Tag: Anjanadri Hills

  • ಅಂಜನಾದ್ರಿಯಲ್ಲಿ ಮತ್ತೆ ವಿವಾದ – ಹೊರಗಿನ ಅರ್ಚಕರಿಂದ ಪೂಜೆ ಮಾಡಿಸಿದ ನೂತನ ಡಿಸಿ ಸುರೇಶ್

    ಅಂಜನಾದ್ರಿಯಲ್ಲಿ ಮತ್ತೆ ವಿವಾದ – ಹೊರಗಿನ ಅರ್ಚಕರಿಂದ ಪೂಜೆ ಮಾಡಿಸಿದ ನೂತನ ಡಿಸಿ ಸುರೇಶ್

    ಕೊಪ್ಪಳ: ಜಿಲ್ಲೆಯ ಅಂಜನಾದ್ರಿಯಲ್ಲಿ (Anjanadri) ಮತ್ತೆ ಪೂಜೆ ವಿವಾದ ಶುರುವಾಗಿದೆ. ಆಂಜನೇಯ ಸ್ವಾಮಿ (Anjaneya Swamy) ದರ್ಶನಕ್ಕೆ ಬಂದ ನೂತನ ಡಿಸಿ ಸುರೇಶ್ (DC Suresh) ಅವರು ಹೊರಗಿನ ಅರ್ಚಕನಿಂದ ಪೂಜೆ ಮಾಡಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

    ಕೊಪ್ಪಳ ನೂತನ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರು ಮೊದಲ ಬಾರಿಗೆ ಅಂಜನಾದ್ರಿಗೆ ಭೇಟಿ ನೀಡಿದ್ದು, ಈ ವೇಳೆ ಆಂಜನೇಯ ಸ್ವಾಮಿ ದರ್ಶನ ಮಾಡುವಾಗ ಹೊರಗಿನಿಂದ ಅರ್ಚಕನನ್ನು ಕರೆತಂದು ಪೂಜೆ ನೆರವೇರಿಸಿದ್ದಾರೆ. ಸೌಜನ್ಯಕ್ಕಾದರೂ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾರನ್ನು ಮಾತನಾಡಿಸಬೇಕಿತ್ತು. ಆದರೆ ಮಾತಾಡಿಸದೇ ಹಾಗೇ ಹೋಗಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆ ಆಂಜನೇಯಸ್ವಾಮಿ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ

    ಸುಪ್ರೀಂ ಕೋರ್ಟ್ ವಿದ್ಯಾದಾಸ ಬಾಬಾ ಅವರಿಗೆ ಪೂಜೆಯ ಹಕ್ಕು ನೀಡಿದೆ. ಆದರೆ, ಕಳೆದ ಹಲವು ತಿಂಗಳಿನಿಂದ ಅಧಿಕಾರಿಗಳು ಬಾಬಾಗೆ ಕಿರುಕುಳ ನೀಡುತ್ತಾ ಧಾರ್ಮಿಕ ಕಾರ್ಯಗಳಿಗೆ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈಗ ಡಿಸಿ ಕೂಡ ಇದೇ ವರ್ತನೆ ತೋರಿದ್ದಾರೆ.

    ಪೂಜಾ ಕಾರ್ಯಗಳ ಚಿತ್ರೀಕರಣದ ವೇಳೆಯೂ ಆಡಳಿತ ಅಧಿಕಾರಿ ಎಂ.ಹೆಚ್.ಪ್ರಕಾಶರಾವ್ ವಿದ್ಯಾದಾಸ ಬಾಬಾರನ್ನು ತಡೆದಿದ್ದಾರೆ. ಇಷ್ಟೆಲ್ಲಾ ಆದರೂ ಡಿಸಿ ಸುರೇಶ್ ಮಾತ್ರ ನನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ದೇವರ ದರ್ಶನ ಪಡೆದು ಹೋಗಿದ್ದಾರೆ. ಭಕ್ತರಿಗೆ ಮಂಗಳಾರತಿ ನಿಷೇಧಿಸಿರುವ ಜಿಲ್ಲಾಡಳಿತ ಅಧಿಕಾರಿಗಳಿಗೆ ಮಾತ್ರ ಮಂಗಳಾರತಿ, ವಿಶೇಷ ಅರ್ಚಕರ ಸೌಲಭ್ಯ ಕಲ್ಪಿಸುತ್ತಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಶಾಲೆ ಬಳಿ ಇದ್ದ ನೇರಳೆ ತಿಂದು 7 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

