Tag: Anjanadri Hill

  • ಜೈಲು ಶಿಕ್ಷೆಗೆ ತಡೆಯಾಜ್ಞೆ ಸಿಗುತ್ತಿದ್ದಂತೆ ಅಂಜನಾದ್ರಿ ಬೆಟ್ಟದಲ್ಲಿ ಆಂಜಯೇಯ ದರ್ಶನ ಪಡೆದ ರೆಡ್ಡಿ

    ಜೈಲು ಶಿಕ್ಷೆಗೆ ತಡೆಯಾಜ್ಞೆ ಸಿಗುತ್ತಿದ್ದಂತೆ ಅಂಜನಾದ್ರಿ ಬೆಟ್ಟದಲ್ಲಿ ಆಂಜಯೇಯ ದರ್ಶನ ಪಡೆದ ರೆಡ್ಡಿ

    – ಕೋರ್ಟ್‌ ತಡೆಯಾಜ್ಞೆಗೆ ನಾನು ನಂಬಿರುವ ದೇವರೇ ಕಾರಣ ಎಂದ ಶಾಸಕ

    ಕೊಪ್ಪಳ: ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ದಂಪತಿಯು ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಶಾಸಕ ರೆಡ್ಡಿ, ಆಂಜಯೇಯನ ದರ್ಶನ ಪಡೆದಿದ್ದಾರೆ. ತಡೆಯಾಜ್ಞೆಗೆ ನಾನು ನಂಬಿರುವ ದೇವರೇ ಕಾರಣ ಎಂದು ತಿಳಿಸಿದ್ದಾರೆ.

    ಜನಾರ್ದನ ರೆಡ್ಡಿ 575 ಮೆಟ್ಟಿಲು ಏರಿ ಆಂಜನೇಯನ ದರ್ಶನ ಪಡೆದಿದ್ದಾರೆ. ಅವರಿಗೆ ಪತ್ನಿ ಅರುಣಾಲಕ್ಷ್ಮೀ ಸಾಥ್ ನೀಡಿದ್ದಾರೆ. ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

    ರೆಡ್ಡಿ ಜೈಲಿನಲ್ಲಿ ಇದ್ದಾಗ ತಮ್ಮ ಪತಿ ಬೇಗ ಬಿಡುಗಡೆಯಾಗಲಿ ಎಂದು ಪತ್ನಿ ಪೂಜೆ ಸಲ್ಲಿಸಿದ್ದರು. ಪೂಜೆಗೆ ಫಲ ಸಿಕ್ಕ ಹಿನ್ನೆಲೆ ಪತಿ ಜನಾರ್ದನ ರೆಡ್ಡಿ ಜೊತೆಗೂಡಿ ಅರುಣಾಲಕ್ಷ್ಮೀ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದರು.

    ಏನಿದು ಪ್ರಕರಣ?
    ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿ‌ಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ‌ ಇಲಾಖೆಯಿಂದಲೂ ಅಕ್ರಮ‌ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ.

    2009ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ರೋಸಯ್ಯ ಅವರು 2009 ರಲ್ಲಿ ಈ ಪ್ರಕರಣವನ್ನು‌ ಸಿಬಿಐ ತನಿಖೆಗೆ ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ ಸಿಬಿಐನಿಂದ ಬಂಧಿತರಾಗಿ, ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದರು. ಪ್ರಕರಣದಲ್ಲಿ ಟಪಾಲ್ ಗಣೇಶ ಮತ್ತವರ ಸಹೋದರ ಏಕಾಂಬರಂ, ಪ್ರಮುಖ ಸಾಕ್ಷಿಯಾಗಿದ್ದು, ಈಗಾಗಲೇ ಸಿಬಿಐ 3400 ಕ್ಕೂ ಹೆಚ್ಚು ದಾಖಲೆಗಳ‌ ಪರಿಶೀಲನೆ ಹಾಗೂ 219ಕ್ಕೂ ಹೆಚ್ವು ಸಾಕ್ಷಿಗಳ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳು ಜೈಲಿಗೆ ಹೋಗೇ ಹೋಗ್ತಾರೆ ಎಂದು ಟಪಾಲ್ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿಂದೆ ಜನಾರ್ದನ ರೆಡ್ಡಿ ಹಾಗೂ ಅವರ ಪಟಾಲಂನಿಂದ ಅನುಭವಿಸಿದ್ದ ಕಿರುಕುಳದ ಬಗ್ಗೆಯೂ ಇಂಚಿಂಚಾಗಿ ತೆರೆದಿಟ್ಟಿದ್ದರು.

  • ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರದಿಂದ ಅನುಮೋದನೆ

    ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರದಿಂದ ಅನುಮೋದನೆ

    ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗಂಗಾವತಿ (Gangavtahi) ತಾಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟಕ್ಕೆ (Anjanadri Hill) ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಪ್ರವಾಸೋದ್ಯಮ ಇಲಾಖೆಯ (Tourism Department) ಅಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.ಇದನ್ನೂ ಓದಿ:ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ ದೊರೆತಿರುವ ಕಾರಣ ಕೇಂದ್ರದ RITES ಸಂಸ್ಥೆಯ ಪ್ರತಿನಿಧಿಗಳು ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಶಾಸಕ ಗಾಲಿ ಜನಾರ್ದನ ರೆಡ್ಡಿಯವರ (G.Janardhana Reddy) ನೇತೃತ್ವದಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೆಟ್ಟದ ಹಿಂಬದಿಯಿಂದ ರೋಪ್ ವೇ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಲಾಗಿದ್ದು, 450 ಮೀ. ಉದ್ದದ ರೋಪ್ ವೇ ನಿರ್ಮಾಣಕ್ಕೆ ನಿರ್ಧರಿಸಿದೆ. ಅದರಲ್ಲಿ ಒಂದು ಗಂಟೆಯಲ್ಲಿ 800 ಭಕ್ತಾಧಿಗಳನ್ನು ಅಂಜನಾದ್ರಿ ಬೆಟ್ಟದ ಮೇಲೆ ತಲುಪಿಸಬಹುದಾಗಿದೆ.

