10 ಲಕ್ಷ ರೂ.ಗೆ ಹರಾಜಾಯ್ತು.

  • ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ

    ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ

    ಬೆಂಗಳೂರು: ಸಚಿವರಾಗಿ ಒಂದು ವರ್ಷ ಪೂರೈಸಿದ ಹಿನ್ನಲೆ ಆಂಜನೇಯ ಸ್ವಾಮೀಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ಸನ್ನಿಧಾನಕ್ಕೆ ಅರಗ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇಂದಿಗೆ ಆರಗ ಅವರು ಪ್ರಮಾಣ ವಚನ ಸ್ವೀಕಾರ ಮಾಡಿ 1 ವರ್ಷ ಪೂರೈಕೆಯಾಗಿದೆ. ಈ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದ ಮೊಬೈಲ್, ಖಾಲಿ ಹಾಳೆ ಕೈಗಿತ್ತು ಹೆತ್ತಮ್ಮನನ್ನೇ ಬಿಟ್ಟು ಹೋದ 

    ನಂತರ ಮಾಧ್ಯಮಗಳೊಂದಿಗೆ ಪಿಎಸ್‍ಐ ನೇಮಕಾತಿ ಪ್ರಕರಣ ಕುರಿತು ಮಾತನಾಡಿದ ಅವರು, ಸಿಐಡಿ ತನಿಖೆ ಮುಗಿದ ಕೂಡಲೇ ಪರೀಕ್ಷೆ ದಿನಾಂಕ ಪ್ರಕಟ ಮಾಡ್ತೀವಿ. ಪ್ರಕರಣದಲ್ಲಿ ಯಾರು ಇದ್ದಾರೋ ಅವ್ರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕೊಡೋದಿಲ್ಲ. 545 ಪೋಸ್ಟ್ ನೇಮಕಾತಿ ಅಧಿಸೂಚನೆ ರದ್ದು ಆಗೋದಿಲ್ಲ. ಆದ್ರೆ ಹೊಸದಾಗಿ ಪರೀಕ್ಷೆ ಮಾಡ್ತೀವಿ. ಅಭ್ಯರ್ಥಿಗಳು ವಯಸ್ಸಿನ ಬಗ್ಗೆ ಭಯ ಬೀಳೋ ಅವಕಾಶ ಇಲ್ಲ ಎಂದು ಭರವಸೆ ಕೊಟ್ಟರು.

    545 ಪೋಸ್ಟ್ ನೇಮಕಾತಿ ಅಧಿಸೂಚನೆ ಅವ್ರಿಗೆ ವಯಸ್ಸಿನ ಸಡಿಲಿಕೆ ಕೊಡಲಾಗುತ್ತದೆ. ಹೀಗಾಗಿ ಯಾರು ಆತಂಕ ಪಡುವ ಅವಶ್ಯತೆ ಇರೋದಿಲ್ಲ. ಹೊಸದಾಗಿ ಮತ್ತೆ 5 ಸಾವಿರ ಪೋಸ್ಟ್ ಕಾನ್ಸ್‍ಸ್ಟೇಬಲ್ ಹುದ್ದೆ ನೇಮಕಾತಿ ಮಾಡಿಕೊಳ್ತೀವಿ. 545 ಹುದ್ದೆ ಬಿಟ್ಟು 450 PSI ಗಳ ನೇಮಕಾತಿ ಹೊಸದಾಗಿ ಪ್ರಕ್ರಿಯೆ ಪ್ರಾರಂಭ ಮಾಡ್ತೀವಿ. ನಮ್ಮ ಅವಧಿಯಲ್ಲಿ ಹೇಗೆ ಎಕ್ಸಾಂ ಮಾಡೋದು ಅಂತ ತೋರಿಸಿಕೊಡ್ತೀವಿ ಎಂದು ಸವಾಲು ಹಾಕಿದರು. ಇದನ್ನೂ ಓದಿ:  ಪಾಕ್‍ನಲ್ಲಿದ್ದ 1,200 ವರ್ಷಗಳಷ್ಟು ಹಳೆ ಹಿಂದೂ ದೇವಾಲಯ ಮರುಸ್ಥಾಪಿಸಲು ಅನುಮತಿ 

