Tag: Anjanadri Hanuman temple

  • ಕೊಪ್ಪಳದ ಅಂಜನಾದ್ರಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ಕೊಪ್ಪಳದ ಅಂಜನಾದ್ರಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    – ಅರ್ಚಕ ವಿದ್ಯಾದಾದ್ ಬಾಬಾಗೆ ಪೂಜೆಗೆ ಅವಕಾಶ

    ನವದೆಹಲಿ: ಕೊಪ್ಪಳದ (Koppala) ಅಂಜನಾದ್ರಿ ದೇವಸ್ಥಾನವನ್ನ (Anjanadri Temple) ಮುಜರಾಯಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಂಡ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court) ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅಲ್ಲದೇ ಅರ್ಚಕ ವಿದ್ಯಾದಾಸ್ ಬಾಬಾ (Vidhyadas Baba) ಅವರಿಗೆ ಪೂಜೆಗೆ ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದೆ.

    ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಚಕ ವಿದ್ಯಾದಾಸ್ ಬಾಬಾ ಪರ ವಕೀಲ ವಿಷ್ಣು ಶಂಕರ್ ಜೈನ್ ವಾದ ಮಂಡಿಸಿ, ಕಳೆದ 120 ವರ್ಷಗಳಿಂದ ನಮ್ಮ ಪರಿವಾರ ಅಂಜನಾದ್ರಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದೆ. 2018ರಲ್ಲಿ ಸಂಪೂರ್ಣವಾಗಿ ಕಾನೂನುಬಾಹಿರ ರೀತಿಯಲ್ಲಿ ಸರ್ಕಾರ ದೇವಾಲಯವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

    ವಾದ ಆಲಿಸಿದ ಬಳಿಕ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ ಕೋರ್ಟ್, ಬಾಕಿ ಇರುವ ರಿಟ್ ಅರ್ಜಿಯಲ್ಲಿ ಹೈಕೋರ್ಟ್ ಹೊರಡಿಸಿದ 2023ರ ಮಧ್ಯಂತರ ಆದೇಶವನ್ನು ಪಾಲಿಸಲು, ಅರ್ಜಿದಾರರು(ವಿದ್ಯಾದಾಸ್ ಬಾಬಾ) ದೇವಾಲಯದ ಅರ್ಚಕರಾಗಿ ಕರ್ತವ್ಯವನ್ನು ಮುಂದುವರಿಸಲು ಮತ್ತು ದೇವಸ್ಥಾನದ ಕೋಣೆಯಲ್ಲಿ ಉಳಿಯಲು ಅನುಮತಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಅಲ್ಲದೇ ಆದೇಶ ಉಲ್ಲಂಘನೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ರೆಡ್ಡಿ ಶಿಫ್ಟ್‌

    ಕಿಷ್ಕಿಂಧಾ ಟ್ರಸ್ಟ್‌ನ ಆಡಳಿತ ಮಂಡಳಿ ಮತ್ತು ಅರ್ಚಕ ವಿದ್ಯಾದಾಸ್ ಬಾಬಾ ಸುಪರ್ದಿಯಲ್ಲಿ ದೇವಸ್ಥಾನ ಇತ್ತು. ಆಗ ಸರ್ಕಾರಕ್ಕೆ 1 ರೂ. ಆದಾಯವೂ ಬರುತ್ತಿರಲಿಲ್ಲ. ಈ ಬಗ್ಗೆ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ನಡೆದ ಜಗಳ ತಾರಕಕ್ಕೇರಿತು. ಆಗ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸರ್ವೆ ಮಾಡಿಸಿ, ಸಂಪೂರ್ಣ ದೇವಸ್ಥಾನದ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಇದನ್ನೂ ಓದಿ: ಮಂಡ್ಯ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿಯಾಗಿರುವ ಘಟನೆ ತಲೆತಗ್ಗಿಸುವಂಥದ್ದು: ಪರಮೇಶ್ವರ್