  • ಅಂಜನಾದ್ರಿ ಬೆಟ್ಟದಲ್ಲಿ ಪ್ರಧಾನಿ ಮೋದಿ ಹೆಸರಲ್ಲೂ ಪೂಜೆ ನಡೆಯಲಿದೆ: ಶೋಭಾ ಕರಂದ್ಲಾಜೆ

    ಅಂಜನಾದ್ರಿ ಬೆಟ್ಟದಲ್ಲಿ ಪ್ರಧಾನಿ ಮೋದಿ ಹೆಸರಲ್ಲೂ ಪೂಜೆ ನಡೆಯಲಿದೆ: ಶೋಭಾ ಕರಂದ್ಲಾಜೆ

    – ಅಂಜನಾದ್ರಿ ಬೆಟ್ಟದಲ್ಲಿ ತಲೆಎತ್ತಲಿದೆ 9 ಅಡಿ ಪಂಚಲೋಹದ ರಾಮ ಮೂರ್ತಿ

    ಕೊಪ್ಪಳ: ಹನುಮನ ನಾಡು ಕೊಪ್ಪಳದ (Koppal) ಅಂಜನಾದ್ರಿ ಬೆಟ್ಟಕ್ಕೆ (Anjanadri Hills) ಭಾನುವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಭೇಟಿ ನೀಡಿದ್ದು, ಸ್ಥಳೀಯ ಬಿಜೆಪಿ (BJP) ಮುಖಂಡರು ಸಚಿವರನ್ನು ಸ್ವಾಗತಿಸಿದ್ದಾರೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಸಚಿವೆ ಶೋಭಾ ಭೇಟಿ ನೀಡಿ ವಿಕಸಿತ ಭಾರತದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಶೋಭಾ ಕರಂದ್ಲಾಜೆಗೆ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸಾಥ್ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ವಿಕಸಿತ ಭಾರತದಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕಾರಣವನ್ನು ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ರಜೆ ಕೊಡೋ ಬಗ್ಗೆ ಬಿಜೆಪಿಯವ್ರು ಹೇಳಿಕೊಡಬೇಕಿಲ್ಲ: ಡಿಕೆ ಶಿವಕುಮಾರ್

    ವಿಕಸಿತ ಭಾರತ ಯೋಜನೆಯನ್ನು ಬ್ಯಾಂಕ್‌ನವರಿಗೆ ಜವಾಬ್ದಾರಿ ವಹಿಸಲಾಗಿದೆ. 2047ರ ವೇಳೆಗೆ ಭಾರತವನ್ನು ವಿಕಸಿತ ಮಾಡುವುದು ಮೋದಿ (Narendra Modi) ಅವರ ಅಪೇಕ್ಷೆ. ವಿಕಸಿತ ಭಾರತದ ಗಾಡಿ ಮೋದಿ ಅವರ ಗ್ಯಾರಂಟಿ ಕಾ ಗಾಡಿ ಎಂದು ಪ್ರಸಿದ್ಧಿ ಪಡೆದಿದೆ. ಸೋಮವಾರ ರಾಮಮಂದಿರ ಉದ್ಘಾಟನೆ ಆಗುತ್ತಿದೆ. ಮೋದಿ ಅವರ ನೇತೃತ್ವದಲ್ಲಿ ಉದ್ಘಾಟನೆ ಆಗುತ್ತಿದೆ. ರಾಮನ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸುತ್ತೇವೆ. ಮೊದಲ ಪೂಜೆ ಆಂಜನೇಯನ ಹೆಸರಿನಲ್ಲಿ ಮಾಡುವ ಉದ್ದೇಶದಿಂದ ಇಲ್ಲಿಗೆ ಬರಲಾಗಿದೆ. ಅಂಜನಾದ್ರಿ ಬೆಟ್ಟದಲ್ಲಿ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಇಂದೇ ಅಯೋಧ್ಯೆಗೆ ತೆರಳಲಿದೆ ದೊಡ್ಡಗೌಡರ ಕುಟುಂಬ