    ಹರ್ಷ ಕೊಲೆ ಆರೋಪಿಗಳು ವೀಡಿಯೋ ನೋಡಿ ನನಗೆ ತುಂಬಾ ನೋವಾಯ್ತು. ಕೂಡಲೇ ಕ್ರಮ ತೆಗೆದುಕೊಂಡು ಜೈಲಿನ 15 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 30 ಸಿಬ್ಬಂದಿ ಎತ್ತಂಗಡಿ ಮಾಡಲಾಗಿದೆ. ಈಗ ಜೈಲಿನಲ್ಲಿ ಹೊಸ ಸಿಬ್ಬಂದಿ ಇದ್ದಾರೆ. ಜೈಲಿನ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಮಾಡ್ತಿದ್ದೇವೆ. ಪರಪ್ಪನ ಅಗ್ರಹಾರ ಜೈಲಿಗೆ ಜಾಮರ್ ಅಳವಡಿಕೆ ಮಾಡೇ ಮಾಡ್ತೀವಿ. 2-3 ತಿಂಗಳ ಒಳಗೆ ಜಾಮರ್ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಯಾರಿಗೂ ಕಾಲ್ ಮಾಡೊದಕ್ಕೂ ಆಗಬಾರದು. ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ ಹಾಕೋ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ತಿದ್ದೇವೆ ಎಂದು ಶಪತ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಭೋಗಸ್ ಬೋರ್ಡ್ ಆಗಿರುವ ವಕ್ಫ್ ಬೋರ್ಡ್ ರದ್ದು ಮಾಡಬೇಕು: ಮುತಾಲಿಕ್

    ಭೋಗಸ್ ಬೋರ್ಡ್ ಆಗಿರುವ ವಕ್ಫ್ ಬೋರ್ಡ್ ರದ್ದು ಮಾಡಬೇಕು: ಮುತಾಲಿಕ್

    ಧಾರವಾಡ: ಭೋಗಸ್ ಬೋರ್ಡ್ ಆಗಿರುವ ವಕ್ಫ್ ಬೋರ್ಡ್ ಅನ್ನು ರದ್ದು ಮಾಡಬೇಕು. ಮೊದಲು ಮದರಸಾಗಳಲ್ಲಿ ಓದುತ್ತಿರುವವರನ್ನು ಹೊರಗಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

    ಜಾಮಿಯಾ ಮಸೀದಿಯಲ್ಲಿ ಪುಸ್ತಕ ಪತ್ತೆಯಾಗಿರುವ ಸಂಬಂಧ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಅನ್ನು ರದ್ದು ಮಾಡಿ, ಮಸೀದಿಯನ್ನ ತೆರವುಗೊಳಿಸಬೇಕು. ಪ್ರತಿ ಶನಿವಾರ ಅಲ್ಲಿ ಆಂಜನೇಯ ದೇವರ ಪೂಜೆಗೆ ಅವಕಾಶ ಕೊಡಬೇಕು. ದಾಖಲೆ ಸಮೇತ ಅವರನ್ನ ಹೊರಗೆ ಹಾಕಬೇಕು ಅನ್ನೋದೇ ನಮ್ಮ ಬೇಡಿಕೆ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!

    ಅಲ್ಲದೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ದೇವಸ್ಥಾನ ಅನ್ನೋ ದಾಖಲೆ ಹೊರಬಿದ್ದಿದೆ. ಅದು ದೇವಸ್ಥಾನ ಅನ್ನೋದಕ್ಕೆ ಸಾಕ್ಷಿಯಾಗಿ ದಾಖಲೆ ದೊರೆತಿದೆ. ಅಲ್ಲಿ ನಾಗರ ಚಿಹ್ನೆ, ಕಲ್ಯಾಣಿ, ಗರುಡ ಚಿಹ್ನೆಯೂ ಇದೆ. ಅದರ ಜೊತೆಗೆ ಟಿಪ್ಪು ಸುಲ್ತಾನನೇ ಕೆಡವಿದ್ದು ಅನ್ನೋದಕ್ಕೆ ಮತ್ತೊಂದು ಪೂರಕ ದಾಖಲೆ ಸಿಕ್ಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಠ್ಯ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರ್ಕಾರದಿಂದ ಸಾಂಸ್ಕೃತಿಕ ಅತ್ಯಾಚಾರ: ಡಿಕೆಶಿ