    ಶಾಸಕ ಗಾಲಿ ಜನಾದ9ನ ರೆಡ್ಡಿ ಮಾತನಾಡಿ, ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಮಾತುಕತೆ ನಡೆಸಿ, ರೋಪ್ ವೇ ನಿರ್ಮಾಣ ಕ್ಕೆ ಮನವಿ ಮಾಡಿಕೊಂಡಿದ್ದೆ. ಮನವಿಗೆ ಸ್ಪಂದಿಸಿ, ರೋಪ್ ವೇ ನಿರ್ಮಾಣ ಒಪ್ಪಿಗೆ ಸಿಕ್ಕಿದೆ. ರಾಜ್ಯ ಸರ್ಕಾರ ಕೂಡ ಅನುಮೋದನೆಯನ್ನು ನೀಡಿದೆ. ಸದ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಕಾಮಗಾರಿ ಆರಂಭವಾದ 1 ವರ್ಷದ ಒಳಗಾಗಿಯೇ ಪೂಣ9ಗೊಳಿಸುವ ಸಾಧ್ಯತೆ ಇದೆ ಎಂದು ಹೇಳಿದರು.ಇದನ್ನೂ ಓದಿ:ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ 50 ಕೋಟಿ ರೂ.ನಿಗದಿ: ಸಚಿವ ರಾಜಣ್ಣ

  • ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – ಎಣಿಕೆ ಕಾರ್ಯದಲ್ಲಿ ಗಮನ ಸೆಳೆದ ವಿದೇಶಿ ಮಹಿಳೆ

    ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – ಎಣಿಕೆ ಕಾರ್ಯದಲ್ಲಿ ಗಮನ ಸೆಳೆದ ವಿದೇಶಿ ಮಹಿಳೆ

    ಕೊಪ್ಪಳ: ಅಂಜನಾದ್ರಿಯಲ್ಲಿ (Anjanadri) ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ವಿದೇಶಿ ಮಹಿಳೆ ಎಣಿಕೆ ಕಾರ್ಯದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮಳ್ಳಿಯ ಅಂಜನಾದ್ರಿ ಬೆಟ್ಟದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ನಡೆಯಿತು. ಇದೇ ವೇಳೆ ಪ್ರವಾಸಕ್ಕೆಂದು ಅಂಜನಾದ್ರಿಗೆ ಬಂದಿದ್ದ ವಿದೇಶಿ ಮಹಿಳೆ ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಗಮನ ಸೆಳೆದಿದೆ.ಇದನ್ನೂ ಓದಿ: ಅಪಘಾತದ ಬಳಿಕ ಚಾಲಕನಿಗೆ ಭಯ – ಬೇಗ ಹೋಗಪ್ಪ ಅಂದ್ರೂ 30ರ ಮೇಲೆ ಹೋಗಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಇತ್ತೀಚಿನ ದಿನಗಳಲ್ಲಿ ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜ.01 ರಿಂದ ಮಾ.07ರವರೆಗಿನ ಅವಧಿಯಲ್ಲಿ ಸಂಗ್ರಹಗೊಂಡ ಕಾಣಿಕೆಯ ಎಣಿಕೆ ಕಾರ್ಯ ಇಂದು ನಡೆದಿದ್ದು, ಒಟ್ಟು 28 ಲಕ್ಷ ರೂ. (28,35,647) ಕಾಣಿಕೆ ಸಂಗ್ರಹವಾಗಿದೆ.

    ದೇವಸ್ಥಾನ ಆಡಳಿತಾಧಿಕಾರಿ ಪ್ರಕಾಶ್.ರಾವ್ ಅವರ ನೇತೃತ್ವದಲ್ಲಿ ಹಾಗೂ ಪೊಲೀಸ್ ಬಂದೋಬಸ್ತ್, ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಅಟೋ ಕಲಿಸಿಕೊಟ್ಟ ಡಬಲ್‌ ಸ್ಟಾರ್‌ ಪ್ರಭಾವತಿಗೆ ನಾರಿ ನಾರಾಯಣಿ ಗೌರವ

     

     

  • ಅಂಜನಾದ್ರಿ ಬೆಟ್ಟ ಹತ್ತುವಾಗ ಹೃದಯಾಘಾತದಿಂದ ಯುವಕ ಸಾವು

    ಅಂಜನಾದ್ರಿ ಬೆಟ್ಟ ಹತ್ತುವಾಗ ಹೃದಯಾಘಾತದಿಂದ ಯುವಕ ಸಾವು

    ಕೊಪ್ಪಳ: ಆಂಜನೇಯನ ದರ್ಶನಕ್ಕಾಗಿ ಅಂಜನಾದ್ರಿ ಬೆಟ್ಟ (Anjanadri Hill) ಹತ್ತುವಾಗ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನಲ್ಲಿ ನಡೆದಿದೆ.

    ಮೃತ ಯುವಕನನ್ನು ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ನಿವಾಸಿ ಜಯೇಶ ಯಾದವ್ (17) ಎಂದು ಗುರುತಿಸಲಾಗಿದ್ದು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಾಲಿಬಾಲ್ ತರಬೇತುದಾರ ಸುರೇಶ ಯಾದವ್ ಅವರ ಪುತ್ರ ಎಂದು ತಿಳಿಯಲಾಗಿದೆ.ಇದನ್ನೂ ಓದಿ:‌’ಬಿಗ್‌ ಬಾಸ್’ ಗೆಲ್ಲುತ್ತೇನೆ ಎಂದಿದ್ದ ಗೆದ್ದೇ ಬಿಟ್ಟ: ಹನುಮಂತನ ತಾಯಿ ಸಂತಸ

    ಅಂಜನಾದ್ರಿ ಬೆಟ್ಟದ ಆಂಜನೇಯನ ದರ್ಶನ ಪಡೆಯಲು ಯುವಕನೊಬ್ಬ ಸ್ನೇಹಿತರೊಂದಿಗೆ ತೆರಳಿದ್ದ. ಇನ್ನೇನು ಬೆಟ್ಟ ಹತ್ತುವುದು ಮುಗಿದಿದೆ ಎಂದು ಬೆಟ್ಟದ ಅಂತ್ಯ ಭಾಗಕ್ಕೆ ಹೋಗಿದ್ದಾನೆ. ಈ ವೇಳೆ ಏಕಾಏಕಿ ಸುಸ್ತು ಕಾಣಿಸಿಕೊಂಡು, ಅಸ್ವಸ್ಥನಾಗಿದ್ದ. ಕೂಡಲೇ ಅಂಬುಲೆನ್ಸ್‌ಗೆ ಕರೆ ಮಾಡಿದ್ದು, ಗಂಗಾವತಿ ವಾಹನ ಸಿಬ್ಬಂದಿ ಅಂಬುಲೆನ್ಸ್ನಲ್ಲಿ ಆಕ್ಸಿಜನ್ ಕೊರತೆಯಿದೆ ಎಂದು ತಿಳಿಸಿದ್ದಾನೆ.