    ಹನುಮನ ಜನ್ಮ ಸ್ಥಳವಾಗಿರುವ ಕೊಪ್ಪಳದಲ್ಲೂ ಪ್ರಭು ಶ್ರೀರಾಮನ ಮೂರ್ತಿ ಸ್ಥಾಪನೆ ಮಾಡಲಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ರಾಮನ ಮೂರ್ತಿ ಸ್ಥಾಪಿಸಲಾಗುತ್ತದೆ. ಸೋಮವಾರ ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಹಿನ್ನೆಲೆ ಅಂಜನಾದ್ರಿ ಬೆಟ್ಟದಲ್ಲೂ ರಾಮನ ಮೂರ್ತಿ ಸ್ಥಾಪನೆ ಮಾಡಲಾಗುತ್ತಿದೆ. ಅಂಜನಾದ್ರಿ ಬೆಟ್ಟದ ಪ್ರವೇಶದ್ವಾರದ ಬಳಿ ಮೂರ್ತಿ ಸ್ಥಾಪನೆಯಾಗಲಿದೆ. 9 ಅಡಿ ಪಂಚಲೋಹದ ರಾಮನ ಮೂರ್ತಿ ಅಂಜನಾದ್ರಿ ಬೆಟ್ಟ ತಲುಪಿದ್ದು, ರಾಮಮೂರ್ತಿ ಸ್ಥಾಪನೆ ಹಿನ್ನೆಲೆ ಭಾನುವಾರ ಮತ್ತು ಸೋಮವಾರ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ!

  • ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?

    ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?

    ಕೊಪ್ಪಳ: ಐತಿಹಾಸಿಕ ರಾಮ ಮಂದಿರ (Ram Mandir) ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಅನೇಕ ಸ್ಥಳಗಳಲ್ಲಿ ಶ್ರೀರಾಮನ ಹೆಜ್ಜೆಗುರುತುಗಳು ಕಂಡುಬಂದಿವೆ. ಅದರಲ್ಲೂ ಶ್ರೀರಾಮನ ಬಂಟ ಹನುಮನ ಜನ್ಮಸ್ಥಳ ಇರುವ ಕೊಪ್ಪಳ (Koppal) ಜಿಲ್ಲೆಗೆ ಹೆಚ್ಚಿನ ನಂಟಿರೋದು ಸಾಬೀತಾಗಿದೆ. ಏಕೆಂದರೇ ಪ್ರಸಿದ್ಧ ಅಂಜನಾದ್ರಿ ಬೆಟ್ಟ (Anjanadri Hills) ಇರೋದು ಈ ಕೊಪ್ಪಳ ಜಿಲ್ಲೆಯಲ್ಲೇ, ಹೀಗಾಗಿ ರಾಮ ಮತ್ತು ಆಂಜನೇಯನ ಅನೇಕ ಕಥೆಗಳು ಕೊಪ್ಪಳ ಜಿಲ್ಲೆಯಲ್ಲಿವೆ.