    ಮೂಡಲ ಆಂಜನೇಯ ದೇವಸ್ಥಾನದ `ಸುಪ್ರಭಾತ’ ಅನ್ನೋ ಪುಸ್ತಕ ಈಗ ಪತ್ತೆಯಾಗಿದೆ. ಅದರಲ್ಲಿ ಎಲ್ಲ ಮಾಹಿತಿಯೂ ದಾಖಲಾಗಿದೆ. 70 ವರ್ಷಗಳ ಹಿಂದೆ ಪ್ರಕಟವಾದ ಈ ಪುಸ್ತಕದಲ್ಲಿ ಆಂಜನೇಯ ದೇವಸ್ಥಾನದ ಚಿತ್ರ ಇದೆ. ಅಲ್ಲದೆ ದೇವಸ್ಥಾನದಿಂದ ನಾರಾಯಣ ಮೂರ್ತಿ ಎನ್ನುವವರ ಕೈ ಕತ್ತರಿಸಿ, ಅಲ್ಲಿದ್ದ ಮೂರ್ತಿಯನ್ನ ನೀರಿನ ಗುಂಡಿಯಲ್ಲಿ ಎಸೆದಿದ್ದಾರೆ. ಇದೆಲ್ಲವೂ ದಾಖಲೆಯಾಗಿದೆ ಮತ್ತೇನು ಬೇಕು. ಈ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡು ಪರಿಶೀಲನೆ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.

    ಟಿಪ್ಪು ಸುಲ್ತಾನ್ 7 ಕೊಪ್ಪರಿಗೆ ಚಿನ್ನಾಭರಣ ಕದ್ದು ಅದರಿಂದಲೇ ಮಸೀದಿ ಕಟ್ಟಿದ್ದಾನೆ. ವಿಜಯನಗರದ ತಿಮ್ಮಣ್ಣ ನಾಯಕ ಅದನ್ನ ಕಟ್ಟಿದ ಅನ್ನೋ ಉಲ್ಲೇಖ ಇದೆ ಎಂದು ಹೇಳಿದ್ದಾರೆ.

  • ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!

    ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!

    – ಸಾಮಾಜಿಕ ಜಾಲತಾಣದಲ್ಲಿ ಪುಸ್ತಕದ ಪ್ರತಿಯ ಫೋಟೋ ವೈರಲ್
    – ವಿಜಯನಗರದ ದಂಡನಾಯಕ ತಿಮ್ಮಣ್ಣನಿಂದ ಕೋಟೆ ನಿರ್ಮಾಣ

    ಮಂಡ್ಯ: ದಿನದಿಂದ ದಿನಕ್ಕೆ ತಾರಕ್ಕೆ ಏರುತ್ತಿರುವ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದಕ್ಕೆ ಇದೀಗ ಪುಸ್ತಕದಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದದ ಹೋರಾಟದ ಕಾವು ಹೆಚ್ಚುತ್ತಿರುವುದರ ಜೊತೆಗೆ ದಿನಕ್ಕೊಂದು ಮಹತ್ವದ ತಿರುವನ್ನು ಪಡೆದುಕೊಳ್ಳುತ್ತಿದೆ. ಜಾಮಿಯಾ ಮಸೀದಿಗೂ ಮೊದಲೇ ಅಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಿತ್ತು. ಆ ದೇವಾಸ್ಥಾನ ನಾಶ ಮಾಡಿ ಟಿಪ್ಪು ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇಲ್ಲಿ ದೇವಸ್ಥಾನ ಇತ್ತು ಎಂಬ ಹಿಂದೂ ಸಂಘಟನೆಗಳ ಆರೋಪಕ್ಕೆ ಪೂರಕ ಎಂಬಂತೆ ಈ ಹಿಂದೆ ಪ್ರಕಟವಾದ ಪುಸ್ತಕ ಸಿಕ್ಕಿದೆ.