    ನಂತರ ಅಂಜನಾದ್ರಿ ದೇವಸ್ಥಾನದ ಸಿಬ್ಬಂದಿ ಆನೆಗುಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಅಂಬುಲೆನ್ಸ್‌ಗೆ ಕರೆ ಮಾಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿ ಯುವಕನನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದಾರೆ.

    ಬಳಿಕ ಗಂಗಾವತಿ ವೈದ್ಯರು ಯುವಕನನ್ನು ಪರೀಕ್ಷೆಗೊಳಪಡಿಸಿದಾಗ, ಯುವಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ, ಮಾಹಿತಿ ಪಡೆದಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಭಕ್ತರು ಸಾವು – 60ಕ್ಕೂ ಹೆಚ್ಚು ಜನರಿಗೆ ಗಾಯ

  • ಅಂಜನಾದ್ರಿಯಲ್ಲಿ ಇಂದು ಹನುಮಮಾಲಾ ವಿಸರ್ಜನೆ – ದೇಶದ ನಾನಾ ಭಾಗಗಳಿಂದ ಭಕ್ತರ ದಂಡು

    ಅಂಜನಾದ್ರಿಯಲ್ಲಿ ಇಂದು ಹನುಮಮಾಲಾ ವಿಸರ್ಜನೆ – ದೇಶದ ನಾನಾ ಭಾಗಗಳಿಂದ ಭಕ್ತರ ದಂಡು

    ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ಇಂದು ಐತಿಹಾಸಿಕ ಹನುಮಮಾಲಾ ವಿಸರ್ಜನೆ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

    ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನದಲ್ಲಿ (Anjaneyaswamy Temple) ಇಂದು (ಡಿ.13) ಹನುಮಮಾಲಾ ವಿಸರ್ಜನೆ ನಡೆಯಲಿದೆ. ಬೆಳಗಿನ ಜಾವ ಏಕಕಾಲಕ್ಕೆ ಮಾಲಾಧಾರಿಗಳು ಆಗಮಿಸಿದ್ದು, 575 ಮೆಟ್ಟಿಲು ಹತ್ತಿ ಆಂಜನೇಯ ಸ್ವಾಮಿ ದರ್ಶನದ ಬಳಿಕ ಹನುಮಮಾಲೆಯನ್ನು ವಿಸರ್ಜನೆ ಮಾಡಲಿದ್ದಾರೆ. ಬೆಟ್ಟದ ಮುಂಭಾಗದಲ್ಲಿ ಭಕ್ತರ ಆಗಮನದಿಂದ ನೂಕು ನುಗ್ಗಲು ಉಂಟಾಗುತ್ತಿದ್ದು, ನಿಯಂತ್ರಣಕ್ಕಾಗಿ ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ ಅಪರಾಧಿಗಳಿಗೆ ಜಾಗವಿಲ್ಲ – ಹರಿಯಾಣ ಸಿಎಂ ಖಡಕ್ ವಾರ್ನಿಂಗ್

    ವಿಸರ್ಜನೆಗೆ ಸಿಂಗಾರಗೊಂಡ ಅಂಜನಾದ್ರಿ:
    ರಾಮಾಯಣ ಕಾಲದ ಪೌರಾಣಿಕ ಇತಿಹಾಸವನ್ನು ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಳಿರು, ತೋರಣ, ವಿದ್ಯುತ್ ದೀಪಾಲಂಕಾರದಿಂದ, ಕೇಸರಿ ಧ್ವಜಗಳಿಂದ ಸಿಂಗಾರಗೊಂಡು ಮಾಲಾಧಾರಿಗಳನ್ನು ಸ್ವಾಗತಿಸುತ್ತಿದೆ.

    ಪ್ರತಿ ವರ್ಷದಂತೆ ಈ ಬಾರಿಯು ಸಹ ಚತುರ್ಮಾಸದಲ್ಲಿ ಹನುಮಮಾಲೆಯನ್ನು ಧಾರಣೆ ಮಾಡಿದ ಹನುಮನ ಭಕ್ತರು ಕಠಿಣ ವ್ರತವನ್ನು ಕೈಕೊಂಡು ಹನುಮಮಾಲಾ ವಿಸರ್ಜನೆಗಾಗಿ ಇಂದು (ಡಿ.13) ಅಂಜನಾದ್ರಿಗೆ ಆಗಮಿಸಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ಮಾಲಾಧಾರಿಗಳು ಬರುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದೆ. ಅಂಜನಾದ್ರಿ ಬೆಟ್ಟವನ್ನು ದೀಪಗಳಿಂದ, ಬೆಟ್ಟದ ಕೆಳಗಡೆ ಇರುವ ಪಾದಗಟ್ಟಿಯನ್ನು ಬಾಳೆಕಂಬ, ತೆಂಗಿನಗರಿ, ಹೂವಿನಿಂದ ಸಿಂಗಾರಗೊಳಿಸಲಾಗಿದೆ. ಇನ್ನೂ ಬೆಟ್ಟದ ಮೇಲಿರುವ ಹನುಮನ ದೇವಸ್ಥಾನದ ಗರ್ಭಗುಡಿಯಲ್ಲಿ ಹೂವಿನ ಅಲಂಕಾರ, ಕೇಸರಿ ಧ್ವಜಗಳನ್ನು ಕಟ್ಟುವ ಮೂಲಕ ದೇವಸ್ಥಾನವನ್ನು ಸಿಂಗಾರ ಗೊಳಿಸಲಾಗಿದೆ.