    ಮೋಡಕ್ಕೆ ಮುತ್ತಿಟ್ಟಂತೆ ಸುತ್ತಲೂ ಹರಿಯುತ್ತಿರುವ ತುಂಗಭದ್ರ ನದಿ. ನದಿಯ ದಡದಲ್ಲಿ ಒಂದೇ ಕಲ್ಲಿನಿಂದ ನಿರ್ಮಾಣವಾಗಿರುವ ಪುಟ್ಟ ಗೋಡೆ. ಮತ್ತೊಂದೆಡೆ ನದಿ ದಡದಲ್ಲಿರುವ ದೊಡ್ಡ ಕಲ್ಲು ಬಂಡೆಯ ಮೇಲಿರುವ ಪಾದದ ಗುರುತು . ಇದು ನೋಡುವುದಕ್ಕೆ ಸಾಮಾನ್ಯ ಸ್ಥಳದಂತೆ ಕಂಡರೂ ರಾಮಯಣದಲ್ಲಿ ಮಹತ್ವ ಪಡೆದ ಸ್ಥಳವೆಂದೇ ಖ್ಯಾತಿ ಪಡೆದಿದೆ. ಇದನ್ನೂ ಓದಿ: ‘ಅನಿಮಲ್’ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಕೆನ್ನೆಗೆ ಮುತ್ತಿಟ್ಟ ರಣ್‌ಬೀರ್ ಕಪೂರ್

    ಏಕೆಂದರೆ ಇದೇ ಸ್ಥಳದಲ್ಲಿ ರಾಮ, ಲಕ್ಷ್ಮಣರು ಮತ್ತು ಹನುಮಂತ, ಸುಗ್ರೀವರು ಭೇಟಿಯಾಗುತ್ತಾರೆ. ನಂತರ ಏನು ನಡೆಯುತ್ತೇ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹದ್ದೊಂದು ಐತಿಹಾಸಿಕ ಸ್ಥಳ ಇರೋದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯಿರೋ ಚಂಚಲ ಕೋಟೆಯಲ್ಲಿ.

    ಹೌದು. ಸೀತೆಯನ್ನು ಹುಡುಕಿಕೊಂಡು ಅಯೋಧ್ಯೆಯಿಂದ ರಾಮ ಮತ್ತು ಸಹೋದರ ಲಕ್ಷ್ಮಣ ಹೊರಟಿದ್ದರು. ರಾಮ, ಲಕ್ಷ್ಮಣರು ಹತ್ತಿರ ಬಂದು, ಆಂಜನೇಯ ಮತ್ತು ಸುಗ್ರೀವರನ್ನು ಮಾತನಾಡಿಸುತ್ತಾರೆ. ಆಗ ತಾವು ವಾಲಿಯ ಬಂಟರಲ್ಲಾ, ರಾಮ, ಲಕ್ಷ್ಮಣರು ಅಂತ ಹೇಳುತ್ತಾರೆ. ತನ್ನ ಪತ್ನಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗಿದ್ದಾನೆ. ಸೀತೆಯನ್ನು ಹುಡುಕಿಕೊಂಡು ತಾವು ಹೊರಟಿರುವುದಾಗಿ ಹೇಳುತ್ತಾನೆ. ರಾಮ ಮತ್ತು ಸುಗ್ರೀವ ಇಬ್ಬರ ನೋವು ಒಂದೇ ಆಗಿತ್ತು. ಇದೇ ಚಂಚಲಕೋಟೆಯ ಗುಡ್ಡದಲ್ಲಿ ರಾಮ, ಲಕ್ಷ್ಮಣರು, ಮತ್ತು ಆಂಜನೇಯ, ಸುಗ್ರೀವರ ಮೊದಲ ಭೇಟಿಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ.