    ಬಾಲಗಣಪತಿಭಟ್ಟ ಎಂಬವರು ಬರೆದಿರುವ ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ಸುಪ್ರಭಾತ ಎಂಬ ಪುಸ್ತಕ ದೊರೆತಿದೆ. ಈ ಪುಸ್ತಕದಲ್ಲಿ ಜಾಮಿಯಾ ಮಸೀದಿಯನ್ನು ಟಿಪ್ಪು ಸುಲ್ತಾನ್ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶಮಾಡಿ ನಿರ್ಮಾಣ ಮಾಡಿದ್ದಾನೆ ಎಂದು ಉಲ್ಲೇಖ ಮಾಡಲಾಗಿದೆ. ಇದನ್ನೂ ಓದಿ: ಹಿಜಬ್ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ: ಯು.ಟಿ.ಖಾದರ್ 

    ಪುಸ್ತಕದಲ್ಲಿ ಏನಿದೆ?
    ಶ್ರೀರಂಗಪಟ್ಟಣ ಈ ಹಿಂದೆ ದಟ್ಟ ಅರಣ್ಯ ಪ್ರದೇಶವಾಗಿತ್ತು. ಗೋಹತ್ಯೆಯ ಪಾಪಕ್ಕೊಳಗಾದ ಗೌತಮ ಋಷಿಗಳು ಇಲ್ಲಿಗೆ ಬಂದು ದೇವಸ್ಥಾನಗಳನ್ನು ಸ್ಥಾಪಿಸಿ ಪೂಜಿಸಿದ್ದರು. ಆ ವೇಳೆ ಶ್ರೀರಂಗಪಟ್ಟಣವನ್ನು ಗೌತಮ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಆ ವೇಳೆ ಮೂಡಲ ದಿಕ್ಕಿಗೆ ಗೌತಮ ಋಷಿಗಳೇ ಆಂಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತಿದ್ದರು. ಇದಾದ ನಂತರ ರಾಜಾಡಳಿತದ ರಾಜಧಾನಿಯಾದಗ ಗೌತಮ ಕ್ಷೇತ್ರ ಶ್ರೀರಂಗಪಟ್ಟಣವೆಂದು ಬದಲಾಗುತ್ತದೆ.

    ಶ್ರೀರಂಗಪಟ್ಟಣದ ಸುತ್ತ ಇರುವ ಕೋಟೆಯನ್ನು ವಿಜಯನಗರದ ದಂಡನಾಯಕ ತಿಮ್ಮಣ್ಣ ಹೆಬ್ಬಾರನಿಂದ ನಿರ್ಮಿತವಾಗಿದೆ. ಈ ವೇಳೆ ತಿಮ್ಮಣ್ಣ ಹೆಬ್ಬಾರ ಕೇವಲ ಆಂಜನೇಯಸ್ವಾಮಿ ಮೂರ್ತಿ ಇದ್ದ ಜಾಗದಲ್ಲಿ ಭವ್ಯವಾದ ಮಂದಿರವೊಂದನ್ನು ಕಟ್ಟಿಸಿದ್ದರು. ಬಳಿಕ ಇಲ್ಲಿ ಪ್ರತಿನಿತ್ಯ ಆಂಜನೇಯಸ್ವಾಮಿಯನ್ನು ಜನರು ಆರಾಧನೆ ಮಾಡುತ್ತಿದ್ದರು. ಇಂತಹ ದೇವಸ್ಥಾನಕ್ಕೆ ವಿನಾಶಕಾಲ ಬಂದಿದ್ದು, ಟಿಪ್ಪು ಸುಲ್ತಾನ್ ಕಾಲದಲ್ಲಿದೆ.