    ರಸ್ತೆಯುದ್ದಕ್ಕೂ ಕೇಸರಿಮಯ:
    ಹನುಮಮಾಲಾ ವಿಸರ್ಜನೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತರು ಬರುವುದರಿಂದ ಅವರ ಸ್ವಾಗತಕ್ಕಾಗಿ ಜಿಲ್ಲಾಡಳಿತ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೇಸರಿ ಧ್ವಜ, ರಸ್ತೆ ಉದ್ದಕ್ಕೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಇನ್ನೂ ಧ್ವನಿವರ್ಧಕದ ಮೂಲಕ ದಿನದ 24 ಗಂಟೆಗಳ ಕಾಲ ರಾಮ ನಾಮಜಪದ ಆಡಿಯೋ ಹಾಕಲಾಗುತ್ತಿದೆ. ಪಾದಯಾತ್ರೆ ಬರುವ ಭಕ್ತರು ರಾಮನ ಜಪ ಮಾಡಿಕೊಂಡು ಬರಲು ಅನುಕೂಲವಾಗಲು ರಸ್ತೆಯುದ್ದಕ್ಕೂ ದೀಪ ಹಾಕಲಾಗಿದೆ.

    ಪಾದಯಾತ್ರೆ ಬಂದಿರುವ ಭಕ್ತರು:
    ಡಿ.13 ರಂದು ಹನುಮಮಾಲಾ ವಿಸರ್ಜನೆಗಾಗಿ ಕೊಪ್ಪಳ, ಹುಲಗಿ, ಕಂಪ್ಲಿ, ಕಮಲಾಪೂರ, ಬಳ್ಳಾರಿ, ಸಿಂಧನೂರ, ಹೊಸಪೇಟೆ, ಕನಕಗಿರಿ, ಕಾರಟಗಿ ಸೇರಿದಂತೆ ಸಮೀಪದ ತಾಲೂಕುಗಳ ಮಾಲಾಧಾರಿಗಳು ಪಾದಯಾತ್ರೆಯ ಮೂಲಕ ಅಂಜನಾದ್ರಿಗೆ ಆಗಮಿಸಿದ್ದಾರೆ.ಇದನ್ನೂ ಓದಿ: ಇಂದಿನಿಂದ ಮಹಾಕುಂಭ ಮೇಳ – 5,500 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

     

  • ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಕ್ಷಣಗಣನೆ – ಅಂಜನಾದ್ರಿ ಬೆಟ್ಟದಲ್ಲಿ ತಯಾರಿ

    ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಕ್ಷಣಗಣನೆ – ಅಂಜನಾದ್ರಿ ಬೆಟ್ಟದಲ್ಲಿ ತಯಾರಿ

    ಕೊಪ್ಪಳ: ಪೌರಾಣಿಕ ಪ್ರಸಿದ್ಧ ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಡಿ.12 ಮತ್ತು 13 ರಂದು ನಡೆಯಲಿರುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇದೆ. ಭಕ್ತರ ಸ್ವಾಗತಕ್ಕೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಿಷ್ಕಿಂಧ ಪ್ರದೇಶ ಮದುವೆ ಮನೆಯಂತೆ ಸಿದ್ಧಗೊಂಡಿದೆ.

    ಹನುಮ ಮಾಲೆ ಧರಿಸಿ, ವ್ರತ ಕೈಗೊಂಡಿರುವ ರಾಜ್ಯಾದ್ಯಂತ ನಾನಾ ಭಾಗದ ಲಕ್ಷಂತರ ಭಕ್ತರು, ಈಗಾಗಲೇ ಅಂಜನದ್ರಿ ಕಡೆ ಮುಖ ಮಾಡಿದ್ದಾರೆ. ಡಿ.12ರ ಸಂಜೆ ವೇಳೆ ಬಹುತೇಕರು ಗಂಗಾವತಿ, ಹುಲಗಿ ತಲುಪಲಿದ್ದಾರೆ. ಈ ಹಿನ್ನೆಲೆ ಕೊಪ್ಪಳ ಜಿಲ್ಲಾಡಳಿತ ಎಲ್ಲ ಸಿದ್ಧತೆ ಕೈಗೊಂಡಿದೆ. ಎಡಿಸಿ ಸಿದ್ದರಾಮೇಶ್ವ ಮತ್ತು ಎಸಿ ಕ್ಯಾ.ಮಹೇಶ ಮಾಲಗಿತ್ತಿ ಖುದ್ದು ಭೇಟಿ ನೀಡಿ, ಸಿದ್ಧತೆ ಪರಿಶೀಲನೆ ಮಾಡುತ್ತಿದ್ದಾರೆ. ವ್ಯವಸ್ಥೆಯಲ್ಲಿ ಯಾವುದೇ ರೀತಿಯಲ್ಲಿ ನಿರ್ಲಕ್ಷ ಕಾಣಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿ 14 ಸಮಿತಿ ರಚನೆ ಮಾಡಿ, ಅಧಿಕಾರಿಗಳಿಗೆ ನಿರ್ವಹಣೆಯ ಹೊಣೆ ನೀಡಲಾಗಿದೆ.

    ರಸ್ತೆ ಮತ್ತು ಪಾರ್ಕಿಂಗ್ ಸ್ಥಳಗಳ ಸ್ವಚ್ಛತೆ, ಪಾದಚಾರಿ ಮಾರ್ಗದ ನಿರ್ಮಾಣ, ಭಕ್ತರಿಗೆ ಕುಡಿಯುವ ಮತ್ತು ಸ್ನಾನದ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ನೂರಾರು ನೀರಿನ ಟ್ಯಾಪ್ ಅಳವಡಿಸಲಾಗುತ್ತಿದೆ. ಅಂಜನಾದ್ರಿಗೆ ಬರುವ ಭಕ್ತರಿಗೆ ಪ್ರಸಾದ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ. ಬೆಟ್ಟದ ಹಿಂಭಾಗದ ವೇದಪಾಠ ಶಾಲೆ ಸಮೀಪದ ಕೋಣೆಯಲ್ಲಿ ಸಾವಿರಾರು ಲಾಡುಗಳು ಪ್ರಸಾದಕ್ಕೆ ಸಿದ್ಧಗೊಳುತ್ತಿವೆ. ಉಪಹಾರ, ಊಟದ ಜೊತೆಗೆ ಪ್ರಾಥಮಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕೆ ಸಹಾಯವಾಣಿ ತೆರೆಯಲಾಗಿದೆ.