    ರಾಮ, ಆಂಜನೇಯ, ಸುಗ್ರೀವ ಭೇಟಿಯಾಗಿದ್ದು ಇದೇ ಚಂಚಲಕೋಟೆಯಲ್ಲಿ ಅನ್ನೋದು ಇತಿಹಾಸಕಾರರ ಮಾತಾಗಿದೆ. ಹೀಗಾಗಿ ಬೃಹತ್ ಕಲ್ಲು ಬಂಡೆಯ ಮೇಲೆ ಪಾದುಕೆಗಳಿದ್ದು, ಅವು ರಾಮನ ಪಾದುಕೆಗಳು ಅಂತ ಹೇಳಲಾಗುತ್ತಿದೆ. ಚಂಚಲ ಕೋಟೆಯಲ್ಲಿ ರಾಮ ಕಾಲಿಟ್ಟ ಹೆಜ್ಜೆಗುರುತುಗಳು ಇವು ಅಂತ ಹೇಳುತ್ತಾರೆ. ಈ ಸಮಯದಲ್ಲಿ ವಾಲಿಯ ದೌರ್ಜನ್ಯದ ಬಗ್ಗೆ ಸುಗ್ರೀವ ಮತ್ತು ಹನುಮಂತ, ರಾಮನಿಗೆ ಹೇಳುತ್ತಾರೆ. ತಮಗೆ ಸಹಾಯ ಮಾಡುವಂತೆ ಕೇಳುತ್ತಾರೆ. ನಂತರ ವಾಲಿ ಮತ್ತು ರಾಮನ ನಡುವೆ ಯುದ್ಧ ನಡೆಯುತ್ತಲೇ, ವಾಲಿಯನ್ನು ರಾಮ ವಧೆ ಮಾಡುತ್ತಾನೆ ಅನ್ನೋದು ಪುರಾಣ. ಇದನ್ನೂ ಓದಿ: ಜೀವನದಲ್ಲಿ ಭರವಸೆಯಿಲ್ಲ, ಜೈಲಿನಲ್ಲೇ ಸಾಯೋದು ಉತ್ತಮ: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ಗೋಯಲ್‌

    ಕೊಪ್ಪಳದ ಕಿಷ್ಕಿಂದೆ ಭಾಗದಲ್ಲಿ ಶ್ರೀರಾಮನ ಅನೇಕ ಹೆಜ್ಜೆ ಗುರುತುಗಳಿವೆ. ಜೊತೆಗೆ ರಾಮನ ಹೆಜ್ಜೆ ಗುರುತುಗಳ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಗಳೂ ಇವೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳನ್ನು ಕಂಡಿರುವ ಕೊಪ್ಪಳದ ಜನರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿರುವುದು ಹೆಚ್ಚಿನ ಖುಷಿ ತಂದಿದೆ. ಇದನ್ನೂ ಓದಿ: KSRTC, BMTC ಬಸ್‌ಗಳಲ್ಲಿ ಕಂಡಕ್ಟರ್ 10 ರೂ. ಕಾಯಿನ್ ತೆಗೆದುಕೊಳ್ಳಲೇಬೇಕು!

  • ಇಕ್ಬಾಲ್ ಅನ್ಸಾರಿ ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ – ಶ್ರೀರಾಮಸೇನೆ ಆಕ್ಷೇಪ

    ಇಕ್ಬಾಲ್ ಅನ್ಸಾರಿ ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ – ಶ್ರೀರಾಮಸೇನೆ ಆಕ್ಷೇಪ

    ಕೊಪ್ಪಳ: ಹನುಮ ಜನ್ಮಸ್ಥಳ ಕೊಪ್ಪಳದ (Koppala) ಆನೆಗೊಂದಿ ಬಳಿ ಇರುವ ಅಂಜನಾದ್ರಿ ಬೆಟ್ಟದಲ್ಲಿ (Anjanadri Hills) ನಾಳೆ ಹನುಮ ಭಕ್ತರ (Devotees) ಸಮಾಗಮ ಆಗಲಿದೆ. ರಾಜ್ಯದ ಮೂಲೆ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಹನುಮ ಮಾಲೆ ವಿರ್ಸಜನೆಗೆ ಬರುತ್ತಿದ್ದಾರೆ.