    ಈ ಹಿಂದೆ ಹೈಕೋರ್ಟ್ ವಿದ್ಯಾದಾಸ್ ಬಾಬಾಗೆ ಪೂಜೆ ಮಾಡಲಷ್ಟೇ ಅವಕಾಶ ನೀಡಿದ್ದು, ಎಲ್ಲ ಆಡಳಿತವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದೆ. ದೇವಸ್ಥಾನದ ಮೇಲೆ ಹಕ್ಕು ಸಾಧಿಸಲು ಸುತ್ತಲಿನ ಗ್ರಾಮದ ಸದಸ್ಯರನ್ನು ಒಳಗೊಂಡ ಟ್ರಸ್ಟ್, ವಿದ್ಯಾದಾಸ ಬಾಬಾ ಮತ್ತು ಜಿಲ್ಲಾಡಳಿತದ ಮಧ್ಯೆ ನಿತ್ಯ ಮುಸುಕಿನ ಗುದ್ದಾಟ ನಡೆದಿದೆ. ಇದನ್ನೂ ಓದಿ: ಅಪಘಾತವಾಗಿದ್ದ ಕಾರು ತೆರವು ಮಾಡ್ತಿದ್ದವರ ಮೇಲೆ ಹರಿದ ಟ್ರಕ್ – ಆರು ಮಂದಿ ಸಾವು

    ಸರ್ಕಾರದ ನಿರ್ಧಾರದ ವಿರುದ್ಧ ವಿದ್ಯಾದಾಸ್ ಬಾಬಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ಸದ್ಯ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶದನ್ವಯ ಅರ್ಚಕ ವಿದ್ಯಾದಾಸ್ ಬಾಬಾ ಅವರಿಗೆ ಪೂಜೆಗೆ ಅವಕಾಶ ನೀಡಿದೆ.

  • ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – 26.60 ಲಕ್ಷ ಸಂಗ್ರಹ

    ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – 26.60 ಲಕ್ಷ ಸಂಗ್ರಹ

    -3 ಅಮೆರಿಕ ನಾಣ್ಯಗಳು ಸೇರಿದಂತೆ 9 ವಿದೇಶಿ ನಾಣ್ಯಗಳ ಸಂಗ್ರಹ

    ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅಂಜನಾದಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, 9 ವಿದೇಶಿ ನಾಣ್ಯಗಳು ಕಾಣಿಕೆ ರೂಪದಲ್ಲಿ ಸಂಗ್ರಹಗೊಂಡಿವೆ.

    ಗಂಗಾವತಿ (Gangavathi) ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಒಟ್ಟು 40 ದಿನಗಳಲ್ಲಿ 26 ಲಕ್ಷದ 60 ಸಾವಿರ ರೂ. ಕಾಣಿಕೆ ಸಂಗ್ರಹವಾಗಿದೆ.ಇದನ್ನೂ ಓದಿ: ಜಾನಪದ ವಿವಿ ಘಟಿಕೋತ್ಸವಕ್ಕೆ ಆಹ್ವಾನಿಸದ್ದಕ್ಕೆ ಶಿಗ್ಗಾಂವಿಯ ನೂತನ ಕೈ ಶಾಸಕ, ಬೆಂಬಲಿಗರಿಂದ ದರ್ಪ

    ಜೊತೆಗೆ ವಿದೇಶಿ ನಾಣ್ಯಗಳು ಸಂಗ್ರಹವಾಗಿದ್ದು, 3 ಯುಎಸ್‌ಎ, 1 ಯುಎಇ, 1 ನೇಪಾಳ, 1 ಸೌದಿ ಅರೇಬಿಯಾ, 1 ಹಾಂಕಾಂಗ್, 1 ಸಿಂಗಾಪುರ್, 1 ರಷ್ಯಾ ಸೇರಿ ಒಟ್ಟು 9 ನಾಣ್ಯಗಳು ಕಾಣಿಕೆ ರೂಪದಲ್ಲಿ ಬಂದಿವೆ. ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಮಾಡಲಾಯಿತು.

    ಕಳೆದ ವರ್ಷ ಡಿ.14 ರಿಂದ 2024ರ ಜ.05 ರವರೆಗೆ ಹುಂಡಿಯಲ್ಲಿ ಒಟ್ಟು 27,27,761 ರೂ. ಕಾಣಿಕೆ ಸಂಗ್ರಹವಾಗಿತ್ತು. ಆಗ ನೇಪಾಳದ 2 ನೋಟು, 3 ನಾಣ್ಯಗಳು ಸಂಗ್ರಹಗೊಂಡಿದ್ದವು.ಇದನ್ನೂ ಓದಿ: ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರು – ತಂದೆ, ಮಗ ದಾರುಣ ಸಾವು

  • ಅಂಜನಾದ್ರಿಗೆ ಇಂಗ್ಲೆಂಡ್ ದೇಶದ ರಾಯಭಾರಿ ಭೇಟಿ

    ಅಂಜನಾದ್ರಿಗೆ ಇಂಗ್ಲೆಂಡ್ ದೇಶದ ರಾಯಭಾರಿ ಭೇಟಿ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿರುವ ಹನುಮನ ಸನ್ನಿಧಿಗೆ ಇಂಗ್ಲೆಂಡ್ ರಾಯಭಾರಿ ಭೇಟಿ ನೀಡಿದ್ದಾರೆ.

    ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾಗಿರುವ ಅಂಜನಾದ್ರಿಯ ಆಂಜನೇಯ ದೇಗುಲಕ್ಕೆ ಇಂಗ್ಲೆಂಡ್ ರಾಯಭಾರಿ ಪತ್ನಿ ಸಮೇತ ಭೇಟಿ ನೀಡಿ ದೇವರ ದರ್ಶನ ಪಡೆದರು. ಮುಂಬೈನಲ್ಲಿರುವ ಇಂಗ್ಲೆಂಡಿನ ಬ್ರಿಟೀಷ್ ಸರ್ಕಾರದ ಡೆಪ್ಯೂಟಿ ಕಮಿಷನರ್ ಅಲೆನ್ ಗಿಮೆಲ್ ಹಾಗೂ ಪತ್ನಿ ಮೆಟ್ಟಿಲು ಹತ್ತಿ ಅಂಜನಾದ್ರಿಯ ದರ್ಶನ ಪಡೆದರು.

    ಜಿಂದಾಲ್ ಸಂಸ್ಥೆಯ ನೌಕರ ಹರಿ ಅವರು ಇಂಗ್ಲೆಂಡ್‌ನ ದಂಪತಿಯನ್ನು ದೇಗುಲಕ್ಕೆ ಕರೆತಂದು ದರ್ಶನ ಮಾಡಿಸಿದರು. ಇದಕ್ಕೂ ಮುನ್ನ ಹುಬ್ಬಳ್ಳಿ ಸಮೀಪ ಇರುವ ಗರಗದ ರಾಷ್ಟ್ರ ಧ್ವಜ ತಯಾರಿಸುವ ಘಟಕಕ್ಕೆ ಭೇಟಿ ನೀಡಿದ್ದರು. ಹೊಸಪೇಟೆ ಮತ್ತು ಜಿಂದಾಲ್ ನಲ್ಲಿರುವ ಮಹಿಳಾ ಸ್ವಸಹಾಯ ಸಂಘ ಮತ್ತು ಸಹಕಾರ ಸಂಘಗಳ ಕಾರ್ಯಚಟುವಟಿಕೆ ಅಧ್ಯಯನದ ಉದ್ದೇಶಕ್ಕೆ ಬಂದಿದ್ದಾರೆ ಎನ್ನಲಾಗಿದೆ.