    ಪಾರ್ಕಿಂಗ್ ವ್ಯವಸ್ಥೆ: ರಾಜ್ಯದ ನಾನಾ ಭಾಗದಿಂದ ಲಕ್ಷಕ್ಕೂ ಹೆಚ್ಚು ಮಾಲಾಧಾರಿಗಳು ಬರುವ ನಿರೀಕ್ಷೆ ಹಿನ್ನೆಲೆ ಸುಗಮ ಸಂಚಾರಕ್ಕೆ ಸುಮಾರು 20 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆನೆಗೊಂದಿ, ಉತ್ಸವ ಬಯಲು, ಚಿಕ್ಕರಾಂಪೂರ, ಕಡೆಬಾಗಿಲು, ಹನುಮನಹಳ್ಳಿ, ಆನೆಗೊಂದಿ ಗ್ರಾಮ ಜಮೀನು ಸೇರಿ 20 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬಾಗಲಕೋಟೆ, ಹುಬ್ಬಳ್ಳಿ, ಗದಗ, ಬೆಳಗಾವಿ ಭಾಗಗಳಿಂದ ಬೂದಗುಂಪ ಸರ್ಕಲ್, ಕೊಪ್ಪಳ ಮಾರ್ಗವಾಗಿ ಬರುವ ಮಾಲಾಧಾರಿಗಳು ಕಮಾಲಾಪೂರ, ಬುಕ್ಕಸಾಗರ, ಕಡೆಬಾಗಿಲು ಮಾರ್ಗವಾಗಿ ಬರಬೇಕು. ಕುಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಂದ ಸಿಂಧನೂರ, ಮಸ್ಕಿ, ಕನಕಗಿರಿ ಮಾರ್ಗವಾಗಿ ಬರುವ ಮಾಲಾಧಾರಿಗಳು ಗಂಗಾವತಿ ಕಡೆಯಿಂದ ಆನೆಗೊಂದಿಗೆ ತೆರಳಬೇಕು. ಹಿಟ್ನಾಳ ಸರ್ಕಲ್‌ನಿಂದ ಬಂಡಿ ಹರ್ಲಾಪೂರ, ಸಣಾಪೂರ ಗ್ರಾಮಗಳಲ್ಲಿ ರಸ್ತೆ ಕಾಮಗಾರಿ ಹಿನ್ನೆಲೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

    ಜಲಾಭಿಷೇಕ, ಧಾರ್ಮಿಕ ಕಾರ್ಯಕ್ರಮ!
    ಅಂಜನಾದ್ರಿ ಬೆಟ್ಟದಲ್ಲಿನ ಹನುಮ ಜನ್ಮಸ್ಥಳದಲ್ಲಿ ಡಿ.13 ರಂದು ಬೆಟ್ಟದ ಮೇಲಿನ ಹನುಮನ ಮೂರ್ತಿಗೆ 9 ನದಿ ನೀರಿನ ಜಲಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷ ಚಾತುರ್ಮಾಸದಲ್ಲಿ ಹನುಮ ಭಕ್ತರು ಮಾಲೆ ಧಾರಣೆ ಮಾಡಿ, ವ್ರತ ಕೈಗೊಳ್ಳುತ್ತಾರೆ. ವ್ರತದ ಕೊನೆ ದಿನ ಅಂದರೆ ಡಿ.13 ರಂದು ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ವಿಸರ್ಜನೆ ಮಾಡುತ್ತಾರೆ. ಈ ಚಾತುರ್ಮಾಸದಲ್ಲೇ ರಾಮ ಹಾಗೂ ಹನುಮಂತ ತಪ್ಪಸ್ಸು ಕಳಿತಿದ್ದರು ಎಂಬ ನಂಬಿಕೆ ಇದೆ.

    ಈ ಹಿನ್ನೆಲೆ ಡಿ.13 ರಂದು ಅಂಜನಾದ್ರಿ ಬೆಟ್ಟ ಹನುಮನ ಮೂರ್ತಿಗೆ ಪಂಚಾಮೃತ ಅಭಿಷೇಕ, 9 ನದಿಗಳ ನೀರಿನ ಜಲಾಭಿಷೇಕ, ಸಹಸ್ರನಾಮ ಪಠಣ, ಕುಂಕುಮಾರ್ಚನೆ, ಮಹಾಮಂಗಳಾರತಿ, ಪವನ ಹೋಮ, ಶ್ರೀರಾಮನಾಮ ಪಠಣ, ಮಾಲೆ ಧರಿಸಿದ ಗುರುಗಳಿಂದ ಹನುಮಮಾಲೆ ವಿಸರ್ಜನೆ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

    ಶೋಭಾಯಾತ್ರೆ
    ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘಟನೆಯಿಂದ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಡಿ.12 ರಂದು ಗಂಗಾವತಿ ನಗರಕ್ಕೆ ಬರುವ ಭಕ್ತರು ನಗರದಲ್ಲಿ ಶೋಭಾಯಾತ್ರೆ ಮೂಲಕ ಬೆಟ್ಟಕ್ಕೆ ತೆರಳಲಿದ್ದಾರೆ. ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ್ ರೂಪದಲ್ಲಿ ನೀಡಲು 50 ಸಾವಿರ ಲಾಡು, ತೀರ್ಥ ಬಾಟಲಿಗಳನ್ನು ಸಿದ್ಧ ಪಡಿಸಲಾಗುತ್ತಿದೆ.

  • 5 ದಿನಗಳ ವ್ರತ ಆಚರಣೆ – ಹನುಮ ಮಾಲೆ ಧರಿಸಿದ ಜನಾರ್ದನ ರೆಡ್ಡಿ

    5 ದಿನಗಳ ವ್ರತ ಆಚರಣೆ – ಹನುಮ ಮಾಲೆ ಧರಿಸಿದ ಜನಾರ್ದನ ರೆಡ್ಡಿ

    ಕೊಪ್ಪಳ: ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ (G. Janardhana Reddy) ಇಂದು (ಡಿ.09) ಪಂಪಾ ಸರೋವರವದಲ್ಲಿ (Pampa Sarovara) ಹನುಮ ಮಾಲೆ ಧರಿಸಿದರು.