    ಮಧ್ಯರಾತ್ರಿ 1 ಗಂಟೆಯಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಂತು ಈಗಾಗಲೇ ದರ್ಶನ ಪಡೆಯುತ್ತಿದ್ದಾರೆ. ಗಂಟೆ, ಗಂಟೆಗೂ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ಬಾಗಲಕೋಟೆ, ಧಾರವಾಡ, ವಿಜಯಪುರ, ಬೆಳಗಾವಿ ಭಕ್ತರು ಸಾಗರೋಪದಿಯಲ್ಲಿ ಆಗಮಿಸುತ್ತಿದ್ದಾರೆ. ಜೈಶ್ರೀರಾಮ್, ಜೈ ಹನುಮಾನ್ ಘೋಷಣೆಗಳು ಮಾರ್ದನಿಸುತ್ತಿದೆ. ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಕೇಸರಿ ರಣಕಹಳೆ- ಜಾಮಿಯಾ ಮಸೀದಿ ಸ್ಥಳದಲ್ಲೇ ಹನುಮ ದೇಗುಲಕ್ಕೆ ಸಂಕಲ್ಪ

    ಈ ಮಧ್ಯೆ, ಗಂಗಾವತಿಯ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ (Iqbal Ansari) ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿಸಿದ್ದಾರೆ. ಇದಕ್ಕೆ ಶ್ರೀರಾಮಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದೆಲ್ಲಾ ಚುನಾವಣೆ ಗಿಮಿಕ್ ಅಂತ ಕಿಡಿಕಾರಿದೆ. ಗಂಗಾವತಿಯಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದ್ದಿರಿ ಎಂದು ಗೊತ್ತಿದೆ. ಈಶ್ವರನ ದೇವಾಲಯ ಇವತ್ತಲ್ಲ ನಾಳೆ ನಾವು ತೆಗೆಯುತ್ತೇವೆ ನಿಮಗೆ ತಾಕತ್ ಇದ್ರೆ ತಡೆಯಿರಿ. ನಾವು ಯಾವತ್ತು ಮಸೀದಿಗೆ ಬಂದಿಲ್ಲ. ನೀವು ವೋಟಿನ ಆಸೆಗೆ ಶಾಲು ಹಾಕೊಂಡು ಕುತ್ಕೋತಿರಾ ಅಂತ ಶ್ರೀರಾಮಸೇನೆಯ ಸಂಜೀವ ಮರಡಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಟ್ಟದ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಕೇಸ್‍ನಲ್ಲಿ NIAಗೆ ಸ್ಫೋಟಕ ಮಾಹಿತಿ- ಉಗ್ರನ ಅಕೌಂಟ್‍ಗೆ ಬರ್ತಿತ್ತು ಡಾಲರ್

    Live Tv
    [brid partner=56869869 player=32851 video=960834 autoplay=true]

  • ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಹನುಮ ಮಾಲಾಧಾರಿಗಳು

    ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಹನುಮ ಮಾಲಾಧಾರಿಗಳು

    ಕಲಬುರಗಿ: ವಿಶ್ವ ಹಿಂದೂ ಪರಿಷತ್ (Vishwa Hindu Parishad) ಬಜರಂಗದಳ (Bhajarangdal) ಕರ್ನಾಟಕ ಉತ್ತರ ಕರ್ನಾಟಕದ ವತಿಯಿಂದ ಶ್ರೀ ಹನುಮ ಮಾಲಾ ಕಾರ್ಯಕ್ರಮದ ನಿಮಿತ್ತ ಕಲಬುರಗಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದ ಆನೆಗುಂದಿ ಅಂಜನಾದ್ರಿ ಪರ್ವತಕ್ಕೆ ನೂರಾರು ಹನುಮ ಮಾಲಾಧಾರಿಗಳು ಪ್ರಯಾಣ ಬೆಳೆಸಿದರು.

    ನಗರದ ನೆಹರೂ ಗಂಜ್ ಪ್ರದೇಶದ ಹನುಮಾನ್ ಮಂದಿರದಲ್ಲಿ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ನಸುಕಿನ ಜಾವ ಹನುಮಂತನಿಗೆ ರುದ್ರಾಭಿಷೇಕ, ಹೋಮ ಹವನ, ನವಗ್ರಹ ಪೂಜೆಯ ನಂತರ 450 ಜನ ಹನುಮ ಮಾಲಾಧಾರಿಗಳಿಗೆ ಮಾಲಾಧಾರಣೆ ಮಾಡಲಾಯಿತು. ಇದನ್ನೂ ಓದಿ: ಸಿದ್ದರಾಮಯ್ಯ ಹೆಸರು ದೇವರ ಹೆಸರಿನಿಂದ ಬಂದಿದೆ, ಟೀಕಿಸಿದ್ರೆ ಹುಷಾರ್: ಎಂ.ಬಿ ಪಾಟೀಲ್