    ಅರ್ಚಕರ ಕೈ ಕತ್ತರಿಸಲಾಗಿತ್ತು
    ಟಿಪ್ಪು ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶ ಮಾಡಿ ಅರ್ಚಕರಾಗಿದ್ದ ನಾರಾಯಣಸ್ವಾಮಿ ಅವರ ಕೈಯನ್ನು ಕತ್ತರಿಸಿ, ದೇವಸ್ಥಾನದ ಒಳಭಾಗದಲ್ಲಿ ಇದ್ದ ಏಳು ಕೊಪ್ಪರಿಗೆ ಹಣ ಹಾಗೂ ಅಮೂಲ್ಯವಾದ ರತ್ನಾಭರಣಗಳನ್ನು ದೋಚಲಾಗಿದೆ. ಆ ಹಣದಿಂದಲೇ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇಲ್ಲಿದ್ದ ಮೂಡಲಬಾಗಿಲು ಆಂಜನೇಯಸ್ವಾಮಿ ಮೂಲ ವಿಗ್ರಹವನ್ನು ಕಾವೇರಿ ನದಿಗೆ ಎಸೆದಿದ್ದಾನೆ.

    ನಾನು ನಿನ್ನ ಜೊತೆ ಬರುತ್ತೇನೆ
    ಟಿಪ್ಪು ಮರಣದ ನಂತರ ಅರ್ಚಕರಾದ ನಾರಾಯಣಸ್ವಾಮಿ ಅವರು ಕಾವೇರಿ ನದಿಯಲ್ಲಿ ಹೋಗುವ ವೇಳೆ ದಿವ್ಯವಾಣಿಯೊಂದು ‘ನಾನು ನಿನ್ನ ಜೊತೆ ಬರುತ್ತೇನೆ’ ಎಂದು ಕೇಳಿಬಂದಿದೆ. ಅದೇನೂ ಎಂದು ನೋಡಿದ ವೇಳೆ ಅಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿಯ ಮೂಲ ವಿಗ್ರಹ ಪತ್ತೆಯಾಗುತ್ತೆ. ನಂತರ ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿ ಮರುಪ್ರತಿಷ್ಠಾಪನೆ ಮಾಡಿ ಆರಾಧನೆ ಮಾಡಿದರು ಎಂದು ಬಾಲಗಣಪತಿಭಟ್ಟ ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ.

    ಜಾಮಿಯಾ ಮಸೀದಿಯಲ್ಲಾ, ಮಂದಿರಾ ಎಂದು ಹೋರಾಟ ನಡೆಸುತ್ತಿರುವ ವೇಳೆ ಈ ಪುಸ್ತಕ ದೊರೆತಿರುವುದು ಸಂಚಲನ ಮೂಡಿಸಿದೆ. ದೊರೆತಿರುವ ಪುಸ್ತಕವಾದ್ರು ಯಾವ ಕಾಲ ಘಟ್ಟದ್ದೂ, ಆ ಪುಸ್ತಕದಲ್ಲಿ ಬರೆದಿರುವ ವಿಚಾರಗಳ ಸತ್ಯ ಸತ್ಯತೆಗಳ ಬಗ್ಗೆ ಸರ್ಕಾರ ಪರೀಶಿಲಸಬೇಕಿದೆ. ಇದನ್ನೂ ಓದಿ:  ಬೈಕರ್ ಗುಂಪಿನೊಂದಿಗೆ ಮಾತಿನ ಚಕಮಕಿ – ಸವಾರನಿಗೆ ಬೇಕೆಂದು ಸ್ಕಾರ್ಪಿಯೋ ಡಿಕ್ಕಿ 

    ಇಲ್ಲಿರುವ ದೇವಸ್ಥಾನದ ಮಾದರಿಯ ಕಂಬಗಳು, ಕೆತ್ತನೆಗಳು, ಕಲ್ಯಾಣಿ, ಬಾವಿ, ಗೋಪುರದ ಕಳಶಗಳನ್ನು ನೋಡಿ ಇದು ದೇವಸ್ಥಾನ ಎಂದು ತಿಳಿಯುತ್ತದೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ಮತ್ತೆ ಜಾಮಿಯಾ ಬಳಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಹೋರಾಟಗಳನ್ನು ಆರಂಭಿಸಿದೆ. ಈ ಹೋರಾಟವನ್ನು ನ್ಯಾಯಾಲಯದ ಜೊತೆಗೆ ಪ್ರತಿಭಟನೆಯ ರೂಪದಲ್ಲಿ ಹೋರಾಟ ನಡೆಸುತ್ತಿವೆ.