    ಗಂಗಾವತಿ (Gangavathi) ತಾಲೂಕಿನ ಪಂಪಾಸರೋವರದಲ್ಲಿರುವ ಹನುಮ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮಾಲೆಯನ್ನು ಧರಿಸಿದರು. ಐದು ದಿನಗಳ ಕಾಲ ಹನುಮ ವ್ರತ ಆಚರಣೆ ಮಾಡಿ, ಬಳಿಕ ಡಿ.13 ರಂದು ಅಂಜನಾದ್ರಿಯಲ್ಲಿ
    (Anjanadri) ಮಾಲೆ ವಿಸರ್ಜನೆ ಮಾಡಲಿದ್ದಾರೆ. ಪ್ರತಿ ವರ್ಷ ಮಾಲೆ ಧರಿಸುವ ಜನಾರ್ದನ ರೆಡ್ಡಿಯವರೊಂದಿಗೆ, ಅವರ ಬೆಂಬಲಿಗರು ಹನುಮ ಮಾಲೆ ಧರಿಸಿದರು.ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಅವಿರೋಧ ಆಯ್ಕೆ

    ಮಾಲೆ ಧರಿಸಿ ಮಾತನಾಡಿದ ಅವರು, ಡಿ.12 ಹಾಗೂ 13 ರಂದು ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಸಕಲ ತಯಾರಿಯನ್ನು ಮಾಡಿಕೊಂಡಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಸಂಖ್ಯೆಯಲ್ಲಿ ಭಕ್ತರು ಹಾಗೂ ಮಾಲಾಧಾರಿಗಳು ಬರುವ ನಿರೀಕ್ಷೆಯಿದೆ. ಈ ಕಾರಣಕ್ಕೆ ಬೆಟ್ಟದ ಹಿಂಭಾಗ ಮಾಲಾಧಾರಿಗಳಿಗೆ, ಭಕ್ತರಿಗೆ ಡಿ.11 ರಿಂದ ಊಟ ಹಾಗೂ ಉಪಹಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.

    ರಾಜ್ಯದ ನಾನಾ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆಯಿದೆ. ಭಕ್ತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್ ದೀಪಗಳಿಂದ ಬೆಳಕಿನ ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಬೆಟ್ಟಕ್ಕೂ ಸಹ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುವುದು. ಅಷ್ಟೇ ಅಲ್ಲದೇ ರಾಜ್ಯದ ಬಿಜೆಪಿ ಪಕ್ಷದ ನಾಯಕರು ಸಹ ಮಾಲೆಯನ್ನು ಧರಿಸಿ, ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.

    ದೇವರಲ್ಲಿ ಸಂಕಲ್ಪ:
    ಸಾರ್ವಜನಿಕರಲ್ಲಿ ನಿಷ್ಠೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಹನುಮಂತನಲ್ಲಿ ಸಂಕಲ್ಪ ಮಾಡಿಕೊಂಡಿದ್ದೇನೆ. ಅದನ್ನು ಆ ದೇವರು ನನಗೆ ನೀಡಿದ್ದಾನೆ. ಇನ್ನೂ ಅಂಜನಾದ್ರಿಯನ್ನು ತಿರುಪತಿಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎನ್ನುವ ಸಂಕಲ್ಪ ಇದೆ. ಅದನ್ನು ಸಹ ಆದಷ್ಟು ಬೇಗನೆ ಈಡೇರಿಸುವೆ. ಬೆಟ್ಟದ ಮೇಲಿರುವ ದೇವಸ್ಥಾನವನ್ನು ನಾನು ಹಾಗೂ ನನ್ನ ಸ್ನೇಹಿತರು ಜೊತೆಗೆ ಸೇರಿಕೊಂಡು ಜೀರ್ಣೋದ್ಧಾರ ಮಾಡಿ, ಬಂಗಾರದ ಗೋಪುರವನ್ನು ಸ್ಥಾಪನೆ ಮಾಡುತ್ತೇವೆ. 20 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದೆ. ಅದರ ಜೊತೆಗೆ ಬೆಟ್ಟದ ಹಿಂಭಾಗದಲ್ಲಿ ಕೂಡ 120 ಕೋಟಿ ರೂ. ವೆಚ್ಚದಲ್ಲಿ ಸುಮಾರು 3 ಕಿ.ಮೀ ವಿಸ್ತರಣೆಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ ಎಂದರು.ಇದನ್ನೂ ಓದಿ: ಮಧ್ಯಂತರ ಜಾಮೀನು ಅವಧಿ ಅಂತ್ಯದ ದಿನವೇ ದರ್ಶನ್‌ಗೆ ಸರ್ಜರಿ – ಸದ್ಯಕ್ಕೆ ʻದಾಸʼನಿಗೆ ರಿಲೀಫ್‌!

  • ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್ – ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದ ಸವಾರ ಸಾವು

    ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್ – ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದ ಸವಾರ ಸಾವು

    ಕೊಪ್ಪಳ: ನಿಯಂತ್ರಣ ತಪ್ಪಿ ಬೈಕ್ ಕಾಲುವೆಗೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಸಾಣಾಪುರ ಬಳಿ ನಡೆದಿದೆ.

    ಮೃತ ಬೈಕ್ ಸವಾರನನ್ನು ಒಡಿಶಾ (Odisha) ಮೂಲದ ಲುಲ್ಲು ಲಾಲ್ (30) ಎಂದು ಗುರುತಿಸಲಾಗಿದ್ದು, ಕೊಪ್ಪಳ ತಾಲೂಕಿನ ಮೆತಗಲ್ ಬಳಿ ವಿಂಡ್ ಪವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು – ಭಾನುವಾರ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾವೇಶ

    ಇಂದು (ಡಿ.7) ಬೆಳಿಗ್ಗೆ ಅಂಜನಾದ್ರಿಯ ಆಂಜನೇಯ ದರ್ಶನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೃತ ಲುಲ್ಲು ಸೇರಿದಂತೆ ಇಬ್ಬರು ಬೆಟ್ಟಕ್ಕೆ ಹೊರಟಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿದೆ. ಬಿದ್ದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಹಾಗೂ ಹಿಂಬದಿ ಸವಾರನಿಗೆ ಗಾಯಗಳಾಗಿದ್ದು, ಆತನನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ: ಶೈಲೇಂದ್ರ ಬೆಲ್ದಾಳೆ 

  • ಅಂಜನಾದ್ರಿ ಹುಂಡಿಗೆ ಪಾಕಿಸ್ತಾನದ ನಾಣ್ಯ

    ಅಂಜನಾದ್ರಿ ಹುಂಡಿಗೆ ಪಾಕಿಸ್ತಾನದ ನಾಣ್ಯ

    ಕೊಪ್ಪಳ: ರಾಮ ಭಕ್ತ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ (Anjanadri Hill) ದೇವಸ್ಥಾನದ ಹುಂಡಿಯಲ್ಲಿ ಪ್ರಪಂಚದ ವಿವಿಧ ದೇಶದ ನಾಣ್ಯ ಪತ್ತೆ ಆಗುವುದು ಸಾಮಾನ್ಯ. ಆದರೆ,‌ ಇದೇ ಮೊದಲ ಬಾರಿಗೆ ಕಾಣಿಕೆ ಪೆಟ್ಟಿಗೆಯಲ್ಲಿ ಪಾಕಿಸ್ತಾನದ ನಾಣ್ಯ ಪತ್ತೆಯಾಗಿದೆ.