    ಕಲಬುರಗಿ ನಗರದ ನೆಹರೂ ಗಂಜ್ ಪ್ರದೇಶದಿಂದ 11 ರಾಜಹಂಸ ಡಿಲಕ್ಸ್ ಬಸ್ ಗಳಿಗೆ ಚಂದು ಪಾಟೀಲ್ ಚಾಲನೆ ನೀಡುವ ಮುಖಾಂತರ ಮಾಲಾಧಾರಣೆ ಮಾಡಿದ ಮಾಲಾಧಾರಿಗಳ ಪ್ರಯಾಣ ಕೊಪ್ಪಳಕ್ಕೆ ಪ್ರಯಾಣ ಬೆಳೆಸಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ಶಿವರಾಜ್ ಸಂಗೋಳಗಿ, ಜಿಲ್ಲಾ ಅಧ್ಯಕ್ಷ ರಾಜು ನವಲದಿ, ಪ್ರಶಾಂತ್ ಗುಡ್ಡಾ, ಅಶ್ವಿನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಮಾಲಾಧಾರಿಗಳು ಕಲಬುರಗಿಯಿಂದ ಕೊಪ್ಪಳದ ಗವಿ ಸಿದ್ದೇಶ್ವರ ಸಂಸ್ಥಾನಕ್ಕೆ ತೆರಳಿ, ವಿಶ್ರಾಂತಿ ಪಡೆದು ಬೆಳಗ್ಗೆ ಪೂಜೆಯ ನಂತರ ಕಿಷ್ಕಿಂದ ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳಸಲಿದೆ. ಇದನ್ನೂ ಓದಿ: ರೌಡಿಗಳನ್ನು ರೌಡಿಗಳೆನ್ನಬೇಡಿ – ಇದು ಮಾಜಿ ರೌಡಿ ಶೀಟರ್ ಸಿ.ಟಿ ರವಿ ಫಾರ್ಮಾನು: ಕಾಂಗ್ರೆಸ್ ಲೇವಡಿ

    Live Tv
    [brid partner=56869869 player=32851 video=960834 autoplay=true]

  • ನಾವು ಅಂಜನಾದ್ರಿ ಅಭಿವೃದ್ಧಿ ಮಾಡೇ ಮಾಡ್ತೀವಿ: ಆನಂದ್ ಸಿಂಗ್

    ನಾವು ಅಂಜನಾದ್ರಿ ಅಭಿವೃದ್ಧಿ ಮಾಡೇ ಮಾಡ್ತೀವಿ: ಆನಂದ್ ಸಿಂಗ್

    ಕೊಪ್ಪಳ: ನಾವು ಅಂಜನಾದ್ರಿ ಅಭಿವೃದ್ಧಿ ಮಾಡೇ ಮಾಡ್ತೀವಿ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

    ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಆಂಜನೇಯ ಶೂದ್ರ ಅದಕ್ಕೆ ಬಿಜೆಪಿಯವರು ಅಭಿವೃದ್ಧಿ ಮಾಡ್ತಿಲ್ಲ ಅನ್ನೋ ಮಾಜಿ ಸಂಸದ ಉಗ್ರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು. ನನಗೆ ಜಾತಿ ಅದ್ಯಾವುದೂ ಗೊತ್ತಿಲ್ಲ. ನಾವು 100ಕ್ಕೆ ನೂರು ಅಂಜನಾದ್ರಿ ಅಭಿವೃದ್ಧಿ ಮಾಡ್ತೀವಿ ಎಂದರು. ಇದನ್ನೂ ಓದಿ: ಮಹಿಳಾ ಪೊಲೀಸರಿಗೆ ಕ್ಯಾಕರಿಸಿ ಉಗಿದು ಕೈ ನಾಯಕಿ ನೆಟ್ಟಾ ಡಿಸೋಜಾ ಆಕ್ರೋಶ

