Tag: anjana srinivas

  • ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ತಂದ ಹೊಸ ಕಥೆ ‘ಜಾನಕಿ ಸಂಸಾರ’

    ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ತಂದ ಹೊಸ ಕಥೆ ‘ಜಾನಕಿ ಸಂಸಾರ’

    ನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ ಪರಿಕಲ್ಪನೆಗಳೊಂದಿಗೆ ಮನರಂಜನೆಯ ಕ್ರಾಂತಿಯನ್ನೇ ಹುಟ್ಟು ಹಾಕಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ ‘ಜಾನಕಿ ಸಂಸಾರ’.

    ಇದೊಂದು ತುಂಬು ಕುಟುಂಬದ ಕಥೆ. ಈ ಮನೆಯ ಹಿರಿ ಸೊಸೆ ಜಾನಕಿ, ಇಡೀ ಸಂಸಾರದ ಹೊಣೆ ಹೊತ್ತವಳು. ಎಷ್ಟೇ ಕಷ್ಟ ಬಂದರೂ ಎದುರಿಸುವ ಛಲಗಾರ್ತಿ. ವಿದ್ಯಾವಂತೆಯಾಗಿರುವ ಜಾನಕಿ ತನ್ನ ಸಂಸಾರದ ಜೊತೆ ಉದ್ಯೋಗವನ್ನು ಸರಿ ಸಮಾನಾಗಿ ನಿಭಾಯಿಸುತ್ತಿರುತ್ತಾಳೆ. ಸದಾಕಾಲ ಮನೆ ಮಂದಿಯನ್ನು ಒಗ್ಗಟ್ಟಾಗಿಡಲು ಬಯಸುವ ಜಾನಕಿಯ ಸಂಸಾರಕ್ಕೆ ಮನೆಯೊಡೆಯುವ ವ್ಯಕ್ತಿಯ ಆಗಮನವಾದರೆ, ಮುಂದೆ ಜಾನಕಿ ತನ್ನ ಸಂಸಾರವನ್ನು ಹೇಗೆ ಕಾಪಾಡ್ತಾಳೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

    ‘ಜಾನಕಿ ಸಂಸಾರ’ (Janaki Samsara) ಧಾರಾವಾಹಿಯು ಸುಂದರ ತಾರಾಗಣವನ್ನು ಹೊಂದಿದ್ದು, ಕನ್ನಡಿಗರ ಮನಸು ಕದ್ದ ಕಣ್ಮಣಿ, ‘ಕೃಷ್ಣರುಕ್ಮಿಣಿ’ ಧಾರಾವಾಹಿ ಖ್ಯಾತಿಯ ರುಕ್ಮಿಣಿ ಅಲಿಯಾಸ್ ಅಂಜನಾ ಶ್ರೀನಿವಾಸ್ ರವರು (Anjana Srinivas) 13 ವರ್ಷಗಳ ಬಳಿಕ ಮತ್ತೊಮ್ಮೆ ನಿಮ್ಮನ್ನೆಲ್ಲ ರಂಜಿಸಲು ‘ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಸೂರಜ್ ಹೊಳಲು, ಕಾವ್ಯ ಶಾಸ್ತ್ರಿ(Kavya Shastry), ಬಾಲ ನಟಿ ಶ್ರೀ ದಿಶಾ, ಮರೀನ ತಾರಾ, ರವಿ ಭಟ್, ಚಂದನ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.

    ಶುರುವಾಗುತ್ತಿದೆ ನೋವು-ನಲಿವನು ತೂಗೋ ಹೊಸ ಧಾರಾವಾಹಿ ‘ಜಾನಕಿ ಸಂಸಾರ’ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ತಪ್ಪದೇ ವೀಕ್ಷಿಸಿ.

  • ಕನ್ನಡ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿದ ‘ಕೃಷ್ಣ ರುಕ್ಮಿಣಿ’ ನಟಿ

    ಕನ್ನಡ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿದ ‘ಕೃಷ್ಣ ರುಕ್ಮಿಣಿ’ ನಟಿ

    ನ್ನಡ ಕಿರುತೆರೆಯಲ್ಲಿ ‘ಕೃಷ್ಣ ರುಕ್ಮಿಣಿ’ (Krishna Rukmini) ಸೀರಿಯಲ್ ಭಾರೀ ಮೆಚ್ಚುಗೆ ಗಳಿಸಿತ್ತು. ನಾಯಕಿಯಾಗಿ ರುಕ್ಮಿಣಿ ಪಾತ್ರಧಾರಿ ಕೂಡ ಸೈ ಎನಿಸಿಕೊಂಡಿದ್ದರು. ಹಲವು ವರ್ಷಗಳ ನಂತರ ರುಕ್ಮಿಣಿ ಪಾತ್ರಧಾರಿ ಅಂಜನಾ ಶ್ರೀನಿವಾಸ್ (Anjana Srinivas) ಕನ್ನಡ ಕಿರುತೆರೆಗೆ ಕಮ್‌ಬ್ಯಾಕ್ ಆಗಿದ್ದಾರೆ.

    2011ರಲ್ಲಿ ‘ಕೃಷ್ಣ ರುಕ್ಮಿಣಿ’ ಸೀರಿಯಲ್ ಪ್ರಸಾರವಾಗುತ್ತಿತ್ತು. ಅದರಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಹೀರೋ ಆಗಿದ್ರೆ, ನಾಯಕಿಯಾಗಿ ಅಂಜನಾ ನಟಿಸಿದ್ದರು. ಕಿರುತೆರೆಯಲ್ಲಿ ಬೆಸ್ಟ್ ಜೋಡಿ ಎಂದೇ ಅಂದು ಫೇಮಸ್ ಆಗಿದ್ದರು. ಈ ಸೀರಿಯಲ್ ನಂತರ ಪರಭಾಷೆಯ ಸೀರಿಯಲ್‌ನಲ್ಲಿ ನಟಿ ಬ್ಯುಸಿಯಾಗಿದ್ದರು. ಈಗ ಮತ್ತೆ ಕನ್ನಡದ ‘ಜಾನಕಿ ಸಂಸಾರ’ ಕಥೆ ಹೇಳೋದಕ್ಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಮಗಳ ಹೆಸರು ಬದಲಿಸಿದ ದುನಿಯಾ ವಿಜಯ್

    ‘ಜಾನಕಿ ಸಂಸಾರ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ವಾಹಿನಿಯು ಸುಂದರವಾದ ಪ್ರೋಮೋ ರಿಲೀಸ್ ಮಾಡಿ ಮಾಹಿತಿ ನೀಡಿದೆ. ಕೂಡು ಕುಟುಂಬದ ಕಥೆ ಈ ಧಾರಾವಾಹಿಯಲ್ಲಿದೆ. ಅಂಜನಾ ಅವರು ಜಾನಕಿ ಪಾತ್ರ ಮಾಡುತ್ತಿದ್ದು, ಜಾನಕಿಗೆ ಮಗು ಕೂಡ ಇದೆ. ಸೂರಜ್ ಹೊಳ್ಳ ಅವರು ಈ ಧಾರಾವಾಹಿಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.


    ಅಂದಹಾಗೆ, 17ನೇ ವಯಸ್ಸಿಗೆ ಕೃಷ್ಣ ರುಕ್ಮಿಣಿ ಸೀರಿಯಲ್‌ಗೆ ನಾಯಕಿಯಾಗಿ ಆಯ್ಕೆ ಆದರು. ಬಳಿಕ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ 7 ಸೀರಿಯಲ್‌ನಲ್ಲಿ ನಟಿಸಿದ್ದಾರೆ.