    ಕೊಪ್ಪಳದ (Koppal) ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದಲ್ಲಿನ ಅಂಜನಾದ್ರಿ ದೇವಸ್ಥಾನ ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಪ್ರತಿ ತಿಂಗಳು ಹುಂಡಿ ಎಣಿಕೆ ಮಾಡಲಾಗುತ್ತದೆ. ವಿಶ್ವ ಪಾರಂಪರಿಕ ಹಂಪಿ-ಆನೆಗೊಂದಿ ಸುತ್ತಲು ಪ್ರವಾಸಕ್ಕೆ ಬರುವ ವಿದೇಶಿಗರು ಅಂಜನಾದ್ರಿಗೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ಗಾಂಜಾ, ಡ್ರಗ್ಸ್ ಸಿಕ್ಕಿದೆ – ಪಾಲ್ಗೊಂಡವರ ಹೆಸರು ಪೊಲೀಸರ ಬಳಿ ಇದೆ: ಪರಮೇಶ್ವರ್

    ಹೀಗೆ ಭೇಟಿ ನೀಡುವ ವಿದೇಶಿಗರು ತಮ್ಮ ದೇಶದ ನಾಣ್ಯಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದು ಸಾಮಾನ್ಯ. ಇದೀಗ ಇದೇ ಮೊದಲ ಬಾರಿಗೆ ಪಾಕಿಸ್ತಾನದ ನಾಣ್ಯವೊಂದು ಹುಂಡಿಯಲ್ಲಿ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

    ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೂಚನೆ ಮೇರೆಗೆ, ತಹಸೀಲ್ದಾರ್‌ ಯು. ನಾಗರಾಜ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ದೇವಸ್ಥಾನ ಸಿಬ್ಬಂದಿ ಮಂಗಳವಾರ ಕಾಣಿಕೆ ಪೆಟ್ಟಿಗೆ ಎಣಿಕೆ ನಡೆಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳದ ನಾಣ್ಯಗಳು ಪತ್ತೆಯಾಗಿವೆ. ಪಾಕಿಸ್ತಾನದ ಐದು ರೂಪಾಯಿ ಮುಖಬೆಲೆಯ ನಾಣ್ಯ, ಯುನೈಟೆಡ್ ಸ್ಟೇಟ್ ಆಫ್ ಆಮೆರಿಕದ ಒಂದು ಸೆಂಟ್, ಮೊರಾಕ್ಕೊದಾ ಒಂದು ದಿರಮ್, ನೇಪಾಳದ ಒಂದು ನಾಣ್ಯ ಹಾಗೂ ಶ್ರೀಲಂಕಾದ ಐದು ರೂಪಾಯಿ ನಾಣ್ಯಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಇದನ್ನೂ ಓದಿ: ನಮ್ಮ ಆಡಳಿತಾವಧಿಯಲ್ಲಿ ಎನ್‌ಕೌಂಟರ್‌ಗಳಾಗಿದ್ದರೆ ಇವತ್ತು ಇಂತಹ‌ ಕೃತ್ಯಗಳಾಗುತ್ತಿರಲಿಲ್ಲ: ಯತ್ನಾಳ್‌

    30.21 ಲಕ್ಷ ಸಂಗ್ರಹ: ಐದು ವಿದೇಶಿ ನಾಣ್ಯ ಸೇರಿ ಅಂಜನಾದ್ರಿ ದೇವಸ್ಥಾನದ ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ಮೊತ್ತದ ನಗದು ಹಣ ಸಂಗ್ರವಾಗಿದೆ. ಕಳೆದ ಮಾರ್ಚ್ 27ರಿಂದ ಇಲ್ಲಿವರೆಗೂ ಅಂದರೆ ಮೇ 21 ರ ವರೆಗಿನ ಒಟ್ಟು 56 ದಿನಗಳಲ್ಲಿ 31.21 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ. ಕಳೆದ ಮಾರ್ಚ್ 26 ರಂದು ನಡೆದಿದ್ದ ಹುಂಡಿ ಎಣಿಕೆಯಲ್ಲಿ ಕೇವಲ 9.29 ಲಕ್ಷ ರೂ. ಮೊತ್ತದ ಹಣ ಸಂಗ್ರಹವಾಗಿತ್ತು. ಪ್ರತಿ ತಿಂಗಳು ಅಂಜನಾದ್ರಿಯ ಕಾಣಿಕೆ ಹುಂಡಿಯ ಆದಾಯ ಸರಾಸರಿ 18 ರಿಂದ 20 ಲಕ್ಷ ರೂಪಾಯಿ ಇದೆ.

  • 6 ವರ್ಷಗಳ ಹಿಂದೆ ಹುಂಡಿಯಲ್ಲಿತ್ತು 247 ರೂ. – ಈಗ ಅಂಜನಾದ್ರಿಗೆ 6 ಕೋಟಿಗೂ ಅಧಿಕ ಆದಾಯ

    6 ವರ್ಷಗಳ ಹಿಂದೆ ಹುಂಡಿಯಲ್ಲಿತ್ತು 247 ರೂ. – ಈಗ ಅಂಜನಾದ್ರಿಗೆ 6 ಕೋಟಿಗೂ ಅಧಿಕ ಆದಾಯ

    ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅಂಜನಾದ್ರಿ ಪರ್ವತವನ್ನು (Anjanadri Hill) ಸರ್ಕಾರ ವಶಪಡಿಸಿಕೊಂಡು 6 ವರ್ಷಗಳು ಕಳೆದಿದ್ದು ಈ ಆರು ವರ್ಷಗಳಲ್ಲಿ ಭಕ್ತರಿಂದ 6 ಕೋಟಿ ಆದಾಯ ಸಂದಾಯವಾಗುವ ಮೂಲಕ ಅಭಿವೃದ್ಧಿಗೆ ಹೊಸ ಭರವಸೆಯನ್ನು ಮೂಡಿಸಿದೆ.