    ಈಗಾಗಲೇ ಬ್ಲೂ ಪ್ರೀಂಟ್ ರೆಡಿ ಆಗಿದೆ. ಕಾಂಗ್ರೆಸ್ ನವರು ನಮಗೆ ಬೇಗ ಮಾಡಲಿ ಎಂದು ಪ್ರಚೋದನೆ ಮಾಡ್ತಿದ್ದಾರೆ. ಅಂಜನಾದ್ರಿ ಅಭಿವೃದ್ಧಿ ಮಾಡಲಿ ಎಂದು ಪ್ರಚೋದನೆ ಮಾಡುತ್ತಿದ್ದಾರೆ. ನಮ್ಮ ಮನೆಯಲ್ಲೂ ದೇವರು ಇದ್ದಾರೆ, ನಿಮ್ಮ ಮನೆಯಲ್ಲೂ ದೇವರಿದ್ದಾರೆ. ದೇವರು ನಮ್ಮ ಮನೆಯಲ್ಲಿ ಇಲ್ಲ, ಹೀಗಾಗಿ ನಿಮ್ಮ ಮನೆಯಲ್ಲಿ ಇಡಬೇಡಾ ಅಂತಾ ಹೇಳೋಕೆ ಆಗತ್ತಾ.ಅದೆಲ್ಲ ನಂಬಿಕೆ ಎಂದು ಹೇಳಿದರು.

    ಬೇರೆ ರಾಜ್ಯಗಳ ಕ್ಯಾತೆಗೆ ಮಾರ್ಮಿಕ ಉತ್ತರ ನೀಡಿದ ಆನಂದ್ ಸಿಂಗ್, ತುಂಗಭದ್ರಾ ಜಲಾಶಯದಿಂದ ಜುಲೈ 10 ರಿಂದ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ಒಮ್ಮತದ ಮೇರೆಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

    Live Tv

  • ಬೆಂಗ್ಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರಿಂದ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ!

    ಬೆಂಗ್ಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರಿಂದ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ!

    ಕೊಪ್ಪಳ: ಬೆಂಗಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರು ಭಾನುವಾರ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು.

    ಐಟಿ ಬಿಟಿಯಲ್ಲಿ ಕೆಲಸ ಮಾಡುವ 50 ಜನರ ತಂಡ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಪರ್ವತಕ್ಕೆ ಶನಿವಾರ ಆಗಮಿಸಿತ್ತು. ಆಂಜನೇಯನ ದರ್ಶನ ಪಡೆದು ನಂತರ ನೂರಾರು ಭಕ್ತರ ಜೊತೆ ಸಾಮೂಹಿಕ ಹನುಮಾನ್ ಚಾಲಿಸ್ ಪಾರಾಯಣ ಮಾಡಿದ್ದರು.

    ದರ್ಶನದ ಬಳಿಕ ಉತಿಷ್ಠ ಭಾರತ ತಂಡ ಮತ್ತು ಗಂಗಾವತಿಯ ಭಾರತ್ ಸೇವಾ ಟ್ರಸ್ಟ್ ಸದಸ್ಯರು ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದರು. ಮಧ್ಯಾಹ್ನದವರೆಗೂ ಶ್ರಮದಾನ ಮಾಡಿದ ಕಾರ್ಯಕರ್ತರು ನಂತರ ಪಂಪಾ ಸರೋವರವನ್ನು ಸ್ವಚ್ಛಗೊಳಿಸಿದರು. ಕಳೆದ 2014ರ ಜುಲೈ 27ರಂದು ಲೋಕಾರ್ಪಣೆಗೊಂಡಿರೋ ಸಂಘಟನೆ, ಯುವಕರಲ್ಲಿ ದೇಶಭಕ್ತಿ ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.