    ಕೊಪ್ಪಳದ (Koppala) ಗಂಗಾವತಿ (Gangavati) ತಾಲೂಕಿನ ಚಿಕ್ಕರಾಂಪೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಜನಾದ್ರಿ ಪರ್ವತವು ರಾಮಾಯಣದಲ್ಲಿ ಬರುವ ಹನುಮಂತ ಜನಿಸಿದ ಸ್ಥಳ ಎಂದು ಕರೆಯಲಾಗುತ್ತಿದೆ. ಹಂಪಿಯ ಸಮೀಪದಲ್ಲಿ ಇರುವ ಅಂಜನಾದ್ರಿ ಪರ್ವತಕ್ಕೆ ಸಾಕಷ್ಟು ಇತಿಹಾಸ ಇರುವುದರಿಂದ ಸ್ಥಳೀಯ ಭಕ್ತರು ಸೇರಿದಂತೆ ದೇಶ, ವಿದೇಶಗಳಿಂದ ಕೂಡ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

    ವಾರದ ಕೊನೆಯ ದಿನಗಳಾದ ಶನಿವಾರ, ಭಾನುವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಪರ್ವತಕ್ಕೆ ಆಗಮಿಸಿ, ಆಂಜನೇಯ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಾರೆ. ಅಯೋಧ್ಯೆಯಷ್ಟೇ ಪವಿತ್ರತೆಯನ್ನು ಹೊಂದಿರುವ ಅಂಜನಾದ್ರಿ ಪರ್ವತವನ್ನು ಕಳೆದ 6 ವರ್ಷಗಳಿಂದ ತಾಲೂಕು ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರು ನಿರ್ವಹಣೆ ಮಾಡುತ್ತಿದ್ದು, ಭಕ್ತರಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

    ತಾಲೂಕು ಆಡಳಿತ ವಶಕ್ಕೆ:
    ಸುಮಾರು ವರ್ಷಗಳಿಂದ ಖಾಸಗಿ ಒಡೆತನದಲ್ಲಿ ನಡೆಸಲಾಗುತ್ತಿದ್ದ ಅಂಜನಾದ್ರಿ ಬೆಟ್ಟದ ದೇವಸ್ಥಾನವನ್ನು 2018 ಜುಲೈ 23 ರಂದು ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಜಿಲ್ಲಾಡಳಿತವೇ ದೇವಸ್ಥಾನ ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ. ಖಾಸಗಿ ಒಡೆತನದ ಟ್ರಸ್ಟ್ ವತಿಯಿಂದ ವಶಕ್ಕೆ ಪಡೆದುಕೊಂಡಿರುವ ವೇಳೆಯಲ್ಲಿ ದೇವಸ್ಥಾನ ಹುಂಡಿಯಲ್ಲಿ ಕೇವಲ 247 ರೂ. ಕಾಣಿಕೆ ಮಾತ್ರ ಇತ್ತು. ಸದ್ಯ ದೇವಸ್ಥಾನದ ಹುಂಡಿ ಹಣ, ಪಾರ್ಕಿಂಗ್ ಹಣ, ಲಾಡು, ತೀರ್ಥ ಪ್ರಸಾದಗಳ ಮಾರಾಟ, ವಿವಿಧ ಸೇವೆಗಳಿಂದ ಬರುವ ಹಣ ಸೇರಿ ಒಟ್ಟು 6 ವರ್ಷಗಳ ಅವಧಿಯಲ್ಲಿ 6 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಇದನ್ನೂ ಓದಿ: ಮಳೆ ಅಬ್ಬರ – ಈ ಜಿಲ್ಲೆಗಳಲ್ಲಿ ಸೋಮವಾರ ಶಾಲಾ, ಕಾಲೇಜುಗಳಿಗೆ ರಜೆ

    ತಾಲೂಕು ಆಡಳಿತ ದೇವಸ್ಥಾನ ನಿರ್ವಹಣೆಯ ಹೊಣೆ ತೆಗೆದುಕೊಂಡ 2018ರ ಜುಲೈ 23 ರಿಂದ ಮಾರ್ಚ್ 31 ರವರೆಗೆ 73,09,505 ರೂ. ಸಂಗ್ರಹವಾಗಿವೆ. 2019ರ ಏಪ್ರಿಲ್ 1 ರಿಂದ 2020ರ ಮಾರ್ಚ್ 31 ರವರೆಗೆ 1,12,62,404 ರೂ. ಸಂಗ್ರಹವಾಗಿದೆ. 2020ರ ಏಪ್ರಿಲ್ 1 ರಿಂದ 2021ರ ಮಾರ್ಚ್ 31 ರವರೆಗೆ 78,95,030 ರೂ. ಸಂಗ್ರಹವಾಗಿದೆ. 2021ರ ಏಪ್ರಿಲ್ 1 ರಿಂದ 2022ರ ಮಾರ್ಚ್ 31 ರವರೆಗೆ 1,29,42,104 ರೂ. ಸಂಗ್ರಹವಾಗಿದೆ. 2022 ಮಾರ್ಚ್ 1 ರಿಂದ 2023ರ ಮಾರ್ಚ್ 31 ರವರೆಗೆ 2,84,32,028 ರೂ. ಸಂಗ್ರಹವಾಗಿದೆ.

    ಒಟ್ಟು 6 ವರ್ಷಗಳ ಅವಧಿಯಲ್ಲಿ 6,78,40,941 ರೂ. ಸಂಗ್ರಹವಾಗಿದೆ. ಇದರಲ್ಲಿ ದೇವಸ್ಥಾನ ನಿರ್ವಹಣೆ, ಸಿಬ್ಬಂದಿಯ ವೇತನ, ನಾನಾ ಖರ್ಚು ವೆಚ್ಚಗಳು ಸೇರಿದಂತೆ ಒಟ್ಟು 3,83,49,281 ರೂ. ಖರ್ಚು ಮಾಡಲಾಗಿದೆ. ಇನ್ನುಳಿದ 2,94,91,659 ರೂ. ಬ್ಯಾಂಕ್‌ಗಳಲ್ಲಿ ಉಳಿತಾಯ ಮಾಡಲಾಗಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣ – ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]